ಒಟ್ಟು 24320 ಕಡೆಗಳಲ್ಲಿ , 137 ದಾಸರು , 9123 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾರೆನ್ನ ಸಖಿಯೇ ಕರೆದು ತೋರಿಸೇ ಪ ಕರೆದು ತೋರಿಸೇ ಕಂಜನಯ್ಯಾನಾ| ಕರಿವರ ದಾಯಕ ಕರುಣಾ ಸಾಗರನಾ 1 ಸರಸಿಜ ಲೋಚನ ಮುಕುಟ ಕುಂಡಲನಾ| ಕೌಸ್ತುಭ ಕೇಯೂರ ಧರನಾ 2 ಮದನ ಶರಕ ಗುರು ಮಾಡುವರೇನೇ| ಮಧುಹರ ಮುನಿವದು ಉಚಿತ ವೇನೇ 3 ಒಂದರಗಳಿಗೆಯ ಮರೆದಿರ ಲಾರೆ| ಇಂದು ನೀ ಧನ್ಯಳ ಮಾಡಲೆ ನೀರೆ4 ಬೆರೆದು ಬಿಡುವನಲ್ಲಾ ಸಕಲಂತರ್ಯಾಮಿ| ನೆರೆದನು ಗುರು ಮಹಿಪತಿ ಸುತಸ್ವಾಮಿ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಾರೈ ಬಾರೈ ಗುರು ಸಾರ್ವಭೌಮನೇ ಪ. ಉಟ್ಟವಸನವು ತೊಟ್ಟ ಆವಿಗೆ ಇಟ್ಟ ದ್ವಾದಶ ಊಧ್ರ್ವ ಪುಂಡ್ರವು ದಿಟ್ಟತನದಿ ಇಟ್ಟು ಕೊರಳೊಳು ಮಣಿ ಮನೋಭೀಷ್ಠವ ಸಲಿಸುತ 1 ದಂಡಕ ಮಂಡಲ ಕೈಯಲಿ ಪಿಡಿದು ಕಂಡ ಕಂಡದ ಪೂಜೆಗೊಂಬುವ ಕೊಂಡ ಜನರ ಪರಿಪಾಲಿಸುತಲಿ ಕಂಡ ಕಂಡವರ ಕಾಯುವ ಕರುಣೆ2 ಭೂತ ಪ್ರೇತ ಭಯ ನಾಶಗೊಳಿಸಿ ಭೀತಿಯ ಬಿಡಿಸಿ ಮಂತ್ರಾಲಯದಿ ಖ್ಯಾತಿವಂತ ರುಕ್ಮಿಣೀಶವಿಠಲನ ಕರುಣದಿ ಪ್ರೀತಿಪ ಜನರ ಮನೋಭೀಷ್ಠವೊಲಿದ 3
--------------
ಗುಂಡಮ್ಮ
ಬಾರೈ ಬೇಗ ಶ್ರೀರಾಮ ನಮೊ ಭಾನುಕುಲಾಂಬುಧಿ ಸೋಮ ನಮೊತೊರಿಸು ತವಪದಕಮಲ ನಮೊ ನೀರದಶ್ಯಾಮಲವದನ ನಮೊ ಪ ಅಜಹರಪ್ರಾರ್ಥಿತಮೋದ ನಮೊ ಅಯೋಧ್ಯನಗರವತಾರ ನಮೊಸುಜನಪಾಲ ಕುಜನಾರಿ ನಮೊ ಸನ್ಮುನಿಯಾಶ್ರಮ'ಹರ ನಮೊ1 ಸರಯೂತೀರ ಸಂಚಾರ ನಮೊ ಸತ್ಯಪರಾಕ್ರಮ ಸ್ವಾ'ು ನಮೊಪರಮಪುರುಷ ಪದ್ಮಾಕ್ಷ ನಮೊ ಪತಿತೋದ್ಧರ ಪರಮಾತ್ಮ ನಮೊ 2ಕ್ರೂರತಾಟಕಧ್ವಂಸ ನಮೊ ಮಾರೀಚಾದಿ 'ಚ್ಛೇದ ನಮೊಕಾರ್ಮುಕ'ದ್ಯಧುರೀಣ ನಮೊ ಕೌಶಿಕಮಖಸಂರಕ್ಷ ನಮೊ 3ಗೌತಮಸತಿಯಘಭಂಗ ನಮೊ ಕಾಂತಯಹಲ್ಯಾಸ್ತೌತ್ಯ ನಮೊ ಮಾತಾಪಿತಗುರುವೇ ನಮೊ ಮಮುದ್ಧರಿಸು ಮಹಾತ್ಮ ನಮೊ 4ಕ್ರೂರನು ಕುಟಿಲನು ಕುಮತಿ ನಮೊ ಕಲುಷಾರ್ಚಿತ ದುಷ್ಕರ್ಮಿ ನಮಸಾರರ'ತ ಸಂಸಾರಿ ನಮೊ ಸರ್ವ ದೋಷಪರಿಹಾರ ನಮೊ 5ಕೌಸಲೇಯಕನಕಾಂಬ್ರ ನಮೊ ದಾಶರಥೆ ದನುಜಾರಿ ನಮೊಶ್ರೀಶಚನ್ನಪುರಿಧಾಮ ನಮೊ ದಾಸವೈಷ್ಣವಕುಲಪ್ರೇಮ ನಮೊ 6ರಾಮರಾಮಜಯರಾಮ ನಮೊ ರಾಮತುಲಸಿದಳಧಾಮ ನಮೊರಾಮತುಲಸಿಗುರಸ್ವಾ'ು ನಮೊ ರಂಗಸ್ವಾ'ುದಾಸೇಶ ನಮೊ 7
--------------
ಮಳಿಗೆ ರಂಗಸ್ವಾಮಿದಾಸರು
ಬಾರೈಯ ಬಾರೈಯ ಸೂರಿವರಿಯ ಐಕೂರು ನಿಲಯ ಪ ನೀನ್ಹಾಕಿದ ಸುಜ್ಞಾನದ ಸಸಿಗಳು ಮ್ಲಾನವಾಗುತಿವೆ ಸಾನುರಾಗದಲಿ 1 ಸತಿ ತವಕರುಣ ಸಲಿಲವ ಎರೆದು ಫಳಿಲನೆ ವೃಥ್ಧಿಯ ಗಳಿಸಿ ಸಲಹಲು 2 ನಾಟಿಸಿದ ಸಸಿಗಳು ನೀಟಾಗುವ ಪರಿ ತೋಟಗ ನೀ ಕೃಪೆ ನೋಟದಿ ನೋಡಲು 3 ಕೋವಿದರ ನೀ ಕಾವಲಿ ಇರಲು | ಕು ಜೀವಿಗಳಿಂದಲಿ ಹಾವಳಿಯಾಗದು 4 ನೀಮರೆದರೆ ಸುಕ್ಷೇಮವಾಗದು ಶಾಮಸುಂದರನ ಪ್ರೇಮದ ಪೋತ 5
--------------
ಶಾಮಸುಂದರ ವಿಠಲ
ಬಾರೈಯ್ಯಾ ಗೋವಿಂದಾ | ಕೀರ್ತನೆಗೆ ಮುಕುಂದಾ | ಬೀರುತ ನಿಮ್ಮ ಮಹಿಮೆ ಸ್ವಾನಂದ ಪುರದಿಂದಾ ಪ ಕೋಂಡಾಡುವಂತೆ ಕೀರ್ತಿ ನೀಡಬೇಕು ನಿಜಸ್ಪೂರ್ತಿ | ಮಂಡೀಸಿ ಭಕ್ತರಂಗಾ ಹೇಳುವೆ ನಿಮ್ಮ ವಾರ್ತೆ 1 ವೈಕುಂಠ ಯೋಗಿವರಿಯಾ ಸ್ಥಳಸುರ ಮುನಿರಾಯಾ | ನೀ ಕರಿಸಿ ಪಾಡುವಲ್ಲಿ ಇಹನೆಂದೆ ನಿಶ್ಚಯಾ 2 ಕಂದನ ತೊದಲು ಮಾತಾ ಕೇಳಿ ಹಿಗ್ಗುವಂತೆ ಮಾತಾ | ತಂದೆ ಮಹಿಪತಿ - ಸ್ವಾಮಿ ಬಲವಾಗೋ ಶ್ರೀ ಕಾಂತಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಾರೈಯ್ಯಾ ಗೋವಿಂದಾ ನಂದಾ | ಶ್ರೀವಧು ಲೋಲಾ ಸುರಜನ ಪಾಲಾ | ಸುಮನಾಮಾಲಧರ ಘನ ನೀಲಾ 1 ಭುವನಾಧಾರ ಭೂಬಯ ಹಾರಾ | ದುರಿತ ನಿವಾರಾ 2 ದಾನವ ಮಥನಾ ಕೌಸ್ತು ಭಾಭರಣಾ | ಘನಗುರು ಮಹಿಪತಿ ನಂದನ ಪ್ರಾಣ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಾರೈಯ್ಯಾ ಬಾರೈಯ್ಯಾ ಚಕೋರ ಶಶಾಂಕಾ ಪ ಕ್ಲೇಶ ಕಳೆದು ತವ ದಾಸ ಜನರ ಸಹವಾಸವ ನೀಡಲು 1 ಹನುಮ ಭೀಮ ಮುದ | ಮುನಿವರ ಹರಿಪದ ಅನುದಿನ ಗರೆಯಲು 2 ವಾತಜ ನಿನ್ನಯ ದೂತರು ನಾವೈ ಪಾತಕ ಭೀತಿಯ | ಪ್ರೀತಿಲಿ ಬಿಡಿಸಲು 3 ಭಾವ ಭಕ್ತಿಯಲಿ | ಸೇವಿಪರಿಗೆ ಸುಖ | ದೇವಗುರು | ಛಾವಣಿ ನಿಲಯಾ 4 ತಂದೆ ನೀನೊಲಿದರೆ | ನಂದಜ ಶಾಮ ಸುಂದರ ಸಲಹುವನೆಂದು ಪ್ರಾರ್ಥಿಪೆವು 5
--------------
ಶಾಮಸುಂದರ ವಿಠಲ
ಬಾರೊ ನೀ ಭಕುತರ ಸುರಧೇನು ಪ ಕರಗಳ ಮುಗಿವೆನು ಅ.ಪ. ಮೂರು ಲೋಕದ ದೊರೆ ನೀನಾಗಿರೆ ನೀರಿನೊಳೀಪರಿಯಾಟವು ತರವೆ ಕೂರುಮ ರೂಪದಾಕಿಟಿ ನರಮೃಗದಾ ಕಾರನೆನುತ ಪರಿಹಾಸವ ಮಾಳ್ಪರು 1 ಪೋರ ನಗುತ ಬಲಿಯನು ವಂಚಿಸಿ ಮೀರಿದ ಕೋಪದಿ ಮಾತೆಯನಿರಿದು ನಾರಿಯ ನೀಗುತ ಮಾವನ ಕೊಂದು ಜಾರಿದ ವಸನದ ರಾಹುತನೆಂಬರು2 ವಾರಿಧಿಯೊಳು ನಿನಗಾಟವು ಸಲ್ಲದು ಕೋರಿದ ಕೊಡುವೆನು ಬಾರೆನ ದೊರೆಯೆ ವಾರಿಜಾಭನೆ ಕರೆ ಕರೆ ಮಾಡದೆ ಶ್ರೀರಂಗೇಶವಿಠಲನೆ ಬೇಗದಿ 3
--------------
ರಂಗೇಶವಿಠಲದಾಸರು
ಬಾರೊ ನೀಯನ್ನಮನಿಗೆ ಗೋಪಾಲಕೃಷ್ಣ ಪ ಅಂದದಿ ಚಂದದಿ ಆಡುತ ಪಾಡುತ ಧಿ ಮಿಧಿಮಿಯನ್ನುತ ದಿನ ದಿನ ಕುಣಿಯುತ 1 ಅಂದುಗೆ ಗೆಜ್ಜೆಗಳಿಂದ ಶೋಭಿತನಾಗಿ ಮಂದಾರ ಕೂಡಿಕೊಂಡು ಗಜಗು ಭೊಗರಿಯಾಡುತ 2 ಬಾಲಕನಾಗಿ ನೀ ಲೀಲೆಯ ತೋರುತ ಲಾಲಿಯ ನಾಡುವ ಬಾಲಕರ ಕೂಡ 3 ಕುಡಿಯಲು ನಿನಗೆ ಕೊಡುವೆನು ನೊರೆಹಾಲ ಹುಡುಗರ ಕೂಡಿಕೊಂಡು ಶಿಡಿಗುಡಿನಾಡುತ 4 ಪತಿ ಹೆನ್ನೆ ವಿಠಲ 5
