ಒಟ್ಟು 52 ಕಡೆಗಳಲ್ಲಿ , 21 ದಾಸರು , 47 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾಮವ ಮೃಗರಿಪು ಗಿರಿರಮಣ ಮಹಿತಗುಣಾಭರಣ ಪ ಕಾಮಕಲುಷಭವಭೀಮ ಜಲಧಿಗತ ತಾಮಸಾತ್ಮಕಂ ದುರಿತಮಹಿ ಅ.ಪ. ನೀಲಜಲದ ಮದಹೇಳನ ಸುಭಗಶರೀರ ಕುಂದಕುಟ್ಮಲ ಸಮಾನ ಶುಭರದನ 1 ವತ್ಸಲಸಿತ ಶುಭಲಕ್ಷಣ ಲಕ್ಷ್ಮೀಧಾರಾ ಸಾಮಗಾರತ ಸತತಶುಭ ಚರಿತ 2 ಸಂತತಾರ್ತಾದರಚಕ್ರ ವಿಬುಧಗೇಯ ಪಾರಿಜಾತ ದುರಿತಾರಿ ವರದನುತ 3
--------------
ವೆಂಕಟವರದಾರ್ಯರು
ಮಾಮವ ಮೃಗರಿಪು ಗಿರಿರಮಣ-ಮಹಿತ ಗುಣಾಭರಣಪ ಕಾಮ ಕಲುಷಭವ ಭೀಮಜಲಧಿಗತ ತಾಮಸಾತ್ಮಕಂ ದುರಿತಚರಿತ ಮಹಿ ಮಾಮ ಅ.ಪ. ನಿಟಿಲನಯನ ಮಕುಟ ಲಸಿತ ವದನ ನೀರಾ-ಪೂರಾ ನೀಲ ಜಲದ ಮದಹೇಳನ ಸುಭಗಶರೀರ ಕುಂದ ಕುಟ್ಮಲ ಸಮಾನ ಶುಭರದನ 1 ವದನ ವಿಜಿತ ಶರದಮೃತಕಿರಣ ಸುಕುಮಾರಾಕಾರಾ ವತ್ಸಲ ಸಿತ ಶುಭಲಕ್ಷಣ ಲಕ್ಷ್ಮೀಧಾರಾ ಸದಯ ಹೃದಯ ಪರಿತೋಷಿತ ನತಜನ ಸಾಮಗಾನರತ ಶುಭ ಚರಿತ||ಮಾಮವ|| 2 ಕಮಲ ಸಂತತಾರ್ತಾದರ ಚಕ್ರ ವಿಬುಧಗೇಯ ಪ್ರಕಟ ಮಹಿಮ ಮಾಂಡವ್ಯ ಮನೋರಥ ಪಾರಿಜಾತ ದುರಿತಾರಿ ವರದನುತ ||ಮಾಮವ|| 3
--------------
ಸರಗೂರು ವೆಂಕಟವರದಾರ್ಯರು
ಮೃಡನ ಜಟಾಂತರವಾಸಿ ನಾಮಕಳೆ ಪ ನಿರುತ ಹರಿ ಗುರು ಕರುಣಾ ಪಾತ್ರೆ ಪರಮ ಪುರುಷ ದೂಷಿ ನಿಚಯ ವೀತಿ ಹೋತ್ರೆ 1 ದುರಿತ ಮಾರ್ಗಚರಿತ ಜನ ಹೃತ್‍ಶೂಲೆ ಮದನ ಶರಜಾಲೆ 2 ನಿವಾರಿತ ಮಮತಾ ಪಾಶ ವಾರಂ ವಾರೆ ಹರಿಕಥಾಶ್ರವಣ ದಳಿತ ಅಶ್ರುಧಾರೆ 3 ವರಸತ್ಕಲಾಪ ಮಂದಾಯು ಹರಣೆ ಪರಿಪರಿ ಸುಕ್ಷೇತ್ರ ಚರಿತ ಚರಣೆ 4 ಗುರುದತ್ತಾಶ್ರೀತ ವರಸುಪಥೆ ಹರಿಸ್ಮರಣಾವಿನಾ ನ ಜೀವಿತ ಶಪಥೆ 5 ಪರಿಕರಾ ಪರಿತದಾಕಾರ ವೀಕ್ಷಿತ ನೇತ್ರೆ ಸರಿತಶ್ವಾಸ ಸಾವೃತ ಪರಿಮಳಗಾತ್ರೆ 6 ಲಜ್ಜೋದಧಿ ನಕ್ಷೇಪಿತ ಗಜಗಮನೆ ಅರ್ಜಿತಾಂಗಾರ ವಿಲಸಿತ ಶೃಂಗಾರ ವದನೆ 7 ರುಜು ಜ್ಞಾನಭಕ್ತಿ ವಿಧಾರಣ ಶಕ್ತೆ ವಿಜಯ ರಾಮಚಂದ್ರವಿಠಲ ಪದ ಸೇವಾಸಕ್ತೆ 8
