ಒಟ್ಟು 764 ಕಡೆಗಳಲ್ಲಿ , 81 ದಾಸರು , 697 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೆಲ್ಲನೇಳಯ್ಯ ಮಣಿವೆ ಪ ನಲ್ಲುಲಿಗಳಿಂದ ಶುಕಪಿಕಗಳೆಚ್ಚರಿಸುತಿವೆ ಅ.ಪ ಅರುಣ ವರ್ಣದ ಗಗನಯೆಂಬ ಹರಿವಾಣವನು ಕರದಿ ಪಿಡಿದೆತ್ತೆ ನಿನಗಾರತಿಯ ಗೈಯಲು ತರಣಿ ನಿಂದಿರ್ಪ ತುಂಬುರು ನಾರದರು ಮುದದಿ ಪರಮಾತ್ಮ ಸುಪ್ರಭಾತಗಳ ಪೇಳುವರು 1 ಭೃತ್ಯ ದಿಕ್ಪಾಲಕರು ಅತ್ಯಧಿಕ ಭಕ್ತಿಯಿಂ ಕರವೆತ್ತಿ ಮುಗಿದು ನಿತ್ಯಕಾರುಣ್ಯ ಪರಿಪೂರ್ಣ ಸದ್ಭಕ್ತಗಣ ನುತ್ಯ ನೀನೇಳೆಂದು ನುತಿಸುತಿಹರು 2 ನಿನ್ನ ನಾಮವ ಭಜಿಸಿ ಪಾದಪೂಜೆಯ ಗೈದು ನಿನ್ನ ಕಾರುಣ್ಯ ದರ್ಶನಕೆ ಕಾದಿರುವಾ ಪನ್ನರೆಲ್ಲರ್ಗೆ ದರ್ಶನವ ನೀನೀಯಲು ಇನ್ನೇಕೆ ತಡ ಏಳು ಮಾಂಗಿರೀಶ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮೋದದಲಿರಬೇಕಮ್ಮ | ಸುಮ್ಮನೆ ನೀನು ಮೋದದಲಿರಬೇಕಮ್ಮ ಪ. ಮೋದ ಶ್ರೀ ಗುರುಗಳ ಚರಣ ಕಮಲವನ್ನು ಮೋದದಿಂದಾಶ್ರಯಿಸಿ ಸುಖದಲಿರಲಿಬೇಕು ಲೋಕದ ಜನಗಳ ನುಡಿಗಳ ಲೆಕ್ಕಿಸದೆ ಲೋಕವಂದ್ಯನ ಚರಣ ಕಮಲವ ಸ್ಮರಿಸುತ ಅ.ಪ. ಪರಮಾತ್ಮನ ಕೃಪೆಗೆ ಕಾರಣವಿದು ಗುರುಕರುಣದ ಬಲವು ಅರಿಯದ ಮನುಜರ ಬಿರುನುಡಿಗೆ ಮನ ಕೊರಗಿಸದಂದದಿ ಹರುಷಪಡಲಿಬೇಕು 1 ಎಚ್ಚತ್ತು ನಡಿಯಬೇಕು | ಶ್ರೀ ಗುರುಸೇವೆ ಇಚ್ಛೆಯಿಂ ಮಾಡಬೇಕು ತುಚ್ಛ ಮಾತುಗಳಿಗೆ ಮನಕೊಡದೆ ಹರಿ ಮೆಚ್ಚುವಂದದಿ ಗುರು ಇಚ್ಛೆಯನರಿತು ನಡೆದು 2 ವಂದನೆ ನಿಂದ್ಯಗಳ | ಮೋಕ್ಷಾರ್ಥಿಯು ಒಂದಾಗಿ ಭಾವಿಸುತ ಮಂದರೋದ್ಧರನ ಮಾಯಕೆ ಮನದಿ ಮೋದಿಸುತ ಮಂದರಂದದಿ ಮನುಜರಿಗೆ ತೋರುತಲಿದ್ದು 3 ಮಾನವ ಜನ್ಮ ಸಾಧನ ಜನ್ಮವಮ್ಮ ಸಾಧಾರಣವಲ್ಲ ಸಾಧು ಸಜ್ಜನಸಂಗ ಸಾಧಿಸಿ ದುಷ್ಕರ್ಮ ಛೇದಿಸಬೇಕಮ್ಮ 4 ಚಿಂತೆಯನಳಿಯಬೇಕು | ಶ್ರೀ ಗುರು ಕರುಣ ಅಂತರ ತಿಳಿಯಬೇಕು ಸಂತತ ಗೋಪಾಲಕೃಷ್ಣವಿಠ್ಠಲನ ಅಂತರಂಗದಿ ಭಜಿಸಿ ಮುಕ್ತಿ ಸಾಧಿಸಬೇಕು 5
--------------
ಅಂಬಾಬಾಯಿ
ಮೋಸಗೊಳ್ಳದಂತೆ ಕಾಯೊ ಶ್ರೀಶ ಕರುಣಾಳೊ ಆಶಾಮಗ್ನಮನವ ಹೃಷೀಕೇಶ ನಿನ್ನ ಪದದಲ್ಲಿರಿಸು ಪ. ಹಾದಿ ಬೀದಿಯಲ್ಲಿ ತಿರುಗಿ ಬಾಧೆಗೊಂಡು ಬಳಲಿ ಕಡೆಗೆ ಬೂದಿಯ ಮೇಲೊರಗಿ ಶಾಂತವಾದ ಶ್ವಾನವದು ಕಾದುಕೊಂಡು ಬಾಗಿಲಲ್ಲಿ ಕಾದಲುದರ ತುಂಬುವುದಕೆ ಸಾದರ ಕೊಂಡನ್ಯದಿ ರಸಾಸ್ವಾದನ ಗೈವಂತಾಗಿಹುದು 1 ಕರ್ಣಧಾರರಹಿತ ನಾವೆ ಅರ್ಣವದಿ ಭ್ರಮಿಸುವಂತೆ ದುರ್ನಿವಾರ ಮನಸಿನಿಂದ ಶೀರ್ಣನಾದೆನು ಸ್ವರ್ಣಗರ್ಭಪಾಲಕನು ಪರ್ಣವರವಾಹನ ಹೃದಯಾ- ಕರ್ಣಿಕಾದರಲ್ಲಿ ನಿಂತು ನಿರ್ಣಯವ ತಿಳಿಸು ಬೇಗ 2 ಆಸೆಗೊಂಡು ದುರ್ವಿಷಯದಿ ಬೇಸರದೆ ಭ್ರಾಂತಿಯಿಂದ ದೋಷ ದುರಿತಂಗಳಿಗವಕಾಶನಾದೆನು ದಾಸನೆಂಬ ದೃಷ್ಟಿಯಿಂದ ಕ್ಲೇಶವೆಲ್ಲ ಓಡಿಸಯ್ಯ ಶೇಷಗಿರಿವರ ಶಿಖರಾವಾಸ ನೀನೆ ಶರಣ ಜೀಯಾ 3
--------------
ತುಪಾಕಿ ವೆಂಕಟರಮಣಾಚಾರ್ಯ
ಯಜ್ಞೋಪವೀತವೀವೆನೊ ನಿನಗೆ ಸ್ವಾಮಿ ಪ ಯಜ್ಞಪುರಷ ಮುನಿ ಯಜ್ಞಪಾಲಕನಿಗೆ ಅ.ಪ ಅಜ್ಞ್ಯಮನೋರಥನು ನಾನು | ಕಿಂ ಚಿಜ್ಞನೆಂದಿಗು ನಿನ್ನ ಪೊಂದಿದೆನು ಸುಜ್ಞಾನವೆಂಬುದು ಸ್ವಪ್ನದೊಳರಿಯೆ | ಸ ರ್ವಜ್ಞ ನಿನ್ನವನೆಂದು ವಿಜ್ಞಾನ ಪಾಲಿಸು 1 ಸಾಧು ಜನಪ್ರಿಯ ಸರೋಜಾಕ್ಷ ಪೂರ್ಣ ಬೊಧಾಮೃತ ಮಯದಿವಿಜ ಪಕ್ಷಾ ಕಾದುಕೊಂಡಿರುವೆ ಅನಾದಿಯಿಂದಲಿ ನಮ್ಮ ನಿ- ರಾದರಣೆ ಮಾಡದೆ ನೀ ದಯದಿಂದ ಸಲಹೊ 2 ಮುಕುತಿದಾಯಕ ದೇವಾಧಿದೇವಾ ನಿಜ ಭಕುತ ಜನರಿಗೆ ನೀನೇ ಸಂಜೀವಾ | ಆ ಯುಕುತ ಮಾತುಗಳಿದಲ್ಲ ವೇದಾಂತ ರಹಸ್ಯ ಸಕಲಾಧಾರನೆ ಶ್ರೀ ಗುರುರಾಮವಿಠಲ 3
--------------
ಗುರುರಾಮವಿಠಲ
ಯತಿಗಳ ಸ್ತುತಿ ಮಧ್ವಮುನಿಯೆ ಎನ್ನ ಉದ್ಧರಿಸಿನ್ನ ಪ. ಸದ್ಗುರುವೆ ನಿನ್ನ ಪದ್ಮಪಾದಗಳಿಗೆ ಕರ ಮಣಿ ಅ.ಪ. ವರಕಲ್ಪ ಕಲ್ಪದಲಿ ಹರಿಯ ಮೆಚ್ಚಿಸಿ ಸಿರಿವರನಲಿ ಜನಿಸಿ ವಾಯುವೆಂದೆನಿಸಿ ಸುರರೆಲ್ಲ ಮೊರೆಯಿಡೆ ಹರಿಯವತರಿಸಿ ಹರಿಯ ಸೇವೆಗೆ ನೀ ಮಾರುತಿ ಎನಿಸಿ ಶರಧಿ ಲಂಘಿಸಿ ಉಂಗುರ ಸೀತೆಗೆ ಇತ್ತು ದುರುಳನ ಪುರ ಸುರಮುಖನಿಗರ್ಪಿಸಿದೆ 1 ಚಂದ್ರವಂಶದಲಿ ಬಂದ್ಯೊ ಬಲಶಾಲಿ ನಂದಕಂದನ ಲೀಲೆ ಅಂದ ಪಾಡುತಲಿ ಬಂದಿತು ಕಲಹ ಅಲ್ಲಿ ದ್ವಂದ್ವ ಭಾಗದಲಿ ಅಂದು ಕೌರವರಲಿ ನಿಂದ್ಯೊ ದ್ವೇಷದಲಿ ಇಂದುಮುಖಿಗೆ ಸೌಗಂಧಿಕ ಇತ್ತು ಕುರು ನಂದನ ವಂಶವನಂದು ಛೇದಿಸಿದೆ 2 ದುರುಳರೆಲ್ಲರು ಬಂದು ಕಲಿಯುಗದಿ ನಿಂದು ಹರಿಯು ನರನು ಒಂದು ಅರುಹಲಿಂತೆಂದು ಸುರರೆಲ್ಲ ಬಲುನೊಂದು ಕ್ಷೀರಾಬ್ಧಿಗೆ ಬಂದು ಸಿರಿವರ ಪೊರೆಯೆಂದು ಮೊರೆಯಿಡಲಂದು ಹರಿ ನಿನಗರುಹಲು ಧರೆಯಲ್ಲಿಗೆ ಬಂದು ಸುರ ಭೂ ಶ್ರೇಷ್ಠನುದರದಲಿ ಜನಿಸಿದೆ 3 ಪರಮಾಯಿಗಳ ಮತ ತರಿದು ಕೆಡಹುತ್ತ ಹರಿ ಸರ್ವೋತ್ತಮೆನುತ ಧರೆಯೊಳ್ ಸಾರುತ್ತ ತರತಮ್ಯ ಸತ್ಯವೆನುತ ಪಂಚಭೇದೆನುತ ಸಿರಿರಮಣಗೆ ನರಭೃತ್ಯನೆನ್ನುತ್ತ ಪರಿ ಬೋಧಿüಸಿ ದುರುಳರ ಛೇಡಿಸಿ ಸರಸಿಜಾಕ್ಷಗೆ ಬಲು ಸಮ್ಮತನೆನಿಸಿ 4 ವೈಷ್ಣವಾಗ್ರಣೀ ಲೀಲೆ ಪೇಳಲಳವಲ್ಲ ಜಿಷ್ಣುಸಖನ ಲೀಲೆ ನುಡಿಸೆನಗೆ ಸೊಲ್ಲ ಕಷ್ಟಪಡುತಿಹೆನಲ್ಲ ಕರುಣವೇಕಿಲ್ಲ ಶ್ರೇಷ್ಠನೆ ಗೋಪಾಲಕೃಷ್ಣವಿಠಲ ಇಷ್ಟು ತಿಳಿಸುತ ಅಷ್ಟದಳದಲಿ ಶ್ರೇಷ್ಠದಿ ಪೂಜಿಪ ಗುಟ್ಟು ತೋರೆನಗೆ 5
--------------
ಅಂಬಾಬಾಯಿ
ಯಂತ್ರೋದ್ಧಾರಕನೆ | ಪಾಲಿಸೊ ಯಂತ್ರೋದ್ಧಾರಕನೆ ಪ. ಸಂತತ ತವ ಪದಕ್ರಾಂತಳಾಗಿರುತಿರೆ ಇಂತು ನಿರ್ದಯವೇಕೊ ಸಂತಸದಲಿ ಪೊರೆ ಅ.ಪ. ಯತಿಗಳಿಂದ ಸಂಸ್ಥಿತನೆನಿಸುತ ಅ- ಪ್ರತಿಮ ಮಹಿಮ ಈ ಕ್ಷಿತಿಯೊಳು ನೆಲಸಿಹ 1 ತುಂಗ್ರಭದ್ರ ತೀರ ಮಂಗಳ ಮಹಿಮನೆ ಕಂಗೊಳಿಸೆನ್ನಂತರಂಗದಲಿ ನೆಲಸುತ 2 ಮಂತ್ರಿವರ್ಯ ಮಾಹಂತ ಹರಿಪ್ರಿಯ ಎಂತು ವ್ಯಾಸರಿಲ್ಲಿ ಯಂತ್ರದಿ ಬಿಗಿದರೊ 3 ಹನುಮ ಭೀಮ ಶ್ರೀ ಮುನಿ ಮಧ್ವಾರ್ಯನೆ ಸನುಮತದಲಿ ಎನ್ನ ಮನದಿಚ್ಛೆ ಸಲಿಸೊ 4 ಬೆಟ್ಟದೊಡೆಯ ಬಹು ನಿಷ್ಠೆಯೊಳ್ ಸ್ತುತಿಸುವೆ ಇಷ್ಟ್ಯಾಕೆ ತಡೆ ಹಂಪೆ ಪಟ್ಟಣವಾಸಿಯೆ 5 ಕಾಮಿತ ಫಲದನೆ ಕಾಮಿನಿಗುಂಗುರ ನೇಮದಿಂದಿತ್ತೆಯೊ ರಾಮನ ದೂತನೆ 6 ಎಷ್ಟು ಮಾನವೊ ಬೆಟ್ಟೆಲಿ ಜಪಮಣಿ ದೃಷ್ಟಿಸೊ ಗೋಪಾಲಕೃಷ್ಣವಿಠ್ಠಲ ದಾಸ 7
--------------
ಅಂಬಾಬಾಯಿ
ಯದುನಾಥ ಯದುನಾಥ ಮುದದಿಂದಲಿ ಪೊರೆ ಪದುಮಿಣಿ ವಲ್ಲಭ ಪ. ಪೊಡವಿಯೊಳಗೆ ಪಡುಗಡಲೆಡೆವಾಸ ತಡವೇತಕೆ ಪಾಲ್ಕಡಲಶಯನ ಪೊರೆ 1 ಅಣುಮಹ ಕಾಲಾತ್ಮಕ ಸರ್ವೇಶ್ವರ ಗುಣಗಣಪೂರ್ಣನೆ ಸರ್ವವ್ಯಾಪಕ 2 ಚಿಂತನೆದೂರ ಅಚಿಂತ್ಯ ಮಹಿಮ ಗುಣ ವಂತ ಅನಂತ ಮಹಂತ ಕಾಲಾಂತಕ 3 ಸ್ಥಾವರ ಜಂಗಮ ಜೀವರ ಬಿಂಬ ಶ್ರೀ ಪಾವಮಾನಿ ಮತ ಸುಜನೋದ್ಧಾರಕ 4 ಬಾಲರೂಪ ಕಡಗೋಲ ಪಿಡಿದ ಗೋ ಪಾಲಕೃಷ್ಣವಿಠ್ಠಲ ಉಡುಪೀಶ 5
