ಒಟ್ಟು 36 ಕಡೆಗಳಲ್ಲಿ , 12 ದಾಸರು , 35 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಾಯಾಸದಿಂದ ಸಾಧಿಸಬೇಕು ಸತ್ಸಂಗ ಮಾಯಿಕಬುದ್ಧಿ ಬಿಟ್ಟು ನೋಡಿ ಅಂತರಂಗ ಧ್ರುವ ಆಯಿತವಾಗಿ ತೋರುತಾನೆ ಶ್ರೀರಂಗ ಸಾಯದಲ್ಯಾಗುತದೆ ನೋಡಿ ಭವಭಂಗ 1 ಹಿಡಿದರೆ ಹಿಡಿಯಬೇಕೊಂದೆ ಸಾಧು ಸಹವಾಸ ಪಡೆದರೆ ಪಡೆಯಬೇಕೊಂದೆ ತಾ ನಿಜಧ್ಯಾಸ ನಡಿನುಡಿ ಒಂದೆ ಆಗುವುದೆ ಅಪ್ರಯಾಸ ತಡಿಯದೆ ಮಾಡಬೇಕೊಂದೆ ನಿಜಾಭ್ಯಾಸ 2 ಅನೇಕ ಪುಣ್ಯ ಒದಗಿತು ಸತ್ಸಂಗದಾಗ ದಿನಕರಕೋಟಿ ಹೊಳೆವುದು ಮನದೊಳಗೆ ಬ್ಯಾಗ ತನುಮನವಿಟ್ಟು ಕೇಳಿ ಗುರುಪಾದಕೀಗ ಘನಸುಖದಾಯಕ ಮಹಿಪತಿಯ ಸದ್ಗುರುವಿಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ವಾಮಿ ನೀನೆ ಸ್ವಹಿತ ಗುರುನಾಥ ಬ್ರಹ್ಮಾನಂದ ಸದ್ಘನ ಸದೋದಿತ ಧ್ರುವ ನೀನಹದೋ ಬಡವನಾಧಾರಿ ಸಾನುಕೂಲ ನೀನೆವೆ ಪರೋಪರಿ ಅನುದಿನದಲಿ ನೀ ಸಹಕಾರಿ ಮನೋಹರ ಮೂರುತಿ ನೀ ಶ್ರೀ ಹರಿ 1 ದಯಗುಣಕೆ ನಿಮ್ಮ ನಾ ಸರಿಗಾಣೆ ತಾಯಿ ತಂದೆ ಸಕಲ ಬಂಧು ನೀನೆ ತ್ರೈಲೋಕ್ಯವಂದ್ಯ ನೀ ದೇವನೆ ಶ್ರೇಯ ಸುಖದಾಯಕ ಎನ್ನ ನೀನೆ 2 ಶ್ರುತಿ ಸಾರುತಲ್ಯದ ನಿಮ್ಮ ಖ್ಯಾತಿ ಸ್ತುತಿ ಮಾಡಲೇನು ನಾ ಮಂದಮತಿ ಅತಿ ದೀನ ನಾ ನಿಮ್ಮ ಮಹಿಪತಿ ಪ್ರತಿಪಾಲಕಹುದೋ ನೀ ಶ್ರೀಪತಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಚೌತಿಯ ದಿವಸರಂಭೆ : ವಾರಿಜಗಂಧಿನಿ ನೋಡಿತ್ತ ಶ್ರುತಿ-ಮೌರಿರಭಸದಿ ಲಕ್ಷ್ಮೀಕಾಂತಭೂರಿವೈಭವದಿ ಪೊರಟನೆತ್ತ ಯಾವಕಾರಣವೆಂದು ಪೇಳೆಲೆ ಸತ್ಯ 1ದೇವರ ಪೂಜೆಗೋಸುಗ ಬಂದಪಾವನಮೂರ್ತಿಯಾದುದರಿಂದ ನಮ್ಮಕಾವನು ಕರುಣಾಕಟಾಕ್ಷದಿಂದ 2ರಂಭೆ : ನೂತನವಾಯ್ತೆ ಕೇಳಲೆ ಜಾಣೆ ಜಗ-ನ್ನಾಥನಿಗ್ಯಾವ ಕುಲವು ಕಾಣೆರೀತಿಯನರುಹಬೇಕೆಲೆ ಬಾಲೆ ಸರ್ವಚೇತನಾತ್ಮನ ನಾಟಕದ ಲೀಲೆ 3ಕೊಂಡಕಾರಣದಿ ಪೂಜೆಗಳೆಲ್ಲಕಂಡು ಪೊಗಳಲು ಕವಿಗು ಸಲ್ಲ ಇನ್ನುಪುಂಡರೀಕಾಕ್ಷನವನೆ ಬಲ್ಲ 4ರಂಭೆ : ರಾಜವದನೆ ಪೂಜೆಯಾದ ಮೇಲೆ ಅಂ-ಭೋಜನಾಭನು ತಾಕ್ಷ್ರ್ಯನ ಮೇಲೆರಾಜಬೀದಿಯೊಳ್ ಬರುವದೇನೆ ಇಂಥಸೋಜಿಗವೇನು ಪೇಳೆಲೆ ಜಾಣೆ 5ಬಟೆನಿಸ್ಸಾಳರವದಿ ಬರುವ ಚಂದಸಟೆಯಲ್ಲ ಕೇಳು ಕರುಣದಿಂದ ನಮ್ಮಕಟಕರಕ್ಷಿಸಲು ಬರುವ ಗೋವಿಂದ6ರಂಭೆ : ಬಳಿಕ ಪಲ್ಲಂಕಿಯೇರಿದ ಕಾಣೆ ಜನ-ಗಲಭೆಗಳಿಂದ ಪೋಗುವದೇನೆನಲವಿನಿಂದಲಿ ಪೊರಟೆಲ್ಲಿಗೆನೆ ಮಹಾ-ಜಲಜನಾಭನ ಮಹಿಮೆಯ ಜಾಣೆ 7ದೀಪವೆಂದೆನುತ ಭಕ್ತರು ಮುದದಿಶ್ರೀಪರಮಾತ್ಮ ವಿಲಾಸದಿ ಭಕ್ತ-ರಾಪೇಕ್ಷೆಗಳನು ಸಲ್ಲಿಸುವಂದದಿ 8ರಂಭೆ : ಸೋಮಾರ್ಕಜ್ಯೋತಿಹಿಲಾಲುಗಳು ಜನ-ಸ್ತೋಮಜೇನುಂಡೆಬಿರುಸುಮಿಗಿಲುವ್ಯೋಮಕೇಶಗಳ ಪೊಗಳತೀರದು ಸರಿಭೂಮಿಯೊಳ್ ಕಾಣೆನೆಂಬಂತಾದುದು 9ಅಮಮ ಇದೇನೆ ಇಂದಿನ ಲೀಲೆ ಜನ-ರಮರಿಕೊಂಡಿಹರೇನಿದು ಬಾಲೆಸಮವಿಲ್ಲ ಇಂತೀ ವೈಭೋಗಕ್ಕೆಲೆ ನ-ಮ್ಮಮರಾವತಿಗಿಂತಧಿಕ ಬಾಲೆ 10ಲಾರ್ತಿ ಹರಣವಾಗ್ವದು ಜಾಣೆಕೀರ್ತಿತರಂಗಮಾಗಿಹುದೇನೆ ಶೇಷ-ತೀರ್ಥವೆಂದರೆ ಕೇಳಿದು ಪ್ರವೀಣೆ 11ರಂಭೆ :ಏಸುದೊಡ್ಡಿತೆ ಕೇಳಲೆ ಬಾಲೆ ಅನಂ-ತಾಸನದಂತೆ ಮರೆವುದಲ್ಲೇನಾಸಿರ ದೀಪಸೋಪಾನದಲೆ ಮಹಾ-ಶೇಷನಿಹನು ಮಧ್ಯದೊಳಿಲ್ಲೇ 12ಊರ್ವಶಿ :ಕರುಣಾಕರನು ನಮ್ಮೆಲ್ಲರನುನಿತ್ಯಪೊರೆಯಲೋಸುಗ ಬಂದನು ತಾನುಸುರುಚಿರ ಮಂಟಪವೇರಿದನು ಭೂ-ಸುರರಿಂದ ವೇದಘೋಷವ ಕೇಳ್ವನು 13ದೃಷ್ಟಾಂತವಾಗಿ ಪೇಳುವದೇನೆ ಬ್ರಹ್ಮಸೃಷ್ಟಿಗೆ ಪೊಸತಾಗಿಹುದು ಕಾಣೆಕಟ್ಟಿಸಿದವನು ಪುಣ್ಯೋತ್ತಮನು ಪರ-ಮೇಷ್ಠಿ ಜನಕನ ಕೃಪೆಯಿನ್ನೇನು 14ಭಜಕರ ಮುಖದಿಂದೆಲ್ಲ ತಾನು ಭೂ-ಭುಜನಾಗಿ ನಡೆಸುವನಿದನೆಲ್ಲನುನಿಜವಾಗಿನಿತ್ಯಸಾಕಾರವನು ತೋರಿತ್ರಿಜಗವನೆಲ್ಲ ರಕ್ಷಿಸುತಿಹನು 15ರಂಭೆ : ಬಿಡದೆ ಇನ್ನೊಂದು ಕೇಳುವೆ ನಾರಿ ಜಗ-ದೊಡೆಯ ಪೊರಡುವ ಕಾಲದಿ ಭಾರಿಬೆಡಿಖಂಬ ಧ್ವನಿಯು ಇದೇನೆ ಪೇಳೆ ಇಂಥಕಡು ಬೆಡಗನು ಉಸುರೆಲೆ ಬಾಲೆ 16ಊರ್ವಶಿ: ಜನರು ಎಲ್ಯಾದರಂಜಿದÀ ಭಯವ ತಮ್ಮತನುವಿಗೆ ಸೋಂಕಲದನೆಲ್ಲವಮನದಿ ಝುಮ್ಮೆನಿಸಿ ಬೆಚ್ಚೋಡಿಸುವ ಖಂಬ-ಧ್ವನಿಯೆಸಗಿದರು ಕೇಳಿದರಂದವ 17ತಿರುಗಿಯೇರಿದನು ಪಲ್ಲಂಕಿಯಲ್ಲಿ ಸುತ್ತು-ಬರುವನು ವೇದನಿನಾದದಲಿವರರತ್ನ ಖಚಿತ ಮಂಟಪದಲ್ಲಿ ನಿಂತನಿರವದಿ ಸುಖದಾಯಕನಲ್ಲಿ 18ಶರಣರ ಪಾಪ ಮನಕೆ ತಾರ ದುಡಿದವರಭೇರಿಗೆರೆವ ಬಿಸಿನೀರವರಲಕ್ಷ್ಮೀನಾರಾಯಣಧೀರ ಸುರು-ಚಿರ ಸಿಂಹಾಸನವೇರಿದ ವೀರ 19
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ವಿಹಿತವೆ ಯದುನಾಯಕ ಸುಖದಾಯಕಮಹಿಯೊಳು ನಾನೆ ಪಾಪಿಯೊ ಜೀಯಾ ಕಾಯೊ ಪ.ಮಾವಗೆಈವಗಂಧಗಳು ನಿನಗೆನ್ನಲುದೇವ ಕಳೆದ್ಯವಳಬಿಂಕಮೂಡೊಂಕನು1ಕಚ್ಚ ಬಂದಹಿಗೆ ಮುಕ್ತಿಯ ನೀನಿತ್ಯೈಯ್ಯಹುಚ್ಚಗೊಲ್ಲರ ಪಾವನ ಮಾಡುವನೆ 2ಶರಣ ಜನರುಪಕಾರಿ ನೀ ತವರೂರು ನೀಅರಸ ಪ್ರಸನ್ನವೆಂಕಟಪ ಮಮಪ್ರಾಣಪ 3
--------------
ಪ್ರಸನ್ನವೆಂಕಟದಾಸರು
ಶಾಶ್ವತ ಭಾಗವತರು ನಗರೆ ಮತಿಮಿಶ್ರರ ನೋಡಿ ಕೈ ಹೊಡೆದು ಪ.ಮಾಧವನಲ್ಲದೆ ಆ ದೈವೀದೈವಾದಿಗಳ ಹಿರಿಯರು ನಂಬರುಆದರವರ ಬಿಟ್ಟರೆ ಈ ಧನಧಾನ್ಯವುಹೋದರೆ ಕೆಟ್ಟೆವೆಂಬರ ನೋಡಿ 1ಕೃಷ್ಣನೆ ಸುಖದಾಯಕನಿರೆ ಸತಿಯಳುಹುಟ್ಟಿದ ಶಿಶುವಿನ ದೆಸೆಯಿಂದ ಎನ್ನಕಷ್ಟವೆ ಹೋಯಿತು ತುಷ್ಟಿಯೊಳಿಹೆನುಸೃಷ್ಟಿಗೆ ನಾ ಸುಖಿಯೆಂಬನ ನೋಡಿ 2ನಾರಾಯಣ ದಾತಾರನು ವಿಶ್ವಕೆತೋರುತಿರಲು ನರಧನಿಕರನುಆರಾಧಿಸಿ ನಾಭೂರಿಧನಾಢ್ಯನುಆರೆನಗೆದುರಿಲ್ಲೆಂಬನ ನೋಡಿ 3ಶ್ರೀ ಗುರುವರ ಸುಖಯೋಗಿಯ ಸಂತತಿಯೋಗಿಗಳಂಘ್ರಿಯ ನಂಬಿರದೆಆಗುರುಈ ಗುರುವೇ ಗತಿಯೆನುತಲಿಭೂಗುರುವಾಗಿಹ ರೋಗಿಯ ನೋಡಿ 4ಬೂಟಕತೋಟಕ ಭಕುತಿಗೆ ದ್ವಾದಶಗೂಟಬರೆಗೆ ಬುಧರೊಪ್ಪುವರೆ ಜಗನ್ನಾಟಕ ಪ್ರಸನ್ವೆಂಕಟೇಶನ ಗುಣಗಣಭಟರೆನಿಪ ವೈಷ್ಣವರಹ ಸಜ್ಜನ 5
--------------
ಪ್ರಸನ್ನವೆಂಕಟದಾಸರು