ಒಟ್ಟು 1632 ಕಡೆಗಳಲ್ಲಿ , 108 ದಾಸರು , 1203 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂದಿವಾಹನಾ ಪಾಲೀಸೊ ನೀ | ಕಂದ ನೆಂದನಾ ಪ ಕಂದು ಗೊರಳ ಮೌ | ಳೆಂದು ಶಿಖರ ಅಮರೇಂದ್ರ ಮುಖರು ಸುರ | ವೃಂದ ವ್ಯಂದ್ಯ ಪದಅ.ಪ. ನಂದ - ನಂದನಾ - ಪ್ರಿಯ ಸಖ | ಮಂದಜಾಸನಾಕಂದ ನೆನಿಸಿ ದುರ್ | ವೃಂದ ತ್ಯಜಿಸಿ ತವತಂದೆ ಯಾಜ್ಞೆಯಲಿ | ನಿಂದು ಸರಿದ ಹರ 1 ದಿತಿಸುತ | ಸ್ತೋಮ - ಪ್ರೀಯನೇ ||ಶಾಮ ಸುಂದರ ಹರಿ | ಪ್ರೇಮಾನ್ವಿತ ಸುತಕಾಮಾರಿಯೆ ಹರ | ಸಾಮಜವಾಸಾ 2 ಸೇವ್ಯ ನಂಘ್ರಿ ದಶದಿವ್ಯ ಕಲ್ಪ ತಪ | ಗೈಯ್ಯೆ ಶಯ್ಯನಾದೆ 3 ಯೋಗಿ ರೂಪ ಭವರೋಗ ವೈದ್ಯ ಹೃ | ದ್ರೋಗ ಕಳೆಯೊ ಶಿವ4 ಗೌರಿ ಮನೊ - ಹರಾ - ಕೈಲಾಸವಾಸ | ಕೈರಾತಾ ಕೃತಿಧರಾ ||ಗಿರಿ ಇಂದ್ರ ಕೀಲದಿ | ಘೋರ ತಪಸಿ ನರಸಾರೆ ನಿನ್ನ ಪದ | ಶೂರ ಪಡೆದ ಶರ 5 ಶುಕ | ಲಿಂಗಾಕಾರನೇ ||ತುಂಗ ಮಹಿಮ ನಿ | ಸ್ಸಂಗ ಹರಿಯ ದ್ವಿತಿಯಂಗ ಡಮರು ಶೂ | ಲಿಂಗಳ ಪಿಡಿದಿಹ 6 ತೈಜಸ - ತಾಮಸ | ಸಾಕಾರಿ - ಓಜಸಾ ||ನೀ ಕುಶಾಸ್ತ್ರದಲಿ | ಭೀಕರರನು ಅವಿವೇಕರ ಮಾಡ್ದೆ | ಪಿ | ನಾಕಿ ಧರ ಹರ 7 ರುಂಡ - ಮಾಲನೇ - ಮುನಿಜ ಮೃ | ಕಂಡ - ಪಾಲನೇ ||ಅಂಡಜ ಮಹ ಬ್ರ | ಹ್ಮಾಂಡ ದೊಡೆಯ ಪದಪುಂಡರೀಕದೊಳು | ಬಂಡುಣಿ ಎನಿಸಿಹೆ 8 ಶಂಭೊ - ಶಂಕರ - ಧೂರ್ಜಟೆಯೆ | ಅಂಚೆ - ಮನೋಹರಾ ||ಕಂಬು ಪಾಣಿ ಪದ | ಹಂಬಲಿಸುವೆ ಹೃದಯಾಂಬರದೊಳು ಎನ | ಬಿಂಬನ ತೋರಿಸು 9 ಸೋಮರ್ಕಾನಲ - ಈಕ್ಷಣಾ | ಭೀಮ - ಕೈಕಪಾಲ ||ಭೀಮ ಭವಾಟವಿ | ಧೂಮಕೇತು ಸಿರಿರಾಮ ಪದಾಶ್ರಿತ | ವೈಮನ ಕಳೆಯೊ 10 ಭಾವ - ಜಾರಿಯೇ - ಮುರುಹರ | ರಾವಣಾದಿ - ಪ್ರಿಯಾ ||ಸಾವಧಾನದೊಳು | ಭಾವ ಶುದ್ಧಿಸುತತೋರ್ವುವೆನಗೆ ಗುರು | ಗೋವಿಂದ ವಿಠಲನ 11
--------------
ಗುರುಗೋವಿಂದವಿಠಲರು
ನದೀದೇವತೆಗಳು ಕಂಗಳಿಂದಲಿ ನಿನ್ನ ಕಂಡೆ ನಾನೀಗ ಹಿಂಗಿತೇ ಎನ್ನ ಅಘದ್ಹಿಂಡು ಕಾವೇರಿ ಪ. ಮಂಗಳಾಂಗಿಯೆ ಶ್ರೀ ರಂಗನಾಥನ ಪದ ಭೃಂಗಳೆನಿಸಿ ಜನರ ಪಾವನಗೈವೆ ತುಂಗವಿಕ್ರಮ ಹರಿಗೆ ಮೂಲರೂಪಳಾಗಿ ಅಂಗ ಶುದ್ಧಿಯಗೈವೆ ಪಾಪಿಗಳ ಸತತ 1 ಎಲ್ಲೆಲ್ಲಿ ನೋಡೆ ಶ್ರೀರಂಗನ್ನ ಸೇವಿಸುವೆ ಪುಲ್ಲಲೋಚನೆ ನಿನ್ನ ಬಗೆಯರಿವೆನೆ ಬಲ್ಲ ಭಕ್ತರು ಬಂದು ನಿನ್ನಲ್ಲಿ ಸ್ನಾನವಗೈದು ಉಲ್ಲಾಸದಿಂದ ಆನಂದಪಡುತಿಹರೆ 2 ನೊರೆಸುಳಿಗಳಿಂದ ಭೋರ್ಗರೆಯುತ್ತ ಹರಿ ಇರುವ ಅರಮನೆಯೆ ವೈಕುಂಠವೆಂದು ಸೂಚಿಸುತ ಹರಿಸದನ ಸುತ್ತಿರುವೆ ವಿರಜೆ ನಾನೆಂದೆನುತ ಅರುಹುವಾ ತೆರದಿ ಬಹು ರಭಸದಿಂ ಪರಿವೆ 3 ನಿನ್ನ ಧ್ವನಿ ಇಂಪೆಂದು ಆನಂದದಿಂದಾಲಿಸುತ ಚನ್ನ ಶ್ರೀರಂಗ ತಾ ಪವಡಿಸಿಹನೆ ಘನ್ನ ಮಹಿಮಳೆ ಸಕಲ ಜೀವರಾಶಿಯ ಪೊರೆವೆ ಎನ್ನ ಮನ ಹರಿಪದದಿ ನಲಿವಂತೆ ಮಾಡೆ 4 ನಿನ್ನನೇ ವಿರಜೆ ಎಂತೆಂದು ಭಾವಿಸಿ ಈಗ ಎನ್ನ ಗುರುಗಳ ದಯದಿ ಸ್ನಾನಗೈದೆ ಇನ್ನು ಶ್ರೀ ವೈಕುಂಠದೊಡೆಯನಾ ತೋರಮ್ಮ ಘನ್ನ ಶ್ರೀ ಗೋಪಾಲವಿಠ್ಠಲನ 5
--------------
ಅಂಬಾಬಾಯಿ
