ಒಟ್ಟು 7653 ಕಡೆಗಳಲ್ಲಿ , 131 ದಾಸರು , 4746 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶರಣು ಮಂಜುನಾಥಾ | ಪಾಲಿಸು || ಶರಣ ಜನರ ಪ್ರೀತಾ ||ಮರೆಯದೆ ನಿನ್ನಯ ಚರಣವ ನಂಬಿದ |ತರಳನ ಮೇಲ್ ದಯವಿರಿಸೈ ಜಯ ಜಯ 1ಧರ್ಮಾಧರ್ಮವನೂ ಶೋಧಿಪ | ಧರ್ಮದೇವ ನೀನು ||ಧರ್ಮ ಸುಕರ್ಮದ ಮರ್ಮವನರಿಯುತಾ ||ಧರ್ಮಸ್ಥಳದಲಿ ನೆಲಸಿದೆ ಜಯ ಜಯ 2ಕಪ್ಪಕಾಣಿಕೆಗಳನೂ | ದಿನ ದಿನ ತಪ್ಪದೆ ತರಿಸುವನೂ ||ಸರ್ಪಧರನೆ ನಿನ್ನಪ್ಪಣೆಯಿಂದ | ಣ್ಣಪ್ಪನು ನರರನು -ಒಪ್ಪಿಸಿ ಜಯ ಜಯ 3ದುಷ್ಟ ಜನರು ಬರಿದೇ | ಕೊಡುತಿಹ | ಕಷ್ಟವ ನಿನಗೊರೆದೇ |ಸೃಷ್ಟಿಪಾಲ ಯನ್ನ ರಕ್ಷಿಸಬೇಹುದು |ಕೆಟ್ಟೆನಯ್ಯಾ ನಿಟಿಲಾಕ್ಷನೆ ಜಯ ಜಯ 4ಚಂದ್ರಧರನೆ ಕಾಯೋ | ಕರುಣಾ-||ನಂದ ವರವನೀಯೋಮಂದರಧರಗೋ|ವಿಂದದಾಸನನಿಂದು |ಚಂದದಿ ಪಾಲಿಸು |ವಂದಿಪೆ ಜಯ ಜಯ 5
--------------
ಗೋವಿಂದದಾಸ
ಶರಣು ಮುನಿಪಮಣಿಯೆ ಸುಮತೀಂದ್ರಕರುಣಾಮೃತದ ಖಣಿಯೆಶರಣೆಂದವರಿಗೆ ವರಚಿಂತಾಮಣಿಯೆಧರೆಯ ಮೇಲಿನೊಬ್ಬ ದೊರೆ ನಿನಗೆಣೆಯೆ ಪ.ಸಂತತ ಸೇವಕ ಸಂತರಿಗೊಲಿದೀಗಸಂತತಿ ಸಂಪದವಿತ್ತೆ ಬೇಗಶಾಂತ ಶುಭಗುಣ ವಸಂತನೆಂಬೊ ಕೀರ್ತಿ ವಿಶ್ರಾಂತಿಯಮಿತ ದಿಗಂತಕೆ ವಾರ್ತಿ 1ತಾಳ ತಮ್ಮಟೆಕಂಬುಕಾಳೆ ಬಿರುದುಬುಧಮೇಳದಿಂ ಶಿಷ್ಯ ಜನಾಲಯಕೆ ಸಾಲದೀವಿಗೆಯೊಳು ಮಾಲಿಕೆ ಗ್ರಹಿಸಿ ಆಂದೋಳಿಕಿಳಿದು ಬಂದು ಪಾಲಿಪೆಅವರ2ಶ್ರೀಗುರು ಪ್ರಸನ್ನವೆಂಕಟಾಚಲವಾಸ ರಾಮನಪಾದನಿಶಿದಿನಾರ್ಚಿಸುವೆ ಸಂತೋಷಸಾಂದ್ರಋಷಿಯೋಗೀಂದ್ರರಕರಬಿಸಜಜ ಯೋಗೀಂದ್ರಸುಶರಧಿ ಸಂಭವಶಶಿಸುಮತೀಂದ್ರ3
