ಒಟ್ಟು 37 ಕಡೆಗಳಲ್ಲಿ , 22 ದಾಸರು , 35 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿನಾಮದರಗಿಳಿಯು ದೊರಕಿತಿಂದು ವರ ಹಿರಿಯರಾ ಕರುಣದಿಂದೆನಗೆ ಪ. ಸಾರ ಹಾದಿಯಲಿ ವರದ ಮಾಧವನೆಂಬ ಸಾಧಿಸಿ ಕಂಸನ ಗೆದ್ದ ಗೋವಿಂದ 1 ದುಷ್ಟರನು ಶಿಕ್ಷಿಪ ವಿಷ್ಣುವಿನ ನಾಮವು ಕಷ್ಟವನು ಪರಿಹರಿಪ ಮಧುಸೂಧನ ಇಷ್ಟ ಮೂರುತಿ ತ್ರಿವಿಕ್ರಮನ ನಾಮವು ಉತ್ಕøಷ್ಟ ವಾಮನನೆಂಬ ಕಠ್ಠಾಣಿ ಮುತ್ತಿನ 2 ಭವ ಚಂದಿರಾನನನಾದ ದಾಮೋದರನಾ 3 ವಾಸುದೇವ ಎಂಬ ಸಂಕಟವ ಪರಿಹರಿಪ ಪ್ರದ್ಯುಮ್ನನೆಂಬುವನ ಎನ್ನ ಸಂಕುಚಿತ ಮಂಕನಳಿವ ಅನಿರುದ್ಧನ 4 ಪರಮ ಪದವಿಯನಿತ್ತು ಪೊರೆವ ಪುರುಷೋತ್ತಮನ ಪರರ ಬೇಡಿ ಸದ್ವಸ್ತು ಅಧೋಕ್ಷಜನಾ ವರ ಜ್ಞಾನಿಗಳ ಮಾನಸ ನಾರಸಿಂಹನ ಪರಮಪುರುಷನೆಂಬ ಅಚ್ಚುತನ್ನಾ 5 ಮುದ್ದು ಮುಖದೊಳು ತಿಲಕ ತಿದ್ದಿದ ಜನಾರ್ಧನನ ಹದ್ದುವಾಹನನಾದ ಉಪೇಂದ್ರನ ಮುದ್ದು ರಮೆಯರಸ ಶ್ರೀ ಶ್ರೀನಿವಾಸನೆಂಬುವನ 6
--------------
ಸರಸ್ವತಿ ಬಾಯಿ
ಈ ವಸುಧೆಯೊಳೆಲ್ಲರಿಗಿಂತ ಕೃಷ್ಣನು ಆವುದರಿಂದಧಿಕಾ ಪವಾರಿಧಿಮನೆಯಲ್ಲೆ ಈಗಿನರಸರಿಗೆ |ನೀರೊಳಗೇಸೊಂದು ಊರಿಲ್ಲವೇ ||ಶಾಙ್ರ್ಗ ಧನುವಾದರೇನು ದುರ್ಲಭವಲ್ಲ |ಧಾರಿಣಿಯೊಳು ಮನೆ ಮನೆಯಲ್ಲಿ ಕಾರ್ಮುಖವು 1ಲೇಸೇನು ಕೌಸ್ತುಭವೊಂದೆಯೇ ಮಣಿಗಳು |ಏಸೊಂದಿಲ್ಲದೆ ಭಾಗ್ಯವಂತರಲ್ಲಿ ||ಶೇಷನ ಹಾಸಿಗೆ ಹಾವಾಡಿಸಿ ಹೊಟ್ಟೆ |ಪೋಷಿಸಿಕೊಳ್ಳರೆ ಗಾರುಡಿಗರೆಲ್ಲ 