ನನಗೆ ಹೊತ್ತು ಹೋಗದೆ ನಾನೆಯೆ ಆಡುವೆನನಗೆ ಹೊತ್ತು ಹೋಗದೆ ಪ ಈಶನ ಅವತಾರವಾಗಿ ಜೀವನ ಅವತಾರವಾಗಿಈಶನಾಗಿ ಜೀವ ಬೊಂಬೆಯನಾಡುವೆ1 ಜೀವರ ಹುಟ್ಟಿಸಿಯೆ ಜೀವರ ಬೆಳೆಸಿಯೇಜೀವರಲಿ ಲಯಿಸುವೆ ತ್ರೈಮೂರ್ತಿಯಾಗುವೆ 2 ಎಚ್ಚರವನೆ ಕೊಟ್ಟು ಎಚ್ಚರವನೆ ಕೊಟ್ಟುಎಚ್ಚರವನೆ ತಿಳುಹಿ ನಿಚ್ಚಳ ಚಿದಾನಂದನನು ಮಾಡುವೆ3
--------------
ಚಿದಾನಂದ ಅವಧೂತರು
ನಂಬಿ ಬಂದಿಹೆನಯ್ಯಾ ಪ ನಿನ್ನನಾ ಸ್ತುತಿಸಿ ಕೊಂಡಾಡುವೆ 1 ಕುಂದಿದ ಮನದಲಿ ನಿನ್ನನಾ ನೆನೆಯುದೆ ಮುಂದೇನುಗತಿ ಎನಗೆಂದು ತಿಳಿಯದೆ ಇನ್ನಾದರೆನ್ನ ಮನನಿನ್ನಲ್ಲಿ ನಿಲಿಸು 2 ಭೂಮಂಡಲವೆಲ್ಲಾ ತಿರುಗಿದೆ ಪ್ರಭುವೇ ನಿಮ್ಮ ಶರಣು ಬಂದಿಹೆ ನಯ್ಯ ಹೇಗುರುವೇ3 ಇಂದೆನ್ನ ಮೊರೆಕೇಳಿ ಕೇಳಿಸದಂತಿರುವೆಯಾ ಪ್ರಭುವೆ 4 ಪರದೇಶಿಯೆನುತೆನ್ನ ಕೈಬಿಡಬೇಡವೋ ಬಿಡದೆ ನಿನ್ನಡಿಗಳ ಪಿಡಿದಿಹೆನಯ್ಯಾ 5 ದೃಷ್ಟಿಯಿಂಲಿ ನೋಡಿ ರಕ್ಷಿಸು ನಮ್ಮನು | ಘಟ್ಯಾಗಿ ನಿಮ್ಮಪಾದ ಮುಟ್ಟಿ ನಾ ಭಜಿಸುವೆ6 ಸರ್ವಾಪರಾಧವ ಕ್ಷಮಿಸಿ ನೀ ಕಾಯೋ ಕಾಲಮೀರದೆಮ್ಮನು ಪಾಲಿಸಬೇಕಯ್ಯ 7
--------------
ರಾಧಾಬಾಯಿ
ನಂಬಿದೆ ನಂಬಿದೆ ಅಂಬುಜಾಕ್ಷನೆ ನಿನ್ನ ನಂಬಿದ ಭಕ್ತರಿಗೆ ಬೆಂಬಲನಾಗಿರುವನೆ ಪ. ಮೊರೆಯಿಡೆ ದ್ರೌಪದಿ ತ್ವರಿತದಿ ಪೋಗುತ ಪೊರೆದ ಮಹಾನುಭಾವ ಮುರಹರನೆ ನಿನ್ನ 1 ಶಕ್ತನೆ ನಿನ್ನ ನಾ ಭಕ್ತಿಯಿಂ ಭಜಿಸುವೆ ಭಕ್ತರಿಗೆಲ್ಲ ನೀನು ಮುಕ್ತಿಯ ಕೊಡುವನೆ 2 ಗಿರಿಯೊಳು ನೆಲಸಿಹ ಪರಮಪುರುಷ ರಂಗ 3
--------------
ಹೆಳವನಕಟ್ಟೆ ಗಿರಿಯಮ್ಮ