--------------
ವಿಜಯ ರಾಮಚಂದ್ರವಿಠಲ
ಯಾಕೆ ನೀನಿಲ್ಲಿ ಪವಡಿಸಿದೆ ಹರಿಯೆ - ಜಗ ಪ ದೇಕ ವಿಖ್ಯಾತ ಪಶ್ಚಿಮ ರಂಗಧಾಮ ಅ ತಮನೊಡನೆ ಹೋರಿ ಬೆಟ್ಟವನು ಬೆನ್ನಲಿ ಪೊತ್ತುರಮಣಿ ಭೂಮಿಯನು ತಂದಾಯಾಸವೂಅಮರವೈರಿಯ ಕರುಳ ಕಿತ್ತ ಕಡು ಧಾವತಿಯೊಕ್ಷಮೆಯನಳೆದೀ ಪಾದಕಮಲ ನೊಂದವೊ 1 ಪೊಡವಿಪಾಲಕರ ವಂಶವನು ವಪನ ಮಾಡಿಕೊಡಲಿಯನು ಬಿಸುಟು ಮಲಗಿದ ಭಾವವೊಮಡದಿಯನು ಕದ್ದೊಯ್ದವನ ಶಿರವನೆ ತರಿದುಒಡಲಿನಾಯಾಸದಲಿ ಪವಡಿಸಿದ ಪರಿಯೋ 2 ವಾಲಿ ಮೊದಲಾದ ಎದುರಾಂತ ವೀರರ ಕೊಂದುಕಾಳಿಯ ಹೆಡೆಯ ತುಳಿತುಳಿದು ಮೈಯಲಸಿತೊಲೀಲೆಗೋಸುಗ ಬಂದು ನಿರ್ವಾಣದಲಿ ನಿಂದುಆ ಲಜ್ಜೆಗಾಗಿ ತಲೆ ಬಾಗಿ ಮಲಗಿದೆಯೊ 3 ನಾಲ್ಕು ಯುಗದಾಧಾರಿ ಕಡೆಗೆ ತುರಗವನೇರಿಸಾಕಾಗಿ ದಣಿದು ನೀನಿಲ್ಲಿ ಮಲಗಿದೆಯೊಸಾಕಾರಿಯಾಗಿ ಗೌತಮ ಮುನೀಶ್ವರನಿಗೆಬೇಕೆಂದು ನೀ ಕೊಟ್ಟ ವರಕೆ ಮಲಗಿದೆಯೊ 4 ಕಾಲ ನೀನಿಲ್ಲಿ ಮಲಗಿದ್ದರೂನಿನ್ನನೆಬ್ಬಿಸುವವರನೊಬ್ಬರನು ಕಾಣೆಉನ್ನಂತ ಕಾಗಿನೆಲೆಯಾದಿಕೇಶವರಾಯಚೆನ್ನ ಶ್ರೀರಂಗಪಟ್ಟಣದ ರಂಗಧಾಮ 5
--------------
ಕನಕದಾಸ
ವೃಂದಾವನದೊಳು ಶೋಭಿಸುತಿರುವಳು ಸುಂದರ ಶ್ರೀ ತುಳಸಿ ಪ ನಂದನಂದನ ಗತಿ ಪ್ರಿಯಳೆಂದೆನಿಸುತ ಭವ ಬಂಧವ ಬಿಡಿಸುತ ಅ.