ಒಟ್ಟು 2104 ಕಡೆಗಳಲ್ಲಿ , 102 ದಾಸರು , 1734 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೋಪಾಲಕೃಷ್ಣರಾಯ ತಾಪತ್ರಯಗಳೆಲ್ಲ ನೀ ಪರಿಹರಿಸು ಜೀಯ್ಯಾ ಪ ವಿದ್ಯಾಶ್ರೀ ಸಿಂಧುತೀರ್ಥ ಶುದ್ಧ ಪದ್ಧತಿಯಿಂದ ಶುದ್ಧ ಪೂರ್ವಕ ನಿನ್ನ ಭಜಿಪೆನು ಅನುದಿನ ಮುದ್ದುಮೋಹನ ನೀನು ತಿದ್ದಿ ಸರ್ವರ ಹೃದಯ ಬದ್ಧನಾಗಿರುತಿ ಪ್ರಸಿದ್ಧ ಮೂರುತಿ ವೇಣು 1 ಸುರಪನ ಗರ್ವವ ಹರಣವ ಮಾಡಿ ನೀ ವರವಿತ್ತೆ ಕಾಳಿಂಗ ಉರಗನಿಗೆ ಸುರರ ವೃಂದಗಳೆಲ್ಲ ಪೊರೆವುತ ಸರ್ವದಾ ವರ ಕಲ್ಪತರುವೆಂದು ಮೆರೆಯುವಿ ಧರೆಯೊಳು 2 ಗಿರಿಯನು ಪೊತ್ತು ನೀ ಪೊರೆದಿಹ ತುರುಗಳ ಮರೆಯೋದು ಯನ್ನನು ಸರಿಯೆನೊ ಹರಿಯೆ ಶರಣ ರಕ್ಷಕ ಬೇಗ ಕರುಣಾಳು ಕಾಯಯ್ಯ ಶ್ರೀವತ್ಸಾಂಕಿತನಾದ ವರಜಾರಚೋರ ವೇಣು 3
--------------
ಸಿರಿವತ್ಸಾಂಕಿತರು
ಗೋಪಾಲವಿಠಲ ನೀ ಕಾಪಾಡೊ ಎನ್ನನುಅಪಾರ ಜನುಮದಿ ಪೊಂದಿ ಇಪ್ಪೆ ನಿನ್ನ ಪ. ಉದಿತ ತರಣೀನಿಭ ಪದಪದ್ಮ ನಿನ್ನಯಹೃದಯದೊಳಗಿರಿಸಿ ಮುದದಿಂದ ಧ್ಯಾನಿಪಸದಯುಗಳ ಪಾದಪದುಮಸೇವೆಯನುಒದಗಿ ಪಾಲಿಸೊ ಶಶಿವದನ ಸಂ(ಕಂ)ಸದನನೆ 1 ವಾಸುದೇವನೆ ಎನ್ನ ದೋಷಿಯೆಂತೆಂದರೆಆಸರಿನ್ನ್ಯಾರು ನಿನ್ನ ದಾಸರದಾಸಗೆದಾಸವಿನುತ ಹೀಗುದಾಸೀನ ಮಾಡಲುದಾಸಜನರು ನಿನ್ನ ಲೇಶವು ಮೆಚ್ಚರು 2 ಪಿರಿಯರೆಲ್ಲರು ನಿನ್ನ ಚರಣವ ಪೂಜಿಸಿಪರಮಾನುಗ್ರಹ ಪರಿಪಾಲಿಸಿಪ್ಪರೆನ್ನನಿರುತದಿಬೇಡುವೆ ಗೋಪಾಲವಿಠಲ ಶ್ರೀಲೋಲನೆದೊರೆಯೆ ನಿನ್ನ ಮೂರುತಿ ಬರವೆನ್ನ ಮನಸಿಗೆ 3
--------------
ಗೋಪಾಲದಾಸರು
