ಒಟ್ಟು 42 ಕಡೆಗಳಲ್ಲಿ , 30 ದಾಸರು , 39 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸರಸಿಜನಯನಾ ಹೇ ಶ್ರೀನಿವಾಸ ಪ ಸರಸಿಜಭವಪಿತ ಸರಸಿಜಾಕ್ಷಿಧವ ಉರಗಶಯನ ನೀ ಉರಗಭೂಷಣವಂದ್ಯ ಅ.ಪ ಮೂರುಲೋಕದೊಡೆಯನಾದವ ನೀನು ತೋರೋ ನಿನ್ನ ಮಹಿಮೆಯಾ ಗಾರುಗೊಂಡಿಹೆ ಪಾರವಾರದೊಳು ತೋರಿ ನಿನ್ನಯ ಪದ ಸೇರಿಸುತಿರವ 1 ಬಾಲಕನ ಕಲಭಾಷೆಯ ಮಾತೆಯು ಬೇಗ ಲಾಲಿಸುವ ತೆರದಿ ಪಾಲಿಸೆನ್ನಾ ಶ್ರೀಲಲಾಮ ನೀ ಕುಲಲಾವರದನಾದಿ ನೀಲಮೇಘಶ್ಯಾಮಾ 2 ದಾನವಾಂತಕ ನೀನು ಶಿರಿವತ್ಸಾಂಕಿತ ದೀನÀಜನರ ಸುರಧೇನು ಏನು ತಪ್ಪಿದ್ದರೂ ನೀನು ಕ್ಷಮಿಸು ಇಂದು ದೇನುವರರ್ಪಿಸಿದಿ ಪ್ರಾಣೇ±ವಂದಿತ 3
--------------
ಸಿರಿವತ್ಸಾಂಕಿತರು
ಸಾಂಬಶಿವಾ ಜಯ ಸಾಂಬಶಿವಾ ಪ ಸುರರ ತೋರಿಕೆಗೆ ಬಂದು ಕೈಲಾಸ ಮಂದಿರ ಮಾಡೀ | ಧರೆಯೊಳು ಸರ್ವರ ಮನದಿರುವಾ 1 ತನ್ನವರನ್ನಯರು ಎಂಬಾ ಭಾವ ಭೇದವಿಲ್ಲದಲೆ ಉನ್ನಂತ ಸಂಪದ ಸಲಿಸುವಾ 2 ತಂದೆ ಮಹಿಪತಿ - ಪ್ರಭು ಶರಣೂ ಹೊಕ್ಕವರ ಚಿದಾ | ನಂದ ಸುಖಾಲಯ ಸೇರಿಸುವಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸೂಳಿನ್ನ ಪೊಗುವವ ಏನಾದೆಂತಾ ಹಾಳಾದಬಳಿಕ ಪುಣ್ಯ ಮೂಳನಾಯಾದ ಪ ಮೂತ್ರದ್ವಾರಕೆ ಮೆಚ್ಚಿ ಮಾತಾಪಿತರ್ವೈರ್ಯಾಗಿ ಪಾತ್ರಾಪಾತ್ರೆನದೆ ಕುಲಗೋತ್ರ ಧರ್ಮಳಿದ ಮಾತೃ ಭೂಮಾತೆಯ ಯಾತ್ರ ಸುದ್ದರಿಯದೆ ಧಾತ್ರಿಯೊಳ್ ಕೈಸೂತ್ರಗೊಂಬ್ಯಾದ1 ಸುಲಭದಿಂ ತನ್ನಯ ಕುಲನಾಶಗೆ ಅನ್ಯ ಕುಲಕೆ ಹವಣಿಪ ಮಾರಿಬಲೆಗೆ ಒಳಪಟ್ಟು ಕುಲ ವಿಧವಿಧ ಭಕ್ತಿಗಳನಗಲಿ ಬಲುಪಾಪಕೊಳಗಾಗಂಕತನ ಮಹ ಕೊಲೆಗೆ ಈಡಾದ 2 ಉತ್ತಮರ ಲಕ್ಷಿಸದೆ ಸತ್ಯಕ್ಕೆ ಮನಗೊಡದೆ ಮೃತ್ಯುರೂಪಿಣಿಮಾತೇ ಅತ್ಯಧಿಕವೆನುತ ಮರ್ತು ತನ್ನಯ ಸುಖವ ತೊತ್ತಾಗಿ ಪಾತಕಿಗೆ ನಿತ್ಯ ಮೈಲಿಗೆಹೊರುವ ಕತ್ತೆಯಂತಾದ 3 ಸಾರುತಿಹ್ಯವೇದ ಸುವಿಚಾರವಾದಗಳೆಲ್ಲ ತೂರಿ ಅಡಿವಿಗೆ ಅಟ್ಟಿ ಮೀರಿ ಮಹವಾಕ್ಯ ಘೋರನರಕಕೊಯ್ದು ಸೇರಿಸುವವತಾರಿ ಮಕ್ಕ ಮಾರಿ ಜಾರೆಗೆ ಬಿಡದೆ ಸೆರೆಯಾಳು ಆದ 4 ಮನ ಅವಳಿಗರ್ಪಿಸಿ ತನು ಅವಳಿಗೊಪ್ಪಿಸಿ ಧನವನಿತು ಅವಳ ಅಧೀನದಲ್ಲಿರಿಸಿ ಬಿನುಗರೊಳುಬಿನುಗೆನಿಸಿ ಕುಣಿಕುಣಿದು ಕಡೆಗೆ ಮಮ ಜನಕ ಶ್ರೀರಾಮನಡಿ ಕನಿಕರಕ್ಹೊರತಾದ 5
--------------
ರಾಮದಾಸರು
ಹಣವೆÉ ನಿನ್ನಯ ಗುಣವೇನು ಬಣ್ಣಿಪೆನೊ ಪ. ಹಣವಿಲ್ಲದವನೊಬ್ಬ ಹೆಣವೇ ಸರಿ ಕಂಡ್ಯಾ ಅ.ಪ. ಬೆಲೆಯಾಗದವನೆಲ್ಲ ಬೆಲೆಯ ಮಾಡಿಸುವಿ ಎಲ್ಲ ವಸ್ತುಗಳನಿದ್ದಲ್ಲೆ ತರಿಸುವಿ ಕುಲಗೆಟ್ಟವರ ಸತ್ಕುಲಕೆ ಸೇರಿಸುವಿ ಹೊಲೆಯನಾದರೂ ತಂದೊಳಗಿರಿಸುವಿ 1 ಅಂಗನೆಯರ ಸಂಗ ಅತಿಶಯದಿ ಮಾಡಿಸುವಿ ಶೃಂಗಾರಾಭರಣಂಗಳ ಬೇಗ ತರಿಸುವಿ ಮಂಗನಾದರೂ ಅನಂಗನೆಂದೆನಿಸುವಿ ಕಂಗಳಿಲ್ಲದವಗೆ ಮಗಳ ಕೊಡಿಸುವಿ 2 ಚರಣಕ್ಕೆ ಬಂದಂಥ ದುರಿತವನು ಬಿಡಿಸುವಿ ಸÀರುವರಿಗೆ ಶ್ರೇಷ್ಠನರನ ಮಾಡಿಸುವಿ ಅರಿಯದ ಶುಂಠನ ಅರಿತವನೆನಿಸುವಿ ಸಿರಿ ಹಯವದನನ ಸ್ಮರಣೆ ಮರೆಸುವಿ 3
--------------
ವಾದಿರಾಜ
