ಒಟ್ಟು 39 ಕಡೆಗಳಲ್ಲಿ , 17 ದಾಸರು , 35 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಿಕ್ಕದಿರು ನಾರಿಯರ ಕಡೆಗಣ್ಣಿಗೆ ಮನ ವಿಕ್ಕಿದರೆ ಇಹಪರದ ಗತಿ ಕೆಡಗು ನಿನಗೆ ಪ ಹೇಸದೇತಕೆ ಮನಸು ಪರದಾರ ಪರದ್ರವ್ಯ ದಾಸೆಯೊಳು ಹಗಲಿರುಳು ಕುದಿದು ಕುದಿದು ಘಾಸಿಯಾಗುತ ತೊಳಲಿ ಬಳಲಿ ಯಮನರಕದೊಳು ವಾಸವನು ಮಾಡದಿರು ಎಲೆ ಮೂಢ ಮನುಜ 1 ಮೊಲೆಯೆ ಮಾಂಸದ ಚೆಂಡು ಮೊಗವು ಶ್ಲೇಷ್ಮೆಯಗೂಡು ಬಳಸಿ ನೋಡಿದರಿದಕೆ ಹುರುಳಿಲ್ಲವೋ ಒಳ ಹೊರಗು ಹೊಲಸು ಹೆಬ್ಬಡಿಕೆಗಳು ವಸನದಲಿ ಬೆಳಗುವಳು ತಲೆ ತುರಿಸಿ ಸಿಲುಕದಿರು ಕಂಡ್ಯಮನುಜ 2 ವಿಧಿ ಲಿಖಿತ ಸರಿಗು ಇಹಪರ ಕೆಡಗು ಪರವಧುವಿನೊಳು ಮನವ ಹರಿಸಬೇಡ ತೊರೆದಿವರ ಮರುತಸುತ ಕೋಣೆ ಲಕ್ಷ್ಮೀಪತಿಯ ಸಾಯುಜ್ಯ ಪದವಿಯನು 3
--------------
ಕವಿ ಪರಮದೇವದಾಸರು
ಇವಗೇಕೆ ಪರಿಮಳ ಇವಗೇಕೆ ಶೃಂಗಾರ |ನವನೀತ ಚೋರ ನಾರುವ ಗೊಲ್ಲಗೆಪಹೊಲಸು ಮೈಯವಗೇಕೆ ಹೊಸ ಕಸ್ತೂರಿಯ ಲೇಪ |ತಲೆದೋರದವಗೇಕೆ ದಟ್ಟ ಪುನುಗು |ಬಲು ಕೇಶದವಗೇಕೆ ಬಾವನ್ನದ ಲೇಪ |ಸಲೆಘೋರರೂಪಿಗೇಕೆ ನೊಸಲ ಸಾದು 1ತುಲಸಿಮಾಲೆಯ ಧರಿಸಿದವಗೇಕೆ ಜವ್ವಾಜಿ |ಕೊಲೆಗಡುಕಗೀಕೆ ಕುಂಕುಮತಿಲಕ ||ಅಲೆದಾಡುವವಗೇಕೆ ಅಂಗರಾಗದ ಸುಖ|ಕಳವು ಮಾಡುವವಗೇಕನಂಗ ಸೊಬಗು 2ಪರಸತಿಯ ಬಯಸುವಗೆ ಪನ್ನಗಶಯನವೇಕೆಹರಿದಾಡುವನಿಗೇಕೆ ಅಡಪ - ಡವಿಕೆ ||ಸಿರಿದೇವಿ ಶೃಂಗಾರಗೈದು ವರಿಸಿದ ಬಳಿಕ |ಧರೆಗಧಿPನಾದನೀಪುರಂದರ ವಿಠಲ3
--------------
ಪುರಂದರದಾಸರು
ವ್ಯರ್ಥ ಆಯು ಕಳೆಯಬ್ಯಾಡಿರೊ ಶ್ರೀಹರಿಯ ಸಂಕೀರ್ತನೆಯ ಮರೆಯಬ್ಯಾಡಿರೊಮೃತ್ಯು ಬಾರದಿರದು ಮುನ್ನೆ ಮನೋನೂರುವರ್ಷಕೆ ಪ.ಹಿಂಡುಹೀನ ಯೋನಿಮುಖದಲಿ ತಾಬಂದು ಬಂದು ಕುಕರ್ಮ ಸವೆಯದಾಯಿತುಕಂಡ ಕುಹಕರ ಕೂಡ ಕೊಂಡಮಾತನಾಡಿ ಯಮದಂಡ ತೆರಬ್ಯಾಡಿ ಕೋದಂಡಕರನ ಹೊಗಳಿರೊ 1ಬಾಲತ್ವವು ಆಟಕಾಯಿತು ಈ ಯೌವನವುಬಾಲೆಯರ ಬ್ಯಾಟಕಾಯಿತುಮ್ಯಾಲೆವಾರ್ಧಕ್ಯಕಂಗಬೀಳೆ ಸೊಪ್ಪಾಗಿ ಹೊಲಸಲದೀಗ ಎಚ್ಚರಿಕೆಯಲ್ಲಿ ಹರಿಯ ನೆನೆಯಿರೊ 2ಹಗಲು ಹಸಿವೆ ತೃಷೆಗೆ ಪೋಯಿತು ಯಾಮಿನಿಯುಮಿಗಲು ಮೀರಿ ಮಧು ಮುಸುಕಿತುಸುಗುಣನಾಗಿ ಭವದ ನಂಬಿಕೆಯನೀಗಿಪ್ರಸನ್ವೆಂಕಟನಗಪತಿಯ ಪಾದಪದ್ಮಯುಗಳವನೆÀ ಕೊಂಡಾಡಿರೊ 3