ನಂಬಿದೆ ನಾ ತವಪದವ | ಯೆನ | ಗಿಂಬನು ಪಾಲಿಸು ದೇವ ಪ ಅಂಬುಧಿಶಯನ ಚಿದಂಬರ ಮುರಹರ ಬೆಂಬಿಡದೆನ್ನ ವಿಶ್ವಂಭರ ಸಲಹೈ 1 ಬೇಸರದಿಂದ ಕಳವಳಿಸುವೆನೀ ಕೊಳಕು ಸಂಸಾರದಿ ನಳಿನಾಕ್ಷನೆ ಸುಖಗೊಳಿಸಿ ಪೊರೆವುದೈ 2 ದುಷ್ಟರ ಸಂಗದಿ ಕೂಡಿ ಸಂ | ಕಷ್ಟ ವಿದೈ ದಯಮಾಡಿ ಸೃಷ್ಟಿಗೊಡೆಯನೆನ್ನಿಷ್ಟವ ನೀಯುತ ಶಿಷ್ಟನ ಕಾಯೋ ವಸಿಷ್ಠವಿನುತ ಪದ 3 ದಣಿದೆನು ದಾರಿದ್ರ್ಯದಿಂದ | ನೆರ | ವಣಿಗೆಯಗೈವರಿಲ್ಲ ಗುಣನಿಧಿ ತವ ದಯವೊಣಗಿದ ಮಾತ್ರಕೆತೃಣ ಸಮವೆನ್ನನಾರೆಣಿಕೆಯ ಗೈವರು 4 ದೇವನೆ ನಿನ್ನಡಿಯುಗದ ಸ | ದ್ಭಾವನೆಯ -ನೀಯೊ ಸದಾ | ಕಾವವ ನೀನೆಂದೋವಿನು -ತಿನುವೆನು ಶ್ರೀವಾಸುದೇವ ದಾಮೋದರ ವಿಠಲ 5
--------------
ಅನ್ಯದಾಸರು
ನಭಕೀಶ - ನಭಕೀಶ ಪ ಇಭಮೊಗ ನಿನ್ನಡಿ | ಗಭಿ ವಂದಿಸುವೆನುಇಭವರದನ ಮನ | ನಭದಲಿ ತೋರೋ ಅ.ಪ. ಮೂಷಕ ವಾಹಾಹಿ | ಭೂಷನೆ ತ್ರೈಜಗತೋಷ ಗಣಾಧಿಪ | ಪಾಶಾಂಕುಶಧರ 1 ಶುಭ ಗುಣ ಭಜನೆಯಸುಭಗನೆ ಪಾಲಿಸಿ | ಕುಭವನೆ ಹರಿಸೋ 2 ಅಂಬುಜಾಂಡದಿ ತವ | ಶುಭಗುಣ ಪ್ರಸರಣಸುಭುಜಾಹ್ವಯ ಗೈ | ದ ಭಯವ ನಿತ್ತನು 3 ಅಬುಧಿಗೆ ಸೇತುವೆ | ವಿಭವದಿ ಗೈವಾಗಬುಜಾಂಡೋದರ | ಭಜಿಸಿದ ನಿನ್ನಾ 4 ಕ್ರತು ರಾಜಸೂಯ 5 ರಕ್ತವಾಸ ಅನು | ರಕ್ತ ಹರಿಯಲಿಭಕ್ತಿಯ ಪಾಲಿಸೋ | ಭಕ್ತಾಶ್ರಯನೇ 6 ಅಸಮಾಧಿಕ ಪ್ರಿಯ | ಶಶಿಭೂಷಣ ಸುತಶಶಿ ದ್ವಿಟ್ ಮರ್ಭವ | ಪಾಶವ ಕಳೆಯೋ 7 ಎಕಮೇವ ನಲಿ - ವಿ | ವೇಕವ ಕೊಡುವುದುಏಕದಂತ ಚಾ | ಮೀಕರ ಕೃತ ಭೂಷಾ 8 ಮೋದಕೇಕವಿಂಶ | ಸಾದರ ಸ್ವೀಕೃತಮೋದ ತೀರ್ಥ ಮತ | ಭೋದಿಸು ಗುರುವೇ 9 ಚಾರುದ್ವೇಷ್ಣಾಭಿಧ | ಚಾರ್ವಾಂಗನೆ ಹರಿಚಾರು ಚರಿತೆ ಸತ್ | ಸ್ಫೋರಣ ಕೊಡುವುದು 10 ಭಾವಜಪಿತ ಗುರು | ಗೋವಿಂದ ವಿಠಲನಭಾವದಿ ತೋರಿಸೊ | ಭಾವಜ ಭ್ರಾತಾ11
--------------
ಗುರುಗೋವಿಂದವಿಠಲರು
ನಮಾಮಿ ತಂದೆಯೇ | ಮುದ್ದುಮೋಹನಾನತೋಸ್ಮಿ ಸಿದ್ಧರೇ | ತ್ವತ್ವದಾಂಬುಜಂ ಪ ಸುಕೃತ ವೆಂಥದೋಗುರುಗಳ್ ನಿಮ್ಮಯಾ | ಕರುಣದೊರಕಿತು 1 ವಿಲಸಿತಾಮಲಾ ನಿ | ಷ್ಕಲ್ಮುಷ ಹೃದಯರೇಆಲವಾ ಬೋಧರಾ | ಒಲವ ಪಡೆದರೇ 2 ಹಲವು ಜನುಮದೀ | ಬಳಲಿ ಬಂದುದಾತಿಳಿದು ನೀವೆನ್ನಾ | ಪಾಲಿಸೀದಿರಿ3 ಕ | ಳಂಕ ವಿಹಿತವೂ 4 ಎಂದು ಕರುಣೆಯಿಂ | ತಂದೆ ವೆಂಕಟನಾಹೊಂದಿ ಭಜಿಪರಾ | ಅಂದು ಪ್ರೇರಿಸೀ5 ಕರೆದು ಎನ್ನನೂ | ತೆರಳು ಎನುತಲೀಒರೆದು ಮತಿಯನೂ | ದಾರಿ ತೊರ್ದಿರೀ 6 ಸೋಮ ಶೇಖರಾ | ಸಮ ಪದಸ್ಥನೇಸಾಮಾಜಾದ್ರಿಲೀ | ಪ್ರಮಾಥಿವತ್ಸರಾ 7 ವದ್ಯ ಫಾಲ್ಗುಣಾ | ಪ್ರತಿಪದಾದಿನಾಆದಿವಾರದೀ | ವಿದಿತ ಮಾರ್ಗದೀ 8 ಗುರು ಗೋವಿಂದನಾ | ನಾಮ ತಾರಕಾಅರುಹೀ ಪ್ರೀತಿಲೀ | ದಾರಿ ತೋರ್ದಿರೀ 9 ಕೋಮಲಾಂಗನೇ | ನಿಮ್ಮ ಮಹಿಮೆಯಾಪಾಮರಾನು ನಾ | ಗಮಿಸಲಾಪನೇ 10 ಗತಿಯೆ ನೀವೆಂದೂ | ಸತತ ತುತಿಸುವೆಅತುಳ ಮಹಿಮರೇ | ಹಿತವ ಮಾಡಿರಿ 11 ತವ ಪದಾರ್ಚನೇ ತ್ರಿ | ಸವನ ಸಂಧ್ಯವೂಹವನ ಹೋಮವೂ | ಭವದ ಶೋಷವೂ 12 ನೀವೆ ಬಂಧುವೂ | ನೀವೆ ಬಳಗವೂನೀವೆ ತಾಯಿಯೂ | ನೀವೆ ತಂದೆಯೂ 13 ನಿಂತು ನೀವೆನ್ನಾ | ಅಂತರಂಗದೀಮಂತವ್ಯ ರಂಗನಾ ಚಿಂತೆ ಪಾಲಿಸೀ 14 ಗುರು ಗೋವಿಂದ ವಿಠಲನಾ | ಸುರಚಿರಾಮಲಾಚರಣ ಪುಷ್ಕರ | ಸ್ಮರಿಪ ಗುರುವರಾ 15|
--------------
ಗುರುಗೋವಿಂದವಿಠಲರು