--------------
ಪ್ರಸನ್ನವೆಂಕಟದಾಸರು
ಶರಣು ಶರಣು ಜಯ ಮುನಿರಾಯ ಸ್ವಾಮಿಶರಣಾಗತ ತಾತ್ವಿಕ ಪ್ರಿಯ ಪ.ಶ್ರೀ ಮಧ್ವಗುರು ದಯವನು ಪಡೆದು ಅದೇ ಮಹಿಮನ ಮನೆಯೊಳು ಬಂದುನೇಮದಿ ತುರ್ಯಾಶ್ರಮ ಬಲಿದೆ ಈಭೂಮಿಗಿಂದ್ರನಪರಿ1ಅಶ್ರುತ ಪ್ರಭೆ ಬುಧರೊಳು ಬೀರಿ ನಾನಾ ಶ್ರುತಿಯರ್ಥ ಪ್ರಕಟದೋರಿಶಾಶ್ವತಕ್ಷಾದಿ ತ್ರಿಪ್ರಮಾಣವ ನಿಜಾಶ್ರಿತರಿಗೆ ಪೇಳಿದೆ ಅನುವ 2ವೇದಾಂಬುಧಿಯೊಳು ಸುಧೆದೆಗೆದೆ ರಾಮಪಾದಕರ್ಪಿಸಿ ಬುಧಜನಕೆರೆದೆಕೈದುಗಳಂತೆ ಪ್ರಮೇಯಾರ್ಥವಿಡಿದೆ ಜಯನಾದದಿಂ ದುರ್ವಾದಿಗಳನ್ಯೆಚ್ಚಿದೆ 3ಮರುತಮತದ ವಿಬುಧರ ನೆರಹಿಸಿಮೂರೇಳರಿ ಬಲವ ಜರಿದಟ್ಟಿದೆಅವರಬಿರುದು ಸೀಳಿದೆ ಈ ಧರೆಯ ವೈಷ್ಣವರಭಯವ ಕಳೆದೆ4ಈ ಕ್ಷೋಣಿಯೊಳು ಪ್ರತಿವರ್ಜಿತನೆ ಶ್ರೀಅಕ್ಷಯಪ್ರಜÕ ಕೃಪಾನ್ವಿತನೆಅಕ್ಷೋಭ್ಯತೀರ್ಥರ ತನಯನೆವಿಶ್ವಕುಕ್ಷಿಪ್ರಸನ್ನವೆಂಕಟಪ್ರಿಯನೆ5
--------------
ಪ್ರಸನ್ನವೆಂಕಟದಾಸರು
ಶರಣು ಶರಣು ರಾಮ ರಘುಕುಲಶರಣು ಪೂರಣಸೋಮಕರುಣಾಪಾಂಗದಿ ಶರಣಾಗತರ ಭಯಹರಣಾಹಲ್ಯೋದ್ಧರಣ ಕಾರಣ ಸುಚರಣ ಪ.ದಂಡಕದನುಜನ ದಂಡಿಸಿದಗಣಿತಚಂಡ ರುಚಿರಕೋದಂಡಕರಕುಂಡಲಮಂಡಿತಗಂಡಸುತಂಡ ಬೊಮ್ಮಾಂಡ ಕೋಟಿರಕ್ಷಾಪುಂಡರೀಕಾಕ್ಷ1ದೂಷಣ ಖರಾಂತಕ ದಶಶಿರದಮನ ತ್ರಿದಶರ ಪೊರೆದ ಜಗದೀಶವರದಬಿಸಜಭವಸಮೀರಪಶುಗಮನಾದಿ ಸುರೇಶನುತಪದನೆ ಅಶೇಷದುರಿತಾರಿ 2ದುಷ್ಟಜನಮರ್ದನ ಜಠರಜನ ನರಸಿಂಹಚಟುಲದ್ವಿಜಾರ್ಚಿತಪಟು ದೇವತೃಟಿಯೊಳು ನೆನೆವರ ಕುಟಿಲವಾರಕವಿಶ್ವನಾಟಕ ಪ್ರಸನ್ನವೆಂಕಟ ರಘುರಾಮ 3
--------------