--------------
ಅಂಬಾಬಾಯಿ
ಯಾಕೆ ಕಳವಳವೋ-ಮಾನಸ ನಿನಗ್ಯಾಕೆ ಕಳವಳವೋ ಪ ಶ್ರೀಕಳತ್ರನು ಜಗದೇಕ ನಾಯಕ ನಿರಲ್ಯಾಕೆ ಅ.ಪ. ಹೊಟ್ಟೆಯೊಳಿರಲನ್ನ ವಿಟ್ಟು ಕಾಪಾಡಿದ ಸೃಷ್ಠಿಪಾಲಕ ಪರಮೇಷ್ಠಿಜನಕ ನಿರೆ 1 ಬಾಲನಾಗಿರೆ ಮೊಲೆಪಾಲ ನಿರ್ಮಿಸಿ ಪರಿ ಪಾಲಿಸಿದವ ಸಿರಿಲೋಲನಲ್ಲವೇ 2 ಲೋಪವಿಲ್ಲದೆ ಕಾಯ್ವ ಶ್ರೀಪತಿ ಪುಲಿಗಿರಿ ಭೂಪವರದ ವಿಠ್ಠಲಾ ಪದ್ರಕ್ಷಕ ನಿರಲ್ಯಾಕೆ ಕಳವಳವೋ 3
--------------
ಸರಗೂರು ವೆಂಕಟವರದಾರ್ಯರು
ಯಾಕೆ ಕಳವಳವೋ-ಮಾನಸ ನಿನಗ್ಯಾಕೋ ಕಳವಳವೋ ಪ ತ್ರೀಕಲತ್ರನು ಜಗದೇಕನಾಯಕನಿರಲ್ಯಾಕೆ ಅ.ಪ ಹೊಟ್ಟೆಯೊಳಿರನ್ನವಿಟ್ಟು ಕಾಪಾಡಿದ ಸೃಷ್ಟಿ ಪಾಲಕ ಪರಮಷ್ಠಿ ಜನಕನಿರಲು 1 ಬಾಲನಾಗಿರೆ ಮೊಲೆಪಾಲ ನಿರ್ಮಿಸಿ ಪರಿ ಪಾಲಿಸಿದವ ಸಿರಿಲೋಲನಲ್ಲವೆ 2 ಲೋಪವಿಲ್ಲದೆ ಕಾಯ್ವ ಶ್ರೀಪತಿ ಪುಲಿಗಿರಿ ಭೂಪÀ ವರದವಿಠಲಾಪದ್ರಕ್ಷಕನಿರಲು 3
--------------
ವೆಂಕಟವರದಾರ್ಯರು
ಯಾಕೆ ದಯಬಾರದೊ ಕಾಂತೇಶ ಪ್ರಾಣೇಶ ಸಾಕಲಾರದೆ ಪೋದೆಯಾ ಎನ್ನನು ಪ. ಏಕಚಿತ್ತದಿ ನಿನ್ನ ಚರಣ ನಂಬಿ ಬರಲು ಭಾರತೀಶ ಅ.ಪ. ತೊಳಲಿ ಬಳಲಿ ಸುಖ ಸುಳಿವೆಂಬೋದರಿಯದೆ ನಳಿನಾಕ್ಷನ ದಾಸ ನಿನ್ನ ಕೀರ್ತಿ ಇಳೆಯೆಲ್ಲ ಪೊಗಳಲು ಸಲಹುವನೆಂತೆಂದು ಬಳಿಗೆ ಬರಲು ಮನಕರಗದೆ ತಂದೆ 1 ಅಂದು ಕನಸಿನಲ್ಲಿ ಶಿರದಲ್ಲಿ ಕರವಿಟ್ಟೆ ಇಂದೆಲ್ಲಿ ಪೋಯಿತೊ ಆ ಕರುಣ ತಂದೆ ಮುದ್ದುಮೋಹನ ಗುರುಗಳ ವಚನವ ಇಂದು ಒಲಿದೆನ್ನ ಕಾಯೊ2 ವಿೂಸಲ ದಾಸ್ಯಕೆ ಆಶೆ ಮಾಡಿದೆನೆಂದು ದೋಷವೆಣಿಸುವರೆ ಎನ್ನಲಿ ನೀ ಶೇಷಶಯನನೆ ಬಲ್ಲೆನೊ ಇದರ ಮರ್ಮ ಘಾಸಿಗೊಳಿಸದೆ ನೀ ಅಭಯವನೀಯೊ 3 ರಾಮದಾಸ್ಯವ ಬಯಸಿ ನೇಮದಿಂದಲಿ ಇದ್ದು ರಾಮನಾಗಮ ಕಂಡು ಎರಗಿ ನಿಂದು ಪತಿ ಪಾದ ದಾಸ ಸಿದ್ಧಿಯ ಪಡೆದು ಭೂಮಿಯೊಳು ಖ್ಯಾತನಾದೆಯೊ ಆಂಜನೇಯ 4 ಚಿತ್ತಿದಿ ಕೃಷ್ಣನ ದಾಸತ್ವ ಸಾಧಿಸಿ ಮತ್ತೆ ಮುನಿಯಾಗಿ ಗ್ರಂಥವ ರಚಿಸಿ ಚಿತ್ತದಿ ಗೋಪಾಲಕೃಷ್ಣವಿಠ್ಠಲನ ಪಾದ ನಿತ್ಯದಿ ಭಜಿಪೆ ನೀ ಮತ್ತೆನ್ನ ಕಾಯೊ 5
--------------
ಅಂಬಾಬಾಯಿ
ಯಾಕೆ ದಯವುಬಾರದು ಗೋಪಾಲಕೃಷ್ಣಾ ಪ ಕರುಣನಾದ ದೇವ ಅ.ಪ ಬಿಡದಾನಂದಾದಿ ಇನ್ನು ಇಂದಿರೆ ರಮಣ 1 ನಿನ್ನ ಧ್ಯಾನಾವೇಗತಿ ಎನ್ನುತ ನೀ ಎಂದೆಂದಿಗಾಪ್ತನು ಛಲದಾನಿ ಇರುವದು ನಿನಗೆ ಎನ್ನ ದಿವ್ಯದಾನಿಗಳರಸ 2 ತ್ರಿಜಗವಂದಿತಧೊರಿಯೆ ಸದ್ಗುಣಶೀಲ ಸುಜನರ ಭಾಗ್ಯನಿಧಿಯೆ ಜಲದೊಳು ಯಿ ----- ಸುರನುತ-----ತ ಪರಾಕ್ರಮ 3
--------------
ಹೆನ್ನೆರಂಗದಾಸರು
ಯಾಕೆ ನೀನಿಲ್ಲಿ ಪವಡಿಸಿದೆ ಹರಿಯೆ - ಜಗ ಪ ದೇಕ ವಿಖ್ಯಾತ ಪಶ್ಚಿಮ ರಂಗಧಾಮ ಅ ತಮನೊಡನೆ ಹೋರಿ ಬೆಟ್ಟವನು ಬೆನ್ನಲಿ ಪೊತ್ತುರಮಣಿ ಭೂಮಿಯನು ತಂದಾಯಾಸವೂಅಮರವೈರಿಯ ಕರುಳ ಕಿತ್ತ ಕಡು ಧಾವತಿಯೊಕ್ಷಮೆಯನಳೆದೀ ಪಾದಕಮಲ ನೊಂದವೊ 1 ಪೊಡವಿಪಾಲಕರ ವಂಶವನು ವಪನ ಮಾಡಿಕೊಡಲಿಯನು ಬಿಸುಟು ಮಲಗಿದ ಭಾವವೊಮಡದಿಯನು ಕದ್ದೊಯ್ದವನ ಶಿರವನೆ ತರಿದುಒಡಲಿನಾಯಾಸದಲಿ ಪವಡಿಸಿದ ಪರಿಯೋ 2 ವಾಲಿ ಮೊದಲಾದ ಎದುರಾಂತ ವೀರರ ಕೊಂದುಕಾಳಿಯ ಹೆಡೆಯ ತುಳಿತುಳಿದು ಮೈಯಲಸಿತೊಲೀಲೆಗೋಸುಗ ಬಂದು ನಿರ್ವಾಣದಲಿ ನಿಂದುಆ ಲಜ್ಜೆಗಾಗಿ ತಲೆ ಬಾಗಿ ಮಲಗಿದೆಯೊ 3 ನಾಲ್ಕು ಯುಗದಾಧಾರಿ ಕಡೆಗೆ ತುರಗವನೇರಿಸಾಕಾಗಿ ದಣಿದು ನೀನಿಲ್ಲಿ ಮಲಗಿದೆಯೊಸಾಕಾರಿಯಾಗಿ ಗೌತಮ ಮುನೀಶ್ವರನಿಗೆಬೇಕೆಂದು ನೀ ಕೊಟ್ಟ ವರಕೆ ಮಲಗಿದೆಯೊ 4 ಕಾಲ ನೀನಿಲ್ಲಿ ಮಲಗಿದ್ದರೂನಿನ್ನನೆಬ್ಬಿಸುವವರನೊಬ್ಬರನು ಕಾಣೆಉನ್ನಂತ ಕಾಗಿನೆಲೆಯಾದಿಕೇಶವರಾಯಚೆನ್ನ ಶ್ರೀರಂಗಪಟ್ಟಣದ ರಂಗಧಾಮ 5
--------------
ಕನಕದಾಸ
ಯಾಕೆ ಮೂಕನಾದ್ಯೋ ಗುರುವೆ ನೀ ನ್ಯಾಕ ಮೂಕನಾದ್ಯೋ ಪ ಲೋಕ ಪಾಲಕ ಎನ್ನ ಸಾಕುವರ್ಯಾರಯ್ಯ ಶ್ರೀಕರ ರಾಘವೇಂದ್ರ ಅ.ಪ ಹಿಂದಕ್ಕೆ ನೀ ಎನ್ನ ಮುಂದೆ ಸುಳಿದಾಡಿದೆ ಮಂದಿಯೊಳಗೆನ್ನ ಮಂದನ್ನ ಮಾಡಿದ್ಯೊ 1 ಬೇಕಾಗದಿದ್ದರಿನ್ಯಾಕೆ ಕೈಯನು ಪಿಡಿದೆ ಕಾಕುಜನರೊಳೆನ್ನ ನೂಕಿ ಬಿಟ್ಟು ನೀನು 2 ಹೀಂಗೆ ಪಾಲಿಸಿದರೆ ಯೋಗಿಕುಲವರ್ಯ ರಾಘ ಭವ ಸಾಗುವದ್ಹ್ಯಾಂಗಯ್ಯ 3 ನಿನ್ನಂಥ ಕರುಣಿಲ್ಲ ಎನ್ನಂಥ ಕೃಪಣಿಲ್ಲ ಘನ್ನ ಮಹಿಮ ನೀ ಎನ್ನನು ಬಿಟ್ಟೀಗ 4 ಜನನಿಯು ನೀ ಎನ್ನ ಜನಕನಯ್ಯ ಮನ್ನಿಸೋ ನೀ ನಿತ್ಯಾನನ್ಯ ಶರಣನೆ 5 ಎಂದಿಗಗಾದರು ನಿನ್ನ ಪೊಂದಿಕೊಂಡವನೆಲೊ ಇಂದು ಕೈ ಬಿಟ್ಟರೆನ್ನ ಮುಂದೆ ಕಾಯುವರ್ಯಾರೊ 6 ನಾಥನು ನೀ ಅನಾಥನು ನಾನಯ್ಯ ಪಾತಕದ ಜಗನ್ನಾಥ ವಿಠಲ ದೂತ 7
--------------
ಜಗನ್ನಾಥದಾಸರು
ಯಾಕೆನಗೆ ವೈರಾಗ್ಯ ಪುಟ್ಟಲಿಲ್ಲವೊ ದೇವ ಏನು ಪಾಪಿಯೊ ಜಗದಲಿ ಪ. ಸಾಕು ಸಾಕೀ ವಿಷಯ ಚಿಂತನೆಯ ಬಿಡಿಸಿನ್ನು ಲೋಕನಾಯಕನೆ ಸ್ವಾಮಿ ಅ.