ನಮಿಪೆ ನದಿ ದೇವತೆಗಳೇ | ನಿಮಗೆ ಪ. ನಮಿಪೆ ನದಿ ದೇವತೆಗಳೇ ನಿಮ್ಮ ಚರಣಕ್ಕೆ ಕಮನೀಯ ಗಾತ್ರೆಯರೆ ಕಂಜದಳ ನೇತ್ರೆಯರೆ ಸುಮನರ ವಂದಿತರೆ ಸುಗುಣ ಸಂಪನ್ನೆಯರೆ ಅಘ ಹರೆಯರೇ ಕಮಲನಾಭನ ಅಂಗೋಪಾಂಗ ಸಂಜಾತೆಯರೇ ಅಮರ ಭೂ ಪಾತಾಳ ಲೋಕ ಸಂಚರೆಯರೆ ನಮಿಸಿ ಸ್ನಾನವಗೈವ ನರರ ಪಾವನಗೊಳಿಪ ಅಮಿತ ಪಾವಿತ್ರತರರೇ 1 ಗಂಗೆ ಗೋದಾವರಿ ಯಮುನೆ ಸರಸ್ವತಿ ಸಿಂಧು ಮಂಗಳಾಂಗೆ ಕೃಷ್ಣ ಭೀಮರಥಿ ಪಲ್ಗುಣಿ ಸಂಗಮ ತ್ರೀವೇಣಿ ಸರಯು ಗಂಡಿಕಿ ಸೀತ ತುಂಗಭದ್ರಾ ನಾಮರೇ ಅಂಗ ಮಾಲಾಪಾರಿ ಕಾವೇರಿ ಕಪಿಲೆ ನರ ರಂಗ ಪಾವನ ಗೈವ ಪುಷ್ಕರಗಳಭಿಮಾನಿ ಅಂಗನೆಯರೆÀಲ್ಲರಿಗೆ ಅಭಿವಂದಿಸುವೆ ಅಘವ ಹಿಂಗಿಸುವುದೆಂದು ಮುದದೀ 2 ಬಂದು ಸ್ವಪ್ನದಿ ಮಾಘ ಶುದ್ಧ ನವಮೀ ಭರಣಿ ಸಂಯೋಗದ ಪರ್ವವೆಂದು ಭದ್ರೆಲಿ ಸ್ವಾನ ವಿಂದು ಗೈದೆವು ಎಂದು ಮುಂದೆ ಕುಳ್ಳಿರೆ ನಾನಾ ನಂದದಿಂ ಕಂಡು ನಿಮ್ಮಾ ಸುಂದರಿಯರೇ ನಿಮ್ಮ ಸಂದರ್ಶನದಿ ಫಲವು ಬಂದುದೆನಗೆಂದು ನಾನಂದ ವಚನಕೆ ನಲಿದು ಒಂದು ಅರಿಯದ ಎನಗೆ ತಂದು ಕೊಟ್ಟಿರಿ ಸ್ನಾನ ದಿಂದ ಬಹು ಪುಣ್ಯ ಫಲವಾ 3 ಹರದಿಯರೆ ಕಂಡೆ ನಿಮ್ಮರವಿಂದ ಮುಖ ಶುಭ್ರ ಸರಿತು ದೇವತೇಗಳೇ ಗುರು ಕೃಪೆಯ ಬಲದಿಂದ ಸಿರಿ ನದಿಗಳೇ ಜಗದಿ ಭರದಿಂದ ಪರಿದು ಸಾಗರವ ಕೂಡುವ ತ್ವರದಿ ಪರಿಪರಿಯ ಜಲ ಜಂತು ಸಂಸಾರಿ ಸಂಗೆಯರೆ ನರರು ಬಣ್ಣಿಸಲಳವೆ ಕರುಣಿ ನಿಮ್ಮಯ ಮಹಿಮೆ ಸಿರಿಕಾಂತ ಪ್ರಿಯಸುತೆಯರೇ 4 ಶ್ರೇಷ್ಟನದಿ ಅಭಿಮಾನಿ ಸತಿಯರೇ ಎನ್ನ ಅಘ ಸುಟ್ಟು ನಿರ್ಮಲ ಭಾವ ಕೊಟ್ಟು ಹೃತ್ಪದದಲಿ ವಿಷ್ಣು ಮೂರ್ತಿಯ ಕಾಂಬ ಶ್ರೇಷ್ಟ ಜ್ಞಾನದ ಮಾರ್ಗ ಕೊಟ್ಟು ಸದ್ಭಕ್ತಿ ಭರದೀ ಚಿಟ್ಟನೇ ಚೀರಿ ದಾಸ್ಯದ ಭಾವದಲಿ ಕುಣಿದು ಶ್ರೇಷ್ಟ ಶ್ರೀ ಗೋಪಾಲಕೃಷ್ಣವಿಠ್ಠಲನ ಪದ ಮುಟ್ಟುವೊ ವಿಜ್ಞಾನ ಪ್ರವಹ ರೂಪದಿ ವಲಿದುದಿಟ್ಟಿಯರ ಸಂತೈಸಿರಿ 5
--------------
ಅಂಬಾಬಾಯಿ
ನಮಿಸುತ ಹೊರಳುವೆನು | ಕಾರ್ತಿಕೇಯ ನಮಿಸುತ ಹೊರಳುವೆನು ಪ ನಮಿಸುತ ಹೊರಳುವೆ | ರಮೆಪತಿ ಸಖ ಗುಹನಮಿಸುತಅ ಪರಿಪರಿ ತಾಪದ | ಸೆರೆಯೊಳ್ ಸಿಲುಕಿ ಬಲು ತರ ಕಷ್ಟಪಡುತಿಹೆನು ಕುಮಾರ ನಮಿಸುತ 1 ದುರಿತ ರಾಶಿಯಗೈದು ನರಳು ಬಲಿಹೆನು | ಕಾವುದು ನೀನು ನಮಿಸುತ 2 ಈಶನ ಪುತ್ರ ಸ | ರ್ವೇಶ ಸದ್ಗುಣ ಪಾವಂ | ಜೇಶನೆ ಸ್ತುತಿಸುವೆನು | ದಾಸನು ನಾನು ನಮಿಸುತ 3
--------------
ಬೆಳ್ಳೆ ದಾಸಪ್ಪಯ್ಯ
ನಮಿಸುವೆ ಕೇಶವ ರಂಗನ ನಮಿಸುವೆ ಪ್ರಣವ ಸ್ವರೂಪನ ಪ ಸನಕ ಸುಸೇವಿತ ಕೃಷ್ಣನ1 ಸರಸದಿ ದಾಸರಿಗೊಲಿಯುವ ಹರಿಯ ಪರಮ ಪಾವನ ಮೂರ್ತಿಯ 2 ಪನ್ನಗಶಯನನ ಹರಿ ಮಾಧವನ ಚನ್ನಿಗ ಕೇಶವ ದೇವನ 3 ದೂರ್ವಾಪುರ ಮಧ್ಯದಿ ನೆಲೆಸಿರುವ ಸರ್ವಜಗದೇಕಾತ್ಮನ 4
--------------
ಕರ್ಕಿ ಕೇಶವದಾಸ
ನಮಿಸುವೆ ಗುರುರಾಜ - ಸುತೇಜ ಪ ನಮಿಸುವೆ ಸುಜನರ ಕಲ್ಪಭೂಜ ಅ.ಪ ಶರಣ ಜನಾವನ ಕರುಣಾಭರಣ ಹರಿಚರಣಾರಾಧನ ಧುರೀಣ 1 ಮೂರಾವತಾರವನೆತ್ತಿದ ಧೀರ ಸಾರಿದವರ ಸಂತಾಪ ವಿದೂರ 2 ದ್ವಿಜಕುಲದೀಪ ಭವ್ಯ ಸ್ವರೂಪ ಅಜರಾಮರ ಸತ್ಕೀರ್ತಿ ಪ್ರತಾಪ 3 ಜ್ಞಾನವಿರಕ್ತಿ ನಿರ್ಮಲಭಕ್ತಿ ಮಾಣದೆ ಕೊಡುವುದು ಮನಸಿಗೆ ಶಾಂತಿ 4 ವರ ಮಂತ್ರಾಲಯ ಸುರುಚಿರ ನಿಲಯ ಕರಿಗಿರೀಶ ಶ್ರೀ ನರಹರಿಪ್ರಿಯ 5
