ಒಟ್ಟು 38 ಕಡೆಗಳಲ್ಲಿ , 9 ದಾಸರು , 37 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶಾಮಸುಂದರನೆ ನೀನು ಪ್ರೇಮಾದಿ ಕಾಯೊ ಪ ಧರೆಯೊಳು ನಾ ಬಂದು ಥರಥರದಲ್ಲಿ ನೊಂದು ಮರುಗಿದೆ ತೋರ್ನಿನ್ನ ಚರಣಕಮಲವಾ 1 ಅನ್ಯನೆಂದರಿಯದೆ ನಿನ್ನವನೆಂದೆನ್ನ ಬನ್ನ ಬಿಡಿಸು ಬಾರೋ 2 ಶ್ರೀವತ್ಸಾಂಕಿತ ನೀನು ಶರಣಾಗತ ನಾನು ಸರಸಿಜನಯನ ಬ್ಯಾಗ ಬಾರೊ ನಿನ್ನ 3
--------------
ಸಿರಿವತ್ಸಾಂಕಿತರು
ಶ್ರೀವತ್ಸಾಂಕಿತ ಗರುಡ ತುರಂಗ ಕಾವೇರಿ ಜಲ ಪರಿವೃತ ರಂಗ ಪ. ದೇವೋತ್ತಮ ನುತ ಧರಿತ ರಥಾಂಗ ಪಾವನ ಚರಣ ಕೃಪಾಂಗ ಶುಭಾಂಗ ಅ.ಪ. ದೇವಕೀನಂದನ ಜಲದ ನೀಲಾಂಗ ಭಾವಜಪಿತ ದಯಾಜಲಧಿ ತರಂಗ ಶ್ರೀವನಮಾಲಾ ರಿಪುಮದ ಭಂಗ ಲಾವಣ್ಯಾಂಬರ ಕರುಣಾಪಾಂಗ 1 ರಾವಣ ಕುಲ ಸಂಹಾರಕ ರಂಗ ಶ್ರೀವಿಭೀಷಣ ಪೂಜಿತ ರಂಗ ಸನ್ನುತ ರಂಗ ಶ್ರೀವಸುಧಾನ್ವಿತ ಮಾಂಗಿರಿರಂಗ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರೀಹರಿಯ ಸ್ತುತಿ ಅಂಬುಜಾಕ್ಷನೆ ಪಾಲಿಸೊ ಅಂಬುಜಾಕ್ಷನೆ ಕೇಳು ಕಂಬುಕಂಧರ ನಿನ್ನ ನಂಬಿದ ಜನರನು ಇಂಬಾಗಿರಕ್ಷಿಸುವ ಪ ಹರಿಯೆ ನೀ ಭಕುತರ ಸುರತರುವೆಂದು ಅರಿದು ನಿನ್ನಡಿಗೆ ಬಂದು ಕರುಣಾಸಿಂಧು ವರವೇನು ಎನ್ನ ಪರಿಚರ್ಯವೆಲ್ಲವನು ಜರಿದು ಎನ್ನನು ಪೊರಿಯೆಂದು ಭಕ್ತರ ಬಂಧು ಕರಿವರದನೀತರಿವಿದುರುಳನ ಪೊರೆವಿ ಸುಜನರ ಅರವಿದೂರನೆ ಸ್ಮರಣೆಮಾತ್ರದಿ ತರಣಿಸುತನ ಪುರದಭಯವನು ಪರಿಹರಿಸುವಿ 1 ಭವರೋಗವೈದ್ಯ ನೀ ಅವಧಿಯೂ ಇಲ್ಲದೆ ಸ್ವವಶವ್ಯಾಪಿಯಾಗಿ ದಿವಿಜಯ ಪೊರೆವಿ ಭಕುತರ ಕಾಯ್ಯಿ ಅವನೀಲಿ ಜನಿಸಿದ ಪವನ ವೈರಿಯ ಕವಿಶಿ ಮೋಹದಿ ಕೆಡಿಶಿದಿ ನರನನ್ನು ಪೊರದಿ ಅವನಿಪಿತ ನಿನ್ನ ಯುವತಿ ವೇಷವ ಕವಿಗಳೆಲ್ಲರು ಸ್ತವನ ಮಾಳ್ಪರು ಪವನ ಪ್ರಿಯನೆ ಭುವನ ತಾತನೆ ಶಿವಗೆ ವರವಿತ್ತೆ ಪವನನಯ್ಯನೆ 2 ತರಳ ಪ್ರಹ್ಲಾದನ ಪೊರೆದು ಪಾಂಚಾಲಿಗೆ ವರವಿತ್ತೆ ಕರಿಪುರಾಡರಸರ ಪ್ರಭುವೆ ಸುರತರು ವೇಷಶರಣಾಗತರನು ಪೊರೆವನೆಂಬ ನಿಜ ಬಿರುದನು ಮೆರಿಸುತ ಶಿರಿಯಿಂದೊಪ್ಪುತ ವರ ಭಕ್ತಾಗ್ರೇಸರ ನರಪಾಂಬರೀಷನ ಪೊರೆವಂಥ ಸುರಪತಿ ಶಿರಿವತ್ಸಾಂಕಿತನೆ 3
--------------
ಸಿರಿವತ್ಸಾಂಕಿತರು
ಸರಸಿಜನಯನಾ ಹೇ ಶ್ರೀನಿವಾಸ ಪ ಸರಸಿಜಭವಪಿತ ಸರಸಿಜಾಕ್ಷಿಧವ ಉರಗಶಯನ ನೀ ಉರಗಭೂಷಣವಂದ್ಯ ಅ.ಪ ಮೂರುಲೋಕದೊಡೆಯನಾದವ ನೀನು ತೋರೋ ನಿನ್ನ ಮಹಿಮೆಯಾ ಗಾರುಗೊಂಡಿಹೆ ಪಾರವಾರದೊಳು ತೋರಿ ನಿನ್ನಯ ಪದ ಸೇರಿಸುತಿರವ 1 ಬಾಲಕನ ಕಲಭಾಷೆಯ ಮಾತೆಯು ಬೇಗ ಲಾಲಿಸುವ ತೆರದಿ ಪಾಲಿಸೆನ್ನಾ ಶ್ರೀಲಲಾಮ ನೀ ಕುಲಲಾವರದನಾದಿ ನೀಲಮೇಘಶ್ಯಾಮಾ 2 ದಾನವಾಂತಕ ನೀನು ಶಿರಿವತ್ಸಾಂಕಿತ ದೀನÀಜನರ ಸುರಧೇನು ಏನು ತಪ್ಪಿದ್ದರೂ ನೀನು ಕ್ಷಮಿಸು ಇಂದು ದೇನುವರರ್ಪಿಸಿದಿ ಪ್ರಾಣೇ±ವಂದಿತ 3
--------------
ಸಿರಿವತ್ಸಾಂಕಿತರು
ಸ್ಮರಿಸುವೆ ಹರಿಯನು ದುರಿತವ ಕಳಿವನು ಪ ಮರಿಯಾನು ಭಕುತರ ಜರಿವನು ದುರುಳರ ಪೊರೆವನು ಸುಜನರ ಭರದಿಂದ ಶಿರಿವರ 1 ಕರಿರಾಜಾನೀತನ ಕರಿಯಲು ಆ ಕ್ಷಣ ತ್ವರಿತಾದಿ ಈ ಜಾಣ ಪೊರೆದನು ಬಲು ಘನಾ 2 ಕರುಣಾಳು ಈತನು ಸುರರೊಳು ಮರಿಯಾನು ನಮ್ಮನು ಶ್ರೀವತ್ಸಾಂಕಿತನು 3
--------------
ಸಿರಿವತ್ಸಾಂಕಿತರು
(ಮೂಲ್ಕಿಯ ನರಸಿಂಹದೇವರು)ನಂಬಿದೆ ನಿನ್ನ ಇಂಬಿದೆಯೆಂದುಅಂಬುಜಾಯತಾಂಬಕ ತ್ರ್ಯಂಬಕಸನ್ನುತಪ.ಕಂಬದಿಂದ ಕಾಣಿಸಿದಗಂಭೀರಗುಣಾಂಭೋನಿಧಿ ಡಿಂಬೋದ್ಧರ ನರಮೃಗವರ ಅ.ಪ.ಭಾನುಕೋಟಿಭಾಸ್ಕರಪವ-ಮಾನನಯ್ಯ ಪ್ರಾಣದಸುತ್ರಾಣಸುಗುಣದೀನಜನಸಂತಾನ ಮಾನದಆನಂದ ಗುಣಾನಂತ ವಿತಾನಾಬ್ಧಿಶಯಹರಿ1ಎಷ್ಟೊ ಪಾಪಿ ಕನಿಷ್ಠನೆಂದುಬಿಟ್ಟರೇನು ಬಿರುದು ಹಿರಿದು ಬರುವುದುಸೃಷ್ಟಿಕರ್ತರಿಷ್ಟಹರ್ತಮುಷ್ಟಿಕಭಿದ ತುಷ್ಟಿಪ್ರದ ವಿಠಲ ಕೈಗೊಟ್ಟುಳುಹು 2ಚಿತ್ತಸಾಕ್ಷಿ ಚಿನುಮಯಾತ್ಮಸತ್ಯರೂಪ ಸದಯೋದಯ ಸದುಪಾಶ್ರಯದೈತ್ಯಭಂಜನ ಸತ್ಯರಂಜನಕ್ಷೇತ್ರಜÕ ಪವಿತ್ರಕಥಾಸ್ತೋತ್ರಾರ್ಹ ಶ್ರೀವತ್ಸಾಂಕಿತ 3ಮೂಲಿಕಾಪುರ ಮೌಳಿರುತುನನೀಲೇಂದೀವರಶ್ಯಾಮಲ ಕಲಿಮಲಭೀಷಣಕಾಲಕಾಲ ವಿಶಾಲ ಭುಜಬಲಮೂಲೇಶಮುನೀಂದ್ರಾರ್ಚಿತ ಶ್ರೀಲಕ್ಷುಮಿನಾರಾಯಣ 4
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ರಕ್ಷಿಸು ಶ್ರೀ ಲಕ್ಷ್ಮೀವೆಂಕಟರಮಣ ರಾಕ್ಷಸ ಸಂಹರಣಪಕ್ಷೀಂದ್ರವಾಹನ ವಾಸುಕಿಶಯನ ವಾರಿಜದಳನಯನ ಪ.ತ್ರ್ಯಕ್ಷಾದಿ ವಿಬುಧಪಕ್ಷಪರಾತ್ಪರಸುಕ್ಷೇಮನಿಧಿ ಕೃಪೇಕ್ಷಣದಿಂ ಸದಾ ಅ.ಪ.ವೇದಬಾಹಿರರಾಗಿ ಖಲರು ಬಹು ಬಾಧಿಸುವರುಸಾಧನೆಯೆಲ್ಲ ಕೆಡಿಸುವರು ರಿಪುಗಳಾರ್ವರುಆದಿಮೂರ್ತಿ ತವಪಾದಾಶ್ರಯ ಸು-ಬೋಧಾಮೃತರಸ ಸ್ವಾದುಗೊಳಿಸುತಲಿ 1ಸರ್ವಾಪರಾಧಂಗಳ ನೀ ಕ್ಷಮಿಸು ಸುಜನರನುದ್ಧರಿಸುಪೂರ್ವಾರ್ಜಿತ ಪಾಪಂಗಳ ಪರಿಹರಿಸು ಸದ್ಭಕ್ತಿಯೊಳಿರಿಸುಸರ್ವತ್ರ ವ್ಯಾಪ್ತ ಸಂತಕೃತ ಸ್ತೋತ್ರದುರ್ವಾರದುರಿತದುರ್ಗನಿಗ್ರಹನೆ2ಸತ್ಯಾತ್ಮ ಪಾವನಪಂಕಜನಾಭನೀಲಾಭ್ರದಾಭಸತ್ವಾದಿಗುಣವರ್ಜಿತ ಮಹಾಶೋಭ ಶರಣಾಗತ ಸುಲಭಚಿತ್ತವಾಸ ಶ್ರೀವತ್ಸಾಂಕಿತ ಪರ-ಮಾರ್ಥಬೋಧ ಮಹತ್ತತ್ತ್ವನಿಯಾಮಕ 3ಪವಮಾನಾಂತರ್ಗತ ಪಾಪ ವಿನಾಶ ಪೊರೆಯೊ ಜಗದೀಶಅವಿಕಾರ ಲೀಲಾನಂತವಿಲಾಸ ಶತಸೂರ್ಯ ಪ್ರಕಾಶಕವಿಜನಾನಂದಭವನ ಭವಭಯಾ-ರ್ಣವ ಬಾಡಬಮಾಧವಮಧುಸೂದನ4ಚಿತ್ರಾಖ್ಯಪುರಮಂದಿರ ಸುಖರೂಪ ಯಾದವ ಕುಲದೀಪಕರ್ತಾಕಾರಯಿತ ಸುಗುಣಕಲಾಪಪರಮಪ್ರತಾಪಸುತ್ರಾಣಲಕ್ಷ್ಮೀನಾರಾಯಣಪರವಸ್ತು ಶಾಶ್ವತ ಪವಿತ್ರ ಚರಿತ್ರ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