ಒಟ್ಟು 36 ಕಡೆಗಳಲ್ಲಿ , 20 ದಾಸರು , 35 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀನೆನ್ನ ಪೆತ್ತಿಲ್ಲವಂತೆ-ಅಮ್ಮಾ |ನಾನಿನ್ನ ಮಗನಲ್ಲವಂತೆ ||ಧೇನುಕಾಯುವರಿಲ್ಲವೆಂದು ನೀನು |ಸಾನುರಾಗದಿ ಸಲಹಿದೆಯಂತೆ 2ವಿಷವು ತುಂಬಿದ ಮೊಲೆಯ-ಕೊಟ್ಟ |ಅಸುರೆಯ ಸಂಹರಿಸಿದೆನಂತೆ ||ಅಸುರನಾದ ಶಕಟನನಾಕ್ಷಣದಲಿ |ಶಿಶುವಾಗಲೆ ಒರೆಸಿದೆನಂತೆ 3ವತ್ಸಾಸುರನನು ಕೆಡಹಿದೆನಂತೆ |ಕಿಚ್ಚನೆಲ್ಲವನು ನುಂಗಿದೆನಂತೆ ||ಕಚ್ಚಬಂದ ಕಾಳಿಂಗನಾ ಹೆಡೆ-|ಚಚ್ಚಿ ತುಳಿದು ಓಡಿದೆನಂತೆ 4ಕುಸುಮಗಂಧಿಯರಡುವ |ವಸನಕದ್ದು ಓಡಿದೆನಂತೆ ||ಹಸುಗೂಸು ಅಲ್ಲ ಇವ |ಅಸುರ ಮಗನು ಎಂತೆಂಬುವರೆ 5ಒರಳನೆಳೆತಂದು ಮತ್ತಿ-|ಮರವ ಮುರಿದೋಡಿದೆನಂತೆ ||ತರಳೆಯರ ವಸ್ತ್ರವ ಕದ್ದು |ತರುವನೇರಿದೆನಂತೆ 6ಪರಮಗಾಡಿಕಾರನಿವ |ಪುರಂದರವಿಠಲರಾಯ ||ತರುಣಿಯರ ವಂಚಿಸುತ್ತ |ಠಕ್ಕಿಸಿ ಪೋದನೆಂತೆಂಬುವರು7
--------------
ಪುರಂದರದಾಸರು
ನೋಡುವುದೆ ಕಣ್ಣು, ಕೇಳುವುದೆ ಕಿವಿ |ಪಾಡುವುದೇವದನಪಗಾಡಿಕಾರಶ್ರೀ ವೇಣುಗೋಪಾಲನ |ಕೂಡಿಕೊಂಡಾಡುವ ಸುಖದ ಸೊಬಗನು ಅ.ಪಎಳೆದುಳಸಿಯ ವನಮಾಲೆಯಿಂದೊಪ್ಪುವ |ಎಳೆಯ ಗೋವಳರೊಡನಾಡುವ |ತಳಿತ ತರುವಿನ ನೆಳಲಲ್ಲಿ ನಲಿವನ |ನಳಿನನಾಭನ ಮುದ್ದು ನಗೆಯ ಸೊಬಗನು 1ಅರಸಂಚೆಯೋಲು ಕುಣಿವ ನವಿಲಂತೆ ನಲಿಯುವ |ಮರಿಗೋಗಿಲೆಯಂತೆ ಕೂಗುವನ ||ಎರಳೆಯಂತೆ ಜಿಗಿಜಿಗಿದಾಡುವತುಂಬಿ|ಶಿರವ ತಗ್ಗಿಸುವಂತೆ ಝೇಂಕರಿಸುವನ 2ಮೊಲ್ಲೆಮಲ್ಲಿಗೆ ಜಾಜಿ ಪೂಮಾಲೆಗಳ ಧರಿಸಿ |ಚೆಲ್ವೆಯರಿಗೆ ಮುಡಿಸುವನ ||ಜಲಕೇಳಿ ವನಕೇಳಿ ಮೊದಲಾದಾಟಗಳಿಂದ |ಚೆಲ್ಲೆಗಂಗಳ ಮುದ್ದು ಘುಲ್ಲನಯನನ 3ಪೊಂಗೊಳಲೂದುತ ಮೃಗಖಗ ಜಾತಿಯ |ಸಂಗಡಿಸುತಲಿಪ್ಪನ ||ಅಂಗವ ಮರೆತು ನೂರಂಗನೆಯರಲಿ ಬೆಳು-|ದಿಂಗಳೊಳಗೆ ಕುಣಿದಾಡುವ ದೇವನ 4ಮುದುಕಿ ಕುಬ್ಜೆಯ ಡೊಂಕ ತಿದ್ದಿ ರೂಪಿಯ ಮಾಡಿ |ಸೆರಗಪಿಡಿಸಿ ಕೊಂಬನ ||ಕರುಣಾಕರ ಶ್ರೀ ಪುರಂದರವಿಠಲ |ಶರಣಾಗತ ರಕ್ಷಕ ರಮೆಯರಸನ 5
