ಒಟ್ಟು 43 ಕಡೆಗಳಲ್ಲಿ , 22 ದಾಸರು , 37 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಮೀರಜ ಹನುಮ ಎನ್ನ ಪ್ರಾಣಾಪದಕಾ ಪ ಶಿರಿಚರಣದಲಿ ಮಸ್ತಕವನಿಟ್ಟ ಹೊಂತಕಾರಿ ಸುರಪನಂದನನ ಕೊಲ್ಲಿಸಿದ ನಿರುತ ಉದಾರಿ ಪರಮ ನಿನ್ನಂಘ್ರಿಯವಾರಿ ಸತತ ಶಿರದಲಿ ಧರಿಸುವೆನು ರಿಪುನಿಕರ ಮಾರೀ1 ಉಂಗುರುವ ಕೊಂಡು ಸರ್ರನೆ ಸಾಗರ ಹಾರಿ ತುಂಗ ಮಹಿಮಳಿಗೆ ವಂದಿಸಿ ಗುರುತನೆ ತೋರಿ ಸಂಗಡಲೆ ಯಿತ್ತು ನಂದನ ಕಿತ್ತೆ ಬಲು ಮೀರಿ ಸಂಗರಕೆ ಬಂದ ವಿಕಾರಿಗಳ ನೋಡಿ ಭಂಗಬಡಿಸಿದೆ ಅವರ ಬಲವೆಲ್ಲ ತೂರಿ 2 ನಭಚರರು ಕೊಂಡಾಡೆ ಪುರವೆಲ್ಲ ದಹಿಸಿದೆ ಅಭಿವಂದಿಸಿ ಕುರುಹವರಿಯನ ಮುಂದುವರಿಸಿದೆ ಅಬುಧಿಯನು ವೇಗ ಬಂಧಿಸಿದೆ ಪರ್ವತವ ರಭಸ ಮಿಗೆ ತಂದು ಕಪಿಬಲವನೆಬ್ಬಿಸದೆ 3 ದಾತನಿಗೆ ರಥವಾಗಿ ಚಲ್ಲಿರಿದು ಬೊಬ್ಬಿರಿದೆ ಭೂತಳಕೆ ನೆಗ್ಗೊತ್ತಿ ಎದುರಾದವರ ತರಿದೆ ನೀ ತಡೆಯದೆ ಪೋಗಿ ಮೈರಾವಣನ ಮುರಿದೆ ಕೋತಿಗಳೊಳಗೆ ನೀ ಮೆರೆದೆ ವೇದ ವಿಖ್ಯಾತನೆ ರಾಮ ಸಹಭೋಜದಲಿ ನೆರೆದೆ 4 ಬಲವನು ಬೆಳಿಸಿ ವಾರಿಧಿಯ ಆಚೆಗೆ ಬಲವ ಆಲಸÀಗೈಸದಲೆ ದಾಟಿಸಿದೆ ಬಲು ಛಲವಾ ವಾಲಯದಲಿ ಮಾಡಿ ವೈರಿದಳವನು ಗೆಲುವಾ ಕಾಳಗದೊಳು ನಿನ್ನ ಬಲವ ಕೊಂಡಾಡಿದವರು ಮೂಲೋಕದೊಳಗೆ ಸವಿಯದು ಬಲು ಚೆಲುವಾ 5 ಶತಮೌಳಿಯನು ಕೊಲಿಸಿ ಸತ್ಕೀರ್ತಿಯನು ಪಡೆದೆ ಪ್ರತಿಕಕ್ಷಿ ನಿನಗಿಲ್ಲವೆಂದು ಸತ್ಯವ ನುಡಿದೆ ಸತತದಲಿ ಕಾಪಾಡು ಎನುತ ಪಾದವ ಪಿಡಿದೆ ಮತಿಯಲಿಡು ಎಂದು ಬೇಡಿದೆ ಅಭಯವ ಚತುರ ಫಲದಾಯಕನೆ ದಯಮಾಡು ಬಿಡದೆ 6 ಕಿಂಪುರುಷ ಖಂಡದಲಿ ನಿಜಮೂರುತಿಯ ಧ್ಯಾನ ಇಂಪಾಗಿ ಮಾಡುವ ಅಂಜನೆಯನಂದನಾ ಲಂಪಟವೆ ಸಾಕು ನಿನ್ನಯ ಸುರದ್ರುಮ ಚರಣ ಸಂಪಿನಲಿ ಪೊಂದಿಸನುದಿನ ಎನ್ನ ಗುರುಸಂಪತ್ತು ವಿಜಯವಿಠ್ಠಲನಲ್ಲಿ ಪ್ರಾಣಾ7
--------------
ವಿಜಯದಾಸ
ಹರಿಯೆನ್ನ ನರಜನ್ಮ ವ್ಯರ್ಥವಾಯ್ತು ಪರಮ ಭಕ್ತಿಯೊಳಿನ್ನು ಭಜಿಸುವೆನು ಕಾಯೋ ಪ ತೊಡೆಯ ಮೇಲಾಡುತಿಹ ಶಿಶುವಿನಾನುಡಿ ಕೇಳಿ ಕಡು ಮೂರ್ಖತನದಿಂದ ಭ್ರಮೆಗೊಂಡೆನೋ ಸಡಗರದಿ ಕಿವಿಗೊಟ್ಟು ಕಿಂಕಿಣಿಯ ದ್ವನಿಗಳನು ಎಡಬಿಡದೆ ಕೇಳುತಿಹ ಹರಿಣನಂತಾದೇ 1 ತೊಡೆಗÀುಹ್ಯ ಕುಚಗಳಿಗೆ ಅನುದಿನವು ನಲಿಯುತ್ತ ಮಡದಿಯರ ಅಂಗ ಸಂಗದ ನಂಬುತಾ ಒಡಲ ಶಾಂತಿಯಗೊಳಿಸೆ ಬಡಿಗೋಲು ಕೆಡಹಿಕೊಂ ದಡಗುತಿಹ ಮೂಷಕನ ತೆರದಲ್ಲಿ ಕಳೆದೇ 2 ನಿರುತದಿಂ ಪರಸತಿಯ ಲಾವಣ್ಯವನು ನೋಡಿ ಚರಿಸಿತೆನ್ನಯ ಮನವು ಅವಳ ಕೂಟಕ್ಕೇ ಉರಿವ ದೀಪವ ಕಂಡು ಕನಕ ಮಣಿಯೇಯೆಂದ ಎರಗುತಿಹ ಹುಳದಂತೆ ಹಾಳಾದೆ ಬರಿದೇ 3 ಜರಿದು ನಿಜವೃತ್ತಿಯನು ಪರದಾಸ್ಯದಲಿ ಮುಳುಗಿ ಪೊರದೆ ಹೊಟ್ಟೆಯನಾ ಪರಾನ್ನ ಭಕ್ಷದಲೀ ಹರುಷದಿಂ ಬಲೆಯತುದಿ ಮಾಂಸಕ್ಕೆ ಮೆಚ್ಚಿದಾ ಮರುಳಾ ಮೀನಿನ ಗತಿಯು ಯನಗಾಯ್ತು ನಿಜದೀ4 ನಾರಿಯರ ಜಾಲಕ್ಕೆ ಪ್ರತಿದಿನವು ಸಿಲುಕುತ್ತ ಮಾರಿಯರ ಸಾಕಿ ನಾ ಫಲವ ತಿಂದೆ ಭ್ರಮರ ಸಂಪಿಗೆಯಸಳ ಸಾರಿ ಕೊಡಲೆ ಮೃತ್ಯುವಶವಾಗುವಂತೇ 5 ಮೂರಾರು ಶತ್ರುಗಳು ತರಿದೆನ್ನ ಮನವನ್ನು ಗಾರು ಮಾಡುತಲಿಹವು ತಿಳಿಯದಾ ಹರಿಯೇ ನರಸಿಂಹನೇ ಐದು ಇಂದ್ರಿಯವ ಗೆಲಲಾರೆ ಭೂರಿ ಭಕ್ತಿಯೊಳೆರಗಿ ಮರೆಹೊಕ್ಕೆ ಕಾಯೋ 6 ಪನ್ನಗಶಯನ ಶ್ರೀ ವೇಣುಗೋಪಾಲನೆ ಚನ್ನಿಗಕೇಶವನೇ ದೂರ್ವೇಶನೇ ನಿಂನನಾ ಬಿಡಲಾರೆ ಮಾರಮಣ ಪೊರೆಯಂನ ಯೋನಿ ಜನ್ಮಕೆ ಮುಂದೆ ಬರದಂತೆ ಮಾಡೋ 7
--------------
ಕರ್ಕಿ ಕೇಶವದಾಸ
ಹೆದರಿಕೆ ಬರುತದೆಲೋ ಪದುಮಾಕ್ಷ ನಿನ್ನ ಮುಂದೆ ಹೇಳಿಕೊಳ್ಳಲು ಎನಗೆ ಪ ಹೆದರಿಕೆ ಬರುತಿದೆ ಜಗದ ಜನರು ನಿನಗೆ ವಿಧವಿಧದಾಡುವ ಸುದ್ದಿಯ ಪೇಳಲು ಅ.ಪ ಹಳಿವರು ಹೆಳವನೆಂದು ಅಂಜದೆ ನಿನಗೆ ತಲೆಯಿಲ್ಲದವನೆನುವರು ಇಲ್ಲದೆ ಹೊಟ್ಟಿಗೆ ಹುಲ್ಲುಮೆದ್ದವನೆಂದು ಹಲವು ಬಗೆಯಲಿ ಹೀಯಾಳಿಪುದ್ಹೇಳಲು 1 ದೃಢದಿ ಭಕುತಜನರು ಬೇಡಿದ ವರವು ಕೊಡಬೇಕಾಗುವುದೆನುತ ಓಡಿ ಹಾವಿನಮೇಲೆ ಪವಡಿಸಿದ ಮಹ ಕಡುಲೋಭಿಯೆಂದೆಂಬ ನುಡಿನಿನ್ನೊಳ್ಪೇಳಲು 2 ಒದೆಸಿಕೊಂಡ್ವೊಯ್ಕುಂಠದಿ ಶೇಷಾಚಲದಿ ಸದನಗೈದನುಯೆಂಬರು ಇದು ಅಲ್ಲದತಿ ವಿಧವಿಧ ಲೋಕ ಸುಲಿದರ್ಥ ನಿಧಿಗಳಿಸಿದ ಚಿನಿವಾರೆಂಬದ್ಹೇಳಲು 3 ಕುದುರೆಮಾವುತನೆಂಬರು ಎಲವೋ ರಂಗ ಕದನಗಡಕನೆನುವರು ಹದಿನಾರು ಸಾವಿರ ಸುದತಿಯರೊಶನಾದ ಸುಧೆಗಳಜಾರನೆಂಬ ವಿಧಿಯನ್ನು ಪೇಳಲು 4 ವಿಪಿನವಾಸಿಕನೆನುವರು ನಿಷ್ಕರುಣದಿ ನೀ ಕಪಿವರನ ತರಿದೆನುವರು ಕಪಟ ತಿಳಿಯುವರಾರು ಅಪರೂಪಮಹಿಮನೆ ಕೃಪಾನಿಧಿ ಶ್ರೀರಾಮ 5
--------------
ರಾಮದಾಸರು
ಇಂದ್ರಸೇನ ನಾಥ ಹೋ, ತ್ರೈಲೋಕ್ಯ ವಿಖ್ಯಾತ ಹೋ |ಸವ್ಯಸಾಚಿ ಪ್ರೀತ ಹೋಮಧ್ಯಗೇಹಜಾತ ಹೋ ಪತರಣಿಬಿಂಬಕೆ ಜಿಗಿದೆ ಗದೆಯನು ವಗೆದೆಅಸುರಗ ಕರವನು ಮುಗಿದೆ |ಹರಿಗೆ ವಾರ್ತೆಯ ತಂದೆ ಜರಿಜನ ಕೊಂದೆನೀಂ ಬದರಿಯೊಳ್ನಿಂದೆ ಖಳಕುಲ |ತರಿದೆ,ವಜ್ರಶರೀರ, ಧರಣಿಯಭಾರವಿಳುಹಿದುದಾರಮತಿ, ಕಪಿ |ವರನೊಳತಿ ಕೃಪೆ ಮಾಡಿದೆ ದಾನವ |ಬೇಡಿದೆ ಸುಮತಿಯ ನೀಡಿದೆ 1ದಂಡ ಮೇಖಲ ಧಾರ ಕುಜನಕುಠಾರ|ಬ್ರಹ್ಮ ಶರೀರ ಜೈಸಿದೆಮಂಡೋದರಿ ವಲ್ಲಭನ ಚರಿಸಿದೆಯೋವನ|ತಂದೆ ಮಾಧವನ ಉಡುಪಿಲಿಚಂಡವಿಕ್ರಮರಾಮ ಸೇವಕ ಭೀಮ |ಸದಾಚಾರಧಾಮಯತಿ ಮೇ |ಷಾಂಡನ ಮೊರೆ ಕೇಳ್ದೆ ಕೀಚಕನನು ಸೀಳ್ದೆ ದ್ವಿಜಕುಲವಾಳ್ದೆ 2ಲಕುಮಿಗುಂಗುರವ ಕೊಟ್ಟಿ ರಣಕತಿ ಗಟ್ಟಿಶಾಟಿಯನುಟ್ಟಿ ಶರಧಿಯ ತ |ವಕದಿ ಕ್ಷಣದೊಳು ಹಾರಿದೆ ಉಗ್ರವ ತೋರಿದೆಜ್ಞಾನವ ಬೀರಿದೆ ಲಂಕೆಯ |ಸಕಲ ಸೌಖ್ಯವ ಕೆಡಿಸಿ ಪುಷ್ಪವ ಮುಡಿಸಿಐಕ್ಯವ ಬಿಡಿಸಿ, ವಟುವಪು |ಮುಕುತಿಪತಿಪ್ರಾಣೇಶ ವಿಠಲನದಾಸ ಸಲಹೋ ನಿರ್ದೋಷ3
--------------
ಪ್ರಾಣೇಶದಾಸರು
ಎಲೆ ಗುರುವೆ ಜನುಮ ಜನುಮ ಜನುಮದೊಳು ಗುರುವೆಯಲಗುರದ ಹನುಮಂತ ಗೆಲಿಸು ಭವಪಂಥ ಪ.ಮೂಜಗದೊಳಾರು ನಿನಗೆಣೆಯೆ ಋಜುಗಣಪತಿ ಸರೋಜಭವಪದ ಗಮ್ಯ ರಮ್ಯಭೂಜಾತೆಯಳಶೋಕಬಿಡಿಸಿದ ಬಲಾಧಿಕ ಬಿಡೌಜಾರಿಪಿತ ಹೃದಯನೊದೆದೆ 1ಲಾಕ್ಷಾಗೃಹದಿ ಧರ್ಮಜರ ಹೊರೆದು ಕಿಮ್ರ್ಮೀರರಾಕ್ಷಸ ಹಿಡಿಂಬರನು ತರಿದೆಭಕ್ಷಿಸಿದೆ ವಿವಿಧನ್ನ ಶಿಕ್ಷಿಸಿದೆ ಬಕನ ತಾಮ್ರಾಕ್ಷ ಭಾಗವತಜನಪಕ್ಷ 2ಉನ್ಮತ್ತಮತಂಗಳನು ಅಳಿದೆ ಯತಿರೂಪದಿ ಜಗನ್ಮಯನ ಭಕುತಿರಸ ಜಗದಿನಿನ್ನ ಬಂಟರಿಗೆರೆದೆನಿರಯತಪ್ಪಿಸಿದೆ ಪ್ರಸನ್ನವೆಂಕಟನಾಥ ಪ್ರೀತ 3
--------------
ಪ್ರಸನ್ನವೆಂಕಟದಾಸರು
ಮಂದರಧರ ದೇವ ಮೊರೆಹೊಕ್ಕವರ ಕಾಯ್ವಪಮಂದಾಕಿನಿಯ ಪಿತ ಮಾವ ಕಂಸನ ಹೃತ |ಸುಂದರ ಶಶಿವದನ ರಂಗಯ್ಯ ಅ.ಪಕಣ್ಣು ನೋಟದಿ ಚೆಲುವ, ಕಮಠರೂಪದಿ ನಲಿವ |ಹೆಣ್ಣ ಮೊರೆಯಕೇಳಿ ಹಿರಣ್ಯನುದರ ಸೀಳಿ ||ಮಣ್ಣು ಬೇಡಿ ಬೆಳೆದೆ - ಕೃಷ್ಣಯ್ಯ ||ಹೊನ್ನ ಕೊಡಲಿಯ ಪಿಡಿದು ಹತ್ತು ಗ್ರೀವನ ಕಡಿದು |ಚಿಣ್ಣರ ಒಡಗೂಡಿ ಚಪಲೆಯರ ವ್ರತಗೆಡಿಸಿ |ಚೆನ್ನರಾವುತನಾದೆಯೊ - ರಂಗಯ್ಯ 1ಗೋಚರನಂದದಲಿ - ಗಿರಿಯ ತಾಳಿದೆ ಬೆನ್ನಿನಲಿ |ಭೂಚೋರನ ಕೊಂದು ಬಾಲ ಕರೆಯಲು ಬಂದು |ಯಾಚಕ ನೀನಾದೆ - ರಂಗಯ್ಯ ||ಸೂಚತನ ಸುತಗೊಲಿದು ಶರಧಿಯಕಟ್ಟಿ ಮೆರೆದೆ |ಕೀಚಕಹತಪೋಷ ಖೇಚರಪುರವಾಸ |ನೀಚಜನರ ತರಿದೆ - ರಂಗಯ್ಯ 2ವನವನಲೆದು ಬಂದ - ವನಿತೆರತ್ನವ ತಂದ |ಘನಕಂಭದಿಂದ ಬಂದುಗರುವ ಮುರಿದು ಬಲಿಯ |ಜನನಿಯ ಶಿರವರಿದೆ - ರಂಗಯ್ಯ ||ಹನುಮವಂದಿತಪಾದ ಹರುಷ ಪಾಂಡುವವರದ |ಮನಸಿಜ ವೈರಿಗೊಲಿದು ಮಹಾಕಲಿಕಿಯಾದೆ |ಘನಪುರಂದರ ವಿಠಲ - ರಂಗಯ್ಯ 3
--------------
ಪುರಂದರದಾಸರು
ಶೋಭಾನವೇ ಬಗಳಾಮುಖಿ ದೇವಿಗೆಶೋಭಾನವೇ ಸದ್ಗುರುನಾಥಗೆ ಶೋಭಾನವೆನ್ನಿ ಶುಭವೆನ್ನಿಪಸುತ್ತಿದ ಸರಿಗೆಯು ಒತ್ತಿದ ಚಿಂತಾಕೆತ್ತಿದ ರಾಗಟೆ ಹತ್ತಿದ ಚವುರಿಮತ್ತೆ ತುರುಬಿಗೆ ಪಂಚಕ ಮುಡಿದಿಹಮುಡಿದೀ ಬಗಳಾಮುಖಿಗೆ ರತ್ನದಾರತಿಯ ಬೆಳಗಿರೇ1ಶ್ರವಣ ಮನನ ನಿಧಿಧ್ಯಾಸನ ಸಾಧಿಸಿಭವಭವಗಳ ತರಿದೆಲ್ಲವ ಛೇದಿಸಿಶಿವಸಾಕ್ಷಾತ್ತಾಗಿ ಬೆಳಗುತ ಬೆಳಗುತ ಸದ್ಗುರುನಾಥಗೆಪವಳದಾರತಿಯೆ ಬೆಳಗಿರೆ2ವಾಲೆಬಳೆಗಳು ತಾಳಿಯು ಮೂಗುತಿಸಾಲಿನ ಅಡ್ಡಿಕೆ ತಾಯಿತ ಸರಪಳಿಮೇಲು ಪದಕವೆ ಮೆರೆದಿಹ ಮೆರೆದಿಹ ಬಗಳಾಮುಖಿಗೆಲೋಲದಾರತಿ ಬೆಳಗಿರೆ3ಬಾಲೋನ್ಮತ್ತ ಪಿಶಾಚಾಂಧರ ಬದಿರ ಲಕ್ಷಣಮೂಕಾವಸ್ಥೆಯ ತಾ ತಾಳಿ ಅರವಸ್ಥೆಯ ಧರಿಸಿಧರಿಸಿಹ ಸದ್ಗುರುನಾಥಗೆತೈಲದಾರತಿಯ ಬೆಳಗಿರೆ4ಹೊಸ ಮಿಂಟಿಕೆ ಪಿಲ್ಲೆ ಸವಂದಿಗೆಜಸವುಂಗರ ಮೀನೆಸೆದಿಹಮುದ್ರಿಕೆಮಿಸುನಿಯೊಡ್ಯಾಣವು ತೊಳಗುವ ತೊಳಗುವ ಬಗಳಾಮುಖಿಗೆಶೀಲದಾರತಿಯ ಬೆಳಗಿರೆ5ಧಗಧಗಿಸುವ ಪೀತಾಂಬರದುಡುಗೆಯಝಗ ಝಗಿಸುವ ಮಹಾಸ್ವರ್ಣದ ಕಂಚುಕಿನಿಗಮವೆಡಬಲದಲ್ಲಿ ಹೊಗಳುವ ಹೊಗಳುವ ಬಗಳಾಮುಖಿಗೆಸುಗಮದಾರತಿಯ ಬೆಳಗಿರೆ6ಝಗ ಝಗಿಸುವ ಪ್ರಭೆ ದೃಷ್ಟಿಸಿ ಶ್ರವಣದಿಮೊಗೆ ಮೊಗೆದು ದಶನಾದವ ಸೇವಿಸಿಬಗೆ ಬಗೆ ಆನಂದದಿ ಸುಖಿಸುವ ಸುಖಿಸುವ ಸದ್ಗುರುನಾಥಗೆಸುಗಮದಾರತಿಯ ಬೆಳಗಿರೆ7ಸಪ್ತಾವರಣ ಭಸ್ಮವ ಮಾಡಿಸಪ್ತಭೂಮಿಕೆ ಪಾವಟಿಗೆಯನೇರಿಗುಪ್ತ ಪ್ರಭಾತೀತವಾಗಿ ತೊಳಗುವ ತೊಳಗುವ ಸದ್ಗುರುನಾಥಗೆತೃಪ್ತದಾರತಿಯ ಬೆಳಗಿರೆ8ಕಂಕಣ ಹರಡಿಯ ಹಸ್ತದ ಕೈಯ್ಯಲಿಅಂಕುರಪಟ್ಟಿಯು ಪರಿಘವು ಶರಧನುಅಂಕೆಯಿಲ್ಲದಾಯುಧ ಪಿಡಿದಿಹ ಪಿಡಿದಿಹ ಬಗಳಾಮುಖಿಗೆಪಂಕಜದಾರತಿಯ ಬೆಳಗಿರೆ9ಸಾರಿಯೆ ತ್ವಂ ಪದ ತತ್ವಮಸಿ ಪದಮೀರಿಯೆ ಸಗುಣ ನಿರ್ಗುಣ ರೂಪವ ತೋರಿಚರಿಸುವಚರಿಸುವ ಸದ್ಗುರುನಾಥಗೆ ಸಾರದಾರತಿಯ ಬೆಳಿಗಿರೆ10ಪಿಡಿದೆಡಗೈಯಲಿ ವೈರಿಯ ಜಿಹ್ವೆಯ ಕೆಡುಹುತ ತುಳಿದೆಹೊಡೆಯುತ ಖಡುಗದಿ ಕೊಡುತ ಬೇಡಿದವರಿಗೆ ಅಭಯವಅಭಯವೀವ ಬಗಳಾಮುಖಿಗೆ ಸಡಗರದಾರತಿಯ ಬೆಳಗಿರೆ11ಸಾಧನ ನಾಲ್ಕನು ಸಾಧಿಪ ಸಚ್ಛಿಷ್ಯರಿಗೆಅಭಯವ ನೀಡುತ ಭಕ್ತಿರಿಗಾಧಾರವಾಗಿ ಕರುಣಿಪಕರುಣಿಪ ಸದ್ಗುರುನಾಥಗೆ ಸಾಧುಗಳಾರತಿ ಬೆಳಗಿರೆ12ಚಿದಾನಂದ ಪರಬ್ರಹ್ಮವು ತಾನೇಮದಮುಖನು ಸಂಹರಿಸಲೋಸುಗಸದನಬ್ರಹ್ಮ ರಂಧ್ರದಿ ಸ್ಥಾನವಾಯ್ತುಸ್ಥಾನವಾಯ್ತು ಬಗಳಾಮುಖಿಗೆ ಸುಧೆಯ ಆರತಿ ಬೆಳಗಿರೆ13ಸಿದ್ದ ಪರ್ವತವಾಗಿಹ ಪ್ರ-ಸಿದ್ಧ ಬಗಳಾಮುಖಿಯೆಂದೆಣಿಸುವಸಿದ್ಧ ಚಿದಾನಂದಾವಧೂತಅವಧೂತಸದ್ಗುರುನಾಥಗೆಸಿದ್ಧದಾರತಿಯ ಬೆಳಗಿರೆ14
--------------
ಚಿದಾನಂದ ಅವಧೂತರು