ಒಟ್ಟು 19658 ಕಡೆಗಳಲ್ಲಿ , 137 ದಾಸರು , 8696 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾರೋ ಬಾರೋ ಭವನುತಚರಣನೆ ಸಾರಸುಗುಣ ಪರಿಪೂರಿತ ಕರುಣನೆ ಪ ಚರಣಕಮಲಗಳಿಗೆರಗುವೆ ಭಕ್ತಿಯಲಿ ಭರದಲಿ ಎನ್ನನು ಪೊರೆಯಲು ಮುದದಲಿ 1 ಅರಿದರ ವರಗಳ ಕರದಲಿ ಪಿಡಿಯುತ ಕರಿಯನು ಪೊರೆಯುವ ತ್ವರೆಯಲಿ ಬಹವೋಲ್2 ಪರಮಪುರುಷ ಫಣಿಗಿರಿಶಿಖರಾಲಯ ವರದವಿಠಲ ಸುಖಕರ ಕಮಲಾಲಯ 3
--------------
ವೆಂಕಟವರದಾರ್ಯರು
ಬಾರೋ ಬಾರೋ ಮನುಕುಲಗುರುಗುಹಾ ಸೇರಿದಾನತರ್ಗೆ ಚಾರುಸುರಭೂರುಹಪ. ಮಾನಾಭಿಮಾನ ನಮ್ಮದು ನಿನ್ನಾಧೀನ ದೀನಜನರ ಸುರಧೇನು ಮಹಾಸೇನ1 ಶಕ್ತಿ ಕುಕ್ಕುಟವಜ್ರಾಭಯ ಚತುರ್ಭುಜನೆ ಭಕ್ತಿಜ್ಞಾನವನೀಯೋ ಶಂಕರಾತ್ಮಜನೆ 2 ಲಕ್ಷ್ಮೀನಾರಾಯಣನ ಧ್ಯಾನಾಭರಣ ಸುಕ್ಷೇತ್ರಪಾವಂಜಾಧ್ಯಕ್ಷ ರವಿಕಿರಣ3
--------------
ತುಪಾಕಿ ವೆಂಕಟರಮಣಾಚಾರ್ಯ
ಬಾರೋ ಬಾರೋ ಮೋಹನಾ | ಶ್ರೀದೇವಾ ಪ ವೃಷಭಾನು ಜಾನನ ಸರಸಿಜ ಬೃಂಗಾ | ಶಶಿಧರ ವಂಶಾಭರಣಾ1 ನಿರ್ಜರ ತುಂಗಾ | ದನು ಚಾವಳಿ ಮದಹರಣಾ2 ಮಹಿಪತಿ ಸುತ ಪ್ರಭು ಜಗದಂತರಂಗಾ | ಇಹಪರದಾಯಕ ಕರುಣಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಾರೋ ಬಾರೋ ರಂಗಯ್ಯಾ | ಅಂದುಗೆ ಗೆಜ್ಜೆ | ಝಣ ಝಣ ಝಣ ಝಣ ರವದಿಂದಾ ಪ ಕಡೆಗಣ್ಣು ಹೊಳವನು | ಅಡಿಗಡಿಗೆ ದೋರುತಾ | ಎಡಬಲದೋಳಿಂದೊಲಿದು | ದುಡುದುಡು ದುಡು ನಲಿಯುತಾ 1 ಪದಹತಿಗೆ ಮಯೂರಾ | ವದನ ತಗ್ಗಿಸುವಂತೆ | ಮುದದಿ ಗೆಳೆಯರವೆರಸಿ | ಒದಗಿ ಧಿಗಿಧಿಗಿ ಧಿಗಿಲೆನುತಾ 2 ಅಂದು