ಒಟ್ಟು 8509 ಕಡೆಗಳಲ್ಲಿ , 134 ದಾಸರು , 5107 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಳೆಯನೆನ್ನದಿರಮ್ಮ ಎಲೆಗೋಪಿಕೃಷ್ಣಗೆಕೆಳದೇರುಟ್ಟಿಹವಸನಕಳೆವ ಜಾರಮಣಿಗೆಪ.ನಡುವಿರುಳೆ ಬಂದೆಮ್ಮ ನಲ್ಲರಂತೆ ಮಾತನಾಡಿಪಿಡಿದು ಚುಂಬಿಸಿ ಪರಿಯಂಕದಲ್ಲಿ ಕೂಡಿಮಡದಿಯರಂತ ನಾವು ಮಾಯ ಮೋಸದಿ ಗೆಲ್ಲುವಒಡನೆ ಗೋವಳನಂತೆ ಒಪ್ಪುವ ಗಾಡಿಕಾರಗೆ 1ಬಾಲಕನಂತೆ ಕಂಗೊಳಿಸಿ ಬೀದಿಯೊಳು ಸುಳಿಯಲುನಲವಿಂದೆತ್ತಿಕೊಂಡು ನೇಹ ತೊಡರಿ ಅಪ್ಪಿಕೊಂಡುನೀಲದ ಹಣ್ಣ ನೀಡೆ ತಾನಾಲದ ಹಣ್ಣು ಬೇಡುವಮೇಲಣ ಮಾತೇನೆ ಬೇಗ ಮೊಳೆಮೊಲೆಗ್ಹೆಣಗುವಗೆ 2ರನ್ನದುಂಗುರ ಬೆರಳ ರತಿಗೆ ಮಾರನ ಸರಳಕನ್ನೆಯರನೆಲ್ಲ ಚೆಲ್ವ ಕಣ್ಣ ಸನ್ನೆಲೆ ಮೋಹಿಸುವಚಿನ್ನನೆನ್ನಬಹುದೆ ಇವಗೆಚಟುಲಪ್ರಾಯದವಗೆ ಪ್ರಸನ್ನ ವೆಂಕಟೇಶ ನಮ್ಮ ಸೇರಿ ಬೆನ್ನಬಿಡನಮ್ಮ 3
--------------
ಪ್ರಸನ್ನವೆಂಕಟದಾಸರು
ಎಳ್ಳು ಕಾಳಿನಷ್ಟು ಭಕುತಿ ಎನ್ನೊಳಗಿಲ್ಲವಯ್ಯಬೆಳ್ಳಕ್ಕಿಯಂತೆ ನಿನ್ನ ಧ್ಯಾನವ ಮಾಡುವೆನಯ್ಯಾ ಪಗಂಡು ಮುಳುಗಹಕ್ಕಿಯಂತೆ ನೀರ ಕಂಡ ಕಡೆಗೆ ಮುಳುಗಿಮಂಡೆಶೂಲೆಯಲ್ಲದೆ ಗತಿಯು ಇಲ್ಲಮಂಡೆಮುಸುಕನಿಕ್ಕಿ ಮಂತ್ರ ಜಪಿಸುವೆನಯ್ಯ1ಗಾಣದೆತ್ತಿನಂತೆ ಕಣ್ಣಕಟ್ಟಿ ಪ್ರದಕ್ಷಿಣೆ ಮಾಡಿಕಾಣದೆ ನಾ ತಿರುಗಿದೆ ಕಂಡುದಿಲ್ಲಮಾಣಿಕ್ಯದ ರಾಶಿ ಅಡಿಗೆ ಕಂಗಳಯ್ಯನು ಪೋಗಿಆಣಿಕಾರಿಕೆ ಮಾಡಿದಂಥ ಈ ಕುಯುಕ್ತಿಯು 2ಇಕ್ಕಳವ ಕೈಯ ಪಿಡಿದುಕೊಂಡು ಕಾದ ಕಬ್ಬಿಣದಂತೆಸಿಕ್ಕಿಸಿಕೊಂಡಲ್ಲದೆ ಗತಿಯು ಇಲ್ಲಪೊಕ್ಕಳ ಪೂವಿನ ಶ್ರೀ ಪುರಂದರವಿಠಲನೆಮಕ್ಕಳಾಟಿಕೆಯ ಬಿಡೊ ರಕ್ಷಿಸೊ ಎನ್ನೊಡೆಯ 3
--------------
ಪುರಂದರದಾಸರು
