ಒಟ್ಟು 13948 ಕಡೆಗಳಲ್ಲಿ , 132 ದಾಸರು , 6945 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಾಸುದೇವ ತೇ ನಮೋ ನಮೋ ವಾಸವ ವಂದಿತ ನಮೋ ನಮೋ ಪ ಮಾಧವ ಕೃಷ್ಣ ದಾಮೋದರ ಶ್ರೀಶ ಪರೇಶ ವಿಷ್ಣು ಪೀತಾಂಬರ ಈಶ ಮುಕುಂದ ವೈಕುಂಠ ಪರಾತ್ಪರ ಕೌಶಿಕ ಗೌತಮ ಮೌನಿ ಶುಭಂಕರ 1 ಶೌರಿ ಚತುರ್ಭುಜ ಚಕ್ರಧರಾಚ್ಯುತ ವೈರಿ ಭಯಂಕರ ಸಕಲಾಗಮನುತ ಸಾರಸನಾಭ ನೀರೇಜ ಭವಾನತ ಮಾರಜನಕ ರಘುವೀರ ಶಿವಾರ್ಚಿತ 2 ಶ್ರೀಮಹಿತಾಂಗಾ ರಂಗಾ ನಮೋ ನಮೋ ಶ್ರೀಮಣಿಹಾರಾ ರಂಗಾ ನಮೋ ನಮೋ ಶ್ರೀಮುಕುಂದಾ ಶ್ರೀರಂಗಾ ನಮೋ ನಮೋ ಶ್ರೀಮಾಂಗಿರಿ ವರರಂಗಾ ನಮೋ ನಮೋ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವಾಸುದೇವ ನಿನ್ನ ದಾಸನಾಗಲು ಬಲು ಆಸೆಯ ಪೊಂದಿ ಸಂತೋಷದಲಿರುವೆನೊ ಪ ಈ ಸಂಸಾರದ ಮೋಸಕೆ ಸಿಲುಕೆ ನಾ ಶ್ರೀಶನ ಚರಣವ ಲೇಶ ಭಜಿಸಲಿಲ್ಲ ಪಾಶಕೆ ಸಿಲುಕದ ಸುಜನರುಗಳ ಸಹ ವಾಸವಿತ್ತು ಅವಕಾಶವ ನೀಡೊ ಅ.ಪ ಸಾರುತಲಿರುವ ಸಮೀರ ಸಮಯಗಳ ಸಾರವನರಿಯದೆ ದೂರಿದೆ ನಿನ್ನನು ಯಾರ ಕರುಣವೊ ತೋರಿತು ಮನದಲಿ ಘೋರತರದ ಅಪರಾಧಗಳೆಲ್ಲವು ಭೂರಿ ದಯದಿ ನಿನ್ನ ಚಾರು ಚರಣದಲಿ ಸೇರಿಸೊ ಮನವ 1 ಪರಿಪರಿ ವಿಧದ ಕುಶಾಸ್ತ್ರಗಳೋದಲು ಬರಿಗಾಳಿಯ ಗುದ್ದಿ ಮುರಿದವು ಕರಗಳು ಸಿರಿರಮಣನೆ ನಿನ್ನ ಪರಿಚಾರಕನೆಂಬೊ ಅರಿವಿನಿಂದಲೆ ಪರತರ ಸುಖವೆಂದು ಪರಿಪರಿಯರುಹುವ ಗುರು ಮಧ್ವರಾಯರ ವರಶಾಸ್ತ್ರಗಳಿಗೆ ಸರಿಯುಂಟೆ ಜಗದೆ 2 ಅನ್ಯಸೇವೆಗಳಲ್ಲಿ ಅನ್ಯಾಯದಿ ಕಾಲ ಮುನ್ನ ಕಳೆದುದನು ಮನ್ನಿಸೆಲೋ ಹರಿ ನಿನ್ನ ಸೇವೆಯ ಸುಖವನ್ನು ಅರಿತೆನೊ ಎನ್ನ ಮನಕೆ ಬಲವನ್ನು ಕರುಣಿಸುತ ಇನ್ನಾದರು ಚ್ಯುತಿಯನ್ನು ಪೊಂದಿಸದೆ ನಿನ್ನ ದಾಸನಲಿ ಪ್ರಸನ್ನನಾಗೆಲೊ 3
--------------
ವಿದ್ಯಾಪ್ರಸನ್ನತೀರ್ಥರು
ವಾಸುದೇವ ವಾರಿಜಾಕ್ಷನಾ ಸ್ತುತಿಸು ಮನದಿ ಪ ಸಾಸಿರನಾಮದೊಡೆಯ ಸಕಲಲೋಕಕರ್ತನಾದ ಸುಜನ ಪೋಷಕ ಭಕ್ತವಿಲಾಸ ಅ.ಪ ಪಂಕಜೋದರ ಪರಮ ಪಾವನ ಸರ್ವಜಗವ ಬಿಂಕದಿಂದ ಪೊರೆವ ದೇವನಾ ಶಂಕೆಯಿಲ್ಲದ ದನುಜ ಮರ್ದನನಾದ ತನ್ನ ಕಿಂಕರರÀನು ಬಿಡದೆ ಕಾಯುವಾ ವೆಂಕಟಾದ್ರಿ----ದ ವೇಣುನಾದದಲಿ ಬುಧವಂದ್ಯ ಶಂಕರಾದಿ ದೇವ ದೇವ ಶರಧಿಶಯನ ಶಾಶ್ವತನಾದ 1 -----ಶ್ವ ರೂಪನಾ ಎಂದು ಎಂದಾನಂದ ದಿಂದ ಅನುದಿನ ಚಂದದಿಂದ ---ಸನಾ |----ಭವ ಬಂಧಕವನೆ ಪರಿಹರಿಸುವನಾ ಕಂದ ಕೂಗಲು ಕಂಭದಿಂದಾ ಬಂದ ನಾರಸಿಂಹನ ಮೂರ್ತಿ 2 ----------ಮಹಾನುಭಾವ ಕಂಡ ಮುನಿಗಳಂತರ್ಭಾವನಾ ಕುಂಡಲೀಶÀ ಭೂಷಣ ಪ್ರೀಯನಾಕರ ಘನಾ ಕೋದಂಡಧರ ಶ್ರೀರಾಮನಾದನಾ ಪುಂಡಲೀಕ ವರದಹರಿ-----ತನಾದ ವೇದವೇದ್ಯ ಅಂಡಜನ--------ಹರಿ 'ಹೊನ್ನಯ್ಯ ವಿಠ್ಠಲ’ ನಾದ 3
--------------
ಹೆನ್ನೆರಂಗದಾಸರು
ವಾಸುದೇವ ಸಾಮಾನ್ಯ ನೀನಲ್ಲವೊ ಪ ನವನೀತ ಇಷ್ಟು ತಿನ್ನುವಿ ಭೂತಗಳಿರುವುವೇನೊ ಉದರದೊಳು 1 ಕುದಿಯುವ ಪಾಲನು ಮುದದಿಂದ ಕುಡಿಯುವೆ ಉದಕದ ರಾಶಿ ಜಿಹ್ವೆಯೊಳಿಹುದೇನೊ 2 ರಾತ್ರಿ ವೇಳೆಯಲಿ ನೀ ಸುತ್ತುವಿ ಮನೆ ಮನೆ ನೇತ್ರದೊಳ್ ಸೂರ್ಯಚಂದ್ರರು ಇಹರೇನೊ 3 ಶಿಕ್ಷೆಮಾಡಲು ಬೆನ್ನು ಪಾಶ್ರ್ವದಲ್ಲಿಹ ನಮ್ಮ ಈಕ್ಷಿಸುವುದಕೆ ವಿಶ್ವತ ಚಕ್ಷುವೇನೊ 4 ನಿನ್ನ ಚರಿತೆ ಎಮಗೆ ಚೆನ್ನಾಗಿ ತಿಳಿಸಿ ಪ್ರ ಸನ್ನನಾಗದಿರೆ ಮನ್ನಿಸೆವೋ ನಿನ್ನ 5
--------------
ವಿದ್ಯಾಪ್ರಸನ್ನತೀರ್ಥರು
ವಾಸುದೇವನ ದಾಸ ವಾಸುಕೀಭರಣನೇ ಭೂಷಾ ಪ ಭಾರತೀಶ ಅ.ಪ. ಬಯಸಬಾರದ ಬಯಕೆಗಳಿಂದ ಬಾಧೆಗೊಳಗಾದೆನೊ ಬಾಧೆಗಳ ಬಿಡಿಸಿ ಭವದಿ ಭಕ್ತರೊಳು ಕೂಡಿಸೋ 1 ಕೊಟ್ಟವರ ಸಾಲವನು ಕೊಟ್ಟು ಮುಟ್ಟಿಸದೆ ದಿಟ್ಟತನದಿ ಬೆಂಬಿಟ್ಟು ಅಗಲದಲಿಟ್ಟು ಕೊಟ್ಟು ತೀರಿಸುವಂತೆಮಾಡೋ ಪ್ರೇಷ್ಯಾ 2 ಏಸೇಸು ಕಲ್ಪಕ್ಕೂ ದಾಸನೆಂಬುದು ಬಲ್ಯಲ್ಲಾ ಈಶ ನೀ ಗತಿಯೆಂಬುದು ಚೆನ್ನಾಗಿ ಬಲ್ಲೆ ಕಾರಣದಿ ಮೊರೆ ಪೊಕ್ಕ ತಂದೆವರದಗೋಪಾಲವಿಠ್ಠಲನಶರಣಾಗ್ರೇಸರಾ3
--------------
ತಂದೆವರದಗೋಪಾಲವಿಠಲರು
ವಾಸುದೇವನ ಪುರಕೆ ತೆರಳಿದಾರು |ಶ್ರೀಶನಾ ಪ್ರಿಯ ಗುರು ಪ್ರಾಣೇಶ ದಾಸಾರ್ಯ ಪ ಮೂರ್ತಿ ಧ್ಯಾನಮಾಡೀ ತತ್ವ |ಮಾನಿಗಳೊಳೊಂಮ್ಮಿಂದೊಮ್ಮೆ ಆನಂದದಿಂದಲೀ 1 ಹರಿಯೆ ಸರ್ವೋತ್ತಮಾ ತದ್ರಾಣಿ ಶಿರಿಬೊಮ್ಮ |ಮರುತ ದೇವರೆ ಗುರುವು, ತಾರತಮ್ಯ ||ವರಪಂಚಭೇದ ಜ್ಞಾನವನರಿತು ಮನದಿ ಹರಿ |ಪುರದೊಳಿಹ ಪರಮ ಭಕ್ತರ ಕಾಣಬೇಕೆನುತ 2 ಮೋಕ್ಷರೌದ್ರೀ ಅಬ್ಧಮಾಘದರ್ಶಾ ಪೂರ್ವಭಾದ್ಧರಾ |ನಕ್ಷತ್ರ ಸೋಮವಾರದಿದ್ದವ ದ್ವಿತಿಯ ಯಾಮದೀ |ಲಕ್ಷಿ ಇಟ್ಟೂ ಲಯದ ಚಿಂತನೆಯ ಗೈಯುತಲಿ |ಪಕ್ಷಿವಾಹನ ಶ್ರೀಶಪ್ರಾಣೇಶ ವಿಠಲೆನುತ 3
--------------
ಶ್ರೀಶಪ್ರಾಣೇಶವಿಠಲರು