--------------
ಪುರಂದರದಾಸರು
ಲಕ್ಷ್ಮೀಕಾಂತ ಬಾರೋಶುಭಲಕ್ಷಣವಂತ ಬಾರೋಪಪಕ್ಷಿವಾಹನಾ ಬಾರೋ ಪಾವನಮೂರ್ತಿಬಾರೋಅ.ಪಆದಿಮೂಲವಿಗ್ರಹ ವಿನೋದಿ ನೀನೆ ಬಾರೋಸಾಧುಸಜ್ಜನ ಸತ್ಯಯೋನಿ - ದಾನಿ ನೀನೆ ಬಾರೋ 1ಗಾಡಿಕಾರಕೃಷ್ಣ ನಿನ್ನ ಬೇಡಿಕೊಂಬೆ ಬಾರೋರೂಢಿಮಾತನಾಡಿ ಸರ್ವ ರೂಢಿಗೊಡೆಯ ಬಾರೋ2ನಿನ್ನ ಪಾದಂಗಳ ನಾನು ಬಣ್ಣಿಸಿ ಕರೆವೆನು ಬಾರೋಪನ್ನಂಗ ಶಯನ ಸಿರಿ-ಪುರಂದರ ವಿಠಲ ಬಾರೋ 3
--------------
ಪುರಂದರದಾಸರು
ಸದ್ದು ಮಾಡಲು ಬೇಡವೊ _ ನಿನ್ನ ಕಾಲಿಗೆ |ಬಿದ್ದು ನಾ ಬೇಡಿಕೊಂಬೆ ಪನಿದ್ದೆಗೆಯ್ಯವರೆಲ್ಲ ಎದ್ದರೆ ನೀನು ಬಂ-|ದಿದ್ದದ್ದು ಕಂಡರೇನೆಂಬುವರೊ ರಂಗ ಅ.ಪಬಳೆ ಘಲ್ಲುಕೆನ್ನದೇನೊ-ಕೈಯ ಪಿಡಿದು |ಎಳೆಯದಿರೊ ಸುಮ್ಮನೆ ||ಮೊಲೆಗಳ ಮೇಲಿನ ಸೆರಗನೆಳೆಯಲು ಕೊ-|ರಳ ಪದಕಂಗಳು ಧ್ವನಿಗೆಯ್ಯವುವೊ ರಂಗ 1ನಿರುಗೆಯ ಪಿಡಿಯದಿರೊ - ಕಾಂಚಿಯದಾಮ|ಕಿರುಗಂಟೆ ಧ್ವನಿಗೆಯ್ಯದೆ? ||ಕಿರುದುಟಿಗಳ ನೀನು ಸವಿದು ಚಪ್ಪರಿಸಲು |ತರವಲ್ಲಗಂಡಮತ್ಸರವ ತಾಳುವನಲ್ಲ2ನಾಡ ಮಾತುಗಳೇತಕೊ - ಸಂಗೀತವ |ಪಾಡುವ ಸಮಯವೇನೊ ||ಗಾಡಿಕಾರಶ್ರೀ ಪುರಂದರವಿಠಲನೆ |ಪಾಡು ಪಂಥಗಳೆ ಒಡಗೂಡುವ ಸಮಯದಿ 3
--------------
ಪುರಂದರದಾಸರು
ಸಾಮಜಗಮನೆ ಕೇಳೀ ಮನ ನಿಲ್ಲದುಸ್ವಾಮಿಯ ಕರೆತಾರೆ ನೀರೆ ಪ.ಯಾತರ ಜನುಮ ಇನ್ಯಾತರ ಬಾಳುವೆಪ್ರೀತಿಯಿಲ್ಲವೆ ಎನ್ನಲ್ಲಿ ಅಗಲಿಧಾತುಗುಂದಿಹ್ಯದು ಮತ್ಯಾತಕೆ ಸಲ್ಲವಮ್ಮನಾಥನಿದಿರಿನಲ್ಲಾಸೆ ಉದಿಸೆ 1ಕಣ್ಣಕಜ್ಜಲನಿಲ್ಲದಿನ್ನೇನು ತರವಮ್ಮರನ್ನದುಡುಗೆಭಾರತೋರಪನ್ನಗವಾದವು ಎನ್ನ ಹೂವಿನಹಾರಮನ್ನಿಸಿ ಬರಲೊಲ್ಲನೆ ಎನ್ನೊಲ್ಲನೆ 2ಕೂಡಿದವಳ ಹೀಗೆ ಕಾಡಬಹುದೇನಕ್ಕಬ್ಯಾಡ ಕಠಿಣ ಮನಸುಮುನಿಸುನೋಡೆ ಪ್ರಸನ್ನವೆಂಕಟ ಗಾಡಿಕಾರನು ನೆರದುಆಡಿದನೆ ಕಾಂತೆ ಏಕಾಂತ 3
--------------
ಪ್ರಸನ್ನವೆಂಕಟದಾಸರು