ಒಟ್ಟು 41 ಕಡೆಗಳಲ್ಲಿ , 17 ದಾಸರು , 35 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂಗಳಾರತಿಯ ಮಾಡಿರೊ ಶ್ರೀನಿವಾಸಗೆ ಪ.ಸಂಗಸುಖದ ಭಂಗವೆಲ್ಲಹಿಂಗಿತೆಂದು ಹೊಂಗಿ ಮನದಿ ಅ.ಪ.ಘಟ್ಟಿಹೃದಯ ತಟ್ಟೆಯಲ್ಲಿಕೆಟ್ಟ ವಿಷಯ ಬತ್ತಿ ಮಾಡಿಶ್ರೇಷ್ಠ ಜ್ಞಾನ ತೈಲವೆರೆದುವಿಷ್ಣುನಾಮ ಬೆಂಕಿ ಉರಿಸಿ 1ಶ್ರದ್ಧೆಯಿಂದ ಎತ್ತಿ ಮನದಬುದ್ಧಿಪ್ರಕಾಶಗಳು ತೋರಿಎದ್ದ ಕಾಮಕ್ರೋಧಗಳನುಅದ್ದಿ ಪಾಪಗೆದ್ದು ಮನದಿ 2ತತ್ತ್ವಪ್ರಕಾಶಗಳ ತೋರಿಚಿತ್ತಮಾಯಕತ್ತಲೆಯನುಕಿತ್ತುಹಾಕಿ ಹರಿಯಮೂರ್ತಿಸ್ವಸ್ಥ ಚಿತ್ತದಿಂದ ನೋಡಿ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಮಧ್ವರಾಯರ ನೆನೆದು ಶುದ್ಧರಾಗಿರೊ |ಹೊದ್ದಿ ವೈಷ್ಣವ ಮತಭವಾಬ್ಧಿದಾಟಿರೋಪಉದಯದಲಿ ಏಳುವಾಗ ನದಿಯ ಸ್ನಾನ ಮಾಡುವಾಗಒದಗಿನಿತ್ಯಕರ್ಮಗಳನು ನಡೆಸುವಾಗ ||ಹೃದಯದಲಿ ಬೀಜಾಕ್ಷರ ಮಂತ್ರಗಳನು ಜಪಿಸುವಾಗಸದಮಲಾನಂದ ಹನುಮನನ್ನು ನೆನೆಯಿರೊ 1ಕಾಮವಿಲ್ಲದ ಹರಿಯ ಪೂಜೆ ವೈಶ್ವದೇವ ಮಾಡುವಾಗಪ್ರೇಮದಿಂದ ವೈಷ್ಣವರು ಅರ್ಚಿಸುವಾಗ ||ಆ ಮಹಾ ಭಕ್ಷ್ಯಭೋಜ್ಯ ಆರೋಗಣೆ ಮಾಡುವಾಗನೇಮದಿಂದ ಕೌರವಾಂತಕ ಭೀಮಸೇನನ ನೆನೆಯಿರೊ 2ಕರಗಳನ್ನು ತೊಳೆದು ತೀರ್ಥ ತುಳಸೀದಳವ ಮೆಲ್ಲುವಾಗಪರಿಪರಿಯ ಪುಷ್ಪವೀಳ್ಯ ಅರ್ಪಿಸುವಾಗಸರುವಾಂತರ್ಯಾಮಿ ಗುರುಮಧ್ವರಂತರಾತ್ಮಕಪುರಂದರವಿಠಲಗೆ ಸಮರ್ಪಣೆ ಮಾಡಿರೊ3
--------------
ಪುರಂದರದಾಸರು
ವಿಜಯರಾಯರ ನೆನೆದು ದಿಗ್ವಿಜಯ ಮಾಡಿರೊಶ್ರವಣ ಮನನವು ನಿಧಿಧ್ಯಾಸನವು ಮಾಡುವಾಗಹರಿದಿನದಲಿ ಉತ್ಸಾಹಜಾಗರಮಾಡುವಾಗಅರಸುಗಳಿಂದ ಆದರಕೊಂಬುವಾಗದ್ವೈತಅದ್ವೈತಪ್ರಸಂಗಗಳ ಮಾಡುವಾಗನರಗಳನು? ವರಗಳನು ಕೊಡುವಾಗವಿ ಎಂದು ಜಪಿಸಲು ವಿರಕುತಿ ದೊರಕುವುದುಹರಿಯೆ ನಿರ್ದೋಷ ಜ್ಞಾನಾನಂದ ಪರಿಪೂರ್ಣ
--------------
ಗೋಪಾಲದಾಸರು
