ಒಟ್ಟು 57 ಕಡೆಗಳಲ್ಲಿ , 14 ದಾಸರು , 40 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸುಬ್ರಹ್ಮಣ್ಯ ಸ್ವಾಮಿ ತೇ ನೌಮಿ ಶರಣಾಗತರ್ಗೆ ನಿರ್ಭಯವ ಪಾಲಿಸು ಪ್ರೇಮಿಪ. ಅಭ್ರವಾಹನಾದಿದೇವ ಸಭ್ಯ ಸಂಭಾವಿತ ಜಗ- ದಭ್ಯುದಯ ತೇಜೋಮಯ ಕರ್ಬುರಾಂತಕ ನಿಶ್ಯೋಕಅ.ಪ. ಭಾವಭಕ್ತಿಭಾಗ್ಯಶೂನ್ಯರು ನಿನ್ನಯ ಪದ ಸೇವೆಗಾಲಸ್ಯವ ಮಾಳ್ಪರು ಕೇವಲ ದುರ್ಜನರು ಬಾರರು ದೇವದೇವ ನಿನ್ನ ಕರು- ಣಾವಲಂಬಿಗಳನೆಲ್ಲ ಕಾವನೆ ಮಹಾನುಭಾವನೆ 1 ಚಂದ್ರಸೂರ್ಯರಿರುವ ತನಕ ಸ್ಥಾನಿಕ ವಿಪ್ರ- ರಿಂದ ಪೂಜೆಗೊಳೈ ಷಣ್ಮುಖ ವಂದನೀಯ ಪಾರ್ವತಿಯ ನಂದನ ನಳಿನಾಯತಾಕ್ಷ ಇಂದುಶೇಖರಕುಮಾರ ಸ್ಕಂದನೆ ನಿತ್ಯಾನಂದನೆ 2 ಪಾವಂಜಾಖ್ಯಸುಕ್ಷೇತ್ರವಾಸ ಪೊರೆಯೊ ಪರಮೇಶ ಕೇವಲ ವಿಜ್ಞಾನಪ್ರಕಾಶ ಭಾವಜೋಪಮ ಲಾವಣ್ಯ ಕೋವಿದಾಗ್ರಗಣ್ಯ ಮಹಾ- ದೇವ ಲಕ್ಷ್ಮೀನಾರಾಯಣನ ಸೇವಕ ಬುದ್ಧಿದಾಯಕ 3
--------------
ತುಪಾಕಿ ವೆಂಕಟರಮಣಾಚಾರ್ಯ
ಸುಬ್ರಹ್ಮಣ್ಯನೆ ಶುಭ್ರವದನನೆ | ನಿರ್ಭಯವನುರೆ ಮಾಳ್ವನೆ | ಶರಣು ಶರಣು 1 ಕರುಣಿ ನಿತ್ಯಾನಂದನೆ | ಶರಣು 2 ರಾಮನ ತೋಷನೆ | ಶರಣು 3 ಶೋಕ ನಾಶ ಉಮಾ ಕುಮಾರಕ | ಶ್ರೀ ಕುಮಾರ ಗಿರೀಶನೆ | ಶರಣು 4 ದಾಸರಾ ಮನ ತೋಷನೆ 5
--------------
ಬೆಳ್ಳೆ ದಾಸಪ್ಪಯ್ಯ
ಸ್ಮರಿಸಿ ತೀರ್ಥಕ್ಷೇತ್ರ ಸಜ್ಜನರು ನಿತ್ಯದಲಿ ಅರಣೋದಯದಲೆದ್ದು ಭಕ್ತಿಪೂರ್ವಕವಾಗಿ ಕಠಿಣಶ್ರಮದಿ ಮಾಳ್ಪ ಪಾಪರಾಶಿಗಳ ಪರಿಹರಿಸುತ್ತ ಸಂತ್ಯೆಸುವಾ ಪ ಭಾಗೀರಥಿ ಸರಸ್ವತಿ ಯಮುನಾ ವಾರಾಣಾ ಶ್ರೀ ಗೋದ ಫಲ್ಗುಣಿ ಶೋಣಭದ್ರಾ ನರ್ಮ ದಾ ಗಂಡಕಿ ಭಿಮರಥಿ ತುಂಗಭದ್ರೆ ಪ್ರಯಾಗ ತ್ರಿವೇಣಿ ಹೇಮಾ ವೇಗವತಿ ಗಾಯತ್ರೀ ಕಾಶಿಮಣಿಕರ್ಣಿ ಕಾ ಗೌತಮಿ ವಿಯದ್ಗಂಗಾ ಕುಮುದ್ವತೀ ಸಿಂಧು ಪಾಪಾಘನಾಶಿನೀ 1 ಸರಯು ಜಯಮಂಗಳ ಜಮದಗ್ನಿ ವರತಾಮ್ರ ಪರಣಿ ಯೋಗಾನಂದ ಕೃತಮಾಲಕುಹು ಮಹೇ ಧುನಾಶಿ ಗರುಡ ಮದಿರಾ ಮರುದ್ವತಿ ಸ್ವರ್ಣಮುಖರಿ ವರ ಝರತಾಪಿನಿ ಕಾಳಿ ಸೌ ಪರಣಿ ದಕ್ಷಿಣೋತ್ತರಪಿನಾಕಿ ಕಪಿಲ ಶೀತಳ ಕಾನಂದ ಕುರಮುಖಿ ಪ್ರಣವಸಿದ್ಧ 2 ಕಾವೇರಿ ಸಿಧು ಮಾಲತಿ ಗಾರ್ಗಿಣಿ ಹರಿ ಕುಂದ ಕುಂದಿನಿ ಶೈವ ದೇವವತಿ ಪಾತಾಳ ಗಂಗಾ ಪುನಹ ನೀರಾ ಕುಮಾರಧಾರಾ ಸಾವಿತ್ರಿ ದಾನ್ಯಮಾಲಾ ಪುಷ್ಪವತಿ ಲೋಕ ಸಿಂಧು ಧರ್ಮಕು ಭವ ನಾಶಿನಿ ವರದಾ ಮಲಾಪಹಾರಿ 3 ಸ್ವಾಮಿ ಪುಷ್ಕರಣಿ ಮಾನಸ ಚಂದ್ರ ಪುಷ್ಕರಣಿ ಭೂಮಂಡಲದೊಳುತ್ತಮೋತ್ತಮ ತ್ರಿಪುಷ್ಕರಣಿ ನಿತ್ಯ ಪದ್ಮಸರ ಚಂದ್ರಭಾಗತೀರ್ಥ ವಾಮನ ಮಯೂರ ಪಂಪಾಸರೋವರ ಪುಣ್ಯ ಧಾಮ ವ್ಯಾಸ ಸಮುದ್ರ ಧವಳಗಂಗಾ ಸುಸಾ ರೋಮಹರ್ಷತೀರ್ಥ 4 ದ್ವಾರಕಾನಗರ ಸಾಲಗ್ರಾಮ ಟರರ ಬದರಿ ಕೇ ದಾರ ನರನಾರಾಯಣ ಶ್ರೀ ಮಜ್ಜಗನ್ನಾಥ ಶ್ರೀ ಮುಷ್ಣ ಮಂದರ ಮೈನಾಕ ಕೈಲಾಸ ಕಂಚಿ ಶ್ರೀರಂಗನಾಥ ನೈಮಿಷ ದ್ವೈತವನ ಚಂಪ ಕಾರುಣ್ಯ ಕಾಶಿ ಪಂಪಾವಂತಿಕಾ ಪುರಿ ಹರಿದ್ವಾರ ಛಾಯಾಪಿಪ್ಪಲ 5 ಕೇದಾರ ಸಾಗರ ಮಂದಾಕಿನಿ ಕುಸುಮವತಿ ಆದಿಸುಬ್ರಹ್ಮಣ್ಯ ಕೋಟೇಶ್ವರ ನಂದಿ ವೇದಪಾದ ಯಯಾತಿ ಗಿರಿ ಕಾಲಹಸ್ತಿ ಕೌ ಮೋದಕೀ ಪಾಡುರಂಗ ಕ್ಷೇತ್ರ ಶ್ರೀ ವಿಷ್ಣು ಪಾಟಲೀ ಮಂತ್ರಾಲಯ6 ಮಂದರ ಮಲಯ ಕೈವಲ್ಯನಾಥ ಕಾಶೀರ ಜಾಂಬವತಿ ವೃಂ ಶ್ರೀ ವಿರೂಪಾಕ್ಷ ಕುಂದರ ನಂದಪುರಿ ಮಾಯಾ ಶ್ರೀವತ್ಸ ಗಂಧಮಾದನ ಚಿತ್ರಕೂಟ ದ್ವಾ ನರಾಚಲಾಸೌಭದ್ರಿ ಆದಿನಾಥ 7 ಈ ಮಹಿಮಂಡಲದೊಳಿಪ್ಪ ತೀರ್ಥಕ್ಷೇತ್ರ ನಾಮಗಳ ಕಾಲತ್ರಯದಲ್ಲಿ ಸರಿಸುತಿಹ ಧೀಮಂತರಿಗೆ ಸಂಚಿತಾಪ ಪರಿಹರದಾನಂತರದಲಿ ಸೋಮಾರ್ಕರುಳನಕ ಸಕಲ ಭೋಗಗಳ ಸು ತ್ರಾಮಲೊಕದ ಲುಣಿಸಿ ಕರುಣಾಳು ಪ್ರಾತ್ಯಕೆ ಸ್ವ ಅಹುದೆಂದು ಸೂತ ಶೌನಕಣೆ ಪೇಳ್ದ8 ಈ ಭರತ ಖಂಡದೊಳಗುಳ್ಳ ತೀರ್ಥಕ್ಷೇತ್ರ ವೈಭವಾಬ್ಜ ಭವಾಂಡ ಪಾರನದೊಳಗೆ ಹರಿ ಪರಮಕಾರುಣ ದಿಂದ ಸ್ತ್ರೀಬಾಲ ಗೋವಿಪ್ರಮಾತ ಪಿತೃಗಳ ಧನ ಲೋಭದಿಂದಲಿಕೊಂದ ಪಾತಕವ ಪರಿಹರಿಸಿ ಬೇಡಿದಿಷ್ಟಾರ್ಥಗಳನು 9
--------------
ಜಗನ್ನಾಥದಾಸರು
ಸ್ವಾಮೀ ರಕ್ಷಿಸು ಸುಬ್ರಹ್ಮಣ್ಯ ಕಾಮಿತಪ್ರದ ಸುರಸ್ತೋಮಾಗ್ರಗಣ್ಯಪ. ಜನ್ಮ ಜನ್ಮಾಂತರದ ಕರ್ಮಾನುಸಾರದಿಂ ದುರ್ಮತಿಗೆಳಸಿಯಹಮ್ಮಮತೆಯಲಿ ದುರಿತ ದೂರವಿರಿಸು ನಿರ್ಮಲಜ್ಞಾನೋಪದೇಶವನಿತ್ತೆನ್ನ1 ಪ್ರತ್ಯಗಾತ್ಮನ ನಾಮ ಕೀರ್ತನೆ ಗೈಯುತ್ತ ಭಕ್ತಿಸೌಭಾಗ್ಯವಿರಕ್ತಿಯ ನೀಡು ಭೃತ್ಯವತ್ಸಲ ಭವಭಯಹರ ಗಿರಿಜಾ- ಪುತ್ರನೆ ಪರಮಪವಿತ್ರ ಸುಚರಿತ್ರನೆ2 ಸುರಲೋಕವನು ಕಾವ ಧುರಧೀರ ಪ್ರಭು ನಿನಗೀ ನರಲೋಕವನು ಕಾವದುರು ಕಷ್ಟವೇನು ಪರಿಶುದ್ಧ ಸ್ಥಾನಿಕಧರಣೀಸುರಕುಲ- ಗುರುವೆಂದು ಚರಣಕ್ಕೆ ಶರಣಾಗತನಾದೆ3 ಸಾಕುವಾತನು ನೀನೆ ಸಲಹುವಾತನು ನೀನೆ ಬೇಕು ಬೇಡೆಂಬುವರ ನಾ ಕಾಣೆ ದೊರೆಯೆ ಲೋಕೇಶ ಸುಕುಮಾರ ಶೋಕಮೋಹವಿದೂರ ನೀಕರಿಸದೆಯೆನ್ನ ಸ್ವೀಕಾರ ಮಾಡಯ್ಯ4 ಪೃಥ್ವಿಯೊಳ್ಪಾವಂಜೆ ಕ್ಷೇತ್ರಾಧಿವಾಸನೆ ಸುತ್ರಾಮಾದಿ ಸುರಮೊತ್ತ ಪೂಜಿತನೆ ಕರ್ತ ಲಕ್ಷ್ಮೀನಾರಾಯಣನ ಸಾರೂಪ್ಯನೇ ದೈತ್ಯದಲ್ಲಣ ವಲ್ಲೀದೇವಿ ಮನೋಹರನೆ5
--------------
ತುಪಾಕಿ ವೆಂಕಟರಮಣಾಚಾರ್ಯ
ಬಿನ್ನಪಲಾಲಿಸಯ್ಯ ಭಕ್ತಪರಾಧ-ವನ್ನು ಕ್ಷಮಿಸಬೇಕಯ್ಯ ಪ.ಅನ್ಯಾಯ ಕಲಿಕಾಲಕ್ಕಿನ್ನೇನುಗತಿಸುಪ್ರ-ಸನ್ನ ನೀನಾಗು ಸುಬ್ರಹ್ಮಣ್ಯ ಪಾವನಚರಿತ ಅ.ಪ.ಮಕ್ಕಳ ಮಾತೆಯಂದದಿ ಕಾಯುವ ಮಹ-ದಕ್ಕರದಿಂದ ಮುದದಿಸೊಕ್ಕಿನಿಂ ನಡೆವರ್ಗೆ ತಕ್ಕ ಶಿಕ್ಷೆಯನಿತ್ತುರಕ್ಕಸಾರಿಯೆ ಹಿಂದಿಕ್ಕಬ್ಯಾಡೆಮ್ಮನುದಿಕ್ಕಿಲ್ಲದವರ ಧಿಕ್ಕಾರ ಗೈದರೆಮಿಕ್ಕವರೆಮ್ಮನು ಲೆಕ್ಕಿಪರಿಲ್ಲ ದೇ-ವರ್ಕಳಮಣಿ ನಿನಗಕ್ಕಜವಲ್ಲವುಕುಕ್ಕುಟಧರವರ ಮುಕ್ಕಣ್ಣತನಯ 1ಜಾತಿ ನೀತಿಯನು ಬಿಟ್ಟು ಡಾಂಭಿಕತನದರೀತಿಗೆ ಪ್ರೀತಿಪಟ್ಟುಸೋತು ಹಣವ ಕೊಟ್ಟು ಖ್ಯಾತರೆಂಬುವಗುಟ್ಟುಮಾತು ಮಾತಿಗೆ ತೋರಿ ಘಾತವ ಗೈವರ್ಮೀರಿಯಾತುಧಾನರಗುಣಯಾತಕ್ಕರಿಯದುಭೂತೇಶ್ವರಸಂಜಾತ ಸುರನರ-ವ್ರಾತಾರ್ಚಿತ ಪುರಹೂತಸಹಾಯಕನೂತನಸಗುಣವರೂಥಪುನೀತ2ಯಾವ ಕರ್ಮದ ಫಲವೋ ಇದಕಿ-ನ್ಯಾವ ಪ್ರಾಯಶ್ಚಿತ್ತವೋಯಾವ ವಿಧವೊ ಎಂಬ ಭಾವವರಿತ ಪುರುಷಈ ವಸುಧೆಯೊಳಿಲ್ಲ ಶ್ರೀವಾಸುದೇವ ಬಲ್ಲದೇವ ಲಕ್ಷ್ಮೀನಾರಾಯಣನಪಾದಸೇವಕನೀ ಮಹಾದೇವನ ಸುತ ಕರು-ಣಾವಲಂಬಿಗಳಕಾವನಮ್ಮಯ ಕುಲ-ದೇವ ವಲ್ಲೀಪತಿ ಪಾವಂಜಾಧಿಪ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಮಂಗಳ ಪದಗಳು492ಜಯದೇವ ಜಯದೇವ ಜಯ ಸುಬ್ರಹ್ಮಣ್ಯಆರತಿ ಮಾಡುವೆ ನಿನಗೆವರೇಣ್ಯಪ.ಅರಳಿದ ಕಮಲಸನ್ನಿಭಶುಭಚರಣ-ವರಪಂಚಾನನಪೋಲ್ವ ಕಟಿಕಾಂಚ್ಯಾಭರಣಉರುಶಕ್ತಿಕುಕ್ಕುಟಾಭಯವಜ್ರಹಸ್ತಶರಣಾಗತಜನದ ರಿತವಿಧ್ವಸ್ತ 1ಬಲಮುರಿಶಂಖದಂತಿಹ ಚೆಲ್ವಗ್ರೀವಸುಲಲಿತಮಾಣಿಕ್ಯಹಾರದಿಂ ಪೊಳೆವನಲಿವ ಕರ್ಣಕುಂಡಲಗಳ ಶೋಭಜ್ವಲಿತಕಿರೀಟಮಸ್ತಕ ಸೂರ್ಯಾಭ 2ಈ ಕ್ಷಿತಿಯೊಳಗೆ ಪಾವಂಜೇತಿ ನಾಮಸುಕ್ಷೇತ್ರವಾಸ ಸುಜನಜನಪ್ರೇಮಲಕ್ಷ್ಮೀನಾರಾಯಣನ ಪ್ರೀತಿಯ ಪಾತ್ರರಾಕ್ಷಸಾರಣ್ಯದಹನವೀತಿಹೋತ್ರ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಶರಣುಹರಿಆನತ ಜನಾಶ್ರಯದುರಿತಕರಿಕಂಠೀರವಶರಣುಸಿರಿಭೂವರಾಹದೇವನೆಶರಣು ವರಯಜ್ಞಾತ್ಮಕ ಪ.ಅನಿಮಿಷರುಸನಕಾದಿಮುನಿಗಳುಅನುದಿನದಿ ಸ್ತುತಿಗೈಯಲುದನುಜಹೇಮಾಂಬಕನ ಕೃತ್ಯಕವನಿ ಬಳಲಿ ಮೊರೆಯಿಡುತಿರೆಘನಕೃಪಾಂಬುಧಿ ಕ್ಷೀರವಾರಿಧಿಮನೆಯಲರಿದತಿ ವೇಗದಿವನಜಭವ ನಾಸಾಪುಟದಿ ನೀಜನಿಸಿದಗಣಿತ ಮಹಿಮನೆ 1ಲೀಲೆಯಿಂದಣುವಾಗಿ ಅಮರರಜಾಲಕಚ್ಚರಿಯಾಗಲುಮೇಲೆ ಗಿರಿಯಂತಾದೆ ಹರಿಯೆ ತಮಾಲ ವರ್ಣಾಂಕಿತ ಮುಖಬಾಲಚಂದ್ರಸಮಾನ ಕೋಡನೆ ವಿಶಾಲ ವಿಮಲ ಚರಿತ್ರನೆಬಾಲ ಸುಬ್ರಹ್ಮಣ್ಯ ದ್ವಿಜವರಶೀಲಪಾಲಿತ ಚರಣನೆ 2ವ್ಯಗ್ರ ಪ್ರಳಯಾಂಬುಗಿಳಿದುಘನಘರ್ಘರರ್ಘರ ಧ್ವನಿಗಳಿಂಶೀಘ್ರ ವೈರಿಯ ಸದೆದು ಕೋಡಾಗ್ರದಲಿಮಹಿನೆಗಹಿದೆಸ್ವರ್ಗಜನರಿಂದಮಿತ ಸ್ತುತಿಯನವಗ್ರಹಿಸಿ ವರಕರುಣದಿಉಗ್ರತೇಜ ಪ್ರಸನ್ವೆಂಕಟಗಗ್ರನಿಲಯ ನಮೊ ಹರೆ 3
--------------
ಪ್ರಸನ್ನವೆಂಕಟದಾಸರು
ಸುಬ್ರಹ್ಮಣ್ಯ ಸ್ವಾಮಿ ತೇ ನೌಮಿ ಶರಣಾಗತರ್ಗೆನಿರ್ಭಯವ ಪಾಲಿಸು ಪ್ರೇಮಿ ಪ.ಅಭ್ರವಾಹನಾದಿದೇವ ಸಭ್ಯ ಸಂಭಾವಿತ ಜಗ-ದಭ್ಯುದಯ ತೇಜೋಮಯ ಕರ್ಬುರಾಂತಕ ನಿಶ್ಯೋಕ ಅ.ಪ.ಭಾವಭಕ್ತಿಭಾಗ್ಯಶೂನ್ಯರು ನಿನ್ನಯ ಪದಸೇವೆಗಾಲಸ್ಯವ ಮಾಳ್ಪರುಕೇವಲ ದುರ್ಜನರು ಬಾರರು ದೇವದೇವ ನಿನ್ನ ಕರು-ಣಾವಲಂಬಿಗಳನೆಲ್ಲ ಕಾವನೆ ಮಹಾನುಭಾವನೆ 1ಚಂದ್ರಸೂರ್ಯರಿರುವ ತನಕ ಸ್ಥಾನಿಕ ವಿಪ್ರ-ರಿಂದ ಪೂಜೆಗೊಳೈ ಷಣ್ಮುಖವಂದನೀಯ ಪಾರ್ವತಿಯ ನಂದನ ನಳಿನಾಯತಾಕ್ಷಇಂದುಶೇಖರಕುಮಾರ ಸ್ಕಂದನೆ ನಿತ್ಯಾನಂದನೆ 2ಪಾವಂಜಾಖ್ಯಸುಕ್ಷೇತ್ರವಾಸ ಪೊರೆಯೊ ಪರಮೇಶಕೇವಲ ವಿಜ್ಞಾನಪ್ರಕಾಶಭಾವಜೋಪಮ ಲಾವಣ್ಯ ಕೋವಿದಾಗ್ರಗಣ್ಯ ಮಹಾ-ದೇವ ಲಕ್ಷ್ಮೀನಾರಾಯಣನ ಸೇವಕ ಬುದ್ಧಿದಾಯಕ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಸುಬ್ರಹ್ಮಣ್ಯ163ಸಂತತಂ ತೋಷಂ ದೇಹಿ ತ್ವಂ ದೇಹಿಶ್ರೀ ಸುಬ್ರಹ್ಮಣ್ಯ ದೇಹಿ ತ್ವಂ ದೇಹಿ ಪ.