ಒಟ್ಟು 32 ಕಡೆಗಳಲ್ಲಿ , 17 ದಾಸರು , 32 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಯ ನಿವಾರಣವು ಶ್ರೀ ಹರಿಯ ನಾಮ |ಜಯಪಾಂಡುರಂಗವಿಠಲ ನಿನ್ನ ನಾಮ ಪಧಾರಿಣೀದೇವಿಗಾಧಾರವಾಗಿಹ ನಾಮ |ನಾರದರು ನಲಿನಲಿದು ನೆನೆವ ನಾಮ |ಘೋರಪಾತಕಿ ಅಜಾಮಿಳನ ಸಲಹಿದ ನಾಮ |ತಾರಕವು ಬ್ರಹ್ಮ - ಭವರಿಗೆ ನಿನ್ನ ನಾಮ 1ಮೊರೆಯಲಾಲಿಸಿ ಮುನ್ನ ಗಜವ ಸಲಹಿದ ನಾಮ |ಕರುಣದಿಂ ದ್ರೌಪದಿಯ ಕಾಯ್ದ ನಾಮ |ಮರುಗುತಿಹ ಧ್ರುವನ ಉನ್ನತನ ಮಾಡಿದ ನಾಮ |ಪರತತ್ತ್ವ ಇಹಕಲ್ಲವೇ ನಿನ್ನ ನಾಮ 2ಚರಣದಲಹಲ್ಯೆಯನು ಸೆರೆಯ ಬಿಡಿಸಿದ ನಾಮ |ಕರುಣದಲಿ ಪ್ರಹ್ಲಾದನನು ಕಾಯ್ದ ನಾಮ |ತೊರೆಯಲಕ್ರೂರನಿಗೆ ನಿಜವ ತೋರಿದ ನಾಮ |ಸ್ಮರಿಸ ಜನರಿಗೆ ಸಮಸ್ತವನಿತ್ತ ನಾಮ 3ಚಂದ್ರಶೇಖರ ಗಿರಿಜೆಗೊರೆದ ಸಿರಿಹರಿನಾಮ ||ಬಂದಾ ವಿಭೀಷಣನ ಪಾಲಿಸಿದ ನಾಮ |ಕಂದಮುಚುಕುಂದನಿಗೆ ಕಾಮಿತವನಿತ್ತ ನಾಮ |(ಸಂದ ಪಾಂಡಪಕ್ಷ ಪಾವನವು ನಾಮ ) 4ಅಖಿಳವೇದಪುರಾಣ ಅರಸಿಕಾಣದ ನಾಮ |ಸಕಲಯೋಗಿ - ಜನಕೆ ಸೌಖ್ಯ ನಾಮ ||ಪ್ರಕಟಿಸಲು ಜಗವ ಪಾವನವ ಮಾಡಿದ ನಾಮ |ರುಕುಮಿಣೀಯರಸ ವಿಠಲ ನಿನ್ನ ನಾಮ 5ಭಕ್ತಿಯಲಿ ನೆನೆವರನು ಎತ್ತಿ ಸಲಹುವ ನಾಮ |ಮುಕ್ತಿ ಮಾರ್ಗಕೆ ಯೋಗ್ಯಹರಿ ನಿನ್ನ ನಾಮ |ಎತ್ತರಕೆ ಏರಿಪುದು ಸ್ವಾಮಿ ನಿನ್ನಯ ನಾಮ |ಚಿತ್ತಜನ ಪೆತ್ತ ಶ್ರೀ ಹರಿಯ ನಾಮ 6ವಾರಿಜಾನನೆ ತುಳಸಿಗೊಲಿದ ಹರಿನಾಮ ಕಾ - |ವೇರಿ ಮಧ್ಯದಲಿ ನೆಲಸಿದ ನಿನ್ನ ನಾಮ ||ಕ್ಷೀರಸಾಗರದಲ್ಲಿ ಶಯನವಾಗಿಹ ನಾಮ |ನಾರಾಯಣಾ ಕೃಷ್ಣಹರಿ ನಿನ್ನ ನಾಮ7ಹೊಂದಿದ್ದ ಭಕ್ತವೃಂದವ ಸಲಹಿದಾ ನಾಮ |ತಂದು ಅಮೃತವ ಸುರರಿಗೆರೆದ ನಾಮ ||ಅಂದಂಬರೀಷನನು ಕಾಯ್ದ ಶ್ರೀ ಹರಿನಾಮ |ತಂದೆ ಪುರಂದರವಿಠಲಹರಿ ನಿನ್ನ ನಾಮ8
--------------
ಪುರಂದರದಾಸರು
ಹರಿಯಲ್ಲಿ ಧನ್ಯರು ಪೊರೆಯರು ಸತ್ಯಸ್ಥಿರವೀ ಮಾತಿಗೆ ಸದ್ಭಕ್ತರು ಸಾಕ್ಷಿಯಿಹರು ಪಪುಣ್ಯಾತ್ಮ ಪ್ರಿಯ ವೃತ ಸಾಕ್ಷಿ ಜಗನ್ಮಾನ್ಯ ನಾರದ ದೇವ ಋಷಿ ಶ್ರೇಷ್ಠ ಸಾಕ್ಷಿಧನ್ಯ ಧೃವರಾಯನು ಸಾಕ್ಷಿ ಹರಿಯಪೂರ್ಣ ವ್ಯಾಪ್ತಿಯ ತೋರ್ದ ಪ್ರಲ್ಹಾದ ಸಾಕ್ಷಿ 1ದೊರೆ ಅಂಬರೀಷನು ಸಾಕ್ಷಿಹರಿಗುರುಭಕ್ತಿ ನಾಮಕೆ ದ್ರೌಪದಿ ಸಾಕ್ಷಿಸ್ಥಿರ ವಿಭೀಷಣ ರಾಜ ಸಾಕ್ಷಿ ತನ್ನಮರಣ ಕಾಲದಿ ನೆನೆದ ಅಜಮಿಳ ಸಾಕ್ಷಿ 2ದೊರೆ ಧರ್ಮ ದೇವರು ಸಾಕ್ಷಿ ಜಗದ್ಗುರುವಾದ ಮಹ ರುದ್ರದೇವರು ಸಾಕ್ಷಿಗರಳಕಾಳಿಂಗನು ಸಾಕ್ಷಿ ಪ್ರಾಣಾತುರದಿಹರಿಯ ಕರೆದ ಗಜರಾಜ ಸಾಕ್ಷಿ 3ಶಿಲೆಯಾದ ಅಹಲ್ಯೆಯ ಸಾಕ್ಷಿ ಗರ್ವವರ್ತಿಸಿದ ನಹುಷನೃಗರು ಸಾಕ್ಷಿಚೆಲುವೆ ಗಂಡಿಕಾ ವೇಶ್ಯ ಸಾಕ್ಷಿ ಭಕ್ತಿಗೊಲಿದುನಲಿದಜ್ಞಾನಿವಿದುರನು ಸಾಕ್ಷಿ 4ಮೊರೆ ಹೊಕ್ಕ ಸುಗ್ರೀವ ಸಾಕ್ಷಿ ಬಾಲ್ಯಪರಮಮಿತ್ರನಾದ ಕುಚೇಲ ಸಾಕ್ಷಿಶರಬಿಟ್ಟ ಭೃಗುವಾದ ಸಾಕ್ಷಿ ಶ್ರೇಷ್ಠಹರಿದಿನ ವೃತದ ರುಗ್ಮಾಂಗ ಸಾಕ್ಷಿ 5ಪುಂಡಲೀಕ ಋಷಿಸಾಕ್ಷಿ ಆ ಮೃಕಂಡಮುನಿಜ ಮಾರ್ಕಾಂಡೇಯ ಸಾಕ್ಷಿಪಂಡಿತಸಾಂದೀಪ ಸಾಕ್ಷಿ ಕುರುಪಾಂಡವರ ಪಿತಾಮಹ ಭೀಷ್ಮನು ಸಾಕ್ಷಿ 6ಪಿರಿದು ಕಷ್ಟದ ನಳ ಸಾಕ್ಷಿ ಕೃಷ್ಣಕರುಣಿಕೆ ಪಾತ್ರಪರೀಕ್ಷಿತಸಾಕ್ಷಿನಳಕೂಬರು ಸಾಕ್ಷಿ ಸತ್ಯದ್ಹರಿಶ್ಚಂದ್ರಾದಿ ಪುಣ್ಯ ಶ್ಲೋಕರು ಸಾಕ್ಷಿ 7ನಿದ್ದೆಯ ಮುಚುಕುಂದ ಸಾಕ್ಷಿ ಆತ್ಮಬದ್ಧಭಕ್ತಿಯಲರ್ಪಿಸಿದಬಲಿಸಾಕ್ಷಿಶುದ್ಧಜ್ಞಾನಿಶುಕಸಾಕ್ಷಿ ಹರಿಯಸದ್ಯದಣನಾದ ಬಲಭದ್ರ ಸಾಕ್ಷಿ 8ಅರ್ಕಾದಿ ಋಷಿಗಳು ಸಾಕ್ಷಿ ವಿಶ್ವಾಮಿತ್ರದಕ್ಷ ಪ್ರಜೇಶ್ವರೆಲ್ಲ ಸಾಕ್ಷಿಮಿತ್ರೆ ಕುಬ್ಜಾ ತ್ರಿಜಟಿ ಸಾಕ್ಷಿ ಮಹಾಮೈತ್ರೇಯ ಪರಾಶರ ಮುನಿಶರು ಸಾಕ್ಷಿ 9ಇಂದ್ರಾದಿದಿವಿಜರುಸಾಕ್ಷಿ ಕೃಷ್ಣನ್ಹೊಂದಿ ಸೇವಿಸಿದುದ್ಧವಕ್ರೂರ ಸಾಕ್ಷಿಸುಂದರ ಗೋಪಿಯರು ಸಾಕ್ಷಿ ಪಾಪಸಂದೋಹದ್ಯುದೃತ ವಾಲ್ಮೀಕಿ ಸಾಕ್ಷಿ 10ಸರ್ವಮುಕ್ತಜೀವರು ಸಾಕ್ಷಿಯಾ ದೇವರು ವಸುದೇವ ದೇವಕಿಯರು ಸಾಕ್ಷಿಹರಿದಾಸರೆಲ್ಲರು ಸಾಕ್ಷಿ ಫಲಸಿರಿವಿಠಲಗೆ ಕೊಟ್ಟ ಶಬರಿಯ ಸಾಕ್ಷಿ 11
--------------
ಸಿರಿವಿಠಲರು