ಒಟ್ಟು 39 ಕಡೆಗಳಲ್ಲಿ , 22 ದಾಸರು , 38 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

126 - 3ಚತುರ್ಥ ಕೀರ್ತನೆಸತ್ಯ ಬೋಧಾರ್ಯರ ವೃತತಿಜಾಂಘ್ರಿಗಳಲ್ಲಿಸತತ ಶರಣಾದೆ ನಾಹಿತದಿ ಪಾಲಿಪರುಪ್ರತತ ಭೂಮಾದಿ ಗುಣಸಿಂಧು ಪುರುಷೋತ್ತಮನವಿತತ ಮನದಲಿ ಧ್ಯಾನಿಸಿ ಒಲಿಸಿಕೊಂಡ ಪಸತ್ಯಬೋಧಾರ್ಯರು ಭಾಗೀರಥಿ ಕುರಿತುಯಾತ್ರೆ ಮಾಡಲು ಮನದಿ ಯೋಚಿಸುತಲಿದ್ದಾಗಇದ್ದ ಕಡೆಯಲ್ಲೆ ಗಂಗಾ ಬಂದು ಒದಗುವಳುಎಂದು ಸ್ವಪ್ನವು ಆಯಿತು ಅಂದು ರಾತ್ರಿಯಲಿ 1ಶ್ರೀ ಮಠಕ್ಕೆ ಅರ್ಧಗಾವುದ ದೂರ ಇರುವಂಥಭೂಮಿಯಲಿ ಕೃಷಿಕೂಪ ಬಹು ದೊಡ್ಡದಲ್ಲಿಸಮೀಪಸ್ತ ಔದುಂಬರತರುಮೂಲದಿಂಅಮರ ತಟನೀ ಬರುವ ವೇಳೆಯು ತಿಳಿಯಿತು 2ಶ್ರೀಗುರು ನವಾಬನಿಗೂ ಖಂಡೇರಾಯನಿಗುನಗರಜನರಿಗು ತಿಳಿಸಿ ಆ ಸ್ಥಳಕ್ಕೆ ಪೋಗೆಗಂಗಾವತರಣವು ಆಯಿತು ಸೂಚಿತವೇಳೆಕಂಗೊಳಿಸುವ ಬಾಗೀರಥೀ ಧಾರಾಸುರಿದು 3ತ್ರಿವಿಕ್ರಮ ಸುಪಾದಜಾ ತ್ರಿಜಗತ್ ಪಾವನಿಗಂಗಾತ್ರಿದಶೇಶ್ವರಿ ನಳಿನಿ ಸೀತಾನಮಸ್ತೆತ್ರಾಹಿಜಾಹ್ನವಿಭಾಗೀರಥೀ ನಮೋ ಭೋಗವತಿತ್ರಿಪಥ್‍ಗಾಮಿನಿಪಾಹಿಮಾಲತಿ ನಂದಿನಿ4ನವಾಬನು ಮಂತ್ರಿಯು ನೆರೆದಿದ್ದ ಜನರೆಲ್ಲದೇವ ತಟಿನಿ ಧಾರಾ ಸುರಿದದ್ದು ನೋಡಿದೈವೀಕ ಈ ಮಹಿಮೆ ಕೊಂಡಾಡಿ ಸ್ನಾನಜಪಸೇವೆದಾನಾದಿಗಳ ಮಾಡಿದರು ಮುದದಿ 5ವಿಷ್ಣುತೀರ್ಥ ಎಂಬ ನಾಮ ಈ ತೀರ್ಥಕ್ಕೆವಿಷ್ಣು ಭಕ್ತಾಗ್ರಣಿ ಸದಾಶಿವನ ಲಿಂಗವಿಷ್ಣು ತೀರ್ಥದ ದಡದಿ ಇಹುದು ಶರಣೆಂಬೆವಿಷ್ಣು ್ವಂಘ್ರಿ ಜಾತೆಗೂ ಉಮೇಶನಿಗೂ ಶ್ರೀಶಗೂ 6ಶ್ರೀ ಸತ್ಯಬೋಧರು ಗಂಗೆಯ ತರಿಸಿದ್ದುಶ್ರೀ ಸತ್ಯಬೋಧರ ಬಹು ಇಂಥ ಮಹಿಮೆವಸುಮತಿಯಲಿ ಹರಡಿ ದೇಶ ದೇಶಗಳಿಂದಭೂಸುರರು ಸಜ್ಜನರು ಬಂದು ಸೇವಿಪರು 7ಪಟ್ಟಣದ ಮಧ್ಯದಿ ನವಾಬ ಕೊಡಿಸಿದ ಸ್ಥಳದಿಕಟ್ಟಡವು ಶ್ರೀಮಠ ವಿಸ್ತಾರವಾದ್ದುಮಠದಲ್ಲೇ ಉಂಟೊಂದು ಸೋಪಾನ ಭಾವಿಯುಕಟ್ಟೆಯಲಿ ಶಿವಲಿಂಗ ಭಾವಿಯಲಿ ಗಂಗಾ 8ಭೃಗು ಅಂಶ ವಿಜಯದಾಸಾರ್ಯರ ಪ್ರಭಾವವುಏಕದಂತಾಂಶ ಗೋಪಾಲ ದಾಸಾರ್ಯರ ಪ್ರಭಾವಭಾಗಣ್ಣಾನುಜರು ಈರ್ವರು ಪ್ರಭಾವವಶ್ರೀ ಗುರುಗಳು ಮೆಚ್ಚಿ ಮಾನ್ಯ ಮಾಡಿದರು 9ವಿದ್ವತ್ಸ್‍ಭೆಯಲಿ ಗೋಪಾಲದಾಸಾರ್ಯರುಆ ದಾಸವರ್ಯರ ಅನುಜರು ಈರ್ವರುದೇವತಾಂಶದವರುಅಪರೋಕ್ಷಪ್ರಚುರರುಎಂದು ಜನರಿಗೆ ನಿದರ್ಶನ ತೋರಿಸಿದರು 10ವಿಠ್ಠಲ ನೃಹರಿವ್ಯಾಸ ಶ್ರೀಸಹ ವೇಂಕಟರಾಮಘೋಟಕಾಸ್ಯ ಮಧ್ವೇಶನ್ನರಾಧಿಪಂತಮಠದಲ್ಲಿ ಜಗನ್ನಾಥ ದಾಸಾರ್ಯರ ಸೇವೆಕೊಂಡು ಬಹು ಪ್ರೀತಿಯಲಿ ಅನುಗ್ರಹ ಮಾಡಿಹರು 11ಅಮಲ ವೈದಿಕ ತತ್ವ ಮಧ್ವಸಿದ್ಧಾಂತವಭೂಮಿ ದೇವರಿಗೆ ಬೋಧಿಸಿ ಸರ್ವಜನರ್ಗುಕ್ಷೇಮ ಒದಗಿಸಿ ರಮಾಕಾಂತನ್ನ ಸ್ಮರಿಸುತಈ ಮಹಿಯೋಳ್ ಸರ್ವಜನ ಪ್ರಿಯತಮರಾಗಿಹರು 12ಒಳ್ಳೆರೀತಿಯಲಿ ಚತ್ವಾರಿವತ್ಸರಮಠಆಳಿ ಶಾಲಿಶಕ ಹದಿನೇಳ್ ನೂರೈದುಫಾಲ್ಗುಣ ಕೃಷ್ಣ ಪ್ರತಿಪದ ದಿನ ಹರಿಧ್ಯಾನದಲ್ಲಿ ಕುಳಿತರು ಲೋಕ ಚಟುವಟಿಕೆ ತೊರೆದು 13ಸತ್ಯಬೋಧರ ವೃಂದಾವನದಿ ಅವರೊಳಿಹನುಸತ್ಯಬೋಧಾಹ್ವಯನು ಶ್ರೀಸಹಹಯಾಸ್ಯವಾತಸೇವಿತ ರಾಮಕೃಷ್ಣನೃಹರಿ ವ್ಯಾಸಭೃತ್ಯವತ್ಸಲ ವಾಮದೇವನುತನಾಗಿ 14ದರ್ಶನ ಪ್ರದಕ್ಷಿಣೆ ನಮನ ಪಾದೋದಕಸಂಸ್ಕøತಿಸುಚರಿತ್ರೆ ಪಾರಾಯಣಸಚ್ಛಾಸ್ತ್ರ ಪ್ರವಚನ ಜಪತಪದಾನಾದಿಗಳುವಾಂಛಿತಪ್ರದ ಸರ್ವ ಪೀಡಹರವು 15ಪುತ್ರಧನ ಆರೋಗ್ಯ ಆಯುಷ್ಯ ಮಾಂಗಲ್ಯತಾಪತ್ರಯ ಪರಿಹಾರ ರೋಗ ನಿವೃತ್ತಿಕ್ಷಿಪ್ರಲಭಿಸುವುವು ಹರಿಗುರುಗಳ ದಯದಿಂದಸುಶ್ರವಣ ಪಠನ ಈ ಗ್ರಂಥಮಾಳ್ಪರಿಗೆ 16ಸತ್ಯಸಂಧಾರ್ಯರು ಮಹಾಮಹಿಮ ಶಿಷ್ಯರುಸತ್ಯಬೋಧರ ಆರಾಧನ ಭಕ್ತಿಉತ್ಸಾಹದಿ ಮಾಡಿದರು ಅದ್ಯಾಪಿ ಸಹಸ್ರಾರುಭಕ್ತರು ಸೇವಿಸುತಿಹರು ಪ್ರೇಮದಲಿ 17ಹೇಮಗರ್ಭನತಾತಶ್ರಿಪತಿ ಜಗನ್ನಾಥಅಮಲಗುಣಗಣಸಿಂಧು ಪ್ರಸನ್ನ ಶ್ರೀನಿವಾಸರಾಮ ಹಯಮುಖವ್ಯಾಸನೃಹರಿಗೆ ಪ್ರಿಯತಮರೆನಿಮ್ಮಲ್ಲಿ ಶರಣಾದೆ ಸತ್ಯಬೋಧಾರ್ಯ 18 ಪ|| ಇತಿ ಶ್ರೀ ಸತ್ಯಬೋಧ ಚರಿತ್ರೆ ಸಂಪೂರ್ಣಂ ||
--------------
ಪ್ರಸನ್ನ ಶ್ರೀನಿವಾಸದಾಸರು
130-2ತೃತೀಯ ಕೀರ್ತನೆಶ್ರೀ ಹರಿಪಾದಾಬ್ಜರತ ಶ್ರೀ ವಿಷ್ಣು ತೀರ್ಥವನ-ರುಹಅಂಘ್ರಿಯುಗ್ಮದಲಿ ಶರಣಾದೆ ಸತತಪಮಹಾಕರುಣಿಯು ಪರಮಹಂಸ ಕುಲತಿಲಕರುಅಹರ್ನಿಶಿಒದಗುವರು ಶರಣು ಸುಜನರಿಗೆಅ ಪಸ್ಥೂಲಪ್ರವಿವಿಕ್ತಆನಂದ ಭುಕ್ ಅವ್ಯಯನಶೀಲತಮ ಮಂತ್ರ ಶ್ರೀ ಸತ್ಯವರವದನಸಲಿಲೋರುಹದಿಂದ ಶ್ರೀ ವಿಷ್ಣು ತೀರ್ಥರುಬಲುಭಕ್ತಿಯಿಂದಲಿ ಕೊಂಡರುಪದೇಶ 1ಪೂರ್ವಾಶ್ರಮದಲ್ಲಾಚರಿಸಿದ ರೀತಿಯಲಿತತ್ವಪ್ರಕಾಶಿಕಾ ಸುಧಾಭಾಗವತಸರ್ವಸಚ್ಛಾಸ್ತ್ರ ಬೋಧಿಸುತ ಕುಶಾವತಿಯಪವಿತ್ರ ತೀರದಿ ಮಾದನೂರು ಸೇರಿದರು 2ಸುಧಾವನ್ನು ತತ್ವಪ್ರಕಾಶಿಕವನ್ನುಒಂದು ನೂರೆಂಟು ಅವರ್ತಿ ಪಠಿಸುತಮಧ್ವಹೃತ್ಪದ್ಮಸ್ತ ಮಾಧವನ ಅರ್ಚಿಸುತಮಾದನೂರಲ್ಲೇವೆ ವಾಸಮಾಡಿದರು 3ಪೂರ್ವಾಶ್ರಮ ನಾಮ ಜಯತೀರ್ಥಾಂಕದಲ್ಲಿತತ್ವಪ್ರಕಾಶಿಕಾ ಸುಧಾ ಟಿಪ್ಪಣಿಯುಮೂವತ್ತು ಪ್ರಕರಣ ಶ್ರೀಭಾಗವತಸಾರೋ-ದ್ಧಾರವ ಚತುರ್ದಶಿ ಷೋಡಶಿ ಬರೆದಿಹರು 4ತತ್ವಬೋಧÀಕ ಸುಸ್ತೋತ್ರ ಬಿನ್ನಹರೂಪಆಧ್ಯಾತ್ಮ ರಸರಂಜಿನಿ ಅಮೃತ ಫೇಣಭಕ್ತಿಯಲಿ ಪಠಿಸಲುಅಪರೋಕ್ಷಪುರುಷಾರ್ಥಸಾಧನವಾಗಿಹುದನ್ನ ರಚಿಸಿಹರು ಇವರು 5ಹದಿನಾರು ನೂರೆಪ್ಪತೆಂಟು ಶಾಲಿಶಕಯದುಪತಿ ಅಷ್ಟಮಿ ಈಶ್ವರ ಶ್ರಾವಣದಿಜಾತರಾಗಿ ಶ್ರೀಹರಿಪಾದಾಂಬುಜದಲ್ಲಿಸದಾರತರಾದರು ಐವತ್ತು ವರುಷ 6ಕೃತಕೃತ್ಯ ಧನ್ಯ ಮನದಿಂದಲಿ ಈ ಮಹಾನ್ಐದೆಹರಿಪುರ ಲಯವ ಚಿಂತನೆ ಮಾಡಿಹದಿನೇಳ್ ನೂರಿಪ್ಪತ್ತು ಎಂಟು ಶಕ ಮಾಘ ತ್ರ -ಯೋದಶಿ ಕೃಷ್ಣದಲ್ಲಿ ಕೃಷ್ಣನ ಸೇರಿದರು 7ಮತ್ತೊಂದು ಅಂಶದಿ ವೃಂದಾವನದಲ್ಲಿಹರುಭಕ್ತಿಯಿಂ ಸ್ಮರಿಸಿದರೆ ಬಂದು ಸಲಹುವರುಬಹುದೂರ ಧಾರವಾಡ ಕುಶನೂರು ಮತ್ತೆಲ್ಲಬಹುದೂರದವರ ಸಹ ಸೇವಿಪರು ಇವರ 8ಬೃಹತಿಸಹಸ್ರಪ್ರಿಯ ಮಹಿದಾಸ ಜಗದೀಶಬ್ರಹ್ಮಪಿತ ಭಕ್ತಪಾಲಕ ಪರಮಹಂಸಮಹಿಶಿರಿಕಾಂತ `ಶ್ರೀ ಪ್ರಸನ್ನ ಶ್ರೀನಿವಾಸ'ಮಹಾಭಕ್ತ ಶ್ರೀ ವಿಷ್ಣು ತೀರ್ಥಾರ್ಯಶರಣು 9 ಪ
--------------
ಪ್ರಸನ್ನ ಶ್ರೀನಿವಾಸದಾಸರು
ಪವಡಿಸು ಪರಮಾತ್ಮಾ ಶ್ರೀ ಶ್ರೀಶಾಪವಡಿಸು ಪರಮಾತ್ಮಾ ಪಪರಮಭಕ್ತರನು ಪೊರೆಯುವ ದೇವನೆಅ.ಪರನ್ನಮಂಟಪದೊಳು ಕನ್ನಡಿಯಂದದಿಸ್ವರ್ಣವರ್ಣದಲಿಹ ಪನ್ನಂಗ ಕಾದಿಹ 1ಸುತ್ತಲು ತುಂಬುರರು ನಾರದರು ಸ್ತೋತ್ರವ ಮಾಡಿಅತ್ಯಂತ ಹರುಷದಿ ಚಿತ್ತೈಸೆಂದೆನುವರು 2ಥಳಥಳಿಸುವ ದಿವ್ಯತಾರೆಗಳಂದದಿಲಲನೆಶ್ರೀ ಭೂದೇವಿಯರು ಸೇವಿಪರು ನಿನ್ನ3ವೇದವ ಕದ್ದನ ಭೇದಿಸಿ ಅಜನಿಗೆವೇದವ ತಂದಿತ್ತು ಆದರಿಸಿದ ದೇವ 4ಮುಳುಗಿದ ಗಿರಿಯನು ಧರಿಸಿ ಬೆನ್ನಲಿ ಬೇಗಸುರರಿಗೆ ಅಮೃತವ ಕುಡಿಸಿದಮಾಧವ5ಸುರಮುನಿಗಳಿಗೆಲ್ಲಾ ಅಭಯವ ನೀಡುತವರಹರೂಪತಾಳಿ ಬಳಲಿ ದಣಿದು ಬಂದಿ6ಕಂದನಿಗಾಗಿ ದೊಡ್ಡ ಕಂಬದಿಂದುದಿಸಿ ಖಳನಕೊಂದು ಕರುಳ ವನಮಾಲೆ ಧರಿಸಿ ದಣಿದಿ 7ಮೂರಡಿ ಭೂಮಿಯ ಬೇಡಿ ಬಲೀಂದ್ರನದೂಡಿ ಪಾತಾಳಕೆ ಬಹಳ ಬಳಲಿ ಬಂದಿ 8ಭೂಮಿ ಪಾಲಕರನ್ನು ಸೋಲಿಸಿಬಾರಿಬಾರಿವಾರಿಜಾಕ್ಷ ಶ್ರೀರಾಮರಿಗೊಲಿದೆಯೊ 9ಸೇತುವೆಯನ್ನುಕಟ್ಟಿದೂರ್ತರಾವಣನ ಕುಲವಘಾತಿಸಿ ಕೊಂದ ರಘುನಾಥನೆ ಬಳಲಿದೆ 10ವಸುದೇವ ಕಂದನೆ ಶಿಶುರೂಪಿನಿಂದಲಿಅಸುರೆ ಪೂತಣಿ ಅಸುಹೀರಿ ಬಳಲಿ ಬಂದಿ 11ತಿದ್ದಿ ತ್ರಿಪುರಾಸುರರ ಮರ್ದಿಸಿ ಸುಜನರಿಗೆಮುದ್ದು ತೋರಿದ ಸುಪ್ರಸಿದ್ಧ ಮೂರುತಿ ಬೇಗ 12ಕರದಿ ಖಡ್ಗವ ಧರಿಸಿ ಸಿರದಿ ಕಿರೀಟ ಹೊಳೆಯೆಇಳೆಯ ಮನುಜರಿಗೆಲ್ಲ ಸುಲಭನಂದದಿ ತೋರ್ಪಿ 13ಮಂಗಳಚರಿತ ವಿಹಂಗವಾಹನ ಸುರಗಂಗೆಯಪಿತ ಸಾಧುಸಂಗವಂದಿತ ದೇವ 14ಗರುಡಗಮನ ಕೃಷ್ಣ ಉರಗನ್ಹಾಸಿಗೆಯೊಳುಸಿರಿದೇವಿ ಸಹವರ ಕಮಲನಾಭ ವಿಠ್ಠಲ 15