ಗೋಪಿ ಇವನು ನಿನ್ನಾ ಪ ಜಗವ ನಿರ್ಮಿಸಿ ಪಾಲಿಸಿ ಅಳಿಸುವ ಅಗಣಿತ ಸುಗುಣಾ ಭರಣನೆ ಇವನು ಅ.ಪ ಬೆಣ್ಣೆಯ ಕದ್ದನು ಸಣ್ಣವನಿಹ ಬಹು ಚಿಣ್ಣರ ಕೂಡುತ ಗೋಗಣ ಕಾಯುವ ಮನ್ಮನ ಪುಥ್ಥಳಿ ಕಳಿಸುವದಾಗದು ಎನ್ನುವ ನುಡಿಗಳ ಬದಿಗಿಡು ತಾಯಿ ಉಣ್ಣುತ ಉಣ್ಣುತ ಮೊಲೆಯನು ಕೊಂದಿಹ ಉನ್ನತ ರಕ್ಕಸಿ ಪೂತಣಿಯನ್ನಿವ ಮಣ್ಣನು ಕಂಡರು ಕಂಸನದೂತರು ಪೂರ್ಣಾನಂದನು ಸರಿ ಇವನಮ್ಮ 1 ಜಾರ ಚೋರ ಸುಕುಮಾರನು ಸುಂದರ ನಾರೇರ ವಲಿಸಿ ಸೇರಿದ ನಿಶಿಯಲಿ ಪೋರನೆಂಬ ಮನ ದೂರವಗೈದುಗ ಭೀರ ಮಹಿಮ ಜಗ ಸಾರನೆಂದರಿಯೆ ಭಾರಿಗಿರಿಯನೆತ್ತಿ ಊರಿಗೆ ಊರನು ಸೇರಿಸಿ ಪೊರೆದಿಹಪಾರಮಹಿಮ ಜಂ ಭಾರಿದರ್ಪಹರ ಪೋರನೆ ಬಿಡುಬಿಡು ನಿಗಮ ಸಂಚಾರನೆ ಖರೆಯೆ 2 ಕಾಲ್ಗಳು ಸೋಕಲು ಶಕಟನು ಬಿದ್ದನು ಶೀಳುತ ಕೊಕ್ಕನು ಬಕನಂ ಕೊಂದನು ಕಾಳಿಯ ತುಳಿಯುತ ಗರ್ವವ ನಿಳಿಸಿದ ಲೀಲಾಜಾಲದಿ ಜ್ವಾಲೆಯ ನುಂಗಿದ ಬಾಲರು ಕೇಳಲು ಆಲಯತೋರಿದ ಪಾಲಿಸಿ ವರುಣನ ತಂದೆಯ ಕಂದನ ಲೋಲನೆ ಸರಿ ಜಗಮೂಲನು ಕೇಳೆ 3 ನೀರಜ ನಾಭಗೆ ಗೊಲ್ಲತಿಯ ಗಣ ಬೀರಲ್ ಸಾಧ್ಯವೆ ಮೋಹವ ನೆಂದಿಗು ಶ್ರೀರತಿದಾಯಕ ಕೊಳ್ಳುವನೇ ರತಿ ಭವ ತಾರಕ ಶುಭ ಶೃಂಗಾರ ಪೂರ್ಣ ಪರಿವಾರದಭೀಷ್ಠವ ಖರೆ ಭೂರಿದಯಾಮಯ ನಾರಾಯಣನಿವ ದೋಷ ವಿದೂರ 4 ಮೆಲ್ಲಗೆ ಬಾಯೊಳು ಎಲ್ಲವ ತೋರಿದ ಮಲ್ಲನು ಸರ್ವರ ವಲ್ಲಭ ಸಿದ್ಧವು ಗೊಲ್ಲನ ವೇಷದಿ ಇಲ್ಲಿಹನಮ್ಮ ಇಲ್ಲವೆ ಸಮರಿವಗೆಲ್ಲಿಯ ಸತ್ಯ ಮಲ್ಲರ ಮರ್ದಿಸಿ ಕೊಲ್ಲುತ ಕಂಸನ ನಿಲ್ಲಿಸಿ ಧರ್ಮವ ಕಾಯುವ ನಮ್ಮ ಬಲ್ಲಿದ “ಶ್ರೀಕೃಷ್ಣವಿಠಲ” ಬೇಗನೆ ನಿಲ್ಲಿಸಿ ಕೊಳ್ಳದೆ ಕಳುಹೇ ತಾಯಿ 5
--------------
ಕೃಷ್ಣವಿಠಲದಾಸರು
