ಏನು ಇದ್ದರೇನು ನಿನ್ನ ಸಂಗದ ಸಂಗಡ ಬಾರದೇನು ದಾನ ಧರ್ಮವ ಮಾಡಿದ್ದೊಂದು ಬೆನ್ನಬಿಡದದೇನು ಪ ಆಳು ಕಾಳು ಮಂದಿ ಮನುಷರು ಬಹಳವಿದ್ದರೇನು ಮಾಳಿಗೆ ಕೈಸಾಲೆ ಚಂದ್ರಶಾಲೆಯಿದ್ದರೇನು ನೀಲ ಮುತ್ತು ಕೆಂಪಿನುಂಗುರ ಕೈಯಲಿದ್ದರೇನು ಕಾಲನವರು ಎಳೆಯುತಿರಲು ನಾಲಗೆಗೆ ಬಾರದೇನು 1 ನೆಟ್ಟ ಹತ್ತಿಲು ತೋಟ ತೆಂಗು ಎಷ್ಟುತಾನಿದ್ದರೇನು ಮಹಿಷಿ ಸಾವಿರವಿದ್ದರೇನು ಪಟ್ಟೆ ಶಾಲು ಚಿನ್ನದ ಕುಳದ ಘಟ್ಟಿಯಿದ್ದರೇನು ಕಟ್ಟಿಯಿಟ್ಟ ಗಂಟುನಿನ್ನ ಸಂಗಡ ಬಾರದೇನು 2 ಲಕ್ಷವಿತ್ತ ಜಯಿಸಿ ರಾಜ್ಯ ಪಟ್ಟವಾದರೇನು ಕಟ್ಟಿದಾನೆ ಮಂದಿ ಕುದುರೆ ಹತ್ತಿರಿದ್ದರೇನು ನೆಟ್ಟನೆ ಜೀವಾತ್ಮ ಗೂಡ ಬಿಟ್ಟು ಪೋಗದೇನು ಕುಟ್ಟಿ ಕೊಂಡಳುವುದರೆ ಮಂದಿ ಎಷ್ಟು ಇದ್ದರೇನು 3 ಮಕ್ಕಳು ಮೊಮ್ಮಕ್ಕಳು ಹೆಮ್ಮಕ್ಕಳಿದ್ದರೇನು ಚಿಕ್ಕ ಪ್ರಾಯದ ಸತಿಯು ಸೊಸೆದಿಕ್ಕಳಿದ್ದರೇನು ಲೆಕ್ಕವಿಲ್ಲದ ದ್ರವ್ಯ ನಿನಗೆ ಸಿಕ್ಕುಯಿದ್ದರೇನು ಡೊಕ್ಕೆ ಬೀಳೆ ಹೆಣವ ಬೆಂಕಿಗಿಕ್ಕಿ ಬರುವರೋ 4 ಹೀಗೆ ಎಂದು ನೀನು ನಿನ್ನ ತಿಳಿದು ಕೊಳ್ಳಬೇಕೋ ಆಗೋದ್ಹೋಗೋದೆಲ್ಲ ಈಶ್ವರಾಜÉ್ಞ ಎನ್ನ ಬೇಕೋ ವೈರಿ ಕೋಣೆ ಲಕ್ಷ್ಮೀರಮಣನ ಭಜಿಸಬೇಕೋ ಯೋಗ ಮಾರ್ಗದಿಂದ ನೀನು ಮುಕ್ತಿ ಪಡೆಯ ಬೇಕೋ 5
ಏನು ದಾಸ ನಾನು ಹರಿಯೆ ನೀನು ಮೆಚ್ಚುವೆಯೇನೊ ಪ ಏನು ಮಾಡಿದರೇನು ನಿನ್ನಯ ಖೂನವರಿದೆನೇನೊ ಹರಿಯೆ ಅ.ಪ ಲೋಕ ವಾರ್ತಿ ಎಲ್ಲ ಜರಿದು ಏಕ ಚಿತ್ತವಿಲ್ಲ ಕಾಕು ಪೋಕರ ನೀಕರಿ ನಿನ್ನ ಸ್ವೀಕರಿಸಲಿಲ್ಲ ಬರಿದೆ 1 ನಿನ್ನ ಮಹಿಮೆಯನ್ನು ಕೇಳಿ ನಿನ್ನ ರೂಪವಿನ್ನು ಮನದಣಿಯೆ ನೋ ಡೆನ್ನ ಮರೆಯದೆನ್ನ ದಾಸ್ಯವಿನ್ನು ಬರಿದೆ 2 ಭಾವ ತಿಳಿಯಲಿಲ್ಲ ಗುರುಗಳ ಸೇವೆ ಮಾಡಲಿಲ್ಲ ಧಾವತಿಗೊಂಡೆ ಕೇವಲ ವಾಸುದೇವವಿಠಲ ಬರಿದೆ 3
ಏನು ಮಾಡಲೀ ಮನ ಮಾತು ಕೇಳದೇನು ಮಾಡಲಿ ಶ್ರೀ ನರಹರಿಯ ನೆನೆಯದೆ ಕಂಡ ಹೀನ ವಿಷಯದಲ್ಲಿ ಶ್ವಾನನಂತೆ ಪೋಪರೇನು ಪ ಸಾಧು ಸಜ್ಜನರ ಬೋಧನೆಯ ಜರಿಸಿ ಮಾಧವನೆ ನಿನ್ನ ಪಾದಕೊಯಿರಿ ಮಾಳ್ಪೊದೇನು 1 ಕಾಯ ಬಾಂಧವರ ಮಾಯಪಾಶಕ್ಹಾಕೆ ತೋಯಜಾಕ್ಷ ಎನ್ನ ಬಾಯ ಬಿಡಿಸೊರೈಯ್ಯ 2 ಗಜ ಸಿಕ್ಕಿಬಿದ್ದು ನೈಜ ದಿಕ್ಕುಕಾಣದಂತೆ ಸಿಕ್ಕೆ ವಿಷಯದಲ್ಲಿ 3 ತಂದು ತಂದು ಗೋವಿಂದ ನಿನ್ನಲಿಡೆ ಸಂದುಗೊಂಡು ಬಿಡಿಸಿಕೊಂಡು ಪೋಪುದೈಯ್ಯ 4 ದೇಹಗೇಹದಲ್ಲಿ ಸ್ನೇಹ ಇಡಿಸಿ ಕೆಡಿಸಿ ಶ್ರೀ ಹಯವದನ ಮೋಹಪಾಶಕ್ಹಾಕೋದೇನು 5 ವಾಕು ಕೇಳೋ ತಂದೆ ಪಾದ ಒಂದೇ ಸಾಕಬೇಕೊ ಇಂದೆ 6 ಹೀನಬುದ್ಧಿಬಿಡಿಸಿ ಜ್ಞಾನ ನಿನ್ನಲಿರಿಸಿ ಗಾನಲೋಲ ಕಾಯೋ ಶ್ರೀ ನರಹರಿಯೆ 7