--------------
ನಿಡಗುರುಕಿ ಜೀವೂಬಾಯಿ
ಬಂದು ನಿಂದಿಹ ನೋಡಿ- ಭೂತಳದಿ ವೆಂಕಟಇಂದಿರೆಯನೊಡಗೂಡಿ- ಒಪ್ಪುವ ನಿರಂತರಪೊಂದಿ ಭಜನೆಯ ಮಾಡಿ- ಆನಂದ ಬೇಡಿ ಪವಂದಿಸುತ ಮನೆದೊಳಗೆ ಇವನಡಿ-ದ್ವಂದ್ವ ಭಜಿಸಲು ಬಂದ ಭಯಹರ |ಇಂದುಧರಸುರವೃಂದನುತ ಗೋ-ವಿಂದಘನದಯಾಸಿಂಧು ಶ್ರೀಹರಿ ಅ.ಪದ್ವಾರದೆಡಬಲದಲ್ಲಿ- ಜಯವಿಜಯರಿಬ್ಬರುಸೇರಿ ಸೇವಿಪರಲ್ಲಿ- ಸನಕಾದಿನುತ ಶೃಂ-ಗಾರನಿಧಿ ಅಂಗದಲಿ- ಮುತ್ತಿನಲಿ ಶೋಭಿಪಹಾರ ಹೊಂದಿಹುದಲ್ಲಿ- ವಿಸ್ತಾರದಲ್ಲಿ ||ವಾರವಾರಕೆ ಪೂಜೆಗೊಂಬುವಹಾರ ಮುಕುಟಾಭರಣ ಕುಂಡಲ-ಧಾರಿ ಭುಜ ಕೇಯೂರ ಭೂಷಿತಮಾರಪಿತಗುಣಮೋಹನಾಂಗ ||ಚಾರುಪೀತಾಂಬರ ಕಟಿಯ ಕರ-ವೀರ ಕಲ್ಹಾರಾದಿ ಹೂವಿನಹಾರ ಕೊರಳೊಳು ಎಸೆಯುತಿರೆ ವದ-|ನಾರವಿಂದನು ನಗುತ ನಲಿಯುತ 1ಎಲ್ಲ ಭಕುತರಭೀಷ್ಟ-ಕೊಡುವುದಕೆ ತಾ ಕೈ-ವಲ್ಯ ಸ್ಥಾನವ ಬಿಟ್ಟ- ಶೇಷಾದ್ರಿ ಮಂದಿರದಲ್ಲಿ ಲೋಲುಪ ದಿಟ್ಟ-ಸೌಭಾಗ್ಯನಿಧಿಗೆದುರಿಲ್ಲ ಭುಜಬಲ ಪುಷ್ಪ-ಕಸ್ತೂರಿಯಿಟ್ಟ ||ಚೆಲ್ವ ಪಣೆಯಲಿ ಶೋಭಿಸುವ ಸಿರಿ-ವಲ್ಲಭನಗುಣಪೊಗಳದಿಹ ಜಗ-ಖುಲ್ಲರೆದೆದಲ್ಲಣ ಪರಾಕ್ರಮಮಲ್ಲಮರ್ದನಮಾತುಳಾಂತಕ||ಫಲ್ಗುಣನಸಖಪ್ರಕಟನಾಗಿಹದುರ್ಲಭನು ಅಘದೂರ ಬಹುಮಾಂಗಲ್ಯ ಹೃಯಯವ ಮಾಡಿ ಸೃಷ್ಟಿಗೆಉಲ್ಲಾಸ ಕೊಡುತಲಿ ಚೆಂದದಿಂದಲಿ 2ಪದಕ-ಕೌಸ್ತುಭದಾರ-ಸರಿಗೆಯ ಸುಕಂಧರಸುದರ್ಶನ-ದರಧಾರ-ಸುಂದರ ಮನೋಹರಪದಯುಗದಿ ನೂಪುರ-ಇಟ್ಟಿಹನು ಸನ್ಮುನಿಹೃದಯ ಸ್ಥಿತ ಗಂಭೀರ-ಬಹುದಾನ ಶೂರ ||ವಿಧಿ-ಭವಾದ್ಯರ ಪೊರೆವ ದಾತನುತುದಿ ಮೊದಲು ಮಧ್ಯವು ವಿರಹಿತನುಉದುಭವಾದಿಗಳೀವ ಕರ್ತನುತ್ರಿದಶಪೂಜೀತ ತ್ತಿಭುವನೇಶ ||ಸದುನಲಾಸದಿ ಸ್ವಾಮಿ ತೀರ್ಥದಿಉದುಸುತಿರೆಸಿರಿಮಹಿಳೆ ಸಹಿತದಿಪದುಮನಾಭಪುರಂದರವಿಠಲನುಮುದದಿ ಬ್ರಹ್ಮೋತ್ಸವದಿ ಮೆರೆಯುತ 3
--------------
ಪುರಂದರದಾಸರು
ಬಾರೋ ಬಾ ಮನೆಗೇ ರಂಗಯ್ಯ ನೀ |ತೋರೋ ಮುಖವೆನಗೆ ಪಘೋರಶರೀರ ಸುಂ |ದರಸೂಕ್ಷ್ಮಾಕಾರನೆ |ಕ್ರೂರ ದಯಾಕರ ಧೀರ ಉದಾರಿಯೆ ಅ.ಪನೀಲಮೇಘ ಶ್ಯಾಮ ನಿರ್ಮಲವನ | ಮಾಲ ಪೂರ್ಣಕಾಮ |ಕಾಲಭಯ ವಿದೂರ | ಫಾಳನೇತ್ರನಮಿತ್ರ|ಪಾಲಾಬ್ಧಿವಾಸ ಶ್ರೀಲೋಲ ಗೋಪಾಲನೇ 1ಶೇಷಶಯನ ದೇವಾ | ಭಕ್ತರಭವ|ದೋಷಹರ ಸಂಜೀವಾ |ನಾಶರಹಿತ ಸರ್ವ | ಆಶವಿನಾಶನ |ಭಾಸುರಾಂಗನೆ ಜಗ | ದೀಶ ಕೇಶವಮೂರ್ತಿ 2ಕಾಲೊಳಂದುಗೆಯೂ | ಪೀತಾಂಬರ |ಶಾಲುಮುದ್ರಿಕೆಯೂ | ತೋಳ ಸರಿಗೆ ಬಳೆ |ವೈಜಯಂತಿಯ ಮಾಲೇ ಮೇಲಾದರತ್ನಕಿರೀಟಕುಂಡಲಧಾರೀ | ಗರುಡನ ಏರಿ 3ಶಂಕೆಯಿಲ್ಲದ ಭಕ್ತರೂ | ನಿನ್ನಯ ಸದೃ-ಶಾಂಕದಿ ಸೇವಿಪರೂ | ಶಂಖಚಕ್ರಗದಾ |ಪದ್ಮವ ಧರಿಸಿದ | ಪಂಕಜನೇತ್ರವೈ- |ಕುಂಠ ವೆಂಕಟಪತೇ 4ಧಾರುಣಿ ಭಾರವನೇ | ಇಳುಹಲವ |ತಾರಗಳೆತ್ತುವನೆ |ಚಾರುಭುಜಾನ್ವಿತ |ಕೌಸ್ತುಭಮಣಿಹಾರ | ವಾರಿಜನಾx
--------------
ಗೋವಿಂದದಾಸ
ರಥವನೇರಿದ ರಾಘವೇಂದ್ರರಾಯ ಗುಣಸಾಂದ್ರಸತತ ಮಾರ್ಗದಿ ಸಂತರ ಸೇವಿಪರಿಗೆಚತುರದಿಕ್ಕುವಿದಿಕ್ಕುಗಳಲ್ಲಿ ಹರಿವೊ ಜನರಲ್ಲಿಅತುಳಮಹಿಮನೆ ಆ ದಿನದಲ್ಲಿ ದಿತಿಜವಂಶದಲಿಪ್ರಥಮ ಪ್ರಹ್ಲಾದ ವ್ಯಾಸಮುನಿಯೆ ಯತಿ ರಾಘವೇಂದ್ರ
--------------
ಗೋಪಾಲದಾಸರು
ರಾಗಿ ತಂದಿರಾ - ಭಿಕ್ಷಕೆ -ರಾಗಿ ತಂದಿರಾ ಪ.ಯೋಗ್ಯರಾಗಿ ಭೋಗ್ಯರಾಗಿ |ಭಾಗ್ಯವಂತರಾಗಿ ನೀವು ಅಪಅನ್ನದಾನವ ಮಾಡುವರಾಗಿ |ಅನ್ನಛತ್ರವನಿಟ್ಟವ ರಾಗಿ ||ಅನ್ಯವಾರ್ತೆಗಳ ಬಿಟ್ಟವರಾಗಿ |ಅನುದಿನಭಜನೆಯ ಮಾಡುವರಾಗಿ..........1ಮಾತಾಪಿತರನು ಸೇವಿಪರಾಗಿ |ಪಾತಕಕಾರ್ಯವ ಬಿಟ್ಟವರಾಗಿ |ಖ್ಯಾತಿಯಲ್ಲಿ ಮಿಗಿಲಾದವರಾಗಿ |ನೀತಿಮಾರ್ಗದಲಿ ಖ್ಯಾತರಾಗಿ 2ಗುರು ಕಾರುಣ್ಯವ ಪಡೆದವರಾಗಿಗುರುವಿನ ಮರ್ಮವ ತಿಳಿದವರಾಗಿ ||ಗುರುವಿನ ಪಾದವ ಸ್ಮರಿಸುವರಾಗಿ |ಪರಮಪುಣ್ಯವನು ಮಾಡುವರಾಗಿ3ವೇದ ಪುರಾಣವ ತಿಳಿದವರಾಗಿ |ಮೇದಿನಿಯಾಳುವಂಥವರಾಗಿ ||ಸಾಧು ಧರ್ಮವಾಚರಿಸುವರಾಗಿ |ಓದಿ ಗ್ರಂಥಗಳ ಪಂಡಿತರಾಗಿ 4ಆರರ ಮಾರ್ಗವ ಅರಿತವರಾಗಿ |ಮೂರರ ಮಾರ್ಗವ ತಿಳಿದವರಾಗಿ ||ಭೂರಿತತ್ವವನು ಬೆರೆತವರಾಗಿ |ಕ್ರೂರರ ಸಂಗವ ಬಿಟ್ಟವರಾಗಿ 5ಕಾಮಕ್ರೋಧಗಳನಳಿದವರಾಗಿ |ನೇಮನಿಷ್ಠೆಗಳ ಮಾಡುವರಾಗಿ ||ಆ ಮಹಾಪದದಲಿ ಸುಖಿಸುವರಾಗಿ |ಪ್ರೇಮದಿ ಕುಣಿಕುಣಿದಾಡುವರಾಗಿ 6ಸಿರಿರಮಣನ ಸದಾ ಸ್ಮರಿಸುವರಾಗಿ |ಕುರುಹಿಗೆ ಬಾಗುವಂತವರಾಗಿ ||ಕರೆಕರೆಸಂಸಾರ ನೀಗುವರಾಗಿ |ಪುರಂದರವಿಠಲನ ಸೇವಿಪರಾಗಿ 7
--------------
ಪುರಂದರದಾಸರು
ಶ್ರೀ ಪ್ರಸನ್ನ ರಘೂತ್ತಮ ತೀರ್ಥರ ಚರಿತ್ರೆ122ಶ್ರೀ ರಘೂತ್ತಮರಂಘ್ರಿ ರಾಜೀವಯುಗ್ಮದಲಿಶಿರಬಾಗಿ ಶರಣಾದೆ ಧನ್ಯನಾದೆಶ್ರೀರಾಮಚಂದ್ರನ ಪೂರ್ಣಾನುಗ್ರಹ ಪೂರ್ಣಪಾತ್ರರು ಎಮ್ಮ ಪಾಲಿಸುವ ಕರುಣಾಳು ಪಶ್ರೀ ಹಂಸ ಲಕ್ಷ್ಮೀಶ ಪರಮಾತ್ಮ ಸರ್ವೇಶಬ್ರಹ್ಮ ಸನಕಾದಿಗಳ ಗುರುಪರಂಪರೆಯಬ್ರಹ್ಮಪದ ಐದುವ ಶ್ರೀ ಆನಂದತೀರ್ಥರನೀರ್ರುಹ ಚರಣಂಗಳಲ್ಲಿ ಶರಣಾದೆ 1ಪಂಕೇರುಹನಾಭ ನರಹರಿಮಾಧವಅಕ್ಷೋಭ್ಯ ಜಯತೀರ್ಥ ವಿದ್ಯಾಧಿರಾಜವಾಗ್ವಜ್ರ ರಾಜೇಂದ್ರ ಕವಿವರ ಕವೀಂದ್ರವಾಗೀಶಶ್ರೀ ರಾಮಚಂದ್ರರಿಗೆ ಶರಣು2ಶ್ರೀ ರಾಮಚಂದ್ರರ ಕರಜರು ಈರ್ವರಿಗೂಎರಡನೇಯವರು ವಿದ್ಯಾನಿಧಿಯಹಸ್ತಅರವಿಂದೋತ್ಪನ್ನ ರಘುನಾಥರಿಗೆ ನಮೋ ಎಂಬೆಸೂರಿವರ ರಘುವರ್ಯರಲ್ಲಿ ಶರಣಾದೆ 3ರಘುವರ್ಯ ಗುರುರಾಜ ಕರಕಮಲ ಸಂಜಾತರಘೂತ್ತಮ ತೀರ್ಥರ ಚರಣಕಾನಮಿಪೆಅಗಣಿತಗುಣಾಂಬುಧಿ ಅಘದೂರ ರಘುಪತಿಯಹೃದ್ಗುಹಾ ಒಳಹೊರಗೆ ಕಾಂಬುವಧೀರ 4ರಾಮಚಂದ್ರಾಚಾರ್ಯ ನಾಮ ಬಾಲಕನುಬ್ರಹ್ಮಚಾರಿಯು ಧೃಢÀವ್ರತನು ಹರಿಭಕ್ತಸುಮನೋಹರಮೂರ್ತೇ ಗುಣಗುಣಾಲಂಕೃತನುಈ ಮಹಾವೇದಾಂತ ಪೀಠಕ್ಕೆ ಅರ್ಹ 5ತಮ್ಮ ಮಠ ಶಿಷ್ಯರಲು ಮಾಧ್ವ ಸಜ್ಜನರಲ್ಲೂಸುಮಹಾಪಂಡಿತರು ಇರುತಿದ್ದರೂನುಈ ಮಹಾ ಪುರುಷ ಬಾಲನೇ ತಕ್ಕವನೆಂದುನೇಮಿಸಿದರು ಪೀಠಕ್ಕೆ ರಘುವರ್ಯ ಗುರುವು 6ರಘೂತ್ತಮತೀರ್ಥ ನಾಮದಿ ತುರೀಯಾಶ್ರಮರಘುವರ್ಯರೀ ರಾಮಚಂದ್ರಗೆ ಇತ್ತುರಾಘವನ ಪೂಜಾದಿ ಸಂಸ್ಥಾನ ಅಧಿಕಾರನಿಗಮಾಂತ ಗುರುಗಳು ನಿಯಮನ ಮಾಡಿದರು 8ವೇದವೇದಾಂತ ಸಚ್ಛಾಸ್ತ್ರ ಪಂಡಿತನುವಿದ್ಯಾರ್ಥಿ ಬಹುಮಂದಿಗೆ ಪಾಠ ಪೇಳುವವಿದ್ವಾಂಸ ಓರ್ವನ್ನ ರಘುವರ್ಯ ತೀರ್ಥರುವಿದ್ಯೆಕಲಿಸಲು ಏರ್ಪಾಡು ಮಾಡಿದರು9ಶೇಷಪ್ಪನಾಯಕರ ಮಕ್ಕಳು ಈರ್ವರಲಿಜ್ಯೇಷ್ಠ ಪುತ್ರನು ವಿದ್ವಾಂಸರಲಿ ಪ್ರಮುಖಶಿಷ್ಯರೂ ಬಹು ಜನರು ಈತನಿಗೆ ಉಂಟುಭೂಷಣವೆಂದೆನಿಸಿದನು ಮಾಧ್ವ ಸಮೂಹಕ್ಕೆ 10ಸಾವಿರದ ನಾನ್ನೂರು ಎಪ್ಪತ್ತ ಒಂಭತ್ತುಸಂವತ್ಸರದಲಿ ಶಾಲಿವಾಹನದಿದಿವಸ ತದಿಗೆ ಕೃಷ್ಣ ಜ್ಯೇಷ್ಠ ಪಿಂಗಳದಿಶ್ರೀವರನಪುರಕೆ ತೆರಳಿದರು ರಘುವರ್ಯರು 11ದಯಾಳು ರಘುವರ್ಯರು ಸಮಾಧಿಸ್ಥರಾಗಲುಬಾಲ್ಯಾವಸ್ಥೆಯಲಿ ಇದ್ದ ರಘೂತ್ತಮರುವಿದ್ಯಾವ್ಯಾಸಂಗಗುರುನಿಯಮನದಂತೇಯೆಗೈಯಲಿ ಪೋದರು ಆ ವಿದ್ವಾಂಸನಲ್ಲಿ 12ಮಣೂರು ಎಂದ್ಹೆಸರುಉಳ್ಳಆ ಊರಲ್ಲಿಘನವಿದ್ವನ್ಮಣಿಯಲ್ಲಿ ಕಲಿಯುವಾಗಧನವಂತ ಊರುನಾಯಕರಘೂತ್ತಮರಲ್ಲಿಬಿನ್ನೈಸಿದ ಭೋಜನಕೆ ಬರಬೇಕೆಂದು 13ಸ್ವಾಮಿಗಳಿಗೆ ಪಾಠ ಹೇಳುವ ವಿಪ್ರನೂಆ ಮನೆಯಲಿ ಊಟಕ್ಕೆ ಬಂದಿದ್ದನೇಮ ಆಹ್ನೀಕ ಮುಗಿಸಿ ಬರಲಿಕ್ಕೇತಾಮಸವು ಆಯಿತು ವಿಲಂಬವು ಸ್ವಲ್ಪ 14ಸ್ವಾಮಿಗಳ ಬಾಲ್ಯತ್ವ ವಿದ್ಯಾರ್ಥಿತ್ವವುಆ ಮನೆಯಲಿ ಗೃಹಸ್ಥನನ್ನೂ ವಿಪ್ರನನ್ನೂ ಮೋಹಿಸಿತುತಮ್ಮ ಯೋಗ್ಯತೆ ಸ್ಥಾನ ಮರೆತು ಗರ್ವದಿವಿಪ್ರಸ್ವಾಮಿಗಳ ಲೆಕ್ಕಿಸದೆ ಕುಳಿತನು ಭೋಜನಕೆ 15ಅಂದು ರಾತ್ರಿಸ್ವಪ್ನದಲಿ ರಘುವರ್ಯ ಗುರುಗಳುಬಂದು ಪೇಳಿದರ್ತಮ್ಮ ಪ್ರೇಮಿಶಿಷ್ಯರಿಗೆಇಂದಿನಾರಭ್ಯ ಪಾಠವ ನಿಲಿಸು ವಿಪ್ರನಲಿಕುಂದುಇಲ್ಲದೆ ಹೇಳುವೆ ನೀನೇವೆ16ಈ ರೀತಿ ಸ್ವಪ್ನವು ಆಗೇ ರಘೂತ್ತಮರುವಿಪ್ರನಲಿ ಪಾಠಕ್ಕೆ ಪೋಗುವುದು ತೊರೆದುಆ ಪಂಡಿತವರ್ಯರಿಗಿಂತ ಉತ್ತಮ ರೀತಿತಾಪೇಳಿದರು ಪಾಠ ಮಠದಿ ಶಿಷ್ಯರಿಗೆ 17ಗುರುಗಳಲಿಹರಿಇಷ್ಟ ಗುರುದ್ವಾರ ಒಲಿವನುಗುರುಅನುಗ್ರಹ ಇದ್ದರೇಹರಿಅನುಗ್ರಹಗುರುಪ್ರಸಾದವ ಪಡೆದ ಶ್ರೀ ರಘೂತ್ತಮರಿಗೆಶಾಸ್ತ್ರ ಜ್ಞಾನವು ಪ್ರಜ್ವಲಿಸಿತು ಪೂರ್ಣದಲಿ 18ಜಾತಾಪರೋಕ್ಷಿಗಳು ದೇವತಾಂಶರಿಗೇವೆಜ್ಞಾತವಾಗುವ ಪದ ವಾಕ್ಯದ ತಾತ್ಪರ್ಯಈ ದೇವತಾಂಶ ಶ್ರೀ ರಘೂತ್ತಮ ಗುರುವರರುಸಂದೇಹವಿಲ್ಲದೆ ತಿಳಿದು ಬೋಧಿಸಿದರು 19ತನ್ನಲ್ಲಿ ವ್ಯಾಸಂಗ ಪೂರೈಸದ ಬಾಲಏನು ಪಾಠವ ಹೇಳೇ ಶಕ್ತನೆಂದರಿಯೆಕಾಣದೆ ಮರೆಯಾಗಿ ನಿಂತು ಆವಿಪ್ರಶ್ರವಣ ಮಾಡಿದ ಗುರುಗಳು ಬೋಧಿಸುವುದು 20ಸಂದಿಗ್ಧÀ್ದವಾಗಿ ತನಗಿದ್ದ ವಿಷಯಗಳನ್ನೂಅದ್ಭ್ಬುತ ರೀತಿಯಲಿ ಅನಾಯಾಸವಾಗಿಅತಿವಿಶದದಿ ರಘೂತ್ತಮರು ಪೇಳಲುಕೇಳಿಬಂದು ಮುಂದೆ ನಿಂತು ನಮಿಸಿದನುವಿಪ್ರ21ತಾನು ಮಾಡಿದ ಉದಾಸೀನ ಅಪರಾಧಗಳಘನದಯದಿ ಕ್ಷಮಿಸಬೇಕೆಂದು ಬೇಡುತ್ತತನು ದಂಡವತ್ ಭುವಿಯಲಿ ಬಿದ್ದು ನಮಿಸಿದನುದೀನದಯಾಳುಗುರುಅಭಯನೀಡಿದರು22ದಿಗ್ವಿಜಯ ಮಾಡುತ್ತ ಅಲ್ಲಲ್ಲಿ ದುರ್ಮತದುರ್ವಾದಿಗಳನ್ನು ಖಂಡಿಸಿ ಸಿದ್ಧಾಂತತತ್ವಬೋಧಿಸಿ ಜಗತ್ ಪ್ರಖ್ಯಾತರಾದರುಶಾಶ್ವತ ನಿಜಸುಖ ಮಾರ್ಗದರ್ಶಕರು 23ರಘುವರ್ಯ ಗುರುಗಳು ನೇರಲ್ಲು ಸ್ವಪ್ನದಲುರಘೂತ್ತಸಮರಿಗೆ ಪೇಳಿದ ಪ್ರಕಾರದಿಗ್ವಿಜಯ ಸಮಯದಿ ಸಂಸ್ಥಾನಕ್ಕೆ ಭೂಷಣಬಗೆಬಗೆ ವಸ್ತು ಪರಿವಾರ ಸೇರಿಸಿದರು 24ವೇದಾಂತ ಸಾಮ್ರಾಜ್ಯ ರಾಜಗುರುರಾಜರುಹಸ್ತಿಘೋಟಕ ಕೊಂಬು ವಾದ್ಯಮೇಳಗಳುಸುತ್ತಲೂ ವಿದ್ವಜ್ಜನ ವೇದಘೋಷದ ಮಧ್ಯಮುತ್ತು ಪಲ್ಲಕ್ಕಿಯೊಳು ಕುಳಿತರು ದೇವರ ಸಹ 25ಪೋದ ಕಡೆಗಳಲಿ ದಿಗ್ವಿಜಯ ರಾಮಾರ್ಚನೆವಿದ್ವಜ್ಜನ ಸಭೆ ವಾಕ್ಯಾರ್ಥ ಪಾಠಸಿದ್ಧಾಂತ ಸ್ಥಾಪನೆ ದುರ್ಮತ ನಿರಾಸವುಸಾಧು ಸಜ್ಜನರ ಉದ್ಧಾರ ಪ್ರತಿದಿನವು 26ಬಾದರಾಯಣನಿರ್ಣೀತ ರೀತಿಯಲಿಮಧ್ವರಾಯರು ಬರೆದ ಗ್ರಂಥಗಳಿಗೆಅದ್ಬುತ ಟೀಕೆ ಜಯತೀರ್ಥರು ಮಾಡಿಹರುಸದ್ಭಾವ ಬೋಧವು ರಘೂತ್ತಮರ ರಚನೆ 27ಟೀಕಾ ಭಾವಬೋಧರು ಎಂದು ಪ್ರಖ್ಯಾತರಘೂತ್ತಮರ ಎಲ್ಲೆಲ್ಲೂ ವಿದ್ವಜ್ಜನರುನಗರಪಟ್ಟಣ ಗ್ರಾಮ ನಾಯಕರು ಪ್ರಮುಖರುಸ್ವಾಗತ ಅರ್ಪಿಸಿ ಪೂಜಿಸಿದರು ಮುದದಿ 28ಪುಟ್ಟಿದಾರಭ್ಯಹರಿಪಾದಕಮಲದಿ ಮನಇಟ್ಟು ರಘುವರ್ಯರು ಕೊಟ್ಟ ಸಂಸ್ಥಾನಪಟ್ಟ ಆಳಿ ಸರ್ವೋತ್ತಮನನ್ನ ಸೇವಿಸಿಶ್ರೇಷ್ಠತಮ ಸುಖಪ್ರದಮಾರ್ಗತೋರಿಹರು29ಹದಿನೈದು ನೂರು ಹದಿನೇಳು ಶಕ ಮನ್ಮಥಶುದ್ಧ ಏಕಾದಶಿ ಪೌಷ್ಯದಲಿ ಹರಿಯಪಾದಸೇರಿದರು ಸಂಸ್ಥಾನ ಆಡಳಿತವೇದವ್ಯಾಸ ತೀರ್ಥರು ಮಾಡಲಿಕೆ ಬಿಟ್ಟು 30ಮತ್ತೊಂದು ಅಂಶದಲಿ ವೃಂದಾವನದೊಳುಹತ್ತಾವತಾರಹರಿದ್ಯಾನಪರರಿಹರುಭಕ್ತರು ಅಲ್ಲಲ್ಲಿ ಅರ್ಚಿಸಿ ಸೇವಿಸುವಮೃತ್ತಿಕೆಯಲ್ಲು ಸಹ ಇದ್ದು ಪಾಲಿಪರು 31ವೃಂದಾವನ ತಿರುಕೋಯಿಲೂರ್ ಮಣಂಪೂಂಡಿಎಂದು ಕರೆಯಲ್ಪಡುವ ಗ್ರಾಮದಲಿ ಇಹುದುಇಂದುಶೇಖರ ಚಾಪದಿಂದ ಉದಿಸಿದ ಪುಣ್ಯನದಿಯು ಹರಿಯುತ್ತೆ ಮಜ್ಜನವು ಅಘಹರವು 32ಮಂದಜಾಸನಮೊದಲಾದ ಸುರವೃಂದವಂದಿತ ರಮಾಪತಿಯು ರಘೂತ್ತಮಾಂತಸ್ಥವೃಂದಾವನದಿಗುರುಹರಿಭಕ್ತಿ ಪೂರ್ವಕದಿಬಂದು ಸೇವಿಪರಿಗೆ ವಾಂಛಿತÀಗಳೀವ 33ಗಾಳಿ ಬಿಸಿಲು ಮಳೆ ಮಂಜುಗಳ ಲೆಕ್ಕಿಸದೆಮಾಲೋಲನ ಧ್ಯಾನಿಸುತ ವೃಂದಾವನದೊಳುಕುಳಿತಿಹರುಪರಮಕಾರುಣಿಕಈ ಗುರುಗಳುಪಾಲಿಸುತಿಹರು ಎಮ್ಮಅನುಗಾಲದಯದಿ34ವೃಂದಾವನ ದರ್ಶನ ತೀರ್ಥ ನಮಸ್ಕಾರಪ್ರದಕ್ಷಿಣೆ ಅರ್ಚನೆ ಹಸ್ತೋದಕವಂದನೆ ಸೇವಾದಿಗಳ ಮಾಳ್ಪ ಸಜ್ಜನರಕುಂದುಕೊರತೆಗಳಳಿವ ಇಷ್ಟಾರ್ಥ ಪ್ರದರು35ಪಿಲ್ಲಿ ಶೂನ್ಯಾದಿ ವಾಮಾಚಾರ ಪೀಡೆಗಳುಗಾಳಿದುಷ್ಟಗ್ರಹ ಪೈಶಾಚಾದಿಗಳುಕಳವಳಿಕೆ ಬುದ್ದಿಭ್ರಮೆ ವ್ಯಾಧಿದಾರಿದ್ರ್ಯಾದಿಎಲ್ಲ ದೋಷಗಳನ್ನ ಪರಿಹರಿಸುವರು 36ಸವೈರಾಗ್ಯ ಜ್ಞಾನವ ಭಕುತಿ ಅಪರೋಕ್ಷವಸೇವಿಪ ಯೋಗ್ಯರಿಗೆ ಒದಗಿಸಿ ಉದ್ಧರಿಸಿಸರ್ವವಿಧದಲು ಭಾಗ್ಯ ಆಯುಷ್ಯ ಆರೋಗ್ಯಈವರು ಭಕ್ತಯಲಿ ಸ್ಮರಿಸಿ ವಂದಿಪರ್ಗೆ 37ಉತ್ತಮ ತರಗತಿ ದೇವತಾಂಶರು ಇವರುಮಧ್ವಮತದುಗಾಬ್ಧಿ ಪೂರ್ಣಚಂದ್ರಹತ್ತು ತಿಂಗಳು ಹೊತ್ತು ಹೆತ್ತ ಉತ್ತಮ ಸಾಧ್ವಿಮಾತೆಯ ಭಾಗ್ಯ ಏನೆಂಬೆ ಇಂಥವರ 38ಸೂರಿಸುರವರ ಶ್ರೀ ರಘೂತ್ತಮರ ಚರಣದಲಿಶರಣಾದೆ ಎನ್ನಯ ಎನ್ನಸೇರಿದವರಪರಿಪರಿ ಪೀಡೆಗಳ ಪಾಪಗಳ ಅಳಿದುಕಾರುಣ್ಯ ಔದರ್ಯದಿ ಪಾಲಿಸುವರು 39ಸರಿದ್ವರ ಪಿನಾಕಿನಿಯಲಿ ಕೇಶವ ಜಗವಈರಡಿಯಲಿ ಅಳೆವ ತ್ರಿವಿಕ್ರಮನು ಶಿರಿಯುಇರುತಿಹರು ಹನುಮ ಶಿವಸ್ಕಂಧ ತೀರಗಳಲಿಶರಣೆಂಬೆ ಇವರೆಲ್ಲರ್ಗು ಶ್ರೀ ರಘೂತ್ತಮರಿಗೂ 40ಕಮಲಭವಪಿತ `ಶ್ರೀ ಪ್ರಸನ್ನ ಶ್ರೀನಿವಾಸ 'ಕಮಲಾಯುತವಿಶ್ವರೂಪತ್ರಿವಿಕ್ರಮಗೂಭೀಮ ಶಿವಸ್ಕಂಧರಿಗು ಪ್ರಿಯತಮ ರಘೂತ್ತಮರಈ ಮಂಗಳ ಚರಿತ ಶ್ರೀ ಕೃಷ್ಣಾರ್ಪಿತವು 41 ಪ|| ಇತಿ ಶ್ರೀ ರಘೂತ್ತಮ ತೀರ್ಥ ಚರಿತ್ರೆ ಸಂಪೂರ್ಣಂ ||
--------------
ಪ್ರಸನ್ನ ಶ್ರೀನಿವಾಸದಾಸರು