ಒಟ್ಟು 34 ಕಡೆಗಳಲ್ಲಿ , 22 ದಾಸರು , 33 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಮರುಳಾದೆವ್ವ ಎಲೆ ಭಾರತೀ |ನೀನರಿಯೆ ಪವನನಿಂಥವನೆಂಬುದು ಪಕಲ್ಲು ಹೊರುವನು ಮತ್ತೆ ಯಾರಿಂದಲಾಗದವು |ಎಲ್ಲರಂತಲ್ಲ ಕಪಿರೂಪನೋಡು||ಖುಲ್ಲಫಲಪುಷ್ಪಯುಕ್ತ ವನವನು ಕೆಡಿಸಿದನು |ಎಲ್ಲಿಂದ ಒದಗಿದನೊ ಈ ಪತಿಯೊ ನಿನಗೆ1ರಕುತವಂ ಪಾನ ಮಾಡಿದನಂತೆ ಕೇಳಿದೆಯಾ |ರಕ್ಕಸೊಬ್ಬಳು ನಿನಗೆ ಸವತಿ ಇಹಳೂ ||ಮಕ್ಕಮಾರಿಮಗನುಂಟು ಗಂಡನು ಬದ |ನಕ್ಕೆ ಗತಿಯಿಲ್ಲದೆಲೆಭಿಕ್ಷೆಬೇಡುವನು 2ಹುಟ್ಟು ಬಡವವ ತಾನಾದರೇನಾಗಲಿ ನಿನ್ನ |ಬಿಟ್ಟು ತುರ್ಯಾಶ್ರಮವ ಧರಿಸಿಕೊಂಡು ||ದೃಷ್ಟಿಗೋಚರನಾಗದೇ ನರರಿಗೆ ಪ್ರಾಣೇಶವಿಠಲನ ಬಳಿಯಲ್ಲಿ ಬದರಿಯೊಳು ಸೇರಿಹನು 3
--------------
ಪ್ರಾಣೇಶದಾಸರು
ಮಗನೆಂದಾಡಿಸುವಳು | ಮೊಗ ನೋಡಿ ನಗುವಳು ಪಜಗದುದ್ಧಾರನ ಮೊಗ ಮೊಗದೊಳಿರಿಸಿಕೊಂಡು ಅ.ಪಕಾಲಲಂದುಗೆ ಗೆಜ್ಜೆ ತೋಳ ಮಣಿಯು ದಂಡೆಫಾಲದ ಅರಳೆಲೆಯು ಕುಣಿಯೆನೀಲದುಡುಗೆಯಿಟ್ಟ ಬಾಲನೆ ಬಾರೆಂದುಪಾಲುಣಿಸುವ ಪುಣ್ಯವೆಂತು ಪಡೆದಳಯ್ಯ 1ಬಣ್ಣದ ಸರಗಳಿಡೆ ರನ್ನದ ನೇವಳಹೊನ್ನ ಘಂಟೆಯು ಘಣ ಘಣರೆನಲುಪನ್ನಗಶಯನನೆ ಕುಣಿಯೊಮ್ಮೆ ಕುಣಿಯೆಂದುಕುಣಿಸಿ ನಗುವ ಪುಣ್ಯವೆಂತು ಪಡೆದಳಯ್ಯ 2ಕುಕ್ಷಿಯೊಳೀರೇಳು ಜಗವನು ಸಲಹುವರಕ್ಷಿಪರುಂಟೆ ತ್ರೈಜಗದೊಳಗೆಪಕ್ಷಿವಾಹನ ನೀನು ಅಂಜಬೇಡೆನುತಲಿರಕ್ಷೆಯಿಡುವ ಪುಣ್ಯವೆಂತು ಪಡೆದಳಯ್ಯ 3ಶಂಕ ಚಕ್ರಗದಾ ಪದುಮಧಾರಕನಪಂಕಜಮಿತ್ರಶತಕೋಟಿ ತೇಜನನುಸಂಖ್ಯೆಯಿಲ್ಲದ ಆಭರಣಗಳ ತೊಡಿಸಿ ಅಲಂಕರಿಸುವ ಪುಣ್ಯವೆಂತು ಪಡೆದಳಯ್ಯ 4ಸಾಗರಶಯನು ಭೋಗೀಶನ ಮೇಲೆಯೋಗನಿದ್ದೆಯೊಳಿಪ್ಪ ದೇವನನುಆಗಮನಿಗಮಗಳರಸ ಕಾಣದ ವಸ್ತುತೂಗಿ ಪಾಡುವ ಪುಣ್ಯವೆಂತು ಪಡೆದಳಯ್ಯ 5ಪನ್ನಗಶಯನ ಉನ್ನಂತ ಮಹಿಮನಸನ್ನುತಭಕುತರ ಸಲಹುವನಪನ್ನಗಾರಿವಾಹನದೇವರ ದೇವಚೆನ್ನಕೇಶವನ ಪಡೆದಳಯ್ಯಾ * 6
--------------
ಪುರಂದರದಾಸರು
ಹ್ಯಾಂಗೆ ಶೋಭಿಸುವ ನೋಡೆ ಯಾದವ ಕೃಷ್ಣಹ್ಯಾಂಗೆ ಶೋಭಿಸುವ ನೋಡೆ ಪಮಂಗಳ ಮಹಿಮ ಶ್ರೀರಂಗ ತನ್ನವರಿಗೆ ಅ.ಪಘಲುಘಲು ಘಲುರೆನ್ನುತ ಕಾಲ್ಗಡಗ ನೂ-ಪುರಗೆಜ್ಜೆ ಸರಪಣಿಯುಸರಿಗೆಳೆಯರ ಕೂಡಿ ಮುರಳಿಯ ಧರಿಸುತಹರುಷದಿಂದಲಿ ಸಪ್ತಸ್ವರಗಳ ನುಡಿಸುತ್ತ 1ಉಟ್ಟ ಪೀತಾಂಬರವು ನಡುವಿಗೆ ಜರದಪಟ್ಟೆಯ ಚಲ್ಲಣವುಗಟ್ಟಿ ಕಂಕಣ ಕೈಗಳಿಟ್ಟು ಕಟಿಯ ಮೇಲೆಭಕ್ತವತ್ಸಲ ಸ್ವಾಮಿ ಸೃಷ್ಟಿಪಾಲಕ ಕೃಷ್ಣ 2ಎಳೆ ತುಳಸಿಯ ಮಾಲೆಯು ಕಂಠದಿ ಮೆರೆವಪದಕಕೌಸ್ತುಭಮಣಿಯುನಳಿನಲೋಚನೆಯ ಉರದಲ್ಲಿ ಧರಿಸಿಕೊಂಡುಚಲುವ ಚನ್ನಿಗನಾಗಿ ಹೊಳೆಯುವ ದೇವನು 3ಕೋಟಿ ಸೂರ್ಯರ ಸೋಲಿಪ ಮುಖಕಾಂತಿಯಸಾಟಿಯಾರುಂಟವಗೆನೀಟಾಗಿ ಕರ್ನಕುಂಡಲ ಕಿರೀಟವು ಹೊಳೆಯೆಲಲಾಟದಿ ಕಸ್ತೂರಿ ತಿಲುಕವು ಹೊಳೆಯುತ್ತ 4ಕಂಗಳ ಕುಡಿನೋಟದಿ ಸಜ್ಜನರ ಪಾ-ಪಂಗಳ ಪರಿಹರಿಸಿಮಂಗಳ ಮಹಿಮ ಶ್ರೀರಂಗ ಮೂರುತಿ ಸಾಧುಸಂಗ ವಂದಿತಸಿರಿಕಮಲನಾಭ ವಿಠ್ಠಲ5
--------------
ನಿಡಗುರುಕಿ ಜೀವೂಬಾಯಿ