ಒಟ್ಟು 47 ಕಡೆಗಳಲ್ಲಿ , 24 ದಾಸರು , 34 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ಮಗನ ಮುದ್ದು ನೀನೆ ಲಾಲಿಸಮ್ಮಚಿನ್ನನೆಂದಾಡಿಸಮ್ಮಬಣ್ಣದ ಬಾಲೇರ ಭೋಗಿಪ ಚದುರತೆಸಣ್ಣವರ ಸರಸೇನಮ್ಮ ಪ.ತಾಳಬೇಕೆಷ್ಟೆಂದು ಗಾಡಿಕಾರನ ಮಾತಹೇಳಲಂಜುವೆವಮ್ಮ ನಮ್ಮಾಳುವ ಇನಿಯರ ವೇಡಿಸಿ ನಮ್ಮ ಲಜ್ಜೆಹಾಳುಮಾಡಿ ಹೋದನೆ 1ಕೃಷ್ಣ ಸಿಕ್ಕಿದನೆಂದು ನಮ್ಮ ಮಕ್ಕಳ ನಾವೆದಟ್ಟಿಸಿ ಕೊಲುವೆವಮ್ಮ ಈದೃಷ್ಟಿ ಮಾಯದಜಾಲನೋಡೆ ನಂದನರಾಣಿಸೃಷ್ಟೀಶರಿಗೆ ತೀರದು 2ಕನ್ನೆಯರೊಗ್ಗೂಡಿ ಕಳ್ಳನ ಕೈಕಟ್ಟಿನಿನ್ನೆಡೆಗೆ ತರುತಿದ್ದೆವೆಕಣ್ಣಿಯ ಕೊರಳಿನ ಕರುವೆಂದು ಜನವಾಡೆಖಿನ್ನರಾಗಿ ಹೋದೆವೆ 3ಆವಾವ ಕೇರೀಲಿಜಾರಚೋರನ ಮಾತುಆವಾವ ಮನೆಗಳಲ್ಲಿಭಾವೆಯರೆಳೆ ಮೊಲೆ ಮೂಗ ಚಿವುಟಿ ಜಾವಜಾವಕಂಜಿಸಿಕೊಂಬನೆ 4ನಾವು ಮಾಡಿದ ಸುಕೃತವೆಂತೊ ಗೋಪಾಲರೇಯಭಾವಕೆ ಮೆಚ್ಚಿದನೆದೇವರ ದೇವ ಪ್ರಸನ್ವೆಂಕಟೇಶಜೀವಕೆ ಹೊಣೆಯಾದನೆ 5
--------------
ಪ್ರಸನ್ನವೆಂಕಟದಾಸರು
ಪಾಪೋಸು ಹೋದುವಲ್ಲ - ಸ್ವಾಮಿ ಎನ್ನ -ಪಾಪೋಸು ಹೋದುವಲ್ಲ................... ಪ.ಅಪಾರ ಜನುಮದಿ ಆರ್ಚನೆಯ ಮಾಡಿದ ..........ಅಪಉರಗಾದ್ರಿಯಲಿ ಸ್ವಾಮಿ ಪುಷ್ಕರಣಿ ಮೊದಲಾದ |ಪರಿಪರಿ ತೀರ್ಥ ಸ್ನಾನಗಳ ಮಾಡೆ ||ಹರಿದಾಸರ ಕೊಡಿ ಶ್ರೀನಿವಾಸನ ಸಂ -ದರುಶನದಲ್ಲಿ ಮೈಮರೆದಿದ್ದೆನೊ ಎನ್ನ 1ಪರಮ ಭಾಗವತರು ಹರಿಕಥೆ ಪೇಳಲು |ಪರಮ ಭಕುತಿಯಲಿ ಕೇಳುತಿದ್ದೆ ||ಪರಮ ಪಾಪಿಷ್ಠರ ಪಾಲಿಗೆ ಪೋದವು |ಪರಮಾತ್ಮನ ಮನಸಿಗೆ ಬಂತು ಹೀಗೆ ............. 2ಮಾಯೆ ಒಲಿದು ಎನಗೆ ತಂದು ಕೊಟ್ಟದ್ದಳು |ದಾಯಾದಿಗಳು ನೋಡಿ ಸಹಿಸಲಿಲ್ಲ ||ಮಾಯಾ ರಮಣ ನೋಡಿ ಪುರಂದರವಿಠಲಮಾಯೆಯಿಂದ ಮಟ್ಟಮಾಯವಾದವು ಈಗ 3
--------------
ಪುರಂದರದಾಸರು