ಏಕೆ ಗೋಪಾಲ ಕರೆಯುತಾನೆ - ಎಲೆ ಸಖಿಯೆ ಎನ್ನ |ಏಕೆ ಗೋಪಾಲ ಕರೆಯುತಾನೆ ? ಪಕಣ್ಣ ಸನ್ನೆ ಮಾಡುತಾನೆ - ಮತ್ತೆ ಬಗೆ ಬಗೆ |ಹಣ್ಣ ಕೈಯಲಿ ತೋರುತಾನೆ - ಎನ್ನ ಚೆಲುವಿಕೆ ||ಬಣ್ಣಿಸುತಲಿ ತಿರುಗುತಾನೆ - ಇವನೇನೆ |ಇನ್ನೂರು ವರಹಗಳ ಕೊಟ್ಟು ಮದುವೆಯಾದನೇನೆ ಎಲೆ ಸಖಿಯೆ 1ಹವಳ ಸರವ ತೋರುತಾನೆ - ದುಂಡು ಮುತ್ತಿನ - |ಧವಳಹಾರವ ನೀಡುತಾನೆ - ಹಾಸಿಗೆಯ ಮೇಲೆ ||ಪವಡಿಸಬೇಕೆನುತಾನೆ - ಇವನೊಡನಿರಲು ನ-|ಮ್ಮವರು ಸುಮ್ಮನೆ ಇಹರೇನೆ - ಎಲೆ ಸಖಿಯೆ 2ಬಟ್ಟಲ ಪಿಡಿದು ಬರುತಾನೆ - ಹಗಲೆ ಬಾ ಎಂದು -|ಬಟ್ಟ ಬಯಲೊಳು ಕರೆಯುತಾನೆ - ಎನ್ನ ಮನದೊಳು ||ದಟ್ಟು ಧಿಗಿಲು ಎನ್ನದೇನೆ - ಪುರಂದರವಿಠಲ - |ಇಟ್ಟು ಕೊರಳಾಣೆ ಈಗ ಬಾ ಎಂಬುವನೆ - ಎಲೆ ಸಖಿಯೆ 3
--------------
ಪುರಂದರದಾಸರು
ಏಕೆ ದೇಹವನು ದಂಡಿಸುವೆ ವೃಥಾ - ಬಿಡ - |ದೇಕ ಚಿತ್ತದಿ ಲಕ್ಷ್ಮೀಕಾಂತಹರಿಎನ್ನದೆಪ.ಸ್ನಾನವನು ಮಾಡಿ ಧ್ಯಾನಿಸುವೆನೆನುತಲತಿ - |ಮೌನವನು ಪಿಡಿದು ಬಕಪಕ್ಷಿಯಂತೆ |ಹೀನ ಬುಧ್ಧಿಗಳ ಯೋಚಿಸಿ ಕುಳಿತು ಫಲವೇನು ||ದಾನವಾಂತಕನ ನಾಮಕೆ ಮೌನವುಂಟೆ ? 1ಜಪವ ಮಾಡುವೆನೆನುತ ಕಪಟಬುದ್ಧಿಯ ಬಿಡದೆ |ಗುಪಿತದಿಂದಲಿ ನೀನು ಕುಳಿತು ಫಲವೇನು ||ಅಪರಿಮಿತಮಹಿಮ ಶ್ರೀ ನಾರಾಯಣನೆಂದರೆ ||ಸಫಲವಲ್ಲದೆ ಬೇರೆ ಗತಿಯುಂಟೆ ಮರುಳೆ 2ಅಂದಜಾಮಿಳಗೆ ಸ್ಮರಣೆಯ ಮಾತ್ರದಲಿ ಮುಕುತಿ |ಹಿಂದೆ ಶ್ರೀಹರಿಯು ತಾ ಕೊಡಲಿಲ್ಲವೇ ? |ಸಂದೇಹವೇಕೆ ನೀನೊಂದು ಕ್ಷಣವಗಲದೆ |ತಂದೆ ಶ್ರೀ ಪುರಂದರವಿಠಲ ನೆನೆಮನವೆ 3
--------------
ಪುರಂದರದಾಸರು
ಏಕೆ ನಿರ್ದಯನಾದೆ ಎಲೋ ದೇವನೇಶ್ರೀಕಾಂತ ಎನ್ನ ಮೇಲೆ ಎಳ್ಳಷ್ಟು ದಯವಿಲ್ಲ ಪಕಂಗೆಟ್ಟು ಕಂಬವನು ಒಡೆದು ಬಯಲಿಗೆ ಬಂದುಹಿಂಗದೆ ಪ್ರಹ್ಲಾದನಪ್ಪಿಕೊಂಡೆ ||ಮಂಗಳ ಪದವಿತ್ತು ಮನ್ನಿಸಿದೆ ಅವ ನಿನಗೆಬಂಗಾರವೆಷ್ಟು ಕೊಟ್ಟನು ಹೇಳೋ ಹರಿಯೇ 1ಸಿರಿಗೆ ಪೇಳದೆ ಮುನ್ನ ಸೆರಗ ಸಂವರಿಸದೆಗರುಡನ ಮೇಲೆ ಗಮನವಾಗದೆ ||ಭರದಿಂದ ನೀ ಬಂದು ಕರಿಯನುದ್ದರಿಸಿದೆಕರಿರಾಜನೇನು ಕೊಟ್ಟನು ಹೇಳು ಹರಿಯೇ 2ಅಜಮಿಳನು ಅಣ್ಣನೆ ವಿಭೀಷಣನು ತಮ್ಮನೆನಿಜದಿ ರುಕ್ಮಾಂಗದ ಮೊಮ್ಮಗನೆ ||ಭಜನೆಗೈವರೆ ಹಿತರೆ ನಾ ನಿನಗನ್ಯನೆತ್ರಿಜಗಪತಿ ಸಲಹೆನ್ನಪುರಂದರವಿಠಲ3
