ಒಟ್ಟು 37 ಕಡೆಗಳಲ್ಲಿ , 12 ದಾಸರು , 37 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶರಣಾಗತ ರಕ್ಷಾಮಣಿಯೆ ಶ್ರೀ ಹರಿಯೆ ಪ ಶರಣಾಗತ ಜನ ವರ ರಕ್ಷಾಮಣಿಯೆಂಬ ಬಿರುದಿನಿಂದಲಿ ಮೆರೆವ ಕರುಣಾ ಭರಣ ಕಾಮಿತ ವರಪ್ರದಾಯಕ ಅ.ಪ. ಜನನ ಮರಣ ರಹಿತ ಜಗದ ಜನ್ಮಾದಿ ಕರ್ತ ಜನುಮ ಜನುಮದಲ್ಲಿ ಜಗದ ಜೀವರಿಗೆಲ್ಲಾ ಅನಿಮಿತ್ತ ಬಂಧುವೆಂದು ನಿನ್ನಯ ಪಾದ ವನಜಗಳನು ನಾವಿಂದು ನಂಬಿಹೆವಿನ್ನು ವನಜನಾಭನೇ ನೀ ಬಂದು ಕಾಯಬೇಕೆಂದು ತನುಮನಂಗಳ ನಿನಗೆ ಒಪ್ಪಿಸಿ ಅನುನಯದಿ ಶಿರ ಮಣಿದು ಬೇಡುವೆ ಅನಘ ಅನುಪಮ ಗುಣಗಣಾಂಬುಧಿ ಅನಿಮಿಷೋತ್ತಮ ಅಪ್ರಮೇಯನೆ 1 ಕಾಮಜನಕ ಪೂರ್ಣಕಾಮ ಆಶ್ರಿತ ಜನ ಕಾಮಧೇನುವೆ ಕೋಟಿ ಕಾಮಲಾವಣ್ಯನೆ ಶ್ರೀ ಮನೋಹರ ಗಂಭೀರ ಸುರುಚಿರ ಘನ ಸನ್ನುತ ಮಹಿಮ ಸಾಮಜನರ ಉದ್ಧಾರ ಭಕ್ತ ಮಂದಾರ ಸಾಮಗಾನ ಪ್ರೇಮ ಜಗದಭಿ ರಾಮ ರಾಕ್ಷಸ ಭೀಮ ಮಂಗಳ ನಾಮ ಸುರಮುನಿ ಸ್ತೋಮ ಸನ್ನುತ ಸ್ವಾಮಿದೇವ ಲಲಾಮ ನಮೊ ನಮೊ 2 ಮಾಧವ ಅರ ವಿಂದಲೋಚನ ಪೂರ್ಣಾನಂದ ಸ್ವರೂಪನೆ ಎಂದೆಂದು ನೀನಲ್ಲದೆ ಗತಿ ಎಮಗಿಲ್ಲ ವೆಂದು ನಿನ್ನನು ಬಿಡದೆ ಕರಿಗಿರೀಶನೆ ತಂದೆ ಯೆಮ್ಮಯ ಕುಂದುಗಳ ನೀ ನೊಂದನೆಣಿಸದೆ ಬಂದು ಸಲಹುವು ಇಂದು ಕರುಣಾ ಸಿಂಧು ನತಜನ ಬಂಧು ನರಹರಿ3
--------------
ವರಾವಾಣಿರಾಮರಾಯದಾಸರು
