ಒಟ್ಟು 33 ಕಡೆಗಳಲ್ಲಿ , 16 ದಾಸರು , 32 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಗೋವಿಂದ ಭಜನಾವಳಿಶ್ರೀ ನಾರಾಯಣ ಜಯಗೋವಿಂದಸದ್ಗುರು ಸಿಂಧೋ ಜಯಗೋವಿಂದವೈಕುಂಠಾಲಯ ಜಯಗೋವಿಂದಆಶ್ರಿತಬಂಥೋ ಜಯಗೋವಿಂದಲಕ್ಷ್ಮೀನಾಯಕ ಜಯಗೋವಿಂದದೋಷವಿದೂರ ಜಯಗೋವಿಂದಬ್ರಹ್ಮೇಶಾರ್ಚಿತ ಜಯಗೋವಿಂದಮತ್ಸ್ಯಶರೀರ ಜಯಗೋವಿಂದಕಚ್ಛಪರೂಪೀ ಜಯಗೋವಿಂzಮ್ಲೇಂಛಕುಠಾರಜಯಗೋವಿಂದಆದಿವರಾಹ ಜಯಗೋವಿಂದಶ್ರೀ ನರಸಿಂಹ ಜಯಗೋವಿಂದವೇದಸುವೇದ್ಯ ಜಯಗೋವಿಂದವಾಮನರೂಪೀ ಜಯಗೋವಿಂದವೆಂಕಟನಾಥ ಜಯಗೋವಿಂದಭಾರ್ಗವರಾಮಾ ಜಯಗೋವಿಂದವೃದ್ಧಿವಿನೋದ ಜಯಗೋವಿಂದರಾವಣ ಶತ್ರು ಜಯಗೋವಿಂದಸಪ್ತಗಿರೀಶ ಜಯಗೋವಿಂದರಾಕ್ಷಸ ಶತ್ರು ಜಯಗೋವಿಂದಅದ್ಭುತಚರ್ಯ ಜಯಗೋವಿಂದಗೋಕುಲಚಂದ್ರ ಜಯಗೋವಿಂದನಾರದಗೇಯಾ ಜಯಗೋವಿಂದಸೀತೆಸಹಾಯ ಜಯಗೋವಿಂದಮಾರುತಿಸೇವ್ಯಜಯಗೋವಿಂದಬುದ್ಧಶರೀರ ಜಯಗೋವಿಂದ(ಕಲ್ಕ್ಯಾವತಾರ) ಜಯಗೋವಿಂದಕೇಶವವಿಷ್ಣೋ ಕೃಷ್ಣಮುಕುಂದವಾರಿಜನಾಭಶ್ರೀಧರರೂಪತಾಕ್ಷ್ರ್ಯತುರಂಗಶ್ರೀದಶುಭಾಂಗಸಜ್ಜನ ಸಂಗೇ ಚಂಚಲಪಾಂಗದುರ್ಜನ ಭಂಗಂ ಸಜ್ಜನ ಸಂಗಂದೇಹಿಸದಾಮೇ ದೇವವರೇಣ್ಯಪಾಪವಿನಾಶಂ ಪುಣ್ಯಸಮೃದ್ಧಿಂಕಾಯವಿರಕ್ತಿ ಕರ್ಮಸುರಕ್ತಿಂಪಾದಯುಗೇತೇ ಪಾವನದಾಸ್ಯಂನಿರ್ಮಲ ಭಕ್ತಿಂ ನಿಶ್ಚಲಬುದ್ಧಿಂನಿಸ್ತುಲಸೇವಾಂ ದೇಹಿ ಸದಾಮೇದೇವನಮಸ್ತೇಪ್ರಸ್ತುತಿ ದಿವ್ಯಂ ಸ್ವೀಕುರು ತಂದೆ
--------------
ತಂದೆ ಮುದ್ದುಮೋಹನ ವಿಠಲರು
ಶ್ರೀ ಪ್ರಸನ್ನ ಶ್ರೀನಿವಾಸ ಕಲ್ಯಾಣ (ಅಣು)34ಮೇರು ಸುತ ಗಿರಿವಾಸ |ಶರಣಾದೆ ನಿನ್ನಲಿ ವಿಶ್ವಜನ್ಮಾದಿಕರ್ತನಿರ್ದೋಷ|||ಶ್ರೀ ಶ್ರೀನಿವಾಸ ||ವಿಷ್ಣು ಸರ್ವೋತ್ತಮ ಸಾಕ್ಷಾತ್ |ರಮಾದೇವಿ ತದಂತರಾ |ತದಧೌವಿಧಿವಾಣ್ಯೌಚ ತತ್ವವನು ಪ್ರತ್ಯಕ್ಷ ಭೃಗುಗೆ |ತಿಳಿಸಿ ಲಕ್ಷ್ಮಿಯ ಇಳೆಯ ಜನರಿಗೆ ಒಲಿಯೆ ಕಳುಹಿಸಿ |ವ್ಯಾಳಗಿರಿವಲ್ಮೀಕಪೊಕ್ಕಿ ಶ್ರೀವತ್ಸಶರಣು |ಶರಣು ಹೇ ಸರ್ವ ಹೃದ್ಗುಹಾಂತಸ್ಥವಿಶ್ವ ಪವೃಷಭಅಂಜನಶೇಷ|ವೇಂಕಟಾದ್ರಿಯ ನೆನೆಯೆ ಪಾಪವಿನಾಶ |ಶ್ರೀಸ್ವಾಮಿತೀರ್ಥದ ದಕ್ಷಪಾಶ್ರ್ವಪರೇಶ ||| ಶ್ರೀ ಶೇಷಾಚಲೇಶ ||ಅರ್ಚಿಪರ ಸಂರಕ್ಷಿಪುದು ನಿನ್ನಪಣವು ಆದುದರಿಂದ ಗೋಪಾನ |ಆಸಿಯತಲೆಯಲಿ ತಡೆದು ಗೋವನು ಕಾಯ್ದ _ಕರುಣಿಯೆ ಭಕ್ತವತ್ಸಲ |ತುಚ್ಛಗೋಪನು ಭಯದಿ ಅಸುಬಿಡೆಚೋಳರಾಯಗೆ ಶಾಪವಿತ್ತು |ಅಚ್ಚುತನೆ ನೀದೇವ ಗುರುವಿನ ಸೇವೆಕೊಂಡು ನಿನ್ನರೂಪ |ಸ್ವಚ್ಛಚಿನ್ಮಯ ಭೂವರಾಹನ ಸಹವಿನೋದ ಲೀಲೆಮಾಡಿ |ಪ್ರೋಚ್ಚನಂದದಿ ಕ್ಷೇತ್ರ ಸಹಬಕುಳಾ ಯಶೋದೆಯ -ಪಾಕಕಾಗಿ ಸ್ವೀಕರಿಸಿ ಹೇ ದಯಾನಿಧೇ ನಿತ್ಯತೃಪ್ತ 1ಅಸಮ ಸತ್ಯವಾಗೀಶ |ಜಗನ್ಮಾತೆಯೆಂದು ಪೇಳಿದಂತೆ ಆಕಾಶ |ಕಂಡಪದ್ಮದಿ ಪದುಮ ಸುಮುಖವಿಲಾಸ |ಶಿಶುವಕೊಂಡಳು ಧರಣಿ ಬಹು ಸಂತೋಷ ||| ದಿಂದ ವಿಹಿತ ಆಶ ||ಧರಣಿದೇವಿ ಆಕಾಶರಾಜನ ಸುತೆಪದ್ಮಾವತಿಯೆಂಬ ನಾಮದಿ |ಪುರಿಯ ಹೊರಗೆ ಪುಷ್ಪವನದಲಿ ಸಖಿಯರೊಡನೆ ಆಡುವಾಗ |ನಾರದನು ಬಹು ವೃದ್ಧರೂಪದಿ ಬಂದು -ಹಸ್ತರೇಖೆ ನೋಡುತ |ಶ್ರೀರಮಾಲಕ್ಷಣವ ಕಾಣುತ ಬ್ರಹ್ಮದೇವನ ತಾಯಿ ಅಂಗಿಯು |ಮಾರಜನಕನೆ ಪತಿಯು ಎಂದು ಪೇಳಿತೆರಳೆ ಶಿರಿಯ ಸ್ಮರಿಸುತ |ಏರಿ ಕುದುರೆಯ ವನದಿ ಪದ್ಮಾವತಿ ಸಂಗಡ -ಆಟವಾಡಿದಿ ಹೇ ದಯಾನಿಧೇ ಶ್ರೀಶಸ್ವರಮಣ 2ಧರಣಿಯೊಡನೆ ಸಂವಾದ |ಮಾಡೆ ಬಕುಳಾ ಪೋಗೆ ನೀನು ಪುಳಿಂದ |ವಿಧಿವತ್ಸರುದ್ರನು ದಂಡ ಗುಲ್ಮಬ್ರಹ್ಮಾಂಡ |ಹಾರ ಗುಂಜಾಕಂಬುವೇಷದಿ ಪೋದಿಯೋ ಮುದದಿಂದ ||| ಕಣಿಪೇಳ್ವ ಚೆಂದ ||ಧರಣಿಪದ್ಮಗೆ ಕಣಿಯಪೇಳಿ ಮದುವೆ ನಿಶ್ಚಯಮಾಡಿ ಬಂದೆಯೋ |ಭರದಿಶುಕಆಕಾಶರಾಜ ಲಗ್ನಪತ್ರವಕೊಡಲು ಬ್ರಹ್ಮ-ಗರುಡಶೇಷಶಿವಾದಿಸುರ ಮುನಿಜನರ ಬಕುಳಾ ಲಕ್ಷ್ಮೀಸಹ ನೀ |ಪೊರಟುಮಾರ್ಗದಿ ಶುಕಮುನಿಯ ನೈವೇದ್ಯ ಉಂಡು ಜನರತೃಪ್ತಿಸಿ |ಸೇರಿಪುರಿಯ ಅಜರ ಮಂದಿರ ಪೋಲ್ವ -ಮನೆಯಲಿ ಪದ್ಮಾವತಿಗೆ ಮಾಂಗಲ್ಯ ಧರಿಸಿದಿ |ಸರಸಿಜಾಸನತಾತಪ್ರಸನ್ನ ಶ್ರೀನಿವಾಸನೆವಿಶ್ವಪಾಲಕ ಹೇ ದಯಾನಿಧೇ ಶರಣು -ಶರಣು ಹೇ ಸೌಭಾಗ್ಯದಾತಾ ಪ. 3||ಶ್ರೀ ಪ್ರಸನ್ನ ಅಣು ಶ್ರೀನಿವಾಸ ಕಲ್ಯಾಣ ಸಂಪೂರ್ಣ||
--------------
ಪ್ರಸನ್ನ ಶ್ರೀನಿವಾಸದಾಸರು