ಪಾಲಿಸು ಜಗದೀಶಾ ಸರ್ವೇಶಾ
ಪಾಲಿಸು ಜಗದೀಶಾ ಪ
ಪಾಲಿಸು ಸರ್ವೇಶ ದೇವ ದೇವೇಶ
ಪಾಲಿಸು ಬಾಲನ ರಾಮ ರಮೇಶ ಅ.ಪ.
ಶರಣರ ತಂದೆ ನೀನು ಸರ್ವೇಶಾ
ದುರುಳರಾಂತಕನು ನೀನು
ಪರಿಯಿಂದ ಬಳಲುವ ಪರಮ ದಾಸರಿಗೆಲ್ಲಾ
ಪೊರೆಯುವ ರಾಜಾಧಿರಾಜನೇ ನೀನು 1
ಮಾನಿನಿ ಕಾಯ್ದೆ ನೀನು ಸರ್ವೇಶಾ
ಮಾನವ ನೀಡೋ ನೀನು
ಹೀನರ ಸಲಹುವ ಪರಮ ನಾಯಕ ನೀನು
ದೀನರ ರಕ್ಷಿಪ ತಾತನೇ ನೀನು 2
ಸುಜನರ ದೇವ ನೀನು ಸರ್ವೇಶಾ
ಭಜಕರ ನಾಥ ನೀನು
ಕುಜನರ ಕಾಲನು ದೂರ್ವಾಪುರೇಶನು
ದ್ವಿಜವೃಂದ ವಂದ್ಯನು ಚನ್ನಕೇಶವನು 3