ಒಟ್ಟು 593 ಕಡೆಗಳಲ್ಲಿ , 86 ದಾಸರು , 514 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಯೇ ನೀನೇ ಗತಿ ಕೇಶವನೇ ಹರಿಯೇ ನೀನೇ ಗತಿ ಪ ಸುರನರ ವಂದ್ಯನೆ ಪರಮ ಪಾವನನೇ ಗಿರಿಪುರವಾಸನೇ ವಸುಮತಿ ಪತಿಯೇ 1 ಅಂಬುಜಲೋಚನ ವಸುದೇವ ಸುತನೇ ತುಂಬೂರ ನಾರದ ಗಾನ ಸೇವಿತನೇ 2 ವಾಸುಕಿಶಯನನೇ ಚನ್ನ ಕೇಶವನೇ 3
--------------
ಕರ್ಕಿ ಕೇಶವದಾಸ
ಹರಿಹರರು ಸರಿಯೆಂಬ ಮರುಳು ಜನರುಹರಿಹರರ ಚರಿತೆಯನು ತಿಳಿದು ಭಜಿಸುವುದು ಪ ಸುರರು ಮುನಿಗಳು ಕೂಡಿ ಪರದೈವವಾರೆಂದುಅರಿಯಬೇಕೆಂದೆರಡು ವರಧನುಗಳಹರಿಹರರಿಗಿತ್ತು ಸಂಗರವ ಮಾಡಿಸಿ ನೋಡೆಮುರಹರನು ಪುರಹರನ ಗೆಲಿದುದರಿಯಾ 1 ಕರವ ಶಿರದ ಮ್ಯಾಲಿರಿಸಿ ಖಳ-ನುರುಹಿ ಹರನನು ಕಾಯಿದ ಕಥೆಯ ನೀನರಿಯಾ 2 ದೂರ್ವಾಸರೂಪ ಹರನಂಬರೀಷನ ಮುಂದೆಗರ್ವವನು ಮೆರೆಸಿ ಜಡೆಯನು ಕಿತ್ತಿಡೆಸರ್ವಲೋಕದೊಳವನ ಚಕ್ರನಿಲಲೀಯದಿರೆಉರ್ವೀಶನನು ಸಾರಿ ಉಳಿದನರಿಯಾ 3 ಹರನಂಶ ದ್ರೋಣಸುತನು ಪಾಂಡವಾ ಎಂದುಉರವಣಿಸಿ ನಾರಾಯಣಾಸ್ತ್ತ್ರವನು ಬಿಡಲು ಹರಿ ಬಂದು ಬೇಗ ತನ್ನಸ್ತ್ರವನು ತಾ ಸೆಳೆದುಶರಣಾಗತರ ಕಾಯಿದ ಕಥೆಯನರಿಯಾ 4 ನರನಾರಾಯಣರು ಬದರಿಕಾಶ್ರಮದಲಿರೆಹರನು ಹರಿಯೊಡನೆ ಕದನವನು ಮಾಡೆಹರಿ ಹರನ ಕಂಠವನು ಕರದಲಿ ಪಿಡಿದು ನೂಕೆಕೊರಳ ಕಪ್ಪಾದ ಕಥೆ ಕೇಳಿ ಅರಿಯಾ 5 ಹರಿ ಸುರರಿಗಮೃತವನು ಎರೆದ ರೂಪವನೊಮ್ಮೆಹರ ನೋಡುವೆನೆಂದು ಸಂಪ್ರಾರ್ಥಿಸೆಪರಮ ಮೋಹನ ರೂಪಲಾವಣ್ಯವನು ಕಂಡುಹರ ಮರಳುಗೊಂಡ ಕಥೆ ಕೇಳಿ ಅರಿಯಾ 6 ಹರಿಯ ಮೊಮ್ಮನ ಬಾಣಾಸುರನು ಸೆರೆವಿಡಿಯೆಗರುಡವಾಹನನಾಗಿ ಕೃಷ್ಣ ಬಂದುಹರನ ಧುರದಲಿ ಜಯಿಸಿ ಅವನ ಕಿಂಕರನ ಸಾ-ವಿರ ತೋಳುಗಳ ತರಿದ ಕಥೆಯ ನೀನರಿಯಾ 7 ಸುರತರುವ ಕಿತ್ತು ಹರಿ ಸುರಲೋಕದಿಂದ ಬರೆಹರನು ಹರಿಯೊಡನೆ ಕದನವನು ಮಾಡೆತರಹರಿಸಲಾರದೋಡಿದ ಕಥೆಯ ನೀನೊಮ್ಮೆಹಿರಿಯರ ಮುಖದಿ ಕೇಳಿ ನಂಬು ಹರಿಯಾ 8 ಹರಸುತನು ತಪದಿಂದ ಹರಿಯ ಚಕ್ರವ ಬೇಡೆಪರಮ ಹರುಷದಲಿ ಚಕ್ರವನೀಯಲುಭರದಿಂದ ಧರಿಸಲಾರದೆ ಚಕ್ರವನಂದುಹರನು ಭಂಗಿತನಾದನೆಂದರಿಯಲಾ 9 ರಾವಣಾಸುರ ಕುಂಭಕರ್ಣ ನರಕಾದಿಗಳುಶೈವತಪವನು ಮಾಡಿ ವರವ ಪಡೆಯೆಅವರುಗಳನು ವಿಷ್ಣು ನರರೂಪಿನಿಂದರಿದುದೇವರ್ಕಳನು ಕಾಯಿದ ಕಥೆಯ ನೀನರಿಯಾ 10 ಗಂಗಾಜನಕನÀ ಸನ್ಮಂಗಲ ಚರಿತ್ರ್ರೆಗಳಹಿಂಗದಲೆ ಕೇಳಿ ಸುಖಿಸುವ ಜನರಿಗೆಭಂಗವಿಲ್ಲದ ಪದವನಿತ್ತು ಸಲಹುವ ನಮ್ಮರಂಗವಿಠ್ಠಲರಾಯನ ನೆರೆ ನಂಬಿರೋ11
--------------
ಶ್ರೀಪಾದರಾಜರು
ಹಿಂಗಾಯಿತಲ್ಲಾ ಏನಿದು ಹರಿಹರಿಪ ಮಂಗನ ತೆರ ಈ ಅಂಗವ ವಿಷಯತ ರಂಗೆ ವಡ್ಡುತ ರಂಗನ ಮರೆತಿಹೆ ಅ.ಪ. ಬರಿದೆಯೆ ಹೋಗುತ್ತಿರುವುದು ಹೊತ್ತು ಹರಿಧ್ಯಾನಕೆ ಸಾಲದು ಪುರಸೊತ್ತು ತಿರುಗಲು ಮನೆಮನೆ ಸಾಲದು ಹೊತ್ತು ಸರಸಿಜನಾಭನೆ ಇದಕ್ಕೇನು ಮದ್ದು 1 ಶ್ರೀ ಕಮಲೇಶನ ಪೂಜೆಯ ಮಾಡನೆ ಆಕಳಿಸುತ ಮೈ ಕೈ ಮುರಿಯುವೆನು ಸ್ವೀಕರಿಸಲು ಸವಿ ಪಾನೀಯಂಗಳ ಮುಖಸಹತೊಳೆಯದೆನೂಕುತ ಮುಖ ಪ್ರಕ್ಷಾಳನೆ ಬಿಡುವೆ2 ಸ್ನಾನವ ಮಾಡೆನು ಸಂಧ್ಯಾ ತಿಳಿಯೆನು ಧ್ಯಾನವು ಯೆಂತೆನೆ ಕೂಳಿನ ಚಿಂತೆಯು ಆನನ ಮುಸುಕುತ ಬರಿಪಿಚಿಯೆಂದು ನಿ ಧಾನದಿ ಜಪಸರ ನೂಕುವೆನಲ್ಲಾ 3 ಮಂತ್ರವು ಬಾರದು ಸ್ತ್ರೋತವು ಬಾರದು ತಂತ್ರದಿ ನೂಕುವೆ ದೇವರ ಪೂಜೆಯ ವಿಧಿಗಳ ಮೌನದಿ ಕರ್ಮಗಳೆಲ್ಲವ ಮಂತ್ರಿಯ ಮಡಿದಿಯು ಪೇಳಿದ ತೆರದೂಳು ಯಂತ್ರ ವಿಧಾನದಿ ನುಡಿಯುವೆ ದಿನವಹಿ4 ಹೀನಕ ವೃತ್ತಿಗಳಿಂದಲಿ ಜೀವನ ವರ್ಣವಿವೇಕವ ನಡಿಸಲಸಾಧ್ಯವು ಜನ್ಮದಿ ವಿಪ್ರನು ನಾನಿಹೆ ಬರಿಸರಿ ತಿನ್ನುತ ಕುಡಿಯುತ ತಳ್ಳುವೆ ಆಯುಷ್ಯ5 ಊಟದ ಚಪಲವು ತಿಂಡಿಯ ಚಪಲವು ನೋಟದ ಚಪಲವು ಚಪಲ ಕಂದರ್ಪನ ಕಾಟದಿ ಸಿಲುಕಿಹೆ ಕೈಟಭಮರ್ದನ ದಾಟುವೆದೆಂತೋ ಭವವನು ಕಾಣೇ 6 ಏರಿದೆ ಬಹುನಿತ್ರಾಣವು ಗಾತ್ರದಿ ಮೀರಿದವಯ ಶಾಸ್ತ್ರಾಭ್ಯಾಸಕೆ ಕಾರುವರೈ ವಿಷ ಬಾಂಧವರೆಲ್ಲರು ಆ ರವಿಸುತನಾಳ್ಗಳಗು ನಾನಿಹೆ 7 ಮಡದೀ ಮಕ್ಕಳ ಪಾಶದಿ ಬಿದ್ದಿಹೆ ದುಡಿಯದ ಕಾರಣ ದುಗುಡವ ತೋರ್ಪರು ನಡೆಯದು ತುಸನನ್ನ ಮಾತೇನಿಲ್ಲ ಮಿಡುಕುತ ಮಿಡುಕುವೆ ಮುಪ್ಪಿನ ಹಿಡಿತದಿ 8 ತೋಡಿದರೂ ಎದೆ ಕಾಣೆನು ಭಕ್ತಿಯ ಕಾಡನು ಸೇರಲೊ ಬಾವಿಗೆ ಬೀಳಲೋ ಜೋಡಿಯು ಆಗಲೊ ಜೋಳಿಗೆ ಪಿಡಿಯಲೊ ಓಡದು ಬುದ್ಧಿಯು ತೋರಿಸು ಹಾದಿ 9 ಕರುಣಾಮಯ ನೀನೆಂಬುವ ಬಿರುದನು ಹಿರಿಯರ ಮುಖದಿಂ ಕೇಳಿಹೆ ಸ್ವಾಮಿಯೆ ಭರವಸೆ ಎನಗಿಹದೊಂದೇ ನಿಶ್ಚಯ ಶರಣನ ಬಿಡದಿರು ಆಪದ್ಬಾಂಧವ 10 ಪಾಮರ ನಿಹೆಬಹು ಕಲುಷಿತ ಚಿತ್ತನು ಭೀಮಾರ್ಚಿತ ಪದಯಗ ನಂಬಿಹೆ ಪ್ರೇಮವ ಸುರಿಸುತ ಕಾಯೈ ಬೇಗನೆ ಸಾಮನೆ ಶರಣೈ “ಶ್ರೀ ಕೃಷ್ಣವಿಠಲಾ” 11
--------------
ಕೃಷ್ಣವಿಠಲದಾಸರು
ಹಿಗ್ಗಿದಳು ನಂದನ ಸತಿ ಮುಗ್ಧೆ ತನ್ನಯ ಸುತನ ಮುದ್ದು ಮುಖವ ನೋಡಿ ಅ.ಪ ಪಾಲು ಬೆಣ್ಣೆ ಕಳ್ಳ ತಾಳು ಕಟ್ಟುವೆ ನಿನ್ನ ಕಾಲುಗಳನೆಂದು ಕರಗಳಲಿ ಪಿಡಿದು ನೀಲಮೇಘಶ್ಯಾಮ ಶ್ರೀಲಕುಮಿಯರಸನನು ಬಾಲನೆಂದರಿತು ಆಲಿಂಗನದಿ ಮೈ ಮರೆತು1 ಅಂಬುಜೋದ್ಭವನಯ್ಯ ಅಂಬೆಗಾಲಿಡುವುದನು ನಂಬಬಹುದೇ ಮೋಹಜಾಲವಿರಲು ಸಂಭ್ರಮದಿ ಸುತನನ್ನು ಚುಂಬಿಸುತ ರಭಸದಲಿ ಮೋದ ಕಂಬನಿಯ ಸುರಿಸುತ್ತ 2 ಓರೆಗಣ್ಣಿನ ನೋಟ ನಾರಿಯರ ಪೇಚಾಟ ಮೂರು ಲೋಕಕೆ ಹರ್ಷಕರ ಮಂದಹಾಸ ಸೇರಿಸಿದ ಮುಕ್ತಗಳ ಮೀರಿ ಪೊಳೆಯುವ ದಂತ ಚಾರುಮುಖಿ ಸುತನ ಮನಸಾರ ದರುಶನದಿಂದ 3 ಭೃಂಗಗಳ ಧಿಕ್ಕರಿಪ ಮಂಗುರುಳು ಮಸ್ತಕದಿ ರಂಗಿನಾ ಕಸ್ತೂರಿತಿಲಕ ಪಣೆಯಲ್ಲಿ ಸಿಂಧು ಶ್ರೀರಂಗನ್ನ ನೋಡುತಲಿ ಅಂಗನಾಮಣಿ ಅಂತರಂಗ ಪ್ರೇಮದ ಭರದಿ 4 ತನ್ನ ಉದರದಿ ನಳಿÀನಜಾಂಡವನೆ ಪೊತ್ತಿರುವ ಉನ್ನತೋನ್ನತ ಸುಗುಣ ಜ್ಞಾನಮಯನ ತನ್ನ ಮಗನೆಂದರಿತು ಸ್ತನ್ಯಪಾನದಿ ಸುಪ್ರ ಸನ್ನಮುಖಿ ಹರುಷ ಪುಳಕಿತಳಾಗಿ ಹೆಮ್ಮೆಯಲಿ 5
--------------
ವಿದ್ಯಾಪ್ರಸನ್ನತೀರ್ಥರು
ಹಿತದಿ ಜೀವಿಸು ಬಾಲೆ ಪತಿಯ ಪ ಸೇವಾನುಕೂಲೆ ಕ್ಷಿತಿಯೊಳಗೆ ಪತಿವ್ರತಾ ಧರ್ಮನಿರತಳೆನಿಸಿ ಬಹುಸುತರ ಪಡೆದು ಅ.ಪ ರತಿಪತಿಪಿತನಿಗೆ ಪ್ರತಿಮೆಗಳೆನಿಸುವ ಅತಿಥಿಗಳ ಸಂತತ ಸುಶೇವಾ- ರತಳು ಬಹು ಗುಣವತಿಯಳೆನಿಸುವ 1 ಗುರುಜನರಿಗೆ ಸದಾ ಶಿರಬಾಗಿ ನಡೆಯುತ ಹರುಷದಲಿ ಹರನರಸಿಯಳ ಪದ ಸರಸಿಜದಿ ಮನವಿರಿಸಿ ಪೂಜಿಸಿ 2 ಶರಣು ಜನಕೆ ಸುರತರುವೆನಿಪ ಕಾರ್ಪರ ಸಿರಿಮನೋಹರ ನರಹರಿಯ ಶುಭ ಚರಣಯುಗಲವ ಸ್ಮರಿಸುತನುದಿನ 3
--------------
ಕಾರ್ಪರ ನರಹರಿದಾಸರು
ಹೊಸಗಣ್ಣು ಎನಗೆ ಹಚ್ಚಲಿಬೇಕು ಜಗದಂಬಾವಸುದೇವ ಸುತನ ಕಾಂಬುವೆನು ಪ ಭವ ವಿಷಯ ವಾರುಧಿಯೊಳಗೆಶಶಿಮುಖಿಯೆ ಕರುಣದಿ ಕಾಯೆ ಅ.ಪ. ಚಾರು ಚರಣಗಳ ಮೊರೆ ಹೊಕ್ಕೆಕರುಣದಿ ಕಣ್ಣೆತ್ತಿ ನೋಡೆ 1 ಮಂದಹಾಸವೇ ಭವಸಿಂಧುವಿನೊಳಗಿಟ್ಟುಚಂದವೇ ಎನ್ನ ನೋಡುವುದುಕಂದನಂದದಿ ಬಾಲ್ಯದಿಂದ ಸೇರಿದೆ ನಿನ್ನಮಂದರಧರನ ತೋರಮ್ಮ 2 ಅಂದಚಂದಗಳೊಲ್ಲೆ ಬಂಧು ಬಳಗ ಒಲ್ಲೆಬಂಧನಕೆಲ್ಲ ಇವು ಕಾರಣವುಇಂದಿರೇಶನ ಪಾದದ್ವಂದ್ವವ ತೋರಿ ಹೃನ್ಮಂದಿರದೊಳು ಬಂದು ಬೇಗ 3
--------------
ಇಂದಿರೇಶರು
(ಮಂಗಳೂರಿನ ಗಣೇಶನನ್ನು ನೆನೆದು)ಶ್ರೀ ಗಜವಕ್ತ್ರ ಪವಿತ್ರ ನಮೋ ಮನುಮಥಜಿತಸುತನಯ ಪ.ಬಾಗುವೆ ಶಿರ ಶರಣೌಘಶರಣ್ಯ ಸು-ರೌಘಸನ್ನುತ ಮಹಾಗುಮ ಸಾಗರ ಅ.ಪ.ಸಿದ್ಧಸಮೂಹಾರಾಧ್ಯ ಪದದ್ವಯ ಶೋಭ ಸೂರ್ಯಾಭಶುದ್ಧಾತ್ಮ ಫಣಿಪಬದ್ಧಕಟಿವಿಗತಲೋಭಹೃದ್ಯಜನದುರಿತಭಿದ್ಯ ವಿನಾಯಕವಿದ್ಯಾದಿ ಸಕಲ ಬುದ್ಧಿಪ್ರದಾಯಕ 1ಏಕದಂತಚಾಮೀಕರಖಚಿತ ವಿಭೂಷ ಗಣೇಶಪಾಕಹ ಪ್ರಮುಖ ದಿವೌಕಸಪೂಜ್ಯ ವಿಲಾಸಶೋಕರಹಿತ ನಿವ್ರ್ಯಾಕುಲ ಮಾನಸಲೇಖಕಾಗ್ರಣಿ ಪರಾಕೆನ್ನಬಿನ್ನಪ2ವರಮಂಗಲಪುರ ಶರಭಗಣೇಶ್ವರ ಧೀರ ಉದಾರಸುರುಚಿರ ಶುಕ್ಲಾಂಬರಧರ ವಿಘ್ನವಿದಾರಹರಿಲಕ್ಷ್ಮೀನಾರಾಯಣಶರಣರಗುರುಗುಹಾಗ್ರಜ ಮನೋಹರ ಸುಚರಿತ3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಆಕಳ ಕಾಯ್ದ ಗೋಕುಲವಾಸನುಆಕಳ ಕಾಯ್ದ ಗೋಕುಲವಾಸನನೇಕ ಗುಣನಿಧಿನಾಕೇಶವಿನುತಪುರದಲ್ಲಿದ್ದಂಥ ಕೇರಿಯ ಮಕ್ಕಳ ನೆರಹಿ ಯಾದವ ಪರಿವಾರವೆಲ್ಲನಳಿನಕೇತಕಿ ಎಳೆಯ ಮಾವಿನ ತಳಿಲ ವನದ ಒಳಗೆ ರಂಗನುತೊಂಡರೊಡಗೂಡಿಪುಂಡರೀಕಾಕ್ಷಗೋವಿಂದ ಕಾಳಿಯ ದಂಡೆಯಲ್ಲಿರಿಸಿಕಡು ತೃಷದಿ ಆ ಮಡುವಿನುದಕ ಕುಡಿದು ಗೋವುಗಳೆಲ್ಲ ನಡುಗಿ ಬೀಳಲುಹೊಕ್ಕ ಭರದಿ ದೇವಕಿ ಸುತನ ಸಿಕ್ಕಿಸಿಕೊಂಡು ಬಾಲಕೆ ಬಿಗಿಯಲುಇಂದಿರಾಪತಿ ಆನಂದದಿಂದಾಡಲು ಬಂದುಬೊಮ್ಮವಾಯುಉರಗಾಂಗನೆಯರ ಮೊರೆಯ ಲಾಲಿಸಿ ಕರುಣಿ ಅವರಿಗೆ ಗರುಡನ ಭಯಗರಳಭಯದಿ ಧರೆಗೆ ಬಿದ್ದಂಥ ತುರುಗಳಿಗೆಲ್ಲ ಸ್ಮರಣೆ ಬಪ್ಪಂತೆಮಂಗಳ ಮೂರುತಿ ಪೊಂಗೊಳಲೂದುತ್ತ ತಿಂಗಳಿನಂದದಿ
--------------
ಗೋಪಾಲದಾಸರು
ಆರಿದ್ದರೇನಯ್ಯ ನೀನಲ್ಲದೆನಗಿಲ್ಲಕಾರುಣ್ಯ ನಿಧಿ ಹರಿಯೆ ಕೈಯ ಬೆಡಬೇಡ ಪದುರುಳಕೌರವನಂದು ದ್ರುಪದಜೆಯ ಸೀರೆಯನುಕರದಿಂದ ಸೆಳೆಯುತಿರೆ ಪತಿಗಳೆಲ್ಲ ||ಗರಹೊಯ್ದರಂತಿದ್ದರಲ್ಲದೇ ನರಹರಿಯೆಕರುಣದಿಂ ನೀನಲ್ಲದಾರು ಕಾಯ್ದವರು 1ಅಂದು ನೆಗಳಿನ ಬಾಧೆಯಿಂದ ಗಜರಾಜನನುತಂದೆ ನೀ ವೈಕುಂಠದಿಂದ ಬಂದು ||ಇಂದಿರೇಶನೆ ಚಕ್ರದಿಂದ ನೆಗಳಿನ ಬಾಯಸಂಧಿಯನು ಸೀಳಿ ಪೊರೆದೆಯೆಲೊ ನರಹರಿಯೇ 2ಅಜಮಿಳನು ಕುಲಗೆಟ್ಟು ಕಾಲದೂತರು ಬರಲುನಿಜಸುತನ ಕರೆಯಲವನತಿ ವೇಗದಿ ||ತ್ರಿಜಗದೊಡೆಯನೆಪುರಂದರವಿಠಲ ಕರುಣದಲಿನಿಜದೂತರನು ಕಳುಹಿ ಕಾಯ್ದೆ ಗಡ ಹರಿಯೇ 3
--------------
ಪುರಂದರದಾಸರು
ಆರು ಒಲಿದರೇನು ನಮಗಿನ್ನಾರು ಮುನಿದರೇನುಕ್ಷೀರಸಾಗರ ಶೇಷಶಯನನ ಒಲುಮೆಯುಳ್ಳ ಹರಿದಾಸರಿಗೆಪ.ಪಡೆದ ತಾಯಿ - ತಂದೆ ನಮ್ಮೊಳು ಅಹಿತವ ಮಾಡಿದರೇನುಮಡದಿ ಮಕ್ಕಳು ನೆಂಟರಿಷ್ಟರುಮುನಿಸು ಮಾಡಿದರೇನುಒಡೆನೆ ತಿರುಗುವ ಗೆಳೆಯರು ನಮ್ಮೊಳು ವೈರವ ಬೆಳಸಿದರೇನುಕಡಲ ಶಯನನ ಕರುಣಾಂಬುಧಿಯ ಒಲುಮೆಯುಳ್ಳ ಹರಿದಾಸರಿಗೆ 1ಊರನಾಳುವ ದೊರೆಗಳು ನಮ್ಮನು ಹೊರಗೆ ನೂಕಿದರೇನುಮಾರಿಯಹಿಂಡು ಮುಸಲರ ದಂಡು ಮೈಗೆ ಮುತ್ತಿದರೇನು ||ಅರಣ್ಯದಿ ಹರಿದಾಡುವ ಮೃಗಗಳು ಅಡ್ಡಗಟ್ಟಿದರೇನುವಾರಿಜನಾಭನ ವಸುದೇವಸುತನ ಒಲುಮೆಯುಳ್ಳ ಹರಿದಾಸರಿಗೆ 2ಕಾನನದೊಳು ಹರಿದಾಡುವ ಸರ್ಪವು ಕಾಲಿಗೆ ಸುತ್ತಿದರೇನುಜೇನಿನಂದದಿ ಕ್ರೀಮಿಕೀಟಂಗಳು ಚರ್ಮಕೆ ಮುತ್ತಿದರೇನು ||ಭಾನು ಮಂಗಳಬುಧ ಶುಕ್ರಂಗಳ ಬಲುವು ತಪ್ಪಿದರೇನುಮಾಣದೆ ಭಜಿಸುವ ಪುರಂದರವಿಠಲನಒಲುಮೆಯುಳ್ಳ ಹರಿದಾಸರಿಗೆ 3
--------------
ಪುರಂದರದಾಸರು
ಆರು ಒಲಿದರೇನು ನಮಗಿನ್ನಾರು ಮುನಿದರೇನುಕ್ಷೀರಸಾಗರ ಶೇಷಶಯನನ ಒಲುಮೆಯುಳ್ಳ ಹರಿದಾಸರಿಗೆಪ.ಪಡೆದ ತಾಯಿ - ತಂದೆ ನಮ್ಮೊಳು ಅಹಿತವ ಮಾಡಿದರೇನುಮಡದಿ ಮಕ್ಕಳು ನೆಂಟರಿಷ್ಟರುಮುನಿಸು ಮಾಡಿದರೇನುಒಡೆನೆ ತಿರುಗುವ ಗೆಳೆಯರು ನಮ್ಮೊಳು ವೈರವ ಬೆಳಸಿದರೇನುಕಡಲ ಶಯನನ ಕರುಣಾಂಬುಧಿಯ ಒಲುಮೆಯುಳ್ಳ ಹರಿದಾಸರಿಗೆ 1ಊರನಾಳುವ ದೊರೆಗಳು ನಮ್ಮನು ಹೊರಗೆ ನೂಕಿದರೇನುಮಾರಿಯಹಿಂಡು ಮುಸಲರ ದಂಡು ಮೈಗೆ ಮುತ್ತಿದರೇನು ||ಅರಣ್ಯದಿ ಹರಿದಾಡುವ ಮೃಗಗಳು ಅಡ್ಡಗಟ್ಟಿದರೇನುವಾರಿಜನಾಭನ ವಸುದೇವಸುತನ ಒಲುಮೆಯುಳ್ಳ ಹರಿದಾಸರಿಗೆ 2ಕಾನನದೊಳು ಹರಿದಾಡುವ ಸರ್ಪವು ಕಾಲಿಗೆ ಸುತ್ತಿದರೇನುಜೇನಿನಂದದಿ ಕ್ರೀಮಿಕೀಟಂಗಳು ಚರ್ಮಕೆ ಮುತ್ತಿದರೇನು ||ಭಾನು ಮಂಗಳಬುಧ ಶುಕ್ರಂಗಳ ಬಲುವು ತಪ್ಪಿದರೇನುಮಾಣದೆಭಜಿಸುವ ಪುರಂದರವಿಠಲನ ಒಲುಮೆಯುಳ್ಳ ಹರಿದಾಸರಿಗೆ3
--------------
ಪುರಂದರದಾಸರು
ಉಗಾಭೋಗಕರುಣವಾರಿಧಿ ನೀ ಕರುಣವಾರಿಧಿಯಾದ ಕಾರಣಕರಿಕುಲಾಗ್ರಣಿಯನ್ನ ಕಾಯ್ದೆಉರಿಉರಗಬಾಧೆಯ ತಪ್ಪಿಸಿ ತರಳನಾರೈದೆಕರುಣವಾರಿಧಿಯಾದ ಕಾರಣಸುರರ ಸಂಕಟ ಹರಿದುಕನಕಪುರದರಸುತನ ಕೊಟ್ಟೆ ಪೌಲಸ್ತ್ಯ ಅನುಜಗೊಲಿದುಕರುಣವಾರಿಧಿಯಾದ ಕಾರಣಸ್ಮರಿಸುತಿಹಗಂಬರದಿ ನಿಲಿಸಿದೆಭರದಿ ಮುನಿ ಬಂದೆದೆಯನೊದೆದರೆ ಮರಳಿ ಮನ್ನಿಸಿದೆಕರುಣವಾರಿಧಿ ನೀನು ನಿನ್ನಯಕರುಣ ಪಾತ್ರರುಸಿರಿವಿಧಾತ್ರರುಪರಿಚರರ ಅಭಿಮಾನಿ ಪ್ರಸನ್ವೆಂಕಟರೇಯ ಮಾಸಹಾಯ 1
--------------
ಪ್ರಸನ್ನವೆಂಕಟದಾಸರು
ಎಂಥ ಮಹಿಮನುನೋಡುನಮ್ಮಯಲಗೂರದ ಹನುಮಾ |ಸಂತತ ನೆನೆವರ ಚಿಂತಾಮಣಿ ನಿಜ ಶಾಂತಸದಾ ನಿಶ್ಚಿಂತ ಪರಾಕ್ರಮಾಪxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಹುಟ್ಟುತಲಿ ಮಿತ್ರನ ತಿನಬೇಕೆಂದು ಥಟ್ಟನೆ ತಾ ಬಂದು |ಬೆಟ್ಟರಿಯ ಬೆನ್ನನೆ ಬೀಳಬೇಕೆಂದು | ಪುಟ್ಟರಿದಾನೆಂದು |ಮುಟ್ಟಿ ಬರಲುಕವನೆಟ್ಟನೆ ಹೊಯ್ಯಲು |ಧಿಟ್ಟ ಮರಪನೆಂದು ಧಿಟ್ಟನೆ ಧಿಟ್ಟ ಬಂದು1ಅಂಜನಿಯ ಗರ್ಭದಲಿ ತಾ ಬಂದಾ | ಸಂಜೀವನಿ ತಂದಾ |ಕೆಂಜಡಿಯನ ಸ್ವರೂಪನು ಜಗದಾನಂದಾ ಸ್ವಾನಂದ ಕಂದಾ ||ಮಂಜುಳ ಶಬ್ದಪ್ರಭಂಜನಕಪಿ ಜಗರಂಜಿತತೇಜಃ ಪುಂಜ ಸದಯದಾ2ಹರಿಸುತನು ಬ್ರಹ್ಮನೆ ತಾನೆ ಬಂದೂ ಕರವಿಟ್ಟನು ಇಂದೂ |ಪರಿಪರಿಯ ಶಕ್ತಿಯು ನಿನ್ನಲ್ಲಿಂದು ಗುಪ್ತಿರಬೇಕೆಂದು ಸ್ಥಿರಪದ ಕೊಟ್ಟೆ ವಜ್ರಾಂಗವನಿಂದೂ ವರದಾ-ಭಯನಿಟ್ಟು ತನುನಿಧಿ ತಂದೂ3ರವಿತನಯನ ಭೆಟ್ಟಯನು ತಕ್ಕೊಂಡಾ ರಘುರಾಮರ ಕಂಡಾ |ಅವನಂಗುಲಿಯೊಳು ಮುದ್ರಿಯನಿತ್ತಾ ಪ್ರಚಂಡಾಬಹು ಬಾಹೋದ್ದಂಡಾ | ತವಕದಿಅಕ್ಷಯಕುವರನಮರ್ದಿಸಿ ಘವಿ ಘವಿಸುವ ಲಂಕಿಯದಾ ಕೆಂಡಾ4ರಕ್ಕಸರೆಲ್ಲರ ಕುಕ್ಕಿರಿದನು ಅದ್ಭುತಾ ಜಗಕಪಿ ಪ್ರಖ್ಯಾತಾ |ಮಿಕ್ಕರಗಳನೆಲ್ಲ ಪಾಡುವೆ ರಾಮನ ದೂತಾ ಶರಣರ ಸಂಪ್ರೀತಾಉಕ್ಕಿ ಹರುಷದಲಿ ಬೇಗ ಬಾರೊ ಬೇಗ ಬಾರೊನೀಲಮೇಘಶ್ಯಾಮಾ ಭಕ್ತರ ಪಾಲಿಪ ಮುಕ್ತರಮಾಡುವ ಶಂಕರನೀತಾ5
--------------
ಜಕ್ಕಪ್ಪಯ್ಯನವರು
ಎಂದಿಗಾದರು ನಿನ್ನ ನಂಬಿದೆ - ಚೆಲ್ವ - |ಮಂದರಧರ ಮದನಜನಕ |ವೃಂದಾವನಪತಿ ಗೋವಿಂದ ಪತರುಣಿಯ ಮಾನವನು ಕಾಯ್ದೆ - ಅಂದು - |ದುರುಳ ತನ್ನ ಸುತನ ಕೊಲಲು ಒದಗಿ ಕಂಬದಿ ಬಂದೆ ||ಕರುಣದಿ ಶಿಲೆಯನುದ್ಧರಿಸಿದೆ ತನ್ನ - |ಮರಣಕಾಲಕೆ ನಾಗರನೆಂದರೆ ಮುದದಿಮುಂದೆ ನಿಂದೆ ಗೋವಿಂದ 1ಧ್ರುವ - ವಿಭೀಷಣ - ರುಕ್ಮಾಂಗದರು ನಿನ್ನ ವರಿಸಲು |ಆ ವ್ಯಾಸ ನಾರದಬಲಿ ಮುಖ್ಯ ಕಲಿಪಾರ್ಥನು ||ಪವನಸುತನು ಅಂಬರೀಷನು - ತ್ರೈ - |ಭುವನವರಿಯೆ ನಿನ್ನ ನೆನೆಯೆ ಪದವನಿತ್ತೆ ಗೋವಿಂದ 2ದುರಿತ ವಿನಾಶ ದೋಷದೂರನೆ - ಜಗದ್ - |ಭರಿತ ದೈತ್ಯದಳಸಂಹಾರ ಶರಣು ಚಾರುಚರಿತ್ರ ||ಕರಿವರದ ಪುರಂದರವಿಠಲ ಕಾಯೊ |ಶರಣಹೃದಯಸರಸಿಜ ಪರಮಪಾವನ ಗೋವಿಂದ3
--------------
ಪುರಂದರದಾಸರು
