ಒಟ್ಟು 122 ಕಡೆಗಳಲ್ಲಿ , 52 ದಾಸರು , 111 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಲಸಾಗರ ಸಂಭೂತೆ ಕೈವಲ್ಯದಾತೆ ಪಾಲಿಸೆನ್ನನು ನಿಜಮಾತೆ ಪ ಆಲಿಸು ನಿನ್ನಯ ಬಾಲನ ನುಡಿ ಈ ಕಾಲದಿ ಮನ್ಮನ ಆಲಯದೊಳು ನಿಂದು ಅ.ಪ ನಿತ್ಯ ನಿರ್ಮಲೆ ಈ ಮಹಾಮಹಿಮ ವಿಶಾಲೆ ಕಾಮನ ಜನನಿ ಸುಲೀಲೆ ಜಲಜಸುಮಾಲೇ ತಾಮರಸಾಂಬಕೆ ಸಾಮಜಭವ ಸು - ತ್ರಾಮ ಪ್ರಮುಖ ಸುರಸ್ತೋಮ ನಮಿತಗುಣ - ಪಾದ ಯಾಮ ಯಾಮಕೆ ನಿತ್ಯ ನೇಮದಿ ಭಜಿಪೆ ಶ್ರೀರಾಮನ ತೋರೆ 1 ವೇದಾಭಿಮಾನಿ ಅಂಬ್ರಾಣಿ ಸುಗಣಸನ್ಮಣಿ ವೇದವತಿಯೆ ರುಕ್ಮಿಣಿ ವೇದವಂದ್ಯಳೆ ಗುಣಪೂರ್ಣೇ ನಿತ್ಯಕಲ್ಯಾಣಿ ಖೇದಗೊಳಿಸುವ ಭವೋದಧಿ ದಾಟಿಸಿ ಮೋದ ಕೊಡುವ ಪಂಚಭೇದಮತಿಯನಿತ್ತು ಯಾದವಗುಣವನುವಾದ ಮಾಡಿಸಿ ನಿತ್ಯ ಮೋದಬಡಿಸು ಶ್ರೀ ಮಾಧವರಾಣಿ 2 ಜಾತರೂಪಾಭಾಶುಭಗಾತ್ರಿ ಈ ಜಗಕೆ ಧಾತ್ರಿ ಸೀತೆ ನೀನೆ ಲೋಕಪವಿತ್ರೆ ಧಾತಾಪ್ರಮುಖಸುರಸ್ತೋತ್ರೇ ನೀರಜನೇತ್ರೆ ವೀತಭಯಳೆ ತ್ರಿನೇತ್ರೇ ಪಾತಕವನಕುಲವಿತಿಹೋತ್ರ ಸುರ - ವಿನುತ ಸುಖವ್ರಾತ ಕೊಡುವ ನಮ್ಮ ದಾತ ಗುರುಜಗನ್ನಾಥವಿಠಲಗೆ ನೀ ನೀತಸತಿಯೆ ಎನ್ನ ಮಾತೆ ವಿಖ್ಯಾತೆ3
--------------
ಗುರುಜಗನ್ನಾಥದಾಸರು
ಪಾಲಿಸು ಶ್ರೀಶನೆ ಪರಮ ಪವಿತ್ರನೆ ಪಾವನ್ನ ಚರಿತನೆ ಪಾಲಿಸೆನ್ನ ಪ ಕಾಲಕಾಲಕೆ ನಿನ್ನ ಮಹಿಮೆಯ ತೋರಿಸಲಹುದು ಸರ್ವವ್ಯಾಪಕ ಮಾಯಾದೇವಿಯರಮಣ ಶ್ರೀಪತೆ ಕಾಯೊ ಶ್ರೀಹರಿವಾಸುದೇವನೆಅ.