--------------
ಪ್ರಸನ್ನವೆಂಕಟದಾಸರು
ಸಾಧು ಸಾಧುಗಳೆಂದು ಎಂಬರೆ ನಿಮ್ಮನುಸಾಧುಗಳೇ ನೀವು ಸಾಧುಗಳೇಸಾಧುಗಳಾದರೆ ವಂದಿಸೆ ಎಲ್ಲರುಸಾಧುಗಳೇ ನೀವು ಸಾಧುಗಳೇಪನೀಚನು ಮೇಲಕೆ ಹೊಲಸನೆಸದರೂಚಲಿತನಾಗದವ ಸಾಧುಇನ್ನು ಕೃತಾರ್ಥನು ಪಾವನನಾದೆನುಎನ್ನುತಲಿರುವನೆ ಸಾಧು1ತಾಯಿ ಹತ್ಯವ ಮಾಡೆ ತಾನು ಕಣ್ಣಲ್ಲಿನೋಡೆತಳ್ಳಿಹೋಗದಿಹನೆ ಸಾಧುರಾಯ ಸದ್ಗುರು ಲೀಲೆಯಿದೆನ್ನುತಶಾಂತನಾಗಿರೆ ಸಾಧು2ತನ್ನ ಸತಿಯಳು ತನ್ನಯ ಮುಂದೆ ರಮಿಸಲುತಯಾರಾಗಿಹನವ ಸಾಧುಇನ್ನು ನಾ ಪುರುಷಲ್ಲಸ್ತ್ರೀಯು ತಾನಲ್ಲೆಂದುಸುಮ್ಮನಿರುವನೆ ಸಾಧು3ದೇಹವ ಕೊಯಿದು ಕೊಡೆಂದೆನೆದೇಹವ ಕೊಯ್ದಿಕ್ಕುವನೆ ಸಾಧುಮಹಾ ಸದ್ಗುರುನಾಥನು ದೃಢವನೋಡುವೆನೆಂದು ಮನಮಿಸುಕದಿಹನೆ ಸಾಧು4ಎತ್ತೆತ್ತ ಏಕೋ ದೇವನು ಆಗಿನೋಡುವನು ಸಾಧುಸತ್ಯ ಚಿದಾನಂದ ಸಾಕ್ಷಾತ್ಕಾರಾಗಿಹೆಸತ್ಯದಿಂದಿರುತಿಹ ಸಾಧು5
--------------
ಚಿದಾನಂದ ಅವಧೂತರು
ಹೊರ ಹೋಗಿ ಆಡದಿರೊ ಹರಿಯೆ-|ಎನ್ನ ದೊರೆಯೆ ಪಮನೆಯೊಳಗಾಡುವುದೆ ಚೆಂದ - ನೆರೆ-|ಮನೆಗಳಿಗೇಕೆ ಪೋಗುವೆಯೊ ಮುಕುಂದ ||ವನಿತೆಯರು ಮೋಹದಿಂದ - ನಿನ್ನ |ಮನವಸಹರಿಸಿಕೊಂಬುವರೋ ಗೋವಿಂದ 1ಏನು ಬೇಡಿದರೂ ನಾ ಕೊಡುವೆ-ಕೆನೆ-|ಬೆಣ್ಣೆ ಕಜ್ಜಾಯವ ಕೈಯೊಳಗಿಡುವೆ ||ನಿನ್ನ ಗುಣಗಳನು ಕೊಂಡಾಡುವೆ - ನಿನಗೆ |ಚಿನ್ನ ರನ್ನದ ಅಲಂಕಾರಗಳಿಡುವೆ 2ಹೊಲಸು ಮೈಯವನೆನ್ನುವರೊ-ದೊಡ್ಡ |ಕುಲಗಿರಿಯನ್ನು ಪೊತ್ತವನೆನ್ನುವರೊ ||ಬಲುಕೇಶದವನೆನ್ನುವರೊ-ಆ |ಎಳೆಯನನೆತ್ತಿದ ಕುರೂಪಿಯೆಂಬುವರೊ 3ಭಿಕ್ಷೆಬೇಡಿದೆ ಎಂಬುವರೊ-ಭೂಮಿ |ರಕ್ಷಿಪ ರಾಯರ ಕದಡಿದೆಯೆಂಬುವರೊ ||ಲಕ್ಷ್ಮಿಯ ಕಳೆದೆಯೆಂಬುವರೊ-------ವೈ-|ಲಕ್ಷಣ ಬೆಣ್ಣೆಯ ಕದ್ದೆಯೆಂಬುವರೊ 4ಮಾನಬಿಟ್ಟವನೆನ್ನುವರೊ-ಮಹಾ |ಹೀನರ ಬೆನ್ನಟ್ಟಿ ಹೋದನೆಂಬುವರೊ ||ದಾನವವೈರಿಯೆಂಬುವರೊ-ಸುರ-|ರಾನತ ಪುರಂದರವಿಠಲನೆಂಬುವರೊ 5
--------------
ಪುರಂದರದಾಸರು