ಒಟ್ಟು 42 ಕಡೆಗಳಲ್ಲಿ , 26 ದಾಸರು , 38 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀನಿವಾಸ ಪಾಹಿಮಾಂ-ಶ್ರೀಯಮಯನ್ಮನೋರಮಾಂ ಪ ದೀನಲೋಲ ಕಾಮನ-ಧೀರಮುನಿವಿಭಾವನ 1 ಪೂರ್ಣಚಂದ್ರಾನನ-ಪುಣ್ಯವೃಕ್ಷಕಾನನ 2 ಸೇವಕಾನಂದನ-ದೇವಕೀನಂದನ 3 ಶಂಖಚಕ್ರ ರಂಜನ-ಕಿಂಕರಾರ್ತಿಭಂಜನ 4 ದೂರಕೋಟಿ ಸುಮದರ-ಶ್ರೀರಮಾಮನೋಹರ 5 ದೂರಿತಾಘ ಸಂಕುಲ-ದುಷ್ಟಕುಲಾನಲ 6 ಪುಂಡರೀಕ ಲೋಚನ-ಚಂಡ ಪಾಪಮೋಚನ 7 ಭವ ಭಯೋತ್ತಾರಣ-ಭವ್ಯ ಸುಗುಣ ಪೂರಣ8 ವ್ಯಾಘ್ರಾದ್ರಿ ನಾಯಕ-ವ್ಯಕ್ತ ಸೌಖ್ಯದಾಯಕ 9 ತವಪದಾಂಬೋರುಹಂ ಭವತು ಹೃತ್ಸುಖಾವಹಂ10 ವರದ ವಿಠಲ ಶ್ರೀಧರ-ಶರಣ ಜನ ದಯಾಕರ 11
--------------
ಸರಗೂರು ವೆಂಕಟವರದಾರ್ಯರು
ಶ್ರೀರಂಗನಾಥಾ ಶ್ರಿತ ಸೌಖ್ಯದಾತ ಪ ದಾತ ಅ.ಪ ಬ್ರಹ್ಮಕರಾರ್ಚಿತ ಪಾದಾರವಿಂದ ಬ್ರಹ್ಮಜನಕ ಪೂರ್ಣಾನಂದ ಮುಕುಂದಾ 1 ರಾವಾಣಾನುಜಗೆ ಒಲಿದು ನೀ ಬಂದೆ 2 ಕಾವೇರಿ ತಪಗೈಯೆ ಕರುಣದಿ ನೀ ನೋಡಿ ದೇವ ತನ್ಮಧ್ಯದಿ ನೆಲೆಸಿದೆ ಹೂಡಿ 3 ಏಳು ಪ್ರಾಕಾರ ಮಧ್ಯದಲ್ಲಿರುವವನೆ ಫಾಲನಯನ ಸಖ ಪತಿತ ಪಾವನನೆ 4 ನಿನ್ನ ಸಂದರುಶನ ಮಾಡಿದ ಜನರು ಧನ್ಯರಾಗುತಯಿಹಪರ ಪಡೆಯುವರು 5 ಚಂದ್ರ ಪುಷ್ಕರಣಿಯೋಳ್ಮಿಂದ ತಕ್ಷಣದಿ ಬೆಂದು ಪೋಗುವುದಘವೃಂದವು ಭರದಿ 6 ಗುರುರಾಮ ವಿಠ್ಠಲ ವರಮುನಿ ಪಾಲ ಶರಣಜನಾಧಾರ ಶ್ರೀ ತುಲಸೀ ಮಾಲಾ 7
--------------
ಗುರುರಾಮವಿಠಲ
ಸದ್ಗುರುವಿನ ಕೈಯ ಸದ್ಗೈಸಿಕೊಂಡವಗೆ ಜಯ ಧ್ರುವ ಭಾವ ಬಲಿದು ಶುದ್ಧ ಪವಿತ್ರವಾದ ಪ್ರಬುದ್ಧ ಅವ ನೋಡಿ ತಾ ಸ್ವತ:ಸಿದ್ಧ ಭವದಾಟಿದ್ದ 1 ಸದ್ಗುರು ಸುದಯದೀಕ್ಷ ಸಾಧಿಸಿತವಗೆ ಲಕ್ಷ ಮೇದಿನಿಯೋಳಗೆ ಸುಭಿಕ್ಷ ಬೋಧಕ ಸುಪಕ್ಷ 2 ಸದ್ಗತಿ ಸುಖಸ್ವಾದ ಸಾಧಿಸಿ ಮಹಿಪತಿ ಬೋಧ ಹೊಂದಿ ತೋರಿತು ಸೌಖ್ಯದ ಸದ್ಗುರು ಪ್ರಸಾದ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸುರಪಕುಮಾರ ನಾರಣ ಗೀತಾರ್ಥ ಪ ಧರಣಿಯ ಸೌಖ್ಯದ ಬಯಕೆಯು ವ್ಯರ್ಥ ಅ.ಪ ಮರಣಕಾಲದಿ ತನ್ನ ಬಳಿಗೆ ಬಂದಾತನ ಚರಣವೆ ಶರಣೆಂದ ಖಗನು ಸಮರ್ಥ ಶರಣೆಂದೆನ್ನುತ ಧರಣಿಜೆಯರಸನ ಚರಣವ ನುತಿಸಿದ ದನುಜ ಸಮರ್ಥ1 ಸರಳ ಪಂಜರದಲಿ ಶಯನಿಸಿದಾಗ ತನು ಹರಿ ಶರಣೆಂದುದು ಪರಮ ಪದಾರ್ಥ ಗುರು ಉಪದೇಶದಿ ಶರಣಾಗತಿಯ ಮಾಂ ಗಿರಿಯರಸಗೊರೆವುದೆ ಚಿರ ಚರಿತಾರ್ಥ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಹರಿ ಹರಿ ಹರಿ ಹರಿ ಹರಿಯೆನಬೇಕು ಹರಿ ಸ್ಮರಣೆಯೋಳನುದಿನವಿರಬೇಕು ಧ್ರುವ ಹರಿಯೇ ಶ್ರೀ ಪರಬ್ರಹ್ಮೆನಬೇಕು ಹರಿ ಪರಂದೈವೆವೆಂದರಿಬೇಕು ಹರಿಯೇ ತಾ ಮನದೈವೆನಬೇಕು ಹರಿ ಋಷಿ ಮುನಿಕುಲಗೋತ್ರೆನಬೇಕು 1 ಹರಿಯೇ ತಾಯಿತಂದೆನಬೇಕು ಹರಿಯೇ ನಿಜ ಬಂಧುಬಳಗೆನಬೇಕು ಹರಿಯೇ ಆಪ್ತ ಮೈತ್ರೆನಬೇಕು ಹರಿಕುಲಕೋಟೀ ಬಳಗೆನಬೇಕು 2 ಹರಿಯೇ ಸಲಹುವ ದೊರೆಯನಬೇಕು ಹರಿ ಸುಖ ಸೌಖ್ಯದ ಸಿರಿಯೆನಬೇಕು ಹರಿ ನಾಮವೆ ಧನದ್ರವ್ಯೆನಬೇಕು ಹರಿಸ್ಮರಣೆಯು ಸಂಪದವೆನಬೇಕು 3 ಹರಿದಾಸರ ಸಂಗದಲಿರಬೇಕು ಹರಿಭಕ್ತರ ಅನುಸರಿಸಿರಬೇಕು ಹರಿಚರಣದಿ ರತಿಮನವಿಡಬೇಕು ಹರಿ ನಿಜರೂಪವ ನೋಡಲಿಬೇಕು 4 ಹರಿ ಮಹಿಮೆಯ ಕೊಂಡಾಡಲಿಬೇಕು ಹರಿಸ್ತುತಿಸ್ತವನ ಪಾಡಲಿಬೇಕು ಹರಿತಾರಕ ಪರಬ್ರಹ್ಮೆನಬೇಕು ಹರಿ ಸರುವೋತ್ತಮ ಸ್ವಾಮೆನಬೇಕು 5 ಹರಿಯೇ ಸಕಲ ತಾ ಧರ್ಮನಬೇಕು ಹರಿ ಸರ್ವಮಯ ಪುಣ್ಯಕ್ಷೇತ್ರೆನಬೇಕು ಹರಿಯೇ ಇಹಪರ ಪೂರ್ಣೆನಬೇಕು