ಒಟ್ಟು 910 ಕಡೆಗಳಲ್ಲಿ , 93 ದಾಸರು , 733 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮುಚ್ಚ್ಯಾಕೆ ಮರೆಯಾಕ್ಹೆಚ್ಚೀತನೆ ಅಚ್ಯುತ ಸಕಲಕ್ಕೆ ಅಧಿಕಿಹ್ಯನೆ ಪ ಬಚ್ಚಿಟ್ಟುಕೊಂಡು ವೇದ ಕುಚ್ಛಿತ ದೈತ್ಯರೊಯ್ಯೆ ಇಚ್ಛೆಗಾರ ಪಿತ ತಂದು ನಿಶ್ಚಯಗೈದ ಸೃಷ್ಟಿ ಅ.ಪ ಸವೆಯದ ವರವನ್ನು ಹಿರಣ್ಯಕಶ್ಯಪನಿಗೆ ಶಿವ ತಾನುಕೊಟ್ಟ ವೈಕುಂಠನ ಉದರ ಸೀಳಿ ಜವದಿ ತ್ರಿಭುವನವ ದಯದಿ ಸಲಹಿದ ಸಿರಿ ಧವ ನರಸಿಂಗನೆನಿಸಿ 1 ಕೇಳಿದ ವರವನ್ನು ದುರುಳರಾವಣನಿಗೆ ಪಾಲಿಸಿ ವರ ಶಂಭು ಹರಿಯನ್ನು ಅರ್ಚಿಸೆ ಕೀಳುದೈತ್ಯನ ಕುಲಮೂಲ ತರಿದು ಸುರರ ಪಾಲಿಸಿದನು ದಿವ್ಯ ಮೇಲುರೂಪವ ತಾಳಿ 2 ದುರುಳಗೊಲಿದು ಶಿವ ಉರಿಹಸ್ತ ಕರುಣಿಸಿ ಮರುಗುತ ಹರಿಯೆಂದು ಕರವೆತ್ತಿಕೂಗಲು ಭರದಿ ಒದಗಿಬಂದು ಮೆರೆವೀ ಅಸುರನನ್ನು ಉರಿಹಸ್ತ ಹರನಿಗೆ ವರವಿತ್ತ ಶ್ರೀರಾಮ 3
--------------
ರಾಮದಾಸರು
ಮೇಲುಕೋಟೆ ಯದುಗಿರಿವಾಸ ನಾರಾಯಣ ಯದುಗಿರಿವಾಸ ಪ ಯದುಗಿರಿವಾಸನೆ ಬುಧಜನಪೋಷನೆ ಮದಮುಖಶಿಕ್ಷನೆ ಪದುಮದಳಾಕ್ಷನೆ ಅ.ಪ ವೇದವ ತಂದು ಅಜನಿಗಿತ್ತು ಭಾರವ ಪೊತ್ತು ಕೃತಯುಗದೊಳಗೆ ವೇದಾದ್ರಿಯೆಂದೆನಿಸಿದೆ ಚತುರ್ಮುಖನಲಿ ಪೂಜೆ ಗ್ರಹಿಸಿದ ನಾರಾಯಣ 1 ನಿಗಮವ ತಂದು ಮನುವಿಗಿತ್ತು ಕಂಬದಿಂ ಬಂದು ತ್ರೇತಾಯುಗದಲ್ಲಿ ನಾರಾಯಣಗಿರಿಯೆನಿಸಿದೆ ಸನಕಾದಿಗಳ ಪೂಜೆ ಗ್ರಹಿಸಿದ ನಾರಾಯಣ 2 ದಾನವ ಬೇಡಿ ಕ್ಷತ್ರಿಯರ ಕುಲವನೀಡಾಡಿ ದ್ವಾಪರಯುಗದಲ್ಲಿ ಯದುಗಿರಿಯೆನಿಸಿದೆ ರಾಮ ಕೃಷ್ಣರ ಪೂಜೆ ಗ್ರಹಿಸಿದ ನಾರಾಯಣ 3 ಜಾನಕಿಯ ತಂದು ಅತಿದುರುಳ ಕಂಸನ ಕೊಂದು ಕಲಿಯುಗದೊಳಗೆ ಶ್ರೀ ಯತಿಶೈಲವೆನಿಸಿದೆ ಯತಿರಾಜರಿಗೆ ಒಲಿದ ಪತಿತಪಾವನ ಸ್ವಾಮಿ 4 ಹಯವನುಹತ್ತಿ ನಾರಯಣ ದುಷ್ಟಕಲಿಯ ನೀನೊತ್ತಿ ಸಪ್ತದ್ವೀಪವನೆಲ್ಲ ಸುತ್ತಿ ಬಂದೆಯೊ ಎನ್ನಪ್ಪ ನಿನ್ನೆಣೆಕಾಣೆ ಕಂದರ್ಪನಪಿತ ಚೆಲ್ವಯದುಗಿರಿವಾಸ 5
--------------
ಯದುಗಿರಿಯಮ್ಮ
ಮೊರೆಯ ಲಾಲಿಸಬೇಕು ಮರುಗಿ ದಮ್ಮಯ್ಯಾವರದ ಸದ್ಗುರುರಾಯ ವಾಸುದೇವಾರ್ಯ ಪ *ಜನನೀಯ ಜಠರಾದಿ ಜಪಿಸಿದ ಸ್ಥಿತಿಯಾನೆನೆಯಾದೆ ಮರೆತಂಥ ನೀಚಾ ನಾನಯ್ಯಾಸನಿಹವನ ಸೇರಾದೆ ಸುಜ್ಞಾನರಡಿಯಾಕಣುಗೆಟ್ಟು ದಾರಿಯಕಾಣೆ ಗುರುರಾಯಾ 1ಕಾಮಾದಿ ರಿಪುಗಾಳ ಕೂಟದಿ ನಿಂದುಪ್ರೇಮಪಾಶದ ಕಟ್ಟು ಬಿಗಿಯಾಗಿ ಬಂದುಭೀಮಸಂಸಾರದಿ ಬಿದ್ದನಿವನೆಂದುನೀ ಮನಕೆಚ್ಚರ'ತ್ತು ಸೆಳಕೊಂಡು 2ಕೊಳಚೆಯೊಳಿಪ್ಪಾ ಸೂಕರ ವಾಸನೆಯುತೊಲಗಿ ಪೋಗಲಿಯೆಂದು ತೋರ್ಪುದೆ ಮತಿಯುಹೊಲೆದೇಹ ನಾನೆಂಬ ಹಳೆಯ ಸಂಗತಿಯುಬಲಿತಿದೆ ನೀನಿದ ಬಿಡಿಸಿ ಸನ್ಮತಿಯ 3ಸಾಲವ ತಂದು ಸ' ಸ'ಯಾಗಿ ತಿಂದೂಬಾಳುತಿರೇ ಕೊಟ್ಟವ ಬಡ್ಡಿ ಬೇಕೆಂದುಕೇಳಿ ಬಾಧಿಸಲೇತಕೆ ಕಡಗೈದೆನೆಂದುಆಲೋಚಿಪಂತೆಚ್ಚರಾುತೆನಗಿಂದು 4ಬರುವುದು ಸುಖವೆಂದು ಬಲುಯತ್ನಗೈದುಸೊರಗಿದೆನಲ್ಲದೆ ಸುಖಗಾಣೆ ನೊಂದುಕರಣಕೆಚ್ಚರವೊ ಕರುಣಿಸಲ್ಪ'ದುಕರಪಿಡಿದುಳುಹೆಂದು ಕೂಗಿದೆನಿಂದು 5ುೀ ದಯಾರಸಕೆ ನಾನೀವೆನೇನುವನುಪಾದಪದ್ಮವ ನಂಬಿ ಪಾಲಿಸೆಂಬುವನುಆದರಿಸುತ ಭಕ್ತಿಯಾನಂದವನ್ನುವೇದವೇದ್ಯನೆ ಕೊಟ್ಟು ಸಲಹು ನೀನಿನ್ನು 6ಪುಟ್ಟಿದಂದಿನಿಂದಾ ಮಡಿ ಮಡಿಯಾಗಿ ದುಡಿದುಘಟ್ಟಿಗತನವನು ಗಳಿಸಬೇಕೆಂದುಹೊಟ್ಟೆ ಹೊರಕರೊಳಾಡಿ ಹುಸಿಯನೆ ನುಡಿದುಕೆಟ್ಟು ಸುಖಗಾಣದೆ ಕೂಗಿದೆನಿಂದು 7ಸಾಕಾುತಯ್ಯಾ ಸಂಸಾರ ಕೋಟಲೆಯುನಾ ಕಾಣೆ ಸುಖವನು ನಿ'ುಷವಾದರೆಯುನೀಕರಿಸುವರಿಂದ ನಿರ್ವೇದ ಗತಿಯುಸೋಕಲು ನಿನ್ನೊಳು ಸಿಕ್ಕಿತು ಮತಿಯು 8ಧರೆಯೊಳಜ್ಞರ ನೋಡಿ ದಯದಿಂದ ಮುದದಿನರದೇಹದಾಳಿ ಚಿಕನಾಗಪುರವರದಿಒರೆದು ವೇದಾಂತರ್ಥವನು 'ಸ್ತರದಿ 1ಉದ್ಧರಿಸಿದೆ1 ವಾಸುದೇವಾರ್ಯ ಸುಖ ಪಥದಿ 9(ಈ) ಸಾಮಾಜಿಕ ಕೃತಿಗಳು
--------------
ವೆಂಕಟದಾಸರು
ಯಮ ತನ್ನ ಪುರದಿ ಸಾರಿದನು ಎಮ್ಮ ಕಮಲನಾಭನ ದಾಸರ ಮುಟ್ಟದಿರಿಯೆಂದು ಪ. ಭುಜದಲೊತ್ತಿದ ಶಂಖಚಕ್ರಾಂಕಿತವನ್ನು ನಿಜ ದ್ವಾದಶನಾಮ ಧರಿಸಿಪ್ಪರಾ ತ್ರಿಜಗವಂದಿತ ತುಲಸಿಯ ಮಾಲೆ ಹಾಕಿದ ಸುಜನರಂಗಣವ ಪೊಗದೆ ಬನ್ನಿರೆಂದು 1 ಗೋಪಿಚಂದನ ಬಿಟ್ಟು ದೇಹಕ್ಕೆ ಭಸ್ಮವ ಲೇಪಿಸಿ ಹರಿಹರರೊಂದೆಂಬ ಪಾಪಿಗಾಳೆಳತಂದು ಕಣ್ಣು ಕಳಚಿ ಅಂಧ ತಾಮಸಿನೊಳಗ್ಹಾಕಿ ಕಲ್ಲು ದಬ್ಬಿರೊ ಎಂದು 2 ತಾಳದಂಡಿಗೆ ನೃತ್ಯಗೀತ ಸಮ್ಮೇಳದಿ ಊಳಿಗವನು ಮಾಳ್ಪ ಹರಿದಾಸರ ಕೇಳುತಲೊಮ್ಮೆ ಕರಗಳ ಮುಗಿದು ನ - ಮ್ಮಾಳುಗಳೆನುತ ಪೇಳದೆ ಬನ್ನಿರೆಂದು 3 ಗುರುಮುದ್ರೆಯವನು ತಾನೆಂದು ಪ್ರಾಣಿಗಳ ಮಂ- ದಿರಕೆ ಪೋಗಿ ಪೋಗಿ ನಿರ್ಬಂಧಿಸಿ ಬರಿದೆ ಬೈದು ಬಳಲಿಸುವ ಪಾಪಿಗಳ ಕೊರೆದು ಕುಟ್ಟಿತಂದು ಮುರಿದು ಕೊಲ್ಲಿರೊ ಎಂದು 4 ಅನ್ಯದೈವ ಅನ್ಯಮಂತ್ರ ತಂತ್ರವ ಬಿಟ್ಟು ಪನ್ನಗಶಯನನೆ ಗತಿಯೆನುತ ಉನ್ನತ ಹರಿದಿನ ವ್ರತವನಾಚರಿಪ ಪ್ರ- ಸನ್ನರ ಗುಣವ ಕೆಣಕದೆ ಬನ್ನಿರೆಂದು 5 ಚರ್ಮಕ್ಕೆ ಸಿಡಿ ಊರಿ ಬೇವಿನುಡುಗೆವುಟ್ಟು ಚಿಮ್ಮುತ ಚೀರುತ ಬೊಬ್ಬೆಗಳಿಡುತ ಕರ್ಮ ಕೂಗುರಿಯಾಗಿ ಪ್ರಾಣಹಿಂಸೆಯ ಮಾಳ್ಪ ಬ್ರಹ್ಮೇತಿಕೋರನ ಬ್ಯಾಗನೆ ಎಳತನ್ನಿ 6 ಕೇಶವ ಹರಿ ಅಚಲಾನಂದವಿಠಲನ್ನ ಶೇಷಗಿರಿಯ ತಿರುಮಲೇಶನ ದಾಸರ ದಾಸರ ದಾಸನೆಂದೆನಿಸುವ ದಾಸರ ಗುಣವ ಕೆಣಕದೆ ಬನ್ನಿರಿ ಎಂದು 7
--------------
ಅಚಲಾನಂದದಾಸ
ಯಮದೂತರಿನ್ನೇನು ಮಾಡುವರು ಪೇಳೊರಮೆಯರಸ ರಘುನಾಥ ನಿನ್ನರಿಕೆಯುಳ್ಳವರಿಗೆ ಪ ಮಂಡಲದೊಳಗೊಬ್ಬ ಜಾರಸ್ತ್ರೀಯಳು ತನ್ನಗಂಡನರಿಕೆಯಿಂದ ವ್ಯಭಿಚಾರಗೈಯೆಮಂಡಲ ಪತಿಯು ಶೋಧಿಸಿ ಹಿಡಿದೆಳೆ ತಂದುಭಂಡು ಮಾಡಲು ಬೆದರುವಳೆ ಕೇಳೆಲೊ ಹರಿ1 ಕಳವಿನ ಒಡವೆಯ ಒಡೆಯಗೆ ಪಾಲೀವಕಳಬಂಟ ಕನ್ನವ ಕೊರೆಯುತಿರೆಕಳವು ಮಾಡಿದನೆಂದು ಹಿಡಿದೆಳೆತಂದರೆತಳವಾರನೇನು ಮಾಡುವನು ಕೇಳೆಲೊ ಹರಿ 2 ಮನವಚನದಲಿ ಮಾಡಿದ ಪುಣ್ಯ ಪಾಪಗಳನಿನಗರ್ಪಿಸುವೆ ಕಾಲಕಾಲದಲಿಘನ ಕೃಪಾಂಬುಧಿ ಕಾಗಿನೆಲೆಯಾದಿಕೇಶವಎನಗೆ ಆರೇನು ಮಾಡುವರು ಕೇಳೆಲೊ ಹರಿ 3
--------------
ಕನಕದಾಸ
ಯಮರಾಯ ಪೇಳ್ದ ದೂತರಿಗೆ ಲಕ್ಷ್ಮೀ ರಮಣನ ದಾಸರಿದ್ದೆಡೆಗೆ ಪೋಗದಿರೆಂದು ಪ ವೇದ ವ್ಯಾಕರಣ ಶಾಸ್ತ್ರಗಳೋದಿ ಶ್ರಾದ್ಧವೇ ಕಾದಶಿ ದಿನದಿ ಮಾಡುತಲಿಪ್ಪರಾ ಭೇದಮತವ ಮಿಥ್ಯವೆನುತಲಿಪ್ಪ ಮಾಯ ವಾದಿಗಳೆಳ ತಂದು ನರಕದೊಳಿಡಿರೆಂದು 1 ತಿರಿಪುಂಡ್ರವನಿಟ್ಟು ಭಸ್ಮದೇಹಕೆ ಪಟ್ಟೆ ಕೊರಳಿಗೆ ರುದ್ರಾಕ್ಷಿ ಸರವ ಕಟ್ಟಿ ಕುರಿಗಳ ಕೊಯ್ದು ಯಜ್ಞವ ಮಾಳ್ಪೆವೆನುತಲಿ ಹರಿಹರರೊಂದೆಂಬರೆಳತನ್ನಿರೆಂದು 2 ಶಿವನೆ ತಾನೆಂದು ಜಾನ್ಹವಿ ತೀರದಲಿ ಪಾ ರ್ಥಿವ ಲಿಂಗನ ಪೂಜಿಪ ಅವಿವೇಕರಾ ಶಿವರಾತ್ರಿಗಳಲಿ ಆಹಾರ ಬಿಡುವವರ ಉ ರವ ನರಕದೊಳ್ಪವಣಿ ಬಿಡಿಸಿರೆಂದು 3 ಮಳೆ ಚಳಿ ಬಿಸಿಲು ಕತ್ತಲೆಯೊಳು ಬರಲು ನ ಮ್ಮಿಳೆಯದೊಳು ಸ್ಥಳವಿಲ್ಲೆಂಬರ ಕಳವಿಲವರ ದ್ರವ್ಯಗಳನಪಹರಿಸುವ ಬಲು ನೀಚರ ಪಿಡಿದೆಳೆದು ತನ್ನಿರೋ ಎಂದು 4 ಶ್ರೀ ತುಳಸಿಯ ಬಿಟ್ಟು ಹಲವು ಪುಷ್ಪದಿ ಜಗ ನ್ನಾಥವಿಠಲನ ಪೂಜಿಸುತಿಪ್ಪರಾ ಮಾತನಾಡಿ ವೇದಮಂತ್ರ ಬಿಡುವರ ಯಾತನ ದೇಹವ ಕೊಟ್ಟು ಬಾಧಿಸಿರೆಂದು 5
--------------
ಜಗನ್ನಾಥದಾಸರು
ಯಾಕೆ ಇಂಥ ದುಡುಕು ಕೃಷ್ಣಯ್ಯ ನಿನಗೇಕೆ ಇಂಥ ದುಡುಕು ಪಾಕಶಾಸನಮಧ್ಯ ಪೋಕತನಗಳನ್ನುಸಾಕುಸಾಕಯ್ಯ ಕೃಷ್ಣ ಪ ಗೊಲ್ಲ ಬಾಲಕರು ನೀವೆಲ್ಲರು ಕೂಡಿಕೊಂಡುಗುಲ್ಲ ಮಾಡದೆ ಮೊಸರೆಲ್ಲ ಸವಿದೆಯಂತೆ ಕೃಷ್ಣ 1 ಪೂತನಿ ಮೊಲೆಯನ್ನು ಭೀತಿಯಿಲ್ಲದೆ ಉಂಡುಘಾತವ ಮಾಡಿದೆ ಮಾತನಾಡಯ್ಯ ಕೃಷ್ಣ2 ದುಷ್ಟ ಕಂಸನ ನೀನು ಕಷ್ಟವಿಲ್ಲದೆ ಮಡುಹಿಮುಷ್ಟಿಕನ ಕೊಂದೆ ದೃಷ್ಟಿ ತಾಕೀತಂದು 3 ಸಾರಥಿ 4 ಅಂಗಿಟೊಪ್ಪಿಗೆ ಉಂಗುರ ಉಡಿದಾರಶೃಂಗರಿಸಿಕೊಂಡು ರಂಗವಿಠಲ ಬಾರೋ 5
--------------
ಶ್ರೀಪಾದರಾಜರು
ಯಾಕೆ ಮಲಗಿದೆಯೊ ಶ್ರೀಕಾಂತ ದ್ವಾರಕಾವಾಸ ಸೂರ್ಯ ಉದಯಾಯಿತು ಗೋಕುಲದೊಳಗಿದ್ದ ಗೋಮಕ್ಕಳೆಲ್ಲ ಧ್ವಜ- ರೇಖಾ ಚರಣಕಮಲಕೆರಗಿ ಕರೆಯುತಲಾಗ ಪ ಅಂಬುಧಿ ಒಳಗಾಡಿ ತಂದು ವೇದವನು ಕೊಡು ಮಂದರೋದ್ಧಾರ ಸುರರಿಗೆ ಸುಧೆಯ ನೀಡು ತಂದು ದಾಡಿಂದ ಧರೆಯನು ಹರವಿ ಧರಾಪತಿಯೆ ಕೊಂದು ರಕ್ಕಸನ ನಂದನಗೆ ದಯಮಾಡದಲೆ 1 ಬೇಡಿ ದಾನವ ಭುವನ ಮಾಡಿದೆಲೆ ಮೂರ್ಹೆಜ್ಜೆ ಆಡಿದ್ವಚÀನವ ನಡೆಸುತಾರಣ್ಯವಾಸದಲಿ ಆದಿಲಕ್ಷ್ಮಿಯನೆ ಕದ್ದಸುರನ್ನ ಸಂಹರನೆ 2 ಗೊಲ್ಲ ಸತಿಯರ ಕೂಡ ಸಲ್ಲಾಪ ಸಾಲದಲೆ ಎಲ್ಲ ತ್ರಿಪುರರ ಸತಿಯರಲ್ಲಿ ಪೋಗುವರೆ ಎಲ್ಲಿ ಓಡ್ಯಾಡಿದ್ಹೇಳಿಲ್ಲಿ ವಾರಿಧಿಶಯನ 3
--------------
ಹರಪನಹಳ್ಳಿಭೀಮವ್ವ
ಯಾಕೆÀ ಬಾರ ಸಖಿ ತ್ರಿವಿಕ್ರಮನ್ಯಾಕೆ ಬಾರ ಸಖಿ ಅ-ನೇಕ ಮಹಿಮ ವಿವೇಕನಿಲಯ ಮೂ-ಲೋಕ ಮೋಹನಮೂರ್ತಿ ಮುಕ್ತಶೋಕ ಪ. ಕರ್ಮ ವಿಮೋಚನಮುಂಜÉರಗ ಪಿಡಿದೆಳೆಯೆಸಂಜೆ ಬರಲೆಂದು ಸವಿನುಡಿಯ ನುಡಿವಕುಂಜರನ ಭಯಭೇದಿ ಬಹಳ ವಿನೋದಿ ಸಕಲರಿಗಾದಿ ಸುಗುಣನಿಧಿ 1 ನಿನ್ನಿನಿರುಳು ನಿನ್ನ ನೇಮಿಸದ ಮುನ್ನಮನ್ನಿಸಿ ಮನೆಗೆ ಬಂದಾತಅನ್ಯವರಿಯದ ಅಬಲೆ ನಾನೆಂದೀಗಕಣ್ಣಾರ ತಾ ಕಂಡನಲ್ಲ ಪುಸಿಯಿನ್ನು ಸಲ್ಲ ಸಕಲವು ಬಲ್ಲ ಎನ್ನ ನಲ್ಲ2 ಇಂದಿರೆಯನು ಬಿಟ್ಟು ಇರವ ಎನ್ನೊಳಗಿಟ್ಟುಎಂದೆಂದು ಎತ್ತಿಕೊಂಡಾತಕುಂದದೆ ತಾನಿಂದು ಕೂಡಿದರೆ ಬಂದುತಂದು ಹಯವದನನೊಲಿಸು ಸ್ನೇಹವ ಬಲಿಸು ಮದನನೊಲಿಸು ಎನಗೊಲಿಸು 3
--------------