ಉದಯದಲೆದ್ದು | ಬಂದು ಬೆಣ್ಣೆಯ ಬೇಡೆ | ಕಂದಾ ನೀ ಕುಣಿಯೆನಲು | ನಿಂದು ತೋರಿದ ಭಾವದಿಂದ 3 ಬಿರಮುಗುಳ ನಗುತಾ | ಪೆರೆ ನೊಸಲೊಳು ಮೆರೆವಾ | ಕರ್ಣ ಕುಂಡಲಾ | ಭರದಿಂದಾ ಒಲಿಯುತಾ 4 ಗುರು ಮಹಿಪತಿ ಸ್ವಾಮಿ | ಹಾರೈಸುವಾ ನಯನಕ | ಹರುಷದಿ ತೃಪ್ತಿಗೈವಾ | ಕರುಣಾ ಸಾಕಾರದಿಂದಾ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಾರೋ ಬಾರೋ ರಂಗಾ ಪ ಬಾರೈಯ್ಯಾ ಯದುವೀರಾ | ಈರೇಳು ಭುವನಾಧಾರಾ | ಶ್ರೀ ರಮಣಿಯ ಮನೋಹರಾ | ವಾರಣ ಭಯ ನಿವಾರಾ | ಕರುಣಾಕರಾ | ದೀನೋದ್ಧಾರಾ | ಸರ್ವಾಧಾರಾ | ಪರಮ ಉದಾರಾ | ಸುರಸಹತಾರಾ | ದಯಾಸಾಗರ 1 ಒದಗುವೆ ಸ್ಮರಣೆಗೆ ನೇಮಾ | ಮದನಜನಕ ಮಹಮಹಿಮಾ | ಜೀಮೂತ ಶಾಮಾ | ಸದ್ಗುಣ ಧಾಮಾ | ಪೂರಿತ ಕಾಮಾ | ತ್ರಿವಿಕ್ರಮಾ | ಅನಂತ ನಾಮಾ | ಲೋಕಾಭಿರಾವi 2 ಅಸುರ ಕುಲ ಸಂಹರಣಾ | ಬಿಸರುಹ ಸಖ ಶತ ಕಿರಣಾ | ಅಸಮನೆ ಮಹಿಪತಿ ಸುತನಾ | ಪೋಷಿಸುವೆ ನೀ ಪರಿಪೂರ್ಣ ಖಗವರ ಗಮನಾ | ಮೃದುತರ ಚರಣಾ | ಅಹಲ್ಯೋದ್ಧರಣಾ | ಕನPsÀರಣಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಾರೋ ಬಾರೋ ಶರಣೆಂಬೆನು ದೇವ ಪ ಪಂಕಜ ವದನದ ಶಂಕರಸುತ ಗುಹ ಬಾರೋ1 ಕಂದರ್ಪಾನ್ವಿತಗುಣ ವೃಂದ ನಿತ್ಯಾನಂದ ಬಾರೋ 2 ದಾಸರ ಭವದಘ ರಾಶಿಯ ತರಿಯುತ್ತಾ ಬಾರೋ 3
--------------
ಬೆಳ್ಳೆ ದಾಸಪ್ಪಯ್ಯ
ಬಾರೋ ಬಾರೋ ಶ್ರೀಗುರುರಾಯ ಬಾರೋ ಬಾರೋ ಭೂಸುರವರ್ಯ ಬಾರೋ ಬಾರೋ ಭಕ್ತಪ್ರೀಯ ಕಾಯ ಪ ಘೋರಾರಣ್ಯದೊಳು ಬಂದು ಸೇರಿದೆನೊ ದುಷ್ಕರ್ಮದಿ] ಕ್ರೂರ ಮೃಗಗಳೆನ್ನತಿ ಬಾಧಿಸುತಿಹವು ಚೋರರುಪದ್ರವವನ್ನು ನಾ ಸಹಿಸಲಾರೆ ಇಷ್ಟೆನುತ ದೂರ ನೋಳ್ವರೆ ವ್ಯಾಳ್ಯಕೆ ಸೂರಿವರೇಣ್ಯ 1 ಮಂದಜನ ಸಂಗದಿಂದ ತಂದೆ ತ್ವತ್ಪಾದಾರ ವಿಂದ ಪೊಂದದಿರೆ ಸಂಧಿಸಿಎನ್ನಗೆ ಬಂದÀ ಬನ್ನ ಹಿಂದೆ ನೀ ನಾಲ್ವರಿಯಲಿಲ್ಲೆ ಸಂದೇಹವ್ಯಾಕೆ 2 ಇಂದ್ರ ಸಮವಿರಾಜಿತ ಇಂದ್ರ ವಿರೋಧಿ ಸಂಭೂತ ಇಂದ್ರ ದೇವಾಧಿ ಮಾನಿತ ಆನಂದ ಪ್ರದಾತ ಇಂದ್ರ ಜಾರಿ ಸೂತ ಶಾಮಸುಂದರವಿಠಲ ದೂತ ಇಂದ್ರ ಜಾತಾಖ್ಯರ ಪ್ರೀತ ಇಂದ್ರಾರ್ಯಪೋತ 3
--------------
ಶಾಮಸುಂದರ ವಿಠಲ
ಬಾರೋ ಬಾರೋ ಸುಂದರನೆ ಬರ ಹೇಳಿದಳೊ ನಿನ್ನ ರಮಣಿ ಪ ಶುಕಪಿಕರವದಿಂದ ವಿಕಳಿತಳಾಗಿ ಧೈರ್ಯ ಕಕವಿಕಳಾಗಿಹಳಿವಳು ನೀ ಬೇಗನೆ 1 ಸಾರ ಸುಗುಣೆ ನಿನ್ನ ದಾರಿಯ ನೋಡಿ ನೋಡಿ ಸರಸಿಜಮುಖಿ ನೀ ಪೋಗಿ ಬಾರೆಂದಳು 2 ಶ್ರೀ ವಾಸುದೇವವಿಠಲ ನಿನ್ನಯ ಸಖಿ ಭಾವಜನ ರೂಪವ ತೋರು ತೋರಿಸೆಂದಳು 3
--------------
ವ್ಯಾಸತತ್ವಜ್ಞದಾಸರು
ಬಾರೋ ಬಾಲಾ ಬಾ ಅಪ್ಪುವೆ ತಾರೋ ತೋಳನು ತಾಭೂರಿ ದೃಷ್ಟಿಯ ಮಾಲಿಯನ್ಹಾಕಿದಾಪಾರ ಮಹಿಮ ಬಾ ಪ ಐದು ವರುಷ ಬಾ ಎನಗೆ ಬೋಧವ ನೀಡಿದಿ ಬಾಸಾಧು ಸೇವಿತ ಶ್ರೀಧರ ಭೂಧರ ಗೋಧರಧರನೇ ಬಾ 1 ಗೌರ ಮುಖನೆ ಬಾ ಕರುಣಾವಾರಿ ನಿಧಿಯೇ ಬಾಆರ ಮಾತನು ಹಚಿಕೋ ಬ್ಯಾಡೆಲೆ ಸಾರಿದ ಕೃಷ್ಣ 2 ಗೋಪಿ ಬಂಧನ ಹರಣಾ ಬಾಮುಂದೆ ನಿಲ್ಲುತ ಮಾತುಗಳಾಡಿಸಿ ಇಂದಿರೇಶ ಬಾ 3
--------------
ಇಂದಿರೇಶರು
ಬಾರೋ ಬೇಗ ಬಾರೋ ರಾಮ ಬಾರೋ ನೀ ಮೊಗದೋರೋ ರಾಮ ಪ ಅಗಣಿತ ಮಹಿಮ ರಘುಕುಲೋದ್ಧಾಮ ನಿಗಮಾಗಮ ಪೂಜಿತ ಶ್ರೀರಾಮ 1 ನಿಕರ ದುರಿತಾರಿ ರಾಮ 2 ಹರಣ ರಮಾಪತಿ ಚರಣ 3