ಪ ವಾಸುದೇವನೆ ನಿನ್ನ ಸೋಸಿಲಿ ಭಜಿಪರ ಕ್ಲೇಶಗಳ್ಹರಿಸಿ ಸಂತೋಷವಿತ್ತು ದೋಷದೂರನ ನಾಮ ಆಸೆಯಿಂದ ಭಜಿಪರಸಂಗವನೂ ನೀಡೆನುತ ಬಿನ್ನೈಸುವೆನೂ ಎನ್ನೊಡೆಯ ನೀನೆಂದೆನುತ ಅಡಿಗಳಿಗೆರಗುವೆನೂ ಧೃಡಭಕುತಿ ನಿನ್ನೊಳಗಿರಿಸಿ ರಕ್ಷಿಪುದೆಂದು ಬೇಡುವೆನೂ ನುಡಿನುಡಿಗೆ ನಿನ್ನಯ ನುಡಿಗಳನು ನುಡಿವಂಥ ಭಕ್ತರ ಅಡಿಗಳಾಶ್ರಯ ಕೊಟ್ಟು ಕಾಯ್ವುದು ಬಡವನೆನ್ನಲಿ ಬೇಡ ಎನ್ನನು ಬಡವರಾಧಾರಿ ಶ್ರೀಹರಿ 1 ಶಂಖು ಚಕ್ರವು ಪದ್ಮಗದೆಯು ಹೊಳೆಹೊಳೆಯುತ್ತ ಬಿಂಕದಿಂದಲಿ ನಿಂತು ನೋಡುತಲಿ ಮಂಕುಮತಿಗಳನ್ನು ಶಂಕೆಯೊಳಗೆ ತಳ್ಳಿನೋಡುತ್ತ ನಿನ್ನಯ ಸದ್ಭಕ್ತರ ಶಂಕೆಗಳೆಲ್ಲವನು ಕ್ಷಿಪ್ರದಿ ಕಳೆಯುತ್ತ ಶ್ರೀಹರಿ ನಿನ್ನ ಪಾದ ಪಂಕಜಗಳೆ ಚಿಂತಿಸುವರಿಗೆ ಹರುಷ ನೀಡುತ್ತ ವೈರಿ ನಿನ್ನಯ ವಿಧವಿಧದ ಲೀಲೆಗಳ ತೋರುತ್ತ ಉದಯ ಭಾಸ್ಕರನಂತೆ ಪೊಳೆಯುತ್ತ ಮುದದಿ ಸಿರದಿ ಕಿರೀಟ ಹೊಳೆಯುತ್ತ ಸದಮಲಾತ್ಮಕ ಸತ್ಯಮೂರುತಿ2 ಹೃದ್ಗೋಚರನಾಗು ಪದ್ಮಾನಾಭ ಉದ್ಧರಿಸೆನ್ನನು ಉದ್ಧವಸಖನೆಂದು ನಂಬಿರುವೆ ಮನ್ಮನದ ಭಯಗಳವದ್ದು ಬಿಸುಡುತ ಸಲಹೊ ನರಹರಿಯೆ ಮಮಸ್ವಾಮಿ ನಿನ್ನಯ ಪದ್ಮ- ಪಾದಕೆ ನಮಿಪೆ ಶ್ರೀಹರಿಯೆ ಮೋಹಕ ಬಂಧವ ಬಿಡಿಸಿರಕ್ಷಿಸುತೆನ್ನ ಸಲಹು ಮಾಯಾಪತಿಯೆ ಬಹು ವಿಧದಿ ಪ್ರಾರ್ಥಿಪೆ ತೋಯಜಾಕ್ಷನೆ ತೋರು ನಿನ್ನಯ ಚಾರು ಚರಣಕೆ ಬಾಗಿ ನಮಿಸುವೆ ಕಾಯ್ವುದೆನ್ನನು ಕಮಲನಾಭವಿಠ್ಠಲನೆ ಶ್ರೀಹರಿ ವಾಸುದೇವನೆ 3
--------------
ನಿಡಗುರುಕಿ ಜೀವೂಬಾಯಿ
