ಒಟ್ಟು 72 ಕಡೆಗಳಲ್ಲಿ , 6 ದಾಸರು , 71 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧನ್ಯರಾದರು ಗುರುಗಳನು ಪೂಜಿಸುತ ಇನ್ನಿವರ ಪಾತಕವು ತೊಲಗಿತು ಜಗದಿ ಪ. ತಂದೆ ಮುದ್ದುಮೋಹನದಾಸ ರಾಯರನು ಚಂದದಿಂ ಸತಿಸಹಿತ ಕರೆತಂದು ಮನೆಗೆ ಮಂದರೋದ್ಧರನ ಪದಸೇವೆ ಇದು ಎಂದರಿತು ಮಂದಹಾಸದಲಿ ನಸುನಗುತ ಸದ್ಭಕ್ತರು 1 ಮಂಗಳೋದಕದಿಂದ ಮಜ್ಜನವಗೈಸುತಲಿ ಅಂಗಗಳನೊರೆಸುತಲಿ ನಾಮಗಳನ್ಹಚ್ಚಿ ರಂಗನಾಥನಿಗರ್ಪಿಸುತ ಪುಷ್ಪಹಾರವನ್ಹಾಕಿ ಶೃಂಗಾರವನೆಗೈದು ಶ್ರೀ ಗುರುಗಳನ್ನು 2 ಪಚ್ಚೆಕರ್ಪೂರ ಕೇಸರಿಯಿಂದ ಕೂಡಿದ ಅಚ್ಚ ಗಂಧವನ್ಹಚ್ಚಿ ಅಕ್ಷತೆಯನಿಟ್ಟು ಮಚ್ಛರೂಪಿಯ ನೆನೆದು ಪಾದಕಮಲವ ತೊಳೆದು ನಿಚ್ಚಳದ ಭಕ್ತಿಯಲಿ ನಿಜ ಭಕ್ತರೆಲ್ಲ 3 ಸತಿಸಹಿತ ಕುಳ್ಳಿರಿಸಿ ಗುರುಗಳನು ಪೀಠದಲ್ಲಿ ಅತಿಶಯದಿ ಕುಡಿಬಾಳೆ ಎಲೆಗಳನೆ ಹಾಕಿ ಮತಿಯಿಂದ ರಂಗೋಲೆಗಳನ್ಹಾಕಿ ಲವಣ ಸ- ಪರಿಯಂತ ಬಡಿಸುತಲಿ 4 ಅನ್ನಾದಿ ಸಕಲ ಷಡ್ರಸಗಳನೆ ಬಡಿಸುತ್ತ ಘನ್ನ ಮಹಿಮರಿಗೆ ಭಕ್ಷಾದಿಗಳ ಬಡಿಸಿ ಸನ್ನುತಿಸುತಲಿ ತೀರ್ಥ ಆಪೋಷನವನ್ಹಾಕಿ ಪನ್ನಗಶಯನನಿಗೆ ಅರ್ಪಿಸುತ ಮುದದಿ 5 ಘೃತಶರ್ಕರಾದಿಗಳನಡಿಗಡಿಗೆ ಬಡಿಸುತಲಿ ನುತಿಸಿ ಗಾನಗಳಿಂದ ಗುರುಮಹಿಮೆಯ ದಧಿ ಕ್ಷೀರದನ್ನಗಳನುಣಿಸುತಲಿ ಘೃತ ಕ್ಷೀರದಿಂದ ಕೈ ತೊಳೆದು ಸಂಭ್ರಮದಿ 6 ಯಾಲಕ್ಕಿ ಕರ್ಪೂರ ಮಿಳಿತ ವೀಳೆಯವನಿತ್ತು ವೇಳೆವೇಳೆಗೆ ತಪ್ಪು ಕ್ಷಮೆಯ ಬೇಡುತಲಿ ವ್ಯಾಳಶಯನಗರ್ಪಿಸುತ ಉಡಿಗೆ ತೊಡಿಗೆಗಳನಿತ್ತು ಮಾಲೆಹಾಕುತ ಆರತಿಯನೆತ್ತಿ ಮುದದಿ 7 ಹರಿಪ್ರೀತನಾಗುವನು ಗುರು ಹೃದಯದಲಿ ನಿಂತು ಕರ್ಮ ತೊಡಕುಗಳು ಸರಸಿಜಾಕ್ಷನು ತಾನು ಹರುಷಪಡುವನು ದಯದಿ ಕರಕರೆಯ ಸಂಸಾರ ಕಡಿದು ಗತಿ ಈವ 8 ಗುರುದ್ವಾರ ಒಲಿಯುವನು ಹರಿಯು ಮೋಕ್ಷಾರ್ಥಿಗಳ ಅರಘಳಿಗೆಯಗಲದಲೆ ಕಾಯುವನು ಸತತ ಗುರು ಅಂತರ್ಯಾಮಿ ಶ್ರೀ ಗೋಪಾಲಕೃಷ್ಣವಿಠ್ಠಲ ತ್ವರಿತದಿಂ ಹೃದಯದಲಿ ತೋರ್ವನು ತನ್ನ9