--------------
ಹೆನ್ನೆರಂಗದಾಸರು
ಬಾರೊ ಬಾರೊ | ಕರುಣಾಕರ ರಂಗನೆ ಬಾರೊ ||ತೋರೊ ತೋರೊ ಚರಣಾರ ವಿಂದವನೆ ಪ ಇಂದಿರೆ ರಮಣನೆ ಬಾರೊಸಿಂಧು ಶಯನ ಅರವಿಂದ ನಯನ | ಎನ್ನ ತಂದೆ ತಾಯಿ ಬಾರೊ 1 ಸರ್ಪಶಯನ ಬಾರೊ | ಕಂದರ್ಪನಯ್ಯಾ ಬಾರೋಶೂರ್ಪಕರ್ಣ ಪ್ರಿಯ ಭ | ಕ್ತಾರ್ಪಿತಾಲ್ಪಕೊಳ್ವ ಬಾರೋ2 ದೋಷ ದೂರ ಬಾರೊ | ಮಧ್ವೇಶ ವದಗಿ ಬಾರೋಶ್ರೀಶ ಮುದ್ದು ಮೋಹಾಭಿಧ | ಗುರು ಗೋವಿಂದ ವಿಠ್ಠಲ ಬಾರೋ 3
--------------
ಗುರುಗೋವಿಂದವಿಠಲರು
ಬಾರೊ ಬಾರೊ ಭಜಕರ ಪೋಷನೆ ಪ ವಾರಿಶಯನ ಮಮ ಘೋರ ದುರಿತಹರ ನಾರಾಯಣ ನಿನ್ನ ನಂಬಿದೆ ನೀ ಬೇಗಾ1 ಭಜಕರ ಪೋಷನೆ ಭಜನ ವಿಲಾಸನೆ ನಿಜಮಣಿಯಾದ ನಮ್ಮ ವಿಜಯಸಾರಥಿಯೆ ನೀ 2 ಸಾಧುಜನರ ನುತಾ ಸರ್ವಶರಣ್ಯನೆ ಮಾಧವನೆ ನೀ ಬಾರೋ ಮದನಜನಕ 3 ವಾಸವನುತ ಹರಿ ಹಾನಸದೊಡೆಯನೆ ದೇಶಿಕ ತುಲಸಿ ನಿನ್ನ ದಾಸಾನು ನಾನಾದೆ 4
--------------
ಚನ್ನಪಟ್ಟಣದ ಅಹೋಬಲದಾಸರು
ಬಾರೊ ಬಾರೊ ರಂಗ-ಬಾರೊ ನಮ್ಮನೆಗೆ ಪ ಬೋರನ್ಹಾಕುವೆ ನಡೆಮುಡಿಯ ನಿಮ್ಮಡಿಗೆ ಅ.ಪ ಪರಿಮಳಾಂಬುವಿನಿಂದ-ಪದವ ತೊಳೆಯುವೆನೊ ವರಗಂಧಾಕ್ಷತೆಯನು-ಭರದಿ ಧರಿಸುವೆನೋ 1 ಹೊಸಪಟ್ಟೆಯನು ತಂದು-ಹೊಂದಿಸಿ ರಾಜಿಸುವೆ ಕುಸುಮದಿಂದರ್ಚಿಸಿ ಕೂಡೆ ಸಂತಸವ 2 ಕುಂಕುಮಾಗಿಲು ದಿವ್ಯ ಗುಗ್ಗುಲಹೊಗೆಯ ಬಿಂಕದಿಂದರ್ಪಿಸುವೆನು ಭೋಗಿಸಯ್ಯಾ 3 ಮೇಲೆ ಸದ್ಭಕ್ಷ್ಯ ತಾಂಬೂಲವರ್ಪಿಸುವೆ ಲಾಲಿತ ಮಹಮಂಗಳಾರತಿಯೀವೆ 4 ಬಿಡದೆ ಸಾಷ್ಟಾಂಗವ ನಿಡುವೆ ರಮೇಶ ಪೊಡವಿಯೊಳ್ ಮಹದೇವಪುರದ ಶ್ರೀಹರಿಯೆ5
--------------
ರಂಗದಾಸರು
ಬಾರೊ ಬೇಗ ನೀರಜಾಕ್ಷದೂರು ಇದು ಯಾತಕೊ ಪ ಮೊಸರು ಮಾರುವ ಗೊಲ್ಲತಿಯರಅಸವಳಿಸಿ ಕೈಯ ಪಿಡಿದುವಶನಾಗು ಎಂದು ಪೇಳಿನಸುನಗುತಲಿದ್ದೆಯಂತೆ 1 ಕುಸುಮಶರನ ಪೆತ್ತವನೆಬಸವನಾದೆ ಊರೊಳಗೆಶಶಿಮುಖೇರ ದೂರು ಬಹುಪಸರಿಸಿತು ಪೇಳಲಾರೆ2 ಕಂದಕೇಳು ಇಂದುಮುಖಿಯರಹೊಂದಿ ಆಡಲೇಕೆ ಈಮಂದಿರದೊಳಾಡಿ ಸಲಹೊತಂದೆ ಉಡುಪಿ ಸಿರಿಕೃಷ್ಣ 3
--------------
ವ್ಯಾಸರಾಯರು
ಬಾರೊ ಭಕ್ತರ ಮನಮಂದಿರಕೆ | ಶ್ರೀ ರಮಣ ಪ್ರಯಾಗವೇಣಿ ಮಾಧವರಾಯಾ ಪ ಅಂಬುಧಿ ಚರನೆ ಬಾರೊ | ಅಂಬುಧಿ ಮಥನ ಬಾರೊ | ಅಂಬುಜಾಕ್ಷಿಯ ತಂದ ರ | ಕ್ತಾಂಬು ಪಾನನೆ ಬಾರೊ | 1 ಅಂಬುಪೆತ್ತವನೆ ಬಾರೊ | ಅಂಬುಧಿ ತೊಲೆಗಿನ | ಅಂಬುಧಿ ಬಂಧನ ಬಾರೊ | ಅಂಬೆ ಕಾಯ್ದವನೆ ಬಾರೊ | 2 ಅಂಬಾರ ಪುರಾಲಯ ನ | ರಾಂಬು ಹಯಗಮನ ಪೀ ತಾಂಬರ ವಿಜಯವಿಠ್ಠಲ | ಎಂಬ ವೆಂಕಟರಾಯ ಬಾರೊ |3
--------------
ವಿಜಯದಾಸ
ಬಾರೊ ಭಾಗ್ಯದ ನಿಧಿಯೆ, ದಯಾಂಬುಧಿಯೆ ಪ ಸಾರಿದವರ್ಗಿತ್ತೆ ಸುಧೆವಾರಿಜಾರಿ ಕೌಮುದಿವಾರಿಜಧರ ಮುದದಿಸಾರಸ ಹೃದಯದಿಕೇರಿ ಕೇರಿಯಲಿ ಶೃಂಗಾರದಿ ಮೆರೆವ ಅಪಾರ ದಯಾನಿಧಿ ಅ ಪಾದ ಸಾರಥಿ ಪರ ರವಿಜನ ನೀ ಸೋಲಿಸಿತ್ರಿಜಗ ವಿಜಯ ವೇಷ ವಿಜಯಗಿತ್ತು ಮೆರೆದೆವಿಜಯ ಮೂರುತಿಯೆ 1 ದಶಶಿರ ಸಂಹರದಶರೂಪದಲಿ ಖಳದಶನ ಮೂರುತಿಯೆಂದುಹೆಸರು ಹೇಳುವರು2 ಪದುಮನಾಭ ಪದ್ಮೇಶ ಪದುಮಮಾಲಿ ಪದ್ಮಾಕ್ಷಪದುಮ ಪಾಣಿ ಪದ್ಮಾಂಘ್ರಿ ಪದುಮಸಖ ತೇಜಿಪದುಮ ಕಲ್ಪದಿ ನಾಭಿ ಪದುಮದಿ ಚತುರ್ಮುಖಪದುಮ ಜನ ಪಡೆದು ಪದುಮಜಾಂಡವಡೆದಿಪದುಮ ಪೀಠನ ಹೃತ್ಪದುಮದಿ ನಿನ್ನಪದುಮ ತೋರುತ ಬಾರೊ ಕಾಗಿನೆಲೆಯಾದಿಕೇಶವಹದುಳದಿಂದ ಬಾರೊ ಭಾಗ್ಯದ ನಿಧಿಯೆ 3
--------------
ಕನಕದಾಸ