ಪಾಲಿಸೆನ್ನ ಗೋಪಾಲ ಕೃಷ್ಣ ಪ ಪಾಲಿಸೆನ್ನ ದಧಿಪಾಲ ಮುಖರ ಗೋ ಪಾಲಬಾಲ ಕೃಪಾಲಯ ಹರಿಯೇ ಅ.ಪ. ಭವ ರುಂಡಮಾಲ ಮೇ ಷಾಂಡ ಪ್ರಮುಖ ಸುರಷಂಡ ಮಂಡಿತನೆ 1 ಗೋಪಿ ಗೋಪಾಲ ವೃಷ್ಣಿಕುಲ ದೀಪ ಶ್ರೀಪಶಿವಚಾಪ ಭಂಜನಾ 2 ಅಂಡಜಾಧಿಪ ಪ್ರಕಾಂಡ ಪೀಠ ಕೋ ದಂಡಪಾಣಿ ಬ್ರಹ್ಮಾಂಡ ನಾಯಕ 3 ವ್ಯಾಪ್ತ ಗೋಪ್ತ ಜಗದಾಪ್ತ ದೋಷ ನಿ ರ್ಲಿಪ್ತ ಪ್ರಾಪ್ತಗತಸುಪ್ತ ಸುಷುಪ್ತಾ 4 ವೇದವೇದ್ಯ ಬ್ರಹ್ಮಾದಿವಂದ್ಯ ಸುಖ ಬೋಧಪೂರ್ಣ ಬ್ರಹ್ಮೋದನ ಭೋಕ್ತಾ 5 ಅಧ್ವರೇಶ ಲೊಕೋದ್ಧಾರÀ ಪಾಣಿ ಸ ರಿದ್ವರ ಪಿತಗುರು ಮಧ್ವವಲ್ಲಭಾ6 ಪೋತ ವೇಷದರ ಪೊತನಾರಿ ಪುರು ಹೂತ ಮದಹ ಜಗನ್ನಾಥ ವಿಠ್ಠಲ 7
--------------
ಜಗನ್ನಾಥದಾಸರು
ಪಾಲಿಸೆನ್ನ ಚನ್ನ ಕೇಶವಾ ನಿನ್ನ ಬಾಲನೆಂದೆಣೆಸೋ ಮಾಧವಾ ಪ ಲೋಲ ಲೋಚನ ತಂದೆ ಶೀಲ ನಂಬಿದೆ ಬಂದೆ ಅ.ಪ. ದೂರ್ವಾಪುರ ನೆಲೆವಾಸಿಯೇ ತಂದೆ ಸರ್ವಾಭೀಷ್ಟ ಫಲದಾತನೇ ಪರ್ವಾ ಸಪ್ತದಿ ನಿನ್ನ ಭಜಿಸೇ ಸ್ಮರಿಸುವೆನು 1 ನಂದನಂದನ ಗೋವಿಂದನೇ ತಂದೆ ಬಂಧವ ನೀಗುವ ಶಕ್ತಿಯ ಮಂದರಧರದಯ ತೋರೆಂದು ನೆನೆಯುವೆ 2 ಭಕ್ತರ ಪೊರೆ ನೀ ದಾತನೇ ತಂದೆ ಮುಕ್ತಿ ಸ್ವಾತಂತ್ರ್ಯವ ನೀಡೆಲೋ ಶಕ್ತಿ ಸ್ವರಾಜ್ಯಕ್ಕೆ ಮಾತೃ ಸೇವೆಗೆ 3
--------------
ಕರ್ಕಿ ಕೇಶವದಾಸ
ಪಾಲಿಸೆನ್ನ ಪಂಕಜಾಕ್ಷ ಪತಿತಪಾವನ ನೀಲಮೇಘಶ್ಯಾಮ ರಮಾಲೋಲ ಜಗನ್ಮೋಹನಾ ಪ ಭವವಿದಾರ ಭಯವಿದೂರ ಭಾರ್ಗವೀವರ ಭವ ಸುರೇಶವಂದಿತಾಂಘ್ರಿಯುಗಳ ಶ್ರೀಧರ 1 ನಿನ್ನನೇ ಮರೆಹೊಕ್ಕೆ ನಾನನ್ಯಭಾವದೆ ಪನ್ನಗಾದ್ರಿನಿಲಯ ಸಲಹು ಸಾನುರಾಗದೆ ಪಾಲೆಸೆನ್ನ 2
--------------
ನಂಜನಗೂಡು ತಿರುಮಲಾಂಬಾ
ಪಾಲಿಸೆನ್ನ ಪದುಮಾ ರಮಾಮಣಿದೇವಿ ಪ ನಾರದನುತಗೀತೆ ಸಮಿಜಗನ್ಮಾತೆ ಅ.ಪ ಅಂಬುಜವಾಸಿನಿ ಅಂಬುಜೋದರ ರಾಣಿ ಅಂಬುಜಾಸನ ಜನನಿ ಸಂಭ್ರಮದ ಕಣಿ 1 ಅಕಳಂಕ ಮಾತೆ ಸಕಲ ಪ್ರತಾಪೆ ನಿಖಿಲಾತ್ಮಭರಿತೆ ಜಾಜೀ ಪಟ್ಟಣವಾಸೇ 2
--------------
ಶಾಮಶರ್ಮರು
ಪಾಲಿಸೆನ್ನ ಪಾರ್ವತಿ ರನ್ನಾ ಪ ಪಾರ್ವತಿ ಪರ್ವತ ರಾಜಕುಮಾರಿಯೆ ಘನ್ನ ಅ.ಪ. ಸತಿ ಸುಮ್ಮನೆ-ದೊಳಗಿದ್ದು ಪರಿಪಾಲಿಸೆ ಬೊಮ್ಮನ ಸೊಸಿಯೆ 1 ಸತಿ ಅಂಬಕೇಶನ ಜನನಿ ಜಗದಂಬೆ ಭವಾನಿಯೆ 2 ಪಾದ ಸತಿ 3
--------------
ತಂದೆವರದಗೋಪಾಲವಿಠಲರು
ಪಾಲಿಸೆನ್ನ ಪಾರ್ವತೀಶ ಫಾಲಲೋಚನ ಲಾಲಿಸೆನ್ನ ನುತಿಯ ದೇವ ಕಾಲಕಂಧರ ಪ ಪುಲ್ಲನಯನ ಚಲ್ವವದನ ಮಲ್ಲಿಕಾರ್ಚಿತ ಬಿಲ್ವ ಪಲ್ಲವಾದಿಪ್ರಿಯನೆ ಶೈಲಜಾಪತೆ 1 ವಿನುತ ಪಂಕಜಪ್ರಿಯ ಸಂಕಟಾದ್ರಿ ದೇವರಾಜ ಲೋಕಪಾಲಕ 2 ಪಾಹಿ ಪಾಹಿ ಕಾಲಕಾಲ ಮೋಹನಾಶಕ ಸ್ನೇಹದಿಂದಲೆನ್ನ ಬಿಡದೆ ವಾಮದೇವನೆ 3 ಧಾನವಾಂತಕಾದಿ ಹೃದಯ ಜೀವ ರೂಪನೆ ಕಮಲ ಭಾನುರೂಪನೆ 4
--------------
ಬೇಟೆರಾಯ ದೀಕ್ಷಿತರು
ಪಾಲಿಸೆನ್ನ ಪಾಲನಶೀಲೆ ಪಾಲಿತ ಸುರನರಜಾಲ ಸುಶೀಲೆ ಪ ಕ್ಷೀರಶರಧಿ ಸುಕುಮಾರಿಣಿ ಲಕ್ಷ್ಮೀ ವಾರಿಜಮುಖಿ ಸಿತವಾರಿರುಹಾಕ್ಷಿ 1 ಅಂಬೆ ಭುವನಕುಟುಂಬೆ ರಮಾಂಬೆ ನಂಬಿ ಭಜಿಸುವದು ಡಾಂಬಿಕಮೆಂಬೆ 2 ಯುಕ್ತಿಯು ಶಕ್ತಿ ವಿರಕ್ತಿಗಳಿಲ್ಲ ಉಕ್ತಿ ಮಾತ್ರದಿಂದ ಭಕ್ತಿಕೊಡೆಲ್ಲ 3 ಜಯಕರುಣಾಲಯೆ ಜಯಮಣಿವಲಯೆ ಜಯನಿಸ್ತುಲಯೆ ಜಡಮತಿಗೊಲಿಯೆ 4 ಧರೆಯೊಳುತ್ತಮ ಪುಲಿಗಿರಿಯೊಳಿರುವನೆ ಶರಣರ ಪೊರೆಯುವ ವರದವಿಠಲನ [ರಾಣಿಯೆ] 5
--------------
ವೆಂಕಟವರದಾರ್ಯರು
ಪಾಲಿಸೆನ್ನ ಪಾಲಿಸೋ ಎನ್ನಾ ಪ ಪಾಲಿಸೆನ್ನ ಗುರು ಫಾಲನಯನಾಸುರಪಾಲನ ಪಿತ ಶ್ರೀ ಪಾರ್ವತಿರಮಣಅ.ಪ. ಲಿಂಗವೇರಿ ಸುರರಂಗದಿ ಚರಿಸುವ ಶಿರಿರಂಗನ ಪದ ಪವನನ ಭೃಂಗಾ 1 ಕವಿ ವಿನುತ ಪರರಾಳಿಯ ಪ್ರಿಯಬಾಲಾ 2 ನವಿಲನೇರಿ ಬರುತಿಪ್ಪನ ಪಿತತಂದೆವರದಗೋಪಾಲವಿಠಲನ ಆಪ್ತಾ 3
--------------
ತಂದೆವರದಗೋಪಾಲವಿಠಲರು
ಪಾಲಿಸೆನ್ನ ಪಾವ9ತೀಶನೆ | ಮಹಾನುಭಾವ | ನೀಲಕಂಠ ರುಂಡಮಾಲನೆ ಪ ಪಾಲಿಸೆನ್ನ ಭವದೊಳಿಂದು | ಬಾಲಚಂದ್ರಧರನೆ ಬಂದು | ಕಾಲಕಾಲ ದುರಿತಜಾಲ | ಮೂಲನಾಶಗೈದುವೊಲಿದು ಅ.ಪ. ಅಂತರಾತ್ಮನಖಿಲ ಪೋಷಣ | ಕಪಾಲಧರ ದು-| ರಂತ ಮಹಿಮ ತ್ರಿಗುಣ ಕಾರಣ || ಸಂತಸುಜನ ಚಿಂತಿತಾಥ9 | ಭವಾಬ್ಧಿ ಪೋತ | ಅಂತಕಾಂತನಖಿಲ ಭುವನ | ಕ್ರಾಂತಾನಂತ ಮಹಿಮ ದೇವ 1 ಭುಜಗಾಭರಣ ಅಜಸುರಾಚಿ9ತ | ತ್ರಿಶೂಲಧಾರ| ಸುಜನ ಬಂಧು ಮುಕ್ತಿದಾಯಕ || ತ್ರಿಜಗದೀಶ ತ್ರಿಪುರನಾಶ | ರಜತಶೈಲವಾಸ ಭಕ್ತ | ನಿಜಮನೋರಥಾಬ್ಧಿ ಚಂದ್ರ | ಭಜಿಸುವೆ ಚರಣಾರವಿಂದ 2 ಆದಿಮಧ್ಯಾಂತರಾತ್ಮನೆ | ಜಗನ್ನಿವಾಸ | ವೇದವೇದ್ಯ ಸುಜನಸೇವ್ಯನೆ || ಆದಿಮಾಯೆಯಾದಿಮೂಲ | ಆದಿಪುರುಷ ಶ್ರೀನಿವಾಸ | ಸಾದರದೊಳೆನ್ನ ಕಾಯ್ದು | ಮೋದದಿಂದ ಸಲಹೊ ದೇವ 3
--------------
ಸದಾನಂದರು
ಪಾಲಿಸೆನ್ನ ಪಾವನ ಮೂರ್ತಿಯೇ ಪ ಸತ್ಯಜ್ಞಾನಾನಂದತೀರ್ಥ ನಿನ್ನಯ ಉತ್ತಮ ಹಸ್ತವನಿಟ್ಟು ಅಭಯಾ ಭಕ್ತಗೆ ಅಂಕಿತವಿತ್ತು ಕಾಯೋ ಕರುಣಾನಿಧಿಯೇ 1 ಆನಂದತೀರ್ಥರ ಗ್ರಂಥಶ್ರವಣ ನೀನೆ ಮಾಡಿಸೆನ್ನೊಳಿಟ್ಟು ಕರುಣಾ ಮಾನಾಭಿಮಾನವು ನಿನ್ನ ಈ ದಾಸನಾ 2 ತಡವ್ಯಾಕೆ ತ್ವರಾ ಪಡೆಯೋ ಹನುಮೇಶವಿಠಲ ಪ್ರಿಯ ಕುವರಾ 3