ಹರಿ ಸದೋದಿತ ಸಹಕಾರೆನಬೇಕು 6 ಹರಿ ಬಾಹ್ಯಾಂತರೇಕೋಮಯವೆನಬೇಕು ಹರಿ ಸಕಲವು ವ್ಯಾಪಕವೆನಬೇಕು ಹರಿಯೇ ಶ್ರೀ ಪರಮಾತ್ಮೆನಬೇಕು ಹರಿ ಮಹಿಪತಿ ಸದ್ಗತಿಯೆನಬೇಕು 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರೇ ಕೃಷ್ಣ ಲೋಕನಾಯಕ ಪಾಲಿಸೆನ್ನ ದೊರೆ ಸರ್ವ ಸೌಖ್ಯದಾಯಕ ಪ. ಮೂಢ ಚಿಂತೆ ಎಂಬುದೋಡಿಸು ಕರುಣವಿರಿಸು ಸದಾ ನಿನ್ನ ಸ್ಮøತಿಯ ನೀಡಿಸು ಉದಾಸೀನಭಾವದೂಡಿಸು ಭೂಪ ನಿನ್ನ ಪದಾಬ್ಜವನು ಶಿರದೋಳಾಡಿಸು 1 ಪರಮನೋವೃತ್ತಿ ತಿಳಿಯದೆ ನಿತ್ಯದಲ್ಲಿ ಕರಗಿ ಕಲ್ಮಶವನು ತಾಳಿದೆ ಮರುಗಿ ಮುಗ್ಗಿ ಮುಂದುಗಾಣದೆ ತತ್ವ ತಿಳಿಯ- ದಿರುವೆ ನಿಂತು ಕಂಪುಗೊಳ್ಳದೆ 2 ಈಶ ನೀನೊಬ್ಬನಲ್ಲದೆ ದಾಸನನ್ನು ಪೋಷಿಸುವರ ಕಾಣೆ ಲೋಕದಲಿ ಬೇರಿನ್ನು ಬೇಡವೆನ್ನಲಿ ವೆಂಕಟಾದ್ರಿ ಭೂಪ ಬೇಗ ಕಾಯೊ ಕರುಣದಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಮಲವು ತೊಳೆಯಬಲ್ಲುದೆಮನವ ತೊಳೆಯದನಕ ಪಹಲುವು ನೀರಿನೊಳಗೆ ಪೊಕ್ಕುಹಲುಬಿದರಿನ್ನೇನು ಫಲ? ಅಪಬೋಗಫಲವನುಂಡು ವಿಷಯ ಭೋಗದಿಂದ ಮತ್ತರಾಗಿಭೋಗಬೇಡಿ ಜನರು ಜೀವಕಾಗಿ ಮುನಿವರುಯೋಗಿಯಂತೆ ಜನರ ಮೆಚ್ಚುಗಾಗಿ ಹೋಗಿ ಉದಯದಲ್ಲಿಕಾಗೆಯಂತೆ ಮುಳುಗಿದರೆ ಅಮೋಘ ಫಲವು ಬಾಹೊದೆ? 1ಪರರ ಕೇಡಬಯಸಿಗುರು - ಹಿರಿಯರನ್ನು ನಿಂದಿಸುತಪರಮ ಸೌಖ್ಯದಿಂದ ಪರಸ್ತ್ರೀಯರನ್ನ ಆಳುತಪರಮಯೋಗನಿಷ್ಟೆಯೆಂದು ಧರೆಯ ಮೇಲೆ ಡಂಭತೋರಿಹರಿವ ನದಿಯ ತೀರದಲ್ಲಿ ಪರಿಯು ಬಕ ಧ್ಯಾನದಂಥ 2ತಂದೆ - ತಾಯಿ ತಿರುತಿನ್ನಲು ಒಂದು ದಿವಸ ಕೇಳಲಿಲ್ಲಮಂದಗಮನೆಯರೊಡನೆ ಆನಂದದಿಂದ ನಲಿಯುತತಂದೆಯ ಹೆಸರಿನಿಂದ ನೂರು ಮಂದಿಗುಣಿಸಿ ಹರುಷದಿಂದತಂದೆ ತೃಪ್ತನಾದನೆಂಬ ಮಂದಮತಿಯ ಜನರುಗಳ 3ಕಾಸವೀಸಕ್ಕಾಗಿ ಹರಿಯದಾಸನೆಂದು ತಿರುಗಿ ತಿರುಗಿದೇಶದಿಂದ ದೇಶಕಿಳಿದು ಕಾಶಿಯಾತ್ರೆ ಮಾಡಲುಆಶಾಪಾಶ ಬಿಡದ ಮನದ ಕೂಸಿನಂತೆ ಕಾಡುತಿಪ್ಪವೇಶಧಾರಿಗಳಿಗೆ ಆ ಕಾಶಿಯ ಫಲ ಬಾಹೊದೆ? 4ಏನು ಮಾಡಲೇನು ಫಲ - ಏನು ನೋಡಲೇನು ಫಲಜ್ಞಾನವಿಲ್ಲದಚ್ಯುತನ ಧ್ಯಾನವಿಲ್ಲದವರಿಗೆಮೌನ ನೇಮ ನಿಷ್ಠೆ ಪರಾಧೀನವೆಂಬುದ ತಿಳಿದುಕೊಂಡುದೀನನಾಥ ಪುರಂದರವಿಠಲನ ನಿಲುಕಲೊಲ್ಲದೆ 5
--------------
ಪುರಂದರದಾಸರು
ಶ್ರೀಮುಖ ಸಂವತ್ಸರ ಸ್ತುತಿ150ಶ್ರೀಮುಖ ಸಂವತ್ಸರದಿ ಈ ಮಹೀ ಸಜ್ಜನರು ಸರ್ವರನುಕಷ್ಟಉಪಟಳಹಾವಳೀ ಯಾವುದೂ ಪೀಡಿಸದೆ ಸೌಖ್ಯದಲಿಇರಲಿಕ್ಕೆ ದಯಮಾಡಿ ಒದಗಲಿನಿರ್ದೋಷಸರ್ವೇಶ ರಮಾಪತಿಯು ಪಪೂರ್ಣ ಕಲ್ಯಾಣತಮ ಗುಣಗಣಾರ್ಣವ ಆನಘಶ್ರೀಮನ್ನಾರಾಯಣನು ಘನದಯದಿ ಅತ್ರಿ ಋಷಿಗೊಲಿದುತನ್ನನ್ನು ತಾನೇವೆ ದತ್ತಮಾಡಿ ತಾ ದತ್ತನೆನೆಸಿಕೊಂಡಅನುಪಮ ಮಹಾಯೋಗ ಯೋಗೇಶ್ವರನುಶ್ರೀಮುಖದಿ ಕಾಯಲಿ ಶರಣೆಂಬೆ 1ಶ್ರೀಮುಖ ಸಂವತ್ಸರ ಅನುಕೂಲ ಕಾಲವು ಯೋಗ್ಯ ಸುಜನರಿಗೆಶ್ರೀ ಮಹಾಮುನಿಕುವರನೆಂದು ಪ್ರಾದುರ್ಭವಿಸಿದ ದತ್ತಾತ್ರೇಯನ್ನಸುಮನಸೆ ವಾಕ್‍ಕಾಯದಿಂ ಸೇವಿಸುವವರಿಗೆಜ್ಞÕನಬಲ ಐಶ್ವರ್ಯವಿತ್ತುರೋಗನಿವಾರಣ ಮಾಳ್ಪ ಕರುಣಾಳುದತ್ತಘೃಣೀಬ್ರಹ್ಮವಾಯುಸೇವ್ಯ 2ಶ್ರೀಮುಖ ಸಂವತ್ಸರ ರಾಜಾ ಬುಧನು ಮಹಾಶ್ರೇಷ್ಠ ಬುದ್ಧಿಕುಶಲನುಬ್ರಹ್ಮದೇವರಿಂದ ಕೃತ ಬುಧನಾಮ ಶ್ರೀ ನಾರಾಯಣ ಪ್ರಿಯನುಸಂವತ್ಸರ ಸಚಿವಾದಿ ಉಪನಾಯಕ ಸಹಪಾಲಿಸಲಿ ಲೋಕ ಜನರನ್ನುಬ್ರಹ್ಮದೇವರಪಿತ ಪ್ರಸನ್ನ ಶ್ರೀನಿವಾಸ ಶ್ರೀಕೃಷ್ಣನೊಲುಮೆಯಿಂದ 3 ಪ
--------------
ಪ್ರಸನ್ನ ಶ್ರೀನಿವಾಸದಾಸರು