ಒಟ್ಟು 37 ಕಡೆಗಳಲ್ಲಿ , 15 ದಾಸರು , 36 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹುಡುಕಿ ಕರೆತಾರೆ ಸಖಿ ಜಡಜನಯನ ಒಡೆಯನ್ಹಂಬಲ ಪಾದ ಗಡನೆ ಪೋಗಿ ಪ ಧ್ಯಾನಧೃಢ ಅವನು ಇರುವ ಸ್ಥಾನ ಪೇಳುವೆ ಜಾಣೆ ಕೇಳೆ ಹಗಲು ಇರುಳು ಖೂನವಿಲ್ಲವನಿಹ್ಯ ಸ್ಥಳದಿ ತಾನೆತಾನಾಗಿ ಸೂಕ್ಷ್ಮದಿ ಶೂನ್ಯ ಪೀಠದಿ ವಾಸಿಪ ಜಾಣನ ಜವದಿಂ ಪೋಗಿ 1 ಅರಿದು ಮರೆದಿರೆ ಅವನ ಗುರುತು ಒರೆಯುವೆ ಜರಾಮರಣಿವಲ್ಲವಗೆ ಧರಿಸಿರುವಂತವತಾರ ತಿರುಗಲು ಮೂಡವು ಅಡಿಗಳು ನೆರಳೇ ಇಲ್ಲವು ನಿಲ್ಲಲು ಶರೀರವಿಲ್ಲದೆ ತೋರುವ ಪರಮನ ತ್ವರಿತದಿ ಹಿಡಿದು 2 ಪ್ರೇಮ ಸುಂದರೀ ಅವನ ನಾಮ ಪೇಳುವೆ ನೇಮದಿಂದ ಕೂಗುತಿಹ್ಯವು ಸಾಮಯಜುರಾದಿ ವೇದವು ಆಮಹಮಹಿಮನ ಘನತರ ನಾಮದ ನೆಲೆಯೇ ಸಿಗದಿದೆ ಕಾಮಿನಿಯಂಥ ಸ್ವಾಮಿ ಶ್ರೀ ರಾಮ ಸದ್ಗುರು ಪ್ರಭುವಿನ 3
--------------
ರಾಮದಾಸರು
ಚಂದ್ರಗಾವಿಯನುಟ್ಟು ದುಂಡು ಮುತ್ತನೆಕಟ್ಟಿ|ಪೆಂಡೆಯರುಳಿಯನಿಟ್ಟು ||ಕೆಂದಾವಿನ ಹಾಲ ಹರವಿಯ ಹೊತ್ತುಕೊಂಡು |ಬಂದಾಳು ಬೀದಿಗಾಕೆ ಪಹಾಲು ಮಾರುವ ಧ್ವನಿ ಲಾಲಿಸಿ ರಂಗಯ್ಯ |ಮೇಲಿನ ಕೇರಿಯಲಿ ||ನಾಳೆ ನಮ್ಮನೆಯಲಿ ವೀಳೆ-ಪ್ರಸ್ತಗಳುಂಟು |ಹಾಲು ನಿಲ್ಲಿಸೆಂದನು 1ಕೊಂಡವನು ನೀನಲ್ಲ ಡಂಭಕರ ಮಾತೇಕೊ |ಗಂಡನುಳ್ಳವಳ ಕೂಡ ||ಮಂಡಲವಾಳುವ ಅರಸಿನ ಮುಂದೆ ಹೇಳಿ |ದಂಡವ ತೆರಸುವೆನೊ 2ಅಡವಿಹಂಬುಗಳಿಗೆ ಹೆಡಿಗೆ ಸುಂಕವು ಇಲ್ಲ |ತಡೆದವ ನೀನಾರೊ? ||ನಡೆ ಊರ ಮುಂದಕೆ ತಳವಾರರೈದಾರೆ |ಗಡನೆ ಪೇಳುವೆನೆಂದಳು 3ಬಲ್ಲೆ ಬಲ್ಲೆನೆ ನಿನ್ನ ಬಗೆಯ ಮಾತುಗಳೆಲ್ಲ |ಎಲ್ಲಿಹ ತಳವಾರನೆ ||ಅಲ್ಲದಿದ್ದರೆ ಬಂದು ವೀಳ್ಯವ ತಕ್ಕೊಂಡು |ಅಲ್ಲಲ್ಲಿ ದೊರದಿರೆ 4ಕೋಲು ಕೈಯಲಿ ಪಣೆಯಲಿ ಸಿರಿನಾಮವು |ಆಲದ ಮರದಡಿಯೆ ||ಕಾಲಮೊದಲು ಹಾಲ ಮಾರಿದ ಸುಂಕರೆ |ನಿಲ್ಲೆಂದು ಸೆರಗ ಪಿಡಿದ 5ಅಪ್ಪ ಸೆರಗ ಬಿಡೊ, ಅಣ್ಣ ಸೆರಗ ಬಿಡೊ |ಅಪ್ಪಯ್ಯ ಸೆರಗ ಬಿಡೊ ||ಅಪ್ಪನು ನಾನಲ್ಲ, ಅಣ್ನನು ಅಲ್ಲ ನಿ-|ಮ್ಮಪ್ಪನ ಅಳಿಯ ಕಾಣೆ 6ಮಾವ ಸೆರಗ ಬಿಡೊ,ಭಾವಸೆರಗ ಬಿಡೊ |ಭಾವಯ್ಯ ಸೆರಗ ಬಿಡೊ ||ಮಾವನು ನಾನಲ್ಲ, ಭಾವನು ನಾನಲ್ಲ |ಮಾವನ ಮಗನು ಕಾಣೆ 7ಅಣ್ಣ ಸೆರಗ ಬಿಡೊ, ತಮ್ಮ ಸೆರಗ ಬಿಡೊ |ಅಣ್ಣಯ್ಯ ಸೆರಗ ಬಿಡೊ ||ಅಣ್ಣಯ್ಯ ನಾನಲ್ಲ, ತಮ್ಮನು ಅಲ್ಲ ನಿ-|ಮ್ಮಣ್ಣನಭಾವಕಾಣೆ8ಕಂದ ಸೆರಗ ಬಿಡೊ, ತಂದೆ ಸೆರಗ ಬಿಡೊ |ಕಂದಯ್ಯ ಸೆರಗ ಬಿಡೊ ||ಕಂದನು ನಾನಲ್ಲ, ತಂದೆಯು ನಾನಲ್ಲ |ಕಂದನ ತಂದೆ ಕಾಣೆ 9ನೆತ್ತಿಮೇಲಿನ ಕೊಡ ಎತ್ತಿ ಈಡಾಡುತ |ಎತ್ತಿಕೊಂಡಳು ಕೃಷ್ಣನ ||ಭಕ್ತರ ಸಲಹುವ ಪುರಂದರವಿಠಲ |ವತ್ಸವೆಂಕಟರಾಯನ10
--------------
ಪುರಂದರದಾಸರು
ದಿಟ್ಟ ಮುಖ್ಯಪ್ರಾಣನೆ ಜಗಜಟ್ಟಿ ಬಾ ಸುತ್ರಾಣನೆಶ್ರೇಷ್ಠದನುಜಘರಟ್ಟ ಸುಗುಣವಿಶಿಷ್ಟ ಭಕ್ತಶಿಖಾಮಣಿ ಪ.ವಾಯುಪುತ್ರ ವಿಚಿತ್ರ ಬಲಿಸುರರಾಯರಾಯರ ಗಂಡನೆಪ್ರೀಯರಾಮಪದಾಬ್ಜಮಧುಕರ ಮಾಯಿಕದನಪ್ರಚಂಡನೆ 1ಶ್ರೀವರೋತ್ತಮ ಹನುಮ ಭೀಮಕೃಪಾವಲಂಬ ಮಹೋಜನೆಪಾವಮಾನಿಪರೇಶ ಪದ್ಮಜ ಭಾವಿ ಯತಿಕುಲರಾಜನೆ2ಶೂರಾಗ್ರಣಿ ಸುಗುಣಿ ಲಕ್ಷುಮಿನಾರಾಯಣದಾಸನೆಭಾರತೀವದನಾರವಿಂದಕೆ ಸೂರ ನಿತ್ಯವಿಲಾಸನೆ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ನಾರಿರನ್ನೆಯ ಕಂಡೆಯಾ ಪತಿದ್ದಿದ ಕಸ್ತೂರಿ ತಿಲಕದಿಂದೊಪ್ಪುವ |ಮಘಮಘಿಸುವ ಜಾಜಿ ಮಲ್ಲಿಗೆ ಸಂಪಿಗೆ |ಧನುಜರಗಂಡನೆಂದೆನಿಪ ಪೆಂಡೆಯವಿಟ್ಟು |ಲೀಲೆಯಿಂದಲಿ ಬಂದು ಮೇಲಾಪುರದಿ ನಿಂತ |
--------------
ಪುರಂದರದಾಸರು
