ಒಟ್ಟು 161 ಕಡೆಗಳಲ್ಲಿ , 36 ದಾಸರು , 141 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೇಳು ಶ್ರೀನಿವಾಸ ಕಷ್ಟವ ತಾಳಲಾರೆ ಶ್ರೀಶ ಕಂಜಜೇಶ ಪ. ಮಾತ ಕೇಳದಿರುವ ಮನ ಬಹು ಕಾತರಗೊಂಡಿರುವ ರೀತಿಯಿಂದ ಬಹು ಸೋತೆನು ಷಡ್ರಿಪು ಜಾತ ಬಂಧಿಸಿರುವ 1 ಕಟ್ಟಿ ಸಹಿಸಲಾರೆ ಮೊದಲ ವಿಠಲ ನೀ ಕೈಬಿಟ್ಟರೆ ಮಾಜದು ಅಟ್ಟಹಾಸ ತೋರೆ 2 ಉದಯ ಮೊದಲುಗೊಂಡು ನಾನಾ ವಿಧದಲಿ ಭ್ರಮೆಗೊಂಡು ಸದಯ ನಿನ್ನ ಪಾದಾಬ್ಜ ನೆನೆಯದೆ ಚದುರೆಯ ಮನಗೊಂಡು 3 ನಿತ್ಯ ಕರ್ಮವೆಲ್ಲ ಕಂಬಳಿ ಬುತ್ತಿಯಾಯಿತಲ್ಲ ಕತ್ತರಿಸಿ ಬ್ರಹ್ಮೆತ್ತಿಯನ್ನು ಪುರು- ಸಿರಿನಲ್ಲ 4 ತಲ್ಲಣಗೊಳಿಸುವುದು ತುದಿಮೋದ- ಲಿಲ್ಲದೆ ದಣಿಸುವುದು ನಿಲ್ಲೆ ನಡೆಯ ಮಲಗೆಲ್ಯು ಬಿಡದು ದೂ- ರೆಲ್ಲು ಪೇಳಗೊಡದು 5 ಮೆಲ್ಲ ಮೆಲ್ಲನೆದ್ದು ನೀ ಮನ ದಲ್ಲಿ ಸೇರುತ್ತಿದ್ದು ನಿಲ್ಲಲು ತೀರಿತಲ್ಲದೆ ಲೋಕ ದೊಳಿಲ್ಲ ಬೇರೆ ಮದ್ದು 6 ನಿತ್ಯ ನಿನ್ನ ಮುಂದೆ ಸೇವಾ ವೃತ್ತಿ ಮಾಳ್ಪದೊಂದೆ ಎತ್ತಾರಕವೆಂದಾಶ್ರಯಿಸದೆ ಮೇ- ಲೊತ್ತಿ ಬೇಗ ತಂದೆ 7 ಭೃತ್ಯರ ಬಿಡನೆಂದು ಶ್ರುತಿ ಶಿರ ವೃತ್ತಿ ವಚನವೆಂದು ಸತ್ಯವೆಂದು ನಂಬಿದ ನೀನರಿಯೆಯ ಔತ್ತರೆಯ ಬಂಧು 8 ವಿಜಯಸೂತನಿಂದ ಪಾದವ ಭಜಿಸಿದ ಮ್ಯಾಲೆನ್ನ ನಿಜ ಜನದೊಳು ಸೇರಿಸುವುದು ಚಿತ ಸಾಮಜ ವರದನೆ ಮುನ್ನ 9 ಭವ ಪರಿಪಾಲ ಪಾಲಿಸು ವ್ರಜ ಯುವತಿ ಲೋಲಾ ಪಾದ ಪಂ- ಕಜ ಕೊಡು ಗೋಪಾಲ 10
--------------
ತುಪಾಕಿ ವೆಂಕಟರಮಣಾಚಾರ್ಯ
ಕೈಲಾಸನಾಥ ಮಹೇಶ ಈಶ ಶೈಲೇಶ ತನಯೇಶ ಬಾಲಾರ್ಕ ಸಮಭಾಸ ಪ ಶೂಲಾಕ್ಷ ಡಮರುಗಳಿಂದ ಶೋಭಿಪ ಹಸ್ತ ತಾಲಾಂಕನನುಜನೊಳ್ಸಮರಗೈದೀರ್ಪ ಫಾಲಾಕ್ಷದಿಂದಲಿ ಕಾಮನ ದಹಿಸಿರ್ಪ ಶೂಲಿಯ ಮಹಿಮೆಯನೇನು ಬಣ್ಣಿಸಲಿ 1 ವಿಷ್ಣುಭಕ್ತರೊಳಗತಿ ಪ್ರೇಮವಿರುವ ಕೃಷ್ಣ ದ್ವೈಪಾಯನರ ಸುತರಾಗಿ ಶೋಭಿಪ ಸನಕಾದಿಗಳ ಶಿಷ್ಯ ದುರ್ವಾಸರೆನಿಪ 2 ನಂಜುಂಡನೆನಿಸಿರ್ಪ ಪ್ರಖ್ಯಾತ ಮಹಾದೇವ ಕಂಜಜಾತನ ಸುತನೆನಿಸಿರ್ದ ದೇವ ರಾಜೇಶ ಹಯಮುಖ ಭಕ್ತಪುಂಗವ ನೀನು ಅಂಜಲಿ ಬಂಧದಿಂ ನಮಿಪೆ ನಿನ್ನಡಿಗೆ 3
--------------
ವಿಶ್ವೇಂದ್ರತೀರ್ಥ
ಕೋಪದೊಳು ಜಮದಗ್ನಿ ತಾಪದೊಳು ಮಾರ್ತಾಂಡ ಭೂಪರೊಳು ರಘುನಾಥನೆನ್ನ ನಾಥ ದ್ವೇಷದೊಳು ಭಾರ್ಗವನು ರೋಷದೊಳು ದೂರ್ವಾಸ ಮೋಸದೊಳ್ ಶ್ರೀಕೃಷ್ಣ ಮುದ್ದು ಕೃಷ್ಣ ಭೋಗದೊಳು ದೇವೇಶ ರಾಗದೊಳು ಗಿರಿಜೇಶ ತ್ಯಾಗದೊಳು ಶಿಬಿರಾಯ ಮದನಕಾಯ ಜ್ಞಾನದೊಳು ಜನಕನು ಧ್ಯಾನದಲಿ ದತ್ತರ್ಷಿ ಸೂನೃತದಿ ಹರಿಶ್ಚಂದ್ರ ಮಾನನಿಧಿಯು ಧನಿಕನೆಂದೆನಲಷ್ಟಸಿದ್ಧಿದಾತಂದೆ ಘನವಂತನೆನೆ ಪ್ರಣವಸ್ವರೂಪಗೆ ಧಣಿಯೆನಲು ಮೂಜಗಕ್ಕೊಡೆಯನಿವÀನೆ ಎಣೆಯುಂಟೆ ಶೇಷಾದ್ರಿವಾಸನಿವಗೆ
--------------
ನಂಜನಗೂಡು ತಿರುಮಲಾಂಬಾ
ಗಂಗೆ ಮಂಗಲ ತರಂಗೆ ಪಾಹಿ ಪಾಪಭಂಗೆ ಹರಿಪಾದಸಂಗೆ ಪ ನಿತ್ಯ ನೆಲಸಿದೆ ಮತ್ತೆ ಸ್ಮರಿಪರ ಚಿತ್ತದೊಳ್ ವಾಸಿಸಿದೆ 1 ಸಗರಪುತ್ರರ ಪವಿತ್ರಿಸಿದೆ ಜಗವರಿಯೆ ಜಹ್ನುತನಯೆಯಾದೆ 2 ರಾಜೇಶ ಹಯಮುಖ ತನಯೆ ರಾಜಧರ್ಮನು ನಿನ್ನ ತಟದಲ್ಲಿ ಮೂಜಗವು ತಾ ಪೊಗಳುವಂದದಿ ವಾಜಿಮೇಧನ ಗೈದನಾದರದಿ 3
--------------
ವಿಶ್ವೇಂದ್ರತೀರ್ಥ