--------------
ಅನ್ಯದಾಸರು
ಬಾರೋ ಬೇಗನೆ ಶ್ರೀಧರ ಗುಣಾಕರ ಪ ಬಾರೋ ಬೇಗನೆ ಪಾದವಾರಿಜಕೆರಗುವೆ ಚಾರು ಪರಿಯಂಕಕ್ಕೆಅ.ಪ ಶೌರಿ ಅಗ್ರಜನಾಗಿ ಕ್ರೂರರ ಸದೆದು ಭೂ ಭಾರವನಿಳುಹಿದ ಶೌರ್ಯದ ಮಂಚಕೆ1 ರಾಮನ ಶೇವಿಸಿ ಪ್ರೇಮವನು ಪಡೆದಂಥ ಸೌಮಿತ್ರಿಯೆಂಬ ಸುನಾಮದ ಹಾಸಿಗೆಗೆ 2 ಸಾಸಿರವದನದಿ ಶ್ರೀಶನೆ ತವಗುಣ ಲೇಶ ವರ್ಣಿಸುವಂಥ ಭಾಸುರ ತಲ್ಪಕೆ 3 ಇಂದಿರದೇವಿಯು ನಿಂದಿರುವಳು ತವ ಸುಂದರ ಚರಣಾರವಿಂದವ ತೋರಿಸು 4 ಶರಣರ ಪೊರೆವ ಕಾರ್ಪರನರಶಿಂಹನೆ ಹರಗೆ ಭೂಷಣವಾದ ಉರಗಪರ್ಯಂಕಕೆ5
--------------
ಕಾರ್ಪರ ನರಹರಿದಾಸರು
ಬಾರೋ ಭವದೂರಾ ರಂಗಾ ನಾರಾಯಣಪ ಆ ರಾವಣ ಭೀಕರ ಜಯ ಸರೋಜದಳಾಂಗ ಅ.ಪ ಚರಣಶ್ರಿತ ಪರಿಪಾಲಿತ ಮರಳೀಧರ ದೇವ ಪರಮಾತ್ಮನೆ ಪಾಂಡವಮಣಿ ತರವೇ ನಿರುತರಕೇಂದ್ರ 1 ಉಭಯ ವೇದಾಂತಾರ್ಯನೆ ಅಭಯಾಕರ ಶೌರೀ ಅಭಿಮಾನಯೇನದು ಕಾರಣ ಶುಭದಾಯಕನಾಗಿ ಬೇಗಾ 2 ಪರತಂತ್ರನೆ ಪಾಪಾಂತಕ ನರವೇಷ ಭಾಷೆ ಸುರನಾಯಕವಿನುತನಾಗುರು ಭರತಾಗ್ರಜ ತುಲಶೀರಾಮಾ3
--------------
ಚನ್ನಪಟ್ಟಣದ ಅಹೋಬಲದಾಸರು
ಬಾರೋ ಮನೆಗೆ ಕೃಷ್ಣಯ್ಯ ಕೃಷ್ಣಾಬಾರೋ ನಮ್ಮ ಮನೆಗೆ ಪ ಬಾರೋ ನಮ್ಮ ಮನೆಗೆ ವಾರೀಜನಾಭನೆಬಾರಿ ಬಾರಿಗು ನಿನ್ನ ಸಾರಿ ಕರೆವೆ ಕೃಷ್ಣ ಅ.ಪ. ಗೋಪಿ ಮಾನುನಿಯರು ಸ್ವಾಮಿ 1 ಕುಂದ ಚಂಪಕ ಜಾಜಿವೃಂದ ಶೋಭಿಪ ಮುಖ ಗಂಧವರ್ಚಿಪ ಕೃಷ್ಣ2 ಇಂದುವದನ ನಿನ್ನ ಚಂದವ ನೋಡಲುದಿವಿಜೇಂದ್ರರು ಬಂದಿಹರು ಇಂದಿರೇಶನೆ ಕೃಷ್ಣ 3
--------------
ಇಂದಿರೇಶರು
