ಒಟ್ಟು 39 ಕಡೆಗಳಲ್ಲಿ , 13 ದಾಸರು , 34 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶರಣು ಶರಣು ಶ್ರೀ ರಾಮಚಂದ್ರನೆ ಶರಣು ಸುರಮುನಿ ವಂದ್ಯನೆ ಪ. ಶರಣು ಶ್ರೀ ರಘುಕುಲಾಬ್ಧಿಚಂದ್ರನೆ ಶರಣು ಸದ್ಗುಣ ಸಾಂದ್ರನೆ ಅ.ಪ ಕಮಲನಾಭನೆ ಕಮಲನೇತ್ರನೆ ಅಮರವಂದಿತ ವಿಮಲಚರಿತನೆ ಕುಮುದಸಖಸಮಾನ್ಯನೆ 1 ಅಂಬುಜಾಸನ ಶಂಭುವಂದಿತ ಶಂಬರಾರಿಯ ಜನಕನೆ ಕಂಬುಕಂದರ ನಂಬಿ ಭಜಿಸುವೆ ಬೆಂಬಿಡದಲೆ ಪಾಲಿಸೈ 2 ಪಕ್ಷಿವಾಹನ ರಕ್ಕಸಾಂತಕ ಲಕ್ಷ್ಮೀರಮಣ ಶುಭಲಕ್ಷಣ ಲಕ್ಷ್ಮಣಾಗ್ರಜ ಸತ್ಯವಿಕ್ರಮ ರಕ್ಷಿಸೈ ಪುರುಷೋತ್ತಮ 3 ಪರಮಪಾವನ ಶೇಷಗಿರಿಯೊಳು ನಿರುತ ನೆಲೆಸಿಹ ಶ್ರೀಶಗೆ ಶರಣ ಜನರ ಸಚ್ಚರಿತೆಯೋದುವ ವರವ ಪಾಲಿಸು ದೇವನೇ 4
--------------
ನಂಜನಗೂಡು ತಿರುಮಲಾಂಬಾ
ಶೇಷಾದ್ರಿ ವಾಸಾ ಪಾಲಿಸೋ | ನಿನ್ನ ಶ್ರೀಪಾದದಾಸ ಜನರೊಳಗಾಡಿಸೊ ಪ ಭವ | ಪಾಶಗಳಳಿಯುತವಾಸಿಸೊ ಮನದಾ | ಕಾಶದೊಳಗೆ ಶ್ರೀಶಾವೃಷ್ಣೀಶ ಸರ್ವೇಶ - ಕೃತ ಖಳಕುಲ ಬಹುನಾಶ ಅ.ಪ. ಮದನ ಕೋಟಿ ಲಾವಣ್ಯಾ | ಶ್ರೀ ಭೂ ವರೇಣ್ಯಾಪದುಮೆ ಮನಮೋಹನಾ |ಮುದ ಮನದಲಿ ಮನದವಕಾಶದಿ ಪೊಳೆಸುರಭೂಜ | ರವಿತೇಜ | ಮಹ ಓಜ ವೈರಾಜಾ 1 ತರುಜಾತಿ ಫಲ ಸುಮನಾ | ಸುರರೀ ಭವನಾಧರಿಸಿ ಮೆರೆವ ಸುಜನಾ |ಗಿರಿಯೊಳು ನೆಲೆಸುತ - ಸುರರ ಸೇವೆ ವಿಸ್ತಾರಗಂಭೀರ ಮನೋಹಾರ - ಕೃತಕ್ರತು ಸಮ ಅಪಾರ 2 ಭಾರತೀಶ ಪ್ರಾಣಾಂತರ್ಗತ | ಕಾಮಿತದಾತಾಸಾರ ಸದ್ಗುಣ ಭರಿತಾ ||ನೀರಜಾಕ್ಷ ಗುರು | ಗೋವಿಂದ ವಿಠಲನೆಮೈದೋರೊ | ಮುದಬೀರೊ | ನಿನಗೆಲ್ಲು ಸರಿಯಾರೋ 3
--------------
ಗುರುಗೋವಿಂದವಿಠಲರು
ಶ್ರೀ ಶ್ರೀನಿವಾಸ ಭಕುತರ ಪೋಷ ಮಾಂ ಪಾಹಿ ಸುರೇಶ ಪ ಆರಾಧಕ ಪರಿವಾರವ ಪೊರೆಯಲು ಧಾರುಣಿಯೊಳು ಶಿರಿವಾರನಿವಾಸ ಅ.ಪ ವಾರಿಜೋದ್ಭವ ಮುಖಸುರ ಸಂಶೇವ್ಯಫಣಿ ರಾಜ ಸುಶಯ್ಯಾ ಸೇರಿಸೇವಿಪರಘ ತಿಮಿರಕೆ ಸೂರ್ಯ ನೀರದ ನಿಭಕಾಯ ಧಾರುಣಿ ಸುರಪರಿ ಗುರುಮೂರುತಿ ಪ್ರಿಯ 1 ಕಂದರ್ಪನಯ್ಯ ಕವಿಜನಗೇಯ ಬಂಧುರ ಶುಭನಿಲಯ ನಂದನಂದನ ಮಾಮುದ್ಧರ ಕೃಪಯಾನಾಮುಗಿವೆನು ಕೈಯ್ಯಾ ಇಂದಿಗೂ ಬುಧ ಜನರಿಂದ ವೈಭವದಿ ಸ್ಯಂದನವೇರಿದ ಸುಂದರಕಾಯಾ 2 ಇಳಿದೇವಾರ್ಪಿತ ಶ್ರೀ ತುಳಸಿಯ ಹಾರ ಪೀತಾಂಬರಧಾರ ಕುಂಡಲ ಮುಕುಟಾಲಂಕಾರ ಭೂಷಿತ ಶರೀರಾ ಜಲಧಿ ಶಯನ ಮಂಗಳ ರೂಪನೆಭವ ಕಲುಷ ವಿದೂರ 3 ಕೃಷ್ಣರಾಯಾನೆಂಬುವ ಸದ್ಭಕ್ತ ಇರುತಿರಲು ವಿರಕ್ತ ಸಾಷ್ಟಾಂಗ ನಮಸ್ಕøತಿ ಸೇವಾಸಕ್ತ ಗ್ರಾಮವ ರಕ್ಷಿಸುತ ನಿಷ್ಠೆಯಿಂದ ಮನಮುಟ್ಟಿ ಭಜಿಸುತಿರೆ ಥಟ್ಟನೆ ವಲಿದಖಿ ಲೇಷ್ಟ ಪ್ರದಾತಾ 4 ದೇಶಾದಾಗತ ಭಕುತರ ಅಭಿಲಾಷಾ ಪೂರೈಸಲು ಅನಿಶಾ ವಾಸಾ ಮಾಡಿದಿ ಗಿರಿಯೊಳು ಸರ್ವೇಶ ಕೊಡು ಸತ್ಸಹವಾಸ ದೇಶದಿ ಕಾರ್ಪರವಾಸ ಲಕ್ಷ್ಮಿನರಕೇಸರಿ ರೂಪನೆ ಶೇಷಗಿರೀಶ5
--------------
ಕಾರ್ಪರ ನರಹರಿದಾಸರು
ದಾಸ ಶೇಷಾದ್ರಿಯ ವಾಸ ತಿಮ್ಮಪ್ಪನ |ದಾಸನನು ಕರೆದೊಯ್ದು ||ಸಾಸಿರನಾಮ ವಿಲಾಸನ ಮೂರ್ತಿಯ |ಲೇಸಾಗಿ ತೋರೆನಗೆ ಪಬೆರಳು ಇಲ್ಲದ ಕೈಯೊಳುಂಡು ಜೀವಿಸುವನ |ಶಿರದ ಅಂದದ ದೇವನ ||ಉರುವ ಶಾಪಕೆ ತಾನು ಕಿರಿದಾಗಿ ಇರುವನ |ಶಿರದೊಳು ಧರಿಸಿದನ ||ಕೊರಳ ಮಾಲೆಯ ಪೆಸರೊಪ್ಪಿದ ಗಿರಿಯೊಳು |ಸ್ಥಿರವಾಗಿ ನೆಲಸಿಪ್ಪನ ||ಕರುಣವಾರಿಧಿ ವೆಂಕಟೇಶನ ಚರಣವ |ಕರೆದೊಯ್ದು ತೋರೆನಗೆ 1ವಾರಿಯೊಳುದಿಸಿದ ನಾರಿಯ ಮಧ್ಯದಿ |ಏರಿಯೆ ಕುಳಿತವನ ||ವಾರಿಜವದನದಿ ತೋರಿದ ಸಾರದಿ |ಮೂರೊಂದು ಪೆಸರವನ ||ಮೇರುವಿನಗ್ರದಿ ಊರಿದ ಚರಣವ |ಸಾರಿದವರ ಜೀವನ ||ಊರಿಗೆ ಕರೆದೊಯ್ದು ಶ್ರೀ ವೆಂಕಟೇಶ ಪ-||ದಾರವಿಂದವ ತೋರೆನಗೆ 2ಸೋತ ಮಾನಿನಿಯೊಳು ಜಾತವಾಗಿಯೆ ಮೇಲೆ |ಮಾತೆಯ ಸಲಹಿದನ ||ನೀತಿ ತಪ್ಪಿಯೆ ನಡೆವ ವಾತಭಕ್ಷಕರನ್ನು |ಘಾತಿಸಿ ತರಿದವನ ||ನೂತನವಾಗಿಹ ನಾಮ ಶೈಲದ ಮೇಲೆ |ಕಾತರದೊಳು ನಿಂದನ ||ಪಾತಕನಾಶನ ಶ್ರೀವೆಂಕಟೇಶನ |ರೀತಿಯ ತೋರೆನಗೆ 3ಋಷಿಯ ಮಕ್ಕಳನೆಲ್ಲ ಹಸಿವಿಗೆ ಗುರಿಮಾಡಿ |ವಶತಪ್ಪಿ ನಡೆವವನ ||ಬಸಿರೊಳಗುದಿಸಿಯೆ ಬಿಸಿಯನೆಲ್ಲವ ಅಂದು |ಎಸೆವ ಮಹಾವೀರನ ||ಪೆಸರೊಳಗೊಪ್ಪಿದ ಹಸನಾದ ಗಿರಿಯೊಳು |ಕುಶಲದಿ ನಿಂದವನ ||ನಸುಮುದ್ದು ಶ್ರೀ ವೆಂಕಟೇಶನ ಚರಣದ |ಬಿಸರುಹ ತೋರೆನಗೆ 4ಪಾದನಾಲ್ಕನು ಮೋದಿನಿಯೊಳಗೂರಿಯೆ |ಆದರಿಸುತ ಬಪ್ಪನ ಮೇ ||ಲಾದ ಪಾದವ ನಾಲ್ಕು ಅಂತರಿಕ್ಷದ ಮೇಲೆ |ಕಾದು ಕೊಳ್ಳುತಲಿಪ್ಪನ ||ಆದಿಯ ನಾಮಕ್ಕೆ ಅದ್ರಿಯನೊಡಗೊಂಡು |ಹಾದಿಯನಿತ್ತವನ ||ಸಾಧಿಸಿ ಇಂತಹ ಶ್ರೀ ವೆಂಕಟೇಶನ |ಪಾದವ ತೋರೆನಗೆ 5ಆದಿನಾರಾಯಣನೆಂಬ ಪರ್ವತನು |ಭೇದಿಸಿ ನಿಂತವನ ||ಸಾಧಿಸಿ ಮುಂದಣ ವೆಂಕಟಾದ್ರಿಯ ಮೇಲೆ |ಪಾದವನೂರಿದನ ||ಮೇದಿನಿಯೊಳಗುಳ್ಳ ಸಾಧುಭಕ್ತರನೆಲ್ಲ |ಕಾದುಕೊಳ್ಳುತಲಿಪ್ಪನ - ವಿ ||ನೋದ ಮೂರುತಿಯಾದ ಶ್ರೀ ವೆಂಕಟೇಶನ |ಪಾದವ ತೋರೆನಗೆ 6ಅತ್ತೆಯ ವರಿಸೆಯೆ ಮೆತ್ತ ಅಳಿಯಗಾದ |ಪುತ್ರಿಯ ತಂದವನ ||ಉತ್ತಮವಾಗಿಹ ಮಗಳ ಸನ್ನಿಧಿಯಲ್ಲಿ |ನಿತ್ಯದೊಳಿರುತಿಪ್ಪನ ||ಬತ್ತಲೆಯಾಗಿಹ ಸತಿಯಳ ಸತ್ಯಕ್ಕೆ |ಪುತ್ರನೆಂದೆನಿಸಿದನ ||ಹತ್ತಿರ ಕರೆದೊಯ್ದು ಪುರಂದರವಿಠಲನ |ನಿತ್ಯದಿ ತೋರೆನಗೆ 7
--------------
ಪುರಂದರದಾಸರು