ಪ. ಅಸನವಸನಗಳಿಗೆ ಆಲ್ಪರಿದು ಅನ್ಯರಿಗೆ ಬಿಸಜನಯನನೆ ಕಾಲಹರಣೆಯನೆಗೈದೆ ವಸುದೇವಸುತ ನಿನ್ನ ಅರಘಳಿಗೆ ನೆನೆಯದಲೆ ಹಸಿವು ತೃಷೆಯಿಂ ಬಳಲಿ ಬೆಂಡಾದೆನಯ್ಯಾ 1 ಇಂದ್ರಿಯಗಳೆಲ್ಲವನು ಬಂಧನದೊಳಗೆ ಇರಿಸಿ ಇಂದಿರೇಶನೆ ನಿನ್ನ ಧ್ಯಾನಿಸದಲೆ ಮಂದಮತಿಯಿಂದ ನಾ ಮಮಕಾರದಲಿ ಬಿದ್ದು ಮಂದ ಜನರೊಡನಾಡಿ ಮಾಯಕೊಳಗಾದೆ 2 ಭಕ್ತಿಮಾರ್ಗವ ಕಾಣೆ ಜ್ಞಾನ ಮೊದಲೆ ಅರಿಯೆ ಮುಕ್ತಿಗೊಡೆಯನೆ ಎನ್ನ ಮುದದಿಂದ ಸಲಹೊ ಯುಕ್ತಯುಕ್ತಿಗಳರಿಯೆ ಸುತ್ತುತಿಪ್ಪೆನೊ ಭವದಿ ಶಕ್ತ ನೀ ಒಳಗಿದ್ದು ಎನ್ನ ಕಾಡುವರೆ 3 ಕರ್ಮಮಾರ್ಗವ ತೊರೆದು ನಿರ್ಮಲದಲಿ ನಿನ್ನ ಒಮ್ಮೆಗಾದರೂ ಮನದಿ ನೆನೆಯಲಿಲ್ಲ ರಮೆಯರಸನೆ ಶ್ರೀ ಗುರುಗಳಂತರ್ಯಾಮಿ ಕರ್ಮತ್ರಯಗಳ ಕಡಿದು ಕರುಣದಲಿ ಕಾಯೊ4 ಪಾಪರಹಿತನೆ ಎನ್ನ ಪಾಪ ಕರ್ಮಗಳೆಲ್ಲ ಪರಿ ನುಡಿದೆ ನೀ ಪರಿಹರಿಸಿ ಕಾಯೋ ಗೋಪಾಲಕೃಷ್ಣವಿಠ್ಠಲನೆ ನೀನಲ್ಲದಲೆ ಈ ಪಾಪಿಯನು ಕಾಯ್ವರಾರೊ ಶ್ರೀ ಹರಿಯೆ5
--------------
ಅಂಬಾಬಾಯಿ
ಯಾಕೆನ್ನನಿಲ್ಲಿಗೆ ಎಳೆ ತಂದ್ಯೊ ಹರಿ ತಪ್ಪೇನನೆಸಿಗಿದೆನೊ ಪ. ಜೋಕೆಯಿಂದಲಿ ಎನ್ನ ಕಾಯಬೇಕಲ್ಲದೆ ನೂಕಿದರೆನ್ನನು ಸಾಕುವರ್ಯಾರೊ ದೊರಿ ಅ.ಪ. ಯಾರಿಗೇನೆಸಗಿದೆ ಆರ ನಾ ದೂಷಿಸಿದೆ ಆರ ನಾ ನಿಂದಿಸಿದೆನೊ ಕಾರದಿ ನೋಡಿದೆನೊ ಈ ರೀತಿ ನೊಂದೆನು 1 ವಿಧಿ ಬರಹದೊಳಿನ್ನು ವಿಧಿಪಿತ ನಿನ್ನ ಕಾಣಲಿಲ್ಲ ಮದಗರ್ವ ಬಿಡಿಸೆನ್ನ ಸದಮಲ ಹೃದಯದಿ ಪದ ಪದುಮವ ತೋರಿ ಉದ್ಧರಿಸೆನ್ನನು 2 ಸೃಷ್ಟಿಕರ್ತನೆ ಕೇಳೊ ಕಷ್ಟವಪಡಲಾರೆ ದೃಷ್ಟಿಲಿ ನೋಡಿ ಕಾಯೊ ಎಷ್ಟು ಬೇಡಲೊ ನಾನು ಬೆಟ್ಟದೊಡೆಯ ಹರಿ ವೃಷ್ಣೀಶ ಗೋಪಾಲಕೃಷ್ಣವಿಠ್ಠಲ ದೊರಿ3
--------------
ಅಂಬಾಬಾಯಿ