ಒಟ್ಟು 63 ಕಡೆಗಳಲ್ಲಿ , 21 ದಾಸರು , 36 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈ ವಸುಧೆಯೊಳೆಲ್ಲರಿಗಿಂತ ಕೃಷ್ಣನು ಆವುದರಿಂದಧಿಕಾ ಪವಾರಿಧಿಮನೆಯಲ್ಲೆ ಈಗಿನರಸರಿಗೆ |ನೀರೊಳಗೇಸೊಂದು ಊರಿಲ್ಲವೇ ||ಶಾಙ್ರ್ಗ ಧನುವಾದರೇನು ದುರ್ಲಭವಲ್ಲ |ಧಾರಿಣಿಯೊಳು ಮನೆ ಮನೆಯಲ್ಲಿ ಕಾರ್ಮುಖವು 1ಲೇಸೇನು ಕೌಸ್ತುಭವೊಂದೆಯೇ ಮಣಿಗಳು |ಏಸೊಂದಿಲ್ಲದೆ ಭಾಗ್ಯವಂತರಲ್ಲಿ ||ಶೇಷನ ಹಾಸಿಗೆ ಹಾವಾಡಿಸಿ ಹೊಟ್ಟೆ |ಪೋಷಿಸಿಕೊಳ್ಳರೆ ಗಾರುಡಿಗರೆಲ್ಲ 2ಪೀತಾಂಬರಂತು ಎಲ್ಲರಿಗಿಹದು ದೊಡ್ಡ |ಮಾತಲ್ಲ ವನಮಾಲೆವೈಜಯಂತಿ||ಖ್ಯಾತಿಗೆ ಶಂಖಚಕ್ರವು ಹೇಳಿಕೊಳ್ಳಲು |ಜಾತಿಕಾರಗಿಲ್ಲೇ ಬಡಿವಾರವೇತಕೆ3ಶ್ರೀವತ್ಸ ಶ್ರೀವತ್ಸವೆಂಬರು ಮಂದೆಲ್ಲ |ಆವ ಹುಣ್ಣಿನ ಕಲೆಯಾಗಿಹದೋ ||ಆವಾನಿ ಹಯರಥ ಮುದಿಹದ್ದುಯೇರುವ |ಕೋವಿದರೆಲ್ಲೇನು ನೋಡಿ ವಂದಿಸುವರೋ 4ವೈಕುಂಠ ಮೊದಲಾದ ಮೂರೇ ಊರವನಿಗೆ |ಲೋಕದೊಳರಸರಿಗೇಸೋ ವೂರು ||ಶ್ರೀಕಾಂತ ಪ್ರಾಣೇಶ ವಿಠಲನ ಸಂಗ |ಬೇಕೆಂದು ಬಯಸುವರೆಲ್ಲರೂ ತಿಳಿಯದೆ 5
--------------
ಪ್ರಾಣೇಶದಾಸರು
ಎಷ್ಟೆಂದು ಬಣ್ಣಿಪೆ ಗುರುಸತ್ಯಪೂರ್ಣನದೃಷ್ಟಾಂತವ ಕಾಣೆನಾಶಿಷ್ಟ ಜನರಿಗೆ ಚಿಂತಾಮಣಿ ದೊರಕಿದಂತಿಷ್ಟಾರ್ಥದಾಯಕನಾ ಪ.ಶ್ರೀರಾಮ ವ್ಯಾಸರ ಸೇವೆಗೆ ಪೂರ್ವದಲ್ಲಾರಾಧನೆ ಮಾಡುತಧಾರುಣಿ ಮೇಲವತರಿಸಿದ ದ್ವಿಜಕುಲವಾರಿಧಿಚಂದ್ರನಂತೆ1ವೇದ ವೇದಾಂತ ಸಕಳಶಾಸ್ತ್ರಕ್ಷಿಪ್ರದಿಂದೋದಿ ಶ್ರೀ ಮಧ್ವಶಾಸ್ತ್ರಬೋಧವಕೇಳಿಮಹಾಭಕುತಿಲಿಗುರುಪಾದಾಬ್ಜ ನಂಬಿ ನಿಂತ 2ಬ್ರಹ್ಮಚರ್ಯಾಶ್ರಮ ಮೊದಲಾಗಿ ದಿನ ದಿನನಿರ್ಮಲ ಕಳೆಯನಾಂತಉಮ್ಮಯದಿಂದ ಷಟ್ಕರ್ಮಸಾಧನವಾದದsÀರ್ಮದ ದಾರಿಲಿ ನಿಂತ 3ತಾಯಿ ಮಕ್ಕಳ ಸಾಕಿದಂತೆ ಗುರುಕೃಪಾಪೀಯೂಷವನುಂಡು ತಾಬಾಯೆಂದು ಕರೆಸಿಕೊಂಡಖಿಳಾರ್ಥ ಪಡೆದ ನಿಷ್ಕಾಯನ ತೇಜವಂತ 4ನಿತ್ಯದಿ ಕರ್ಮಕೆ ಕುಂದಾಗಲಿಲ್ಲಗ್ನಿಹೋತ್ರ ಸಹಿತ ಸುವಾನಪ್ರಸ್ಥನಾಗಿ ಭೋಗಾಸಕ್ತಿಯ ತೊರೆದ ವಿರಕ್ತಿಭಾಗ್ಯಾನ್ವಿತನ5ಬಣ್ಣವಿಟ್ಟಿಹ ಚೊಕ್ಕ ಚಿನ್ನನೊ ಅಭ್ರಗೆದ್ಹುಣ್ಣಿಮೆ ಚಂದ್ರಮನೊಉನ್ನತಗುರು ಸತ್ಯಾಭಿನವ ತೀರ್ಥರಪುಣ್ಯವೆ ನೀನೊ ಯತಿರನ್ನನೊ 6ಹೀಗೆಂದು ಸುಜನರು ಹೊಗಳಲು ಶ್ರೀಪಾದಯೋಗಿತಾನೆನಿಸಿದನುಮ್ಯಾಗೆ ಮ್ಯಾಗದ್ಭುತ ಪಾಂಡಿತ್ಯವೆಂಬ ವಲ್ಲಿಗೆ ಹಬ್ಬುಗೆನಿತ್ತನು 7ಗುರುಗಳಭೀಷ್ಟೆ ಪೂರೈಸಿತು ಶ್ರೀರಘುವರನ ಮೂರ್ಧನಿಯಲಿಟ್ಟುಸ್ಥಿರ ಪಟ್ಟಾಭಿಷೇಕವಾಂಗೀಕರಿಸಿ ಜಗದ್ಗುರುವೆ ತಾನಾದಕರ್ತ8ದಿವ್ಯ ನಾಚಾರ ಕ್ಷೇತ್ರದಿ ಹರಿಸ್ಮರಣಿಂದಹವ್ಯಸಾಂಕಿತ ಗುರುಗಳುಆ ವ್ಯಯಾಬ್ದ ಜ್ಯೇಷ್ಠಾಧಿಕ ಶುದ್ಧ ಚತುರ್ದಶಿದಿವಸ ದಿವಿಗೆ ಸಾಗಲು 9ಹರಿಪಾದಯಾತ್ರೆಗೆ ಗುರುಗಳೈದಿದÀ ಮೇಲೆಪರಮದುಃಖಿತಮೌಳಿತ್ವರಿಯದಿ ವೃಂದಾವನ ವಿರಚಿಸಿದ ಮುನಿವರನ ಮಹಿಮೆಯಕೇಳಿ10ಪೃಥ್ವಿಪರಿಂದ ಪೂಜಿಸಿಕೊಂಡುದುರ್ವಾದಿಮೊತ್ತವ ಗೆಲುತಲಿಹಅರ್ಥಿಲಿ ಜಯಪತ್ರವನು ಜಯಿಸುತಗುರುಚಿತ್ತಕರ್ಪಿಸುತಲಿಹ 11ನಿಜಗುರುದಯದಿಂದ ದುರಿತತಮವ ಗೆದ್ದಂಬುಜ ಸಖನಂತೊಪ್ಪುವತ್ರಿಜಗವಂದಿತರಾದ ವೇದ ವ್ಯಾಸಾಂಘ್ರಿಯಭಜನ ಭಾಗ್ಯದೊಳೊಪ್ಪುವ 12ಧ್ಯಾನ ಮೌನ ಸದ್ವ್ಯಾಖ್ಯಾನ ಪೂರ್ಣನುಜ್ಞಾನ ಭಕುತಿಪೂರ್ಣನುಏನೆಂಬುವಿರೊ ಕರುಣಗುಣ ಪೂರ್ಣನುದಾನ ಮುದ್ರಾಪೂರ್ಣನು 13ಗುರುಸತ್ಯಾಭಿನವ ತೀರ್ಥರ ಸತ್ಯಪೂರ್ಣನು*ವರದರಾಜಯತಿಯೊಳು ದಯಾಪೂರ್ಣನುಸರಸೋಕ್ತಿ ಪರಿಪೂರ್ಣನು 14ತಂದೆ ಸತ್ಯಾಭಿನವಾಂಬುಧಿಜಾತ ತತ್ವಾರ್ಥವೃಂದರುಚಿರ ಪೂರ್ಣನುಎಂದು ಪ್ರಸನ್ವೆಂಕಟ ಪ್ರಿಯಾನಿಲಮತಸಿದ್ಗಾಂತದಿ ಪೂರ್ಣನು 15
--------------
ಪ್ರಸನ್ನವೆಂಕಟದಾಸರು
ಕಳವು ಕಲಿಸಿದೆಯಮ್ಮಗೋಪಿಕಮಲನಾಭಗೆ |ಉಳಿಸಿಕೊಂಡೆಯ ನಿಮ್ಮ ಮನೆಯ ಪಾಲು ಬೆಣ್ಣೆಯ ಪಆರೂ ಏಳದ ಮುನ್ನ ಎಬ್ಬಿಸಿ ಶೃಂಗಾರ ಮಾಡಿ |ಗೀರುಗಂಧವಹಚ್ಚಿಹಾರವ ಹಾಕಿ ||ಕೇರಿಕೇರಿ ಪಾಲು-ಬೆಣ್ಣೆ ಸೂರೆ ಮಾಡಿ ಬಾರೆನ್ನುತ |ವಾರಿಜನಾಭನ ಕಳುಹಿದೆ ವನಜನಯನನ 1ಚಿತ್ತಜನಯ್ಯನ ಕೈಗೆ ಚಿನ್ನದ ಚೆಂಡನೆ ಕೊಟ್ಟು |ಅರ್ತಿಯಿಂದ ಸಿಂಗರಿಸಿ ಆಡಿ ಬಾರೆಂದು ||ಕತ್ತಲೆ ಬೀದಿಯ ಸುತ್ತೆ ಕಸ್ತುರಿ ತಿಲಕವನಿಟ್ಟು |ನಿತ್ಯಾನಂದಗೆ ನಿಲುವುಗನ್ನಡಿಯ ತೋರಿ 2ಸಣ್ಣಮಲ್ಲಿಗೆ ಮುಡಿಸಿ ಬಣ್ಣದ ವಲ್ಲಿಯ ಹೊದಿಸಿ |ಹೆಣ್ಣುಗಳ ಒಲಿಸುವಂತೆ ಹೇಳಿ ಬುದ್ಧಿಯ ||ಹುಣ್ಣಿವೆ ವಿೂಸಲ ಹಾಲು ಉಣ್ಣು ಉಣ್ಣು ಮೆಲ್ಲೆನುತ್ತ |ಚಿಣ್ಣನ ಕಳುಹಿದೆಯಮ್ಮ ಉಣ್ಣಲಿಕ್ಕದೆ 3ವಾರಿಜಾಕ್ಷ ಮಾಡಿದಂಥ ದೂರು ಹೇಳಿದರೆ ನಿಮಗೆ |ದೂರುಬಡಕರೆಂದುಗೋಪಿಬಯ್ವೆ ನಮ್ಮನು ||ಊರು ಮಾಡಿದ ಕೊಳಗ, ತಾಯಿ ಮಾಡಿದ ಹೊಟ್ಟೆ |ವಾರಿಜನಾಭನ ಕರೆದು ಬುದ್ಧಿಯ ಹೇಳೆ 4ಹೊಟ್ಟೆಬಾಕನಿವ ಬೆಟ್ಟದೊಡೆಯಗೆ ಪ್ರಿಯ |ಇಟ್ಟುಕೊಂಡೀರೇಳುಭುವನಉದರದಲ್ಲಿಯೆ ||ಎಷ್ಟು ಹೇಳಿದರೂ ಕೇಳ ಏನು ಮಾಡಲಮ್ಮ ನಾನು |ಕಟ್ಟು ಮಾಡಿಸಲುಬೇಕು ಪುರಂದರವಿಠಲಗೆ 5
--------------
ಪುರಂದರದಾಸರು
ಕೊಡುವುದೆಂದು ಎನ್ನ ಕೊಂಬುದೆಂದು-ಕೈ-|ಪಿಡಿವುದೆಂದು ನೀ ಒಲಿವುದೆಂದು ಪಕೊಡುಕೊಂಬ ಮಹದನುಗ್ರಹದವನೆಂದು ನಿ-|ನ್ನಡಿಗೆ ಸೇರಿದೆನಯ್ಯ ಬಡತನಕೌಷಧ ಅ.ಪಶ್ವಾನಸೂಕರ ಜನ್ಮ ನಾನುಂಬೆ ನನ್ನಲ್ಲಿ |ನೀನೇ ತತ್ತದ್ರೂಪನಾದೆಯಲ್ಲ ||ಹೀನರೊಳ್ ನಾನತಿ ಹೀನನಾಗಿ-ಅಭಿ-|ಮಾನಿಯಾಗಿ ಕಾಲಕಳೆದೆನಲ್ಲ ||ವಾನರನಂಗೈಯ ಮಾಣಿಕ್ಯದಂತೆನ್ನ |ಮಾನದಂತರ್ಯಾಮಿ ಸಿಕ್ಕೆಯಲ್ಲ ||ಏನೇ ಆದರು ನಿನ್ನೊಳೆನಗೆ ಮುಂದೆ ಭಕ್ತಿ-|ಙ್ಞÕನ-ವೈರಾಗ್ಯ ಭಾಗ್ಯಗಳನು ದೇವ 1ಕಾಡಿನ ಮೃಗವು ತಾ ಹಾಡಿದರೆ ನಂಬಿ |ಆಡುವುದಲ್ಲದೆ ಓಡುವುದೆ? ||ಕಾಡುವ ಪಶುವಿನ ಬಾಲವ ಕಟ್ಟಿಸಿ |ಕೂಡೆ ಪಾಲ್ಗರೆಯಲು ಒದೆಯುವುದೆ? ||ಆಡುವ ಶಿಶು ತಪ್ಪಮಾಡಲು ಜನನಿ-ಕೊಂ-|ಡಾಡುವಳಲ್ಲದೆ ದೂಡುವಳೆ ||ಮೂಢ ಬುದ್ದಿಯೊಳು ಕೆಟ್ಟಿನೆಂದು-ಕೋಪ |ಮಾಡಬೇಡ ದಯೆಮಾಡಿ ನೀಡಿಷ್ಟವ 2ಹಣ್ಣಾದ ಹೊತ್ತು ಬಾಯ್ ಹುಣ್ಣಾದ ತೆರನಂತೆ |ನಿನ್ನ ಸೇರುವ ಯತ್ನ ಬಿಟ್ಟು ನಾನು ||ಹೆಣ್ಣು ಹೊನ್ನು ಮಣ್ಣಿಗಾಗಿಯೆ ಭ್ರಮೆಗೊಂಡೆ |ಸುಣ್ಣಕಿಕ್ಕಿದ ನೀರಿನಂತಾದೆನು ||ಎನ್ನಪರಾಧವನಂತ ಕ್ಷಮಿಸು ನೀನು |ಮನ್ನಿಸದಿರಲಾರಿಗೆ ಪೇಳ್ವೆನು ||ಓಂ ನಮೋ ಶ್ರೀಹರಿಎಂಬ ಪೂರ್ಣಙ್ಞÕನ-|ವನ್ನು ಪುರಂದರವಿಠಲನ ಎನ್ನಪ್ಪನೆ 3
--------------
ಪುರಂದರದಾಸರು
ನಲ್ಲ ಕೃಷ್ಣನ ಬರಹೇಳಿಂದುಮುಖಿಯೇನಿಲ್ಲದೇ ಕರೆತಾರೆ ಪೋಗಿಂದು ಸಖಿಯೇ ಪಗುಲ್ಲು ಮಾಡದೇ ನೀನು ಗುಟ್ಟಾಗಿ ಪೇಳಿನ್ನುಸುಳ್ಳಲ್ಲ ಕಬ್ಬಿಲ್ಲನುರುಬೆ ಸೈರಿಸಲಾರೆ ಅ.ಪತೊಂದರೆ ಏನಿಂದು ಪರ್ವ ದಿವಸವಲ್ಲಸುಂದರ ಮೇಷ ಸಂಕ್ರಾಂತಿ ಏನಲ್ಲಾ ||ಹಿಂದು ಮತದ ಎಳ್ಳಮಾವಾಸೆಯಲ್ಲಾಚಂದಿರ ಮುಖಿ ಯುಗಾದಿಯ ಪಾಡ್ಯವಲ್ಲಾ 1ಭಾನುಬಿದಿಗೆ ಅಕ್ಷತ್ತದಿಗೆ ಏನಲ್ಲಾವಿನಾಯಕನ ಚೌತಿ ನಾಗರಪಂಚಮಿಯಲ್ಲಾ ||ಸಾನುರಾಗದ ಚಂಪಾ ಷಷ್ಠಿ ರಥಸಪ್ತಮಿಗೋಕುಲಾಷ್ಟಮಿಯಲ್ಲಾ ಮಹಾ ನವಮಿಯಲ್ಲ 2ಎತ್ತಿದ ದಶಮಿ ಪ್ರಥಮೈಕಾದಶಿಯಲ್ಲಾಉತ್ಥಾನ ದ್ವಾದಶಿಶನಿತ್ರಯೋದಶಿಯಲ್ಲಾ ||ಉತ್ತಮನಂತ ವ್ರತ ನೂಲಹುಣ್ಣಿಮೆಯಲ್ಲಾಚಿತ್ತಜನಾಟಕ್ಕೆ ಗೋವಿಂದ ಬರಲಿಲ್ಲಾ 3
--------------
ಗೋವಿಂದದಾಸ
ಬುದ್ಧಿ ಧೃತಿಯೆಂಬ ನಾರೇರು ಶ್ರೀಮುದ್ದು ಕೃಷ್ಣನ ಒಲಿಸಿಕೊಂಡರು ಪ.ಅಕ್ಕ ಬುದ್ಧಿವಂತೆ ತಂಗಿಗೆ ಬಲುನಿಕ್ಕರದಲಿ ಹಿತವಾಡಿದಳುಚಿಕ್ಕವಳೆಂದಂಜದೆÉ ಧೃತಿಯು ತಮ್ಮಕ್ಕನೊಳು ಬಡಿದಾಡಿದಳು 1ಕಟ್ಟಲೆ ಮೀರಿ ಮಾತಾಡದಿರೆ ತಂಗಿಸಿಟ್ಟು ಬರುತಿದೆ ಕಾಡದಿರೆಕಟ್ಟಲೆ ಮೀರಿ ಮೊದಲೆ ನವೆದೆ ನಿನ್ನಕಟ್ಟಿನೊಳಗೆ ಸಿಕ್ಕಿ ಬಲು ದಣಿದೆ 2ಒಗತನ ದಾರದೆ ಸಣ್ಣವಳೆ ನೀಜಗಳಕ್ಕೆ ನಿಂತೆ ದೊಡ್ಡೆದೆಯವಳೆನಗೆಗೇಡು ಮಾಡಿಕೊಂಡೆಲೆಯಕ್ಕ ನಿನಗೊಗತನ ನನ್ನಿಂದ ತಗಲಕ್ಕ 3ಹರಿನಿನಗೆ ದಕ್ಕಿದನೆಂದು ಉಣ್ಣದುರಿಯಬೇಡೆಲೆ ತಂಗಿ ಹೋಗಿಂದುಅರಸ ದಕ್ಕುವನೆ ಇನ್ನಾರಿಗೆ ಅಕ್ಕಕಿರುಕುಳು ಮಾತ್ಯಾಕೆ ಹಿರಿಯಳಿಗೆ 4ನನ್ನ ಹಿರಿಯತನ ಕೆಣಕಿದ್ಯಲ್ಲೆನನ್ನ ಕಣ್ಣ ಮುಂದೆ ನಿನ್ನೆ ಬಂದವಳೆಹುಣ್ಣಿಮೆ ಚಂದ್ರ ದಿನಕೆ ಹಿರಿಯ ಜಗಮನ್ನಣೆಗೆ ಬಾಲಚಂದ್ರನಲ್ಲೆ 5ಪಟ್ಟ ನನ್ನದು ಮೊನ್ನೆ ಬಂದವಳೆ ನಿನ್ನದಿಟ್ಟತನವನೇನ ಹೇಳಲೆಕೃಷ್ಣ ನಿನಗೆ ದೂರನಲ್ಲೆ ಅಕ್ಕ ಹರಿಯಗುಟ್ಟಿನ ಮೋಹವೆ ನನಗೆ ಅಕ್ಕ 6ತಂಗಿ ಮನವ ನೋಯಿಸ್ಯಾಡದಿರೆ ಶ್ರೀರಂಗನೆನಗೆರವು ಮಾಡದಿರೆಮಂಗಳ ಮಹಿಮ ಮುರಾರಿಯ ಅರ್ಧಾಂಗಿಯೆ ನಾ ನಿನಗೆ ಸರಿಯೆ 7ಹಿರಿಯ ಕಿರಿಯಳಲ್ಲ ಸರಿ ಹೇಳೆಹರಿಗೆರವಿನ ಮಾತಿಲ್ಲಖರೆಕೇಳೆಪರಮಪುರುಷ ವಾಸುದೇವನೆ ಕೊಟ್ಟವರಕೆಂದು ತಪ್ಪದೆ ಕಾವನೆ 8ಕನ್ಯೆ ಲಕ್ಷುಮಿಯ ರಮಣನೆ ಸ್ವಾಮಿತನ್ನ ನಂಬಿದವರ ಹೊರೆವನೆಪುಣ್ಯ ಗೋಪೀಜನಜಾರನೆ ಪ್ರಸನ್ನವೆಂಕಟಪತಿ ಧೀರನೆ 9
--------------
ಪ್ರಸನ್ನವೆಂಕಟದಾಸರು