ಒಟ್ಟು 41 ಕಡೆಗಳಲ್ಲಿ , 16 ದಾಸರು , 41 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀನಾಥ ಶ್ರೀನಾಥ ಶ್ರೀನಾಥ ಮೋಹಿನೀ ರೂಪ ತಾ ತಾಳಿದಾನೆ ಸುಕಲಾಪ ತಾನೋಡಿಸುವುದು ಹೃತ್ತಾಪ ವನಂಬೆನೆ ಹರಿಯ ಪ್ರತಾಪ ಪ ಬಂಗಾರದ ಲತೆಯಂತೆ ಬಳುಕುವಳು ಬಾಜು ಬಂದಿಗೆ ಗೊಂಡೆಗಳ ಕಟ್ಟಿಹಳು ಮುಂಗಾಲಿಲೆ ನಿರಿಗಿಗಳ ಚಿಮ್ಮುವಳು ಮೋಹನ ಮಾಲೆಗಳ ಕಟ್ಟಿಹಳು ಕುಂಭ ಕುಚದ ಭಾರಕ್ಕೆ ತಡಿಯಳೂ ತುದಿಬೆರಳಲಿ ಗಲ್ಲವನೊತ್ತಿಹಳು ಕೇಸರಿ ಗಂಧ ಹಚ್ಚಿಹಳು ಹೊಂಗ್ಯಾದಿಗೆ ಪೋಲುವ ಮೈಬಣ್ಣ ಹೊಮ್ಮಸದಲಿ ಹೋಲುವ ಈ ಹೆಣ್ಣು ಹಿಂಗಡೆಯಲಿ ವರ ಹೆರಳು ಭಂಗಾರ ಹಿಮ್ಮಡಿ ಬಡಿಯೋದು ಸರ್ಪಾಕಾರ ಭಂಗಿಸುವಳು ಬಹು ದೈತ್ಯರ ಹೃದಯ ಬಹು ವಿಲಾಸದಿ ತೋರ್ಪಳು ಸಖಿಯ ಅಂಗಜದರು ಗಂಧಕೆ ಅಳಿವೃಂದ ಆಡುತಲಿಗೆ ಝೇಂಕಾರಗಳಿಂದಾ ಸಂಗಡನೆರದ ಸುರಾಸುರರಿಂದ ಸತಿ ಚಲುವಿಂದಾ ಮಂಗಳಮುಖಿ ನಮ್ಮಂಗಳ ಮೋಹಿಸಿ ಭಂಗನ ಪಡಿಸುವಳೈ ತ್ರಿಜಗವ ಜಗಂಗಳ ಪಾಲಿಸುವಳು | ಮನ ಸಂಗಡ ಅಪಹರಿಸುವಳು | ಜಡ ಜಂಗಮಲಿಗೆ ಬಹು ಪ್ರೀತ್ಯಾಸ್ಪದಳು ಸಾರಂಗಿ | ಸಾರಂಗಿ | ಸಾರಂಗೀ ಸಾಂಬಮದ ಭಂಗಿ | ಬಹಳ ಸುಖಸಂಗಿ ಸುಂದರಿ ಲಲಿತಾಂಗಿ | ಮೋಹನಾಪಾಂಗೀ ಬಡು ಹೆಂಗಲ್ಲ ಈಕೆ ಬಹುಭಂಗ ಬಡುವಿರಿ ಜ್ವಾಕೆ || ಶ್ರೀನಾಥ || 1 ಕನ್ನಡಿಯಂದದಿ ಪೋಲುವ ಕಪೋಲ ಕರ್ಪೂರ ರಂಜಿತ ವರ ತಾಂಬೂಲ ಕಣ್ಣಿಗ್ಹಚ್ಚಿಹಳು ಕನಕದ ಕೋಲಾ ಕಾಮಿನಿಯಂದಡಿ ತೋರ್ಪಳು ಜಾಲಾ ಬಿನ್ನುಡಿ ಹಾಕಿದ ಚಂದ್ರದ ಕುಪ್ಪುಸ ಚಪಲಾಕ್ಷಿಯ ನೋಟದ ಬಲು ರಭಸಾ ಕರ್ಣಾಯತ ನೇತ್ರಗಳ ವುಲ್ಲಸಾ ವುನ್ನಂಕಾ ನಾಶಿಕದ ಬುಲಾಕು ವಜ್ರಮಯದ ವರಮಖರೆದ ಬೆಳಕು ಕರ್ಣದಿ ರತ್ನಖಚಿತ ತಟಾಂಕಾ ಕುಸುರು ಹಚ್ಚಿದ ಬಾಹುಲಿಗಳ ಬಿಂಕ ಸಣ್ಣ ನಡುವಿನೊಯ್ಯಾರದ ನಲ್ಲೆ ಸರಸಿಜನಾಭನ ಸೃಷ್ಟಿ ಇದಲ್ಲೆ ಬಣ್ಣಿಸಲಳವಲ್ಲವು ಸೌಂದರ್ಯ ಬಿಡಿಸುವುದು ಕೇಳ ಮುನಿಗಳ ಧೈರ್ಯ ಬೆಣ್ಣೆಯಂತೆ ಮೃದುವಾದ ಶರೀರ ಭಾಗ್ಯಹೀನರಿಗೆ ಇದು ಬಲುದೂರಾ ಕನ್ನೆ ಶಿರೋಮಣಿ | ಕಾಮನ ಅರಗಿಣಿ ಕೌಸ್ತುಭಮಣಿಗಳ ಹಾರೇ ಸುವರ್ಣವರ್ಣ ಸುಕುಮಾರೇ ಮೋಹನ್ನರಸನೆ ಗಂಭೀರೇ ಮೋಹನ್ನೆ ಮಧುರ ಮಧುರಾಧರ ಮಂಜುಳ ವಕುಜಲರೆ ಬಹೋಚ್ಚಧರೆ ಛÅಪ್ಪನ್ನ ಛಪ್ಪನ್ನ ದೇಶಗಳು ಚಲುವರಿದ್ದರೂ ಚಪಲಾಕ್ಷಿಗೆ ಸಮರಾರೇ ಗತ ಪುಣ್ಯದಿಂದ ಕೈಸೇರುವಳಲ್ಲದೇ ಕಾಮಾಂಧsÀರಿಗತಿ ದೂರೇ ಈ ಹೆಣ್ಣು | ಈ ಹೆಣ್ಣು | ಈ ಹೆಣ್ಣು ಸುರಾಸುರರನ್ನೆ ಮೋಹಿಸಳು ಚನ್ನ ಮನಕೆ ತರಳಿನ್ನ ಬಿಡು ವಿಷದ್ಹಣ್ಣು ಅಪೇಕ್ಷಿಸೆ ಮಣ್ಣು ಕೂಡಿಸುವಳು ತನ್ನ ಜನರಿಗಮೃತಾನ್ನ ಕೊಡುವಳು ಮಾನ್ಯಳು ಪರಮಸೋನ್ಯಳು | ಸುಗುಣ ಅರಣ್ಯ ವಿನಾಶೇ ಬ್ರಹ್ಮಾಂಡಜಾದ್ಯಂಗೀತೇ || ಶ್ರೀನಾಥ || 2 ಹುಡುಗಿ ನೋಡು ಹೊಸ ಪರಿಯಾಗಿಹಳು ಹದ ಮೀರಿದ ಯವ್ವನದಿ ಮೆರೆವಳು ಅರಳು ತುಂಬಿಹಳು ಮಂದಸ್ಮಿತದಲಿ ಮೋಹಿಸುತಿಹಳು ಬೆಡಗಿನಿಂ ನುಡಿಯ ಸವಿಯ ತೋರುವಳೂ || ಬಹು ವಿಧದಾಭರಣಗಳನ್ನಿಟ್ಟಹಳು ನಡಿಗಿಗಳಿಂದ ನಾಚುತ ಹಂಸ ನವಮಣಿ ಚಂದ್ರರ ಕೆಡಿಸಿತು | ನಂಬೆ ಜಡಿತ ಮುತ್ತಿನ ತಾಯಿತ ಕಠಾಣೀ ಜಗವನು ಮೋಹಿಸುವಳು ಸುಶ್ರೋಣೀ ಬಿಂಕದ ನುಡಿ ಸೊಬಗಿನ ಚಂದಾ ಅಡಗಿದವೆ ಪಿತಭೃಂಗಗಳಿಂದಾ ಹಿಡಗಿ ಮರಗಿ ಮಧ್ಯಶಮನ ಮರಗೀ ಕೇಸರಿ ಬಹು ಸೊರಗೀ ಉಡುಪತಿ ಕೋಟಿ ಪ್ರಭ ಧಿಕ್ಕಾರಾ ಉಲ್ಲಾಸದಿ ಮನ ಮುಖ ಚಂದಿರಾ ನಡಿಗಗಳಿಂದೆನೆ ರಾಜಿಸುತಿ ಹೋದೆ ನವರತ್ನದಯದೆ ಮಯದ ಫಣಿಕಟ್ಟು ಮೇಲ್ಪೊಡವಿವೊಳಗೆ ಪಡಿಗುಣಕ ಕಡಿಯಿಲ್ಲಾ ಸುಳ್ಳುನುಡಿಯಿಲ್ಲಾ ಯೆನ್ನೊಡೆಯಾ ಶ್ರೀ ವಿಜಯ ವಿಠ್ಠಲನಲ್ಲದೆ ಎಲ್ಲಿಂದ ಬಂದಳೋ ಕೆಳದೀ || ಶ್ರೀನಾಥ || 3
--------------
ವಿಜಯದಾಸ
