ಮೊಚ್ಚೆ ಮೊಚ್ಚೆಲಿ ಹೊಡೆಯಿರಿ ಇವನ | ನೆಚ್ಚಿದೆತನುವಿದನೆಂಬುವನ || ಹುಚ್ಚ ನಾಯಿಯೋಲ್‍ಎಚ್ಚರವಿಲ್ಲದೆ | ಅರ್ಚಕ ಜನರನು ಬೊಗಳುವನ ಪ
ಪರ ಉಪಕಾರಿಲ್ಲದ | ಮಾನುಷನಾಗಿಬಾಳುವನ || ತಾ ಅಜ್ಞಾನ ಮಾರ್ಗದಿ ನಡೆದು |ಜ್ಞಾನವ ಪರರಿಗೆ ಹೇಳುವನ 1
ಸತಿಸುತರತಿಶಯ ಹಿತವರು ಎನುತಲಿ | ಸತತವು ಅವರೊಳುಮರಗುವನ | ಮಿತಿಯಿಲ್ಲದೆ ಧನಧಾನ್ಯವ ಬೇಡುತ |ಕ್ಷಿತಿಯ ಮೇಲೆ ತಿರುಗುವನ2
ಕರುಣವ ಪಡೆಯದೆ ಭವತಾರಕನ | ನರ ತನುಗಳನುಸ್ತುತಿಸುವನ | ಪರಿಪರಿ ಸಂಸಾರದ ವಿಷಯದಲಿ |ನಿರುತದಿ ಮನವನು ಮಥಿಸುವನ 3