--------------
ಅಂಬಾಬಾಯಿ
ಧುಮ್ಮಸಾಲೆಯ ನೋಡಿ ಧುಮ್ಮಸಾಲೆಯಾ ಪ ಧುಮ್ಮಸಾಲೆಯ ನೋಡಿ ಘಮ್ಮವಾದ ಪ್ರಾಣಿಗಳು | ತಮ್ಮ ಸುದ್ದಿ ತಮಗಿಲ್ಲಾ ಹಮ್ಮಿನಿಂದಲಿ | ಧಿಮ್ಮಹಿಡಿದು ಭವದೊಳು ಸುಮ್ಮನೆವೆ ಕೆಟ್ಟು ಹೋದ | ಗ್ಯಾದರೆಯು ಪರಬೊಮ್ಮನಾಮ ನೆನೆಯಿರೋ 1 ವಿದ್ಯೆಯಿಂದ ವಾದಿಸುತ ಮುದ್ದಿಯಿಂದ ಕಣ್ಣು ಮುಚ್ಚಿ | ಸದ್ಯ ಶಕ್ತಿ ಯೌವನದಿ ಗುದ್ದಿ ಹೆಟ್ಟು ತಾ | ಪರಿ ನಿಜ | ಬುದ್ಧಿ ಹೋಗಾಡಿಸಿ ಅನಿರುದ್ಧನನ ಮರೆತಿರೋ 2 ಒಂದು ಕವಡಿಯಲಾಭ ತಮಗೆ ಹೊಂದದಿದ್ದರೆ ಸರಿ | ಬಂದು ನಿಂದು ಒಳ್ಳೆವರಾ ನಿಂದೆ ಮಾಡುತಾ | ಇಂದು | ಕೂಪ ಲಿಟ್ಟರೋ 3 ಉಡಗಿ ಬಿಟ್ಟು ಹುಡಿಯಹಚ್ಚಿ ಜಡಿಯಬಿಟ್ಟು ಸಿದ್ಧಗಾಗಿ | ಪೊಡವಿಲಿನ್ನು ಲಾಭಾ ಲಾಭಾ ನುಡಿಯ ಹೇಳುವಾ | ತುಡುಗರಿಗೆ ಹೋಗಿಕಾಲ ವಿಡಿದು ಗೋಂದಲ್ಹಾಕುವರು | ಕಡಲಶಯನನ ಭಜಿಸದೆವೆ ಅಡಲು ಬಿಟ್ಟು ಹೋದರೋ 4 ಸಿರಿಯ ಸುಖಗೀಪರಿ ಪರಿಯ ವೃತ ತಪದಿಂದಾ | ಚರಿಸಿ ನೋಡು ಕಣ್ಣು ವಿದ್ದು ಕುರುಡರಾದರೋ | ಗುರುಮಹಿಪತಿ ಸ್ವಾಮಿ ಚರಣ ನಂಬಿಯಚ್ಚರದಿ | ನಿರಪೇಕ್ಷ ಭಕ್ತಿಯಿಂದಾ ತರಣೋಪಾಯ ನೋಡರೋ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಕ್ಷತ್ರ ರಮಣ ನಯ್ಯನಿಗೊಲಿದು ಶರವನಿತ್ತೆ | ನಕ್ಷತ್ರ ದೊಲ್ಲಭನ ತಮ್ಮನ ಸುತನ ಸುಟ್ಟೆ | ನಕ್ಷತ್ರ ಇಲ್ಲದವನ ವೈರಿಗಮನನ ತಾತ | ನಕ್ಷತ್ರ ಕಾಂತಧರನೇ || ನಕ್ಷತ್ರ ಜಾತ - ನಗ್ರಜನ ಮಸ್ತಕವ ತರಿದೇ | ನಕ್ಷತ್ರ ಸಹಸ್ರ ಉಳ್ಳವನ ದ್ವಾರವನು ಕಾಯ್ದೆ | ನಕ್ಷತ್ರ ನೀನೇ ಇಂದ್ರಾದಿ ದೇವತೆಗಳಿಗೆ ಗುರುಮಹಿಪತಿಸ್ವಾಮಿ | ನಕ್ಷತ್ರ ಭೂಷಸಲಹೋ 1