ಶ್ರೀ ಮಧ್ವರಾಯರ ಸೇವೆ ದೊರಕುವುದುಜನುಮ ಸಫಲ ಕಾಣಿರೋ ಪಶ್ರೀಮದಾನಂದ ತೀರ್ಥರ ಪಾದವ ನೆನೆವರುಸಾಮಾನ್ಯಸುರರುಕಾಣಿ-ಬೊಮ್ಮನಆಣಿಅ.ಪಜಗತು ಸತ್ಯವು ಅಲ್ಲ ಜಡ-ಜೀವ ಭೇದವಲ್ಲಅಗುಣನು ಪರಬೊಮ್ಮನು-||ಹೀಗೆ ನುಡಿವ ಜನರ ನಿಗಮಶಾಸ್ತ್ರದಿ ಗೆದ್ದುಜಗ ಸತ್ಯ ಸಗುಣ ಬ್ರಹ್ಮ ಎಂದು ಪೇಳುವ 1ಹರಿಸರ್ವೋತ್ತಮನಿತ್ಯತರುವಾಯ ರಮಾದೇವಿತರುವಾಯ ವಿಧಿಪ್ರಾಣರುಸರಸ್ವತಿಭಾರತಿಗರುಡ ಅನಂತ ರುದ್ರತರುವಾಯ ಆರು ದೇವಿಗಳು 2ಸೌಪರ್ಣಿವಾರುಣಿದೇವಿ ಅಪರ್ಣಾದೇವಿಯರು ಸಮರುದ್ವಿಪದಿ ಮನ್ವಾದಿಗಳು ||ಈಪರಿತಾರತಮ್ಯ ಜಪ-ಧ್ಯಾನಾರ್ಚನೆಯಿಂದಅಪವರ್ಗದನ ಸೇವೆಯ ಮಾಡಿರೊ ಎಂಬ 3ಒಂದೊಂದು ಯುಗದಲಿ ಅನಂತ ಸೇವೆಯ ಮಾಡಿಚೆಂದದಿಂದಲಿ ಲಾಲಿಸಿ ||ಇಂದಿರಾರಮಣ ಗೋವಿಂದನೇ ದೈವವೆಂದು |ಸಂದೇಹವಿಲ್ಲದೆ ಸಾಧಿಸಿ-ಮಾಯೀ ಸೋಲಿಸಿ 4ಹಿಮಗಿರಿಯಿಂದ ಸೇತುವೆಯ ಪರ್ಯಂತರಭ್ರಮಿಸುತ ಸುಜನರಿಗೆ ||ಕ್ರಮತತ್ತ್ವ ಬೋಧಿಸಿ ಕಮಲನಾಭನಮೂರ್ತಿಕ್ರಮವರಿತು ಸ್ಥಾಪಿಸಿ ಪೂಜಿಸಿರೆಂದ 5ಭೂತಳದೊಳು ರೌಪ್ಯಪುರದಿ ನೆಲಸಿ ಗೆದ್ದುಧಾತ್ರೀ ಮುದ್ರೆಯ ತೋರಿಸಿ ||ಈತನೇ ಹನುಮಂತ ಈತನೇ ಭೀಮಸೇನಈತನೇ ಭವಿಷ್ಯದ ಬ್ರಹ್ಮಜೀವೋತ್ತಮ6ಶ್ರೀಮದನಂತನೆ ಅನಂತಕಾಲಕೆಯೆಂದುಯಮಕ ಭಾರತ ತೋರಿಸಿಸ್ವಾಮಿ ಸರ್ವಾಂತರ್ಯಾಮಿ | ಸರ್ವಗುಣಪೂರ್ಣನೆಂದುಪ್ರೇಮಿಪುರಂದರವಿಠಲನ ದಾಸನಾದ7
--------------
ಪುರಂದರದಾಸರು
ಸಾರಿಗೆಯ ಮಾಡೋಣ ಸಜ್ಜನರು ಬನ್ನಿರೋನಾರಾಯಣನ ದಿವ್ಯನಾಮ ಭಾರಿ ಕೊಂಬ ಬನ್ನಿರೋ ಪ.ಹೃದಯವೆಂಬ ಚೀಲದೊಳಗೆ ಹರಿಯ ನಾಮ ಹೊನ್ನಹಾಕಿತುದಿ ನಾಲಿಗೆಯಿಂದ ತೆಗದು ವೆಚ್ಚವನ್ನು ಮಾಡಿರೊ 1ಙ್ಞÕನವೆಂಬ ಎತ್ತಿನಲ್ಲಿ ಕರುಣವೆಂಬ ಗೋಣಿಹಾಕಿದಾನ - ಧರ್ಮವೆಂಬ ದವಸ ಸರಕುಗಳ ತುಂಬಿರೊ 2ನೇಮ - ನಿತ್ಯವೆಂಬ ಗಟ್ಟಿ ನಡುವಿನಲ್ಲಿ ಬಿಗಿದು ಸುತ್ತಿಪ್ರೇಮವೆಂಬ ಚೊಕ್ಕ ಬುತ್ತಿ ಸೆರಗಿನಲ್ಲಿ ಕಟ್ಟಿರೋ 3ಕಾವಲಿಗರೈವರನ್ನು ಕಾಣದಂತೆ ಟಕ್ಕುದೋರಿಭಾವವೆಂಬ ಮಾರ್ಗದಲ್ಲಿ ಬೇಗ ಬೇಗ ಬನ್ನಿರೊ 4
--------------
ಪುರಂದರದಾಸರು