ಪ ನಿತ್ಯವು ಪ್ರಾತಃಕಾಲದೊಳೆದ್ದು ಪವಿತ್ರ ಚಿತ್ತದಲಿ ಭಕ್ತಿಯಲಿ ಸ್ತೋತ್ರವ ಗೈಯುತ ಸುತ್ತಿ ಪ್ರದಕ್ಷಿಣೆ ಮತ್ತೆ ನಮಿಪರಘ ಬತ್ತಿಸಿ ಸಲಹುತ 1 ತುಳಸಿ ವೃಂದಾವನ ಮಹಿಮೆಯ ಮನದಲಿ ನಿಲಿಸಿ ಸೇವಿಸುವ ಸಜ್ಜನರ ಕಲಿದೋಷಗಳನು ಕಳೆದು ಸತತ ಶ್ರೀ ನಿಲಯನÉೂಳ್ ಭಕ್ತಿಯ ಕೊಡುವೆನೆಂದೆನುತ 2 ತುಳಸಿ ದಳದಿ ಶ್ರೀ ಕರಿಗಿರೀಶನ ವಿಲಸಿತ ಪೂಜೆಯ ಮಾಡುವರ ಸುಲಲಿತ ಸತ್ಪಥದೊಳು ನಡೆಸುತ ನಿ ರ್ಮಲಮತಿ ಕರುಣಿಸಿ ಸಲಹುವೆನೆನ್ನುತ 3
--------------
ವರಾವಾಣಿರಾಮರಾಯದಾಸರು
ಶರಣು ಶರಣು ವಾದಿರಾಜ ಶರಣ ಜನಕೆ ಕಲ್ಪ ಭೂಜ ಪ ಪಂಕಜ ಭವ್ಯತೇಜ ಅ.ಪ ಯೋಗಿವರ ವಾಗೀಶ ಕುವರ ಬಾಗಿ ನಮಿಸಿ ಮುಗಿಯುವೆ ಕರವ ಭೋಗ ರಾಗ ದೂರ ಧೀರ ಭಾಗವತ ಕುಲಾಬ್ಜ ಭಾಸ್ಕರ 1 ಸಿರಿ ವಿಲಸಿತ ಪರಿಪರಿ ಸದ್ಗ್ರಂಥ ರಚಿತ ವರಕವೀಂದ್ರ ಕೀರ್ತಿಸಾಂದ್ರ ಪರಮ ಕುಲಾಂಬುಧಿ ಚಂದ್ರ 2 ಹಯಾಸ್ಯ ಚರಣ ಕವಿ ಜನಾವಳಿ ಭೂಷಣ ಭಾಸುರಾಗ ಪಾಲಿಸು ಕರಿಗಿ ಕಮಲ ಚರಣ3
--------------
ವರಾವಾಣಿರಾಮರಾಯದಾಸರು
ಶಾಂತಿಯ ಕರುಣಿಸೊ ಈ ಮನಸಿಗೆ ಶಾಂತಿಯ ಕರುಣಿಸೊ ಪ ಶಾಂತಿಕರುಣಿಸಿ ನಿನ್ನಂತರಂಗದಿ ನಿಮ್ಮ ಚಿಂತೆ ಇರಿಸು ಕರುಣಾಂತರಂಗ ಹರಿಅ.ಪ ವಿಲಸಿತಮತಿ ಕೊಡೊ ಮನವು ಚಲಿಸದಪದ ನೀಡೋ ಸುಲಭದಿ ತವಪಾದ ಒಲಿಸಿ ನಲಿಯುವ ದಾಸರೊಳಗೆ ಕೂಡಿಸಿ ಎನ್ನ ನೊಲಿದು ರಕ್ಷಣೆಮಾಡೊ 1 ಹಲುಬಾಟ ದೂರಮಾಡೊ ಎನ್ನಯ ಪ್ರಳಯ ಗುಣೀಡ್ಯಾಡೊ ಗಲಿಬಿಲಿ ಸಂಸಾರದೊಲಿಮಿಲಿ ಬಳಲುವ ಹೊಲೆಮತಿ ಕಳೆದೆನ್ನ ಸಲಹೆಲೊ ಜ್ಞಾನದಿ 2 ಮರೆಯ ಬೇಡ ಎನ್ನ ಕರುಣಾ ಭರಣ ಭಕ್ತಪ್ರಾಣ ಹರಿವ ಜಗದಿ ಎನ್ನ ಪರಿಪರಿ ನೋಯ್ಸದೆ ಪರಮಮುಕ್ತಿಯನಿತ್ತು ಪೊರೆಯೊ ಶ್ರೀರಾಮ3
--------------
ರಾಮದಾಸರು
