ಒಟ್ಟು 114 ಕಡೆಗಳಲ್ಲಿ , 1 ದಾಸರು , 114 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಾನಕೀವರತೇ ಜಯ ಮಂಗಳಂ ಪ ಮಾನವಾಧಿಪತೇ ಮಂಗಳಂ ಅ.ಪ ರಾವಣಾನುಜಮಿತ್ರ ರಮಣೀಯ ಸುಚರಿತ್ರ ದೇವಾಧಿದೇವ | ತೇ ಮಂಗಳಂ 1 ಅಪವರ್ಗಪ್ರದ ತೇ ಮಂಗಳಂ 2 ಖರದೂಷಣನಿಹಂತ ಕರಧೃತಶರಚಾಪÀ ಗುರುರಾಮವಿಠಲತೇ ಮಂಗಳಂ 3
--------------
ಗುರುರಾಮವಿಠಲ
ಡಂಬವಿಲ್ಲದೆ ಹರಿಯ ಭಜಿಸಿ ನಂಬಿ ಮನದಲಿ ಪ ಹಂಬಲಿಸದೆ ದುರ್ವಿಷಯವ ಹರುಷ ಪಡುತಲಿ ಅ.ಪ ಸಮಚಿತ್ತದಿ ವರ್ತಿಸಿ ಸಜ್ಜನರ ಕೂಡುತ 1 ಮನುಮಥನಾಟಕೆ ಸಿಲುಕದೆ ಮಮತೆಯ ಬಿಡುತ 2 ಕಾಮ ಮಖ್ಯರಿಪುಗಳನ್ನು ಕಡೆಗೆ ನೂಕಲು ಸ್ವಾಮಿ ಶ್ರೀ ಗುರುರಾಮವಿಠಲ ತೋರ್ಪನವರೊಳು 3
--------------
ಗುರುರಾಮವಿಠಲ
ತಂದೆತಾಯಿ ನೀನೆ ಬಾ ಬೇಗನೆ ಪ ಮಂದರೋದ್ಧಾರ ಮನ್ಮಥ ಜನಕ ಆ- ಮಾಧವ ವಾಸುದೇವ ಗೋವಿಂದ ಮಧುಸೂಧನ ದಾಶರಥೇ ಸಂಕರ್ಷಣ ತ್ರಿವಿಕ್ರಮ ಹೃಷಿಕೇಶ ನಾರಸಿಂಹ ಪರಬ್ರಹ್ಮ 1 ಪದ್ಮನಾಭಾಚ್ಯುತ ದಾಮೋದರ ಜ- ಪ್ರದ್ಯುಮ್ನಧೋಕ್ಷಜ ನಾರಾಯಣ ಅನಿ- ರುದ್ಧ ವಿಷ್ಣು ಭೂಧರ ಉಪೇಂದ್ರ 2 ಅರಿತು ಚತುರ್ವಿಂಶತಿ ನಾಮವ ಶರಣರದುರಿತವ ಪರಿಹರಿಸುವನಮ್ಮ ಗುರುರಾಮವಿಠಲನೆ ನಿನ್ನನೆ ನಾಂ 3
--------------
ಗುರುರಾಮವಿಠಲ
ತಿಳಿಯದಾಯಿತು ವಯಸು ಕಳೆದು ಹೋಯಿತು ಪ ಕಳವಳಿಸುತ ಕಡೆಗಾಣದೆ ಬಳಲಿ ತೊಳಲಿ ಪಾಪ ಹೆಚ್ಚಿ ಅ.