ಶ್ರೀ ಲಲಾಮನೆ ನಿನ್ನ ಚರಣಾಬ್ಜಗಳಿಗೆ ನಮೊ ನೀಲಮೇಘಶ್ಯಾಮ ನಿರುಪಮ ತ್ರಿಧಾಮ ಪ ಮೂಲಕಾರಣ ನಿನ್ನ ಹೊರತಿನ್ನು ಕಾಯುವರು ಮೂರ್ಲೋಕದೊಳಗಿಲ್ಲ ಮುರಹರ ಮುಕುಂದ ಅ.ಪ. ನಿತ್ಯ ಕಲ್ಯಾಣಗುಣ ಪೂರ್ಣ ಜಲಜನಾಭನೆ ದೇವಾ ಜಲಧಿಶಯನ ಜಲಜಜಾಂಡವ ಸೃಷ್ಟಿ ಸ್ಥಿತಿ ಪ್ರಳಯ ಕರ್ತ ನಿನ್ನ ಅಪ್ರಮೇಯ ಸ್ವರೂಪ 1 ಕುಂಭಿಣಿಯ ಪಮಾಣುಗಳನಧಿಕ ಯತ್ನದಲಿ ಅಂಬುಧಿಯ ಕಣಗಳನು ಎಣಿಸಬಹುದು ಅಂಬುಜಾಕ್ಷನೇ ನಿನ್ನ ಆನಂದ ಮೊದಲಾದ ಗಂಭೀರ ಗುಣಗಳನು ಎಣಿಸಲಾರಿಗೆ ಸಾಧ್ಯ2 ಪರಮಾತ್ಮ ಪರಂಜ್ಯೋತಿ ಪರಮ ಪಾವನರೂಪ ಪರಿಪೂರ್ಣ ಆನಂದ ಪುರುಷೋತ್ತಮ ಕರಿರಾಜವರದ ಶ್ರೀ ಕರಿಗಿರೀಶನೆ ನಿನ್ನಚರಣ ಸೇವಕನೆಂದು ಕರಪಿಡಿದು ಕಾಯೊ 3
--------------
ವರಾವಾಣಿರಾಮರಾಯದಾಸರು
ಸಾರಸನಯನ ನಮೋ ನಮೋ ಪ ನಾರಾಯಣ ಗೋವಿಂದ ನಮೋ ಅ.ಪ. ದೀನ ಜನಾವನ ದಾನವ ಮಥನ ಶ್ರೀ ನಿಕೇತನ ಕೌಸ್ತುಭಾಭರಣ 1 ದಾಮೋದರ ದುರಿತಾರಿ ಪರಾತ್ಪರ ಹೇಮಾಂಬರಧರ ವನಮಾಲಾಧರ 2 ಸಾರಸಾಪ್ತನು ಸಾರುತಿಹನು ತವ ಸಾರಸಪಾದದ ಚಾರುದರುಶನಕೆ 3 ಮಾರ್ತಾಂಡನ ಬಲು ಚಂಡಕಿರಣವೆಮ್ಮ ನೇತ್ರಪಟುತ್ವ ಕುಂದಿಸುವುದು ಕೇಳ್ 4 ತರಣಿ ಪ್ರಕಾಶದಿ ತಪಿಸುತಿಹೆವು ನಾವ್ ಪೊರೆವುದೆಮ್ಮನು ಕರಿಗಿರೀಶನೆ 5
--------------
ವರಾವಾಣಿರಾಮರಾಯದಾಸರು
ಸಿರಿದೇವಿ ವರಬೇಗ ಕರುಣಿಸೊ ದಯದಿಂದ ಶರಣಾಗತ ಪರಿಪಾಲನೆಂಬಿ ಘನ ಬಿರುದಿಹದೊರೆ ನರಹರಿಕರುಣಾಕರ ಪ. ಕರಿರಾಜ ಮೊರೆಯಿಡುವ ಸ್ವರವ ಕೇಳುತಲಂದು ಸಿರಿಯೊಳಗುಸುರದೆ ಗರುಡನ ಪೆಗಲೇರಿ ಸರಸಿ ತಡಿಗೆ ಬಂದು ಕರಿಯನುದ್ಧರಿಸಿದಿ 1 ಘೋರ ಕಿಂಕರರಿದಿರು ಸಾರೆಜಾಮಿಳ ಭಯದಿ ನಾರಾಯಣನೆಂದು ಬೇಡಿದ ಮಾತ್ರದಿ ವಾರಿಜಭವಪಿತ ಪಾರಗಾಣಿಸಿದಿ 2 ತರಳ ಪ್ರಹ್ಲಾದನನು ಹಿರಣ್ಯಕನು ಬಾಧಿಸಲು ಹರಿ ನೀನೆ ಗತಿಯೆನುತಿರೆ ಕಂಭದಿ ಇರವ ತೋರಿ ಬಹು ಪರಿಯಲಿ ಸಲಹಿದಿ 3 ದುರುಳ ಸೀರೆಯ ಸೆಳೆಯೆ ಹರಿಕೃಷ್ಣ ಸಲಹೆನೆ ಸೀರೆಯ ಮಳೆ ಗರದಂದದಲಿತ್ತು ಪರಿಪಾಲಿಸಿದೆ 4 ಎನ್ನ ದುಷ್ಕøತದಿಂದ ನಿನ್ನ ನಾಮದ ಮಹಿಮೆ ಭಿನ್ನವಾಗುವದೆ ನಿನ್ನ ಪದಾಂಬುಜ ವನ್ನು ನಂಬಿದ ಮೇಲಿನ್ನುದಾಸೀನವೆ 5 ಪಾಕಶಾಸನನಘವ ನೀಕರಿಸಿ ಸಲಹಿದನೆ ಭೀಕರವಾಗದೆ ಸಾಕು ಸಾನುಭವ ಕೃಪಣ ದಯಾಕರ ಮೂರುತಿ 6 ಒಳಗೆ ನೀ ತಳಿಸುತಲಿ ಗಳಿಸಿ ಪಾಪಗಳೆನಗೆ ತಳಮಳಗೊಳಿಸುತ ಬಳಲಿಪದುಚಿತವೆ ಉಳುಹಿನ್ನಾದರು ನಳಿನನಾಭ ಹರಿ 7 ಬಡವ ಮಾನವನೊಬ್ಬ ಪಡೆಯ ತನ್ನವರನ್ನು ಕೆಡಲು ಬಿಡನು ಜಗದೊಡೆಯ ನೀ ಎನಗಿರೆ ತಡವ ಮಾಡಿ ಕಂಡ ಕಡೆಯಲಿ ಬಿಡುವುದೆ 8 ನಿನ್ನ ಕಥಾಮೃತಸಾರವನ್ನೆ ಶಿರದಿ ಧರಿಸಿ ಇನ್ನು ಬಳಲಿದರೆ ನಿನ್ನ ಘನತೆಗಿದು ಚೆನ್ನಾಗುವುದೆ ಪ್ರಸನ್ನ ಮುಖಾಂಬುಜ 9 ಮಾನಾಮಾನವ ತೊರೆದು ನಾನಾ ದೇಶದಿ ತಿರಿದು ಶ್ರೀನಿವಾಸ ನಿನ್ನಾನನ ದರುಶನ- ವನು ಮಾಡಿದ ಮೇಲೇನಿದು ತಾತ್ಸಾರ 10 ಆಶಾಪಾಶವ ಬಿಡಿಸಿ ಮನದಾಸೆಗಳ ಪೂರೈಸಿ ದಾಸದಾಸನೆಂಬೀ ಸೌಖ್ಯವನಿತ್ತು ಪೋಷಿಸು ಶೇಷಗಿರೀಶನೆ ತವಕದಿ 11
--------------
ತುಪಾಕಿ ವೆಂಕಟರಮಣಾಚಾರ್ಯ
ಸುಬ್ರಹ್ಮಣ್ಯನೆ ಶುಭ್ರವದನನೆ | ನಿರ್ಭಯವನುರೆ ಮಾಳ್ವನೆ | ಶರಣು ಶರಣು 1 ಕರುಣಿ ನಿತ್ಯಾನಂದನೆ | ಶರಣು 2 ರಾಮನ ತೋಷನೆ | ಶರಣು 3 ಶೋಕ ನಾಶ ಉಮಾ ಕುಮಾರಕ | ಶ್ರೀ ಕುಮಾರ ಗಿರೀಶನೆ | ಶರಣು 4 ದಾಸರಾ ಮನ ತೋಷನೆ 5
--------------
ಬೆಳ್ಳೆ ದಾಸಪ್ಪಯ್ಯ
ಹರಿಯೆ ಮೂಜಗದ ದೊರೆಯೆ ನಿನಗಿದು ಸರಿಯೆ ಪ. ಹರಿಯೆ ಮೂಜಗದ ದೊರೆಯೆ ನಿನ್ನನೆ ಮರೆಯಪೊಕ್ಕವರಲ್ಲಿ ಈ ಪರಿ ಬರಿಯ ಪಂಥದಿ ಮರುಗದಿರ್ಪುದು ಸರಿಯೆ ನಿನಗದು ಸರಸವಲ್ಲದುಅ.ಪ. ಉಕ್ಕಿನ ಕಂಬದಿಂದ ಉದಿಸಿ ಬಂದು ರಕ್ಕಸನುರವ ಸೀಳಿ ಕರುಳನು ಬಗೆದು ಉಕ್ಕುವ ಕೋಪದಿಂದ ರಕುತವು ಸುರಿಯೆ ಭಕ್ತ ಪ್ರಹ್ಲಾದನಾದರದಿ ಕಾಯ್ದು ಭಕ್ತ ವತ್ಸಲನೆನಿಸಲಹುದು ಶಕ್ತಿಹೀನತೆಯಿಂದ ಮರೆಹೊಕ್ಕ ಎನ್ನನು [ಕಾಯು]ವುದು 1 ಒಪ್ಪಿಡಿಯವಲಕ್ಕಿಯ ಒಪ್ಪಿಸಿನಿಂದ ವಿಪ್ರನ ನಲವಿಂದ ನೋಡುತಲಂತು ವಿಪುಲಸಂಪದವನ್ನು ಕರುಣಿಸಿದಂಥ ಅಪ್ರತಿಮ ಸಾಹಸಿಯೆನುತೆ ನಿನ್ನೊಳು ತಪಿಸಿ ಬೇಡುವ ಎನ್ನೊಳೀಪರಿ ಒಪ್ಪದೊಪ್ಪದೆನ್ನಪ್ಪ ಕೇಳಿದು ಸರಿಯೇ ಶ್ರೀನರಹರಿಯೇ 2 ಮಾನಿತÀಧ್ರುವ ಬಾಲನಂ ಮನ್ನಿಸಿ ಪೊರೆದೆ ಮಾನಿನಿ ಪಾಂಚಾಲಿಯ ಮಾನದಿ ಕಾಯ್ದೆ ಸಾನುರಾಗದಿಂ ಗಜನಂ ಉದ್ಧರಿಸಿದೆ ಕ್ಷೋಣಿಯೊಳಗತಿ ದೀನರಾದರ ಸಾನುರಾಗದಿ ಪೊರೆವ ಶ್ರೀಧರ ದಾನವಾಂತಕ ಶೇಷಗಿರೀಶನೆ ಸೂನುವೆಂಬಭಿಮಾನ ನಿನಗಿರೆ [ಮಾಣದೆನ್ನನು ಕಾಯೊ] ಹರಿಯೇ ಶ್ರೀನರಹರಿಯೇ3
--------------
ನಂಜನಗೂಡು ತಿರುಮಲಾಂಬಾ
ಸಾಧನ ದೇಹವಿದು62-3ಸಾzನ ದೇಹವಿದುಶ್ರೀ ಪದುಮೇಶ ದಯದಿ ಕೊಟ್ಟ ದೇಹವಿದು ಪವಿಹಿತಾವಿಹಿತವು ಈರ್ವಿಧ ಕರ್ಮದಿವಿಹಿತವ ಪಿಡಿದು ಅಕಾಮ್ಯದಿ ಸಮ್ಯಕ್ ಆಚರಿಸಿಅಹಿಪಶಯ್ಯನ ಸನ್ಮಹಿಮೆಗಳರಿತು ವರಾಹನ ದಯದಲಿ ಪರಸುಖ ಪೊಂದಲು 1ಬೇಸರ ತೊರೆದು ಸುಶಾಸ್ತ್ರವನೋದಿಸಾಸಿರ ನಾಮನಭಾಸುರಗುಣಕ್ರಿಯರೂಪಗಳಈಶನ ದಯದಿ ಸದ್ಯೋಚಿಸಿ ಹಿಗ್ಗುತವಾಸುದೇವನೆ ಸರ್ವೇಶನೆಂದರಿಯಲು 2ವಿಷಯೀಕ್ಷಣಗಳು ಕ್ಷಣಸುಖವೀವುವುಶೇಷಗಿರೀಶನೆ ಅಕ್ಷಯಸುಖದನು ಸುಖಮಯನುದೋಷದೂರ ಶ್ರೀ ಲಕ್ಷ್ಮಿಯ ರಮಣನೆಪೋಷಕ ಮನೋಗತ ತಿಮಿರಕೆ ಪೂಷನು 3ತಾರಕಗುರುಉದಾರ ಸುಮನದಲಿದಾರಿಯ ತೋರಿಸಿ ಉದ್ಧರಿಸಲು ಬಹು ದಯದಿವಿಧಾತೃಸಮೀರಸುಮೇಧರು ಚಿಂತಿಪವಾರಿಧಿಶಯ್ಯ ಪರೇಶನು ತೋರುವ 4ಸಪ್ತ ಸುಸ್ಥಾನದಿ ಮರುತಾದಿಗಳೊಡೆಗುಪ್ತನಾಗಿಪ್ಪ ನಿರ್ಲಿಪ್ತ ನಿರಾಮಯ ಶ್ರೀಕಪನುಸುಪ್ತಿಜಾಗೃತ ಸ್ವಪ್ನಾದಿ ಕಾಲದಿ ಕಾಯುವಆಪ್ತ ಸುಹೃದನಿವಗಾರು ಈಡಿಲ್ಲವು 5ಪಂಚ ಸುನಾಡಿಯೋಳ್ ಪಂಚ ಸುವರ್ಣದಿಪಂಚ ಸುರೂಪ ಸ್ವತಂತ್ರನು ಇರುತಿಹ ಶ್ರೀಹರಿಯುವಿರಿಂಚಸಮೀರಸುಮೇಧರು ಬಹು ವಿಧಚಿಂತಿಸಿ ನಮಿಪ ಪ್ರಪಂಚದ ಒಡೆಯನು 6ಪದುಮದ ದಳಗಳು ಐದು ಮೂರುಂಟುಅದರ ಮೂಲದಿ ಇಹ ಸದಮಲ ಲಕ್ಷ್ಮೀಶಬಾಧಿಪ ಕರ್ಮವ ಸುಡುವ ಸಂಕರುಷಣಸದಮಲ ಪೊರೆಯುವ ಒಳಹೊರಗೆ 7ಶ್ರವಣ ಮನನ ಸುಧ್ಯಾನದ ಬಲವುಶ್ರೀಶನೊಳ್ ಭಕುತಿಯು ನಿಶ್ಚಯ ಸಾಧನ ಗುರುಮಯದಿಶ್ರೀಶನ ಮಹಿಮೆಗಳರಿತು ಸದೃಷದಿಸುರತಟಿನಿಯಪೋಲು ಸರಿಪ ಪ್ರೇಮವೆ ಭಕ್ತಿ 8ಮುಕುತಿ ಕೊಡುವ ಜ್ಞಾನ ಭಕುತಿಲಿ ಬರುವುದುಸುಖಮಯ ಶ್ರೀಶನ ದಯವು ಇಲ್ಲದೆ ಇದು ಸಿಕ್ಕದಯ್ಯವಿಕಸಿತಾಬ್ಜಜತಾತಪ್ರಸನ್ನ ಶ್ರೀನಿವಾಸಶ್ರೀಕರ ವ್ಯಾಸ ರಾಮ ಕೃಷ್ಣ ನೃಹರಿ ಕಾಯ್ವ 9
--------------
ಪ್ರಸನ್ನ ಶ್ರೀನಿವಾಸದಾಸರು