--------------
ವರಾವಾಣಿರಾಮರಾಯದಾಸರು
ನಮಿಸುವೆ ನಿನ್ನ ಶ್ರೀಗುರುವೆ ಅಮಿತಾನಂದಾತ್ಮಸ್ವರೂಪನೇ ಶಮನ ಮಾತು ಈ ಭವಭಾಧೆಯ ನೀ ಚಿನುಮಯ ಮೂರುತಿಯೇ ಪ ಬೆಂದೆನು ಸುಖದುಃಖಗಳಲಿ ನಾ ಬಹು ನೊಂದೆನು ಜನಿಮೃತಿ ಹೊಂದುತಾ ಎಂದಿಗೆ ಪರಮಾನಂದವ ಪಡೆವೇ ಬಂದೆನು ಶರಣಾಗಿ 1 ಭೋಗದಿ ಸುಖಿಸುವೆನೆಂಬುವಾ ಅನು ರಾಗದಿ ವಿಷಯಗಳಲಿ ಸಿಲುಕಿ ಭೋಗಿಸಿದಂತೆಯೆ ವಾಸನಾ ಬಲ ವಾಗಂತ ಬಂದಿತು ಮನದಲ್ಲಿ 2 ಭವ ರೋಗದಿ ಬಳಲುವೆನೀಗಲೇ ತ್ಯಾಗದಿ ನಿಜಸುಖ ದೊರಕುವ ರೀತಿಯ ತಿಳುಹಿಸು ಗುರುವರನೆ 3 ವಿಶ್ವದ ತೊಡಕನು ಹಾಕಿಕೊಂತು ಈಶ್ವರನನ್ನೇ ಮರೆತಿರುವೆ ನಶ್ವರವಾಗಿಹ ಈ ಜಗವನು ಶಾಶ್ವತವೆಂದೇ ತಿಳಿದಿರುವೇ 4
--------------
ಶಂಕರಭಟ್ಟ ಅಗ್ನಿಹೋತ್ರಿ
ನಮಿಸುವೆ ಪಾಲಿಸೊ ಪ್ರಾಣಪತೆ ಪ್ರೇಮವಾರುಧಿ | ವಾನರನಾಥಾ ಪೊಂದಿದೆ ಚರಣಾ ಪ ತಂದೆಯೆ ಪಿಡಿನೀ ಬಂದು ಕರವ ಕುಂದಗಳೆಣಿಸದೆ ನೀ ಬೇಗನೆ 1 ಕರಿವರ ಭೀಮಾ ಗುರು ಸುಖತೀರ್ಥಮರಿಯದೆ ಗರಿಯೊ ನರಹರಿ ಧ್ಯಾನಾ | ಕೊರವಿ ನಿಲಯನೆ ಪ್ರಾರ್ಥಿಪೆ 2 ಶ್ರೀವರ ಶಾಮಸುಂದರ ವಿಠಲನ ಸೇವಕನಾದ ಭಾವಿ ಧಾತ ಪಾವನನೇ ಪವಿಗಾತ್ರ ಸದಾ 3
--------------
ಶಾಮಸುಂದರ ವಿಠಲ
ನಮಿಸುವೆನಾಂ ಪಾಲಿಸು ನಾಥನೆ ಪ ಸಾರಸಭವತಾತ ನಾರದ ಮೌನಿನುತ ಮೂರ ಕೋಟಿ ಸುಂದರಾಂಗ ಮುರಹರ ಗೋವಿಂದ 1 ಶಂಖಚಕ್ರ ಗಧಾ ಪಂಕಧಾರಿ ಸದಾ ಕಿಂಕರಗಣ ಪಾವನಘನ ವೆಂಕಟರಮಣ2 ಶ್ರೀಜನಾರ್ಧನ ರಾಜಸತನಾ ಮೂಜಗಭರಿತ ಪರಾತ್ಪರ ಜಾಜಿಶ್ವರಾ 3
--------------
ಶಾಮಶರ್ಮರು