ಗಣರಕ್ಷ ಪರಮಾನಂದ 1 ಧ್ಯಕ್ಷಾರ್ಧ ಚಂದ್ರನ ಪಾಲಾ 2 ದುರಿತ ದರನನುಜಾಸುಚರಿತ್ರಾ 3 ಅನುದಿನ ಜಟ್ಟೆಯೆ ಭಕ್ತರ ಕಾವಾ 4 ಅಘ ಜೇಶ ಲಾಲಿಸಿ ರಕ್ಷಿಸಯ್ಯ 5
--------------
ಬೆಳ್ಳೆ ದಾಸಪ್ಪಯ್ಯ
ಗಣೇಶಸ್ತುತಿ ಗಣಪತಿ ಎನದೋಷ ಬಿಡಿಸುವುದೊ ಶ್ರೀ- ಶಾನತಿ ದಾಸಾ ವೆಂಕಟೇಶವಿಠಲನಾ ಪ ದ್ವಿಪತುಂಡ ಅಪರಾಧ ಎಣಿಸಾದಿರೋ ಪಾಪಾ ಚತುರೀಪಾ ಗಂಗಾಪಾ ಸಜ್ಜನರ 1 ಇಭಮುಖ ಅಭಯವನೀಯುವುದೋ ಕಾಯಾಚಿತ ಮಾಯಮಾಡಯ್ಯ ಪಾಮರಸ 2 ವರಜೇಶಾ ಶಿರಿಮೊಗ ತೋರುವದೊ ಜಿರಹಾಕೃತ ಸ್ನೇಹಾ ನರಸಿಂಹವಿಠ್ಠಲನಾ 3
--------------
ನರಸಿಂಹವಿಠಲರು
ಗರುಡದೇವನೇ ಪೊರೆಯೊ ಎನ್ನನು ಹರಿಯ ವಾಹನನಾಗಿ ಮೆರೆಯುವ ಗರುಡದೇವನೇ ಪ ಮಾತೆಯ ಮಾನವನುಳಿಸಲೋಸುಗ | ಸುಧೆಯ ಕಲಶವ ಪೊತ್ತು ತಂದೆಯೋ 1 ಹರಿಯು ನಿನ್ನೊಳು ಪೇಮದಿಂದಲೀ ಧರಣಿಯೊಳವತರಿಸಲೊಲ್ಲನು 2 ರಾಕ್ಷಸಾರಿ ರಾಜೇಶ ಹಯಮುಖ ಪಕ್ಷಿರಾಜನೊಳಿಪ್ಪ ಭಾಗ್ಯವು 3
--------------
ವಿಶ್ವೇಂದ್ರತೀರ್ಥ
ಗಿರಿಜೇಶಾ ಕರುಣಾ ಸಮುದ್ರ ಪರಿಪಾಲಿಸೆನ್ನನು ಓ ರುದ್ರ ಪ ಪುರಹರ ಉರುಗಭೂಷಾ ಶರಣತೋಷಾಭವ ಭೂತೇಶಾ ಅ.ಪ ಬಳಲುವೆನುಬೇಡಿಕೊಂಬೆನು ಪಾಲಿಸೊ ನೀನು 1 ಅನುದಿನದಿ ಶ್ರವಣ ಮನನವ ಮಾಡಿಸಿ ಘನಪಾಪವ ಖಂಡ್ರಿಸುದೇವ ಮೃತ್ಯುಂಜಯ ಶಿವ 2 ಕಾಮನಗೆಲಿದಾ ಮಹಾಮಹಿಮನೆ ಗುರು- ರಾಮವಿಠಲನ ಸಖನೆ ನಿನ್ನ ಪ್ರಾರ್ಥಿಸುವೆನಾ 3
--------------
ಗುರುರಾಮವಿಠಲ
ಗಿರಿರಾಜ ಸುಕುಮಾರಿ ಶಕ್ತಿ ವಿರಕ್ತಿ ಪ ದೊರೆಯುವಂತೆನಗವ್ವ ತವಪಾದ ಭಕ್ತಿ ಅ.ಪ ಕಂಬುಕಂಠಿನಿ ಗುಹ ಜನನಿ ದುರ್ಗಾಂಬಾ 1 ನಾಸಿಕ ಚಂಪ ಪೋಲ್ವ ಶರ್ವಾಣೀ2 ಪಾವಂಜೇಶನ ದಾಸಜನರ ರಕ್ಷಕಿಯೇ 3