--------------
ಹನುಮೇಶವಿಠಲ
ಪಾಲಿಸೆನ್ನ ಫಾಲಲೋಚನಾ ನಂದೀಶವಾಹನಾ ಪ ಸದನ ಅ.ಪ ನಾಗಭೂಷಣ ದನುಜಹರಣ ದಿವಿಜಶರಣ ಭೂತಗಣ ಭೋಗಿಶಯನ ಸಿರಿಯ ರಮಣ ವಿಮಲಚರಣ ಸೇವೆಯಿತ್ತು 1 ಮದನವೈರಿ ದುರಿತಹಾರಿ ಶಶಿಜಟಾಜೂಟಧಾರಿ ಮ ಮ ದೇವ ಮಾಂಗಿರಿರಂಗ ಚರಣಯುಗವ ತೋರಿ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪಾಲಿಸೆನ್ನ ಮಾತೆ ಕರುಣದಿ ಪಾಲಾಂಬುಧಿ ಜಾತೆ ಪ ಕಾಲಕಾಲಕೆ ಕಮಲಾಲಯೆ ಗೋಪಿಯ ಬಾಲನಾಳುಗಳ ಊಳಿಗವಿತ್ತು ಅ.ಪ ಜಾನಕಿಶುಭಗಾತ್ರೆ ನಮಿಸುವೆ | ಮಾನಿತೆ ಚರಿತ್ರೆ ಸಾನುರಾಗದಿ ತವ ಸೂನುವೆನಿಪ ಪವ ಮಾನಸುಶಾಸ್ತ್ರದ ಜ್ಞಾನವಿತ್ತು ಸದಾ 1 ಶಂಭು ದೃಹಿಣಿ ವಿನುತೆ ತ್ರೈಜಗ ದಂಬೆ ಸುಗುಣ ಭರಿತೆ | ಕುಂಭಿಣಿ ಸುತೆ ದುರ್ಗಾಂಭ್ರಣಿ ಮಮಹೃದ ಯಾಂಬುಜದೊಳಿಹ ಬಿಂಬನ ತೋರಿ 2 ಪ್ರೇಮದಿಂದ ನೋಡೆ ಮನ್ಮನ | ಧಾಮದಿ ನಲಿದಾಡಿ | ಕಾಮಿನಿಮಣೀ ಗಜಗಾಮಿನಿ ಗೋಮಿನಿ ಶಾಮಸುಂದರನ ವಾಮಾಂಗಿಯೆ ಸದಾ 3
--------------
ಶಾಮಸುಂದರ ವಿಠಲ
ಪಾಲಿಸೆನ್ನ ಲೋಲಲೋಚನ ಬಾಲಗೋಪಾಲ ಪ ಶೌರಿ ಶ್ರೀವನಮಾಲಿ ಶ್ರೀಲೋಲ ಅ.ಪ ಪಾದ ನಿನ್ನ ಭಾವನ | ಸಂಜೀವನ ಪತಿತರಾ ಪೊರೆವೆ 1 ಸತತ ನಿನ್ನ ಚರಣದಿ ಬೇಡುವೆ ಹಿತದೊಳೆರಗುವೆ ಮಾಂಗಿರೀಶ ಕಲುಷನಾಶ ರಂಗ ಸುಪ್ರಕಾಶ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್