ಒಟ್ಟು 36 ಕಡೆಗಳಲ್ಲಿ , 20 ದಾಸರು , 36 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೇಶವನೊಲುಮೆಯು ಆಗುವ ತನಕ ಹರಿದಾಸರೊಳಿರು ಮನವೆಕ್ಲೇಶ ಪಾಶಗಳ ಹರಿದು ವಿಳಾಸದಿ ದಾಸರ ನುತಿಗಳ ಪೊಗಳುತ ಮನದೊಳು ಪ.ಮೋಸದಿ ಜೀವಿಯಘಾಸಿ ಮಾಡಿದ ಫಲಕಾಶಿಗೆ ಹೋದರೆ ಹೋದೀತೆದಾಸರ ಕರೆ ತಂದು ಕಾಸು ಕೊಟ್ಟ ಫಲ ಲೇಸಾಗದೆ ಸಸಿನಿದ್ದೀತೆಭಾಷೆಯ ಕೊಟ್ಟು (ನಿ) ರಾಸೆಯ ಮಾಡಿದಫಲ ಮೋಸವು ಮಾಡದೆ ಬಿಟ್ಟೀತೆಶಶಿವದನೆಯ ಅಧರಾಮೃತ ಸೇವಿಸಿ ಸುಧೆಯೆಂದಡೆ ನಿಜವಾದೀತೆ 1ಕನಕದ ಪಾತ್ರದ ಘನತೆಯ ಪ್ರಭೆಗಳು ಶುನಕನಮನಸಿಗೆ ಸೊಗಸೀತೆಹೀನ ಮನುಜನಿಗೆ ಜಾÕನವ ಭೋಧಿಸೆ ಹೀನ ವಿಷಯಗಳು ಹೋದಿತೇಮಾನಿನಿ ಮನಸು ನಿಧಾನವು ಇಲ್ಲದಿರೆಮಾನಭಿಮಾನ ಉಳಿದೀತೆಭಾನುವಿಕಾಸನ ಭಜನೆಯ ಮಾಡದ ದೀನಗೆ ಮುಕುತಿಯು ದೊರಕೀತೆ 2ಸತ್ಯದ ಧರ್ಮವ ನಿತ್ಯವು ಭೋಧಿಸೆ ತೊತ್ತಿನ ಮನಸಿಗೆ ಸೊಗಸೀತೆತತ್ವದ ಅರ್ಥ ವಿಚಿತ್ರದಿ ಪೇಳಲು ಕತ್ತೆಯ ಮನಸಿಗೆ ತಿಳಿದೀತೆಪುತ್ಥಳಿ ಬೊಂಬೆಯ ಚಿತ್ರದಿ ಬರೆದಿರೆ ಮುತ್ತುಕೊಟ್ಟರೆ ಮಾತಾಡೀತೆಕತ್ತುರಿ ತಿಲಕವನೊತ್ತಿ ಫಣೆಯೊಳಿಡೆ ಅರ್ತಿಯುತೋರದೆ ಇದ್ದೀತೆ 3ನ್ಯಾಯವ ಬಿಟ್ಟು ಅನ್ಯಾಯ ಪೇಳುವ ನಾಯಿಗೆ ನರಕವು ತಪ್ಪೀತೆತಾಯಿ ತಂದೆಗಳ ನೋಯಿಸಿದ ಅನ್ಯಾಯಿಗೆ ಮುಕ್ತಿಯು ದೊರಕೀತೆಬಾಯಿ ಕೊಬ್ಬಿನಿಂದ ಬೈಯುವ ಮನುಜಗೆ ಘಾಯವುಆಗದೆ ಬಿಟ್ಟೀತೆಮಾಯಾವಾದಗಳ ಕಲಿತಾ ಮನುಜಗೆ ಕಾಯಕಷ್ಟ ಬರದಿದ್ದೀತೆ 4ಸಾಧು ಸಜ್ಜನರನು ಬಾಧಿಸಿದಾ ಪರವಾದಿಗೆ ದೋಷವು ತಪ್ಪೀತೆಬಾಧಿಸಿ ಬಡವರ ಅರ್ಥವ ಒಯ್ವವಗೆ ವ್ಯಾಧಿ ರೋಗಗಳು ಬಿಟ್ಟೀತೆಬದ್ದ ಮನುಜ ಬಹು ಕ್ಷುದ್ರವ ಕಲಿತರೆಬುದ್ದಿ ಹೀನನೆಂಬುದು ಹೋದೀತೆಕದ್ದು ಒಡಲ ತಾ ಪೊರೆವನ ಮನೆಯೊಳಗೆಇದ್ದುದು ಹೋಗದೆ ಇದ್ದೀತೆ 5ಅಂಗದ ವಿಷಯಂಗಳನು ತೊರೆದಾತಗೆ ಅಂಗನೆಯರಬಗೆ ಸೊಗಸೀತೆಸಂಗ ಸುಖಂಗಳು ಹಿಂಗಿದ ಮನುಜಗೆ ಶೃಂಗಾರದ ಬಗೆ ಸೊಗಸೀತೆಇಂಗಿತವರಿಯುವ ಸಂಗ ಶರೀರ ವಜ್ರಾಂಗಿಯಾಗದೆ ಇದ್ದೀತೆಮಂಗಳ ಮಹಿಮನ ಅಂಘ್ರಿಯ ಕಾಣದ ಭಂಗಗೆ ಮುಕ್ತಿಯು ದೊರಕೀತೆ 6ಕರುಣಾಮೃತದಾ ಚರಣವ ಧರಿಸಿದ ಪರಮಗೆ ಸರಳಿ ಬಂದೀತೆಕರಣ ಪಾಶದುರವಣೆ ತೊರೆವಾತಗೆ ಶರಣರ ಪದ್ಧತಿ ತಪ್ಪೀತೆಆರುಶಾಸ್ತ್ರವನು ಮೀರಿದ ಯೋಗಿಗೆತಾರಕ ಬ್ರಹ್ಮವು ತಪ್ಪೀತೆವರದ ಪುರಂದರವಿಠಲನ ಚರಣಸ್ಮರಿಸುವವನಿಗೆ ಸುಖ ತಪ್ಪೀತೆ * 7
--------------
ಪುರಂದರದಾಸರು
ಗಣೇಶ ಪ್ರಾರ್ಥನೆವಂದಿಪೆ ನಾ ನಿನ್ನನು ಸೊಂಡಿಲ ಗಣಪ ಧಬಂದೆನ್ನ ಸಲಹೊ ನೀನು ಪಪುಂಡರೀಕಾಕ್ಷನುದ್ದಂಡ ಪರಾಕ್ರಮಕೊಂಡಾಡಿಸುವಿ ವಕ್ರತುಂಡನೆಂಬರೊ ನಿನ್ನ ಅಪಪಾಶಾಂಕುಶಧರನೇ ವೂೀದಕಹಸ್ತಭಾಷಿಗ ನೀನಹುದೋಆಶಾಪಾಶಗಳಿಂದ ಘಾಸಿಗೊಂಡಿಹ ಮನಬೇಸರ ಕಳೆದೆಮ್ಮ ಪೋಷಿಪನನು ತೋರೊ 1ಗೌರಿಯ ವರಪುತ್ರನೆ ಪ್ರಾರ್ಥಿಸುವೆ ಶ್ರೀ-ಶೌರಿಯಪಾದಸ್ಮರಣೆಗೌರವದಿಂ ಮಾಳ್ಪ ಶೌರ್ಯ ಎನಗೆ ಕೊಟ್ಟುಮಾರಪಿತನಪಾದತೋರಿಸು ತವಕದಿ2ಅಂತರಂಗದ ಶತ್ರುಗಳಿಂದಲಿ ಮನಚಿಂತೆಗೆ ಗುರಿಗೈಸಿತೊಎಂತು ಈಭವದಾಂಟುವಂಥ ಪಥವ ಕಾಣೆಕಂತÀುಪಿತನಪಾದಚಿಂತನೆ ಕೊಡಿಸಯ್ಯ3ವಾನರನಿಕರದೊಳು ಶ್ರೇಷ್ಠನ ಪ್ರಭುವಾರಿಧಿಯನು ಬಂಧಿಸೆಆದಿಮೂರುತಿ ನಿನ್ನ ಆರಾಧಿಸಿದನೆಂಬಸೋಜಿಗಸುದ್ದಿಯು ಮೂರ್ಜಗದೊಳಗುಂಟು4ಕಮಲನಾಭವಿಠ್ಠಲ ಭಕ್ತರ ಹೃದಯಕಮಲದೊಳಗೆ ಶೋಭಿಪಮಿನುಗುವ ಮಧ್ವಮಂಟಪದೊಳು ರಾಜಿಪಸನಕಾದಿವಂದ್ಯನ ಕ್ಷಣ ಬಿಡದಲೆ ತೋರು 5
--------------
ನಿಡಗುರುಕಿ ಜೀವೂಬಾಯಿ