ಪ ಸತಿಸುತರೆಂಬ ಬಲೆಗೆ ಸಿಲುಕಿ ಅತಿಶಯ ಮೋಹದಲಿ ಮುಳುಗಿ ಪಥಿಕರಾಡುವಂತೆ ನಡೆದು ಪತಿತನಾಗಿ ನಿಜದ ಮರ್ಮಾ 1 ಕೆಲದಿನ ಆಟದಿ ಲಲನೆಯರ ಕೂಟದಿ ಹಲವು ವಿದ್ಯೆಯ ಕಲಿತು ಪರರ ಒಲಿಸಿ ಸ್ತ್ರೋತ್ರಮಾಡಿ ಬೇಡಿ ಫಲವ ಕಾಣಲಿಲ್ಲ ಕೊನೆಗೆ ಹಲುಬಿ ಹಲುಬಿ ಬಾಯಿನೊಂದು 2 ನೀತಿ ಹೇಳುತಾ ಪರರ ನಿಂದೆಗೆಯ್ಯುತಾ ಗುರುಮುಖದಲಿ ಪರಮತತ್ವ 3 ಮತ್ತನಾಗುತ ದುರಾಸಕ್ತನೆನಿಸುತ ನಿತ್ಯಕರ್ಮವನ್ನು ತೊರೆದು ಸತ್ಯಶಮದಮಗಳ ಮರೆದು ಚಿತ್ತದಲಿ ನಿರ್ಮಲನಾಗದೆ ಚಿಂತಿಸುತಲಿ ನಿಜದ ನೆಲೆಯ 4 ಗುರುರಾಮವಿಠಲನ ಶ್ರೀಚರಣಕಮಲ ಸ್ಮರಣೆಗೈದು ಹೊರಗು ಒಳಗು ಒಂದೆ ವಿಧದಿ ಚರಿಸಿ ಸೌಖ್ಯಪಡೆವ ಬಗೆಯ 5
--------------
ಗುರುರಾಮವಿಠಲ
ದರುಶನವಾಯಿತು ಪಂಢರೀಶನ ಪ ದರುಶನದಿಂದಲಿ ಧನ್ಯರಾದೆವು ಸರಸಿಜಭವನ ನಾಭಿಯಲಿ ಪಡೆದವನ ಅ.ಪ ತಂದೆತಾಯಿಯರ ಭಕ್ತಿಯಿಂದ ಸೇವಿಸುವರಿಗೊಲಿದಾ- ನಂದಪದವಿಯನಿತ್ತ ನಂದನ ಕಂದನ 1 ಇಷ್ಟ ಭಕುತ ಕೊಟ್ಟ ಇಟ್ಟಿಗೆ ಮೇಲೆ ನೆಲಸಿ ಶಿಷ್ಟರ ಸಲಹುವ ವಿಠ್ಠಲರಾಯನಂಘ್ರಿ 2 ಉರದಲಿ ಸಿರಿಯನು ಧರಿಸಿ ಸುರರ ಕಾರ್ಯ ನೆರವೇರಿಸುವ ಜಗದ್ಭರಿತನ ಶ್ರೀಪಾದ 3 ನಾಗಶಯನ ನಿಖಿಲಾಗಮವೇದ್ಯನ 4 ಮುಕುತಿದಾಯಕ ಗುರುರಾಮವಿಠಲ ಚರಣ5
--------------
ಗುರುರಾಮವಿಠಲ
ದಾನವಗಿರಿಕುಲಿಶಾ ನರಸಾರಥಿ ದಶರಥ ಸುಕುಮಾರ ಪ ಕುಂಭಿನಿಜಾರಮಣ ನಂಬಿದೆ ನಾನಿನ್ನ 1 ಕಮಠ ವರಾಹ ನರಹರಿ ವಾ- ಮನ ಭಾರ್ಗವ ರಾಮ ಭಂಜನ ಜಿನಸುತ ಕಲ್ಕಿಯೆ ದೀನ ಜನ ಪ್ರೇಮಾ 2 ತಿರುಪತಿಯಲಿ ನೆಲಸಿರುವೆ ಭಕ್ತಸುರ- ತರುವೆ ವೆಂಕಟೇಶ ಗುರುರಾಮವಿಠಲ ಕೋರಿದ ವರಗಳ ಕೊಡುವ ಶ್ರೀನಿವಾಸ 3
--------------
ಗುರುರಾಮವಿಠಲ