ಪ್ರಸನ್ನವೆಂಕಟದಾಸರು
ಶರಣು ಶರಣು ಶರಣ್ಯವಂದಿತ ಶಂಖಚಕ್ರಗದಾಧರ |ಶರಣು ಸರ್ವೇಶ್ವರ ಅಹೋಬಲ ಶರಣ ಸಲಹೋ ನರಹರಿ ಪ.ಶೀಲದಲಿ ಶಿಶು ನಿನ್ನ ನೆನೆಯಲುಕಾಲಲೋತ್ತುತ ಖಳರನು |ಲೀಲೆಯಿಂದಲಿ ಚಿಟಿಲು ಭುಗಿಭುಗಿ -ಲೆನುತ ಉಕ್ಕಿನ ಕಂಬದಿ ||ಖೂಳದೈತ್ಯನ ತೋಳಿನಿಂದಲಿ ಸೀಳಿಹೊಟ್ಟೆಯ ಕರುಳನು ||ಮಾಲೆಯನು ಕೊರಳೊಳಗೆ ಧರಿಸಿದಜ್ವಾಲನರಸಿಂಹಮೂರ್ತಿಗೆ 1ಖಳಖಳಾ ಖಳನೆಂದು ಕೂಗಲು ಕೋಟಿ ಸಿಡಿಲಿನ ರಭಸದಿ ||ಜಲಧಿ ಗುಳಗುಳನೆದ್ದು ಉಕ್ಕಲು ಜ್ವಲಿತ ಕುಲಗಿರಿ ಉರುಳಲು ||ನೆಲನು ಬಳಬಳನೆಂದು ಬಿರಿಯಲು ಕೆಳಗೆ ದಿಗ್ಗಜ ನಡುಗಲು ||ಥಳ ಥಳಾ ಥಳ ಹೊಳೆವ ಮಿಂಚಿನೊಲ್ಹೊಳೆವ ನರಸಿಂಹ ಮೂರ್ತಿಗೆ 2ಕೋರೆ ಕೆಂಜೆಡೆ ಕಣ್ಣು ಕಿವಿ ತೆರೆ -ಬಾಯಿ ಮೂಗಿನ ಶ್ವಾಸದಿ||ಮೇರುಗಿರಿ ಮಿಗಿಮಿಗಿಲು ಮಿಕ್ಕುವ ತೋರ ಕಿಡಿಗಳ ಸೂಸುತ ||ಸಾರಿಸಾರಿಗೆ ಹೃದಯರಕುತವ ಸೂರೆ ಸುರಿಸುರಿದೆರಗುತಘೋರರೂಪಗಳಿಂದ ಮೆರೆಯುವ ಧೀರ ನರಹರಿಮೂರ್ತಿಗೆ3ಹರನು ವಾರಿಜಭವನು ಕರಗಳ ಮುಗಿದು ಜಯಜಯವೆನುತಿರೆ ||ತರಳ ಪ್ರಹ್ಲಾದನಿಗೆ ತಮ್ಮಯ ಶರಿರಬಾಧೆಯ ಪೇಳಲು ||ಕರುಣಿ ಎನ್ನನು ಕರುಣಿಸೆನ್ನಲು ತ್ವರದಲಭಯವನೀಡುತ ||ಸಿರಿಬರಲು ತೊಡೆಯಲ್ಲಿ ಧರಿಸಿದ ಶಾಂತ ನರಹರಿಮೂರ್ತಿಗೆ4ವರವ ಬೇಡಿ ದನಿರುವ ತಂದೆಯ ಪರಿಯನೆಲ್ಲವ ಬಣ್ಣಿಸಿ ||ನಿರುತದಲಿ ನಿನ್ನೆರಡು ತೊಡೆಯಲಿ ಶರೀರವಿರಲೆಂದೆನುತಲಿ ||ಸುರರು ಪುಷ್ಪದ ವೃಷ್ಟಿಗರೆಯಲು ಸರಸಿಜಾಕ್ಷನು ಶಾಂತದಿ ||ಸಿರಿಯ ಸುಖವನು ಮರೆದಹೋಬಲವರದ ಪುರಂದರವಿಠಲಗೆ 5
--------------
ಪುರಂದರದಾಸರು