ಭಕ್ತವತ್ಸಲನೆಂಬ ಚಿಹ್ನೆ ನಿನಗೆಯುಕ್ತವಲ್ಲದೆ ಆರಿಗೊಪ್ಪುವುದು ಕೃಷ್ಣ ಪ.ಎಲ್ಲ ಜಗದ ತಂದೆ ನಿನ್ನ ಮಗ ಆ ನಂದನೊಲ್ಲಭೆಯ ಕಂದನಾದಚೆಲ್ಲುವೆ ಅರಸಿ ನಿನ್ನಂಗನೆ ಲಕುಮವ್ವಗೊಲ್ಲತೇರಿಗೆಂತು ಸೋತಿದ್ದೆ ಸ್ವಾಮಿ 1ಮಂದಿ ರಾಜಾಂಡಕೋಟಿಗೆ ಗುರುವರ್ಯ ನೀನುಸಾಂದೀಪನi್ಞ್ಯಳಿಗವ ಮಾಡ್ದೆಮಂದಜಾಸನಆ ವಾಯು ನಿನ್ನ ಓಲೈಸುತಿರೆಕಂದನೆನಿಸಿದೆ ಯಶೋದಾದೇವಿಗೆ ಸ್ವಾಮಿ 2ಮೂರು ಚಾವಡಿ ಪಾರುಪತ್ಯದ ಪ್ರಭುವೆ ನೀನೇರಿದೆ ನರನ ಬಂಡಿಯನುದ್ವಾರಕೆಯ ಅರಸೆ ನೀ ಚೀರಿದರೋಡಿ ಬಂದುಆ ರಮಣಿಯಮಾನಉಳಿಸಿದೆ ಸ್ವಾಮಿ3ಮುಕ್ತದ್ರುಹಿಣರಿಂದಸೇವ್ಯನೀ ಧರ್ಮನಮಖದೊಳೆಂಜಲ ಪತ್ರ ತೆಗೆದೆಪ್ರಕಟಿತನಿತ್ಯಮಹಾತೃಪ್ತ ನೀ ವಿದುರನಕಕುಲತೆಯ ಔತಣಗೊಂಡು ಮುದಿಸಿದೆ ಸ್ವಾಮಿ 4ಹಲವು ಶ್ರ್ರುತಿಗಳಿಗೆ ನೀ ನಿಲುಕದೆ ನೆನೆದವಗೆಸುಲಭದಿ ಪೊರೆವ ಉದಾರಿಬಲದ ಮ್ಯಾಲೊಲಿಯುವ ದೊರೆಯಲ್ಲ ಭಕ್ತರಛಲರಕ್ಷ ಪ್ರಸನ್ನವೆಂಕಟ ಜಗದಧ್ಯಕ್ಷ ಸ್ವಾಮಿ 5
--------------
ಪ್ರಸನ್ನವೆಂಕಟದಾಸರು
ಹೇಳಬಾರದೆ ಬುದ್ಧಿಯ - ಮಗನ ಊರ-|ಗೂಳಿಯ ಮಾಡಿದೆನೆ ? ಪಮೇಳದಿ ಓರಗೆಯವರ ಕೂಡಿಕೊಂಡು |ಹಾಳು ಮಾಡುತಾನೆ ಗೋವಳಗೇರಿಯ ಅ.ಪಅಟ್ಟದ ಮೇಲಿಟ್ಟಹ - ಚೆಟ್ಟಿಗೆ ಹಾಲು |ಬಟ್ಟನಿಕ್ಕಿ ಚೀಪುವ ||ದುಷ್ಟತನವ ಮಾಡಬೇಡ ಅಯ್ಯಾ ಎನೆ |ಕಷ್ಟವೇನೆಂಬೆ ಮುದ್ದಿಟ್ಟು ಓಡಿ ಪೋದ 1ಮೊಸರ ಮಥಿಸುತಿರಲು - ಬಂದು ಕುಳಿತ |ಹಸುಗೂಸು ಎನುತಿದ್ದೆನೆ ||ಕುಸುಮನಾಭನು ತನ್ನ ವಶವಾಗು ಎನುತಲಿ |ವಸನೆತೆಗೆದು ಮೊಲೆ ಪಿಡಿದು ಹೋದ ಮೇಲೆ 2ಬೆಣ್ಣೆಯ ಕಂಡರಂತೂ - ಅದರರೂಪ |ಕಣ್ಣಿಗೆ ತೋರನಲೆ ||ಸಣ್ಣವನೆಂದು ಬಗೆದು ನಾ ಕರೆದರೆ |ಬಣ್ಣದ ಮಾತಾಡಿ ಬಾ ಎಂದು ಕರೆವನು 3ಉಡುವ ಸೀರೆಯ ಕಳೆದು - ತಡಿಯಲಿಟ್ಟು |ಮಡುವಿನೊಳ್ ಮೈದೊಳೆಯೆ ||ದಡದಡ ಬಂದೊಯ್ದು ಕಡಹದ ಮರವೇರಿ |ಕೊಡು ಕೃಷ್ಣ ಎನುತಿರೆ ಪಿಡಿ ಜೋಡು ಕೈಯೆಂಬ 4ಎಷ್ಟು ಹೇಳಲಿ ನಿನಗೆ - ಯಶೋದೆ ಒಂ-|ದಿಷ್ಟು ಕರುಣವಿಲ್ಲವೆ |ಸೃಷ್ಟಿಗೊಡೆಯ ನಮ್ಮಪುರಂದರವಿಠಲ-------------------------- 5
--------------
ಪುರಂದರದಾಸರು