ಒಟ್ಟು 36720 ಕಡೆಗಳಲ್ಲಿ , 136 ದಾಸರು , 10408 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪತಿತಪಾವನ ಕರಿವದನ ನಾರಾಯಣ ಮತಿಗೆಮಂಗಳವೀಯೋ ಮುನಿಜನಾಭರಣ ಪ ಇತರವ್ಯಾಕುಲಗಳ ಮಥನವು ಮನದೆ ಬಹಳ ವ್ಯಥೆಯ ತೋರುತ್ತಲಿದೆ ಗತಿಯಾವುದೊ ಹರಿಯೆ ಸತತ ನಿನ್ನ ಗುಣಕಥನ ಮಾಡುವ ಅತಿಶಯ ಮಾರ್ಗದಿ ಕ್ಷತಿಯೊಳು ಪೊರೆಯ್ಯೆ 1 ಧ್ರುವ ಪ್ರಹ್ಲಾದ ನರ ದ್ರೌಪದಿ ಅಂಬರೀಷ ಇವರ ಕಷ್ಟಗಳಿಂದ ಪಾರುಗಾಣಿಸಿದೆ ಅವನೀಭಾರವನಿಳುಹುವ ದೊರೆಯೇ ಕುವಲಯನೇತ್ರ ಕುಮಾರನ ಕೈಪಿಡಿ2 ಶ್ರೀರಮಣೀವರ ಸಾರಗುಣಾಕರ ಸಿರಿ ಜಾಜೀಶ್ವರ ಕೋರುತಿರುವೆಮಗೆ ತೋರಿಸು ತವಪದ ನಾರದ ಮುನಿನುತ ಸಾರುತೆ ನಮಿಪೆ 3
--------------
ಶಾಮಶರ್ಮರು
ಪತಿತಪಾವನ ನಾಮ ಪೂರ್ಣಕಾಮಾ | ಗತಿಯ ಪಾಲಿಸೊ ಎನಗೆ ಗುರುಸಾರ್ವಭೌಮಾ ಪ ಹದಿನಾರು ಸಾವಿರ ಸುದತಿಯರೆಲ್ಲರು | ತ್ರಿದಶವಿರೋಧಿಯ ಸದನದಲ್ಲಿ || ಮದದಿಂದ ಸೆರೆಬಿದ್ದು ಹದುಳ ಕಾಣದೆ | ಸುತ್ತಿಸಿದರು ಮನದೆ ನಾರದನಿಂದ ನಲಿದಾಡಿ1 ಕಾರ್ತಿಕ ಮಾಸದಲಿ ಕಾಂತೆಯ ಒಡಗೂಡಿ | ಕಾರ್ತರಥವನೇರಿ ಕೀರ್ತಿಪುರುಷಾ || ಧೂರ್ತನ ಕೊಂದು ಬಾಲೆಯರಾರ್ತವ ಪರಿಹರಿಸೆ | ತೀರ್ಥಧರಾದಿಗಳು ನರ್ತನದಲಿ ಪೊಗಳೆ 2 ಇಂದುಮುಖಿಯರ ಬಂಧನ ತರಿದವರು | ಅಂದು ಉತ್ಸಾಹದಿಂದ ದ್ವಾರಾವತಿಗೆ || ಮಜ್ಜನ ಮಾಡೆ | ಮಂದಾರ ಮಳೆ ನಭದಿಂದ ಸುರಿಯೆ 3 ದೇವ ಶೃಂಗಾರವಾಗೆ ವೇದಾದಿಗಳು ನಿಂದು | ತಾವೆಲ್ಲ ಮಣಿಭೂಷಣಾವಳಿಯಿಟ್ಟು || ನೋವ ಪೋಗಾಡಿಸಿ ಪಾವನರಾಗಿ ಸುಖ- | ವನಧಿಯೊಳು ಮೀಯುತ್ತ ಕೊಂಡಾಡೆ 4 ನರಕಾಸುರನ ಕೊಂದು ಇರಳು ಈ ಪರಿಯಲ್ಲಿ | ಹರಿಮಾಡಿದ ಚರಿತೆ ತಿಳಿದುದನು- || ಚ್ಚರಿಸಿದವನ ಕುಲ ನರಕದಿಂದುದ್ಧಾರ | ಮೊರೆಹೊಕ್ಕೆ ಇದÀಕೇಳಿ ವಿಜಯವಿಠ್ಠಲರೇಯಾ 5
--------------
ವಿಜಯದಾಸ
ಪತಿತಪಾವನ ಪರಮದಯಾಳು ಶ್ರೀನಾಥ ಅತಿಶಯಾನಂದಾತ್ಮ ಸದ್ಗುರು ಭಕ್ತಹೃತ್ಕಮಲಾಂಕಿತ ಧ್ರುವ ನಿತ್ಯಾನಂದ ನಿಜಗುಣ ನಿರ್ಗುಣರೂಪ ಶ್ರೀದೇವ ಉತ್ತಮೋತ್ತಮ ಸತ್ಯಶಾಶ್ವತ ಭಕ್ತಜನ ಉದ್ಧಾರಕ ಯತಿಜನಾಶ್ರಯಾನಂತಮಹಿಮ ಕೃಪಾಲ ಅತೀತ ತ್ರಿಗುಣ ಸತತ ಸುಪಥದಾಯಕ 1 ಅಚ್ಯುತಾನಂತ ಮುಚುಕುಂದವರದ ಮುಕುಂದ ನಿಶ್ಚಯಾನಂದೈಕ್ಯ ನಿರ್ಗುಣ ನಿಶ್ಚಲಾತ್ಮ ಕನುಪಮ ಸಚ್ಚಿದಾನಂದ ಸದ್ಗುಣ ಸಾಂದ್ರ ಸರ್ವಾತ್ಮ ಮಚ್ಛ ಕೂರ್ಮಾನಂತರೂಪ ಭಕ್ತವತ್ಸಲ ಶ್ರೀಧರ 2 ಅಚ್ಯುತ ಪಕ್ಷಪಾಂಡವ ಪಕ್ಷಿವಾಹನ ರಕ್ಷರಕ್ಷ ಜನಾರ್ದನ ಮೋಕ್ಷದಾಯಕ ಕರಿರಾಜವರದ ಕೇಶವಾಲಕ್ಷ ನಿಜ ಸು- ಬಿಕ್ಷ ಮಹಿಪತಿಗಿತ್ತು ಕಾಯೋ ಲಕ್ಷ್ಮೀಪತೆ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪತಿತಪಾವನಹುದೋ ಸ್ವಾಮಿ ಧ್ರುವ ಯತಿಮುನಿಜನವನ ಅತಿಶಯಾನಂದ ನೀ ಶ್ರುತಿಗಗೋಚರನಹುದೋ ಸ್ವಾಮಿ 1 ಕ್ಷಿತಿಯೊಳು ಗೌತಮ ಸತಿಯಳುದ್ಧರಿಸಿದ ಅತಿ ದಯಾಳನಹುದೋ ಸ್ವಾಮಿ 2 ನಷ್ಟಾ ಜಮಿಳನ ದೃಷ್ಟಿಸಿ ನೋಡಿನ್ನು ಶಿಷ್ಟತನವ ಮಾಡಿದ್ಯೋ ಪ್ರಾಣಿ 3 ಎಷ್ಟೆಂದು ಪೊಗಳಲಿ ಸೃಷ್ಟಿಯೊಳಗೆ ನಿಮ್ಮ ದುಷ್ಟಮರ್ದನನಹುದೋ ಸ್ವಾಮಿ 4 ಅತಿ ಮಂದಮತಿ ಮಹಿಪತಿಗೆ ಸದ್ಗೈಸಿನ್ನು ಪತಿತಪಾವನ ಮಾಡಿದ್ಯೋ ಸ್ವಾಮಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪತಿತಪಾವನಾನಾಥ ಬಂಧು ಪ ಗತಿಶೂನ್ಯನಾಗಿ ಮನದಿ ಗತಿ ಏನೆಂದಳಲಿದೆನು ಗತಿನೀನೆ ಎಂಬಜನರ್ಯಾವತ್ತು ಭಾರವಹಿಸೀದಭವ 1 ಸತತ ನೀನೆ ಗತಿಯು ಎಂದು ನುತಿಪಭಕ್ತಿರ್ಹಿತದಬಂಧು ಬಟ್ಟೆ ವ್ಯರ್ಥ ದೇವ 2 ತಂದೆ ನೀನೆಗತಿಯೆನ್ನಲು ಬಂದಿ ಕಂಬ ಒಡೆದು ನೀನು ಮಂದರೋದ್ಧರ ಕರುಣಾಮಂದಿರನೆಂದು ನಂಬಿದೆ ಶ್ರೀರಾಮ3
--------------
ರಾಮದಾಸರು
ಪತಿಯಿಂದಲೆ ಸದ್ಗಿತಿಯೆಂಬುವಳು ಅತಿಮತಿಯೆನ್ನುವಳು ನಮ್ಮ ಶ್ರೀದೇವಿ ಪ ಕ್ಷಿತಿಯೊಳು ತನ್ನಯ ಪತಿಯೊಳು ಸಲ್ಲದೆ ಇತರವನೆಣಿಪಳೆ ಮೂದೇವಿ ಅ.ಪ ಗಂಡನು ಪುಂಡನು ಕುರುಡನು ಕುಂಟನು ಭಂಡಾಂಗನೆಯಂ ಕಲಹಿಪಳೆ ಮೂದೇವಿ 1 ಅತ್ತೆಮಾವನ ಹೇಳಿಕೆಗೆ ಪ್ರ ತ್ಯುತ್ತರಳಲ್ಲ ಶ್ರೀದೇವಿ ಕತ್ತೆಯಂತೆ ತಾ ಬಗಳುವ ಕಳ್ಳ ಚಿತ್ತಿನಿ ಹವುದೆಲೊ ಮೂದೇವಿ 2 ಅರಿಸಿನ ಕುಂಕುಮ ಹಣೆಯೊಳಗಿಡುವಳು ಅಡಿಯಾ ಗಿರುವಳು ಶ್ರೀದೇವಿ ಅನು- ಕರಿಸಲು ಬಾರದೆ ಕಳವಳಗೊಳುವಳು ಕರಠೆಕಮಾನಳು ಮೂದೇವೀ 3 ಶಿರಬಾಗಿ ತನ್ನರಸನ ಸೇವೆಯ ಹರುಷದೊಳಿರುಪವಳೆ ಶ್ರೀದೇವೀ ಕರಸಲು ಬಾರದೆ ಕಳವಳಗೊಳುವಳು ಕರಟಕ ತನುವಳು ಮೂದೇವೀ 4 ಇರುವ ಅತಿಥಿ ಅಭ್ಯಾಗತಗಳಿಗುಪ ಚರಿಸುವಳೆ ನಮ್ಮ ಶ್ರೀದೇವಿ ಗುರುವು ತುಲಶಿರಾಮಯೆಂದೆನ್ನುತ ಭಜಿಸದೆ ಯಿರುವಳೆ ಮೂದೇವೀ 5
--------------
ಚನ್ನಪಟ್ಟಣದ ಅಹೋಬಲದಾಸರು
ಪಥ ಕೇಳಿನ್ನು ಪ ಅಂತರಂಗದಲಿ ಶಾಂತಿಯ ತಾಳಿ | ಅಂತರಾತ್ಮನು ನೀನೆನ್ನು | ಸತಿಸುತರಿಗೆ ಗತಿಯೇ ನಂಬಿದೆ | ಗತಿಯಿದ್ದದ್ದಾಗುವದೆನ್ನು | ಅತಿಶಯ ದುಷ್ಕರ್ಮಿಗಳು ನಿಂದಿಸೆ | ಕೃತ ಪೂರ್ವದ ಫಲವೆನ್ನು || ಸತತ ದ್ರವ್ಯವ ಬಯಸಿ ಗಳಿಸಿದೆ | ಗತಿಯಾಗುವದದು