ಶರಣು ಶರಣು ಶೇಷಗಿರಿವರದ ದೇವಶರಣು ಶರಣು ಲಕ್ಷ್ಮೀವರ ಮುದದಶರಣಾಗತ ಭಯಸಂಹಾರ ಕಾರಣಕರುಣ ಕರಣ್ಯನಂತಕಿರಣಘವಾರಣ ಸುವಾರಣಉದ್ಧರಣಜಹರನುತಚರಣಪ.ಕೃತಸೇವ್ಯಾಮಲ ಅವ್ಯಾಕೃತಗಾತ್ರ ದೇವಪೃಥುರಾಜಪಾಲಾಂಬುಜಾಯತ ನೇತ್ರಯತಿ ಹೃದಯ ಗುಹ್ಯಾಂಗೀಕೃತೋತ್ತುಂಗಹೃತಕ್ಷಿತಿ ಜಾತ ಸತಿಪ್ರತತಿಗೃಹೀತಾವಿತಥÀಶ್ರುತಿಸ್ಮøತಿಗೀತ ಪ್ರೀತ ರತಿಪತಿಪಿತನೆ1ಸೋಮಕುಲಾಬ್ಧಿ ರಾಕಾಸೋಮಕಾಶ ದೇವಸಾಮಜಪಕ್ಷ ಸುರಸ್ತೋಮ ಪೋಷಕಕಾಮಿತಾರ್ಥಪ್ರದಾತ ಸ್ವಾಮಿತೀರ್ಥಧಾಮತ್ರಿಧಾಮ ಸುಮನಸಾಮೋದಪ್ರೇಮಧಿ ಶ್ರೀಮತ್ನಾಮ ನಿಸ್ಸೀಮ 2ಹನುಮನಿಮೇಷ ಋಷಿಗಾನಪ್ರಿಯ ದೇವಸನಕಸನಂದನ ಸನಾತನಧ್ಯೇಯಮಣಿಮಯಕನಕಭೂಷಣಾಂಕ ಭೂಮುನಿಜನ ಧ್ಯಾನ ಲೀನ ಅಣುರೇಣು ಪೂರ್ಣಪ್ರಸನ್ನವೆಂಕಟನಗಪಾ ಪುನಃಪುನಾನುದಿನ 3
--------------
ಪ್ರಸನ್ನವೆಂಕಟದಾಸರು
ಶರಣು ಶರಣುಪರಮಪುರುಷಶರಣು ಭಯಶರ ಖಂಡನಶರಣುಸಿರಿವಿಧಿಮರುತ ಪೂಜಿತಶರಣು ವೆಂಕಟನಾಯಕ ಪ.ಭಾಸಿತ ತಟಿತಮಕರಕುಂಡಲಭಾಸಕರ ಶಶಿಲೋಚನಸಾಸಿರಶತ ವೇದವಂದಿತವಾಸವಾರ್ಚಿತ ಪದಯುಗದೇಶಕಾಲ ಸುವ್ಯಾಪ್ತಾಜಾಂಡ ವಿಶೇಷಸ್ಥಿತಿಲಯಶೀಲನೆತೋಷಮಂದ ಸುಹಾಸವದನನೆಶೇಷಗಿರೀಶ ನಮೋ ಹರೆ 1ಶಂಖ ಚಕ್ರಗದೆ ಪದುಮ ವರಾಭಯಕಂಕಣಕರ ರಾಜಿತಕುಂಕುಮಮೃಗಮದತಿಲಕಧರಾತಂಕಕುಂಭಿಮೃಗಾಧಿಪಕಿಂಕರಾನತ ರಕ್ಷಕರಿಪುಶಂಖ ದೈತ್ಯ ವಿಶಿಕ್ಷಕಪಂಕಜಾನನ ಗರುಡವಾಹನಅಂಕಿತಾಖಿಳ ಭೂಷಣ 2ಜನನ ಮೃತ್ಯುವಿದೂರಅಚ್ಯುತಮುನಿಮನಾಲಯಮಾಧವಕನಕನೇತ್ರವಿದಾರಿ ಪೋತ್ರ್ಯಾಂಗನೆ ವಿಮಲಗುಣ ಪೂರ್ಣನೆದನುಜನಿಕರಾಟವಿ ದಾವಾನಲಸನಕಸನಂದನ ಸ್ತುತಿಪ್ರಿಯಅನವರತವರಸ್ವಾಮಿಪುಷ್ಕರಸನ್ನಿದ ಪ್ರಸನ್ವೆಂಕಟೇಶನೆ 3