ಶ್ರೀಶಾ ಹೃಷಿಕೇಶ ಕೇಶವ ವಸುಧಾಧೀಶ ಪ ಭವ ಸನ್ನುತ ಶೇಷಾಚಲ ಸನ್ನಿವಾಸ ಶಾಶ್ವತಾ ಪರಿಪಾಹಿ ಹರೇ ಅ.ಪ. ದುರಿತ ವಿಭಂಜನ ವಾಮನ ವರ ಸಂಕರ್ಷಣ ಧರಣೀ- ಧರ ಶ್ರೀಧರ ದೋಷದೂರ ಪರತರ ಪರಮೇಶ ಅಮಿತ ಸಮ ನರನಾರಾಯಣ ಸುರಗಣ ಪರಿಪಾಲ ಗಾನಲೋಲ ವರದ ಸುಖಾಸ್ಪದ ವಿಜಯದ 1 ಮಾಧವ ಮುರಹರ ಶರಣಾಗತ ಜನರಕ್ಷಕ ಭವ ಮೋಚಕ ನಿರುಪಮ ಗುಣಭರಿತ ಅರುಣಾಂಭೋರುಹಲೋಚನ ಸುರಗಂಗೋದಿತ ಚರಣ ಕರಿರಾಜವರದಾಚ್ಯುತ ಸ್ವರತಾ ಸ್ವತಂತ್ರ ಸುಚರಿತ 2 ಮಂದರ ಗಿರಿಧಾರಕ ಜಯ ಕಾಂಚನನಯನಾಂತಕ ಜಯ ಮನುಜ ಮೃಗೇಂದ್ರ ಜಯ ವೈರೋಚನಿ ದರ್ಪಹರ ಜಯ ಭೂಮಿ ಭುಜದಲ್ಲಣ ಜಯರಾಮ ಕೃಷ್ಣ ನಿಪುಣ ಕಲ್ಕಿ ಹಾ ಶ್ರೀಕಾಂತ ಜಯಜಯ 3
--------------
ಲಕ್ಷ್ಮೀನಾರಯಣರಾಯರು
ಸಾರ ಸಾರ ಹರಿಯಪಾರ ಮಹಿಮ ನಾಮ ಘೋರಸಂಸಾರಾಬ್ಧಿಶೀಘ್ರೋತ್ತಾರನೌಕಾಧಾಮ 1 ವಿಧಿಭವಾದ್ಯಮರೌಘ ಧ್ಯಾನಾಸ್ಪದ ಕಲ್ವದ್ರುಮ ಪರಮಾಖಿಲ ಭಕ್ತಭವಯಕುಧರವಜ್ರೋಪಮ 2 ಭಕ್ತಿ ಜ್ಞಾನ ವೈರಾಗ್ಯ ಭಾಗ್ಯ ನಿವೃತ್ತಿ ಸುಖ ನಿಸ್ಸೀಮ ಕರ್ತ ಲಕ್ಷ್ಮೀನಾರಾಯಣನ ಭೃತ್ಯವರ್ಗಕ್ಷೇಮ 3
--------------
ತುಪಾಕಿ ವೆಂಕಟರಮಣಾಚಾರ್ಯ
ಸಾರಥಿ ವಿಶ್ವಾಧೀಶ್ವರ ವಿಜಯ ಪಾಲಿಸು ಸತತಂ ವಿಜಯಧ್ವಜ ವೆಂಕಟಗಿರಿ ನಾಯಕಿ ಅಜಿತ ಸಕಲಸುರವೈರಿ ವಿದಾರಣ ಪ. ವೀರಾಗ್ರಣಿ ರಘುವೀರ ವಿದಾರಿತ ಘೋರದಿತಿಜ ಪರಿವಾರ ಶೌರಿ ಕಾರಣ ಧಾರಣ ವದನ ಖರಾರಿ ಕೃಪಾಕರ್ರ(?) 1 ಲಕ್ಷ್ಮಣ ಪೂರ್ವಜ ಋಕ್ಷವಿನುತ ಕಮ ಲಾಕ್ಷ ಶೂರ್ಪನಖ ಶಿಕ್ಷಾ ದಕ್ಷಿಣ ದುರಿತಾರಣ್ಯ ರಮಾಸ್ಪದವಕ್ಷಸ್ಥಳ ವಿಭವೈಕನಿಭೆ ಜಯ ದ್ವಿದಶಾಕ್ಷ ವಿಘಾತನ 2 ರಾಮಾಭಿದ ರಮಣೀಯ ಗುಣಾರ್ಣವ ಕಾಮಿತ ಫಲದಾವನಭೂಮಾ ಭವಾಮಯಹರ ಭಜಕಾಶ್ರಯಧಾಮಾ ಮಾರುತಿಕೃತ ಕಾಮಾ 3
--------------
ತುಪಾಕಿ ವೆಂಕಟರಮಣಾಚಾರ್ಯ
ಸುಂದರ ಕಾಂಡ ರಾಮಾಯಣ ಸಿರಿ ಸಿರಿ ಹನುಮನಾ ||ಮೆರೆವ ಸಚ್ಚರಿತೆ ಮಮ | ಗುರುವೆ ನುಡಿಸೀದಷ್ಟುಒರೆವೆ ಕೇಳ್ಪುದು ಸಜ್ಜನಾ ಪ ಗೃಹ ಮೇಧಿ ಇರುವ ಬಗೆ | ಬಹು ಪರೀಯಲಿ ತೋರಿಗುಹ ವನಂಗಳನೆ ಚರಿಸೀ |ಗೃಹಿಣಿಯನು ಕಾಣದಲೆ | ಬಹು ನಟಸಿ ನರರಂತೆಮಹ ಮಹಿಮ ರಾಮ ಬರಲೂ 1 ಪತಿ ದಶರಥನ | ಸುತನ ಕಂಡೆರಗಿ ರವಿಸುತಗೆ ರಾಜ್ಯವನೆ ಕೊಡಿಸೀ 2 ರಾಮನಾಣತಿ ಪೊತ್ತು | ಭೂಮಿಜೆಯ ವಾರ್ತೆಯನುನೇಮದಲಿ ತರುವೆ ನೆನುತಾ ||ಆ ಮಹಾ ಶರಧಿಯನು | ಧೀಮಂತ ಲಂಘಿಸುತಭೂಮಿಜೆಯ ಕಂಡು ಎರಗೀ 3 ಪತಿ | ರಾಮನ್ನ ಕಂಡ ಪರಿಆಮೋದದಲ್ಲಿರುತಿರೇ 4 ಶ್ರೀ ಲೋಲ ರಾಮನಿಗೆ | ಆಳಾಗಿ ಇರಲೊಂದುವಾಲುಳ್ಳ ಕಪಿಯು ಬಂದೂ ||ಕೇಳುವರು ಇಲ್ಲದಲೆ | ಪೋಲಾಗಿ ಹೋಯ್ತೆಂಬಕೀಳು ನುಡಿಗವಕಾಶ ಕೊಡದೇ 5 ವಂದೆರಡು ಹಣ್ಣಾನು | ತಿಂದ್ಹೋಗುವೇನೆಂದುಇಂದೀವರಾಕ್ಷಿಯ ಬೇಡುತಾ ||ನಂದೀಸಿ ಅಶೋಕ | ನಂದನ ವನವ ಮದಸಿಂಧೂರ ನಂತೆಸಗಿದೇ 6 ಕೋಟ್ಯಶೀತಿಯು ನಿ | ಶಾಟ ಯೂಥಪ ಸಹಸಾಷ್ಟ ಕಾಯುತ ಮುಖ್ಯರಾ ||ಖೇಟ ರಾವಣ ಸೇನೆ | ಕೂಟ ಮೂರರಲೊಂದುರೋಟಿಸುತ ನೀ ಮೆರೆದೆಯೋ 7 ಅಕ್ಷೋಹ್ಣಿ ಬಲ ಸಹಿತ | ರಾಕ್ಷಸಾಧಿಪ ಸುತನುಅಕ್ಷಯ್ಯ ಕುವರ ಬರಲೂ ||ಪಕ್ಷೀಂದ್ರ ತೆರ ಪಿಡಿದು | ಈ ಕ್ಷಿತಿಗೆ ಅಪ್ಪಳಿಸೆತಕ್ಷಣದಲಸು ನೀಗಿದಾ 8 ಮಂದಜಾಸನ ವರದಿ | ಇಂದ್ರಜಿತು ಮದವೇರಿಬಂದೆಸೆಯೆ ಬ್ರಹ್ಮಾಸ್ತ್ರವಾ ||ಛಂದದಲ್ಯೋಚಿಸುತ | ಬಂಧನಕೆ ನೀನಾಗಿನಂದದ ಲ್ವೊಳಗಾದೆಯೋ 9 ತೆತ್ತೀಸ ಕೋಟಿ ದೇ | ವತ್ತೀಗಳಿಗೆಲ್ಲಾಉತ್ತೂಮನಾದ ನೀನೂ ||ಸುತ್ತೀಸಿ ಬಾಲವನು | ಹತ್ತೂತಲೆಯವನನೆತ್ತೀಯ ಮೇಲ್ ಕುಳಿತೆಯೋ 10 ನಾರೀಯ ಚೋರ ನಿ | ನ್ನಾರೆಂದು ಕೇಳಾಲುಮಾರುತ್ತರವಿತ್ತು ಜರಿದೇ ||ಮಾರೀಚ ಮೊದಲಾದ | ನೂರಾರು ರಕ್ಕಸರದೂರೋಡಿಸೀದವನ ದೂತಾ 11 ಕೋಟಲೆಗಳ ಕೊಟ್ಟ | ತಾಟಕಾದೀ ದೈತ್ಯಕೂಟಗಳ ಸಂಹರಿಸಿದಾ ||ಕೂಟಸ್ಥ ಲೋಕಗಳ | ನೋಟದಲಿ ದಹಿಪ ವೈರಾಟ ಪ್ರಭುವಿನಾಳೂ 12 ಕೇಳೆಲೋ ರಾವಣನೇ ತಿಳಿಯಯಾ ನೀನು ನಿನ್‍ಹುಳುವೆಂದು ನಿಜ ಬಾಲದೀ |ಸಿಲುಕಿಸಿ ಜಲನಿಧಿ | ನಾಲಕ್ಕು ಮುಳುಗಿದವಾಲಿ ಪೆಸರನು ಮರೆತೆಯಾ 13 ತಾಲಮರಗಳ ಶೀಳಿ | ವಾಲೀಯನೆ ಕೊಂದರ್ಕಬಾಲಗೇ ರಾಜ್ಯ ಕೊಡಿಸೀ ||ಕೋಲಿನಿಂ ನಿಮ್ಮೆಲ್ಲ | ಹೂಳುವ ರಾಮನಆಳು ನಾನೆಂದು ತಿಳಿಯೋ 14 ರಕ್ಕಸ ಪತಿಯಾಜ್ಞೆ | ಇಕ್ಕಿ ತಲೆಯಾ ಮೇಲೆರಕ್ಕಸರೆಲ್ಲ ತವ ಪುಚ್ಛ ||ಕಿಕ್ಕಲೂ ಉರಿ ಲಂಕೆ | ಪೊಕ್ಕು ಪುರವನೆ ದಹಿಸಿಅಕ್ಕರದಿ ವನದಿ ಹಾರೀ 15 ಕಾಯ ಸಹಿತರ ನೋಡಿಪ್ರೀಯ ದ್ವಾರ್ತೆಯ ನರುಹಲೂ ||ಗೇಯ ಹನುಮನ ತುತಿಸಿ || ರಾಯಗೆರಗುವ ವನದಿಕಾಯ ಕುಪ್ಪಳಿಸುತಿರಲೂ 16 ಕಾತುರತೆಯ ಕಪಿ | ಜಾತೆಗಳ ಸಂತೈಸಿಪ್ರೀತಿಯಿಂ ಮಧುವನವನಳಿದ ||ಸೀತೆಯನು ಕಂಡಂಥ | ವಾರ್ತೆಯನು ಪೇಳೆ ರಘುಜಾತ ನಿನ್ನನು | ಅಪ್ಪಿದಾ 17 ಎರಡೇಳು ಭುವನದೊಳು | ಇರುವರೇ ನಿನ್ಹೊರತುಹರಿಗೆ ಪ್ರೀತ್ಯಾಸ್ಪದನು ಎನಿಸೀ ||ಮೆರೆವ ಭಕ್ತಾಗ್ರಣಿಯೆ | ಎರಗುವೆನು ತ್ವತ್ವದಕೆಹರಿಭಕ್ತಿ ಕರುಣಿಸಯ್ಯಾ 18 ಉದಯಕಾಲದಲೆದ್ದು | ಮುದದಿಂದಲೀ ಪದವಸದಯ ಹೃದಯರು ಪಠಿಸಲೂ ||ಬದಿಗ ಗುರು ಗೋವಿಂದ | ವಿಠಲನೋಳ್ ಸದ್ಭಕ್ತಿವದಗಿ ಪಾಲಿಪ ಹನುಮನೂ 19
--------------
ಗುರುಗೋವಿಂದವಿಠಲರು
ಸ್ವಾಮಿ ನೀ ದಯಾಳುವಹುದೋ ವರಭಕ್ತೋದ್ಧಾರಕೃಷ್ಣ ಪ ಪ್ರೇಮಾಸ್ಪದವಾದ ಕೊಳಲಗಾನದಿ ಗೋಪಿಯರಿಗೊಲಿದ ಅ.ಪ ಸುರತರುವಿನ ಬಳಿಗೈದು ಬರಿಯ ಕೈಲಿಹೋಗುವರೆ ಹರಿಯ ಬೆರೆದು ಭೋಗಿಪಂತೆ ವರಿಸುಜಾಜಿಕೇಶವ 1
--------------
ಶಾಮಶರ್ಮರು
ನಂಬಿದೆ ನಾಗರಾಜ ಹರಿಯ ಪಾ-ದಾಂಭೋಜಭಕ್ತಿಭಾಜ ಪ.ಶಂಭುಶಕ್ರಾದ್ಯರು ಹಂಬಲಿಪರು ನಿನ್ನತುಂಬಿದ ಜೀವಕದಂಬಾಭಿಮಾನಿಯೆ ಅ.ಪ.ಸಾವಿರ ಜಿಹ್ವೆಯೊಳು ಹರಿಯ ಸ್ತುತಿಗೈವೆನಿರತಕೃಪಾಳುಶ್ರೀವಾಸುದೇವನ ಕರುಣ ನಿನ್ನಲ್ಲೆಷ್ಟುದೇವೇಶನಾದರು ಯಾವನು ಬಣ್ಣಿಪಶ್ರೀವಧೂವರನ ಕಮಲಪದ ರಾ-ಜೀವ ಸೌಂದರ್ಯವನು ತನ್ನಯಸಾವಿರಾಕ್ಷಿಗಳಿಂದ ಕಾಣುತಕೇವಲಾನಂದಾಬ್ಧಿ ಮಗ್ನನೆ 1ಶಿರವೊಂದರಲಿ ಬ್ರಹ್ಮಾಂಡ ಸಾಸವೆಯಂತೆಧರಿಸಿದೆ ಸುಪ್ರಚಂಡವರರಘುರಾಮನಾವರಜ ಲಕ್ಷ್ಮಣನಾದೆಹರಿಕೃಷ್ಣರಾಯನ ಪಿರಿಯನಾಗಿ ಅವ-ತರಿಸಿ ಭೂಭಾರವನುರೆ ಸಂ-ಹರಿಸಿ ವೇದ ಪುರಾಣ ತತ್ತ್ವವಶರಣಜನರಿಗೆ ಬೋಧಿಸುವ ಮಹಾಕರುಣಿ ಕಮಲಾಕಾಂತನ ಭಕ್ತನೆ 2ಲಕ್ಷ್ಮೀನಾರಾಯಣನ ನಿದ್ರಾಸ್ಪದರಕ್ಷಿಸು ಕೃಪೆಯಿಂದೆನ್ನಸಾಕ್ಷಾದಚಲರೂಪ ನಿನ್ನೊಳು ನೆಲಸಿದಪಕ್ಷಿವಾಹನ ಜಗದಧ್ಯಕ್ಷ ಶ್ರೀನಿವಾಸಮೋಕ್ಷ ಮಾರ್ಗಪ್ರದರ್ಶಿ ಸತತ ಮು-ಮುಕ್ಷು ಜನಮನಹರ್ಷ ನಿರ್ಜರ-ಪಕ್ಷ ಸುಫಲಪ್ರದ ಸದಾ ನಿರ-ಪೇಕ್ಷ ಗುರುವರ ರಾಕ್ಷಸಾಂತಕ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ನಲಿದಾಡಿದಳ್ ನಳಿನಾಂಬಕಿಒಲಿದೆಮ್ಮನು ಸಲಹಲೋಸುಗ ಪ.ಸುಲಲಿತ ವೀಣಾಪಾಣಿಜಲಜೋದ್ಭವರಮಣಿಸುಗುಣಿಅ.ಪ.ಕೃತೀಶಸುತೆ ಕೃಪಾನ್ವಿತೆಶ್ರುತಿಸಮ್ಮತಗೀತೆಪ್ರತಿರಹಿತೆ ಸತಿಪೂಜಿತೆರತಿಯಾಮಿತ ಶೋಭಿತಳೆ ಧೃತಿ ಸಂಭೃತೆ ಮತಿದಾಯಕಿ 1ಇಭೇಂದ್ರಗಮೆ ವಿಧುಮಂಡಲ-ನಿಭಮುಖಿ ಶಿಖಿಯಾನೆಅಭಯಪ್ರದೆ ಅಖಿಳೇಶ್ವರಿಸುಭಜೆ ಶುಭದೆ ವಿಬುಧೆ ಅಭವೆ ಸದ್‍ವಿಭವಾಸ್ಪದೆ 2ಪರಾಂಬರಿಸು ಪದಾಶ್ರಿತನಪ್ರಭಾಕರಶತಾಭೆಹರಿಲಕ್ಷ್ಮೀನಾರಾಯಣ-ಶರಣೆ ರತುನಾಭರಣೆ ಕರುಣಾರಸವರುಣಾಲಯೆ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಪಾಲಿಸು ಪರಮಪಾವನ ಪದ್ಮಾವತೀರಮಣಪಾಲಿಸು ಪಯವಾರಿಧಿವಾಸ ಪದ್ಮಗದಾಧರ ಕೌಸ್ತುಭಭೂಷ ಪ.ನೀಲನಿಭಾಂಗನಿಖಿಲಸುರ ಮುನಿಜನಜಾಲಪಾಲಪಾಹಿಪಾರ್ಥಸಾರಥಿ ಅ.ಪ.ಮದನಜನಕ ಮಹಿಮಾಂಬುಧಿ ನಿನ್ನಪದಕಮಲವ ನಾ ಸ್ಮರಿಸದೆ ಎನ್ನಮದಮುಖತನವನು ಒದರುವದೆನ್ನಪದುಮನಾಭ ರಕ್ಷಿಸು ನೀ ಮುನ್ನಸದಯಾಂಬುಧಿ ನೀನಲ್ಲವೆ ನಿನ್ನೊಳು ಕ್ರೋಧಉದುಭವಿಸುವುದು ನಿಜವೇ ಭಕ್ತವಾತ್ಸಲ್ಯಇದಕೆ ನೀ ಊನ ತರುವೆ ಸಾಕು ಈ ಮರವೆಒದಗಿಸು ಸರ್ವಮನಸಿನೊಳ್ ಪುದು-ಗಿದಿಷ್ಟಾರ್ಥಗಳ ನೀ ದಯವಿಡುತ ಇಹಪರಗತಿಗಾ-ಸ್ಪದವಾದ ಸಂಪದವ ನೀ ಕೊಡು ತ್ವರಿತ ತ್ರೈಲೋಕ್ಯದಾತಮಧುಸೂದನ ಮಂದರಗಿರಿಧರ ನೀ-ರದ ನಿಭ ನಿರ್ಮಲ ನಿಜರೂಪಗುಣಸದನಾಚ್ಯುತ ರವಿಕುಲದೀಪ ನಿರ-ವಧಿ ಆನಂದ ರಸಾಲಾಪಬುಧಜನೋಪಲಾಲಿತ ಲೀಲಾಯತಉದಧಿಶಾಯಿ ಮಾನದ ಮಧುಸೂದನ 1ನಾಮಸ್ಮರಣೆಯೆ ನರಕೋದ್ಧಾರನೇಮವಿಲ್ಲೆಂಬುದು ನಿನ್ನ ವಿಚಾರಸಾಮಾರ್ಥದ ಗುಣಕೆಲ್ಲನುಸಾರಪಾಮರಮನಕಿದು ಈ ಗುಣಭಾರಶ್ರೀಮನೋಹರನೆ ಲಾಲಿಸೊ ಚಾತುರ್ಥಿಕ ಜ್ವರದಿಭ್ರಾಮಕನಾದೆ ಪಾಲಿಸೊ ದಾರಿದ್ರ್ಯವೆಂಬಸೀಮೆಯಿಂದಲಿ ದಾಟಿಸೊ ಸುಕೀರ್ತಿಯ ಮೆರೆಸೊಸಾಮಗಾನಲೋಲಸುಜನಸ್ತೋಮಭಾಗ್ಯನಿಧಿಯೆ ಎನ್ನ ಮನದ ಅಜ್ಞಾನವೆಂಬತಾಮಸಪರಿಹರಿಸಿ ಜ್ಞಾನೋದಯದ ಸದಾನಂದಈ ಮಹಾಭಾಗ್ಯಗಳೆಲ್ಲ ನೀನಿತ್ತಿರೆನೀ ಮಾಡುವುದೆಲ್ಲವು ಸಹಜಗುಣಧಾಮಾಶ್ರಿತ ನಿರ್ಜರಭೂಜಸುಜನಸ್ತೋಮಾರ್ಕಾಮಿತ ವಿಭ್ರಾಜಶ್ರೀಮಚ್ಛೇಷಾಚಲ ಮಂದಿರ ಸು-ತ್ರಾಮಾರ್ಚಿತ ಸದ್ರಾಮ ಶ್ರೀರಾಮ 2ಉಡುವ ಸೀರೆಯ ಸೆಳೆಯಲು ದ್ರುಪಜೆಯಕೊಡಲಿಲ್ಲವೆ ಬಹುವಸನ ಸಂತತಿಯಹಿಡಿಯವಲಕ್ಕಿಗೆ ದ್ವಾರಕ ಪತಿಯಕಡು ಸರಾಗವಾಯ್ತಿಂದಿನ ಪರಿಯಬಿಡುತ ಬೆಟ್ಟದ ಮಧ್ಯದಿ ನಿಂತರೆ ನಿನ್ನಬಿಡುವರ್ಯಾರಯ್ಯ ಶೀಘ್ರದಿ ಮನಸಿನಿಷ್ಟಕೊಡು ದಯವಿಟ್ಟು ಮುದದಿ ಕರುಣಾವುದಧಿಕಡುಲೋಭಿತನ ಬಿಡು ಮಹರಾಯಅಡಿಗಳಿಗೆರಗುವೆನು ಜಗದಯ್ಯ ಪೂರ್ವಾರ್ಜಿತಕರ್ಮವಡಂಬಡಿಸಿ ರಕ್ಷಿಸು ದಮ್ಮಯ್ಯ ಪಂಢರಿರಾಯಒಡೆಯ ಶ್ರೀ ಲಕ್ಷ್ಮೀನಾರಾಯಣನಡುನೀರೊಳು ಕೈಬಿಡುವೆಯ ನೀತೊಡಕೊಂಡ ಬಿರುದೇನಯ್ಯ ಈಕಡು ಕೃಪಣತನ ಸಾಕಯ್ಯಪೊಡವಿಯೊಳಗೆ ಪಡುತಿರುಪತಿಯೆಂಬದೃಢಕಾರ್ಕಳದೊಡೆಯ ಶ್ರೀನಿವಾಸನೆ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಶಂಕರ ಶಿವಶಂಕರ ಶಿವಶಂಕರ ಶಿವಶಂಕರಕಿಂಕರೇಷ್ಟಪ್ರಧಾನಶೀಲ ವೃಷಾಂಕ ಮಹಲಿಂಗೇಶ್ವರ ಪ.ವ್ಯೋಮಕೇಶಭವಾಬ್ಧಿತಾರಕ ರಾಮನಾಮೋಪಾಸಕಸಾಮಜಾಜಿನವಸನಮಂಡನ ಸ್ವಾಮಿ ತ್ರಿಜಗನ್ನಾಯಕಭೀಮಬಲ ಸುತ್ರಾಮಮುಖ ಸುರಸ್ತೋಮ ವಿನುತಪದಾಂಬುಜಸೋಮಸೂರ್ಯಾನಲಯನ ನಿಸ್ಸೀಮ ಮಹಿಮ ಮಹಾಭುಜ 1ಭಜಕಜನಸೌಭಾಗ್ಯದಾಯಕ ವಿಜಯಪಾಶುಪತಾಸ್ತ್ರದಭುಜಗಭೂಷಣ ಭುವನಪೋಷಣ ರಜತಗಿರಿಶಿಖರಾಸ್ಪದವೃಜಿನಹಾಮಲ ಸ್ಫಟಿಕಸನ್ನಿಭ ಕುಜನವಿಪಿನದವಾನಲವಿಜಿತಕಾಮ ವಿರಾಗಿಯೋಗಿ ವ್ರಜಕುಟುಂಬ ಮಹಾಬಲ 2ನೀಲಕಂಠ ನಿರಾಮಯಾಭಯಶೂಲಧರ ಸುಮನೋಹರಶೈಲರಾಜಸುತಾಧರಾಮೃತಲೋಲ ಲೋಕಧುರಂಧರಕಾಲಕಾಲ ಕಪಾಲಧರಕರುಣಾಲವಾಲಮಹೇಶ್ವರಪಾಲಿತಾಖಿಳಸಿದ್ಧ ಮುನಿಜನಜಾಲ ಜಾಹ್ನವಿಶೇಖರ 3ಕೃತ್ತಿವಾಸಗಿರೀಶ ಶ್ರುತಿತತ್ತ್ವಾರ್ಥಬೋಧ ಗುಣೋದಯದೈತ್ಯಮೋಹಕ ಶಾಸ್ತ್ರಕೃತ್ಪ್ರಮಥೋತ್ತಮ ವಿರತಾಶ್ರಯಸತ್ಯಸಂಕಲ್ಪಾನುಸಾರ ನಿವೃತ್ತಿಮಾರ್ಗ ಪ್ರವರ್ತಕಮೃತ್ಯುಹರ ಹರಮೃಡನಮೋಸ್ತುನಮೋ&bಜquo;ಸ್ತು ಸುಮನನಿಯಾಮಕ 4ಪಂಡಿತೋತ್ತಮ ಪವನಶಿಷ್ಯ ಮೃಕಂಡುತನಯಭಯಾಪಹಚಂಡಿಕಾಧವ ಶಿವ ದಯಾರ್ಣವಖಂಡಪರಶುಸುರಾರಿಹಚಂಡಭಾನುಶತಪ್ರಕಾಶಾಖಂಡವೈರಾಗ್ಯಾಧಿಪಕುಂಡಲೀಂದ್ರ ಪದಾರ್ಹನಗ ಕೋದಂಡವಿದೃಶ ಮಹಾನ್‍ತಪ 5ಮಂಗಲಪ್ರದ ದಕ್ಷಕೃತಮುಖಭಂಗ ಭಾಗವತೋತ್ತಮಜಂಗಮಸ್ಥಾವರಹೃದಿಸ್ಥ ಶುಭಾಂಗ ಸತ್ಯಪರಾಕ್ರಮಲಿಂಗಮಯ ಜಯಜಯತು ಗಿರಿಜಾಲಿಂಗಿತಾಂಗಸದೋದಿತಸಂಗರಹಿತಾಚ್ಯುತಕಥಾಮೃತ ಭೃಂಗವತ್ಸೇವನರತ 6ಭರ್ಗಭಾರ್ಗವಋಷಿಪ್ರತಿಷ್ಠಿತ ಸ್ವರ್ಗಮೋಕ್ಷ ಫಲಪ್ರದನಿರ್ಗತಾಖಿಲದುರಿತ ಭೂಸುರವರ್ಗಪಾಲನಕೋವಿದದುರ್ಘಟಿತಧುರಧೀರ ಭವಸಂಸರ್ಗದೂರ ಸನಾತನನಿರ್ಗುಣೈಕಧ್ಯಾನಪರ ಸನ್ಮಾರ್ಗಭಕ್ತಿನಿಕೇತನ 7ಚಾರುಪಾವಂಜಾಖ್ಯಕ್ಷೇತ್ರಾಧಾರದಾಂತದಯಾಕರನೀರಜಾಸನತನಯ ಲಕ್ಷ್ಮೀನಾರಾಯಣಕಿಂಕರವಾರಿನಿಧಿಗಂಬೀರ ದೀನೋದ್ಧಾರ ಧಾರ್ಮಿಕಜನಹಿತವಾರಣಾಸ್ಯಕುಮಾರಗುರು ಗೌರೀರಮಣ ಸುದೃಢವ್ರತ 8
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಸಾರಸಾರಸಾರಹರಿಯಪಾರ ಮಹಿಮ ನಾಮಘೋರಸಂಸಾರಾಬ್ಧಿಶೀಘ್ರೋತ್ತಾರನೌಕಾಧಾಮ 1ವಿಧಿಭವಾದ್ಯಮರೌಘ ಧ್ಯಾನಾಸ್ಪದ ಕಲ್ವದ್ರುಮಪರಮಾಖಿಲ ಭಕ್ತಭವಯಕುಧರವಜ್ರೋಪಮ 2ಭಕ್ತಿ ಜ್ಞಾನ ವೈರಾಗ್ಯ ಭಾಗ್ಯ ನಿವೃತ್ತಿ ಸುಖ ನಿಸ್ಸೀಮಕರ್ತಲಕ್ಷ್ಮೀನಾರಾಯಣನ ಭೃತ್ಯವರ್ಗಕ್ಷೇಮ3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