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಡಿ ನೀರೇ ಪೋಪಾ ದೇವಿ ಇದ್ದೆಡೆಗೆ| ಕಡು ಕೋಪವ್ಯಾಕ ಶ್ರೀರಮೆ ಕೂಡ ಎನಗೆ ಪ ಫುಲ್ಲ ಲೋಚನೆ ಕುಂದರದನೆ ಸುಫಣಿ ವೇಣಿ| ಮಲ್ಲಿಕಾ ಮಂದಸ್ಮಿತೆ ಚಲ್ಪಕದಪು| ಬಿಲ್ಲು ಕಾಮನ ಸೋಲಿಪ ಭ್ರೂಲತೆಯುಳ್ಳ| ಸಲ್ಲಲಿತಾಂಗಿಯಾವಾಗ ಕಂಡೆಪೆನೆ 1 ಹುಣ್ಣಿಮೆ ಚಂದ್ರನ ಮಂಡಲ ಪೊಳೆವಾ|ಪೊಂ| ಬಣ್ಣವದನೆ ಮಹಾಸಿಂಹನ ಜರೆವಾ| ಸಣ್ಣ ನಡುವಿನಿಂದೊಪ್ಪುವ ಸಿರಿಯನು| ಕಣ್ಣಾರೆನೋಡಿ ಮತಾಡುವೆ-ನೇಳೆ 2 ಬರಬಾರದು ದೇವಿಯಗಲಿ ಬಂದರ| ಸ್ಥಿರವಾಗದು ಅರಫಳಿಗೆನ್ನ ಮನಸು| ಗುರುಮಹಿಪತಿ ಸುತ ವರದ ದೇವತೆಯಾಗಿ| ಧರೆಯೊಳು ಮೆರವಾ ಶ್ರೀ ಲಕ್ಷೀಯ ತೋರೆ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಂದಕಂದನ ನೋಡಿರೇ| ಅಂದದಿ ಛಂದದಿ ಪಾಡಿರೇ ಪ ದುಡುದುಡುಕೆಂದು ಕಡೆಯಲು ಗೋಪಿ| ಒಡನೊಡನಾಲಿಸಿ ಶಬ್ದವಾ|| ದುಡುದುಡು ಬಂದ ಕಡಗೋಲ ಪಿಡಿದು ಬಿಡದೆವೆ ಬೆಣ್ಣೆಯ ಬೇಡುವಾ1 ಅಂದುಗೆ ಗೆಜ್ಜೆಗಳಾ| ಘಿಲು ಘಿಲುಕೆಂದು ನುಡಿಸುವಾ| ಎಳೆಯಳೆಗೆಳೆರ ಮೇಳದಲಾಡಿ| ನಲಿನಲಿದಾಡುತಲೊಪ್ಪುವಾ 2 ಅಚ್ಚರಿ ಬಗೆಯಲಿ ಗುರುಮಹಿಪತಿ ಪ್ರಭು ಸಚ್ಚರಿತಾಮೃತ ಬೀರುವಾ|| ಪಟ್ಟದ ಬೊಂಬೆಯ ನಿಚ್ಚಳ ಭಾಸುವ| ಅಚ್ಯುತನಾಕೃತಿ ದೋರುವಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಂಬು ಹರಿಯ ಎನ್ನ ಮನವೇ ಪ ಸುರಪತಿ ಮುಳಿಯಲು ಸಕಲ ಗೋವಳರನು| ಹೊರೆದನು ಕರದೆತ್ತಿ ಗಿರಿಯಾ 1 ಭಕುತಿಲಿ ಶರಣು ಬರಲು ಸುದಾಮನು| ಸಕಲ ಸುಖವನಿತ್ತಾ ದೊರೆಯಾ2 ಗುರುಮಹಿಪತಿ ದೀನೋದ್ಧಾರನು| ಮುರ ಅರಿಯಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನರ ಹರಿನಾಮವ ನೀ ನೆನೆದರೆ| ಧರಿಯೊಳು ಸಾಲದೇ ಇಹಪರ ದೋರದೆ| ಬರದೇ ಸಾಯಾಸ ಬಡುವರೇ ಪ ಆದಿ ಯುಗಂಗಳಲಿ ತಾಪಸರು| ಸಾದರ ಬಹುದಿನದಿಂದಾ| ಸಾಧಿಸುವಗತಿ ಕೊಡುವ ನೊಂದೆ ಕ್ಷಣದಿ| ಶ್ರೀಧರ ತಾ ದಯದಿಂದಾ1 ಸಂತರ ಸಂಗದಿ ಶ್ರವಣವ ಮಾಡಿ| ಆಂತರ್ಭಾವನೆ ಬಲಿಸೀ| ಭ್ರಾಂತ ನೀನಾಗದೆ ಅನ್ಯ ಸಾಧನದಲಿ| ಸಂತತ ಕೀರ್ತನೆ ಬೆರೆಸೀ2 ಸಾವಿರಕೊಂದೆ ಈ ನುಡಿ ನಿಜವೆಂದು| ಸಾವಧವನಾದವ ಮನುಜಾ| ಭಾವಿಸು ಗುರುಮಹಿಪತಿ ಪ್ರಭು|ನುಡಿಸಿದ| ಆವನಂಬವನೇ ದನುಜಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿನ್ನ ಸ್ವಹಿತ ಮಾಡೋ ಪ್ರಾಣಿ | ನಿನ್ನ ಸ್ವಹಿತ ಮಾಡೋ ಪ ಶರಣರ ಕೂಡಿ ಸ್ಥಿರ ಮನಮಾಡಿ | ಹರಿಯ ಕೊಂಡಾಡಿ ಪರಗತಿ ಬೇಡಿ | ಮರೆದು ಈಡ್ಯಾಡೀ 1 ಹಳೆಯ ದುಃಸಂಗಾ ಕಳೆದಂತರಂಗಾ | ದೊಳು ಧ್ಯಾನದಂಗಾ ಬಲಿಯಲು ರಂಗಾ | ಹೊಳೆವ ಕೃಪಾಂಗಾ 2 ಸಂದೇಹಲಿಂದು ಧರೆಯೊಳು ಬಂದು | ಮರೆವದು ಕಂಡು ಗುರುಮಹಿಪತೆಂದು ಗುರುತಕ ಹೊಂದು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿನ್ನವನೆನಿಸಿದಾ ಮಾನವನಿಂಗೆ ಇನ್ನು ಭವಭಯ ಉಂಟೇ ಭಕುತ ವತ್ಸಲ ಕೃಷ್ಣಾ ಪ ಶ್ರವಣ ದರಹು ಇಲ್ಲಾ ನವವಿಧ ಭಜನಿಲ್ಲಾ ಕವಿತದನುಡಿಯ ಚಾತುಯ್ರ್ಯವಿಲ್ಲಾ ತವಚರಣವನಂಬಿ ಅವನಿಯೋಳಗನಿಶಿ ದಿವಸದಿ ಅಚ್ಯುತಾನಂತ ಗೋವಿಂದ ಯನುತಲಿ 1 ಘನ್ನ ವಿರಕ್ತಿಯಿಲ್ಲಾ ಮನ್ನಣೆಯ ತಪವಿಲ್ಲಾ ಉನ್ನತ ದ ವ್ಯತಶೀಲ ಕರ್ಮವಿಲ್ಲಾ ಅನ್ಯದೈವ ಕೆರಗದೆ ನಿನ್ನ ನಾಮ ನಿನ್ನ ಮುದ್ರೆ ನಿನ್ನವರಪರಿಚಾರ ತನದಲ್ಲಿ ರಮಿಸುತಾ 2 ಮರೆದೊಮ್ಮೆನೆನೆದರೆ ಸರಿವದಘರಾಶಿ ಅರಿದೊಮ್ಮೆನೆನೆಯಲು ಗತಿಸಂಪದಾ ದೊರೆವುದೆನುತಶೃತಿ ನಿರುತ ಸಾರುತಲಿದೆ ಗುರುಮಹಿಪತಿ ಪ್ರಭು ಎನ್ನನುದ್ದರಿಸುದೈಯ್ಯಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೀ ಯಾಕ ಮನವೇ ಚಿಂತಿಸಿ ಬಳಲುವೆ ಬರಿದೇ | ಶ್ರೀಯರಸನ ಮೊರೆ ಹೋಗದೇ ಪ ಸಾಧುರಾ ಸಂಗ ಜರಿದು ಕುಜನರ ನೆರೆವಿಡಿದು | ಮೇದಿನಿಯೊಳು ನಿನ್ನ ನೀ ಮರೆದು 1 ಇರಲು ಮುಳ್ಳಿನಾಗ್ರದಲಿ ಹೀನ ಕೀಟಕಾವಳಿ | ಪೊರೆವಾನಿತ್ತು ಆಹಾರದಯಲೀ 2 ಮನುಜರಿಗೆ ತಲೆವಾಗಿ ಗೇಣು ವಡಕಲಾಗಿ | ಮನಸಾ ಹಿಡಿವರೇ ಪರರು ಹೋಗಿ 3 ಹುಟ್ಟಿಸಿದಾ ದೇವನು ಹುಲ್ಲು ಮೇಯಿಸುವನೇನು | ಅಷ್ಟಾಸಾಯಸ ಬಡದಿರು ನೀನು 4 ಅನುದಿನ ಗುರುಮಹಿಪತಿ ಚರಣಾ | ತಂದಿದಿರುಡುವ ನಿಧಾನಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೀಡೆಲೋ ಶ್ರೀರಂಗಾ ನಿನ್ನ ದಾಸರ ಸಂಗಾ ಪ ಕೂಡಿಸಿ ತವ ಚರಿತಾಮರ ಗಂಗಾ | ಮಾಡುವದು ಭವಭಂಗಾ1 ಮೂಡಲುದಯದಲಿ ಜ್ಞಾನಪತಂಗಾ | ಓಡುದು ತಮ ಅಂತರಂಗಾ 2 ಸುಗಮದಿ ಗುರುಮಹಿಪತಿ ಪ್ರಭು | ಕಂಗಳಿಗೆ ದೋರುವುದು ಸುಖದಂಗಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೀರೇ ದÉೂೀರೆ ದೋರೆ ರಂಗನಾ| ಕರೆ ತಾರೇ ಮುನಿಜನ ಸಂಗನಾ ಪ ಶರಣ ರಕ್ಷಕ ನೆಂಬೋ ಬಿರುದವ ಸಾರಲು | ಮೊರೆಯಾ ಹೊಕ್ಕೆನು ಕೇಳಿ ಬಂದುನಾ1 ಜ್ಞಾನ ಭಕುತಿಗಳ ಏನೇನರಿಯದ | ಮಾನಿನಿ ನೋಡುವರೇ ಅವಗುಣಾ 2 ಗುರುಮಹಿಪತಿ ಸುತ ಪ್ರಭು ಕರುಣಾಕರ | ನೆನದನು ಮೊರೆಕೇಳಿ ಇಂದಿನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೋಡಿರೈ ಜನಾ ರಂಜನೆಯಲ್ಲಿ | ನೋಡಿರೈ ಜನಾ | ಮಾಡದೆ ಹಿರಿಗುರು ಭಕ್ತಿಯ ಶೀಲದಿ | ರೂಢಿಯ ಡಂಭಕ ಹರಿದಾಡುವದು ಪ ಸಾಧು ಸಂತರ ಮನೆಯಲ್ಲಿ | ಆದರವಿಲ್ಲಾ ಮನದಲ್ಲಿ | ಮೇದಿನಿಯಲಿ ನುಡಿಸಿದ್ಧಿಯ ಹೇಳಲು | ಸಾಧಿಸಿ ಹೋಗುತ ಬಾಗುತಲಿಹುದು 1 ಚಂದನವಿಡಿದು ತೆಯ್ವಲ್ಲಿ | ಒಂದು ಬಾರದು ನೊಣವಲ್ಲಿ | ಕುಂದದೆ ಎಂಜಲ ತೊಳೆವಾಸ್ಥಳದಲ್ಲಿ | ಸಂದಿಸಿ ಮುಕುರುವ ಸಂದಲಿ ಯಂದದಿ 2 ಪರಗತಿ ಸಾಧನ ವರಿಯರು | ಬರಿದೆ ಭ್ರಾಂತಿಗೆ ಬೆರೆವರು | ಗುರುಮಹಿಪತಿಸುತ ಪ್ರಭು ಕಲ್ಪತರು | ಸೇರದೆ ಬೊಬ್ಬುಲಿ ಮರಕೆಳಗಾಡುವ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೋಡು ನೋಡು ನಿನ್ನ ಹಿತವಾ ಪ ಇಂದು ನರದೇಹದಲ್ಲಿ ಬಂದುದೇನೋ | ಒಂದು ಪಥವರಿಯದಾ ಛಂದವೇನೋ ಅ.ಪ ಗುರುವಿನಂಘ್ರಿಯ ಕಂಡ ಗುರುತ ಅನುಭವನುಂಡ ಸೈಸ್ಯೆ | ಕರುವೇ ಬಾರೆನ್ನುತಾ ಸೈಸ್ಯೆ | ಶರಣ ಬಾರೆನ್ನುತಾ ಸೈಸ್ಯೆ | ಹರಿಯ ಭಕ್ತ ನೆನ್ನುತಾ ಧರಿಯೊಳ್ಹೀಂಗ ಹಿರಿಯರಿಂದ | ಕರಿಸ ಕೊಳ್ಳಲಾಗದೇ | ಬರಿದೆ ಭ್ರಾಂತಿಗೆ ಬಿದ್ದು | ಬರಡ ಜನ್ಮ ಮಾಡ ಬ್ಯಾಡಾ 1 ನೀಗಿ ಕೇಳು ಕೇಳು | ಆದಿ ಸನ್ಮಾರ್ಗವ ಕೇಳು ಕೇಳು | ಸಾಧನವ ಬಲಿಯೋ ನೀ | ಕಂದ ಭೂಮಿಯ ಮೇಲೆ ಹನಿ ಮಾಡದೇ 2 ಗುರುಮಹಿಪತಿಸ್ವಾಮಿ ಅರ್ಹವಿನೊಳಗೆರಕವಾದ ಧೀರ ಧೀರ| ನೀರು ಪದ್ಮ ಹೋಲುವಾ ಎರಡು ಸಮನಿನಿಸಿ ಸುಖ | ಭರಿತರಾದ ಪರಿಯಲಿ ಹರಿಯ ಧ್ಯಾನ ಬಲಿಯೋ ಮೈಯ್ಯ | ಮರೆಯಬೇಡಾ ಮನವೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೋಡೊ ನೋಡೋ ನಿನ್ನೊಳು ನಿಜಾ ಪ ಮೂಢತನವ ಬಿಟ್ಟು ಕೂಡಿ ಭಾವ ಭಕ್ತಿಯಾ | ಪಾಡಿ ಕೊಂಡಾಡಿ ಸೂರ್ಯಾಡೆಲೋ ಹರಿನಾಮಾ ಅ.ಪ ನಾನು ನನ್ನದು ಯಂದು ಹೀನ ವೃತ್ತಿಗೆ ಬಿದ್ದು | ನಾನಾ ಬವಣೆಯಲ್ಲಿ ತೊಳಲುತ ತೊಳಲುತ | ಗಳೆವರೇ ದಿನವನು 1 ಸನ್ನುತ ಗುರುಪಾದ ಮನ್ನಿಸಿ ಪಡೆಯಲೋ ಬೋಧಾ | ಬನ್ನ ಬಡುವದೇನು ಕಣ್ಣದೆರೆನ್ನಾರೆ ತನ್ನತಾ ಮರೆವರೆ 2 ಗುರುಮಹಿಪತಿ ಸ್ವಾಮಿ ಸುರಮುನಿಜನ ಪ್ರೇಮಿ | ಮೊರೆ ಹೊಕ್ಕವರ ಕೈಯ್ಯಾ ಜರಿಯೂತಾ ಮರಿಯಾ | ನೀ ನರಿಯದೆ ಕೆಡಬ್ಯಾಡಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು