ಒಟ್ಟು 40 ಕಡೆಗಳಲ್ಲಿ , 22 ದಾಸರು , 39 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸತ್ಯಬೋಧ ಯತಿಗಳ ಸ್ತೋತ್ರ ಯಾವನೆದುರು ಮೂರ್ಜಗದೊಳು ಲೋಕಪಾವನ್ನ ಗುರು ಸತ್ಯಬೋಧ ಯತೀಂದ್ರಗಿನ್ನು ಪ ಬಲು ಸುಂದರ ಸೀತಾ ರಘುಪತಿ - ಪಾದನಳಿನಯುಗ್ಮವ ಪೂಜಿಪ ಯತಿ - ಎಮಗೊಲಿದು ಪಾಲಿಸುವನು ಸನ್ಮತಿ - ಈಜಲಜ ಭವಾಂಡದೊಳ್ ತುಂಬಿರೆ ಕೀರುತಿ 1 ಕೂರ್ಮ - ಕಮಲಾಲಯ ದೇವಿಯ ಸಿರಿನಾಮ - ದಿಂದವಾಲಗವೀಯುವ ಗುರು ಸಾರ್ವಭೌಮಗೆ2 ಭವ ಮಾರ್ಗಣ ಗೆದ್ದ ಗಂಭೀರ - ರತಿಪತಿ ಪಿತ ಮೋಹನ ವಿಠ್ಠಲ ಕಿಂಕರಗೆ 3
--------------
ಮೋಹನದಾಸರು
ಸೃಷ್ಟಿಗೊಡೆಯನಿಗೆ ಜಯ ಮಂಗಳಂ ಕಾಲುಂ- ಶುಭ ಮಂಗಳಂ ಶುಭ ಕ- ಮಲಾಲಯ ರಮಣನಿಗೆ ಜಯ ಮಂಗಳಂ ಬಾಲಕ ರೂಪದಿಂದಾಲದೆಲೆಯ ಮೇಲೆ ಲೀಲೆ ತೋರುವ ಗೋಪಾಲನಿಗೆ 1 ನೀಲಳಕಗಳ ಸಿರಿಮುಡಿಗಟ್ಟಿ ಮ- ರಾಳ ಸಿಂಘಗಳಿಂದದಲಂಕರಿಸಿ ಕಾಲದಿಂದಿಗೆ ಗೆಜ್ಜೆ ಘಲ ಘಲಿಸುತ ತನ್ನ ಕಾಲಕರದೊಳೆತ್ತಿ ಕುಣಿಸುವಗೆ2 ವಾರಿಜ ಭವಪಿತ ಮಾರಕೋಟಿ ಶೃಂ- ಗಾರ ಮೂರುತಿ ಮುಖವಾರಿಜವ ತೋರುವ ಸುಧಾರಸ ವಾರುಧಿ ಗೋಪಕು- ಮಾರ ಶೇಷಾಚಲಧಾರನಿಗೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಹರಿಸಿರಿ ರಮಣಿಯೆ ಕರಗಳ ಮುಗಿಯುವೆ ವರಮತಿ ನೀಡೆನಗೆ ಪ ಸರಸಿಜಾಕ್ಷನ ವಕ್ಷಸ್ಥಳದಿ ನಿವಾಸಿಯೆ ನಿರುತದಿ ಹರಿಪಾದ ಸ್ಮರಣೆ ಎನಗೆ ಕೊಡು ಅ.ಪ ಮಂದರೋದ್ಧರ ಗೋವಿಂದ ಗುಣಗಳಾ- ನಂದದಿ ಸ್ತುತಿಸಿ ಹಿಗ್ಗುವ ಜನನಿ ಇಂದಿರೆ ರಮೆ ಭಾರ್ಗವಿಯೆ ನಿನ್ನಯ ಪಾದ ದ್ವಂದ್ವಕೆ ನಮಿಪೆ ಸುಗಂಧಿ ಸುಂದರಿಯೆ 1 ಪರಮಪುರುಷ ಪುರುಷೋತ್ತಮನರಸಿಯೆ ಪಾವನಿ ಜನನಿ ಸುರರು ಕಿನ್ನರರು ಕಿಂಪುರುಷರು ಸ್ತುತಿಪರು ವರ ಮಹಾಲಕ್ಷ್ಮಿ ಸುಂದರಿ ಜಯ ಜಯ ಎಂದು 2 ಗಂಗಾಜನಕ ಪಾಂಡುರಂಗ ನಿಜ ಸತಿ ಭೃಂಗಕುಂತಳೆ ಭಾಗ್ಯದ ಖಣಿಯೆ ಅಂಗಜಜನಕ ವಿಹಂಗವಾಹನನ ಪಾ- ದಂಗಳ ಸ್ಮರಣೆಲಿ ನಲಿವ ಮನವ ಕೊಡು 3 ಪಕ್ಷಿವಾಹನ ಕಮಲಾಕ್ಷನ ಮಹಿಮೆಯ ವೀಕ್ಷಿಸಿ ಮನದಿ ಹಿಗ್ಗುವ ಜನನಿ ರಾಕ್ಷಸನಾಮ ವತ್ಸರದಲಿ ಭಕುತರ ಮೋಕ್ಷದಾತನು ಸಲಹುವ ಸುಜನರನು4 ಕಮಲಸಂಭವ ಕಮಲಾಲಯೆ ಹರಿಪಾದ ಕಮಲಭೃಂಗಳೆ ಹಿರಣ್ಯಹರಿಣಿ ಕಮಲನಾಭ ವಿಠ್ಠಲನೊಡಗೂಡಿ ಹೃ- ತ್ಕಮಲದಿ ಶೋಭಿಸು ಎನುತ ಸ್ತುತಿಸುವೆನು 5
--------------
ನಿಡಗುರುಕಿ ಜೀವೂಬಾಯಿ
ಕಣ್ಣಾರೆ ಕಂಡೆನಚ್ಯುತನ-ಕಂಚಿಪುಣ್ಯ ಕೋಟಿ ಕರಿರಾಜವರದನ ಪವರಮಣಿ ಮುಕುಟಮಸ್ತಕನ ಸುರ-ವರಸನಕಾದಿ ವಂದಿತ ಪಾದಯುಗನ ||ತರುಣಿ ಲಕ್ಷ್ಮೀ ಮನೋಹರನ-ಪೀತಾಂಬರದುಡಿಗೆಯಲಿ ರಂಜಿಸುವ ವಿಗ್ರಹನ 1ಕಸ್ತೂರಿ ಪೆರೆನೊಸಲವನ ತೋರಮುತ್ತಿನ ಹಾರ ಪದಕವ ಧರಿಸಿದನ ||ಎತ್ತಿದಭಯ ಹಸ್ತದವನ ತನ್ನಭಕ್ತರ ಸ್ತುತಿಗೆ ಹಾರಯಿಸಿ ಹಿಗ್ಗುವನ 2ನೀಲಮೇಘಶ್ಯಾಮಲನ ದೇವಲೋಲಮಕರಕುಂಡಲಧರಿಸಿಹನ ||ಮೂಲೋಕದೊಳಗೆ ಚೆನ್ನಿಗನ ಕಮಲಾಲಯಾಪತಿ ವೈಕುಂಠವಲ್ಲಭನ 3ಭಾನುಕೋಟಿ ತೇಜದವನಭವಕಾನನರಾಶಿಗೆಹವ್ಯವಾಹನನ ||ದಾನವರೆದೆಯ ತಲ್ಲಣನ ಮುನಿಮಾನಸೆಹಂಸನೆಂದೆನಿಸಿ ಮೆರೆವನ4ತುಂಗಚತುರ್ಭುಜದವನಶುಭಮಂಗಳ ರೇಖೆ ಅಂಗಾಲಲೊಪ್ಪುವನ ||ಶೃಂಗಾರ ಹಾರ ಕಂಧರನ ದೇವಗಂಗೆಯ ಪಿತಪುರಂದರವಿಠಲನ5