ಗೋಪಿ ದಾನವ ಕೋರುವಿ ಎಂಥಾ ಕೂಸಮ್ಮ ಶ್ರೀ- ಕಾಂತ ಸುಜನಮಾನಸಂತರಂಗದಿ ನಿತ್ಯ ನಿಂತು ನಲಿವ ಕೃಷ್ಣ ಪ. ಕ್ಷೀರ ವಾರಿಧಿಯಲ್ಲಿದ್ದನಾದರು ಬೆಣ್ಣೆ ಕ್ಷೀರವ ಕದ್ದು ಮೆದ್ದ ತೋರುವ ತತ್ವ ಶುದ್ಧ ಆದರು ಬಹು ಕ್ರೂರ ರಕ್ಕಸರ ಗೆದ್ದ ನೀರಜಾಲಯ ರಮಣ ಗೋಕುಲ ನಾರಿಯರ ಮೇಲ್ ಬಿದ್ದು ರಮಿಸಿದ ವಾರಿಜಾಸನ ವಂದ್ಯ ಸುರವರ ವೈರಿ ಶಕಟನ ಕಾಲಲೊದ್ದ 1 ಸಂಸಾರಾರ್ಣವ ತಾರಕನಾದರು ಪಾಂಡು- ವಂಶ ರಕ್ಷಣಕಾರಕ ಹಂಸಾದ್ಯ ಸುರಮಾರಕನಾದರು ನಾನಾ ಹಿಂಸಾದೋಷ ನಿವಾರಕ ಕಂಸಮರ್ದನ ವೈನತೇಯ ಶು- ಪಾದ ಕಮಲ ತಿ- ಲಾಂಶ ದೋಷರಹಿತ ಗೋಪಾ- ಲಾಂಶವೇರಿ ವಿನೋದಗೊಳುತಿಹ 2 ಶುದ್ಧ ಪೂರ್ಣಾನಂದ ಸುಜನಾರ್ತಿವಾರÀ ನಿ- ಷಿದ್ಧ ಕಲುಷದೂರಾ ಕ್ರುದ್ಧ ಖಳವಿದಾರ ಕಿಂಕರ ಪರಿಚರ ಸಿದ್ಧಾಂತ ಶ್ರುತಿ ಶೇಖರಾ ಬುದ್ಧ ರೂಪದಿ ಭೂತಪತಿಗೆ ಸ- ಮೃದ್ಧಿ ಜಯಪಾಲಿಸಿ ಸುರೋತ್ತಮ ಸಿದ್ಧವಂದಿತ ಶೇಷಗಿರಿಯೊಳ- ಗಿದ್ದು ದಾಸರನುದ್ಧರಿಸುತಿಹ 3
--------------
ತುಪಾಕಿ ವೆಂಕಟರಮಣಾಚಾರ್ಯ
ಗೋಪಿ ಪ ತನ್ನ ಬಳಿಗೆ ಬಾರೆನ್ನುತಲೋಡಿದ ಅ.ಪ ನೊರೆ ನೊರೆ ಹಾಲನು ಸುರಿಸುರಿದು ತನ್ನ ಕಿರು ಬೆರಳಾಡಿಸಿ ಕೊರಳನು ಕೊಂಕಿಸಿ ಪರಿ ಹಾಸ್ಯ ಕುಚೋದ್ಯವ ಮಾಡುತ ಮುರಳಿಯನೂದಿ ಬಾರೆನ್ನುತ ಬಂದನೆ1 ಬೆಣ್ಣೆಯ ಕದ್ದು ಕೈ ಸುಣ್ಣವಾಯಿತು ಎಂದು ಕಣ್ಣು ಬಾಯಿಗಳಿಂದ ಸನ್ನೆಯ ಮಾಡಿ ಹಣ್ಣನು ತಿನ್ನುವೆ ಎನ್ನುತಲೋಡಿದ ಚಿಣ್ಣನು ಮಾಂಗಿರಿರಂಗನು ನೋಡೇ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಗೋಪಿ ಹಾಡಿ ದಣಿಯಳೂ ಪ ನೋಡಿ ಹಾಡಿ ಹೊಗಳಿ ಕೃಷ್ಣಗೆ ಮಾಡಿ ಮಾಡಿ ಸಿಂಗರವನು ಅ.