--------------
ಬೆಳ್ಳೆ ದಾಸಪ್ಪಯ್ಯ
ಗುರುವರ್ಯ ವಿಶ್ವಪ್ರಿಯ ಶಿಷ್ಯರ ಪ ಆಂಗ್ಲದೇಶದ ರಾಣಿಯು ನಿಮ್ಮಯ ಶಾಸ್ತ್ರ ಸಂಪÀದ ಮಹಿಮೆಯನು ಆಂಗ್ಲೇಯ ಜನರಿಂದ ತಿಳಿದು ತಾ ಬಹುಮಾನ- ವಾಂಗ್ಲೇಯ ಭಾಷೆಯೊಳಿತ್ತಳಾದರದಿ 1 ಪಂಡಿತಾಗ್ರಣಿಯಾದರು 2 ಅರುವತ್ತನೆಯ ವರ್ಷದಿ ಪ್ಲವಾಬ್ದದಿ ರಾಜೇಶ ಹಯಮುಖನ ಚರಣವ ಸ್ಮರಿಸುತ್ತ ಸ್ಮರತಾತನನೈದಿದ ಕರುಣಾಸಮುದ್ರರ ಚರಣಕ್ಕೆ ನಮಿಸುವೆ 3
--------------
ವಿಶ್ವೇಂದ್ರತೀರ್ಥ
ಚಿಂತಾಮಣಿ ನಾರಸಿಂಹ ಪ ಪಾಹಿ ಕರುಣಾಸಾಗರ ಶ್ರೀಹರಿಯೆ ಅ.ಪ ಯೋಗಿ ನೀ ಗಣಗಳ ಕೊಂದು ನಾಗಭೂಷಣನಿಗೊಲಿದಂಥ ರಾಗದಿ ದೋಷವಿದೂರರ ರಾಗದಿಂದಲಿ ಪಾಲಿಸುತಿರುವೆ ದೊರೆಯೆ 1 ಕೋಲಾವತಾರದ ಹರಿಯ ದಿವ್ಯ ಲೋಲ ನೇತ್ರದಿ ಬಂದ ನದಿಯ ಮಾಲಾದಿ ಭೂಷಿತನಿರುವಿ 2 ಶೂಲಿಗೊಲಿದೆ ಪಾತಾಳದಲ್ಲಿ ಚೆಲ್ವ ರಾಜೇಶಮುಖ ಹರಿಯೇ ನಿನ್ನ ಬಲ್ಲಿದ ಜನರಿಗೆ ಸುಲಭ 3
--------------
ವಿಶ್ವೇಂದ್ರತೀರ್ಥ
ಜನ್ಮ ಸಫಲ ಕಾಣಿರೋ ನಮ್ಮ ಗುರು ವಾದಿರಾಜರಾಯರ ಕಂಡು ಜನ್ಮ ಸಫಲ ಕಾಣಿರೋ ಪ ಯುಕ್ತಿ ಮಲ್ಲಿಕೆಯೆಂಬ ಗ್ರಂಥ ಮಾಡಿಹರು ಮತ್ತೆ ಮುತ್ತಿನ ಸಿಂಹಾಸನವನೇರಿಹರು ಮತ್ತೆ ದುರ್ವಾದೀಭಗಳಿಗೆ ಮೃಗೇಂದ್ರರು ಸೂತ್ರನಾಮದಿ ಮುಂದೆ ಮೆರೆವರು 1 ದಾಸಕೂಟಗಳಲ್ಲಿ ರತ್ನದಂತಿಹರು ಭಾಸುರಕಾಯದಿ ನೂರ ಇಪ್ಪತ್ತು ವರ್ಷಗಳೊಳಗಿದ್ದು ಮೆರೆದವರು 2 ಮೂಜಗದೊಳಗಿಂಥ ಗುರುಗಳೆಲ್ಲಿಹರು ಕಂಜಸುತನ ಪದವೇರುವವರು ರಾಜೇಶ ಹಯಮುಖ ಕಿಂಕರಾಗ್ರಣಿಗಳು ರಾಜಿಪ ಶ್ರೀಸೋದಾಪುರದೊಳಗಿಹರು 3
--------------
ವಿಶ್ವೇಂದ್ರತೀರ್ಥ