ವಾಸುದೇವನನಾ ಶ್ರೈಸದಿಹ ಉಪಾಸನ್ಯಾತಕೆ ಧ್ಯಾಸ ಬಲಿಯದಿಹ ಮಿಗಿಲಭ್ಯಾಸವ್ಯಾತಕೆ ಧ್ರುವ ಹೃದಯ ಶುದ್ಧವಾಗದೆ ಉದಯಸ್ನಾನವ್ಯಾತಕೆ ಬದಿಯಲೀಹ್ಯ ವಸ್ತುಗಾಣದ ಜ್ಞಾನವ್ಯಾತಕೆ ಉದರ ಕುದಿಯು ಶಾಂತ ಹೊಂದದ ಸಾಧನ್ಯಾತಕೆ ಬುಧರ ಸೇವೆಗೊದಗದೀಹ ಸ್ವಧನವ್ಯಾತಕೆ 1 ಭಾವ ನೆಲಿಯುಗೊಳ್ಳ ದೀಹ್ಯ ಭಕುತಿದ್ಯಾತಕೆ ಕಾವನಯ್ಯನ ಕಾಣದೀಹ್ಯ ಯುಕತದ್ಯಾತಕೆ ದೇವದೇವನ ಸೇವೆಗಲ್ಲದ ಶಕುತ್ಯದ್ಯಾತಕೆ ಹ್ಯಾವ ಹೆಮ್ಮೆ ಅಳಿಯದೀಹ್ಯ ವಿರುಕಿತ್ಯಾತಕೆ 2 ತತ್ವ ತಿಳಿಯದಿಹದೀ ವಿದ್ವತ್ವವ್ಯಾತಕೆ ಸತ್ವಗುಣದ ಲಾಚರಿಸದಿಹ್ಯ ಕವಿತ್ಯವ್ಯಾತಕೆ ಚಿತ್ತಶುದ್ಧವಾಗದಿಹ ಮಹತ್ವವ್ಯಾತಕೆ ವಿತ್ತ ಆಶೆಯು ಅಳಿಯದಿಹ ಸಿದ್ಧತ್ವವ್ಯಾತಕೆ 3 ನೀತಿಮಾರ್ಗವರಿಯದೀ ಹ ರೀತ್ಯದ್ಯಾತಕೆ ಮಾತುಮಿತಿಗಳಿಲ್ಲದವನು ಧಾತುವ್ಯಾತಕೆ ಅಮೃತ ಊಟವ್ಯಾತಕೆ ಜ್ಯೋತಿ ತನ್ನೊಳರಿಯದಲೆ ಉತ್ತಮದ್ಯಾತಕೆ 4 ನಿತ್ಯ ಶ್ರವಣವ್ಯಾತಕೆ ನೆನವು ನೆಲೆಯಾಗೊಳ್ಳದಿಹ ಮನನವ್ಯಾತಕೆ ತನುವಿನಲ್ಲಿ ಘನವು ಕಾಣದನುಭವ್ಯಾತಕೆ ದೀನಮಹಿಪತಿಸ್ವಾಮಿಗಾಣದ ಜನಮವ್ಯಾತಕೆ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ವಾಸುದೇವನ್ನಾ ಪಾದವ ನಂಬಬಾರದೇ | ಈಶನೊಲಮಿಂದಾ ಸದ್ಗತಿ ಸುಖವು ದೊರದೇ ಪ ವನಜಭವಾದಿಗಳು ದೋರುವೆನಾ ಮುಕುತಿಯು ಪಾಯಾ | ಯನುತ ಬಂದರೆಯುನೊಡದಿರು ಅವರ ಕಡೆಯಾ 1 ಜಠರ ಬಾಗಿಲವಾ ಕಾವಾಶ್ವಾನನ ಪರಿಯಂತೆ | ನಿಷ್ಠೆಯೊಂದನೆ ಬಿಟ್ಟು ತಿರುಗಬ್ಯಾಡ ಕಂಡಂತೆ2 ಇಂದಿಗೆ ನಾಳಿಗೇ ಹ್ಯಾಂಗೆಂದು ಚಿಂತಿಸದಿರು | ಛಂದದಿ ಗೀತೆಯಲಿ ಸಾರಿದ ವಾಕ್ಯಾ ಮರೆಯದಿರು 3 ಶಿಲೆಯೊಳಗಿರುತಿಹಾ ಕಪ್ಪಿಗಾಹಾರ ನೀಡುವರಾರೋ | ತಿಳಿದು ನೀನೀಗ ಹಲವ ಹಂಬಲವ ಹಿಡಿಯದಿರು 4 ಎರಡು ದಿನದಿದು ಸಂಸಾರವೆಂಬುದು ನೋಡಿ | ಅರಿತು ಇದರೋಳಗ ಸಾರ್ಥಕ ಸಾಧನವ ಮಾಡಿ 5 ಒಂದು ಭಾವದಲಿ ತ್ವರಿತದಿ ಹೊಕ್ಕರ ಶರಣವನು | ತಂದೆ ಮಹಿಪತಿ ಸುತ ಸನ್ಮಾರ್ಗ ಕೂಡಿಸುತಿಹನು 6 ಏನೆಂದರಿಯದಾ ಕಂದಗೆ ಉದ್ದರಿಸಿದ ನೋಡೀ | ತಂದೆ ಮಹಿಪತಿಯು ದಾರಿಯ ದೋರಿದ ದಯಮಾಡಿ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ವಾಹನ ದೇವ ಪ ಮಾರ ಬೆಟ್ಟದ ದೇವÀ ಅ.ಪ ಪುತ್ರ ಬಾರೋ ಬಾರೋ 1 ದೂರ ಬೇಗ ಬಾರೋ2 ದಾಸಾನು ದಾಸಾ ಜನ | ತೋಷ ಬೇಗ ಬಾರೋ 3
--------------
ಬೆಳ್ಳೆ ದಾಸಪ್ಪಯ್ಯ
ವಾಹನ ನರಜನ ಪ್ರೇಮಾ | ಹರಿ ಸಾರ್ವಭೌಮ ಪ ಯೋಗಿ ಮಧ್ವಮತದಾಗಮ ವಂದಿತಭಾಗವತಾಗ್ರಣಿ ಶ್ರೀಗುರುಗಳ ಕೈ ಅ.ಪ. ಪ್ರಳಯ ಕಾಲದಲಿ ಹರಿ ನೀನಂದು | ಶ್ರೀ ಭೂ ದುರ್ಗಾತ್ಮಕಜಲದಾಲದೆಲೆಯಲಿ ತೊಟ್ಟಿಲಲಂದೂ | ಕತ್ತಲೆಯೊಳಗಂದೂಎಲ್ಲಾ ಜೀವರ ಪೊಕ್ಕಳ ಎಡಬಲ ತಂದೂ | ದೀನ ಜನರ ಬಂಧೂ ||ಥಳಥಳ ಪೊಳೆಯುವ ಮಣಿಯ ತೊಟ್ಟಿಲೊಳುಲಲನೆ ಸಹಿತ ಎಡಬಲ ವೈಭೋಗದಿ 1 ಗೋಕುಲದೊಳೊ ಗೋಪಿಯರಿಂದ ತೂಗಿಸಿಕೊಂಡುಸಾಕಾಗಲಿಲ್ಲೇ ಎಲೊ ಮುಕುಂದ | ಕೌಸಲ್ಯಾದೇವಿಯುಬೇಕೆಂದು ಮುದ್ದಿಸಿ ಮೋಹದಲಿಂದಾ | ಆದ ಕಾರಣದಿಂದಾ ||ಏಕ ಮನಸಿನಲಿ ಈ ಪರಮುನಿಪಗೆಬೇಕೆಂದೊಲಿದು ಪರಾಕನು ಕೊಳ್ಳುತ 2 ಮೋದ | ಸತ್ಯಬೋಧಾರ್ಯರ ||ಮತಿಗೆ ನೀ ಮರುಳಾದೆ ಮಧುಸೂದನನೆ ಪತಿತ ಪಾವನನೆ ವ್ಯಾಸ ವಿಠಲ ನೀನೇ 3
--------------
ವ್ಯಾಸವಿಠ್ಠಲರು