ಬಾರೋ ಮನೆಗೆ ಗೋವಿಂದ ನಿನ್ನಂಘ್ರಿ ಕಮಲವತೋರೋ ಎನಗೆ ಮುಕುಂದ ನಲಿದಾಡು ಮನದಲಿಮಾರಪಿತ ಆನಂದನಂದನ್ನ ಕಂದ ಪ ಭವ ಘೋರ ನಾಶನವಾರಿಜಾಸನ ವಂದ್ಯ ನೀರಜಸಾರ ಸದ್ಗುಣ ಹೇ ರÀಮಾಪತೆ ಅ.ಪ. ನೋಡೋ ದಯದಿಂದೆನ್ನ-ಕರಪದುಮ ಶಿರದಲಿನೀಡೋ ಭಕ್ತಪ್ರಸನ್ನ-ನಲಿದಾಡೊ ಮನದಲಿಬೇಡಿಕೊಂಬೆನೊ ನಿನ್ನ-ಆನಂದ ಘನ್ನಮಾಡದಿರು ಅನುಮಾನವನು ಕೊಂ -ಡಾಡುವೆನು ತವ ಪಾದಮಹಿಮೆಗಳನುಜೋಡಿಸುವೆ ಕರಗಳನು ಚರಣಕೆಕೂಡಿಸೊ ತವ ದಾಸಜನರೊಳು 1 ಹೇಸಿ ವಿಷಯಗಳಲ್ಲಿ-ತೊಳಲ್ಯಾಡಿ ನಾ ಬಲುಕ್ಲೇಶ ಪಡುವುದು ಬಲ್ಲಿ-ಘನಯುವತಿಯರ ಸುಖಲೇಸು ಎಂಬುದನ್ನು ಕೊಲ್ಲಿ-ಆಸೆ ಬಿಡಿಸಿಲ್ಲಿಏಸು ಜನುಮದ ದೋಷದಿಂದಲಿಈಸುವೆನು ಇದರೊಳಗೆ-ಇಂದಿಗೆಮೋಸವಾಯಿತು ಆದುದಾಗಲಿಶ್ರೀಶ ನೀ ಕೈಪಿಡಿದು ರಕ್ಷಿಸು 2 ನೀನೆ ಗತಿಯೆನಗಿಂದು ಉದ್ಧರಿಸೊ ಬ್ಯಾಗನೆದೀನ ಜನರಿಗೆ ಬಂಧು-ನಾ ನಿನ್ನ ಸೇವಕಶ್ರೀನಿವಾಸ ಎಂದೆಂದು-ಕಾರುಣ್ಯ ಸಿಂಧುಪ್ರಾಣಪತಿ ಹೃದಯಾಬ್ಜಮಂಟಪ-ಸ್ಥಾನದೊಳಗಭಿವ್ಯಾಪ್ತ ಚಿನುಮಯಧ್ಯಾನಗೋಚರನಾಗಿ ಕಣ್ಣಿಗೆಕಾಣಿಸುವೆ ಶ್ರೀರಂಗವಿಠಲ 3
--------------
ಶ್ರೀಪಾದರಾಜರು
ಬಾರೋ ಮನೆಗೆ ಬಾರೋ ವೆಂಕಟರಮಣಾ ಪ ಕಂಸಾಸುರಮರ್ದನನೆ ಬಾರೊ | ಕೌಶಿಕಯಜ್ಞಪ ಬಾರೊ | ಹಂಸಡಿಬಿಕನಂತಕ ಬಾರೊ | ಹಂಸವಾಹನನ ಪಿತನೆ ಬಾರೊ 1 ಸಾಸಿರ ಮುಖನ ಪೆತ್ತವನೆ ಬಾರೊ | ಅನುಜ ಬಾರೊ | ಸಾಸಿರ ವದನ ಶಯನ ಬಾರೊ | ಭೂಸುರರಿಗೆ ಪ್ರಿಯನೆ ಬಾರೊ 2 ವಾರಿಧಿಯೊಳು ಪೊಕ್ಕವನೆ ಬಾರೊ | ವಾರಿಧಿಯ ಮಾನಭಂಗನೆ ಬಾರೊ | ವಾರಿಧಿಸುತೆಯ ಪಡೆದ ಕರುಣಾ - | ಸಿರಿ ವಿಜಯವಿಠ್ಠಲ ಬಾರೊ 3
--------------
ವಿಜಯದಾಸ