--------------
ಪುರಂದರದಾಸರು
ಕೃಷ್ಣ ಲೀಲಾನಂದ ನೋಡಿರೈಕೃಷ್ಣಾಕೃತಿಯ ಚಂದ ನೋಡಿರೈಕೃಷ್ಣ ಗೋಪಿಗಮ್ಮೆಂದ ನೋಡಿರೈಕೃಷ್ಣ ಬಾಲಮುಕುಂದನ ನೋಡಿರೈ ಪ.ಬಾಲರ ವಿಭು ಬೆಣ್ಣೆ ಮೊಸರ ಸವಿದು ಗೋಪಬಾಲೇರ ವಿಭಾಡಿಸಿ ಮೆಲುವಬಾಲರವಿಭಾ ನಖತೇಜನೊಳಾಡುವಬಾಲರ ವಿಭವವ ನೋಡಿರೈ 1ಸಮವಾಯಿ ಕಾರಣನಲ್ಲಾ ಜಗಕೆ ತಾನುಸಮವಯ ಗೋವರ್ಗೆಳೆಯನಾದನುಸಮವೆ ಇಲ್ಲೆಶೋದೆನಂದರ ಭಾಗ್ಯ ಮಗನಾದಶಾಮಮೈಯವನ ಮುದ್ದು ನೋಡಿರೈ 2ಕಣ್ಣಲ್ಲಲಸದೆ ವಿಶ್ವವ ಹೊರೆದಕಣ್ಣಿಲ್ಲೊಲಿದು ಕಟ್ಟಿಸಿಕೊಂಡನುಕಣ್ಣಲ್ಲಾಲಯವುಳ್ಳ ಪ್ರಸನ್ವೆಂಕಟೇಶನಕಣ್ಣಲಿ ಲಯವಿಟ್ಟು ನೋಡಿರೈ 3
--------------
ಪ್ರಸನ್ನವೆಂಕಟದಾಸರು
ದೇವರನ್ನು ಹಸೆಗೆ ಕರೆದ ಪದಗಳುವೇದ ಉದ್ಧರಿಸೀದಾ ಮತ್ಸ್ಯಾವತಾರನೇ |ಆದಿತ್ಯಾರಿಗೊಲಿದಮೃತ ನೀಡಿದನೇ ||ಮೇದಿನಿಯನು ಪೊತ್ತ ವರಹವತಾರನೆ |ಆ ದೈತ್ಯನಳಿದು ಪ್ರಹ್ಲಾದಗೊಲಿದನೇ ||ಭೂ ದೇವಾ ರೂಪೀ ಹಸಿಗೇಳೂ 1ಭೃಗು ಕುಲೋದ್ಭವನೇ ಭೀಷ್ಮನ ಬೆಳಸಿದನೇ |ನಗಜ ರಮಣನ ಕಾರ್ಮೂಕ ಮುರಿದವನೇ ||ಹಗೆಯನಳಿದು ಪಾಂಚಜನ್ಯ ಘಳಿಸಿದನೆ |ಇಗಡ ದೈತ್ಯರ ಬುದ್ಧಿ ಭೇದ ಮಾಡಿದನೇ ||ಅಗಣಿತಮಹಿಮಾ ಹಸಿಗೇಳೂ 2ಕುದರೀಯೇರಿ ಕುಜನರಾ ಕುಲ ತರಿದವನೇ |ಬುಧರಗೋಸುಗ ಹತ್ತಾವತಾರವಾದವನೇ ||ಸುದರೂಶನ ಶಂಖ ಗದ ಜಲಜ ಧರನೇ |ವಿಧಿಪಿತಶ್ರೀ ರಮಣ ಪ್ರಾಣೇಶ ವಿಠ್ಠಲನೆ ||ಸುಧಿಗಡಲಾಲಯನೆ ಹಸಿಗೇಳೂ 3
--------------
ಪ್ರಾಣೇಶದಾಸರು