ವಾಹನ ಈಕ್ಷಿಸು ಪ್ರೇಮದೊಳೆನ್ನ ನೀಂ ಪ ಭೂರಿ ಸಾರಸ ಸನ್ನಿಭ ಲೋಚನ ಶ್ರೀಶ ಶಾರದ ಚಂದ್ರಸಮ ಹಾರ ವಿಹಾರ1 ಇಂದಿರೆ ತನುಮಂ ಅಂದದೊಳಪ್ಪುತ ಮೋದವ ಪೊಂದಿ ವಂದಿತ ಜನ ಮನೋನಂದ ವಿನೋದ 2 ಶ್ರೀವನಮಾಲಾ ಭಾವಿತಭಾವ ದೇವಚಿದಾತ್ಮ ಜೀವಪ್ರಭಾವ ಶ್ರೀ ವಿಭವಾನ್ವಿತ ಪಾವನರೂಪ 3 ವೈರಿ ಜ್ಞಾನ ಸ್ವರೂಪ ಭಾನುಕರಾರ್ಪಿತ ಭಾಮ ಯಶೋಧ ಧೇನುಕಪುರಪ್ರಿಯ ಗಾನ ಸ್ವರೂಪ 4
--------------
ಬೇಟೆರಾಯ ದೀಕ್ಷಿತರು
ವಿಕ್ರಮಾ - ಪಾಹಿ - ತ್ರಿವಿಕ್ರಮಾ ಪ ವಿಕ್ರಮ ನಮಿಪೆ ನಾ ನಿನ್ನ | ನೀನುಚಕ್ರವ ಪಿಡಿದೊಂದು ದಿನ್ನ | ಆಹನಕ್ರನುದ್ದರಿಸಿದ | ಪ್ರಕ್ರಯ ನಾನರಿತುರುಕ್ರಮ ಶರಣೆಂಬೆ | ವಕ್ರ ಮನವ ಕಳೆಅ.ಪ. ಪುಟ್ಟ ರೂಪವನೆ ತಾಳುತ್ತಾ | ಬಲಿಯಇಷ್ಟಿಯೊಳವನ ಬೇಡುತ್ತಾ | ದಾನಕೊಟ್ಟೆನೆಂದವನು ಪೇಳುತ್ತಾ | ಬರೆಶಿಷ್ಟ ಶುಕ್ರನು ಬೇಡೆನ್ನುತ್ತಾ | ಆಹಕಟ್ಟಲು ಗಿಂಡೀಯ | ದಿಟ್ಟ ಶುಕ್ರನ ಕಣ್ಣಪುಟ್ಟ ದರ್ಭೆಲಿ ಚುಚ್ಚಿ ಮೆಟ್ಟಿ ನಿಂತೆಯೊ ಬಲಿಯ 1 ಥೋರ ರೂಪದೊಳು ಅಂಬರಾ | ಹಬ್ಬಿಧಾರುಣಿ ಅಳೆದ ಗಂಭೀರ | ಮತ್ತೆಮೂರನೇದಕೆ ಬಲಿಯ ಶಿರ | ವತ್ತಿಭಾರಿ ಪಾತಾಳಕ್ಕೆ ಧೀರಾ | ಆಹಪೌರೋಚನಿಯನ್ವತ್ತಿ | ದ್ವಾರವ ಕಾಯುತ್ತತೋರಿದೆ ಕರುಣವ | ಭೋರಿ ದೈವರ ಗಂಡ3 ಪಾದ ತೊಳೆದೂ | ಬಿಡೆಬ್ರಹ್ಮಾಂಡದೊಳು ತಾನು ಬಂದೂ | ಆಹಸುಮ್ಮನಸರ ಲೋಕ | ಕ್ರಮ್ಮಿಸುತಲಿ ಬರುವಅಮ್ಮಹ ಗಂಗೆ ಪೆ | ತ್ತೆಮ್ಮನುದ್ದರಿಸಿದಾ 3 ಬಾದರಾಯಣ ಬಳಿ ಭವ್ಯಾ | ನಾಗಿಮೋದ ತೀರ್ಥರಿಂದ ಸೇವ್ಯಾ | ನೀನುವಾದಿರಾಜರಿಗೊಲಿದು ತ್ವರ್ಯಾ | ಬಂದುಸ್ವಾದಿ ಪುರದಿ ನಿಂದು ಸ್ತವ್ಯಾ | ಆಹಮೋದದಿ ನೆಲೆಸುತ್ತ | ಕಾದುಕೊಂಡಿಹೆ ನಿನ್ನಪಾದವ ಪೊಗಳೂವ | ಸಾದು ಸಂತತಿಯನ್ನ 4 ಹೀನ ಮಾನವನೆಂದು ಎನ್ನಾ | ಉದಾಸೀನ ಮಾಡುವಿಯೇನೊ ಘನ್ನ | ಕೇಳೊನೀನು ತ್ರೈಭುವದಿ ಪಾವನ್ನಾ | ನೆಂದುಗಾನದೋಳ್ ತವ ಪಾದವನ್ನಾ | ಆಹಆಗಮಿಸುತ ಬಂದ | ಮಾನವನೆನ್ನನುಧೀನನೆಂದೆನಿಸಾರೆ | ಜ್ಞಾನವ ನೀಡೆನಗೇ 5 ಪ್ರತಿ ಪ್ರತಿ ವತ್ಸರದೊಳು | ಮಾಸಹತ್ತೆರಡು ಪೂರ್ಣಿಮದೊಳು | ತವರಥದೊತ್ಸವ ಕಾರ್ಯಗಳೂ | ಬಲುಹಿತದಿ ತವ ದಾಸರುಗಳೂ | ಆಹಅತಿ ವೈಭವದಿಂದ | ವಿತರಣೆಯಿಂದಲಿಪ್ರತಿಯಿಲ್ಲವೆಂದೆನ್ನೆ | ವಿಸ್ತರಿಸುವರಯ್ಯ 6 ಪರಿ ಪೊಗಳುತ ಚೆನ್ನಾ | ಆಹಗುರು ಗೋವಿಂದ ವಿಠ್ಠಲ | ಪರಮ ಪುರುಷನೆಂದಾನರ್ತನಗೈಯುತ | ನರರೇನು ಧನ್ಯರೋ7
--------------
ಗುರುಗೋವಿಂದವಿಠಲರು
ವಿಘ್ನೇಶ - ವಿಘ್ನೇಶ ಪ ಭಗ್ನ ಗೈಸಿ ದು | ರ್ವಿಘ್ನಗಳನು ಹರಿಯಜ್ಞನಲ್ಲಿ ಮನ | ಲಗ್ನವ ಗೈವುದು ಅ.ಪ. ನಭಕಭಿಮಾನಿಯೆ | ಪ್ರಭುಹರಿ ಭಜನೆಗೆಶುಭ ಅವಕಾಶದ | ವೈಭವ ಪ್ರದನೇ 1 ಆದಿದೇವ ನಿನ | ಗಾದಿ ಪೂಜೆಯನುಮೋದದಿ ವಿಧಿಸುತ | ಸಾಧು ಜನೋದ್ಧಾರ 2 ಕಂತು ಹರನ ಸುತ 3 ಸಂತತ ಸಂಗವ | ಸಂತತ ಕೊಡುತಲಿಪಂಥಾಬಿಧ ಹರಿ | ಚಿಂತೆಯಲಿರಿಸೋ 4 ವಿಶ್ವಂಭರ ಗುರು | ಗೋವಿಂದ ವಿಠಲನವಿಶ್ವರೂಪ ಬಹು | ವಿಶ್ವಾಸಾರ್ಚಕ 5
--------------
ಗುರುಗೋವಿಂದವಿಠಲರು
ವಿಜಯ ರಾಯರ ಭಜಿಸದವ ನಿರ್ಭಾಗ್ಯ ಕಾಣೋ ಪ ಅಜಭವರಕಿಂತಧಿಕ ಗಜವರದ ಪರನೆಂದಾ ಅ.