ದಾರಿ ಒಳ್ಳೇದಾಗಿರಬೇಕೂ ಹರಿದಾಸನಾದ ಮೇಲೆ ಪ ಯಾರೇ ಬಂದರೂ ಸರಿ ಯಾವ ಕಾಲದಲ್ಲಿಯು ಪಾರಗಾಣದಂಥಾ ಈ ಸಂಸಾರವಾರ್ಧಿ ದಾಟುವದಿಕ್ಕೆ ಅ.ಪ ಜ್ಞಾನ ಭಕ್ತಿ ದಾನಧರ್ಮ ವೈರಾಗ್ಯದಿ ಸದ್ಗುಣಂಗಳು ತಾನೆ ತಾನಾಗೆಲ್ಲವು ಸ್ವಾಧೀನವಾಗಿರಬೇಕಾದರೆ 1 ಓದಿದರ್ಥ ಮನಕೆ ತಿಳಿದು ನಿರತವು ಸಾಧನವು ಮಾಡುತ ಅ- ನಾದಿ ಸಿದ್ಧವಾದ ತತ್ವದ ಹಾದಿ ಕಾಣಬೇಕಾದರೆ 2 ತಾಮಸಾದಿ ದುರ್ಗುಣ ನಿರ್ನಾಮವಾಗಿ ಪ್ರೇಮದಿಂ ಗುರುರಾಮವಿಠಲನ್ನ ನೆನೆವದಕ್ಕೆ 3
--------------
ಗುರುರಾಮವಿಠಲ
ದೃಷ್ಟಾಂತವಾಗಿದೆಯೈ ಪ ಕೃಷ್ಣಾ ನೀಮಾಡಿರ್ಪ ಸೃಷ್ಟ್ಯಾದಿಗಳೆಲ್ಲ ಅ.ಪ ಜನರು ನಡೆವದೀಗ ನೋಡಲ್ ಮನಕೇ ಬಂದಂತೆ ಕಾರ್ಯಂಗಳೊಡಗೂಡಲ್ 1 ಧೃಡವಾಗಿಯೇ ತೋರ್ಪುದು ನಡೆನುಡಿ ಮೊದಲಾದ ನರರು ಮಾಳ್ಪುದೆಲ್ಲ 2 ಚತುರಾವಸ್ಥೆಗಳಿಂದಲಿ ಹಿತವೇಬೇಕೆಂದರು ಅಹಿತವಾಗುತಿರುವುದು 3 ತನ್ನಿಂತಾನೆ ನಡೆವದು ಭಿನ್ನಾಭಿನ್ನವಾಗಿ ಭೇದ ಪ್ರಪಂಚವು 4 ಗುರುರಾಮವಿಠಲಾ ನೀ ಮಾಡಿರ್ಪ ಕಷ್ಟಗಳು 5
--------------
ಗುರುರಾಮವಿಠಲ
ದೇವರ ದಿವ್ಯಗುಣಗಳ ಪೊಗಳುವದು ಜೀವರಿಗಿದುವೆ ಪ್ರಯೋಜನವು ಪ ಭಾವದಿ ತೋರುವ ವಿಷಯಗಳೆಲ್ಲವು ಭಕ್ತಿಯೊಳರಿತು ಸಮರ್ಪಿಸುತಂ ಅ.ಪ ನಡೆವದು ನುಡಿವದು ಕೊಡುವದು ಬಿಡುವದು ಒಡೆಯ ಹರಿಯ ಪ್ರೇರಣೆಯೆಂದು ದೃಢಮನದಲಿ ತಿಳಿದಾವಾಗಲು ತಾ ಮೃಢ ಸಖನಡಿ ಧ್ಯಾನಕೆ ತಂದು 1 ಅರಿಯದೆ ಪಾಮರರೊರಲುವ ಬೋಧೆಯ ತರತರದಿ ತಿರಸ್ಕರಿಸುತಲೀ ಭವ ಭಯಗಳನೀಡಾಡುತಲಿ 2 ಜನನ ಮರಣ ದೂರ ಪರಾತ್ಪರ ಪಾ- ವನ ಚರಿತ್ರ ಭಾಸುರ ಗಾತ್ರಾ ವನಜನಯನ ಗುರುರಾಮವಿಠಲ ಎಂ- ದನುದಿನ ಭಜಿಸುವನೆ ಪವಿತ್ರ 3
