ಒಟ್ಟು 39 ಕಡೆಗಳಲ್ಲಿ , 19 ದಾಸರು , 38 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯಲಾರೆನು ಕೃಷ್ಣಕಂಡವರ ಬಾಗಿಲನು |ನಾಯಿ ಕುನ್ನಿಗಳಂತೆ ಪರರ ಪೀಡಿಸುತೆ ಪಉದಯಕಾಲದಲೆದ್ದು ಸಂಧ್ಯಾವಿಧಿಯ ಬಿಟ್ಟು |ಪದುಮನಾಭನ ಪಾದಸ್ಮರಣೆ ಮೊದಲಿಲ್ಲದೆ ||ಮುದದಿ ನಿನ್ನರ್ಚಿಸದೆ ನರರ ಸದವನ ಪೊಕ್ಕು |ಒದಗಿ ಸೇವೆಯ ಮಾಡಿಅವರಬಾಗಿಲನು1ಕಲ್ಲಕರಗಿಸಬಹುದು ಹುರಿಗಡಲೆಯನು ಅರೆದು |ತೈಲವನು ತೆಗೆದಾದರುಣಲು ಬಹುದು ||ಬಲ್ಲಿದವರಾ ಮನಸು ಮೆಚ್ಚಿಸಲರಿಯೆನೈ |ಹಲ್ಲು ಕಿರಿಯುತಲಿ ಹಂಬಲಿಸಿ ಬಾಯ್ಬಿಡುತ 2ಇಂತು ನಾನಾ ಚಿಂತೆಯಲಿ ನಿನ್ನ ನೆನೆಯದೆ |ಭ್ರಾಂತಿಯೆಂತೆಂಬ ಹೆಬ್ಬಲೆಯೊಳು ಸಿಲುಕಿ |ಅಂತ್ಯವ ನಾ ಕಾಣೆ ಆದರಿಸುವರಿಲ್ಲ |ಚಿಂತೆಯ ಬಿಡಿಸಯ್ಯಪುರಂದರವಿಠಲ3
--------------
ಪುರಂದರದಾಸರು
ದುಮ್ಮಿಸಾಲೆನ್ನಿರಣ್ಣ ದುಮ್ಮಿಸಾಲೆನ್ನಿರೊದುಮ್ಮಿಸಾಲೆನ್ನಿ ಪರಬೊಮ್ಮನಾಳು ಮೂರುರೂಪಕಮ್ಮಗೋಲನಳಿದನೊಡೆಯ ನಮ್ಮಗುರುಬಳಗವೆಂದುಪ.ಮುಟ್ಟಿಸೆ ಸುದ್ದಿಯ ರಾಮನಟ್ಟಿದರೆ ರಕ್ಕಸರಕಟ್ಟಿಕುಟ್ಟಿ ಕುಣಪ ಮೆದೆಗಳೊಟ್ಟಿಲೊಟ್ಟಿದದಿಟ್ಟತನದಲ್ಲಿ ಲಂಕಾಪಟ್ಟಣ ಮಂದಿರ ಹೋಳಿಸುಟ್ಟು ಬೊಬ್ಬೆಯಿಟ್ಟ ಜಗಜಟ್ಟಿ ಹನುಮಪ್ಪನ 1ಕುರುಕಂಟಕ ಠಕ್ಕಿಸಿ ಕೊಟ್ಟರಗಿನ ಮನೆಯಲಿಕಾಯಲೊರಗಿದರನುರುಹಿ ನಿಜರ ಹೊರಗೆ ಮಾಡಿದಕುರುಗಣವನಕ್ಕೆ ರಣದಿ ಎರಗಿ ಅಗ್ನಿಯಂತೆ ಹುರಿದಾವರಗದಾಧರ ಭೀಮ ಸಾರ್ವಭೌಮನ 2ಧರೆಸಮಗ್ರರಾಜಕೆಂದು ಅರಸುಪದವಿಗಳು ಸೊಕ್ಕಿಸರಸವಾಡಿ ಸರಿಯನುಡಿಯೆ ಹರುಷತೀರ್ಥರುವಿರಸಪೋಕರಳಿದು ಸರ್ವಹರಿ ಸಮರ್ಪಣೇಕಚಿತ್ತವಿರಿಸಾ ಶ್ರೀ ಪ್ರಸನ್ನವೆಂಕಟರಸ ಸಮತೆನಾಡಿದ 3
--------------