ಮನಸು ನಿನ್ನ ಮೇಲೆ ಬಹಳ-ಕಾಲ |ಅನುಕೂಲಿಸದೊ ಗೋಪಾಲ ಪನಿನ ಕೂಡೆ ಈಗ ಕೂಡುವೆನೆಂದರೆ ಮನೆ-|ಜನರೆಲ್ಲರು ಕೂಡಲೀಸರೊ ಕೃಷ್ಣ ಅ.ಪಗಂಡನೆಂಬವನು ಉದ್ದಂಡ-ಎನ್ನ |ಕಂಡರೆ ಸೇರನುಭಾವಪ್ರಚಂಡ ||ಭಂಡೆ ಅತ್ತೆಯು ಲಂಡೆಅತ್ತಿಗೆಕೇಳೊ |ಕಂಡರಿಬ್ಬರನು ದಂಡಿಸುವರೊ ರಂಗ 1ನೆರೆಹೊರೆಯವರೆನ್ನನೆಲ್ಲ-ಮೈಯ |ನೆರಳ ಕಂಡರೆ ಸೇರರಲ್ಲ ||ಸರಿಸಖಿಯರು ಎಲ್ಲ ಸುಮ್ಮನಿರುವರಲ್ಲ |ಮರೆಮಾತನಾಡಲು ವೇಳೆ ಕೂಡದೊ ರಂಗ 2ಮದುವೆ ಮಾಡುವರೊ ಮನೆಯೊಳು-ನಾಳೆ |ಅದರ ಸಂದಣಿಯ ಹೊಂಚಿನೊಳು ||ಮುದದಿಂದ ಕೂಡುವೆನಾವ ಪರಿಯೊಳು |ಮದನತಂತ್ರದಿಂದ ಪುರಂದರವಿಠಲ3
--------------
ಪುರಂದರದಾಸರು
ಸಜ್ಜನ ಬಾಲೆಯರ ಲಜ್ಜಗೈಸಿದಿಹೆಜ್ಜೆನಿಕ್ಕಿ ಸಿದೆಯೊ ಕೃಷ್ಣಗೆಜ್ಜೆಕಟ್ಟಿಸಿದ್ಯೊಗೋವಳ ಹೆಜ್ಜೆನಿಕ್ಕಿಸಿದ್ಯೊ ಪ.ಅರಿಷಿಣ ಕುಂಕುಮ ಗಂಧಧರಿಸಿ ಸೀರೆ ಕುಪ್ಪುಸ ಕ್ಯಾದಿಗೆಸರಸದ ಭೂಷಣಗಳಿಟ್ಟುಅರಸೆಯರು ಬಂದಾರೊ ಕುಣಿಯಲು 1ನಾನಾ ಪುಷ್ಪ ಬಳ್ಳಿಯೊಳಗೆಮೀನಾಕ್ಷಿಯರ ಕೂಡಿ ರಮಿಸಿಮಾನವಕಳೆದುಕೊಂಡ್ಯೊಎನುತ ತಾನು ಪಾರ್ಥನಗುತ 2ಇಬ್ಬರಿಬ್ಬರ ನಡುವೆನೀನುಒಬ್ಬನೊಬ್ಬನಾಗಿ ನಿಂತುಕಬ್ಬು ಬಿಲ್ಲಿನಯ್ಯ ಕುಣಿಸಿದಿನಿರ್ಭಯದಿಂದಲೆ ಕೃಷ್ಣ 3ಮಿತ್ರೆಯರಹೆಗಲಲ್ಲೆ ಪರಸ್ಪರಹಸ್ತನಿಟ್ಟು ಹರುಷದಿಂದನರ್ತನ ಮಾಡಿಸಿದವಿಚಿತ್ರ ಪುರುಷನೆ ಕೃಷ್ಣ 4ಕಕ್ಕಸಕುಚದ ಬಾಲೆಯರಚಕ್ರದಂತೆ ನಿಲಿಸಿ ನೀನುಢಕ್ಕಡ ಢಕ್ಕಡ ತಾಥಾಎನುತಲೆ ಧಿಕ್ಕಿಡಿ ಧಿಮಿಕಿಡಿ ಕೃಷ್ಣ 5ಬಗರಿ ಕುಚದ ಬಾಲೆಯರ ಕೂಡನಗಧರÀ ನೀ ಕುಣಿಯಲುನಗಗೀಡಾದಿತಯ್ಯ ಜಗದಿಹಗರಣಪುರುಷನೆ ಕೃಷ್ಣ6ಪುಂಡರಿಕಾಕ್ಷನು ಕೂಡಿಕೊಂಡುಅವರಕುಣಿಸುವಾಗಗಂಡರು ಬಂದರು ತಮ್ಮಹೆಂಡಿರ ನೋಡಲು ಕೃಷ್ಣ 7ಭಾಳಗೋವಳರಿಂದ ಕೂಡಿತಾಳನ್ಹಾಕಿಸಿದಿಯಯ್ಯಾಹೀಂಗೆಭಾಳರೌಸವಕೇಳಿ ಜನರುಮೇಳವಾದರೊ ಗಡನೆ 8ಶ್ರೀಶ ರಾಸಕ್ರೀಡೆ ಮಾಡಿಸೋಸಿಲೆಸುರರೆಲ್ಲ ನೋಡಿಸೂಸಿದರು ಪುಷ್ಪ ಮಳೆಯಆಸಮಯದಲಿ ಕೃಷ್ಣ 9ಚಲುವ ರಾಮೇಶ ತಾನುಜಲಕ್ರೀಡೆಯನ್ನಾಡಿಲಲನೆಯರ ಸಹಿತಾಗಿ ತಾನುಬಲು ಬಲು ಹರುಷದಲೆ ಕೃಷ್ಣ 10
--------------
ಗಲಗಲಿಅವ್ವನವರು