ಪ. ಋಷಿಗಳೆಲ್ಲರು ಕಲೆತು ಸತ್ರಯಾಗವ ಮಾಡೆಹೃಷಿಕೇಶ ಚತುರಾಸ್ಯ ಕೈಲಾಸ ವಾಸಾ |ಈಸು ಮೂರ್ತಿಗಳಲ್ಲಿ ಮಿಗಿಲಾರು ಎಂದೆನ್ನೆಸೂಸಿ ಮೂರ್ಲೋಕಗಳ ಶ್ರೀಶ ಪರನೆಂದಾ 1 ದೇವಮುನಿ ನರನಾಗಿ ಭುವಿಯಲ್ಲಿ ಜನಿಸುತಾದೇವದೇವನ ಸ್ತೋತ್ರ ಕವನವನೆ ಗೈದಾ |ಆವ ಲಕ್ಷವು ಪಂಚಕೆ ನ್ಯೂನ ಪಾದವ ಮಾಡ್ದದೇವ ಮುನಿ ಸುತ ಗುರು ಮಧ್ವಪತಿ ವಿಠಲಾ 2 ಜವನವರು ಕೊಂಡ್ಯೋಗೆ ಜವಪುರಿಗೆ ತನಯನಾಜವನೊಡನೆ ಶೆಣೆಶಾಡಿ ಹರಿಗೆ ಮೊರೆಯಿಡಲು |ಜೀವದಾನವ ಪೊಂದಿ ಚಿಪ್ಪಗಿರಿಗೆ ತೆರಳಲುಜೀವಂತ ನಾದನೈ ತನಯ ಮೋಹನ್ನಾ 3 ಪೂರ್ಣಬೋಧರ ಮತವ ಗಾನ ರೂಪದಿ ಪೇಳಿಪೂರ್ಣಗುಣ ಹರಿಯೆಂದು ಸ್ಥಾಪಿಸುತಲೀ |ಪೂರ್ಣ ಸಂಪ್ರೀತಿಯಲಿ ನೆಲೆಸಿ ಚಿಪಗಿರಿಯಲ್ಲಿಪೂರ್ಣನಂಘ್ರಿಯ ಭಜಿಸಿ ಭಕ್ತರನೆ ಪೊರೆದಾ 4 ಯುವ ಸಂವತ್ಸರದ ಸುಕಾರ್ತಿಕದ ಸಿತಪಕ್ಷಯಾದು ಗುರುದಿನ ದಶಮಿ ಮೊದಲ್ಯಾಮದಿ |ಪವನಾಂತರಾತ್ಮ ಗುರು ಗೋವಿಂದ ವಿಠ್ಠಲನಸ್ತವನದಿಂದಲಿ ಪೊರಟ ಹರಿಯ ಪುರಕಾಗಾ 5
--------------
ಗುರುಗೋವಿಂದವಿಠಲರು
ವಿಜಯದಾಸರ | ದಿವ್ಯ ವಿಜಯ ನೆನೆವರ ಪ ವಿಜಯಸಾರಥಿಯ ಮನದಿ ಭಜಿಪ ಸತ್ವರ ಅ.ಪ. ಆದಿದೇವನ | ಒಲುಮೆ ಸಾಧಿಸಿದನ ಮೋದ ಭರಿತನ 1 ಮನದಿ ಹರಿಯನು | ಸತತ ಕುಣಿಸಿ ನಲಿವನು ಅಮೃತ ಖಣಿ ವಿಶಿಷ್ಟನು 2 ಭಕ್ತಿಯುಕ್ತಿಯ | ಮಹಾವಿರಕ್ತಿ ಉಕ್ಕುತ ಭಕ್ತ ಜನರಿಗೆ ಬಿಂಬ ವ್ಯಕ್ತಿ ಮಾಡಿದ 3 ತುಂಬಿ ವೈಭವ ಕದಂಬ ಸಲಹುವ 4 ಭಾರತೀಪತಿ | ಇವರ ವೀರಸಾರಥಿ ಸಾರಿ ಭಜಿಪರ ಸಕಲ ಭಾರವಹಿಸುವ 5 ಅಪರೋಕ್ಷ ಕೊಡುವನು ತ್ರಕ್ಷವಲ್ಲಭಾ ಇವರ ದಕ್ಷರೆನಿಸಿಹ 6 ದಾಸರತ್ನನಾ | ದಯವ ಲೇಸು ಪಡೆಯಲು ಸೂಸಿ ಬರುವನು ಶ್ರೀ ಜಯೇಶವಿಠಲ 7
--------------
ಜಯೇಶವಿಠಲ