ಪ್ರಸನ್ನವೆಂಕಟದಾಸರು
ದೂರ ನೋಡುವುದುಚಿತವಲ್ಲವೋವಾರವಾರಕೆ ಬಿಡದೆ ತುತಿಪೆ |ಮೀರಿದವನೆ ನಾ ನಿನಗೆ ಪವನ ಪರಾಮಚಂದ್ರನ ಸೇವೆಯ ನಿ-ಷ್ಕಾಮದಿಂದ ಮಾಡಿ ಬಹಳ |ತಾಮಸಜನಂಗಳ ತಂದೆನೀಂ ಮಹಾ ಸಮರ್ಥನೆಂದೇ ||ನೀ ಮನೆಯಿಲ್ಲದವನು ಎಂದೆನೆ | ಕೋತಿರೂಪಈ ಮುಖವು ಹೀಗೆ ಅಂದೆನೆ | ನಗವ ಪೊತ್ತಿಭೂಮಿಯೊಳಗೆ ಕಠಿಣನೆಂದೆನೆ | ಹನುಮನೆ 1ಪೊಕ್ಕು ರಣಕೆ ಹೆಜ್ಜೆಯ ಹಿಂದಕೆಯಿಕ್ಕದೆ ಭುಜವ ಚಪ್ಪರಿಸಲಾಗ |ನಕ್ಕವರ ಬಲ ಹುರಿದು ಹೋಯಿತು |ಅಕ್ಕಟಕ್ಕಟಾ ನೀ ವೀರನೆಂದೇ ||ರಕುತವ ಕುಡಿದ ನೀಚನೆಂದೆನೇ | ತಿಂದು ತಿಂದಿರಕ್ಕಸಿಯನು ಕೂಡಿದನೆಂದೆನೇ | ಒಡಲ ಬಾಕಸೊಕ್ಕು ನಿನಗೆ ಬಹಳವೆಂದೆನೇ | ಭೀಮನೇ 2ತಿಳಿದು ಪ್ರಾಣೇಶ ವಿಠಲನಿಚ್ಛೆ |ಇಳೆಯೊಳುದಿಸಿ ಹಲವು ಮತವ ||ನೆಲಕೆವೊರಿಸಿ ಮರುತ ಮತವ |ನಿಲ ಹಾಕಿದ ಗುರುಗಳೆಂದೇ ||ತುಳುವರಲ್ಲಿ ಪುಟ್ಟಿದೆಯೆಂದೆನೇ | ಬಹಳ ಗುಗ್ಗರಿಮೆಲಿದ ಭೂತ ಮಗುವು ಎಂದೆನೇ |ಭಾರತೀಶಸಲಹೋ ಬಿಡದತಿಮ್ಮನೆಂದರೆ | ಮಧ್ವನೇ 3
--------------
ಪ್ರಾಣೇಶದಾಸರು
ನಗಲುಬಹುದು ನಗಲುಬಹುದುನಗು ನಗು ರಂಗಯ್ಯಜಗದ ಮಾತು ಅ‌ಘದ ಧಾತುಬಗೆಯನರಿತು ಮುಗಳುನಗೆಯ ಪ.ಒರೆದು ಒರೆದು ಭಾರತದರ್ಥಅರಿದುಅರಿದುವರಭಾಗವತಪರಿಯ ಪರಿಯ ಪುರಾಣಶ್ರ್ರುತಿಯಪಾರಾಯಣ ಮಾಡಿ ಕುರುಡಬಧಿರನರರ ತೆರದಿಅರಹುಮರಹುಬೆರೆತು ಬೆರೆತು ತರತಮಿಲ್ಲದೆಹರಿಹರಜರು ಬೇರೆಬೇರಿಲ್ಲೆಂಬಪರಮಪಾತಕರಿರವ ನೋಡಿ 1ಮಕ್ಕಳ ಮಡದೇರಕ್ಕರ ಬಡಿಸಿರೊಕ್ಕದ ಮದದಿ ಸೊಕ್ಕಿ ಸಜ್ಜನರಲೆಕ್ಕಿಸದವಗೆ ರಕ್ಕಸರಂತೆನಿಕ್ಕರ ನುಡಿದು ಕಕ್ಕಸದಿಂದಪುಕ್ಕಟೆ ಪುಣ್ಯದ ಲೆಕ್ಕವ ಕಳೆದುಘಕ್ಕನೆ ಜವನೋರಿಕ್ಕಿದ ಬಲೆಗೆಸಿಕ್ಕಿ ಬಳಲುತ ನರ್ಕವನುಂಬಮೂರ್ಖರ ತಾಮಸಮುಖ್ಯರ ನೋಡಿ 2ಸುಂದೋಪಸುಂದ ಜಲಂಧರ ಕೀಚಕಕಂದರದಶಕ ಸೈಂಧವ ಜಟಾದ್ಯರಂದು ಪರಸ್ತ್ರೀಯ ಸೌಂದರ್ಯಕ್ಕೆ ಮತಿಗುಂದಿ ಲಯವಾದರೆಂದುಕೇಳಿಇಂದುಮುಖಿಯರ ಚಂದಕೆ ಹುಚ್ಚಿಟ್ಟುಕಂದರ್ಪವಿಶಿಖವೃಂದ ವಶಾಗಿ ನೂರೊಂದುಕುಲ ಯಮಮಂದಿರ ಹೊಂದಿಪಮಂದರಮದೋನ್ಮತ್ತಾಂಧರ ನೋಡಿ3ಸುರರ ಸಂಪದ ಪರಮಪದಕೆಕಾರಣವಾಗಿರೆ ಸುರೇತರರೆಲ್ಲಇರುಳೆ ಹಗಲೆ ಸೈರಿಸಲಾರದೆಒರಗಿಹೋದ ವಿವರಕೇಳಿದುರುಳಕೌರವರ್ವರ ಪಾಂಡವರಸಿರಿತಮ್ಮದೆಂದ್ಹುರಿದು ಹೋಗಿರೆಪರರ ದ್ರವ್ಯಕ್ಕೆ ಮರುಗಿ ಬಯಸಿನರರು ಕೆಡುವ ಪರಿಯ ನೋಡಿ 4ಪ್ರತಿದಿನ ನಿನ್ನ ಪ್ರತಿಮ ಪೂಜೆ ಸದ್ವ್ರತವ ಮಾಡಿ ಸತ್ಕಥೆಯ ಶ್ರೀಮಧ್ವಮತ ಮಹಿಮೆಯನತಿಕ್ರಮಿಸಿ ಕುತ್ಸಿತವೆನಿಸುವ ಪಥದಲಿಪತಿತರಾಗಿ ಸದ್ಗತಿಯ ಕಾಣದಚತುರ ಪರಿಯ ಅಮಿತ ಭಕ್ಷಕರಸ್ಥಿತಿಯರಿತು ಮಾನಾಥ ಪ್ರಸನ್ವೆಂಕಟಪತಿಯೆ ನೀ ಮಂದಸ್ಮಿತದಲಿ 5
--------------
ಪ್ರಸನ್ನವೆಂಕಟದಾಸರು
ಮಾಧವಮಧುಸೂದನ- ಯಾದವಕುಲರನ್ನ ಯ-|ಶೋದೆ ಕರೆದಳು ಬಾರೆಂದು- ಮುದ್ದಿಸಿ ಮಗನ ಪಸಂಗಡಿಗರನೆಲ್ಲ ಬಿಟ್ಟು ಬಾರೈ ಚೆಲುವ |ಮುಂಗೈಯವಾಕು ಬೆರಳ ಹೊನ್ನುಂಗರ ||ಝಂಗಿಪ ಹುರಿಗೆಜ್ಜೆ ಉಡೆದಾರವನು ಕಂಡು |ಅಂಗನೆಯರು ನಿನ್ನನೊಯ್ವರೊ ||ಕಂಗಳ ಸಿರಿಯೆ ನೀ ಕಲ್ಪವೃಕ್ಷವೆ ಎಂದು |ಡಿಂಗರಿಗರು ಕಂಡರೆ ಬಿಡರೊ ನಿ- ||ನ್ನಂಘ್ರಿಯ ಮೇಲೆ ನೊಸಲನಿಡುವೆ ಕೃಷ್ಣ |ಕಂಗಳ ಸಿರಿಯೆ ಬಾರೋ- ರಂಗಯ್ಯ 1ಬಾಲಕರೊಡನಾಟ ಸಾಕು ಬಾ ಬಾರೈಯ |ನೀಲಾಂಗ ನಿನ್ನ ಮುಂದಲೆ ಮುತ್ತಿನರಳೆಲೆ ||ಕೀಲುಮಾಗಾಯಿ- ಮಾಣಿಕ ಪುಲಿಯುಗರ ಕಂಡು |ಸೋಲ್ವರೊ ನಿನಗೇಸೋ ಸೋಗೆಯರು ||ಶ್ರೀಲೋಲ ನಿನ್ನಲಿ ಕಂಸನ ತುಂಬಿದೊ-|ಡ್ಡೋಲಗದೊಳು ರಕ್ಕಸರು ಪಂಥವನಾಡೆ ||ವೀಳ್ಯವ ಪಿಡಿದೆ ಕೊಲುವೆನೆಂದು ನಿನ್ನಯ |ಕಾಲಿಗೆ ಎರಗುವೆ ಬಾರೊ-ರಂಗಯ್ಯ 2ಬೊಮ್ಮದ ಮರಿಯೆ ವಿಶ್ವವನೆಲ್ಲ ಹೃದಯದೊ-|ಳೊಮ್ಮೆ ತೋರುವನೆಂದು ಕಂಡು ನಾ ಬಲ್ಲೆ ||ಎಮ್ಮ ಮನಕೆ ಅಹಲ್ಲಾದನು ನೀನೆ |ಉಮ್ಮಯದಿಂ ಭಾಗವತರ ಪಾಲಿಸುತಿಪ್ಪ-||ಗಮ್ಯಗೋಚರ ಸಿರಿಪುರಂದರವಿಠಲ ತೊರೆ-|ದಮ್ಮೆಯ ಕೊಡುವೆನು ಬಾರೋ-ರಂಗಯ್ಯ 3
--------------
ಪುರಂದರದಾಸರು
ಯಮದೂತರು ನರನನು ಎಳೆದೊಯ್ದುದನುಎಲ್ಲರಿಗೆ ಹೇಳುವೆನುಕುಮತಿಯಲಿ ಸದ್ಗುರು ಚರಣವ ಹೊಂದದಕೇಡಿಗಾಗುವ ಫಲಗಳನುಪಮುರಿದ ಮೀಸೆಯಲಿ ಮಸಿದೇಹದಲಿಉರಿಹೊಗೆ ಹೊರಡುವ ಉಸುರಿನಲಿಕರುಳು ಮಾಲೆಯಲಿ ಕೋರೆದಾಡೆಯಲಿಜರೆಮೈ ಹಸಿದೊಗಲುಡುಗೆಯಲಿ1ಝಡಿವ ಖಡುಗದಲಿ ಹೂಂಕಾರದಲಿಕಡಿದವಡೆಯಲಿ ಹುರಿಮೀಸೆಯಲಿಬಿಡಿಗೂದಲಲಿ ಕರದ ಪಾಶದಲಿಸಿಡಿಲ ತೆರೆದ ಬಿಡುಗಣ್ಣಿನಲಿ2ಮಿಡುಕುತ ಸತಿಸುತರನು ಆಪ್ತರನುಹಿಡಿದೊಪ್ಪಿಸುತಿಹ ವೇಳೆಯಲಿಕಡಿಯಿರಿ ಹೊಡಿಯಿರಿ ತಿನ್ನಿರಿ ಎನುತಲಿ ಧುಮುಕಲುಬಿಡುವನು ಪ್ರಾಣವ ಕಾಣುತಲಿ3ಯಾತನೆ ದೇಹವ ನಿರ್ಮಿಸಿ ಅದರೊಳುಪಾತಕಮನುಜನ ಹೊಗಿಸುತಲಿಘಾತಿಸುವ ನಾನಾಬಗೆ ಕೊಲೆಯಲಿಘನನುಚ್ಚು ಕಲ್ಲೊಳಗೆ ಎಳೆಯುತಲಿ4ಈ ತೆರವೈ ಈ ಧರ್ಮ ಶಾಸ್ತ್ರವನೀತಿಯ ತೆರದಲಿ ಮಾಡುತಲಿಪಾತಕವನು ಬಹುಪರಿ ಶಿಕ್ಷಿಪರುದಾತಚಿದಾನಂದನಾಜೆÕಯಲಿ5
--------------
ಚಿದಾನಂದ ಅವಧೂತರು
ವಿವೇಕವೆಂಬ ಘೌಜದು ಮುತ್ತಲುಉಳಿವು ಅಸುರರಿಗಿಲ್ಲಾಯ್ತುಸವರಿಯೆ ಹೋದರು ದುಷ್ಟರು ನುಣ್ಣಗೆಸಂತೋಷವು ನಗರಕ್ಕಾಯ್ತುಪಭೂತ ದಯನು ಶಾಂತಾತ್ಮ ವಿಚಾರನುಬ್ರಹ್ಮನಿಷ್ಠವಿರತೆನಿಸುವನುಖ್ಯಾತಿಗೆ ಬಂದಿಹ ಹಿರಿಯ ವಜೀರರುಕವಿದರು ತನುಪುರದುರ್ಗವನು1ಧಮಧಮ ನಾದದ ನಗಾರಿ ಬಾರಿಸೆದಿಂಡೆಯರಸುಗಳು ನೆಲಕೊರಗೆಅಮಮ ಅಡರಿಯೆ ದುರ್ಗವ ಕೊಂಡರುಅರೆದರು ದುಷ್ಟರು ಊರೊಳಗೆ2ಕಡಿದರು ಕಾಮನ ಹೊಡೆದರು ಡಂಭನಕೆಡಹಿಯೆ ಕೊಯ್ದರು ಚಂಚಲನಹುಡಿಮಾಡಿದರು ಅಹಂಕಾರ ಕ್ರೋಧರಹುರಿದರು ಖಳರು ಬೀಜವನು3ಆದನು ಪುರಕೆ ವಿವೇಕ ಮಂತ್ರಿಯುಆದನು ವಿರತಿಯು ದಳವಾಯಿಆದನು ಶಾಂತನು ಸಮಸ್ತ ವೃತ್ತಿಗೆಆಯಿತು ನಗರಕೆ ಅದು ಹಾಯಿ4ಜೀವ ರಾಜನು ಹಿಡಿದೆ ಬೋಧಿಸಿಜಡನಾದಸುರ ಪ್ರಕೃತಿ ಎಂದುಜೀವ ಚಿದಾನಂದ ಸ್ವಾಮಿಯೆನೀನೆಂದು ದರಬಾರನೆ ಕಾಯ್ದರಂದು5
--------------
ಚಿದಾನಂದ ಅವಧೂತರು
ಹರಿದಿನದಲಿ ಉಂಡ ನರರಿಗೆ -ಘೋರ |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ನರಕ ತಪ್ಪದು ಎಂದುಶ್ರುತಿಸಾರುತಲಿದೆಪ.ಗೋವ ಕೊಂದ ಪಾಪ, ಸಾವಿರ ವಿಪ್ರರ |ಜೀವಹತ್ಯದ ಮಾಡಿದ ಪಾಪವು ||ಭಾವಜನಯ್ಯನ ದಿನದಲುಂಡವರಿಗೆ |ಕೀವಿನೊಳಗೆ ಹಾಕಿ ಕುದಿಸುವ ಯಮನು 1ಒಂದೊಂದು ಅಗಳಿಗೆ ಕೋಟಿ ಕೋಟಿ ಕ್ರಿಮಿಗಳು |ಅಂದಿನ ಅನ್ನವು ನಾಯ ಮಾಂಸ ||ಮಂದರಧರನ ದಿನದಲುಂಡವರನು |ಹಂದಿಯ ಸುಡುವಂತೆ ಸುಡುವನು ಯಮನು 2ಅನ್ನ -ಉದಕ ತಾಂಬೂಲ - ದರ್ಪಣಗಳು |ಚೆನ್ನವಸ್ತ್ರಗಳೆಲ್ಲ ವರ್ಜಿತವು ||ತನ್ನ ಸತಿಯ ಸಂಗ ಮಾಡುವ ಮನುಜನ |ಬೆನ್ನಲಿ ಕರುಳ ಉಚ್ಚಿಸುವನು ಯಮನು 3ಜಾವದಜಾಗರಕ್ರತು ನಾಲ್ಕು ಸಾವಿರ |ಜಾವ ನಾಲ್ಕರ ಫಲಕೆ ಮಿತಿಯಿಲ್ಲವು ||ದೇವದೇವನ ದಿನದಿ ನಿದ್ರೆಗೈದರೆ ಹುರಿ - |ಗಾವಿಲಿಯೊಳು ಹಾಕಿ ಹುರಿಯುವ ಯಮನು 4ಇಂತು ಏಕಾದಶಿ ಉಪವಾಸಜಾಗರ |ಸಂತತ ಕ್ಷೀರಾಬ್ಧಿಶಯನನ ಪೂಜೆ ||ಸಂತೋಷದಿಂದಲಿ ಮಾಡಿದ ಜನರಿಗ - |ನಂತ ಫಲವನೀವ ಪುರಂದರವಿಠಲ 5
--------------
ಪುರಂದರದಾಸರು