--------------
ಗುರುರಾಮವಿಠಲ
ದೈವಕೃಪೆ ಇದಲ್ಲಾ ಇವರಿಗೆ ಭಾವ ಶುದ್ಧಿಯಿಲ್ಲಾ ಪ ದೇವತೆಗಳು ಸಂತೋಷಿಸರೆಂದಿಗು ನಾವೆಂಬಹಕಾರದಿ ಮಾಳ್ಪದರಲಿ ಅ.ಪ ಮದುವೆಯ ಪೆಸರಿರಿಸಿ | ದೂರದಿಂ ವಿವಿಧ ಬಂಧುಗಳ ಕರಸಿ ವಧುವರರಿಗವರು ವುಡುಗೊರೆ ವೋದಿಸ- ಲದನೇಯವರಿಗೆ ಹಿಂದಕ್ಕೆ ಕೊಡುವುದು 1 ಕೊಡದಿದ್ದರೆ ಕೋಪಾ | ಕೊಟ್ಟರೆ ಕಡು ಮೂಢರಿಗೆ ಪುಣ್ಯವೆಲ್ಲಿಹುದು ಸಡಗರ ಭ್ರಾಂತಿಯು ಡಂಬವು ಬರಿದೆ 2 ತಂತ್ರಗಳಾಚರಿಸೆ ಯಂತ್ರೋದ್ಧಾರಕ ಗುರುರಾಮವಿಠಲಾ ಸಂತಸಡುವನೆ ಧನವ್ಯಯ ಬರಿದೆ 3
--------------
ಗುರುರಾಮವಿಠಲ
ದೊರೆಯೆಂದು ನಂಬಿದೆ ನಿನ್ನ ಪ ಇರುವೇ ಮೊದಲು ವಿಧಿ ಪರಿಯಂತವು ಪ್ರಾಣಿ ಹೊರಗೊಳಗೆ ವ್ಯಾಪಿಸಿರ್ಪ ಅ.ಪ ಯಾರು ಬಲ್ಲರೋ ನಿನ್ನಾ ಪಾರ ಮಹಿಮೆಯನ್ನ ಶ್ರೀನಾರಾಯಣ ಸುಪ್ರಸನ್ನಾ 1 ದಾಸರನೆಲ್ಲಾ ಪೋಷಿಸಬಲ್ಲಾ ಈಶನೀನಲ್ಲದಿನ್ನಿಲ್ಲಾ 2 ಕರಿವರದನೆಂದು ಮರೆ ಹೊಕ್ಕೆÀ್ಕನಿಂದು | ಶ್ರೀ ಗುರುರಾಮವಿಠಲ ಬಂದು 3
--------------
ಗುರುರಾಮವಿಠಲ
ಧ್ಯಾನಿಸುವ ಸುಜನರಿಳೆಯೊಳೇನು ಧನ್ಯರೊ ಪ ಶ್ರೀನಿಧಿ ನಮ್ಮ ನಾರಾಯಣನ ಚರಣಕಮಲವ ಅ.ಪ ಬ್ರಹ್ಮ ರುದ್ರ ಪ್ರಮುಖ ಸುರರಿಗೇನು ಮೂಲವೊ ಸಮ್ಮತಿ ವೇದ ಶಾಸ್ತ್ರ ಪುರಾಣವೇನು ಪೇಳ್ವುದೊ 1 ಕಾಲಕರ್ಮ ಜೀವ ಮಾಯ ಯಾರಧೀನವೊ ಮೇಲೆ ಅನುಭವದಲಿ ತಿಳಿವುದದುವೆ ಜ್ಞಾನವೊ 2 ಅರ್ಥ ಚತುಷ್ಠಯವ ಕೊಡುವ ಪಾರ್ಥಸಾರಥಿ ಕರ್ತಾ ಭೋಕ್ತಾ ಗುರುರಾಮವಿಠಲ ಮೂರುತಿ3
--------------
ಗುರುರಾಮವಿಠಲ