--------------
ಪ್ರಸನ್ನವೆಂಕಟದಾಸರು
ಶರಣು ಶುಭಾಮಲಕಾಯ ಋಜುಗಣಾಭರಣಾನಂದ ಮುನಿರಾಯಹರಿಗುಣಗಣವಾರಿಧಿಮಗ್ನನೆ ಜಯಪರಮಪದಜÕನೆ ಜಯತು ಸದಾ ಜಯ ಪ.ಶುಕ್ಲರುಧಿರನಿರ್ಲಿಪ್ತ ಪರತತ್ವಕ್ಲುಪ್ತನೆ ತ್ರಿಜಗವ್ಯಾಪ್ತಅಕ್ಲೇಶಾನ್ವಿತ ಮಾಯಾಮನಹರಅಜÕಜನೋದ್ಧರ ಜಯತು ಸದಾ ಜಯ 1ಶಲ್ಯರಾಜನ ಭಟಹಾರಿ ಮಹಾವಾತ್ಸಲ್ಯಾಂಕಿತ ಸುಖಕಾರಿಬಾಲ್ಯತನದಿ ಜಗದ್ಗುರುವೆನಿಸಿದೆ ಕೈವಲ್ಯದಾಯಕ ಪ್ರಭು ಜಯತು ಸದಾ ಜಯ 2ಸೂತ್ರಾರ್ಥದ ಧೀ ಮಾತ್ರದೇಹಿ ವಿಧಾತೃ ಜನಕ ಪದಪ್ರೇಮಪಾತ್ರಪೌತ್ರ ಪ್ರಸನ್ನವೆಂಕಟಪತಿ ಪೂರ್ಣವೇತೃ ನಂಬಿದೆ ಜಯತು ಸದಾ ಜಯ 3
--------------
ಪ್ರಸನ್ನವೆಂಕಟದಾಸರು
ಶರಣು ಶ್ರೀನಿವಾಸ | ಪಾಲಿಸು |ಶರಣ ಜನರ ಪೋಷಾರಿಪಕರುಣದಿ ನಿನ್ನಯ ಚರಣವ ನಂಬಿದ |ಶರಣನಭವಭಯ ದುರಿತವ ಕಳೆಯುವಅ.ಪನಂಬಿದವರ ಪೊರೆವಾ | ಭಕ್ತ ಕು | ಟುಂಬಿ ವಾಸುದೇವಾ |ಕಂಬುಕಂಧರಕಮ | ಲಾಂಭಕ ಶ್ರೀವರಶಂಭು ಸಖನೆ | ಶುಕ್ಲಾಂಬರಧರಹರಿ||ಶರಣು||1ಪದ್ಮನಾಭಎನ್ನ | ಪಾಲಿಸು | ಪದ್ಮಾವತಿರಮಣಾ |ಪದ್ಮನಯನ ಮುಖ | ಪದ್ಮವ ತೋರಿಸುಪದ್ಮೋದ್ಭವನುತ | ಪದ್ಮಮಾಲಾಧರ ||ಶರಣು||2ತಿರುಪತಿ ಗಿರಿವಾಸಾ |ಕಾಣಿಕೆ| ಬರಲತಿ ಸಂತೋಷಾ |ಪರಿಪರಿ ವಿಧದಲಿ | ಹರಕೆಯ ತರಿಸುವ |ಉರಗಶಯನ ಗೋ | ವಿಂದನೆ ಶ್ರೀಹರಿ ||ಶರಣು||3xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'
--------------
ಗೋವಿಂದದಾಸ