ಏನು ? | ಪತಿತ ಪಾವನ ರಘೂನಾಥನ | ನಾಮವ ಗುಪಿತದಿ ಜಪಿಸೊ ನೀನು 1 ಅಣ್ಣ ತಮ್ಮ ತಾಯಿ ತಂದೆ ಬಳಗದ | ಕಣ್ಣು ಮುಂದಿರಬೇಡಿನ್ನು | ಬಣ್ಣ ಬಣ್ಣ ಮಾತುಗಳಾಡಲು | ಪುಣ್ಯವು ಅದರಲಿ ಏನು ? || ಹೆಣ್ಣು ನೋಡಿ ಮನದಲಿ ಹಿಗ್ಗುವಿ | ಮಣ್ಣು ಕೂಡಿತದು ಏನು ? | ಹಣ್ಣು ಹಾಲು ಮೃಷ್ಟಾನ್ನಕಿಂತ ನೀ | ಉಣ್ಣು ಬ್ರಹ್ಮಾನಂದಾಮೃತವನ್ನು 2 ಅಂಶವುಳಿಯಬೇಕೆಂದರೆ ಈ ಜಗ- | ದಂಶವು ನನ್ನದು ಎನ್ನು | ಮಾಂಸಪಿಂಡ ಮುಖಾಂಡ ದಹನವು ಹುತಾಶನಗಾಹುತಿ ಎನ್ನು | ಕಂಸನ ತಂಗಿಯ ಮಗ ಪಾರ್ಥಗೆ ಹೇಳಿದ | ಸಂಶಯವ್ಯಾತಕೆ ಇನ್ನು | ಹಂಸ ಪರಮರ ಐಕ್ಯವ ತಿಳಿಯದೆ | ಹಂಸೋಹಂ ಎಂದರದೇನು ? 3 ನೋಡಿದುದೆಲ್ಲಾ ಪುಸಿಯೆಂದು | ಮಾಡೋ ನಿಶ್ಚಯವಿನ್ನು | ಆಡಬೇಡ ಅನೃತ ವಚನವನು | ಆಡುತಲಿರು ಸತ್ಯವನು | ಕೂಡಬೇಡ ಕಾಮಂದಿಯ ಸಂಗ | ಕೇಡು ತಪ್ಪದದಿನ್ನು | ರೂಢಿಯೊಳಗೆ ನರನಾಗಿ ಪುಟ್ಟಿ | ಮಾಡುತ ನಡಿ ಧರ್ಮವನು 4 ಮೂರ್ತಿ ಪಡಿ | ನಾದವನಾಲಿಸು ನೀನು 5
--------------
ಭಾವತರಕರು
ಪಥ ನಡೆಯದಯ್ಯ ಪರಲೋಕ ಸಾಧನಕೆ - ಮ-ನ್ಮಥನೆಂಬ ಖಳನು ಮಾರ್ಗವ ಕಟ್ಟಿ ಸುಲಿಯುತ್ತಿರೆ ಪ ಗಜ ಕಾಯ ಕಾಂತಾರವೆಂಬ ಮಾರ್ಗದಿಸ್ತನದ್ವಯ ಕಣಿವೆಯ ಮಧ್ಯೆ ಸೇರಿಹನು 1 ಮದನ ಮಾರ್ಗವ ಕಟ್ಟಲುಬಲವುಳ್ಳ ಭಕ್ತ ಮುನಿ ಸಂನ್ಯಾಸಿ ಯೋಗಿಗಳುಸುಲಿಸಿಕೊಂಡರು, ಕೆಲರು ಸಿಕ್ಕಿದರು ಸೆರೆಯ 2 ಸುರರು ದಾನವರು - ಕ-ಟ್ಟಾಳು ಮನ್ಮಥನ ಛಲದಂಕ ಬಿರುದುಪೇಳಲೆನ್ನಳವೆ ಬಡದಾದಿಕೇಶವರಾಯ-ನಾಳ ಸಂಗಡ ಹೋದರಾವ ಭಯವಿಲ್ಲ 3 * ಈ ಕೀರ್ತನೆ ಪುರಂದರದಾಸರ ಅಂಕಿತದಲ್ಲೂ ದೊರೆತಿದೆ.
--------------
ಕನಕದಾಸ
ಪಂಥ ಬೇಡವೊ ಲಕ್ಷ್ಮಿಕಾಂತ ಎನ್ನಯ ಮನದ ಚಿಂತಿತಾರ್ಥವನೀಯೊ ಸಂತತಂ ಕಾಯೊ ಪ ಚರಣ ಕಮಲವ ಕಂಡು ಶರಣು ಹೊಕ್ಕೆನು ನಾನು ಕರುಣದಿಂದನುದಿನವು ಕಾಯಬೇಕೆನುತ ಸ್ಮರಣೆಪೂರ್ವಕವಾಗಿ ಹರಣವನೆ ಹರಸಿಹೆನು ಹರಿಣನೊಳು ಬಿಲುಗಾರ ಕರುಣ ಬಿಟ್ಟಂತೆ 1 ನರಜನ್ಮವೆಂಬುದಿದು ಕರಕಷ್ಟವಾಗಿರುವ ಉರಿಯ ಮನೆಯನು ಹೊಗುವ ತೆರನಲ್ಲವೆ ಪರಿಪರಿಯ ದುಃಖಗಳು ಬರುವ ಸಮಯಾಂತರದಿ ಮರೆಯಾಗದಿರು ಎನ್ನಸ್ಥಿರದಿ ಮೈದೋರು 2 ತಪ್ಪುಗಳು ಹೊರತಾಗಿ ಅಪ್ಪ ಸೇರುವುದುಂಟೆ ಒಪ್ಪುಗೊಂಬವರಾರು ಸರ್ಪಶಯನ ಬೊಪ್ಪ ಬಹ ದುರಿತಗಳ ತಪ್ಪಿಸಿಯೆ ಕಳೆದೆನ್ನ ಮುಪ್ಪುಗಳ ಪರಿಹರಿಸೊ ಅಪ್ಪಗಿರಿವಾಸ 3 ಉರಗ ಗಿರಿವಾಸ ನಿನ್ಸೆರಗವಿಡಿವೆನು ನಾನು ಕರಗಿ ಹೋಯಿತು ಇರವು ಕಾವರಿಲ್ಲ ಮರುಗಿದರೆ ಧೈರ್ಯವನು ತಿರುಗಿ ಹೇಳುವರಿಲ್ಲ ಕುರಿ(ಗಾ)ಯ್ವ ತೆರನಂತೆ ಕೈಗೆ ಸಿಲುಕಿದೆನು 4 ಇಹಪರದ ಸೌಖ್ಯಗಳ ಕರೆದಿತ್ತು ಕರವಿಡಿದು ಸಹವಾಸವಾಗಿರ್ದು ಸಲಹಿಕೊಂಡು ವಹಿಲದಲಿ ವರವೀವ ವರಾಹತಿಮ್ಮಪ್ಪ ಬಹುಭಾರವನು ತಾಳ್ದು ಸಲಹೆನಿಸೊ ನೀನು 5
--------------
ವರಹತಿಮ್ಮಪ್ಪ
ಪಥವ ಬಿಡು ಬಿಡು ದೇವ ಪಥದಿ ಮಲಗುವರೆಗತಿ ಚಿದಾನಂದನಿರೆ ಗತಿಗೆಡುವೆನೆ ಭಯಕೆ ಪ ಭವ ಹರಿದುನಿಲ್ಲದಲೆ ನಾನೀಗಲೈ ತರಲಿಕೆಇಲ್ಲಿ ಸರ್ವವೆ ಆಗಿ ನೀ ಬಂದು ಮಲಗಿರುವೆಸುಳ್ಳನಿತು ಸೇರದಿದು ನಿನ್ನವಗೆ ಬಿಡು ಪಥವ1 ಮನುಜ ಸಂಗವನಳಿದು ಮಹದರಣ್ಯವ ಹೊಕ್ಕುಅನಂತರದ ಪುಣ್ಯದಾಶ್ರಮವ ನೋಡಿಸನುಮತದಿ ಪೂಜೆಯನು ಮಾಳ್ಪೆನಾನೆಂದು ಬರೆಘನಸರ್ಪವಾಗಿ ನೀನಡ್ಡ ಬಿದ್ದಿಹೆ ದೇವ 2 ಸಕಲ ಸಂಗವನುಳಿದು ಸ್ವಾನುಭಾವಗಳಿಂದಅಖಿಲ ಮೃಗಗಳ ಕೂಡಿ ನಿಶ್ಚಲತೆಯಿಂದಭಕುತಿಯಲಿ ನಿನ್ನನು ಭಜಿಪೆನೆಂದೈದುತಿರೆಭಕುತನಿಗೆ ಸರ್ಪನಂತಿಹುದಿದೇನೈ ಸ್ವಾಮಿ3 ಏಕಾಂತ ಗೃಹಗಳಲಿ ಏಕಾಂತ ಸ್ಥಳಗಳಲಿಏಕಾಂತವಾಗಿ ನಿನ್ನನೆ ಪೂಜಿಸಿಏಕಾಂತ ಸರ್ವಸಾಧನವೆನುತಲೈದುತಿರೆಏಕಾಂತ ಮಾತೇಕೆ ಪಥವ ಬಿಡು ಎಲೆ ದೇವ 4 ಶುಕಗೆ ಪಂಜರದಂತೆ ಸಾಕ್ಷಿಯೆನಗಿರುತಿರಲುಅಖಿಲ ಚಿಂತೆಯ ಗಿಡುಗ ಬರಲಹುದೆಮುಕುತಿದಾಯಕ ಚಿದಾನಂದ ಗುರು ಕೇಳೆನಗೆಯುಕುತಿಯುಂಟೇ ಬೇರೆ ಬಿಡುಬಿಡಿರೆ ಬಿಡು ಪಥವ5
--------------
ಚಿದಾನಂದ ಅವಧೂತರು
ಪಂಥವ್ಯಾಕೋ ಗುಣವಂತ ಸಖಿಯೊಳಿನ್ನು ಪುಷ್ಪಾವ- ಸಂತ ಆಡಿದೊರೆಯೆ ಶ್ರೀಮಂತ ದೇವನೂರಲಿ ನಿಂತ ಲಕ್ಷ್ಮೀಯ ಕಾಂತ ಪ ರೂಢಿಯೊಳಗೆ ನೀನಾಡಿ ಪೆಣ್ಣಲ್ಲವೆಂದು ನೋಡಿ ಸವಿಮಾತನಾಡಿ ಗಾಡಿಕಾರೆಯರ ಒಡ- ಗೂಡಿ ಬಲ್ಮೊಲೆಗೆ ಕೈಯನೀಡಿ ಸುರತದೊಳು ಕೂಡಿ ಮೋಹವ ಮಾಡಿ ||1|| ಎಲ್ಲರಂತೆ ನಾ ತರುಣಿಯಲ್ಲ ಬಣ್ಣನೆ ಮಾತು ಒಲ್ಲ ಅವಳು ಮೊದಲೆ ಅಲ್ಲಿ ಇಲ್ಲದೆ ಪೂವಿಲ್ಲ ಇನ್ನಷ್ಟು ದಯವಿಲ್ಲ ಶ್ರೀ ವಲ್ಲಭ ನಿನಗೀ ನಿತ್ತವಲ್ಲ 2 ಜಾರವಿದ್ಯದಿ ನೇಮಗಾರ ಯೆನ್ನಯ ಮಾತ ಮೀರದೆ ಕೃಪೆ ಬಂದು ಸರಸಗುಣ ವಿ- ಚಾರವರಿತು ವೈಯಾರ ಪೊರೆದೆಯೇ ದೇವ- ನೂರ ವಿಹಾರ ಲಕ್ಷ್ಮೀಮನೋಹರ ಮೋಹನಾಕಾರ3
--------------
ಕವಿ ಲಕ್ಷ್ಮೀಶ
ಪಂಥವ್ಯಾಕೋ ಪ್ರತಿಜ್ಞೆ ಯಾಕೋ ಪ ಸಂತಸದಿ ನಿನ್ನಂತರಂಗದಿ ಕಂತುಪಿತ ನೀನೆನಲು ಸಾಕೊ ಅ.ಪ ಕೋಪವ್ಯಾಕೊ ತಾಪವ್ಯಾಕೋ ತಾಪತ್ರಯಗಳ ಲೋಪ ಸಿರಿವರ ಕಾಪಾಡೆನಲದೊಂದೆ ಸಾಕೊ 1 ಕುಂದು ಯಾಕೋ ನಿಂದೆ ಯಾಕೋ ಸಿಂಧುಶಯನಗೋವಿಂದಗರ್ಪಿ ತೆಂದು ನೋಡ್ಹೆಚ್ದಿಂದ್ಯಾಕೆ ಬೇಕೊ 2 ಕ್ಷೇತ್ರ ಯಾಕೋ ಯಾತ್ರವ್ಯಾಕೋ ಖಾತ್ರಿಯಿಂದ ಜಗತ್ರಯಕೆ ಸು ಸೂತ್ರಾಧಾರಿಯೆಂದ ಮಾತ್ರ ಸಾಕೊ 3 ಸ್ನಾನವ್ಯಾಕೋ ಸಂಧ್ಯಾನವ್ಯಾಕೋ ಜ್ಞಾನವಿಡಿದು ಭಕ್ತಪ್ರಾಣನಾಥನ ಧ್ಯಾನಗೈಯಲದೊಂದೆ ಸಾಕೊ 4 ಜಪವು ಯಾಕೋ ತಪವು ಯಾಕೋ ಕಪಟನೀಗಪರಿಮಿತ ಹರಿಯ ಗುಪಿತದಿಂದರ್ಚಿಸಲು ಸಾಕೊ 5 ಮಂತ್ರವ್ಯಾಕೋ ತಂತ್ರವ್ಯಾಕೋ ಮಂತ್ರಮೂರ್ತಿ ಸರ್ವಾಂತರ್ಯಾಮಿಯ ಅಂತರಂಗ ತಿಳಿಯೆ ಸಾಕೊ 6 ನೇಮವ್ಯಾಕೋ ನಿತ್ಯವ್ಯಾಕೋ ಸ್ವಾಮಿಯೆನುತ ಪ್ರೇಮಿಯ ಶ್ರೀ ರಾಮನ ನಂಬಿಕೊಳ್ಳಲು ಸಾಕೊ 7
--------------
ರಾಮದಾಸರು
ಪದಯುಗಳಂ ಪ ರಾಮಸುಂದರ ಘನ ಶ್ಯಾಮರಘೂದ್ವಹ ಅ.ಪ. ದಶರಥ ಹೃದಯಾನಂದಕರಂ ತ್ರಿದಶಗಣಚಿತ್ತಾಮೋದಕರಂ 1 ಪೂರಿತ ಕೌಶಿಕಯಜನಂ ಸಂತಾರಿತಗೌತಮ ಲಲನಾಂ 2 ಖಂಡಿತ ಶಂಕರ ಚಾಪಂ ಪರಿ-ದಂಡಿತ ಭಾರ್ಗವ ಕೋಪಂ 3 ಪಾತಕ ನಿಚಯಂ 4 ಮುನಿಜನ ಸ್ತುತಿರಚನಂ5 ಭಾರದ್ವಾಜಾರ್ಪಿತ ಭೋಜ್ಯಂ 6 ಉದ್ದಂಡ ವಿರಾಧಪಾತಕ ಹರಣಂ 7 ನಿರ್ಜಿತರಾಕ್ಷಸಷಂಡಂ8 ಧೃತಜಗದುಲ್ಲಾಸಂ 9 ವಿವಿಧಾಯುಧಜಾಲಂ 10 ಶೂರ್ಪನಖಾಂಗಂ 11 ನರವರಮುನಿಗಣ ಪರಿಪಾಲಂ12 ಮಾಯಾಮೃಗಾರ್ಪಿತ ಬಾಣವರಂ- ಜಟಾಯುಸಂಪಾದಿತ ಲೋಕವರಂ 13 ರಾವಣಹೃತ ನಿಜ ಪತ್ನೀಕಂ ಲೋಕಾವನಗತ ಕೋಪೋದ್ರೇಕಂ 14 ಬಂಧನ ಮೋಚನ ಚತುರಂ 15 ವಾತತನೂಭವ ಕೃತಸ್ತೋತ್ರಂ-ಪಂಪಾತಟಿನಿರ್ಮಿತ ಸುಕ್ಷೇತ್ರಂ16 ಶಿಕ್ಷಿತ ಸಂಕ್ರಂದನ ತನುಜಂ-ಸಂರಕ್ಷಿತ ಚಂಡ ಕಿರಣ ತನುಜಂ17 ಸೀತಾಲೋಕನ ಕೃತಕಾಮಂ-ನಿಜಧೂತಾಮೋದನ ಸುಪ್ರೇಮಂ18 ಯವನಾಲಯ ಪರಿವಾರಂ19 ಧೂತಾಹೃತ ಶುಭದೃಷ್ಟಾಂತಂ-ವಿಜ್ಞಾತನಿಜಸ್ತ್ರೀ ವೃತ್ತಾಂತಂ20 ಭೀಷಣ ಜಲನಿಧಿ ಬಂಧಕರಂ-ವಿಭೀಷಣ ಸಂರಕ್ಷಣ ಚತುರಂ21 ಶೋಷಿತ ರಾವಣ ಜಲದಿಂ-ಸಂತೋಷಿತ ದೈವತ ಪರಿಧಿಂ22 ಪಾತಕ ನಿಜ ನಾಮಾಂಕಂ 23 ಸ್ವೀಕೃತ ಸಾಕೇತವಾಸಂ-ಅಂಗೀಕೃತ ಮಾನುಷ್ಯ ವಿಲಾಸಂ24 ವಿಠಲಮತಿಶಯರುಚಿರಂ25
--------------
ಸರಗೂರು ವೆಂಕಟವರದಾರ್ಯರು
ಪದವ ಕಲಿಸೆನಗೆ ಶ್ರೀಹರಿ ಪದವ ಕಲಿಸೆನಗೆ ಪ ಪದವ ಕಲಿಸಯ್ಯ ಪದುಮನಾಭ ಪದದ ಮಹಿಮೆಯೆಂಬ ಸುಧೆಯು ಭರಿತವಾದ ಅ.ಪ ನಾಗಶಾಯಿಯ ವಿಮಲನಾಮವೆಂಬ ರಾಗಕಲಿಸು ಮಿಗಿಲು ಭೋಗ ಭಾಗ್ಯದಾಸೆ ನೀಗಿಸಿ ಈ ಭವ ರೋಗ ಗೆಲಿದು ತಲೆದೂಗಿ ನಲಿಯುವಂಥ 1 ದೋಷದೂರನ ಚರಿತರಸದಿಂ ಸೂಸಿ ಹರಿವ ಕವಿತ ಶ್ಲೇಷ ನೀಗಿಸಿ ಪ್ರಪಂಚ್ವಾಸನದುಳಕಿಸಿ ಸಾಸಿರನಾಮ ಹುಸಿ ತಾಳದಿ ಪಾಡುವಂಥ 2 ಯತಿತತಿಗಳು ಪೊಗಳ್ವ ಬಿಡದತಿ ಮತಿಮಾನ್ಯರು ಪಾಡ್ವ ರತಿಪತಿಪಿತ ಶ್ರೀರಾಮ ನಿನ್ನಡಿಭ ಕ್ತ್ಯತಿಗಣಕೂಡಿದ ಅತಿಶಯಾನಂದಕರ 3
--------------
ರಾಮದಾಸರು
ಪದವಿಯಂಬುದದಿಹುದೆ ಪರಮ ಗುರುಪದಕಿಂತಪದವಿಯಂಬುದು ಗುರುಪದದೊಳಗಡಗಿಹುದು ಪ ನಿತ್ಯ ಪದವಿಮತ್ತೆ ಶರಣೆಂಬುದೇ ವೈಕುಂಠ ಪದವಿಅತ್ಯಂತ ಭಕ್ತಿಯಾಭಾವಾನಂದ ಪದವಿ 1 ಬಂಧುರ ಸುವಾಕ್ಯಗಳ ಬಣ್ಣಿಪುದೆ ಬ್ರಹ್ಮಪದವಿಇಂದು ಧನ್ಯನುನಾ ಎಂಬುದೀಶ್ವರ ಪದವಿಸಂದುಸುಖಿಸುತ್ತಿಹುದೆ ಸದಾಶಿವ ಪದವಿ2 ಬೆರಗಿ ನಿಂದಿರುತಿಹುದೆ ಭೇದ ವಿಚ್ಛೇದ ಪದವಿಮರೆತು ತನುವಿರುತಿಹುದೆ ಮಹಾ ಮೋಕ್ಷ ಪದವಿಮರೆವು ಅರಿವೆರಡಿಲ್ಲದಿಪ್ಪುದೆ ಮಹಾಪದವಿನಿರವಯ ಚಿದಾನಂದನಾದುದೆ ನಿಜಪದವಿ 3
--------------
ಚಿದಾನಂದ ಅವಧೂತರು