ನಮಗ್ಯಾಕೀ ಸಂಸಾರ ಚಿಂತೆ ಕ್ರಮವಾಗಿ ಧರ್ಮದೊಳಿದ್ದರೆ ಪ ಕ್ಷಮೆಬಾರದು ಇದರಲ್ಲಿ ಅ.ಪ ಜವನವರು ಎಳೆಯುವರು ಯಾರು ಬರರು | ಸಂಗಡ 1 ಅನುಸಾರಿಗಳಲ್ಲ ಮನಸೇ ಜಿತವಿಲ್ಲ ಕೊನೆಗೆ ದಿಕ್ಕಿಲ್ಲ ಸಿರಿನಲ್ಲ ಕಾಯಬೇಕಲ್ಲ | ನಿಜವು 2 ಮಾಯ ಬರಿದೆ ಜೀವಗೆಲ್ಲದೆ | ಶಾಸ್ತ್ರದಿ 3 ದ್ವಾಸುಪರ್ಣವೆಂಬೊವಾಶೃತಿ ನೋಡಲು ಈಶನಾಧೀನ ಸಕಲ ಜೀವನ ಯಾತಕ್ಕಭಿಮಾನ | ಅಜ್ಞಾನ 4 ಗುರುರಾಮವಿಠಲ ಹೊರವೊಳಗಿದ್ದೆಲ್ಲ ಕರುಣಿಸುವನು ಸರ್ವಾಧಾರನು ತನ್ನವರನು ಭಯವೇನು 5
--------------
ಗುರುರಾಮವಿಠಲ
ನರದೇಹ ನಿತ್ಯವಲ್ಲ ನಾಳೆ ಮೃತ್ಯು ಬಿಡುವದಲ್ಲ ಪ ಮರುಳುಮನವೆ ಕೇಳು ಸೊಲ್ಲ ಹರಿಯ ಮರೆವುದುಚಿತವಲ್ಲ ಅ.ಪ ಹಿಂದಿನವರು ಪಟ್ಟಪಾಡು ಇಂದು ನೀನು ತಿಳಿದು ನೋಡು ಸಂದೇಹಗಳೀಡಾಡು ಒಂದೇ ಮನದಿ ಹರಿಯ ಕೊಂಡಾಡು 1 ಹರಿ ನಮಗನಾದಿ ಮಿತ್ರ ವರಶೋಭನ ಚಾರಿತ್ರ ಪೊರೆವದೇನು ನಮ್ಮ ಚಿತ್ರ ಕರುಣಿಸುವನು ಕಮಲನೇತ್ರ 2 ಹೊನ್ನು ಹೆಣ್ಣು ಮಣ್ಣು ಮೂರು ನಿನ್ನದೆಂದು ಹಿಗ್ಗದಿರು ಬೆನ್ನು ಹೊಡೆವರು ಯಮನವರು 3 ಏನು ಸುಖವು ಕಾಣಲೇಶ ಜೋಕೆ ಬಿಡುಬಿಡು ದುರಾಶಾ ಬೇಕು ಸುಜನರ ಸಹವಾಸ 4 ಗುರುರಾಮವಿಠಲ ಮುಕುಂದ 5
--------------
ಗುರುರಾಮವಿಠಲ
ನವನೀತ ಚೋರಾ ಪ ಸಹೋದರಿ ಮಾನಸ ಚಕೋರ ಚಂದ್ರ ಚಂದ್ರ ಕುಲಚಂದ್ರ ಚಂದ್ರಮುಖ ಅ.ಪ ಸೂರಿಜನಪ್ರಿಯ ಸುಗುಣನಿಲಯ ಪಾ- ಕಾರಿಗರ್ವಹರ ಕರುಣಾ ಜಲಧೇ1 ಸದ್ವಿಹಾರ ದೇವ ದ್ವಿಜ ಪೋಷಕ 2 ರಾಮಾನುಜ ಭೃಗು ರಾಮತ್ರಿಜಗದಭಿರಾಮಪಾಹಿ ಗುರುರಾಮವಿಠಲ ಜಯ3
--------------
ಗುರುರಾಮವಿಠಲ