ರಕ್ಷಿಸೆವರ ಮಹಲಕ್ಷ್ಮೀಅಕ್ಷಯಗುಣಪೂರ್ಣೆ ಪಪಕ್ಷಿವಾಹನನ ವಕ್ಷಸ್ಥಳದಿರಕ್ಷಿತಳಾದೆ ಸುಲಕ್ಷಣದೇವಿ ಅ.ಪನಿಗಮವೇದ್ಯನ ಗುಣಗಳ ಪೊಗಳುತಲಿಮಿಗೆ ಸಂತೋಷದಲಿಅಗಣಿತಾಶ್ಚರ್ಯನ ಕೊಂಡಾಡುತಲಿಬಗೆ ಬಗೆ ರೂಪದಲಿಖಗವರವಾಹನನಗಧರನಿಗೆ ಪ-ನ್ನಗ ವೇಣಿಯು ಬಗೆ ಬಗೆಯಿಂದರ್ಚಿಸಿಹಗಲಿರುಳೆಡೆ ಬಿಡದಲೆ ಹರಿಯನು ಬಹುಬಗೆಯಲಿ ಸೇವಿಪಭಾಗ್ಯದ ನಿಧಿಯೆ 1ಇಂದಿರೆಶ್ರೀ ಭೂದುರ್ಗಾಂಬ್ರಣಿಯೇ ಸು-ಗಂಧ ಸುಂದರಿಯೆಇಂದುಶೇಖರ ಮೋಹಿಪ ಮೋಹಿನಿಯಸುಂದರವನೆ ಕಂಡುಚಂದಿರಮುಖ ಮುದದಿಂದಲಿ ಶ್ರೀಗೋ-ವಿಂದನು ತಾಳಿದ ಮೋಹಿನಿ ರೂಪವನೆಂದು ಮನದಿ ಆನಂದ ಪಡಲು ಸುರವೃಂದವ ಸ್ತುತಿಸೆ ಮುಕುಂದನ ರಮಣಿಯೆ 2ಕಮಲಾನನೆಕಮಲಾಲಯೆಕಮಲಾಕ್ಷಿಕಮಲೋದ್ಭವೆ ಕಮಲೆಕಮಲಾಸನಪಿತನ ಸತಿಯೆ ಭಾರ್ಗವಿಯೆಕಮಲಾಂಬಿಕೆ ಪಿಡಿದಿಹಕಮಲಪುಷ್ಪಮಾಲೆಯು ಹರುಷದಿ ಶ್ರೀ-ಕಮಲನಾಭ ವಿಠ್ಠಲಗರ್ಪಿಸುತಲಿಕಮಲಪತ್ರದಳಾಕ್ಷಗೆ ನಮಿಸಿ ಸ್ವ-ರಮಣನ ಕರುಣಕೆ ಪಾತ್ರಳೆ ಸುಂದರಿ 3
--------------
ನಿಡಗುರುಕಿ ಜೀವೂಬಾಯಿ
ಲಾಲಿಮುಕುಂದಲಾಲಿಗೋವಿಂದಲಾಲಿಮಯ್ಯಲಾಲಿಲಾಲಿಮೂರೈದಲಿಪ್ಪೆಲ್ಲಾಲಯರ ಪ್ರಭುಲಾಲಿಮಯ್ಯಲಾಲಿಪ.ಜಗ ಜಗುಳಿಸಿ ವಟಪತ್ರದಿ ಮಲಗಿದೆಲಾಲಿಮಯ್ಯಲಾಲಿಮಗುವಾಗಿ ವ್ರಜದೊಳು ತೊಟ್ಟಿಲೊಳೊಪ್ಪಿದೆಲಾಲಿ ಮಯ್ಯಲಾಲಿ1ಸ್ವಗತ ಭೇದ ವಜ್ರ್ಯ ಪರಮಾತ್ಮ ಪರಬ್ರಹ್ಮಜಗದ ಜೀವರ ಬಿಂಬಮೂರ್ತಿಅನಂತನೆಪಯೋನಿಧಿವಾಸ ಪರೇಶ ಪರಿಪೂರ್ಣಶ್ರೀಯರಸ ವೈಕುಂಠವಲ್ಲಭ ಕೃಷ್ಣಯ್ಯಸುರರ ಪುಣ್ಯದವಲ್ಲಿಫಲಿಸಲಿಲ್ಲುದಯಾದೆಧರೆಯ ಪಾವನ ಮಾಡೆ ಪಾಂಡವರಕಾಯಬಂದೆಅಜಮಿಳ ಗಜರಾಜ ಧ್ರುವ ಅಂಬರೀಷಪಾಲಸುಜನಪ್ರಹ್ಲಾದನ ಸಲಹಿದ ನರಹರಿಅಸಮ ಬಾಲಕನಾದೆ ಅವ್ಯಾಕೃತಾಂಗನೆವಿಷಮ ವಿದೂರಾಗಣಿತ ಸುಗುಣಾರ್ಣವಸ್ಮøತಿಗಿರಿಧರೆಶಿಶು ಮೃಗಚೇಲಧರ ಭಾರ್ಗವಕ್ರತುಕೃಷ್ಣೆಭವಧರ್ಮಪಾಲ ಪ್ರಸನ್ವೆಂಕಟೇಶ
--------------
ಪ್ರಸನ್ನವೆಂಕಟದಾಸರು
ಶ್ರೀವಿಭವಸಂವತ್ಸರ ಸ್ತೋತ್ರ146ರಾಜ ರಾಜೇಶ್ವರ ಉಪೇಂದ್ರನಿಗೆ ನಮೋ ಎಂಬೆಭ್ರಾಜ ಲಕ್ಷ್ಮಿ ಭೂಮ ನಾರಸಿಂಹನಿಗೂ ಆನಮಿಪೆ ಪರಾಜಿಸುವವಿಭವನಾಮ ಸಂವತ್ಸರ ನಿಯಾಮಿಕ ಏಕಾತ್ಮನಲ್ಲಿನಿಜ ಭಕ್ತಿಯಿಂದ ಸ್ತುತಿಪರನ್ನ ಸಂರಕ್ಷಿಪ ಶ್ರೀಹರಿಯು 1ಭಾಸ್ಕರೋದಯದಲ್ಲಿ ಪ್ರಭವಾಸಿತ ಪಕ್ಷ ನಂತರವಿಭವಸಿತ ಪ್ರತಿಸತ್ಊಶನ ಶುಕ್ರಭಾರ್ಗವವಾಸರವು ನಮೋ ಎಂಬೆಶುಕ್ರನಿಗೆ ನಮ್ಮ ಹಿತಕಾಯ್ವಿ 2ದಿನೋದಯದಿವಿಭವಸಂವತ್ಸರಸಿತಪಕ್ಷದ್ವಿತಿಯೇಯು ಸೌರವಾಸರವುರಾಜಶನೈಶ್ಚರಗೂ ಮಂತ್ರಿಬುಧಮೊದಲಾದವರಿಗೂನಮೋ ಎಂಬೆ ದಯವಾಗಲಿ 3ಊದ ಕೊರತೆ ಅತಿ ಉಷ್ಣ ಸಸ್ಯಸಾಂದು ರಾಜರಾಜರಾಜ ಜನ ಮನಸ್ತಾಪಜನಕಾಷ್ಟ ನೀದಯದಿ ಪರಿಹರಿಸಿ ಸಲಹೋಕೃಪಾನಿಧಿಯೇ ನರಹರಿಯೇ 4ಧವಳಗಂಗೆಗೆ ಅಪ್ರಸಿದ್ಧ ಹೆಸರು ಕೂರ್ಮತೀರ್ಥವುಎಂದುಂಟು ಅದು ಪ್ರಾಮಾಣಿಕ ಎಂದುತಿಳಿಯುವುದು ವಿಭವದಲಿ ನೀರಿನ ಮಟ್ಟ ಸ್ವಲ್ಪಕಾಲ ತಗ್ಗುವಾಗ 5ಸಂವತ್ಸರ ನಿಯಾಮಕಹರಿರೂಪಗಳ ಸೋಚಿತಆಚರಣೆ ಸಹ ಸಂಸ್ಮರಿಸಿಕುಲ ಇಷ್ಟದೇವರ ಮತ್ತು ಗುರುಗಳ ನೆನೆದು ಭಕ್ತಿಮಾಳ್ಪಜನರಿಗೆ ಸುಖಕಾಲ 6ಕಮಲಸಂಭವ ಪಿತ ಕಮಲಾಲಯಪತಿಅಮಲಪೂರ್ಣಾನಂದಾದಿಗುಣ ನಿಧಿಯುಸುಮನಸರೊಡೆಯ ಶ್ರೀ ಪ್ರಸನ್ನ ಶ್ರೀನಿವಾಸನುತನ್ನ ಭಕ್ತರಿಗೆಈವಸುಕ್ಷೇಮವನು ಸರ್ವದಾ7
--------------
ಪ್ರಸನ್ನ ಶ್ರೀನಿವಾಸದಾಸರು