ಶಾಶ್ವತ ಭಾಗವತರು ನಗರೆ ಮತಿಮಿಶ್ರರ ನೋಡಿ ಕೈ ಹೊಡೆದು ಪ.ಮಾಧವನಲ್ಲದೆ ಆ ದೈವೀದೈವಾದಿಗಳ ಹಿರಿಯರು ನಂಬರುಆದರವರ ಬಿಟ್ಟರೆ ಈ ಧನಧಾನ್ಯವುಹೋದರೆ ಕೆಟ್ಟೆವೆಂಬರ ನೋಡಿ 1ಕೃಷ್ಣನೆ ಸುಖದಾಯಕನಿರೆ ಸತಿಯಳುಹುಟ್ಟಿದ ಶಿಶುವಿನ ದೆಸೆಯಿಂದ ಎನ್ನಕಷ್ಟವೆ ಹೋಯಿತು ತುಷ್ಟಿಯೊಳಿಹೆನುಸೃಷ್ಟಿಗೆ ನಾ ಸುಖಿಯೆಂಬನ ನೋಡಿ 2ನಾರಾಯಣ ದಾತಾರನು ವಿಶ್ವಕೆತೋರುತಿರಲು ನರಧನಿಕರನುಆರಾಧಿಸಿ ನಾಭೂರಿಧನಾಢ್ಯನುಆರೆನಗೆದುರಿಲ್ಲೆಂಬನ ನೋಡಿ 3ಶ್ರೀ ಗುರುವರ ಸುಖಯೋಗಿಯ ಸಂತತಿಯೋಗಿಗಳಂಘ್ರಿಯ ನಂಬಿರದೆಆಗುರುಈ ಗುರುವೇ ಗತಿಯೆನುತಲಿಭೂಗುರುವಾಗಿಹ ರೋಗಿಯ ನೋಡಿ 4ಬೂಟಕತೋಟಕ ಭಕುತಿಗೆ ದ್ವಾದಶಗೂಟಬರೆಗೆ ಬುಧರೊಪ್ಪುವರೆ ಜಗನ್ನಾಟಕ ಪ್ರಸನ್ವೆಂಕಟೇಶನ ಗುಣಗಣಭಟರೆನಿಪ ವೈಷ್ಣವರಹ ಸಜ್ಜನ 5
--------------
ಪ್ರಸನ್ನವೆಂಕಟದಾಸರು
ಶಿವ ಮಹಾಗುರು ಸಹಜಾನಂದಭವಹರಮೃಡಬ್ರಹ್ಮಾನಂದ|xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಭವಮೃಡಸಾಂಬಶಿವಾನಂದ | ದಶಭುಜ ಪಂಚವದನನೇತ್ರ |ದಳಪಂಚಕ ಮಂಗಳಗಾತ್ರ| ಭಸಿತವಿಲೇಪಸುಜನಸ್ತೋತ್ರ |ಪಶುಪತಿಬಿಸಜಾಕ್ಷನಮಿತ್ರ1ಸುರನದಿಶಿರದಲಿಟ್ಟಿಹನು | ಸ್ಮರನ ಉರಿಗಣ್ಣಿಲಿಸುಟ್ಟಿಹನು |ಉರಗಭೂಷಣ ಕುಂಡಲದ್ವಯನ |ಪರಮಪುರಷ ಗೌರೀವರನ2ಅಮರೇಂದ್ರಾದಿ ಪದಾರ್ಚಿತನು ಡಮರುತ್ರೀಶೂಲ ಮೃಗಾಯುಧನು | ಶಮನ ಮಹಾ ಭಯಸಂಹರನು | ಸುಮನ ಸುಭಕ್ತರ ಪೊರೆವವನು3ಗಜಚರ್ಮಾಂಬರಧರ ಯತಿ | ರಜನೀಪತಿ ಶೇಖರಗೋಪತಿಭಜಕ ಜನಗಳಾಂತರ ಸ್ಫೂರ್ತಿ |ಅಜಸುರನುತ ಸಚ್ಚಿನ್ಮೂರ್ತಿ4ಸಿದ್ಧರ ಮಡುವಿನೊಳಗೆ ವಾಸಾ |ಬದ್ಧಜೀವಂಗಳುದ್ಧರಿಪ ಈಶಾ |ಶುದ್ಧ ಲಕ್ಷಕೆ ಉಪದೇಶ | ಅದ್ವಯಗುರುಶಂಕರ ವೇಷಾ5
