ಒಟ್ಟು 36 ಕಡೆಗಳಲ್ಲಿ , 19 ದಾಸರು , 36 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಕೆ ಮೈ ಮರೆದೆ ನೀನು - ಜೀವನವೇ - |ಏಕೆ ಮೈಮರೆದೆ ನೀನು ಪಏಕೆ ಮೈಮರೆದೆ ನೀ - ಲೋಕಾರಾಧ್ಯನ ಪಾದ|ಬೇಕೆಂದು ಭಜಿಸು ಕಾಣೋ - ಜೀವನವೇ ಅ.ಪ.ಮದ್ದಾನೆಗಳೆಂಟು ಸೊಕ್ಕಿನಿಂ ಬರುವಾಗ |ಎದ್ದು ಕುಳ್ಳಿರಬಾರದೆ - ಜೀವನವೇ ||ಅಧ್ಯಾತ್ಮಕಾ ಹರಿನಾಮವ ಶ್ರುತಿಮಾಡಿ |ಒದ್ದು ಬಿಸಾಡು ಕಣೊ - ಜೀವನವೇ 1ಕಂದರ್ಪನೆಂಬವ ಕಾದುತ ಬರುವಾಗ |ನಿಂದಿಸುತಿರಬಾರದೆ - ಜೀವನವೇ ||ಒಂದೇ ಮನಸು ಎಂಬ ವಜ್ರಾಯುಧವ ಪಿಡಿದು |ಕೊಂದು ಬೀಸಾಡು ಕಾಣೊ - ಜೀವನವೇ 2ವಿಷಯದಿ ಸುಖಕಾಣೆ ಪಶುಜನರೊಳು ದೇಹ |ಹಸನುಗಳೆಯಲು ಬೇಡವೋ - ಜೀವನವೇ||ಬಿಸಜಾಕ್ಷ ಪುರಂದರವಿಠಲನೊಲಿಯೆ ಸುಖ -|ರಸದಿ ಲೋಲಾಡು ಕಾಣೋ - ಜೀವನವೇ 3
--------------
ಪುರಂದರದಾಸರು
ಮರೆಯದಿರೆಲೆ ಮನವಿಲ್ಲಿ - ಯಮಪುರಿಗೆ ಒಯ್ದು ಬಾಧಿಸುತಿಹರಲ್ಲಿ ಪ.ಪರನಾರಿಯರ ಸಂಗವಿಲ್ಲಿ - ಉಕ್ಕುಎರೆದ ಸತಿಯರ ತಕ್ಕೈಸುವರಿಲ್ಲಿಗುರು - ಹಿರಿಯರ ನಿಂದೆಯಿಲ್ಲಿ - ಬಾಯೊಳೆರದು ಸೀಸವ ಕಾಸಿ ಹೊಯಿಸುವರಿಲ್ಲಿ 1ಉಂಡ ಮನೆಯ ಕೊಂಬುದಿಲ್ಲಿ - ಎದೆಗುಂಡಿಗೆಯನು ಸೀಳಿ ಕೊಲುತಿಹರಲ್ಲಿಗಂಡನ ದಣಿಸುವುದಿಲ್ಲಿ - ಯಮಕುಂಡದೊಳಗೆ ಹಾಕಿ ಕುದಿಸುವರಲ್ಲಿ 2ಚಾಡಿಯ ಹೇಳುಸುದಿಲ್ಲಿ - ನುಡಿದಾಡುವ ನಾಲಿಗೆ ಕೇಳುವರಲ್ಲಿಬೇಡಿದರಿಗೆ ಧರ್ಮವಿಲ್ಲಿ - ಇದನೀಡದಿರಲು ಒದ್ದು ನೂಕುವರಲ್ಲಿ 3ಪುಸಿ - ಠಕ್ಕು - ಠವುಳಿಗಳಲ್ಲಿ -ಕಟ್ಟಿಎಸೆದು ಕೊಲ್ಲುವರೊ ನಿನ್ನವರು ಕೇಳಿಲ್ಲಿಅಶನಪ್ರಭದಿಗಳಲ್ಲಿ - ಮಾಡೆಬಿಸಿಯ ಕೆಂಡವ ತಂದು ತಿನಿಸುವರಲ್ಲಿ 4ಸಿರಿಮದದೊಳಗಿಹುದಿಲ್ಲಿ - ಸೊಕ್ಕಮುರಿದು ಹಲ್ಲುಗಳ ಕಳಚುವರಲ್ಲಿಪುರಂದರವಿಠಲನ ಇಲ್ಲಿ - ನೆನೆಯಸ್ಥಿರವಾದ ಮುಕುತಿ ಪಡಕೊಂಬುವರಲ್ಲಿ 5
--------------
ಪುರಂದರದಾಸರು
