ಒಟ್ಟು 35 ಕಡೆಗಳಲ್ಲಿ , 22 ದಾಸರು , 35 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹಸಿದು ನಾ ಬಳಲಲೇಕೋ ಈಸಮಯದಲ್ಲಿ ಬಿಸಿಯೂಟ ಮಾಡುವೆನು ಪ ಹಸನಾದ ಶೇಷಶಯನ ನಾಮದಡುಗೆಯು ವಸುಮತೀಧವ ನಾಮರಸಾಯನವಿರೆ ಅ.ಪ ಹರಿ ಹರಿ ಪರಮಾನ್ನವು ದುರಿತಾರಿ ಶೌರಿ ಕರಿಗಡುಬು ಗರುಗೊಬ್ಬಟ್ಟು ನರಸಿಂಹ ವಾಮನ ಅಂಬೊಡೆ ಹೂರಿಗೆಗಳು ಕರಿವರದ ರವೆಯುಂಡೆ ಸಜ್ಜಿಗೆಯಿರಲು 1 ದುಷ್ಟಮರ್ದನನೆನ್ನುವ ಇಷ್ಟವಾದ ಹುಳಿಸಾರು ಮೊಸರುಗಳು ವಾಸುದೇವ ಸಣ್ಣಕ್ಕಿಯನ್ನವು ಮಾಧವ ಬೆಣ್ಣೆಕಾಯ್ಸಿದ ತುಪ್ಪವಿದೆ 2 ನಾರಾಯಣನೆನ್ನುವ ಸಾರವಾದ ಹುಳಿಯನ್ನ ಮೊಸರನ್ನವು ಸಾರಸಾಕ್ಷ ಶ್ರೀಶ ಕ್ಷೀರ ಸಕ್ಕರೆಯಿದ್ದು ಮಾರಜನಕನೆಂಬ ಹಪ್ಳಳುಪ್ಪಿನಕಾಯಿರೆ3 ಪರಿಪರಿಯನ್ನಗಳು ಸರಿಯಾಗಿ ಭಕ್ಷ್ಯ ಕರಿದೆಡೆ ಮಾಡಿರಲು ಅರಿತು ಸವಿಯನೋಡಿ ಮರೆಯದೆ ಭುಂಜಿಸಿ ನಿರುತ ನಿಜಾನಂದ ಪಡೆಯದೆ ಬರಿದೆ 4 ಗೋಪಾಲನೆಂದೆಂಬೊ ಸೀಪಿನ ಎಳನೀರು ಸೀ ಪಾನಕವಿಹುವು ತಾಪತ್ರಯಹರ ಹೆಜ್ಜಾಜಿಕೇಶವ ಆಪದುದ್ಧಾರಕನೆಂಬಮೃತವುಣದೆ 5
--------------
ಶಾಮಶರ್ಮರು
ಹಿಂಗಾಯಿತಲ್ಲಾ ಏನಿದು ಹರಿಹರಿಪ ಮಂಗನ ತೆರ ಈ ಅಂಗವ ವಿಷಯತ ರಂಗೆ ವಡ್ಡುತ ರಂಗನ ಮರೆತಿಹೆ ಅ.ಪ. ಬರಿದೆಯೆ ಹೋಗುತ್ತಿರುವುದು ಹೊತ್ತು ಹರಿಧ್ಯಾನಕೆ ಸಾಲದು ಪುರಸೊತ್ತು ತಿರುಗಲು ಮನೆಮನೆ ಸಾಲದು ಹೊತ್ತು ಸರಸಿಜನಾಭನೆ ಇದಕ್ಕೇನು ಮದ್ದು 1 ಶ್ರೀ ಕಮಲೇಶನ ಪೂಜೆಯ ಮಾಡನೆ ಆಕಳಿಸುತ ಮೈ ಕೈ ಮುರಿಯುವೆನು ಸ್ವೀಕರಿಸಲು ಸವಿ ಪಾನೀಯಂಗಳ ಮುಖಸಹತೊಳೆಯದೆನೂಕುತ ಮುಖ ಪ್ರಕ್ಷಾಳನೆ ಬಿಡುವೆ2 ಸ್ನಾನವ ಮಾಡೆನು ಸಂಧ್ಯಾ ತಿಳಿಯೆನು ಧ್ಯಾನವು ಯೆಂತೆನೆ ಕೂಳಿನ ಚಿಂತೆಯು ಆನನ ಮುಸುಕುತ ಬರಿಪಿಚಿಯೆಂದು ನಿ ಧಾನದಿ ಜಪಸರ ನೂಕುವೆನಲ್ಲಾ 3 ಮಂತ್ರವು ಬಾರದು ಸ್ತ್ರೋತವು