--------------
ಜಕ್ಕಪ್ಪಯ್ಯನವರು
ಶಿವ ಶಂಬೋ ಶಂಕರಾ | ಶಿವ ಸೋಮಶೇಖರಾ |ಶಿವನೆ ಗಂಗಾಧರ | ಶಿವ ಗೌರೀವರ |ಶಿವ ಚರ್ಮಾಂಬರ | ಶಿವಭವಭಯಹರ 1ಶಿವ ನೀಲಕಂಧರಾ | ಶಿವಕಾಲಾ ಸಂಹರಾ |ಶಿವನೇ ಜಟಾಧರ | ಶಿವ ರಜತೇಶ್ವರ |ಶಿವ ಶೂಲಾಧರ | ಶಿವನಿಗೆ ಶಿರ ಸರ2ಶಿವ ಭಸ್ಮಾಲೇಪನಾ | ಶಿವವೃಷಭವಾಹನಾ |ಶಿವ ಫಣಿಭೂಷಣ ಶಿವಗೆ ತ್ರಿಲೋಚನ |ಶಿವ ಗೋವಿಂದ£À |ಶಿವ ದಾಸರ ಪ್ರಿಯಾ 3
--------------
ಗೋವಿಂದದಾಸ
ಶಿವ ಸತ್ತ ಎಂಥ ಆಶ್ಚರ್ಯವು ಇದು ನೋಡಿ |ಕವಿಗಳು ಮನಕ ತಂದು ||ಭುವನತ್ರಯಗಳಲ್ಲಿ ಪ್ರಖ್ಯಾತವಾಗಿದೆ |ಅವಿವೇಕಿಗಳ ಮಾತಲ್ಲಾ ಪಅಧಮರು ಬಹು ಬಗೆಯಿಂದಲ್ಲಿ ಘಳಿಸೀದಾ |ಬದುಕು ವ್ಯರ್ಥವಾಹದು ||ಬುಧರ ಪದಾರ್ಥವು ಸಾರ್ಥಕವಾಹದೆಂಬು |ದಿದೆ ಸಾಕ್ಷಿ ಎನಬಹುದೂ 1ಭೂಭುಜರಿಗೆ ಭೂಷಣಾದವು ಆಯುಧ |ಈ ಭೂಮಿ ಪೊತ್ತ ವ್ಯಾಳಾ ||ಆ ಭಿಕ್ಷುಕನ ಕುಟುಂಬವ ರಕ್ಷಿಸುತಿಹ್ಯದು |ಶೋಭಿಸುತಿಹ್ಯ ಕಪಾಲಾ 2ಮಂದೀಯ ನಂಜಿಸುತಿಪ್ಪದು | ಆತನಹಿಂದೆ ಮುಂದಿರುವ ಗಣಾ ||ನಂದೀ ಪಿತೃಗಳಿಗೆ ಕೈವಲ್ಲ್ಯಾ ತೋರಿತು |ಸಂದೇಹವಿನಿತಿಲ್ಲವೂ 3ಸೋಮಕಂಣಾದ ಜಗತ್ತೆಕ್ಕ ದಿಕ್ಕಿಗೆ |ಸ್ವಾಮಿ ಎನಿಸಿದ ವನ್ಹೀ ||ಧೀಮಂತರಾತನ ಮಡದೀಯ ಪೂಜಿಸಿ |ಶ್ರೀಮಂತರಾಗೂವರೂ 4ಮೌನಿಗಳಿಗೆ ಚರ್ಮ ವೈಷ್ಣವರಿಗೆ ಭಸ್ಮ |ತಾನು ಪ್ರೀಯಕರಾದೀತು ||ಪ್ರಾಣೇಶ ವಿಠಲಾನೊಳರ್ಧಾಂಗ ವಾಗಭಿ |ಮಾನಿಯೊಳರ್ಧವಿಟ್ಟಾ 5
--------------
ಪ್ರಾಣೇಶದಾಸರು