ರಂಗ ನೀ ಎನ್ನೊಡೆಯನಾಗಿ ಅಮಂಗಳಾತ್ಮರ ಮನೆಗೆ ಹೋಗ್ಯೆನ್ನಿಂಗಿತವನುಸುರಿದರೆ ಕುಂದಿನ್ನಾರಿಗೆಲೆ ತಂದೆ ಪ.ಹಂಚಿನೆದುರಲಿ ಹಲ್ಲು ತೆರೆದರೆಮಿಂಚುಕನ್ನಡಿಯಾಗಬಲ್ಲದೆವಂಚಕರ ಅನುಸರಿಸಿ ಒಡಲಾಸೆಯಲಿ ಬಳಲಿದರೆಕಿಂಚಿದಭಿಮಾನಿಲ್ಲೆ ನಿನಗೆ ಪ್ರಪಂಚ ಸೂತ್ರಿ ಮುರಾರಿ ಎನ್ನಯಸಂಚಿತಾರಬ್ಧಾಗಮವ ನೂಕುವರು ದಾರುಂಟೈ 1ಅರಸು ಮುಟ್ಟಿದ ನಾರಿ ಮಾನ್ಯಳುಪರಸುಹೊಂದಿದ ಲೋಹ ಪ್ರಿಯಪರಮಪುರುಷ ನಿನ್ನವನೆನಿಸಿ ಕ್ಷುದ್ರರ ವಶವ ಮಾಡುವರೆಅರಿದುದಾವುದಘಟಿತಘಟಕನೆಶಿರಿವಿರಿಂಚಿ ಶಿವೇಂದ್ರರೊಡೆಯನೆಪರಮಪಾತಕಿಯಾದರೇನ್ಮ್ಮುದ್ರಾಂಕಿತನು ಕಾಣೈ ರಂಗ2ಮಧ್ವರಗಣನೆ ನಿನ್ನ ಶರಣರುಒದ್ದು ಭವಸಾಗರವ ದಾಟಿದರುದ್ಧಟರು ನಾಕೇಳಿಕಕುಲತೆಯಿಂದ ಮೊರೆ ಹೋಗುವೆಅದ್ದು ವಿಷದೊಳಗೆ ಸುಧೆಯೊಳುಅದ್ದು ನಿನ್ನ ನಂಬಿದವನು ನಾಶುದ್ಧ ಭಟಜನಪಾಲ ಪ್ರಸನ್ವೆಂಕಟಾದ್ರೀಶ 3
--------------
ಪ್ರಸನ್ನವೆಂಕಟದಾಸರು
ರಾಘವನಾಡಿದ ಮಾತಿಗಾಂಜನೇಯ ಬಿನ್ನವಿಸುವದು |ಈಗ ಪೇಳುವೆ ಸಜ್ಜನರಾಲಿಸುವದು ಪಆ ರವಿನಂದನನು ತಾ ಮೇರೆ ಮಾಡಿ ಅಟ್ಟಿದನು |ವಾನರರುಗಳನು ತಿಂಗಳು ಮೀರಿತಿಂದಿಗೆ ||ಮಾರುತಿ ಕೇಳೀ ಮಾತು ಇನ್ನಾರ ಕಾಣೆ ಬಲ್ಲಿದರ |ನಾರಿಯೆಲ್ಲಿಹಳೋ ವಾರ್ತೆ ತಾರೋ ನೀ ಪೋಗಿ 1ಸ್ವಾಮಿ ಪಾಲಿಸೊ ಅಪ್ಪಣೆ ನಾ ಮುಂಚೆ ಪೋಗುವೆ |ತಡವ ಮಾಡದೆ ಎಲ್ಲೀಗೆನ್ನ ಭೂಮಿಜಾ ರಮಣ ||ಈ ಮುದ್ರೆ ಕೊಂಡು ಪೋಗೋ ಶಾಮಲಾಪತಿ ದಿಕ್ಕಿಗೆ |ಸಮುದ್ರ ದಾಟಿ ವೇಗಪಾವಮಾನಿಕೇಳೋ 2ಭೂತಲಾಕಾಶ ಲೋಕಾದಿ ಪಾತಾಳದೊಳಗಿರಲಿ |ನಾ ತರುವೇನು ವಾರ್ತೆ ಜಗನ್ನಾಥಪರಾಕು||ಹೇತರಳತ್ರಿಲೋಕ ವಿಖ್ಯಾತನಾಗಿಹ ರಾವಣ |ಪಾತಕಕೊಂಡು ಪೋಗಿಹ ಸೀತೆಯ ಕೇಳು 3ಬುದ್ಧಿದೇವ ನೀ ಕೊಟ್ಟಂಥ ಬುದ್ಧಿಯಿಂದಲೇ ಅವನ |ಗುದ್ದಿ ಸರ್ವ ಬಲವನ್ನೂ ಒದ್ದು ಬರುವೆನೊ ||ಮುದ್ದು ಕಂದ ರಕ್ಕಸರವಧ್ಯರೋವರಪಡೆದು |ರುದ್ರನಿಂದ ಮಾಡದಿರೊ ಗದ್ದಲ ಕೇಳೋ 4ತಂದೆ ರಾಮಾ ನಿನ್ನ ದಯೆಯಿಂದ ಈಡಲ್ಲವೊ ಯನಗೆ |ನಂದಿಧ್ವಜಾ ಈ ರಕ್ಕಸರೊಂದು ತೃಣವೋ ||ಕಂದ ಈ ವೇಳೆಯೊಳೇನು ಬಂದುದನು ಭೋಗಿಸಿ ನಾನು |ಕೊಂದು ಹಾಕುವ ದಿನವೂ ಮುಂದುಂಟು ಕೇಳೋ5ದೇವಿಯ ನೋಡಿ ಬರುವಾಗ ತಾವಂತು ಕೆಣಕಲು ದಾ- |ನವರು ಸುಮ್ಮನಿರಲೇನು ದೇವದೇವೇಶ ||ಕೋವಿದಾಗ್ರೇಶನೆ ನೀನು ಸಾವಿರಾಳಿಗೆ ಒಬ್ಬನೇ |ಆ ವಿಚಾರ ಮನಕೆ ತರುವದೇ ಕೇಳೋ 6ಹೇಳಿದ ಮಾತು ಕಟ್ಟಿದ ಕೂಳು ನಿಲ್ಲವೊ | ಆ ವನ-ದೊಳೇನಹದೊ ಬಲ್ಲೆನೇ ಪ್ರಾಣೇಶ ವಿಠಲಾ ||ಬಾಲಕ ಹನುಮಂತ ನಿನ್ನೊಳಗೆನ್ನಾ ರಾಣಿಯಲ್ಲಿ- |ಹಳೋ ನೋಡಿ ಬರುವುದಕಾಲಸ್ಯ ಕೇಳೋ 7
--------------
ಪ್ರಾಣೇಶದಾಸರು
ರಾಮನೆನ್ನಿ ರಾಮನೆನ್ನಿವ್ಯೋಮಕೇಶಗೆ ದಿವ್ಯನಾಮಾಮೃತವಿತ್ತ ಪ.ಪಾತಕವನು ಮಾಡಿ ಪಾತಕರೊಡನಾಡಿಸೂತಕಾಗಿ ವಿಪ್ರಘಾತಕಾಗಿಜಾತಿಬಾಹಿರನಾಗಿ ಧಾತುಗೆಟ್ಟವಗೆ ಶ್ರೀಸೀತಾಕಾಂತನ ನಾಮಪೂತಕಾರಣ 1ಕದ್ದು ಬಂಗಾರವ ಮೆದ್ದು ಅಭಕ್ಷಣಒದ್ದು ದುರ್ಬಲರ ಸೊಕ್ಕಿದ್ದುನಿತ್ಯಶ್ರದ್ಧಾವಿಹೀನನಾದ ಮದÀ್ಯಪ್ರಾಶನಿಯಾದಶುದ್ಧಾತ್ಮಕನಿಗೆ ಶುದ್ಧಕರನು ಮೂಲ 2ಪರಪತ್ನಿ ಗಮಿಸಿ ಭೂಸುರವೃತ್ತಿ ಭೇದಿಸಿಪರತಾಪೇಕ್ಷಿಸದೆ ಪಾಮರನಾಗಿಹನರಗೆ ಪಶ್ಚಾತ್ತಾಪ ಬರಿಸುವ ಪ್ರಸನ್ವೆಂಕಟರಸನೆ ತುದಿಯಲಿಹೊರೆವಬಿಡದೆ ರಘು3
--------------
ಪ್ರಸನ್ನವೆಂಕಟದಾಸರು
ಸುಣ್ಣವಿಲ್ಲ ಭಾಗವತರೆ |ನುಣ್ಣನೆಯ ಗೋಡೆಗೆ ನಿನ್ನ ತೊಡೆದು ಬಿಟ್ಟೆ......... ಪ.ವೀಳೆಯ ಹಾಕುವನಲ್ಲ ವ್ಯಾದಿಷ್ಠ ನನಗಂಡ ||ಬಾಳುಗೇಡಿ ಎನ್ನ ಬಾಯನೋಡಿ ||ಹಾಳಾದ ಮನೆ ಹೊಕ್ಕು ಗೋಳುಗರಿಯತ್ತೇನೆ |ಕೇಳಿದ ಬಳಿಕಿನ್ನು ಹೇಳದೆ ಫಲವೇನು......... 1ಮದ್ದು ಮದ್ದು ತಿಂದು ಮನೆಯೆಲ್ಲ ಬರಿದಾಯ್ತು |ಹೊದ್ದಿತು ಮೂದೇವಿ ಮೈದುನಗೆ ||ಬದ್ಧತನದಿ ಸಂಜೆಭಂಗಿ ಮುಕ್ಕುವಭಾವ |ಒದ್ದು ಕೊಳ್ಳುತಾನೆ ಒಳಗೆ ಕದವನಿಕ್ಕಿ 2ಅನ್ನೆಕಾರಿ ಅತ್ತೆ ತೊನ್ನು ಬಡಕ ಮಾವ |ಗನ್ನ ಘಾತಕಿರಂಡೆಅತ್ತಿಗೆ ಮುಂಡೆ ||ಎನ್ನ ಗೋಳು ತಾಗಿ ಎಂದಿಗೆ ಹೋದಾರು |ಪನ್ನಗಶಯನ ಶ್ರೀ ಪುರಂದರವಿಠಲ 3
--------------
ಪುರಂದರದಾಸರು