ಪ ಮಣ್ಣತಿಂದು ಚಪ್ಪರಿಸುವ ಚಿಣ್ಣನೆಡೆಗೆ ಓಡಿಬಂದು ಸಣ್ಣಬಾಯ ಬಿಡಿಸಿ ವಿಶ್ವವ ಕಣ್ಣಿನಿಂದ ಕಂಡು ನಲಿದು 1 ವಿಕಳೆಯಸುವ ಹೀರಿ ಕುಣಿದು ಶಕಟಖಳನನೊದ್ದು ಕೊಂದು ಬಕನ ಸೀಳಿ ಫಣಿಯ ತುಳಿದ ವಿಕಸಿತಾಂಗನ ಹಾಡಿ ಹೊಗಳಿ 2 ಗಿರಿಯನೆತ್ತಿ ಬೆರಳಿನಿಂದ ಕರದಮುರಳಿನಾದದಿಂದ ಧರೆಯ ದಿವಿಯಗೈದ ಮಾಂಗಿರಿಯರಸರಂಗನಂಗವ ನೋಡಿ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಗೋಪಿಯ ಕಂದ ಇಗೋ ಬಂದ ತಾಪಸರೆಡೆಯಿಂದ ಗೋವಿಂದ ಪ ಆಪನ್ನರ ಕರೆ ಕೇಳಿಸಿದಾಕ್ಷಣ ಗೋಪಿಯರೆಡೆಯಿಂದ ಪರಿಪರಿದೋಡಿ ಅ.ಪ ಹಣೆಯ ಕಸ್ತೂರಿಯು ಥಳಥಳಿಸುತಿರೆ ಮಣಿ ಮಾಲೆಗಳೆಲ್ಲಾ ಮಿನುಗಾಡುತಿರೆ ಕಿಣಿ ಕಿಣಿ ನಾದದ ಗೆಜ್ಜೆ ನುಲಿಯುತಿರೆ ಫಣಿಪತಿಶಯನ ಮಾಂಗಿರಿಯೆಡೆಯಿಂದ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಗೋಪೀಮಾನ ರಂಜನ ಶ್ರೀಪತಿ ಕರುಣಾಳು ವ್ಯಾಪಿಸಿಕೊಂಡಿಹ ಮಾಮಕ ತಾಪವ ವೋಡಿಸು ಸುಲಭದಿ ಪ. ಸೌಂದರ್ಯಾಮೃತ ಸಾರಾನಂದಾತ್ಮಕ ದೇಹ ವೃಂದಾರಕ ಗಣ ನಯನಾ ನಂದನ ನಿಖಿಳಾತ್ಮಾತ್ರಯ ನಿತ್ಯಾವ್ಯಯ ಸತ್ಯಾವರ ಭಕ್ತಾಸ್ಪದ ಸುಮುಖ 1 ಸುಭಗಾಂಬುದನಿಭ ಗೋವರ ಋಭುಗಣನುತ ಚರಣಾ ಇಭರಾಟ್ಕøತ ಕರುಣಾಖಿಳ ವಿಭವಾಶ್ರಯ ತರುಣಿಗಣ ಶುಭ ಸಂಚಯ ಕರುಣಾ ನಿಜಭರಣಾದೃತ ಕರಣಾ 2 ಶೃಂಗಾರ ವಿಲಾಸಿನಿಜಾಪಾಂಗಾಹೃತ ಗೋಪಕತ ಸ್ವಂಗೀಕೃತ ಪ್ರೇಮಭವಾಲಿಂಗಿತ ಶುಭಮೂರ್ತಿ ಅಂಗಜಜನಕಾದ್ಭುತ ಸಾರಂಗ ಮಮತ ಶೇಷಗಿರಿ ಶೃಂಗಾಧಿಷ್ಟಿತ ಕರುಣಾಪಾಂಗವ ದಯಮಾಡೆನುತಲಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಗೋವಿಂದ ಗೋವಿಂದ ಗೋಕುಲಾನಂದ ದೇವೇಶ್ವರಾನಂದ ಪಾದಾರವಿಂದ ಪ ಲಾವಣ್ಯ ಪರಿಪೂರ್ಣ ಸಚ್ಚಿದಾನಂದ ಶ್ರೀವೇಣುಗೋಪಾಲ ಶೌರೇ ಮುಕುಂದ ಅ.