ನಿನ್ನ ನೋಡಿ ಧನ್ಯನಾದೆನೊ ಶ್ರೀಕೃಷ್ಣ ದಯದಿಮನ್ನಿಸಯ್ಯ ಮರೆಯ ಹೊಕ್ಕೆನು ಪಅನ್ನಪಾನದಿಂದ ಬೆಳೆದ ತನುವು ಸ್ಥಿರವಿದೆಂದು ನಂಬಿಮುನ್ನ ಮತಿಹೀನನಾಗಿ ನಿನ್ನ ಸ್ಮರಣೆ ಮರೆತೆ ಅ.ಪಮಾಯ ಪಾಶದಲಿ ಸಿಲುಕಿದೆಯನ್ನನಗಲಿ ಅಳಿದ ತಾಯಿತಂದೆಯರಿಗೆ ಮರುಗಿದೇ ಪ್ರಿಯಮಡದಿ ಪರಸ್ತ್ರೀಯರಲಿ ಮೋಹವೆರಸಿಮರುಳನಾದೆಕಾಯಸುಖವನೆಣಿಸಿಸರ್ವೇ ನ್ಯಾಯ ತಪ್ಪಿ ನಡೆದೆ ಕೃಷ್ಣಾ 1ಹಲವು ಜನ್ಮವೆತ್ತಿ ತೊಳಲಿದೇ ತರಳನೆನಿಸಿಹಲವು ಜಾತಿ ಮೊಲೆಯ ಭುಜಿಸಿದೆಹಲವು ದೇಶಗಳನು ಸುತ್ತಿ ಹಲವುಕ್ರೂರಕೃತ್ಯ ಗೈದೆ ತಲೆಯ ಹಿಂದೆಇರುವ ಮೃತ್ಯು ನೆಲೆಯನರಿಯದಿರ್ದೆ ಕೃಷ್ಣಾ 2ಆಶಾಪಾಶಗಳಲಿ ಸರ್ವ ದೋಷ ಮೋಸವೆಣಿಸದಾದೆಲೇಸ ಕಾಣೆ ಮುಂದೆ ಯಮನ ಪಾಶಕರ್ಹನಾದೆ ಕೃಷ್ಣಾ3ಅರಿಗಳಾರು ಮಂದಿ ದೇಹದಿ ನೆಲಸಿರ್ದು ಎನ್ನಮರುಳುಗೊಳಿಸೆ ಇಂದ್ರಿಯ ಸಹಾಯದಿನರವು ಮಾಂಸ ಅಸ್ಥಿಯಿಂದ ವಿರಚಿಸಿದ ದೇಹವಿದನುಪರಿಪರಿಯ ಶೃಂಗರಿಸುತ ಸ್ಮರನ ತೆರದಿ ಮೆರೆದೆ ಕೃಷ್ಣಾ 4ಒಂದು ದಿನವು ಸುಖವ ಕಾಣೆನೂ ಈ ಜೀವನಸಂಬಂಧಿಗಳ್ಯಾರೆಂಬುದನರಿಯೆನೂಬಂಧು ನೀನೇ ಸರ್ವಪ್ರದನು ಮುಂದೆ ಜನುಮವೆತ್ತದಂತೆಬಂದು ಎನ್ನ ಸಲಹೋ ಗೋವಿಂದದಾಸನೊಡೆಯ ಕೃಷ್ಣಾ 5
--------------
ಗೋವಿಂದದಾಸ
ನಿನ್ನ ನೋಡಿ ಧನ್ಯನಾದೆನೋ ಓ ಲಕ್ಷ್ಮೀರಮಣಾಮನ್ನಿಸೆನ್ನ ಮರೆಯ ಹೊಕ್ಕೆನೊ ಪನ್ನಗೇಂದ್ರಶಯನ ನಿನ್ನಪಾದನಂಬಿದೆನ್ನ ಮನ್ನಿಸದೆಮರೆವರೇನೋ ಘನ್ನ ಓ ಶ್ರೀ ಕೃಷ್ಣಮೂರ್ತಿ ಪಲಾಲಿಸೆನ್ನ ಮಾತನೊಂದನೂಶ್ರೀಕೃಷ್ಣಮೂರ್ತಿ ಪಾಲಿಸೆನ್ನಪ್ರೀತಿಯಿಂದಿನ್ನೂ ಬಾಲಬುದ್ಧಿಯಿಂದ ಗೈದಹಾಳುಕೃತ್ಯವನ್ನು ಮರೆತು ಕಾಲನೊಶಕೆಕೊಡಿಸದೆನ್ನ ಪಾಲಿಸಯ್ಯ ಲಕ್ಷ್ಮೀರಮಣ 1ಒಡೆಯ ನೀನೆಂದೆಂಬುದರಿಯದೆಓ ಲಕ್ಷ್ಮೀರಮಣ ಮಡುವಧುಮುಕಿದಾನೆಯಂತಾದೆಒಡಲ ಸುಖವೆ ಬಯಸಿಗೈವಪಿಡಿದ ಮಡದಿ ಮಕ್ಕಳೆಂಬಕಡು ಮಮತೆಯಿಂದ ನಿನ್ನಅಡಿಯ ಭಜಿಸದಾದೆ ಕೃಷ್ಣಾ 2ಮೋಸಹೋದೆನಿನಿತು ತಿಳಿಯದೇ ಶ್ರೀಕೃಷ್ಣಮೂರ್ತಿಗಾಸಿಯಾದೆ ಮಾಯಾಕೊಳಗಾದೆಆಸೆ ಪಾಶಗಳಲಿ ಸಿಕ್ಕಿ ಈಸು ಸುಖವನಿನಿತು ಕಾಣೆಕೇಶವಾ ಗೋವಿಂದ ನಿನ್ನದಾಸನೆನಿಸೆ ಲಕ್ಷ್ಮೀರಮಣ 3
--------------
ಗೋವಿಂದದಾಸ
ಮುಕ್ತಿ ಬೇರಿಲ್ಲಯ್ಯ ಸಾಯುಜ್ಯಮುಕ್ತಿ ಬೇರಿಲ್ಲವೋಮುಕ್ತಿ ಬೇರಿಲ್ಲ ಭಕ್ತಾ ಭಕ್ತ ವಿರಕ್ತರಪಾದನೆನೆಹು ಎಂಬುದು ನಿಜಪನಿತ್ಯನಿರ್ಗುಣಧಾರನ ನಿರಾಲಂಬಪ್ರತ್ಯಯ ಮಂಗಳಕಾರನಸತ್ಯಸಂಪದನಿಂದ ಸುಗುಣಾದಿವರ್ಧಿಪನಿತ್ಯಾನಂದರ ನೆನಹು ಎಂಬುದು ನಿಜ1ಆಶಾಪಾಶಗಳಳಿದುದುಅಹಂಎಂಬವಾಸನೆಯ ಕಳೆದು ದೋಷರಹಿತವಾದದಾಸರ ದಾಸನೆಂದೆನಿಪ ಸುದಾಸನೆಂಬುವನೆ ನಿಜ2ತರಣಿಕಿರಣಾಬ್ಧಿಯ ತಾಳಿರುವಂಥಗುರುಚಿದಾನಂದ ಮೂರ್ತಿಯಸಿರಿಚರಣವ ಕಂಡು ಶೀಘ್ರದಿ ಪೂಜಿಸೆಗುರುತಾನದನೆ ಗುಣನೆನೆವುದೆ ನಿಜ3
--------------
ಚಿದಾನಂದ ಅವಧೂತರು
ಯೋಗಿಯ ನೋಡಿರೋ ಸದ್ಗುರು ಯೋಗಿಯ ನೋಡಿರೋಯೋಗಿಚಿದಾನಂದಾವಧೂತ ಗುರುದೊರೆಯ ಸದ್ಗುಣ ಚರಿತನಪಆಶಾಪಾಶಗಳೆಂಬುವನೆಲ್ಲವಜರಿದುವಾಸನೆತರಿದುದೋಷದುರ್ಗ ಜನನಾದಿಗಳನು ಬಳಿದು ಸಂಶಯ ತುಳಿದುಕ್ಲೇಶಪಂಚಕ ಕಾಮಕ್ರೋಧವ ಕಡಿದು ಮುಂದಕೆ ನಡೆದುಭಾಸುರತೇಜದಿ ತೋರುವ ಪ್ರಭೆಯನುಕೂಡುವ ತಲೆಯೊಲಿದಾಡುವ1ಬಲಿದಾಧಾರವ ಕುಂಭಕದಿಂದಲಿ ಬಲಿಸಿ ವಾಯುವ ನಿಲಿಸಿನೆಲೆಯನೆ ಹತ್ತಿ ಆ ನೆಲೆಯನೆ ನಿಲುಕುತ ಮತ್ತಾನೆಲೆಯ ಹೊಲಬಲಿ ತೋರುವಭಾಸ್ಕರಕೋಟಿಯ ಮೀರಿಕಳೆಗಳ ತೋರಿ ಥಳಥಳ ಥಳಿಸಿಯೆ ಮೆರೆವಾ ಆತ್ಮನ ನೋಡುವ ಸಂತಸಪಡುವ2ಆರು ಚಕ್ರಗಳಲಿ ತೋರುವ ದಳಗಳನರಿದು ಅದರೊಳು ಬೆರೆತುಭೋರಿಡುತಿಹ ದಶನಾದದ ಬೊಬ್ಬೆಯಕೇಳಿಹರುಷವ ತಾಳಿ ಚಾತುರದಿ ಮೆರೆಯುತಲಿಹ ಜ್ಯೋತಿಯಸಾರಸೇವಿಪ ಶೂರಧಿರ ಚಿದಾನಂದಾವಧೂತಾತ್ಮ ಗುರುವಾ ಎನ್ನನು ಪೊರೆವಾ3
--------------
ಚಿದಾನಂದ ಅವಧೂತರು