ವಾದಿರಾಜ
ಯಾಚಕ ಜನ್ಮಾ ಯಾಕೆ ಬರೆದನೊ ಬ್ರಹ್ಮಾ ನಾಚಿಕೆಯಾಗಿ ನಷ್ಟಾಗುವಂತೆ ಸ್ವಧರ್ಮಾ ಪ ಒಡಲಾಶೆಗಾಗಿ ಹೊಲೆಯನ ಹೊಗಳಬೇಕು ಕಡುಲೋಭಿಯಾದ ಅರಸನೋಲಗವೆ ಸಾಕು ಬಡತನವೆಂದು ಪರರ ಸೇರುವದೆ ಸಾಕು ಒಡಲು ಪರಾಕು 1 ತ್ಯಾಗದಿ ಕರ್ಣಾ ಭೋಗದಿ ದೇವೇಂಧ್ರನೆಂದು ಕೊಂಡಾಡಲು ಪೋಗಿ ಬಾ ನಾಳೆ ಎಂದು ಎನುತ ಪೇಳಲಾಗಿ ಬೈದಾಡುತ ಬಂದು ಬಳಲುತಿರಲಾಗ ಚಿತ್ತಕ್ಕೆ ತಂದು 2 ಪರ್ವತವನ್ನು ಕಂಡು ಕೈತಿಕ್ಕಿ ಕೋರಿದೆ ಬರಿದೆ ಇಂಥಾ ಗರ್ವದಿಂದುಕ್ಕಿ ಏರಿದೆ ಗುರುವಿಮಲಾನಂದ ಸರ್ವೋತ್ತಮನ ನೆನೆಯ ಬಾರದೇ 3
--------------
ಭಟಕಳ ಅಪ್ಪಯ್ಯ
ಯಾಚಕರು ಪರರ ಸಂಕಟ ಬಲ್ಲರೆಣ ಪ ಭೂ ಚಕ್ರದಲಿ ಗಾಳಿಯಂತೆ ತಿರುಗಲು ಬಿಡರುಅ.ಪ ಕಾಪೀನವನು ಧರಿಸಿ ಮುಖವ ಡೊಂಕನೆ ಮಾಡಿ ಕೋಪದಿಂದಲಿ ಕರವನೆತ್ತಲ್ಯಾಕೆ ಪಾಪಿ ಕೂಪವ ಮೀರಿ ಸಮುದ್ರವನು ನೆರೆ ದಾಟಿ ರೂಪಾಂತರದಿ ಮನೆ ಮನೆಯ ಪೊಕ್ಕರು ಬಿಡರು 1 ವಿಷವ ಸವಿದುಂಡು ಮಹ ಮಡುವ ಪ್ರವೇಶಿಸಿ ವಸುಧೆಯೊಳು ಬೇಡಿ ಕಿರಿತಂದುಂಡರು ವಸಿಸಿ ಮಾನಸದಿ ಗೃಹಕರ್ಮ ಮಾಡಲಿ ಬಿಡರು 2 ಜುಟ್ಟು ಜನಿವಾರವನು ಕಿತ್ತುಕೊಂಡು ಯತಿಯಾಗಿ ಕಟ್ಟ ಕಡೆಯಲಿ ಗೃಹಸ್ಥ ಧರ್ಮ ತೊರೆದು ಹುಟ್ಟುಗತಿ ಯಿಲ್ಲೆನಗೆ ಕೃಷ್ಣ ಕೃಷ್ಣ ವಿಜಯ ವಿಠ್ಠಲನ ಪಾದಕೆ ಮೊರೆಯಿಟ್ಟರು ಬಿಡರು 3
--------------
ವಿಜಯದಾಸ
ಯಾದವಗಿರಿವಾಸನಹುದೋ ಶ್ರೀ ನಾರಸಿಂಹಆದಿನಾರಾಯಣ ಅಚ್ಯುತನಹುದೊ ಪ ಪಾವಕ ಮೂರ್ತಿಕಳ್ಳ ದೈತ್ಯರ ಸಂಹಾರವ ಮಾಡಿದೆನಳಿನೋದ್ಭವನಯ್ಯ ಅಮರ ಚೆನ್ನಿಗರಾಯ 1 ಕಾಯ ಬೇಕೆಂದುನಟಿಸಿ ಕಂಬದಿ ಮೂಡಿ ನಗುವ ಭಕ್ತನ ನೋಡಿಸಟೆಯಲ್ಲ ಅಜಾಂಡಗಳೊಡೆವಂತೆ ಘರ್ಜಿಸೆಕುಟಿಲ ದಾನವನೋಡುವುದ ಕಂಡು ಎಳೆತಂದುಚಿಟಿಚಿಟಿ ಚಿಟಿರೆನ್ನಲು ಉಗುರಲಿ ಸೀಳಿಪುಟನೆಗೆದ ಪಾದದಲಿ ಬಲಿಯ ತಲೆಯನು ಮೆಟ್ಟಿ ನಟನೆಯಾಡುವ ವಿದ್ಯೆಯನೆಲ್ಲಿ ಕಲಿತೆಯೊ ಕಪಟನಾಟಕ ಸೂತ್ರಧಾರಿ ನೀನಹುದು ಕ್ಷತ್ರಿಯರಚಟುಲ ಛಲದಿ ಒಗೆದು ಕರುಳ ಬಗೆದು ತುಳಿದ-ದಟರನು ಸಂಹರಿಸಿದ ಚೆಲುವರಾಯ 2 ಅಂದು ಕೌಸಲ್ಯಾ ಗರ್ಭ ಚಂದ್ರಮನಾಗಿ ಬೆಳಗಿಕೊಂದೆ ರಾವಣ ಕುಂಭಕರ್ಣಾದಿಗಳನೆಲ್ಲಇಂದಿರೇಶನೆ ನಿನ್ನ ನಂಬಿದ ವಿಭೀಷಣನಿಗೆಎಂದಿಗೂ ಪಾರವಿಲ್ಲದ ಪದವಿಯನಿತ್ತೆಕಂದನಾಗಿ ಜನಿಸಿ ವಸುದೇವ ದೇವಕಿಯರಿಗೆನಂದಗೋಕುಲದೊಳು ನಿಂದ ಕಂಸನ ಕೊಂದೆಚಂದಿರನ ನೆರೆಪೋಲ್ವ ಉನ್ನತೋನ್ನತನಾಗಿಕೊಂದು ತ್ರಿಪುರಾಸುರರ ಅವರ ಸತಿಯರ ಕೆಡೆಸಿಒಂದೆ ನೆಗೆತಕೆ ನೆಗೆವ ಅಶ್ವವನೇರಿದೆ ವ-ಸುಂಧರೆಯ ಮೇಲೆ ಲೀಲೆಯಾಡುತ ಕೃತಯುಗದಿನಿಂದು ಯಾದವಗಿರಿಯ ಮೇಲೆ ತ್ರೇತಾಯುಗದಿಬಂದು ರಾಮನೆನಿಸಿಕೊಂಡೆ ದ್ವಾಪರ ಯುಗದಿಬಂದು ಕೃಷ್ಣನೆನಸಿಕೊಂಡೆ ಕಲಿಯುಗದೊಳುನಿಂದು ಚೆಲುವ ಚೆನ್ನಿಗರಾಯನಾದೆ ವರನಂದಿಯ ಚಂದದಿಂ ರಕ್ಷಿಸಿದೆ ಎನ್ನ ಕಾಯೊಇಂದಿರಾಪ್ರಿಯ ಬಾಡದಾದಿಕೇಶವ ರಾಯ3
--------------
ಕನಕದಾಸ
ಯಾರವನು ಹೊರಗೆನಿಂತ ಬಾರಾನ್ಯಾಕವನು ಪ ನೀರಮುಳುಗಿ ಬಂದು ಘೋರಪರ್ವತ ತಂದು ಧಾರುಣಿಯನು ಕದ್ದ ದನುಜನ ಕೊಂದು ನರಹರಿ ರೂಪದಿ ತರಳಗೊಲಿದುಪುಟ್ಟ ಚರಣದಿಂ ಧರಣಿಯನಳೆದ ಮಹಾತ್ಮನೋ 1 ಕೊಡಲಿಯ ಪಿಡಿದು ತಾ ಬಿಡದೆ ಕ್ಷತ್ರಿಯರನ್ನು ಮಡುಹಿ ಬಂದವನಿವನೇನೋ ಮಡದಿಗಾಗಿ ದೊಡ್ಡಅಡವಿಯೊಳು ಮನೆಕಟ್ಟಿ ಬಿಡದೆ ಗೋಕುಲದಲ್ಲಿ ನೆಲೆಸಿರುವಾತನೋ 2 ಬೆತ್ತಲೆ ನಿಂತ್ಹತ್ತಿ ಮತ್ತೆಕುದುರೆಯ ಚಿತ್ತಬಂದಂತೆ ತಾ ತಿರುಗುವನೋ ಉತ್ತಮನಾದ ಶ್ರೀ ಪ್ರಾಣನಾಥವಿಠಲನು ಎತ್ತನೋಡಿದರು ಸುತ್ತುತ್ತಲಿರುವನು 3
--------------
ಬಾಗೇಪಲ್ಲಿ ಶೇಷದಾಸರು
