ಕೈಯ ಮುಗಿವೆ ಗುರುರಾಯ ಶರಣು ಜಗ-
ದಯ್ಯನೆ ಬಾಹುಲೇಯ ಪ.
ಒಯ್ಯನೆ ಬಿನ್ನಪ ಗೈಯುವೆ ಕರುಣಾಳು
ಧೈರ್ಯ ಸಾಹಸ ಗುಣಧುರ್ಯನೆ ಜಯ ಜಯಅ.ಪ.
ವ್ಯರ್ಥ ಜನ್ಮವಾಯಿತು ಹರಿಯ ಸ್ಮರಣೆ
ಉತ್ತಮೋತ್ತಮ ಗುಣವ ಪಾಲಿಸು
ಭಕ್ತವತ್ಸಲ ಭಯನಿವಾರಣ
ಸತ್ಯಮಾರ್ಗದಿ ನಡೆಸು ಶಂಕರ-
ಪುತ್ರ ಪುಣ್ಯಚರಿತ್ರಭರ್ತನೆ 1
ತಾಮಸಗುಣಗಳು ಪರಿಹರಿಸು ನಿ-
ಸ್ಸೀಮ ಮಹಿಮನೆ ನೀನು
ಶ್ರೀ ಮನೋರಮನಿಷ್ಠೆ ಸಜ್ಜನ-
ಸ್ತೋಮಸಂಗವನಿತ್ತು ದುರ್ಜನ-
ಸೀಮೆಯೊಳು ಪೊಕ್ಕಿಸದಿರೆನ್ನ ಸು-
ಧಾ ಮಯೂಖಾಸ್ಯನೆ ಮಹೇಶನೆ 2
ಭೂಮಿಗಧಿಕವೆನಿಪ ಪಾವಂಜಾಖ್ಯ
ಗ್ರಾಮಾಧಿಪತಿ ನಿಷ್ಪಾಪ
ಯೋಗಿ ಲ-
ಲಾಮ ಲಕ್ಷ್ಮೀನಾರಾಯಣನ ಮ-
ಹಾಮಹಿಮೆಯನು ಪೊಗಳಿ ಹಿಗ್ಗುವ
ಕೋಮಲಾಂಗ ಸುಮಂಗಲಪ್ರದ 3