2ಪೀತಾಂಬರಂತು ಎಲ್ಲರಿಗಿಹದು ದೊಡ್ಡ |ಮಾತಲ್ಲ ವನಮಾಲೆವೈಜಯಂತಿ||ಖ್ಯಾತಿಗೆ ಶಂಖಚಕ್ರವು ಹೇಳಿಕೊಳ್ಳಲು |ಜಾತಿಕಾರಗಿಲ್ಲೇ ಬಡಿವಾರವೇತಕೆ3ಶ್ರೀವತ್ಸ ಶ್ರೀವತ್ಸವೆಂಬರು ಮಂದೆಲ್ಲ |ಆವ ಹುಣ್ಣಿನ ಕಲೆಯಾಗಿಹದೋ ||ಆವಾನಿ ಹಯರಥ ಮುದಿಹದ್ದುಯೇರುವ |ಕೋವಿದರೆಲ್ಲೇನು ನೋಡಿ ವಂದಿಸುವರೋ 4ವೈಕುಂಠ ಮೊದಲಾದ ಮೂರೇ ಊರವನಿಗೆ |ಲೋಕದೊಳರಸರಿಗೇಸೋ ವೂರು ||ಶ್ರೀಕಾಂತ ಪ್ರಾಣೇಶ ವಿಠಲನ ಸಂಗ |ಬೇಕೆಂದು ಬಯಸುವರೆಲ್ಲರೂ ತಿಳಿಯದೆ 5
--------------
ಪ್ರಾಣೇಶದಾಸರು
ಎಚ್ಚರದಲಿ ನಡೆ ಮನವೆ - ನಡೆಮನವೆ - ಮುದ್ದುಅಚ್ಯುತನ ದಾಸರ ಒಡಗೂಡಿ ಬರುವೆ ಪ.ಧರ್ಮವ ಮಾಡುವುದಿಲ್ಲಿ - ಇನ್ನುಬ್ರಹ್ಮನ ಸಭೆಯ ತೋರುವರು ಮುಂದಲ್ಲಿಕರ್ಮಯೋಜನೆಗಳು ಇಲ್ಲಿ - ಬೆನ್ನಚರ್ಮವ ಸುಲಿಸಿ ತಿನ್ನಿಸುವರು ಅಲ್ಲಿ 1ಅನ್ನದಾನವ ಮಾಳ್ಪುದಿಲ್ಲಿ - ಮೃಷ್ಟಾನ್ನವ ತಂದು ಮುಂದಿಡುವರು ಅಲ್ಲಿಅನ್ಯಾಯ ನುಡಿಯುವುದಿಲ್ಲಿ - ಭಿನ್ನಭಿನ್ನವ ಮಾಡಿ ತಿನ್ನಿಸುವರು ಅಲ್ಲಿ 2ಮೋಸವ ಮಾಡುವದಿಲ್ಲಿ - ಸೀಸಕಾಸಿ ಬಾಯೊಳಗೆ ಹೊಯ್ಯುವರಲ್ಲಿದಾಸರ ಪೂಜಿಪುದಿಲ್ಲಿ - ಉರ್ವೀಶಾಧಿಪತಿ ಬಂದನೆಂಬರು ಅಲ್ಲಿ 3ವಂಚನೆ ಮಾಡುವದಿಲ್ಲಿ - ಕಾದಹಂಚಿನ ಪುಡಿಯ ತಿನ್ನಿಸುವರು ಅಲ್ಲಿಪಂಚಾಮೃತದ ಪೂಜೆ ಇಲ್ಲಿ ನಿನಗೆಕಂಚು - ಕಾಳಾಂಜಿಯ ಪಿಡಿದಿಹರಲ್ಲಿ 4ಚಾಡಿಯ ನುಕಿವುದು ಇಲ್ಲಿ ಅದ -ನಾಡಿದ ನಾಲಗೆ ಸೀಳುವರಲ್ಲಿಬೇಡಬಂದರೆ ಬಯ್ವುದಿಲ್ಲಿ ನಿನ್ನ -ಓಡಾಡುವ ಕಾಲು ಕತ್ತರಿಪರಲ್ಲಿ 5ಮದ್ದಿಕ್ಕಿ ಕೊಲ್ಲುವುದಿಲ್ಲಿ ಒದ್ದು -ಹದ್ದು ಕಾಗೆಗಳಿಗೆ ಈಯುವರಲ್ಲಿಕ್ಷುದ್ರ ಬುದ್ಧಿಯ ನಡೆಪುದಿಲ್ಲಿ ದೊಡ್ಡ -ಗುದ್ದಲಿ ಬೆನ್ನೊಳು ಎಳೆಯುವರಲ್ಲಿ 6ಕೊಟ್ಟಭಾಷೆಗೆ ತಪ್ಪುವುದಿಲ್ಲಿ ಕೈಯ -ಕಟ್ಟಿ ಈಟಿಯಿಂದ ಇರಿಯುವರಲ್ಲಿಕೊಟ್ಟ ಧರ್ಮವ ನಡೆಸುವುದಿಲ್ಲಿ ಬಲುಶ್ರೇಷ್ಠ ನೀನೆಂದು ಕೊಂಡಾಡುವರಲ್ಲಿ 7ಆಲಯದಾನವು ಇಲ್ಲಿ ವಿ -ಶಾಲ ವೈಕುಂಠನ ಮಂದಿರವಲ್ಲಿಆಲಯ ಮುರಿಯುವುದಿಲ್ಲಿ ನಿನ್ನ -ಶೂಲದ ಮೇಲೇರಿಸಿ ಕೊಲುವರಲ್ಲಿ 8ತಂದೆ ಮಾತನು ಮೀರುವುದಿಲ್ಲಿ ಹುಲ್ಲು -ದೊಂದೆಯಕಟ್ಟಿ ಸುಡಿಸುವರಲ್ಲಿತಂದೆ ತಾಯ್ಗಳ ಪೂಜೆ ಇಲ್ಲಿ ದೇ -ವೇಂದ್ರನ ಸಭೆಯ ತೋರುವರು ಮುಂದಲ್ಲಿ 9ಗಂಡನ ಬೈಯ್ಯುವುದಿಲ್ಲಿ ಬೆಂಕೆಕೆಂಡವ ತಂದು ಬಾಯಲಿ ತುಂಬುವರಲ್ಲಿಕೊಂಡೆಯ ನಡಿಸುವುದಿಲ್ಲಿ ಬೆಂಕೆಕುಂಡವ ತಂದು ತಲೆಯಲಿಡುವರಲ್ಲಿ 10ಹೊನ್ನು ಹೆಣ್ಣನು ಬಯಸುವುದಿಲ್ಲಿ ನಿನ್ನಕಣ್ಣಿಗೆ ಸುಣ್ಣವ ತುಂಬುವರಲ್ಲಿಕನ್ಯಾದಾನವ ಮಾಳ್ಪುದಿಲ್ಲಿ ನಮ್ಮಚಿನ್ನಪುರಂದರವಿಠಲನೊಲಿವನು ಅಲ್ಲಿ11
--------------
ಪುರಂದರದಾಸರು
ಕೆಂಡಕ್ಕೆ ಗೊರಲಿ ಮುತ್ತುವುದುಂಟೆಪಾಂಡುರಂಗನ ದಾಸರಿಗೆ ಭಯವುಂಟೆ ? ಪ.ಆನೆ ಸಿಂಹನ ಕೂಡ ಅಣಕವಾಡುವುದುಂಟೆಶ್ವಾನಗೆ ಹುಲಿಯೊಳು ಸರಸವುಂಟೆ ?||ಏನೆಂಬೆ ಎರಡಿಲ್ಲದಿರುಳು ಹಗಲು ನಿನ್ನಧ್ಯಾನ ಮಾಡುವರಿಗೆ ನರಕವುಂಟೆ ? ಸ್ವಾಮಿ ? 1ಕತ್ತಲೆ ರವಿಯನು ಕವಿದು ಮುಚ್ಚುವುದುಂಟೆಹತ್ತಿ ಸರ್ಪನ ಕಪ್ಪೆ ನುಂಗುವುದುಂಟೆ ? ||ಅತ್ತಿತ್ತ ಮನವನು ಹರಿಬಿಡದಲಿ ಏಕಚಿತ್ತದಿ ನೆನೆವಗೆ ನರಕವುಂಟೆ ಸ್ವಾಮಿ 2ಆ ಮಾರುತನ ಗುದ್ದಿ ಹದ್ದು ನೋಯಿಸಲುಂಟೆಹೇಮಗಿರಿಗೆವಜ್ರ ಸಿಡಿಯಲುಂಟೆ ?ಸ್ವಾಮಿ ಶ್ರೀ ಪುರಂದರವಿಠಲರಾಯನೆ ನಿನ್ನನಾಮಧಾರಿಗಳಿಗೆ ನರಕವುಂಟೆ ಸ್ವಾಮಿ ? 3
--------------
ಪುರಂದರದಾಸರು
ಚಿತ್ತಶುದ್ಧಿಯಿಲ್ಲದವನವ ಜ್ಞಾನಿಯೆ - ಪುಣ್ಯಪಾತಕಗಳನರಿಯದವ ಮನುಜನೆ ಕೃಷ್ಣ ಪ.ಮಾರಿ ಮನೆಯೊಳಗಿರಲು ಸಹಕಾರಿಯೆನಬಹುದೆ ?ಊರೊಳಗಿನಾ ಕಳ್ಳ ಅವ ಸುಜನನೆ ?ಜಾರತನವೆಸಗುವಳು ಕುಲವನಿತೆಯಹುದೆ - ಸಂಸಾರದೆಚ್ಚವಿಲ್ಲದವ ಸುಗಣನೆ ? 1ಶ್ವಾನ ಬೂದಿಯಲಿರಲು ಶಿವಭಕ್ತನನೆಬಹುದೆ ?ಕಾನನದೊಳಿಹ ಕಾಗೆ ವನವಾಸಿಯೇ ?ಗಾಣ ತಿರುಗುವ ಎತ್ತಿಗದು ಪ್ರದಕ್ಷಣೆಯೆ ಬಕಧ್ಯಾನವನು ಮಾಡಲದು ಮೌನವೇ ಕೃಷ್ಣಾ ? 2ತೋಳ ಅಡವಿಯಲಿರಲು ಅದು ದಿಗಂಬರನಹುದೆ ?ಗಾಳಿಯಂಬುವ ಉರುಗ ಉಪವಾಸಿಯೇ ?ಆಲವದು ಜಡೆಬಿಡಲುಪರಮ ಋಷಿಯಹುದೆ - ಬಲುಕಾಲಉಳಿದ ಹದ್ದು ತಾ ಹಿರಿಯದೆ ?3ಬಂಧನದೊಳಿಹ ವ್ಯಾಘ್ರವನು ತಪಸಿಯೆನಬಹುದೆ ?ಸಿಂಧುಜವು ಎನೆ ವಿಷಯ ಶೀತಕರನೆ ?ಅಂಧಕನು ಕಣ್ಮಚ್ಚಲದು ಧ್ಯಾನವೇ, ಗಜವುಮಂದಗತಿಯಾದರದು ಸ್ಮರಣೆಯೆ ಕೃಷ್ಣಾ ? 4ಮರಣಕ ಗಂಟಲನು ಮಾಡಲದು ಮಂತ್ರವೆ ?ಗಂಡು ನೀರಲಿ ಮುಳುಗಲದು ಸ್ನಾನವೇ ?ಪುಂಡರೀಕಾಕ್ಷ ಶ್ರೀ ಪುರಂದರವಿಠಲನತೊಂಡನಾಗದ ನರನ ಬಾಳು ಬಾಳುವೆಯೆ ? 5
--------------
ಪುರಂದರದಾಸರು