ಪ ನೀನೇ ಗತಿ ನೀನೇ ಮತಿ ನೀನೆನ್ನ ಪ್ರೇಮಾ ನೀನೆನ್ನ ತಾಯ್ತಂದೆ ಲೋಕಾಭಿರಾಮಾ ನೀನೆನ್ನ ಕರುಣದಲಿ ಕಾಯೋ ಶ್ರೀರಾಮ 1 ಮಂಗಳಾಂಗನು ನೀನು ಕಮಲಾಯತಾಕ್ಷ ಮಂಗ ಮೂಢನು ನಾನು ಸಿರಿದೇವಿ ಪಕ್ಷ ಶೃಂಗಾರ ಪೂರ್ಣನೀ ಕಾಮ್ಯಾರ್ಥದಕ್ಷ ಮಾಂಗಿರಿಯ ರಂಗ ಭಕ್ತಾಳಿ ಸಂರಕ್ಷ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಗೋವಿಂದಂ ಭಜರೇ ಮಾನಸ ಪ ದೇವ ದೇವೋತ್ತಮ ಭಾವುಕ ಫಲದಂ ಅ.ಪ ಶರಧಿ ಗಂಭೀರಂ ಪರಮೋದ್ಧಾರಂ ಪುಣ್ಯ ಶರೀರಂ ಧರಣಿಪ ಬಾಲಂ ಮುರಳೀಲೋಲಂ ಸುರರಿಪು ಕಾಲಂ ಗೋಕುಲ ಬಾಲಂ 1 ಪಾವನನಾಮಂ ಭವರಣ ಭೀಮಂ ರವಿಕುಲಸೋಮಂ ಅವನಿಜಪ್ರೇಮಂ ಕುವಲಯಶ್ಶಾಮಂ ಭುವನಾಭಿರಾಮಂ ದಿವಿಜಾನುತ ಮಾಂಗಿರಿವರ ಧಾಮಂ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಗೌರೀಪ್ರಿಯ ಹರ ಗೌರೀಪ್ರೀಯ ಹರ ಗೌರೀಪ್ರಿಯ ಹರ ಗಂಗಾಧರ ಪ ನಿತ್ಯ ನಿರಾಮಯ ಪರ ಸ್ವಪ್ರಕಾಶ 1 ನಿರ್ಮಿತಚಿಚ್ಛಕ್ತಿ ಪರಿಣಾಮಬ್ರಹ್ಮಾಂಡ ನಿರ್ಮಲ ನಿಗಮಾಂತವೇದ್ಯ ಸ್ವಸಾಧ್ಯ 2 ಬಾಲೇಂದುಶೇಖರ ಭಕ್ತ ದುರಿತಹರ ಫಾಲಾಕ್ಷ ಫಣಿಹಾರಯುಕ್ತಶರೀರ 3 ಇನಕೋಟಿಸಂಕಾಶ ಕನಕಕುಂಡಲ ದೇವ ವಿನುತ ವಿರೂಪಾಕ್ಷ ವಿಬುಧೌಘ ಪಕ್ಷ 4 ದುರಿತ ದಿವಾಕರ ಭವ ಭಯ ಪರಿಹರ ಭವದೂರ ಧೀರ 5 ಪರಶು ಮೃಗಾಭಯ ವರದ ಚತುರ್ಭಜ ಪರಮ ಫವನ ಶೀಲ ಪುಣ್ಯ ವಿಶಾಲ 6 ಶರಣಾಗತ ತ್ರಾಣ ನಿಜಕರ್ಮ ನಿರ್ಲೇಪ ಚಾಪ ತ್ರಿಭುವನ ದೀಪ 7 ಮಂದರಗಿರಿ ವಾಸ ಮನ್ಮಥತನು ನಾಶ ನಂದಿವಾಹನ ಭೃಂಗಿನಾಟ್ಯ ವಿಲಾಸ 8 ಮುನಿವಂದ್ಯ ಮೃದುಪಾದ ಘನ ಕಕುದ್ಗಿರಿವಾಸವನಜಾಕ್ಷ ತಿರುಪತಿ ವೆಂಕಟರೂಪ 9
--------------
ತಿಮ್ಮಪ್ಪದಾಸರು
ಘಣಿ ಭೂಷಣಂ ಮುನಿ ತೋಷಿಣಂ ಪ ಮಣಿ ಭೂಷಣಂಅ.ಪ ಸುಜನಾಪ ಮಾಂಗಿರಿ ಶೋಭಿತಂ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಘನಲೀಲಾಕುಲ ದೇವಕಿ ಬಾಲಾ ಪ ಹೀನನ ಮೊರೆ ಕಿವಿಗೆ ಬೀಳದಲಾ ಸ್ವಾಮಿ ಅ.ಪ ಬಾಲಕ ನೆನೆದುದ ಆಲಿಸಿದೈ ತಂದೆ ಖೂಳನ ನುಡಿ ಕಿವಿಗೆ ಕೇಳಿಸದೆ ದೇವಾ 1 ಹಾಡಲು ಅರಿಯೆ ಕೊಂಡಾಡಲು ಅರಿಯೆನು ನೋಡುವೆಯೋ ನದಿಗೆ ದೂಡುವೆಯೋ ದೇವಾ 2 ಚರಣ ಸರೋಜದ ದರುಶನಗೈಸೋ ಕರವ ಮುಗಿವೆ ಮಾಂಗಿರಿ ರಂಗಾ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಚಂಚಲಿಸಲು ಕೊಡದಿರು ನೀನೆನ್ನ ಮನಕೆ ಶ್ರೀಹರಿಯೇ ಪ ವಂಚಿಸುತಿಹುದೀ ಮನವು ಸ್ಥಿರಗೊಳಿಸಲರಿಯೇ ಅ.ಪ. ನಿನ್ನ ಪದದಿ ಏನಿರಿಸೆ ಇನ್ನು ಭಜಿಸಬೇಕೆಂದರೆಭಿನ್ನ ದೆಸೆಗೆ ಓಡಿಸದೆ ಅನ್ಯವನ್ನೆ ಚಿಂತಿಸುವುದು 1 ಕಡಲ ಕಡಿಯುವಾಗ ಗಿರಿಯು ನಡುಗದಂತೆ ಗಟ್ಟಿ ನಿಂತುಹಿಡಿದ ತೆರದೊಳಡಲ ಹೊಕ್ಕು ಜಡಿದು ಎನ್ನ ಮನದಿ ನಿಂದು 2 ಸದಾ ಭಜಿಸುವಂತೆ ಮಾಡೋ ಗದುಗು ವೀರನಾರಾಯಣ 3
--------------
ವೀರನಾರಾಯಣ
ಚಂದಿರವದನೆಯ ತವ ಸನ್ನಿಧಿಗೂ ವಂದಿಪೆ ನಿನ್ನ ಪಾದಾಂಬುಜಗಳಿಗೂ ಪ ಬೇಡುವೆ ಗೋವಿಂದನ ರಾಣಿ [ಕಲ್ಯಾಣಿ] ಅ.ಪ ನನ್ನ ಕರೆಗೆ ಓ ಎನ್ನುವರಿಲ್ಲ ನನ್ನಲ್ಲಿ ಕನಿಕರ ತೋರುವರಿಲ್ಲ ಪನ್ನಗಶಯನ ತಾ ಎನ್ನ ನೋಡುತೆ ಕಣ್ಣ ಸನ್ನೆಯ ಮಾಡಿ ಹೋಗೆನ್ನುವನಮ್ಮಾ 1 ಅಪ್ಪನು ನಿನ್ನ ಮಾತೊಪ್ಪುವನಮ್ಮ ತಪ್ಪನು ಮನ್ನಿಸಲೊಪ್ಪುವನಮ್ಮಾ ತಪ್ಪು ನೆಪ್ಪುಗಳ ನಾನೊ[ಪ್ಪುವೆ ಬೇ]ಗ ನೀ ನಪ್ಪಣೆಗೊಡಿಸು ರಂಗಪ್ಪನನೊಲಿಸು2 ಶೌರಿಯ ಕೃಪೆಯವತಾರೆ ನೀನೆಂಬುದ ನಾರದನೆಲ್ಲೆಡೆ ಸಾರುತಲಿಹನು ಮಾರಜನಕ ಮಾಂಗಿರಿರಂಗನು ನಿನ್ನ ಕೋರಿಕೆಗನುಮತಿ ತೋರುವನಮ್ಮಾ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್