ಶುಭವು ಶ್ರೀಹರಿಯ ನಾಮವು ಸುಜನರಿಗೆಲ್ಲಶುಭವು ಶ್ರೀಹರಿಯ ನಾಮವು ಪಶುಭವು ಶ್ರೀಹರಿಯ ನಾಮವಿಭವದಿಂ ಪೊಗಳಲುಶುಭಕೃತು ನಾಮ ಸಂವತ್ಸರದಲಿಶುಭಶುಭವೆನ್ನುತ ಪಾಡುವರನು ಸಲಹುವಅ.ಪಸಿಂಧುಶಯನ ಹರಿಯಇಂದಿರೆಸಹಿತಚಂದದಿ ಭಜಿಸುವರಮಂದರಧರಅರವಿಂದನಯನ ಶ್ರೀಮು-ಕುಂದಭಕ್ತರ ಭವಬಂಧನ ಬಿಡಿಸುವಪೊಂದಿ ಭಜಿಸುವರಾನಂದದಿ ಸಲಹುವಸುಂದರವದನಶುಭಾಂಗನು ಮುದದಲಿಇಂದ್ರಾದಿಗಳು ಆನಂದದಿ ಪೊಗಳೆ ಗೋ-ವಿಂದ ಆನಂದ ಹೃನ್ಮಂದಿರ ವಾಸನು 1ಶುಭವು ಭಕ್ತರಕಾರ್ಯಕೆ ಶ್ರೀಹರಿಯನಾಮಶುಭವು ಮುಕ್ತಿಸಾಧನಕೆಶುಭವು ಬಂಧುಗಳಿಂದ ಸದನದಿ ವೆÀುರೆಯಲುಶುಭವು ಭಕ್ತರ ವೃಂದ ಕೂಡಿ ನಲಿದಾಡಲುಶುಭಗುಣ ಶೀಲನ ಶುಭಗುಣಗಳು ಸ-ನ್ಮುದದಲಿ ಪಾಡಲು ಶುಭಕೊಡುವನುಶುಭಶುಭಶುಭವೆನ್ನುತ ನಲಿದಾಡೆ ಅ-ಶುಭಗಳನೋಡಿಸಿ ಶುಭವೀವನುಹರಿ2ಶುಭವು ಶೋಭನ ಶ್ರೀಶಗೆ ಶ್ರೀ ಸಹಿತದಿವೆÀುರೆವ ಮಹಾನುಭಾವಗೇಶುಭವೆಂದು ಪಾಡಲುಅಗಣಿತಮಹಿಮನಬಗೆಬಗೆಯಿಂದವರಘ ಪರಿಹರಿಸುವಖಗವಾಹನಶ್ರೀ ಕಮಲನಾಭ ವಿಠ್ಠಲನನು ಪಾಡುವ ಸುಜನರ ಸಲಹುವಹಗಲಿರುಳೆನ್ನದೆ ಭಜಿಸುತ ಪಾಡಿರೊಕಡಲೊಡೆಯನಪಾದಧೃಡ ಭಕುತಿಯಲಿ3
--------------
ನಿಡಗುರುಕಿ ಜೀವೂಬಾಯಿ
ಶೇಷಾ ಭೂಧರನಿವಾಸಾ ಶ್ರೀ ಶ್ರೀನಿವಾಸಾ ಪಶೇಷಶಯನ ಭವದೋಷರಹಿತ ಭಕ್ತಪೋಷಣಕೌಸ್ತುಭಭೂಷಾ ಅಶೇಷಾತ್ಮ ಶೇಷಾ1ಅರಿದರಕರ ಕನಕಾಂಬರಧರ ಶ್ರೀ ಯಲಮೇಲ್‍ಮಂಗಾ ವಿಹಾರ ಉದಾರೀ ವಿಧೀರಾ 2ವಿಷಚರಯುಗಮೃಗವೇಷಾ ದ್ವಿನೃಷಚವೇಷಾಪುರಿ ಕುಲದೂಷಾಮಾವಿಷಯ ಸಂತೋಷಾ3ಕಾಮಜನಕ ತುಲಸೀರಾಮದಾಸ ಹಿತಕಾಮಿತಾರ್ಥವನೀವ ಓ ಶ್ರೀನಿವಾಸ 4
--------------
ತುಳಸೀರಾಮದಾಸರು