ಬಾರದು ತಂತ್ರದಿ ನೂಕುವೆ ದೇವರ ಪೂಜೆಯ ವಿಧಿಗಳ ಮೌನದಿ ಕರ್ಮಗಳೆಲ್ಲವ ಮಂತ್ರಿಯ ಮಡಿದಿಯು ಪೇಳಿದ ತೆರದೂಳು ಯಂತ್ರ ವಿಧಾನದಿ ನುಡಿಯುವೆ ದಿನವಹಿ4 ಹೀನಕ ವೃತ್ತಿಗಳಿಂದಲಿ ಜೀವನ ವರ್ಣವಿವೇಕವ ನಡಿಸಲಸಾಧ್ಯವು ಜನ್ಮದಿ ವಿಪ್ರನು ನಾನಿಹೆ ಬರಿಸರಿ ತಿನ್ನುತ ಕುಡಿಯುತ ತಳ್ಳುವೆ ಆಯುಷ್ಯ5 ಊಟದ ಚಪಲವು ತಿಂಡಿಯ ಚಪಲವು ನೋಟದ ಚಪಲವು ಚಪಲ ಕಂದರ್ಪನ ಕಾಟದಿ ಸಿಲುಕಿಹೆ ಕೈಟಭಮರ್ದನ ದಾಟುವೆದೆಂತೋ ಭವವನು ಕಾಣೇ 6 ಏರಿದೆ ಬಹುನಿತ್ರಾಣವು ಗಾತ್ರದಿ ಮೀರಿದವಯ ಶಾಸ್ತ್ರಾಭ್ಯಾಸಕೆ ಕಾರುವರೈ ವಿಷ ಬಾಂಧವರೆಲ್ಲರು ಆ ರವಿಸುತನಾಳ್ಗಳಗು ನಾನಿಹೆ 7 ಮಡದೀ ಮಕ್ಕಳ ಪಾಶದಿ ಬಿದ್ದಿಹೆ ದುಡಿಯದ ಕಾರಣ ದುಗುಡವ ತೋರ್ಪರು ನಡೆಯದು ತುಸನನ್ನ ಮಾತೇನಿಲ್ಲ ಮಿಡುಕುತ ಮಿಡುಕುವೆ ಮುಪ್ಪಿನ ಹಿಡಿತದಿ 8 ತೋಡಿದರೂ ಎದೆ ಕಾಣೆನು ಭಕ್ತಿಯ ಕಾಡನು ಸೇರಲೊ ಬಾವಿಗೆ ಬೀಳಲೋ ಜೋಡಿಯು ಆಗಲೊ ಜೋಳಿಗೆ ಪಿಡಿಯಲೊ ಓಡದು ಬುದ್ಧಿಯು ತೋರಿಸು ಹಾದಿ 9 ಕರುಣಾಮಯ ನೀನೆಂಬುವ ಬಿರುದನು ಹಿರಿಯರ ಮುಖದಿಂ ಕೇಳಿಹೆ ಸ್ವಾಮಿಯೆ ಭರವಸೆ ಎನಗಿಹದೊಂದೇ ನಿಶ್ಚಯ ಶರಣನ ಬಿಡದಿರು ಆಪದ್ಬಾಂಧವ 10 ಪಾಮರ ನಿಹೆಬಹು ಕಲುಷಿತ ಚಿತ್ತನು ಭೀಮಾರ್ಚಿತ ಪದಯಗ ನಂಬಿಹೆ ಪ್ರೇಮವ ಸುರಿಸುತ ಕಾಯೈ ಬೇಗನೆ ಸಾಮನೆ ಶರಣೈ “ಶ್ರೀ ಕೃಷ್ಣವಿಠಲಾ” 11
--------------
ಕೃಷ್ಣವಿಠಲದಾಸರು
ಒಂದೆರೆಡೇ ನಾ ಹೇಳಲುಎಂದಿಗು ತೀರವು ಅಪರಾಧ ಸಿರಿಕೃಷ್ಣ ಪ.ಪಾಪವ ಗಳಿಸಿದರೇನುಂಡಾರದ ಬಲ್ಲೆಆ ಪುಣ್ಯವಂತರ ಕೀರ್ತಿ ಬಲ್ಲೆಈಪರಿತಿಳಿದರು ಕೆಟ್ಟವೃತ್ತಿಯ ಬಿಡೆಆಪದ್ಬಂಧು ಇದೇನು ಮಾಯವೊ ಸ್ವಾಮಿ 1ತಾಪತ್ರಯವನುಭವಿಸುವಾಗ ಪಶ್ಚಾತ್ತಾಪವಲ್ಲದೆ ಮಾತೊಮ್ಮಿಗಿಲ್ಲಶ್ರೀಪತಿನೋಡುಚಿತ್ತದಕಪಟವಿಷಯಾಲಾಪವೆವಿಡಿದಿದೆ ಹಿತ ಹೊಂದದಯ್ಯ 2ಹಣ್ಣು ಹಂಚಿದ ತೆರ ಹೊತ್ತು ಹೋಯಿತು ಕಿಂಚಿತ್ಪುಣ್ಯ ಮಾಡಿಹೆನೆಂಬ ನಂಬಿಗಿಲ್ಲಚಿನ್ಮಯ ಮೂರುತಿ ಪ್ರಸನ್ವೆಂಕಟೇಶನಿನ್ನವನೆಂಬ ಹೆಮ್ಮೆಲಿ ಮಾಡಿದ ತಪ್ಪು 3
--------------
ಪ್ರಸನ್ನವೆಂಕಟದಾಸರು
ರಾಘವೇಂದ್ರಾ - ಸದ್ಗುಣಸಾಂದ್ರಾ ಪರಾಘವೇಂದ್ರಾ ಅನು - ರಾಗದಿ ಭಕ್ತರರೋಗವ ಕಳೆದು ಸು - ಭೋಗವ ಸಲಿಸೋ ಅ.ಪಧೀಮಂತರಿಗತಿ - ಕಾಮಿತವೀವೊಶ್ರೀಮಂತನೆ ಎನ - ಕಾಮಿತ ಸಲಿಸೋ 1ಆಪದ್ಬಾಂಧವ - ಕೋಪವ ಮಾಡದೆನೀ ಪಾಲಿಸೋ ಎನ್ನ - ಪಾಪವ ನೋಡದೆ 2ಅನ್ಯನಲ್ಲವೊ - ನಿನ್ನ ಸುಭಕ್ತನುಮನ್ನಿಸಿ ದಯದಿ ನೀ - ಎನ್ನನು ಕಾಯೋ 3ಜನ್ಯನ ಜನಕನು - ಮನ್ನಿಸದಿರಲುಅನ್ಯರು ಕಾಯ್ವರನನ್ಯಪಾಲಕನೇ 4ಈಶನು ನೀನೈ - ದಾಸನು ಎನ್ನನು -ದಾಶಿನ ಮಾಡದೆ - ಪೋಷಿಸಿ ಪೊರೆಯೈ 5ಎಂದಿಗೆ ನಿನ್ನನು - ಪೊಂದುವೆ ಗುರುವರತಂದೆಯೆ ತೋರಿಸೋ - ಮುಂದಿನ ಗತಿಯಾ 6ಪೋತನು ನಾನೈ - ಮಾತನು ಲಾಲಿಸೊನೀತ ಗುರುಜಗನ್ನಾಥ ವಿಠಲ ಪ್ರಿಯ 7
--------------
ಗುರುಜಗನ್ನಾಥದಾಸರು
ಹನುಮ ನಮ್ಮ ತಾಯಿ ತಂದೆಭೀಮ ನಮ್ಮ ಬಂಧು ಬಳಗಆನಂದತೀರ್ಥರೆ ನಮ್ಮ ಗತಿಗೋತ್ರರು ಪ.ತಾಯಿ ತಂದೆ ಹಸುಳೆಗಳಿಗೆ ರಸಾಯನುಣಿಸಿ ಸಾಕುವಂತೆಆಯಾಸವಿಲ್ಲದೆ ಸಂಜೀವನವ ತಂದುಗಾಯಗೊಂಡ ಕಪಿಗಣವಪ್ರಿಯದಿಂದ ಪೊರೆದ ರಘುರಾಯನಂಘ್ರಿಗಳೆ ಸಾಕ್ಷಿ ತ್ರೇತಾಯುಗದಿ 1ಬಂಧು ಬಳಗದಂತೆ ಆಪದ್ಬಾಂಧವನಾಗಿ ಪಾರ್ಥರಿಗೆಬಂದ ಬಂದ ದುರಿತಗಳ ಪರಿಹರಿಸಿಅಂಧಕಜಾತರ ಕೊಂದುಅಂದೆ ಕೃಷ್ಣಾರ್ಪಣವೆಂದಾ ಯದುಕುಲೇಂದ್ರನಂಘ್ರಿಗಳೆ ಸಾಕ್ಷಿ ದ್ವಾಪರಾಂತ್ಯದಿ 2ಗತಿಗೋತ್ರರಂತೆ ಸಾಧುತತಿಗಳಿಗೆ ಸುಜ್ಞಾನವಿತ್ತುಮತಿಗೆಟ್ಟ ಇಪ್ಪತ್ತೊಂದು ಕುಭಾಷ್ಯಂಗಳಗತಿಗೆಡಿಸಿ ವೈಷ್ಣವರಿಗೆ ಸದ್ಗತಿಯ ತೋರಿದ ಪ್ರಸನ್ವೆಂಕಟಪತಿವ್ಯಾಸಾಂಘ್ರಿಗಳೆ ಸಾಕ್ಷಿ ಕಲಿಯುಗದಿ3
--------------
ಪ್ರಸನ್ನವೆಂಕಟದಾಸರು