ಶ್ರೀ ಗುರು ಮೂರ್ತಿಯನು ನಂಬಿ ಧ್ಯಾನಿಸಿ ಜನರು | ನೀಗಿ ಚಂಚಲ ಚಿತ್ತದಾ ಭಾಗವತ ಧರ್ಮದಿಂದರ್ಚಿಸಲು ಕರುಣ ಮಳೆ | ಭವ ಪಾಶದೆಶೆಯಿಂದ ಪ ಎಳೆಯ ಮಾದಳಿರ ಸೋಲಿಸುವ ಮೃದುತರ ಬೆರಳ ನಖ ಚಲುವ ಪಾದಾ | ನಳ ನಳಿಪ ಪವಳ ಮಣಿಯಂತೆ ಹರಡಿನ ಸೊ.... ವಿಲಸಿತದ ಜಂಘೆದ್ವಯದಾ | ನಿಚ್ಚಳದ ಜಾನೂರದ ಸ್ಪುರದಾ | ವಲುಮೆಮಿಗೆ ತನು ಮಧ್ಯ ಸಂಪಿಗೆಯ ಗಂಭೀರನಾಭಿ ಕಿರು ಡೊಳ್ಳು ತ್ರಿವಳಿ ವಾಸನೆಯ ಛಂದಾ 1 ಪುತ್ಥಳಿಯ ಹಲಗಿ ಕಾಂತಿಯ ಲೊಪ್ಪುತಿಹ ಉರದ | ವತ್ತಿಡದ ಕೊರಳ ಮಾಟಾ| ಮಣಿ ಬಂಧ | ಮತ್ತ ಊರ್ಪರಿಯಕಟಾ | ಮೊತ್ತದೋರ್ವಂಡ ಭುಜ ಶ್ರವಣ ನುಣ್ಗದಪುಗಳು | ಹೆತ್ತ ಪಲ್ವಧರ ನೀಟಾ | ಸೂರ್ಯ ಪರಿನಯನ | ವೆತ್ತ ಭ್ರೂಲತೆ ಪೆರ್ನೊಸಲ ಸುಕೇಶಿಯ ಜೂಟಾ 2 ಮಣಿ ತೇಜದೊಳೆ ಯುಗ್ಮ ಕುಂಡಲಗಳು | ನವರತ್ನ ಹಾರ ಮಂಡಿತ ಪದಕ ವಡ್ಯಾಣ | ಠವ ಠವಿಸುತಿಹ ಸರಳು | ಬವರದೊಳು ಚಿತ್ತ ತೆತ್ತೀಸ ತಾಯಿತ ಕಡ ವಜ್ರ ದುಂಗುರಗಳು | ತವಕದೊಳ್ ನಿರೆ ಹಾಕಿ ದಂಬರವ ಮೌಲಿಕದ | ಕಾಲ ಕಡಗ ಅಂದುಗೆಗಳು 3 ದ್ವಿನಯನ ಮಧ್ಯ ರಾಜಿಸುವ ಮಂಟಪದೊಳಗ ಧ್ಯಾನ ಸಿಂಹಾಸನದಲಿ | ಸಾನು ರಾಗದಲಿ ಕುಳ್ಳಿರಿಸಿ ಚರಣ ದ್ವಯವ ಜ್ಞಾನ ಗಂಗೋದಕದಲಿ | ಮಾನಸದಿ ಅಭಿಷೇಕವನೆ ಮಾಡಿ ಸಲೆ ಪೂಸಿ ಆನಂದ ವಸ್ತ್ರ ಗುಣಲಿ | ಮೌನದಲಿ ಲಯಲಕ್ಷಿ ಗಂಧಾಕ್ಷತೆಯ ಸುಮನ ತಾನಿಟ್ಟು ಬೆಳಗಿ ಧೂಪದಿ ಏಕಾರತಿಗಳಲಿ 4 ಬಳಿಕ ಕಸ್ತೂರಿಯ ಕೇಶರದ ಚಂದನ ಪೂಸಿ | ಕಳೇವರಕ ವಪ್ಪಿಲಿಂದಾ | ಥಳ ಥಳನೆ ರಂಜಿಸುವ ಬಟ್ಟ ಮುತ್ತಿಶಾಶೆ ಗಳನಿಟ್ಟು ಬೇಗ ಛಂದಾ | ಚಲುವ ಮಲ್ಲಿಗೆ ಕುಂದರ್ಕೆ ಜಾಜಿ ಕೇತಕಿಯು ನಳಿನ ಮೊದಲಾದರಿಂದಾ | .....ರ ಮಾಲೆಯಾ ಹಾಕಿ ಪರಿಮಳದಿ ಧೂಪವನು | .....