ಜಯ ಜಯ ಜಯ ಮುನಿವರ್ಯ ಜಯ ಮಧ್ವಶಾಸ್ತ್ರ ವ್ಯಾಖ್ಯಾನಾತಿಗೇಯ ಪ ಮಂಗಲವೇಡೆಯೊಳುದುಭವಿಸುತ ಜಗ- ನ್ಮಂಗಲಕರವಾದ ಟೀಕೆಯ ರಚಿಸಿ ಮಂಗಲಮೂರುತಿ ರಾಮನ ಭಜಿಸುತಾ- ನಂಗನ ಜಯಿಸಿದ ಮುನಿಕುಲ ತಿಲಕ 1 ವಿದ್ಯಾರಣ್ಯನೆಂಬ ಖಾಂಡವ ವನವನೆ ಯಾದವೇಶನ ಸಖನಂತೆ ನೀ ದಹಿಸಿ ಮಧ್ವಶಾಸ್ತ್ರವೆಂಬ ರತ್ನವ ಜನರಿಗೆ ಸುಧೆಯಂತೆ ಕುಡಿಸಿದ ಯತಿವಂಶ ರತ್ನ 2 ಮಾಧ್ವಗ್ರಂಥವ ನೀನು ಬಂಧುವೆಂದೆಣಿಸುತ ರಾಜೇಶ ಹಯಮುಖ ಶ್ರೀರಾಮಚಂದ್ರ ಪಾಂದಾಂಬರುಹವನ್ನೆ ಬಿಡದೆ ಸೇವಿಸುತಲಿ ವಾದೀಭಗಳಿಗೆ ಮೃಗೇಂದ್ರನಾಗಿರುವಿ 3
--------------
ವಿಶ್ವೇಂದ್ರತೀರ್ಥ
ಜಯ ಜಯಾ ಶಿವ ಪುತ್ರ ಶರಜ ಜಯ ಜಯಾ ಗುಹಾ ಪ ಜಯ ಜಯ ಪಾರ್ವತಿ ಕುಮಾರ ಜಯ ಜಯಾ ದೇವಾ ||ಜಯ|| ಸುರರ ಪೊರೆದ ದೇವಾ 1 ಉರಗ ವರವನಿತ್ತ ಕರುಣಿ ದೇವಾ 2 ಜೇಶ ಕಾರ್ತಿಕೇಯ ದೇವಾ 3
--------------
ಬೆಳ್ಳೆ ದಾಸಪ್ಪಯ್ಯ
ಜೋಗಿಯ ನೋಡಿರೇ ತಾಪಸ ಯೋಗಿಯ ನೋಡಿರೇ ಆಗಮನುತ ಗುಣಸಾರಸ್ವಾನಂದಶರವಾ ಭುವನದಿಮೆರವಾ ಪ ಗಿರಿಜೇಶನು ಧರಿಸಿಹ ರುಂಡಮಾಲಾಕೃತಿಯೋ ; ವಿದ್ಯುಲ್ಲತಿಯೋ ಭೂಷಣವೋ ; ತಾರಾಗಣವೋ 1 ಶ್ರೀ ಮಹಾದೇವನ ನಂಜು ಗೊರಳಠವಠವಿಯೋ : ಮೇಘ ಚ್ಛವಿಯೋ ತರಣಿಯ ಸದನೋ ಕಾಮಶಲಭನುಹಿದ ಭಾಲಾಕ್ಷದ ಇರವೋ; ದೀಪಾಂಕುರವೋ; ವ್ಯೋಮನದಿಯ ಆವರಿಸಿಹ ಭವನ ಕಂಜೆಡಿಯೋ: ಹವಳದ ಕುಡಿಯೋ 2 ಕರ ಡಮರದ ನಾದಸ್ಪರಣೋ : ಘನವ್ಯಾಕರಣೋ: ಕರ್ಪುರ ಗಿರಿಯೋ; ಸುರಕುಜ ಪರಿಯೋ: ಗುರವರ ಮಹಿಪತಿ ನಂದನ ತಾರಕ ಶಿವನೋ: ನಿಜ ಬಾಂಧವನೋ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು