ಒಟ್ಟು 37 ಕಡೆಗಳಲ್ಲಿ , 23 ದಾಸರು , 34 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರ್ಮಬಂಧನ ಛೇದನ - ಶ್ರೀ - |ರಾಮನ ನಾಮವ ನೆನೆ ಮನವೆ ಪ.ಅರ್ಚಿಸಲರಿಯೆನು ಪೂಜಿಸಲರಿಯೆನು |ಮೆಚ್ಚಿಸಲರಿಯೆನೆಂದೆನ ಬೇಡ ||ಅಚ್ಯುತಾನಂತ ಗೋವಿಂದನ ನಾಮವ |ಇಚ್ಛೆ ಬಂದಾಗಲೆ ನೆನೆ ಮನವೆ 1ಸ್ನಾನವನರಿಯೆನು ಧ್ಯಾನವನರಿಯೆನು |ಏನನು ಅರಿಯೆನೆಂದೆನಬೇಡ ||ಜಾನಕಿರಮಣನ ದಶರಥನಂದನ |ದಾನವನಾಶನ ನೆನೆ ಮನವೆ 2ಮಂತ್ರವನರಿಯೆನು ತಂತ್ರವನರಿಯೆನು |ಎಂತು ಅರಿಯೆನೆಂದೆನಬೇಡ ||ಸಂತತಾನಂತ ಗೋವಿಂದನ ನಾಮವ |ಅಂತರಂಗದೊಳು ನೆನೆ ಮನವೆ 3ಜಪವ ನಾನರಿಯೆನು ತಪವ ನಾನರಿಯೆನು |ಉಪವಾಸವರಿಯೆನೆಂದೆನಬೇಡ ||ಅಪರಿಮಿತ ಗುಣಗಳ ಅನಂತಮಹಿಮನ |ಕೃಪೆಯ ಸಮುದ್ರನ ನೆನೆ ಮನವೆ 4ಕಲಿಯುಗದೊಳು ಹರಿನಾಮವ ನೆನೆದರೆ |ಕುಲಕೋಟಿಗಳುದ್ಧರಿಸುವುವು ||ಸುಲಲಿತ ಭಕ್ತಿಗೆ ಸುಲಭನೆಂದೆನಿಸುವ |ಜಲರುಹನಾಭನ ನೆನೆ ಮನವೆ 5ತಾಪತ್ರಯಗಳ ತಪ್ಪಿಸಿ ಸುಜನರ |ಪಾಪಗಳೆಲ್ಲವ ಪರಿಹರಿಸುವುದು ||ಶ್ರೀಪತಿ ಸದಮಲಧ್ಯಾನಗೋಚರನ |ಗೋಪೀನಾಥನ ನೆನೆ ಮನವೆ 6ವರದ ವೀರನಾರಾಯಣ ಸ್ವಾಮಿಯು |ಪರಮಪಾವನನು ಹಿತನಾಗಿ ||ಹರಿಯದ ಇಹಪರ ಕೊಡುವ ಸುಖಂಗಳ |ಪುರಂದರವಿಠಲನ ನೆನೆ ಮನವೆ 7
--------------
ಪುರಂದರದಾಸರು
ದಂಡಿಸಬೇಡೈ ದಯೆದೋರೈ ಕರದಂಡದಳಾಂಬಕನೆ ಪ.ಕಂಡೀಶವಿನುತ ಬ್ರಹ್ಮಾಂಡಪಾಲ ಮಾ-ರ್ತಾಂಡಮಂಡಲಗ ಶುಂಡಾಲವರದ ಅ.ಪ.ಕ್ಷೇಮದಿ ಶ್ರೀಹರಿನಾಮವ ವರ್ಣಿಸೆನೇಮಾನುಷ್ಠಾನದೊಳಿರಲುನಾ ಮಾಡಿದ ನಾನಾವಿಧ ಪಾಪವತಾಮಸಗೊಳಿಸುವ ಕಾಮಕ್ರೋಧಗಳಿಂ 1ಶಿಷ್ಟಾಚಾರದೊಳಿಷ್ಟನಾಗಿಪರಮೇಷ್ಠಿಜನಕ ಜಯ ಜಯವೆನಲುಭ್ರಷ್ಟಾಲೋಚನೆ ಪುಟ್ಟಿಸಿ ಪಾಪದಬಟ್ಟಿಯ ಹೊದ್ದಿಪ ದುಷ್ಟಸಂಗದಿಂ 2ನಾರಾಯಣ ನರಹರಿಯೆನ್ನುವ ವ್ಯಾ-ಪಾರವ ನಾ ಮಾಡುತ್ತಿರಲುಆರೋಹಣಾವರೋಹಣ ನಾದವಿ-ಕಾರಗೊಳಿಪ ಶಾರೀರಪ್ರಕೃತಿಯಿಂ 3ಆರ್ಕಾರಣ ರಿಪುಗಳಿಗೈ ಸರ್ವ ದೇ-ವರ್ಕಳ ಮಸ್ತಕಮಣಿ ನೀನೈತರ್ಕಾಗಮ್ಯ ಲಕ್ಷ್ಮೀನಾರಾಯಣಅರ್ಕಾಮಿತಪ್ರಭ ಕಾರ್ಕಳಪುರವರ 4
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ನೀನೇಕೊ ನಿನ್ನ ಹಂಗೇಕೊ - ನಿನ್ನ -ನಾಮದ ಬಲವೆನಗಿದ್ದರೆ ಸಾಕೊ ಪ.ಆ ಮರ ಈ ಮರವೆಂದೆನ್ನುತಿರೆ ರಾಮ - |ನಾಮವೆ ವ್ಯಾಧನ ಮುನಿಪನ ಮಾಡಿತು 1ನಾರಾಯಣೆನ್ನದೆ ನಾರಗನೆನ್ನಲು |ಘೋರಪಾತಕಿಯನು ನಾಮವೆ ಕಾಯ್ದಿತೊ2ತಂದೆ ಪ್ರಹ್ಲಾದನ ಬಾಧೆಯ ಪಡಿಸೆ - ಗೋ |ವಿಂದನೆಂಬ ಸಿರಿನಾಮವೆ ಕಾಯ್ದಿತೊ 3ಉತ್ತರೆಯು ಗರ್ಭದಿ ಸುತ್ತಲಸ್ತ್ರವಿರೆ |ಚಿತ್ತಜಪಿತ ನಿನ್ನ ನಾಮವೆ ಕಾಯ್ದಿತೊ 4ಕರಿಮಕರಿಗೆ ಸಿಲ್ಕಿ ಮೊರೆ ಇಡುತಿರುವಾಗ |ಪರಮಪುರುಷ ಹರಿನಾಮವೆ ಕಾಯ್ದಿತೊ 5ನಾರಿಯನೆಳತಂದು ಸೀರೆ ಸೆಳೆಯುತಿರೆ |ದ್ವಾರಕಾಪತಿ ನಿನ್ನ ನಾಮವೆ ಕಾಯ್ದಿತೊ 6ಹಸುಳೆ ಧ್ರುವರಾಯನು ಅಡವಿಗೆ ಪೋಪಾಗ |ವಸುದೇವಸುತ ನಿನ್ನ ನಾಮವೆ ಕಾಯ್ದಿತೊ 7ನಿನ್ನ ನಾಮಕೆ ಸರಿಯಾವುದ ಕಾಣೆನೊಪನ್ನಗಶಯನ ಶ್ರೀ ಪುರಂದರವಿಠಲ 8
--------------
ಪುರಂದರದಾಸರು
ಹರಿನಾಮವೆ ಜಯ ಮಂಗಳವು |ಶ್ರೀ ಹರಿನಾಮವೆಶುಭಮಂಗಳವು ||ಹರಿನಾಮವ ದಿನ ಸ್ಮರಿಸುವ ಸುಜನರ-ದುರಿತರಾಶಿಗಳೆಲ್ಲ ತರಿಯುವಮಾಧವ1ಉರಗಶಯನವರಪರಮೇಶನಸಖ|ಗರುಡಗಮನಸಿರಿಯರಸನೆಂದೆನಿಸಿದಹರಿ2ನಾರದಮುನಿ ಹರಿನಾರಾಯಣನೆಂದು |ಭಾರಿ ಭಜನೆ ಗೈವ | ಮಾರಜನಕನೆಂಬಹರಿ3ಅಜಾಮಿಳನಂತ್ಯದಿ | ಭುಜಗಶಯನನೆಂದು |ಭಜಿಸಲು ಸಲಹಿದವಿಜಯಸಾರಥಿಯಾದಹರಿ4ಸರಸಿಯೊಳ್ ಮೊರೆಯಿಟ್ಟು | ಮರುಗುವ ಗಜವನು |ಗರುಡನ ಹೆಗಲೇರಿ ಪಿಡಿದು ರಕ್ಷಿಸಿದಂಥ5ಶೇಷಗಿರಿಯ ಮೇಲೆ ವಾಸವಾಗಿರುತಿಹ |ದಾಸ ಜನರ ಪ್ರಿಯ | ದೋಷರಹಿತನೆಂಬ6ವೃಂದಾವನದೊಳಾ | ನಂದದೊಳಾಡುವ |ಸುಂದರಕರಗೋವಿಂದನೆಂದಿನಿಸಿದಹರಿ7
--------------
ಗೋವಿಂದದಾಸ