ದೇಹಿ ದೇಹಿ ತವ ಸ್ನೇಹ ಸುಖ ವಚಂಬ್ರೂಹಿ ಸುವಚನಂ ಗಹನ ಜ್ಞಾನಂ 1ಅಭ್ರೋಡುಪ ನಿಭ ಶುಭ್ರಶರೀರಾದಭ್ರ ದಯಾನಿಧೆ ವಿಭ್ರಾಜಿತಶಂ 2ವಾಸವಸೇನಾಧೀಶ ಖಳಾನ್ವಯನಾಶ ಸ್ವಜನ ಪರಿಪೋಷ ಸುತೋಷಂ 3ಭೂರಿಫಲದ ಭಯದೂರ ಕುಮಾರ ಕುಮಾರಸುಧಾರಾತೀರಗ ಸುಮತಿಂ4ಪನ್ನಗನೃಪಸುಪನ್ನಗನಗಪ ಪ್ರಸನ್ನವೆಂಕಟಪತಿ ಚಿನ್ಮಯ ಭಕ್ತಿಂ 5
--------------
ಪ್ರಸನ್ನವೆಂಕಟದಾಸರು
ಸ್ವಾಮೀ ರಕ್ಷಿಸು ಸುಬ್ರಹ್ಮಣ್ಯಕಾಮಿತಪ್ರದ ಸುರಸ್ತೋಮಾಗ್ರಗಣ್ಯ ಪ.ಜನ್ಮ ಜನ್ಮಾಂತರದ ಕರ್ಮಾನುಸಾರದಿಂದುರ್ಮತಿಗೆಳಸಿಯಹಮ್ಮಮತೆಯಲಿದುರ್ಮದಾಂಧನಾದೆದುರಿತದೂರವಿರಿಸುನಿರ್ಮಲಜ್ಞಾನೋಪದೇಶವನಿತ್ತೆನ್ನ 1ಪ್ರತ್ಯಗಾತ್ಮನ ನಾಮ ಕೀರ್ತನೆ ಗೈಯುತ್ತಭಕ್ತಿಸೌಭಾಗ್ಯವಿರಕ್ತಿಯ ನೀಡುಭೃತ್ಯವತ್ಸಲ ಭವಭಯಹರ ಗಿರಿಜಾ-ಪುತ್ರನೆ ಪರಮಪವಿತ್ರ ಸುಚರಿತ್ರನೆ 2ಸುರಲೋಕವನುಕಾವಧುರಧೀರ ಪ್ರಭು ನಿನಗೀನರಲೋಕವನು ಕಾವದುರು ಕಷ್ಟವೇನುಪರಿಶುದ್ಧ ಸ್ಥಾನಿಕಧರಣೀಸುರಕುಲ-ಗುರುವೆಂದು ಚರಣಕ್ಕೆ ಶರಣಾಗತನಾದೆ 3ಸಾಕುವಾತನು ನೀನೆ ಸಲಹುವಾತನು ನೀನೆಬೇಕು ಬೇಡೆಂಬುವರ ನಾ ಕಾಣೆ ದೊರೆಯೆಲೋಕೇಶ ಸುಕುಮಾರ ಶೋಕಮೋಹವಿದೂರನೀಕರಿಸದೆಯೆನ್ನ ಸ್ವೀಕಾರ ಮಾಡಯ್ಯ 4ಪೃಥ್ವಿಯೊಳ್ಪಾವಂಜೆ ಕ್ಷೇತ್ರಾಧಿವಾಸನೆಸುತ್ರಾಮಾದಿ ಸುರಮೊತ್ತ ಪೂಜಿತನೆಕರ್ತಲಕ್ಷ್ಮೀನಾರಾಯಣನ ಸಾರೂಪ್ಯನೇದೈತ್ಯದಲ್ಲಣ ವಲ್ಲೀದೇವಿ ಮನೋಹರನೆ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