ಸಂಚಿತ ದಶಾಂಗದಿ ಚಕ್ಷು ಜ್ಯೋತಿಯಿಂದಾ 5 ವರಶಾಂತಿ ಶಕ್ತಿ ಯರ್ಚಿಸಿ ಕುಳ್ಳಿರಿಸಿ ಪುರುಷಾರ್ಥ ದೀಪಂಗಳು | ಮೆರೆಯುತ ಪ್ರಜ್ವಲಿಸಿ ತರುವಾಯ ಕನಕಮಯ | ಹರಿವಾಣ ಬಟ್ಟಲುಗಳು | ಪರಮಾನ್ನ ಪಂಚಭಕ್ಷಗಳನ್ನ ಸೂಪಘೃತ ಪರಿ ಪರಿಯ ಶಾಖಂಗಳು | ಸುರಸ ಪಾಲು ಮೊಸರು ತನಿವಣ್ಣಲುವಗಾಯಿಕೇಸರ | ಧರಿಯೊಳಗ ಲೇಹ ಪೇಹ ಮೊದಲಾದ ಭೋಜ್ಯಂಗಳು 6 ಇನಿತು ಅರ್ಪಿಸಿ ಸ್ವಾದುದಕ ಕೈದೊಳೆದು | ಗುಣದಿತ್ತು ತಾಂಬೂಲವಾ | ಅನುಭವದಾರತಿಯು ಪುಷ್ಪಾಂಜುಳಿ ನಮನ ಪ್ರದ ಕ್ಷಿಣ ಗೀತ ನೃತ್ಯ ಮುದವಾ | ಘನ ತೀರ್ಥಸು ಪ್ರಸಾದವ ಕೊಂಡು ಸೂರ್ಯಾಡಿ ಅನುವಾಗಿ ಸಖ್ಯದನುವಾ | ಮನುಜ ಜನ್ಮಕ ಬಂದು ಗುರು ಮಹಿಪತಿ ಸ್ವಾಮಿ | ಘನದಯವ ಪಡಕೊಂಡು ಪಡೆಯೋ ಮುಕ್ತಿಯ ಸ್ಥಳವಾ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀನಿವಾಸ ಸುಗುಣೈಕ ನಿಧೆ ಶ್ರೀಮಾನಸಹಂಸ ದಯಾಜಲಧೆ ಪ ತೋಯಸನ್ನಿಭಕಾಯ-ಮನೋಜನಿಕಾಯ ಮಾಪಮಧುರಾಲಾಪ ನಿಧಾಯಹೃದಿಧ್ಯಾಯಾಮಿಹರೆ 1 ವಿಗ್ರಹ ಮಖಿಳಶುಭಗ್ರಹಣಂ ಮದನುಗ್ರ ಹಾರ್ಥಮದಿ ತಿಷ್ಠವಿಭೋ ಸಮರ್ಯಾಂ ಸ್ವೀಕುರುಭೋ 2 ಪಾದ್ಯಾಘ್ರ್ಯಾಚಮನಾದ್ಯಮಖಿಳ ಜಗ- ದಾದ್ಯಕಲ್ಪಿತಂ ಭವದರ್ಥಂ ಸುಖೋಷ್ಣಮಿದಂ 3 ನಿಸ್ತುಲಕಾಂಚನವಸ್ತ್ರಮಲಂಕುರು ಕಸ್ತೂರಿತಿಲಕಂ ಸುಮುಖೋ ಕೌಸ್ತುಭರತ್ನ ಮಜಸ್ತುತಮಂಡನ ಮಸ್ತುತನೌಗುಣ ಭೂಷಣತೇ 4 ಮಂದಾರಕಾ ಮಾಲ್ಯಾಕಲಿತಂ ಮಲಂಕುರುಸನ್ನಿಹಿತಂ 5 ಗಂಧರ್ವಾಮರ ವಂದಿತ ಮಲಯಾ ಗಂಧಲೇಪನ ಮಾಕಲಯಾ ಧೂಪಂ ಜಿಘ್ರಹರೇ 6 ತಾಪತ್ರಯ ಪರಿತಾಪನಿವಾರಣಂ- ತಾಪಸಮಾನಸದೀಪ ಹರೇ ರೂಪಾಲೋಕಯ ಶ್ರೀನೃಹರೇ 7 ಮಂತ್ರತಂತ್ರ ಯಂತೃಣಮೂರ್ತೇ ಸುಮಂತ್ರಪುಷ್ಪಂ ಸ್ವೀಕುರುಹೇ 8 ವಿಚಿತ್ರದಂತ ಚಾಮರಯುಗಳಂ ಶ್ರೋತ್ರಮಿತ್ರ ತೋರ್ಯತ್ರಿಕಮಾಕಲಯಾತ್ರ ಭೋಗಾಮಧಿರಾಜ ಕಳಂ 9 ಪಾಯಸಮತಿಹೃದ್ಯಂ ಮಧುನಾಸ್ವೀಕುರು ನೈವೇದ್ಯಂ 10 ಶಿಶಿರಾಂಬುಪಿಬಾಮಲ ಘನಸಾರಂ ಬಹುಮನ್ವಸ ಕರ್ಪೂರಂ 11 ಪರಿವಾರ ವಿಭೋ ಕರ್ಪೂರಾರ್ತಿಕಮಂಗೀಕುರುಭೋ 12 ಕುಕ್ಷಿಭುವನ ಸಂರಕ್ಷಿತ ಸೇವಕ ಪಕ್ಷಪ್ರದ ಕ್ಷಿಣಮನುವಾರಂ ಪಕ್ಷಿಗಮನನಿಜ ವಕ್ಷೋಧೃತ ಶುಭಲಕ್ಷಕರೋಮ ನಮಸ್ಕಾರಂ13 ಸಾಗರತನಯಾಯಾಗವಿಹಿತ ಭೂಭಾಗದೇಯ ನೀಳಾ ಸಹಿತಂ ಕುರುಲಸಿತಂ14 ಆರಾಧನಮ ಪಜಾಯತಮುಪಚಾರಮಿಷೇಣ ಮಯಾ ಚರಿತಂ ನಾರಾಯಣ ಚರಣಾರಾಧನಮಿತಿ ಕಾರುಣ್ಯೇನ ಕ್ಷಮಸ್ಸೇದಂ 15 ಚರಣಾಗತ ಜನಭರಣಾಲಂಕೃತ ಹರಿಣಾರ್ಯದ್ರಿ ನಿಕೇತನ ತೇ ಚರಣಾರಾಧನ ಕರಣಾಂಚಿತಮಿತಿ ವರದ ವಿಠಲಗೀತಂ ತನುತೇ 16
--------------
ಸರಗೂರು ವೆಂಕಟವರದಾರ್ಯರು
ಶ್ರೀನಿವಾಸಸುಗುಣೈಕನಿಧೆ ಶ್ರೀ ಮಾನಸಹಂಸ ದಯಾಜಲಧೇ ಪ ಕಾಯ ಮಾಪಮಧುರಾಲಾಪ ತೋಯಜಾಕ್ಷ ಪೃಥುಳಾಯತಪಕ್ಷ ನಿ ಧಾಯ ಹೃದಿಧ್ಯಾಯಾಮಿ ಹರೆ 1 ವಿಗ್ರಹಮಖಿಳಶುಭಗ್ರಹಣಂ ಮದ ನುಗ್ರಹಾರ್ಥಮದಿತಿಷ್ಠವಿಭೋ ಉಗ್ರಮುಖ ವಿಬುಧಾಗ್ರ್ಯಪೂಜಿತ ಸ ಮಗ್ರ ಸಮರ್ಯಾಂ ಸ್ವೀಕುರುಭೋ 2 ದಾದ್ಯ ಕಲ್ಪಿತಂ ಭವದರ್ಥಂ ಸದ್ಯಂಬುನಿಮೇಜ್ಯ ಸುಖೋಷ್ಣಮಿದಂ3 ಕಸ್ತೂರಿತಿಲಕಂ ಸುಮುಖೋ ಕೌಸ್ತುಭರತ್ನಮಜಸ್ತುತಮಂಡನ ಮಸ್ತುತನೌಗುಣ ಭೂಷಣತೇ 4 ಮಂದಾರಕಾ ಮಾಲ್ಯಾಕಲಿತಂ ಗದ ಬಂಧುರ ಸುಗಂಧಿ ತುಳಸಿಕಾ ಬೃಂದಮಲಂಕುರು ಸನ್ನಿಹಿತಂ 5 ಗಂಧರ್ವಾಮರ ವಂದಿತ ಮಲಯಾ ಗಂಧಲೇಪನಮಾಕಲಯಾ ಗಂಧವಾಹನುತ ಗಂದವತೀ ಗುಣ ಬಂಧುರ ದೂಪಂ ಜಿಘ್ರಹರೇ 6 ತಾಪಸ ಮಾನಸ ದೀಪಹರೇ ರೂಪಾಲೋಕಯ ಶ್ರೀನೃಹರೇ 7 ಮಂತ್ರಪೂತಮುಖ ಯಾತ್ರಾಧಾರ ಸು ಮಂತ್ರಪುಷ್ಪಂ ಸ್ವೀಕುರುಹೇ 8 ಛತ್ರಮಿದಂ ಭುವನತ್ರಯನಾಥಸ ವಿ ಚಿತ್ರದಂತ ಚಾಮರಯುಗಳಂ ಯಾತ್ರ ಭೋಗಾ ಮದಿರಾಜಕಳಂ 9 ಮಧುಮಧುರಿಮ ಪಾಯಸಮತಿಹೃದ್ಯಂ ಮಧುನಾಸ್ವೀಕುರು ನೈವೇದ್ಯಂ 10 ಬಿಂಬಾಧರಮಿಂದುಬಿಂಬವದನ ಶಿಶಿ ರಾಂಬುಪಿಬಾಮಲಘನಸಾರಂ ತಂಬಹುಮನ್ವಸ ಕರ್ಪೂರಂ 11 ಕಾರ ನಿಭೃತ ಪರಿವಾರ ವಿಭೋ ನೀರಾಜನಮತಿತಾರಾಯಿತ ಕ ರ್ಪೂರಾರ್ತಿಕಮಂಗೀಕುರು ಭೋ 12 ಪಕ್ಷ ಪ್ರದಕ್ಷಿಣಮನುವಾರಂ ಪಕ್ಷಿಗಮನನಿಜವಕ್ಷೋಧೃತಶುಭ ಲಕ್ಷಕರೋಮನಮಸ್ಕಾರಂ13 ಸಾಗರತನಯಾಯಾಗವಿಹಿತ ಭೂ ಭಾಗಧೇಯನೀಳಾಸಹಿತಂ ಭೋಗಿಶಯನಮನುರಾಗ ಪರಿಷ್ಕøತ ಮಾಗಮಗೋಚರ ಕುರುಲಸಿತಂ14 ಆರಾಧನಮಪಜಾಯತಮುಪ ಚಾರಮಿಷೇಣ ಮಯಾಚರಿತಂ ಕಾರುಣ್ಯೇನ ಕ್ಷಮಸ್ಸೇದಂ 15 ಹರಿಣಾರ್ಯದ್ರಿ ನಿಕೇತನ ತೇ ಚರಣಾರಾಧನ ಕರಣಾಂಚಿತಮಿತಿ ವರದವಿಠಲಗೀತಂ ನುತೇ 16
--------------
ವೆಂಕಟವರದಾರ್ಯರು
ಹಂಸವಾಹನ ಜಾಯೆ ಕಾಯೆ ಪ ವಿಪಾಂಸಗನ ಪದಪಾಂಸು ಧರಿಸುವಳೆ ಮನ ಸಂಶಯವ ಕಳೆ ಅ.ಪ. ಸತಿ | ಅ-ಜ್ಞಾನ ನೀಗಿ ಸುಜ್ಞಾನ ವೀಯುತ |ಜ್ಞಾನ ಪೂರ್ಣ ಪ್ರಜ್ಞಾನ ಘನಗುಣಗಾನ ಮಾಳ್ಪ ವಿಜ್ಞಾನ ವೀವುದು 1 ಭಕ್ತಿರೂಪಿ - ಸುವ್ಯಕ್ತಿಗೈ ಹರಿಸಭಕ್ತಿಯನು ಗುರುಭಕ್ತಿಯೆನ್ನಲ್ಲಿ |ಶಕ್ತಿ ಕೊಟ್ಟಾಸಕ್ತಿಯಲಿ ವೇ-ದೋಕ್ತದಲಿ ಎನ ಯುಕ್ತ ನೆನಿಸಮ್ಮ 2 ವಾಣಿಯೇ ಬ್ರಹ್ಮಾಣಿಯೇ ವೇ-ದಾಣಿಯೇ ಸುಜ್ಞಾನಿಯೇ ಪೊರೆವೀಣೆ ಧರಿಸಿಹ ಪಾಣಿಯೇ ಸು-ಶ್ರೋಣಿಯೇ ಚತು | ರಾನನ ಪ್ರಿಯೆ 3 ನೆಲಸಿ ರಸನದಿ | ವಿಲಸಿತಾಮಲಲಲಿತ ಹರಿಗುಣ | ಫಲಿಸಿ ಕೀರ್ತಿಸುಅಲವ ಭೋದರ | ಲಲಿತ ಉಕ್ತಿಲಿಪುಳಕ ಪುಳಕದಿ | ನಿಲಿಸು ಮನ್ಮನವಾ 4 ಸನ್ನುತ ಕ | ಟಾಕ್ಷ ತೋರಿಸು 5
--------------
ಗುರುಗೋವಿಂದವಿಠಲರು
ಎಲೆಮಾನವಹರಿಯ ಸ್ಮರಿಸುಸಲೆ ಕಾವನು ಖರಿಯ ಪ.ಶಂಖಾರಿ ಸಂಧೃತನ ಮತ್ತಾಶಂಖಜನ ಬಲಹೃತನಶಂಕರ ವಿಧಿನÀುತ ಚರಣನುದಾರಾಶಂಕಾವಾರಣ ವಾರಣೋದ್ಧರನ 1ಕಮನೀಯತರ ಗಾತ್ರನಅರುಣಕಮಲಾಯತ ನೇತ್ರನಕಮಲಾವ್ಯಯಪೂತಮುಖ ಚಾರುವಿಲಸಿತಕುಮುದಾಸಿತ ಶರಣ ಕರುಣಾಕರನ 2ಅಗಣಿತಗುಣಗಣ್ಯನಾನಂತಆಗಮನಿಗಮಾದಿ ಪೂರ್ಣನಅಗಧರ ಮಹಿವರ ಪ್ರಸನ್ವೆಂಕಟವರಅಗನಂದನಿಲಯ ಕಲಿಯಕೋಲಾಹಲನ 3
--------------
ಪ್ರಸನ್ನವೆಂಕಟದಾಸರು
ನೀನೆ ಭಕುತಾಭಿಮಾನಿ ಕರುಣಿ ಪಮರೆಬಿದ್ದ ಭಕುತರ ಪೊರೆಯಲು ತವಸಮಕರುಣಿ ದೇವರ ಕಾಣೆಧರೆಎರಡೇಳರೊಳ್1ಶಿಲೆಯನು ಪೆಣ್ಣೆನಿಸಿ ಕುಲದೊಳು ಕಲೆಸಿದಿಸಲಹಿದಿ ಗಜನ ಮಹ ವಿಲಸಿತಮಹಿಮ ಪ್ರಭು 2ಮೊರೆಯಿಟ್ಟು ಸ್ಮರಿಸುವ ಚರಣದಾಸನ ಆಸೆಕರುಣದಿಂ ಪೂರೈಸು ಪರತರ ಶ್ರೀರಾಮ 3
--------------
ರಾಮದಾಸರು
ನೋಡಿರೆ ಯಶೋದೆಯ ಪುಣ್ಯಪಡೆದಿಹ್ಯಳೆಂಥ ಮಾನ್ಯ ಪಪೊಡವಿ ಈರೇಳನ್ನು ಒಡಲೊಳಿಟ್ಟವನನ್ನುತೊಡೆಮೇಲಾಡಿಸುವಳು ಅ.ಪವಿಲಸಿತಮಹಿಮನ ಕಳೆಯ ತಿಳಿಯಲು ವೇದಬಲುವಿಧ ಪೊಗಳುತ ನೆಲೆಯುಗಾಣದಘನಕಳವಳಗೊಳುತಿಹ್ಯವಭವನ ದೆಸೆಯಿಂಸುಲಭದೆತ್ತಿ ತನ್ನ ಮೊಲೆಯನುಣಿಸುವಳೀಕೆ 1ಭುಜಗಭೂಷನು ತನ್ನ ನಿಜಪದವನುದಿನಭಜಿಸಿ ಬೇಡಲು ಕಾಣರಜಸುರಮುನಿಗಣಸುಜನಗುಣಾಂತರಂಗ ತ್ರಿಜಗವ್ಯಾಪಕನನಿಜವನು ಮನದಣಿ ಕಂಡು ಹಿಗ್ಗಿದಳೀಕೆ 2ಸೀಮರಹಿತಮಹಿಮ ನಾಮರೂಪಿಲ್ಲದ ನಿಸ್ಸೀಮ ಸುಗುಣಸುಖಧಾಮ ಭೂಮಿಜೆಪತಿಸ್ವಾಮಿ ಶ್ರೀರಾಮನ ವಿಮಲದಾಟದಲಿಭೂಮಿಯೊಳ್ಮಿಗಿಲಾದಾನಂದೊಳಿಹÀಳೀಕೆ 3
--------------
ರಾಮದಾಸರು
ಶೇಷಾಚಲನಾಯಕ ಸಲಹಯ್ಯಾಶೇಷದುರಿತ ದೂರಕ ಪ.ಮಕರಾಲಯಸದನಮಾಧವಮಕರಕುಂಡಲಕರಣಮಕರಕೇತನತಾತಮಾಕಾಂತವಿಲಸಿತಮಕುಟಕೌಸ್ತುಭಭೂಷಿತ ಮುಕುಂದ1ಸ್ವಾಮಿಪುಷ್ಕರಿಣೀವಾಸ ಮುಕುಂದಸಾಮಗಾಯನ ವಿಲಾಸಸೋಮದ್ಯುಮಣಿನಯನಾಬ್ಜಕೊದರ್ವದಳಶ್ಯಾಮಸಿರಿಭೂಲೋಲ ಮುಕುಂದ2ಸನ್ಮಾರ್ಗವ ತೋರಿಸೊ ಸಂತರಸನ್ನಿದಲ್ಲಿರಿಸೊಶೂನ್ಯಭಾಗ್ಯವ ನೋಡಿ ಸಲಹಯ್ಯ ತಂದೆ ಪ್ರಸನ್ನವೆಂಕಟನಾಯಕ ಮುಕುಂದ 3
--------------
ಪ್ರಸನ್ನವೆಂಕಟದಾಸರು