ಹರಿದಾಸರ ಸಂಗಕೆ ಸರಿಯುಂಟೆ ಗುರು ಕರುಣಕೆ ಇನ್ನು ಪಡಿಯುಂಟೆ ದೇವ ಪ ದಾವಾನಲವ ತÀಪ್ಪಿಸಿ ಕಾಡಾನೆಯದÉೀವಗಂಗೆಗೆ ತಂದು ಹೊಗಿಸಿದಂತೆಆವರಿಸಿರುವ ಷಡ್ವರ್ಗ ತಪ್ಪಿಸಿ ಎನ್ನಶ್ರೀವರನ ಕರುಣಾರಸದಿ ತೋಯಿಸುವ 1 ಪಾದ ಸನ್ನಿಧಿಯ ಸೇರಿಸುವ 2 ಬಲೆಯ ಹಾರಿದ ಎಳೆ ಹುಲ್ಲೆಯ ಮರಿಗಳಿಗೆಒಲಮೆಯಿಂದಲಿ ತಾಯ ತೋರಿಸಿದಂತೆಬಲು ಇಂದ್ರಿಯಗಳ ಸೆರೆಯ ಬಿಡಿಸಿ ಎನ್ನನಳಿನನಾಭನ ಸನ್ನಿಧಿಯ ತೋರಿಸುವ 3 ಪಾದ ಸಂದರುಶನವನ್ನೀವ 4 ಭವಾಬ್ಧಿ ನಡುವೆ ಸಿಕ್ಕಿದ ಎನ್ನಪಿಡಿದು ಶ್ರೀಕೃಷ್ಣನಂಘ್ರಿಗಳ ಸೇರಿಸುವ 5
--------------
ವ್ಯಾಸರಾಯರು
ಚೆಂಡನಾಡುತ ಬಂದ ಪುಂಡ ಕೃಷ್ಣನು ತನ್ನ |ಹಿಂಡುಗೋಪಾಲಕರ ಕೊಂಡು ಯಮುನೆಯ ತಡಿಗೆಪಓರೆ ತುರುಬನೆಕಟ್ಟಿಗೀರುನಾಮವನಿಟ್ಟು |ಹಾರ ಕಂಕಣ ತೋಳಬಂದಿ ಘುಂಗುರ ಘನ-|ಸಾರಕುಂಕುಮ ಕೇಸರಿಗಂಧ ಕೂಡಿಸಿ |ಸೇರಿಸುತ ನಡುವಿಗೆ ಕಾಸಿದಟ್ಟಿಯನುಟ್ಟು |ಹಾರಾಡುತಲಿ ಬಂದ-ತೊಡರಗಾಲ |ತೋರ ಚಿನ್ಮಣಿಗಳಿಂದ. ಮುತ್ತಿನ ಚೆಂಡು |ಧಾರಿಣಿಗೆ ಪುಟಿಸಿ ನಿಂದ-ವಜ್ರದಖಣಿ|ತೋರಿ ಗೆಳೆಯರ ಕೂಡ ಬಂದರಾ ಮನೆಯಿಂದ 1ಕೊಂಡಾಲ ತಿಮ್ಮನು ಚೆಂಡನೆ ಹೊಡೆದನು |ಮಿಂಡೆಯರ ಮೊಲೆಗಾಗಿ ಹಾರಿಹರಿದು ಬೀಳೆ |ಹಿಂಡುನಾರಿಯರೆಲ್ಲ ಸುತ್ತಿಕೊಂಡಿರೆಅವರ|ಮುಂಡೆಗೆ ತಗುಲಿಸಿ ಪುರದ ಬಾಗಿಲ ಬಿಟ್ಟು |ಕಿಂಡಿಯಿಂದಲಿ ಬಂದನು-ನಾರಿಯರ |ಮಂಡೆಗೆ ಚೆಂಡಿಟ್ಟನು-ತೋರಿಸುವರ |ಕಂಡು ತಾ ನಗುತಿದ್ದನು-ಕೌತುಕವೆಂದು |ದಿಂಡೆಯರುಮಡುವಿನೊಳಗೆ ಹಾಕಿ ನಡೆದರು2ಗೆಳೆಯರೆಲ್ಲರು ಕೂಡಿ ಚೆಂಡು ತಾ ಎನಲಾಗಿ |ಗುಳುಗುಳಿಸುವ ವಿಷದ ಯಮುನಾ ತಡಿಯಲಿನಿಂದು|ಬಳಿಯ ವೃಕ್ಷದ ಮೇಲೇರಿ ತಾ ಧುಮುಕಲು |ಕಳಕಳಿಸುವ ಗೋಪಾಲರಳುತಿರೆ |ಇಳಿದ ನೀರೊಳಗಾಗಲು-ನಾಗರಫಣಿ|ತುಳಿದು ಕುಣಿಕುಣಿಯುತಿರಲು-ಬ್ರಹ್ಮನು ಬಂದು |ತಿಳಿದು ಮದ್ದಲೆ ಹೊಯ್ಯಲು-ಇಂದ್ರಾದ್ಯರು |ನಲಿದು ತಾಳವನಿಟ್ಟು ಕೊಂಡಾಡುತಿದ್ದರು 3ಮಗನ ಸುದ್ದಿಯಕೇಳಿಹರಿದು ಬಂದಳುಗೋಪಿ|ನಗರದ ಹೊರಗಾಗಿ ಬಾಯ ನಾದದಿಂದ |ವಿಗಡೆಯರು ಬಿಟ್ಟ ಮಂಡೆಯ ಜುಂಜು ಕೆದರುತ |ತೆಗೆದು ಮಣ್ಣನೆ ತೂರಿ ಕುಳಿತಲ್ಲಿಂದಲೆ ನಮ್ಮ-|ನ್ನಗಲಿ ಹೋಗುವರೆ ಹೀಗೆ-ರಂಗ ನಮ್ಮ |ಮೊಗವ ನೋಡುವುದೆಂದಿಗೆ-ನೋಡಿದ ಕಣ್ಣ |ತೆಗೆದು ಕೀಳುವೆನಿಂದಿಗೆ-ಪಡೆದ ಪೊಟ್ಟೆ |ದಗದಗಿಸಲು ಕೊಟ್ಟು ಮುನಿಯದೆ ಬಾ ಬೇಗ 4ಏನನೆಂಬೆನು ಕೃಷ್ಣ ನಿನ್ನ ಕಾಣದೆ ಪುರದ |ಮಾನಿನಿಯರು ಬೆರಗಾಗಿ ಬೀಳುತ ಕರುವ |ಕಾಣದಿರೆತ್ತಿಗೆ ಕರುವನು ಬಿಡುವರು |ಆ ನಾಸಿಕದ ಮೂಗುತಿ ಕಿವಿಗಿಡುವರು |ಧೇನುಮೇವನೆ ತೊರೆದುವು-ಗೋವುಗಳನ್ಯ-|ರಾಮನೆಗೋಡಿದುವು-ವತ್ಯಗಳೆಲ್ಲ |ಮೌನದಿ ಮೊಲೆ ತೊರೆದುವು ಕೃಷ್ಣಯ್ಯನ |ವೇಣುನಾದದ ಧ್ವನಿ ಕೇಳದೆ ಮೆಚ್ಚವು 5ದ್ವಾರಕಿ ಕೃಷ್ಣ ನೀ ಬಾಯೆಂದು ಕರೆವೆನೊ |ತೋರುವ ಸಮಪಾದ ವಿಠಲನೆಂಬೆನೊ |ಶ್ರೀರಮಣ ವೆಂಕಟನೆಂದು ಒದರುವೆನೊ |ಶ್ರೀರಂಗಶಯನನೆಂದೆನಲ್ಲದೆ ನಿನ್ನ |ಚೋರ-ಜಾರನೆಂದೆನೆ-ಹದ್ದಿನ ಮೇಲೆ |ಏರಿ ತಿರುಗುವನೆಂದೆನೆ-ಬೆಣ್ಣೆಯ ಕದ್ದು |ಸೂರೆ ಮಾಡುವನೆಂದೆನೆ-ಕೃಷ್ಣಯ್ಯ ನೀ |ಬಾರಯ್ಯ ಬಾರದಿದ್ದರೆ ಪ್ರಾಣ ನೀಗುವೆ 6ಕಣ್ಣೆತ್ತಿ ನೋಡಿದನೆಂದೆನೆ ಕಡೆಗೋಲ |ಬೆನ್ನಲಿ ಪಿಡಿದನೆಂದೆನೆ ಹಲ್ಲಳನೂರಿ |ಮಣ್ಣ ಕಚ್ಚಲು ಬಾಯ ತೆರೆಯುವನೆಂದೆನೆ |ಮಣ್ಣ ಬೇಡಲು ನಾ ಕೊಡಲಾರೆನೆಂದೆನೆ |ಎನ್ನ ಕುತ್ತಿಗೆ ಕೊಯ್ವರೆ-ಮಾತೆಯ ಮಾತು |ಮನ್ನಿಸಿ ವನಕೆ ಪೋಪರೆ-ಬಲಭದ್ರ |ಅಣ್ಣನಿಗೆ ಮುಖವ ತೋರೆ-ಕೃಷ್ಣಯ್ಯ ನೀ |ಸಣ್ಣವನೆನ್ನದೆ ಹರಿಯ ಕೊಂಡಾಡಿದೆ 7ಎಂದ ಮಾತನು ಕೇಳುವಾ ಸಮಯ ನಾಗಿಣಿ-|ವೃಂದವೆಲ್ಲವು ತಮ್ಮ ಕಂಠಭೂಷಣರಾಗಿ |ಅಂದದ ಮೇಲುದ ಸುತ್ತಿಕೊಂಡಿರೆ ಅರ-|ವಿಂದನಾಭಾಚ್ಯತ ಕೇಶವಮುರಹರ|ಮಂದರಧರಹರಿಯೆ-ನಿನಗೆ ನಾವು |ಮಂದಾಕಿನಿಯ ಸರಿಯೆ-ಮಾಂಗಲ್ಯದ |ಚೆಂದ ಕಾಯೈ ದೊರೆಯೆ-ಹರಿಯ ಕೃಪೆ-|ಯಿಂದ ಕರೆದು ನಮ್ಮ ಕಾಯಬೇಕೆಂದರು 8ಇಂತಿಂತು ಸ್ತವನವ ಮಾಡೆ ಕಾಳಿಂಗನ |ಕಾಂತೆಯರ ಸ್ತೋತ್ರಕ್ಕೆ ಮೆಚ್ಚಿ ನಾಗನ ಬಿಟ್ಟು |ಕಂತುಕ ಸಹಿತ ಪಂಕಜನಾಳವನೆ ಕೊಂಡು |ಸಂತಸದಲಿ ಇಕ್ಕುತ-ಶೋಕದಿ ನೀವು |ಭ್ರಾಂತಿ ಬಿಡಿರಿ ಎನ್ನುತ-ಬರಿದೆ ಎಲ್ಲ |ಸಂತೆ ಕೂಡಿದೆ ಎನ್ನುತ-ನಾ ಹಸಿದೆನು |ಪಂತಿಭೋಜನ ಕೊಂಡು ನಡೆಯಿರಿ ಮನೆಗೆಂದ 9ಸುರರಿಗೆಸುಧೆಮುಂಚೆ ಉಣಿಸಿದ ಪರಬ್ರಹ್ಮ |ಪರಿಪರಿ ಭೋಜನ ಮಾಳ್ಪ ಕಂಡುವರಾರು? |ಸುರದುಂದುಭಿ ಪೊಡೆದು ಪಾರಿಜಾತದ ಮಳೆ |ಸುರಿಸಿದರಾಕ್ಷಣಕೆ-ಬ್ರಹ್ಮನು ತಾನು |ತೆರಳಿದನಾಶ್ರಮಕೆ-ಪುರಂದರವಿಠಲ |ತಿರುಗಿದ ನಿಜಧಾಮಕೆ-ಕೃಷ್ಣನ ಲೀಲೆ |ಗುರುದಯೆಯಲಿ ನಮ್ಮ ಹರಿಯ ಕೊಂಡಾಡಿದೆ 10
--------------
ಪುರಂದರದಾಸರು
ದಡ ಸೇರಿಸು ಭವದ ಕಡಲಿನದಡ ಸೇರಿಸು ಹರಿಯೆಕಡೆ ಮೊದಲಿಲ್ಲದ ಕ್ಲೇಶದ ವಾರಿಯಕಡು ಕಾಂಕ್ಷದ ಬಲುತೆರೆಯ ಪ.ಸಾಧು ಸಮಾಗಮ ಸಚ್ಛಾಸ್ತ್ರ ಶ್ರವಣಾದಿಗಳಿಲ್ಲದೆ ಕೆಡುವೆಮೇದಿನಿಯೊಳು ಮೂಢಾತ್ಮನು ನಾ ಶ್ರೀಪಾದವ ಹೊಂದಿಸು ಹರಿಯೆ 1ಸಾಸಿರ ನಾಮದಿ ತುಲಸೀ ಕುಸುಮವಶ್ರೀಶನಿಗರ್ಪಿಸಲಿಲ್ಲಹೇಸದೆ ಬಾರದುದನ್ನೆ ಬಯಸುತವಾಸುದೇವಕೆಟ್ಟೆನಲ್ಲ2ಮನ ವಶವಾಗದು ತನು ಮಡಿಯಾಗದುಕನಸಲಿ ಧರ್ಮವನರಿಯೆಒಣಮಾತಲಿ ದಿನ ಹೋದವು ಪರಗತಿಗನುಕೂಲಲ್ಲದು ದೊರೆಯೆ 3ದುವ್ರ್ಯಸನಕೆ ಬೇಸರೆನೆಂದಿಗೆಘನಗರ್ವಿಲಿ ವರ್ತಿಪೆನಲ್ಲಪರ್ವತ ನೆಗಹುವ ನುಡಿಯನ್ನಾಡುವೆನಿರ್ವಾಹಕಡ್ಡಿಯೊಳಿಲ್ಲ4ನನ್ನ ಗುಣದ ನಂಬಿಕೆ ನನಗಿಲ್ಲನಿನ್ನಯ ನಾಮವೆ ಗತಿಯುಇನ್ನಾದರು ಕಡೆಗಣ್ಣಲೆನೋಡುಪ್ರಸನ್ವೆಂಕಟ ಸಿರಿಪತಿಯೆ 5
--------------
ಪ್ರಸನ್ನವೆಂಕಟದಾಸರು
ಬ್ರಹ್ಮಾದಿಕರನು ಪರಬ್ರಹ್ಮದಿಚ್ಛಿಲಿ ಪಡೆದಳಮ್ಮಪರಂಜ್ಯೋತಿ ಪರಬ್ರಹ್ಮಿಣೀಪ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ವಾಣಿ ಕಲ್ಯಾಣಿಫಣಿವೇಣಿ| ರುದ್ರಾಣಿಶರ್ವಾಣಿಸುವಾಣಿ ಗೀರ್ವಾಣಿ ವರದೆ | ಗಾಣಿತ್ರಿನಯನ ಅಜನ ರಾಣಿ ಶಂಕರ ಪ್ರಾಣಿ ಪುಸ್ತಕಪಾಣಿನಾರಾಯಣೀ1ಅಂಬೆ ಲೋಕಾಂಬೆ ಭ್ರಮರಾಂಬೆ ಮೂಕಾಂಬೆಹರಡಿಂಬೆ ಪ್ರತಿಬಿಂಬೆ ಕುಚಕುಂಭೆ ಸಾಂಬೆ |ರಂಭೆ ಹೇರಂಬೆ ಶರಣೆಂಬೆ ವರಗೊಂಬೆ ಭಕ್ತರಬೊಂಬೆ ಹೊಳೆವ ಗೊಂಬೆ2ಕಾಳೆ ಹಿಮ ಬಾಳೆ ಭೂ ಪಾಳೆ ಕುಸುಮಾಳೆವನಮಾಳೆಕಂದರಮೌಳೆ ಕುಟಿಲ ಕುರುಳೆ |ಕೇಳಿನಿನ್ನಯ ಲೀಲೆ ಕಾಲಿಗೆರಗುವರಘವ ಮೂಲಕೆತ್ತೆತ್ತಿಬಿಸುಟುವ ಕೃಪಾಳೆ3ಬೇಕೆಂಬೊ ಬಯಕಿತ್ತು ಸಾಕು ಸಾಕೆನಿಸುವರುಲೋಕದೊಳಗ್ಯಾರುಂಟು ನಿನ್ನ ಬಿಟ್ಟು |ಏಕೆ ವಿವೇಕೆ ಎನ್ನೀ ಕುಟಿಲಗುಣನೋಡ ಬೇಕೆಕ್ಷಮೆಮಾಡಿದರೆ ಮೈಯುಳಿಯುವದು4ಕಾಯಜನ ಮಾತೆ ಸಿತಕಾಯನರ್ಧಾಂಗಿ ಜಗಕಾರ್ಯನಿರ್ಮಿಸುವ ನರರುದಿಸಿ ಮೂರು || ಕಾಯಡಗಿ ಹೋದನಿಷ್ಕಾಯ ಪರಶಕ್ತ್ಯೆನ್ನ ಕಾಯ್ದುಕೊಳ್ಳೆಲೆತಾಯಿ ಸ್ತ್ರೀಯರನ್ನೆ5ಸಾರಿದರಹೊರೆವಸಂಸಾರದೊಳು ಮುಳುಗಿದರೆತಾರಿಸುವ ತವಕದಿಂತರುಳೆತರುಣೀ |ಸೇರಿಸುತ ತಿರುಗಿ ತನು ಬಾರದ್ಹಾದಿಗೆ ಒಯ್ದುತಾರಿಸುವ ಸ್ಥಿರದಿ ನೀ ತೋಯಜಾಕ್ಷಿ6ಕುಸುಮಸರ್ಪಾದಿಗಳು ಕುಸುಮಗಂಧಿಯ ಪದಕೆಕುಸುಮವೃಷ್ಟಿಗವು ದೇವಿಯ ಸುಕೃತಿಗಳೂ |ಕುಸುಮದೊಳು ಕರಕಂಜ ಕುಸುಮದೊಳುವರವಿಡಿದ ಕುಸುಮಶರರಿಪುಶಂಕರನ ಶಂಕರೀ7
--------------
ಜಕ್ಕಪ್ಪಯ್ಯನವರು
ಹರಿಹರಿಯೆ ಕಡೆಗಾಣೆನೈ ಜನುಮವಭವಕಡಲ ತಡಿಯ ಸೇರಿಸುಮಾಧವಪ.ವಿಷಯಾಸೆ ತೆರೆಗಳಲ್ಲಿ ಗೃಹವೆ ಗ್ರಹವಿಷಮ ಸತಿಸುತ ಗುಲ್ಮವು ವಡವಾಗ್ನಿಹಸಿವುತೃಷೆದಹಿಸಿತೆನ್ನ ಇದರೊಳಾಲಸಿಕೆಸುಳಿಭ್ರಮಣ ಘನ್ನ1ಷಟ್ಚರ್ಯ ಹಡಗದವರು ಬಿಡದೆ ಬೆನ್ನಟ್ಟಿ ಬಡಿದಂಜಿಸುವರು ಮನವಾಯುವಿನಟ್ಟುಳಿಗೆ ನಿಲವಿಲ್ಲವು ಇಂದ್ರಿಯಜಂತುಕಟ್ಟಿಲ್ಲದೆಳೆದೊಯ್ವವು 2ಸಂಸಾರಸಾರಫೇನ ಭುಂಜಿಸಲುಸಂಶಯದ ರೋಗ ನವೀನ ದುರಿತಾಂಬುಹಿಂಸೆ ಮಾಡದೆ ಉಳುಹಿತು ಅಜÕವ್ಯಾಳದಂಶ ಕ್ಷಣಲವಕಾಯಿತು 3ಸುಖವೆ ಬೊಬ್ಬುಳಿ ರಾಶಿಯು ಬಂಧು ಬಳಗಸಖಸ್ನೇಹ ಪಾಶಲತೆಯು ಅಹಿತಾಗಮ ಕಠೋರ ದುಶ್ಯಬ್ದಕೆಸ್ಮøತಿಹೋಗಿಚಕಿತನಹೆ ದೀನಬಂಧು 4ಇಂತು ಬಳಲುವುದ ನೋಡಿ ಸಿರಿಲಕುಮಿಕಾಂತ ನಿರ್ದಯನಾದೆ ನೀ ಪ್ರಸನ್ನವೆಂಕಟಕಾಂತ ಸಂತರ ಕೂಡಿಸೊ ಶ್ರೀ ಮೂರುತಿಅಂತ್ಯಯಾತ್ರೆಗೆ ಉದಯಿಸೊ 5
--------------
ಪ್ರಸನ್ನವೆಂಕಟದಾಸರು