ಯಾವದು ಸುಖವೇ ಮತ್ಯಾನಂದವೇ ಪ ಈ ಉಡುಪಿಯ ಯಾತ್ರೆ ಮಾಡಿದ ಮನುಜಗೆ ಅ.ಪ. ಮನದಲಪೇಕ್ಷಿಸೆ ಅವನಿಗೆ ಹದಿನಾಲ್ಕು ಕನಕನ ಚಿತ್ತನಾಗಿ ಗೋಕುಲದಿಂದ ಸ ಜ್ಜನ ಮಾರ್ಗದಲಿ ಗುಣವಂತನೆನಿಸಿಕೊಂಬ 1 ಒಂದು ಹೆಜ್ಜೆಯನಿಟ್ಟು ಸಾಗಿ ಬರುತಲಿರೆ ಅಂದೆ ಸುರರೊಳು ಗಣನೆ ಎನ್ನೆ ಒಂದಕ್ಕೆ ನೂರಾರು ಯಾಗ ಮಾಡಿದ ಫಲ ತಂದು ಕೊಡುವ ಅಜನಾದಿಕಲ್ಪ ಪರಿಯಂತ2 ಅರ್ಧ ಮಾರ್ಗದಿ ಬರಲು ಬಂದು ನಿಲ್ಲಲು ಅವರ ಸಾಗರದಿ ಕೋಟಿ ಸ್ನಾನ ಮಾಡಲು ಊಧ್ವರೇತಸ್ಥನಾಗಿರ್ದ ಫಲವಕ್ಕೆ ಪರಿಯಂತ 3 ಸನ್ನುತ ಸಾಧನವನು ಮಾಡಲು ಸನ್ನುತರ ತೆಗೆದು ಜ್ಞಾನ ಭಕುತಿ ಸಂ ಪನ್ನವಿರಕುತಿಗೆ ಯತಿಗಾದಿ ಮುಖನಾದ4 ಕರವ ಜೋಡಿಸಿ ನಿಂದು ದೃಷ್ಟಿಯಿಂದಲಿ ನೋಡಿದವನೆ ಮುಕ್ತಾ ಮುಟ್ಟಿ ಭಜಿಸುವರ ಸತ್ಪುಣ್ಯ ವಿಜಯವಿಠ್ಠಲನಾತನೆ ಬಲ್ಲ ಅರುಹಲಳವಲ್ಲ 5
--------------
ವಿಜಯದಾಸ
ಯಾವಲ್ಲಿ ಅಡಗಿರುವಿ ಯಾವಲ್ಲಿ ಹುಡುಕಲಿಭಾವದ ಮೂಲೆಯ ರಾವನು ಬಿಟ್ಟು ಅ.ಪ. ಕಣ್ಣುಮುಚ್ಚಾಲೆಯಾಟ ಬೇಡಯ್ಯ ಈಬಣ್ಣದ ನುಡಿಯ ಬೇಟಕಣ್ಣು ಮುಚ್ಚಲು ಕೊಟ್ಟಿ ಟಣ್ಣನೆ ಜಿಗಿದೋಟಅಣ್ಣಾ ಹುಡುಕಿ ಹುಡುಕಿ ಹಣ್ಣಾಗಿ ಹೋದೆನೋ 1 ಎಲ್ಲೆಲ್ಲೂ ತುಂಬಿರುವೆ ಹುಡುಕಲು ನೀನೆಲ್ಲೆಲ್ಲ್ಯೂ ಸಿಗದಿರುವೆಕ್ಷುಲ್ಲಕನೆನ್ನನ್ನು ಚಲ್ಲದೆ ನನ್ನೆದುರುಚೆಲ್ವರೂಪದೆ ಬಂದು ನಿಲ್ವುದನ್ನು ಬಿಟ್ಟು 2 ಕಡುಕಷ್ಟ ಹುಡುಕುವದು ಹಿಡಿದು ಹಿಡಿದು ತಂದುಒಡಲಲ್ಲಿಡಲು ಮತ್ತೇಒಡನೆ ನುಸುಳಿಕೊಂಡುಬಿಡವಲೋಡೋಡಿ 3 ಇದೀಗ ನಡೆದು ತಂದು ನೆನೆಯಲು ನಿನ್ನಸದಾವಕಾಲಕೆಂದು ಹೃದಯದ ಗವಿಯೊಳುಮುದದಿ ಕೂಡಿಸಿ ಮೇಲೆಬದಿಗೆ ಕಾವಲವಿಟ್ಟು ಮನವ ಟೊಣೆದು ನೀ 4 ಬದರಿ ಕಾಶಿ ಕಂಚಿಯೋ ನೀನಿರುವುದುಮಥುರೆ ಪಂಢರಪುರವೊಪದುಮಾವತಿ ಗಿರಿಯೋ ಉಡುಪಿ ದ್ವಾರಕೆಯೊಗದುಗೋ ನೀ ಹೇಳಯ್ಯ ವೀರನಾರಾಯಣ 5
--------------
ವೀರನಾರಾಯಣ