ಏನೆಂತೊಲಿದೆ ಇಂತವರಂತೆ ಕೆಡುಬುದ್ಧಿ - ಎನ್ನೊಳಿಲ್ಲಗುಣ |ಹೀನರಲ್ಲದ ದೀನ ಜನರ ಪಾಲಿಪ ಬುದ್ಧಿ ನಿನ್ನೊಳಿಲ್ಲ ಪತರಳ ಪ್ರಹ್ಲಾದನಂದದಿ ನಿನ್ನಯರೂಪ ಕೆಡಿಸಲಿಲ್ಲನರನಂತೆ ತನ್ನ ಬಂಡಿಯ ಬೋವನ ಮಾಡಿ ಹೊಡಿಸಲಿಲ್ಲ ||ಸುರನದೀಸುತನಂತೆ ಪಣೆಯೊಳು ಬಾಣವ ಸಿಡಿಸಲಿಲ್ಲದೊರೆ ಅಂಬರೀಷನಂದದಿ ಈರೈದು ಜನ್ಮವ ಪಡಿಸಲಿಲ್ಲ 1ನಾರದನಂತೆ ಕಂಡವರ ಕೊಂಡೆಯವ ನಾ ಪೇಳಲಿಲ್ಲ |ಪರಾಶರನಂತೆ ನದಿಯೊಳಂಬಿಗ ಹೆಣ್ಣ ಕೊಡಲಿಲ್ಲ ||ಆ ರುಕುಮಾಂಗದನಂತೆ ಸುತನ ಕೊಲ್ಲಲು ಧೃಢಮಾಡಲಿಲ್ಲಮಾರುತನಂತೆ ನೀನುಣುತಿದ್ದ ಎಡೆಯ ಕೊಂಡೋಡಲಿಲ್ಲ 2ವಿದುರನಂತೆ ನನ್ನ ಸದನವ ಮುರಿದು ನಾ ಕುಣಿಯಲಿಲ್ಲಮದಕರಿಯಂತೆ ಮಕರಿಯ ಬಾಯೊಳು ಸಿಕ್ಕಿ ಒದರಲಿಲ್ಲ ||ಹೆದರದೆ ಬಲಿಯಂತೆ ಭೂಮಿಯ ಧಾರೆಯನೆರೆಯಲಿಲ್ಲಸದರ ಮಾತುಗಳಾಡಿ ಶಿಶುಪಾಲನಂತೆ ನಾ ಜರೆಯಲಿಲ್ಲ3ಸನಕಾದಿ ಮುನಿಯಂತೆಅನುದಿನ ಮನದೊಳು ಸ್ಮರಿಸಲಿಲ್ಲಇನಸುತ ಕಪಿಯಂತೆ ವಂಚಿಸಿ ವಾಲಿಯ ಕೊಲಿಸಲಿಲ್ಲ ||ಬಿನುಗು ಬೇಡತಿಯಂತೆ ಸವಿದುಂಡ ಹಣ್ಣ ನಾ ತಿನಿಸಲಿಲ್ಲಘನ ಅಜಾಮಿಳನಂತೆ ಸುತನ ನಾರಗನೆಂದು ಕರೆಯಲಿಲ್ಲ4ವರ ಶೌನಕನಂತೆನಿತ್ಯ ಸೂತನ ಕಥೆ ಕೇಳಲಿಲ್ಲಪಿರಿದು ತುಂಬುರುನಂತೆ ನಾಟ್ಯ - ಸಂಗೀತವ ಪೇಳಲಿಲ್ಲ ||ಉರಗಾಧಿಪತಿಯಂತೆ ಉದರದೊಳಿಟ್ಟು ನಾ ತೂಗಲಿಲ್ಲಪಿರಿದು ಕುಚೇಲನ ತೆರನಂತೆ ಅವಲಕ್ಕಿ ಈಯಲಿಲ್ಲ 5ಭೃಗುಮುನಿಯಂತೆ ಗರ್ವದಿ ನಿನ್ನ ಎದೆಯನು ಒದೆಯಲಿಲ್ಲಅಗಣಿತ ಮಹಿಮ ನೀನಹುದೆಂದು ಧ್ರುವನಂತೆ ಪೊಗಳಲಿಲ್ಲ ||ಖಗರಾಜನಂತೆ ನಿನ್ನನು ಪೊತ್ತು ಗಗನದಿ ತಿರುಗಲಿಲ್ಲಅಗಜೆಯರಸನಂತೆ ಮಸಣದಿ ರಾಮನ ಸ್ಮರಿಸಲಿಲ್ಲ 6ಅವಹಿತದಲಿ ವಿಭೀಷಣನಂತೆ ಅಣ್ಣನ ಕೊಲಿಸಲಿಲ್ಲಯುವತಿ ದ್ರೌಪದಿಯಂತೆ ಪತ್ರಶಾಕವನುಣಬಡಿಸಲಿಲ್ಲ ||ತವೆ ಪುಂಡಲೀಕನಂದದಿ ಇಟ್ಟಿಗೆಯ ಮೇಲೆ ನಿಲಿಸಲಿಲ್ಲ ದೇವಇವರಂತೆಪುರಂದರ ವಿಠಲ ನಿನ್ನಯ ಕೃಪೆಯೆನ್ನೊಳಿಲ್ಲ7ಅಂಕಿತದಲ್ಲೂ ಇವೆ.)
--------------
ಪುರಂದರದಾಸರು