--------------
ಪುರಂದರದಾಸರು
ಏಕೆ ಮಲಗಿಹೆ ಹರಿಯೆಏಸುಆಯಾಸತಮನೊಡನೆ ಹೋರಾಡಿ ತಪಿಸಿ ಮೈ ಬೆವರಿತೊಆಕಾಶ ಭೇದಿಸಲು ಆ ಕಾಲು ಉಳುಕಿತೊಚಪಲೆಯರ ಮೋಹಿಸಲು ಉಪಟಳವು ಬಹಳಾಯ್ತೊ
--------------
ಗೋಪಾಲದಾಸರು
ಏಕೆ ಮೈ ಮರೆದೆ ನೀನು - ಜೀವನವೇ - |ಏಕೆ ಮೈಮರೆದೆ ನೀನು ಪಏಕೆ ಮೈಮರೆದೆ ನೀ - ಲೋಕಾರಾಧ್ಯನ ಪಾದ|ಬೇಕೆಂದು ಭಜಿಸು ಕಾಣೋ - ಜೀವನವೇ ಅ.ಪ.ಮದ್ದಾನೆಗಳೆಂಟು ಸೊಕ್ಕಿನಿಂ ಬರುವಾಗ |ಎದ್ದು ಕುಳ್ಳಿರಬಾರದೆ - ಜೀವನವೇ ||ಅಧ್ಯಾತ್ಮಕಾ ಹರಿನಾಮವ ಶ್ರುತಿಮಾಡಿ |ಒದ್ದು ಬಿಸಾಡು ಕಣೊ - ಜೀವನವೇ 1ಕಂದರ್ಪನೆಂಬವ ಕಾದುತ ಬರುವಾಗ |ನಿಂದಿಸುತಿರಬಾರದೆ - ಜೀವನವೇ ||ಒಂದೇ ಮನಸು ಎಂಬ ವಜ್ರಾಯುಧವ ಪಿಡಿದು |ಕೊಂದು ಬೀಸಾಡು ಕಾಣೊ - ಜೀವನವೇ 2ವಿಷಯದಿ ಸುಖಕಾಣೆ ಪಶುಜನರೊಳು ದೇಹ |ಹಸನುಗಳೆಯಲು ಬೇಡವೋ - ಜೀವನವೇ||ಬಿಸಜಾಕ್ಷ ಪುರಂದರವಿಠಲನೊಲಿಯೆ ಸುಖ -|ರಸದಿ ಲೋಲಾಡು ಕಾಣೋ - ಜೀವನವೇ 3
--------------
ಪುರಂದರದಾಸರು
ಏಕೆ ವೃಂದಾವನವು ಸಾಕು ಗೋಕುಲವಾಸ |ಏಕೆ ಬಂದೆಯೊ ಉದ್ಧವಾ? ಪಸಾಕು ಸ್ನೇಹದ ಮಾತನೇಕ ಮಹಿಮನು ತಾನು |ಆ ಕುಬುಜೆಯನು ಕೂಡಿದ-ಉದ್ಧವಾ ಅ.ಪಬಿಲ್ಲು ಬಿಳಿಯಯ್ಯನ ಬೇಟ ನಗೆನುಡಿ ನೋಟ |ಇಲ್ಲದಂತಾಯಿತಲ್ಲ ||ಎಲ್ಲರಿಂದಗಲಿಸಿದ ಕ್ರೂರ ಅಕ್ರೂರನವ |ವಲ್ಲಭನ ಒಯ್ದನಲ್ಲ ||ಮಲ್ಲರನು ಮರ್ದಿಸುತ ಮಾವ ಕಂಸನ ಕೊಂದು |ಘಲ್ಲನಾಭನ ತಂದು ತೋರೈ-ಉದ್ಧವಾ 1ಅನುದಿನೊಳಾದರಿಸಿ ಅಧರಾಮೃತವನಿತ್ತು |ಇನಿದಾದ ಮಾತುಗಳಲಿ ||ಮನದ ಮರ್ಮವ ತಿಳಿದ ಮನಸಿಜಪಿತನ ಸಖವು |ಮನಸಿಜನ ಕೇಳಿಯಲ್ಲಿ ||ಕನಸಿನಲಿ ಕಂಡ ತೆರನಾಯಿತಾತನ ಕಾಂಬು |ವನಕ ಬದುಕುವ ಭರವಸೆ ಹೇಳು-ಉದ್ಧವಾ 2ಕರುಣನಿಧಿಯೆಂಬುವರು ಕಪಟನಾಟಕದರಸು |ಸರಸ ವಿರಸವ ಮಾಡಿದ ||ಸ್ಮರಿಸಿದವರನು ಕಾಯ್ವ ಬಿರುದುಳ್ಳ ಸಿರಿರಮಣ |ಮರೆದು ಮಧುರೆಯ ಸೇರಿದ ||ಪರಮಭಕ್ತರ ಪ್ರಿಯ ಪುರಂದರವಿಠಲನ |ನೆರೆಗೂಡಿಸೈ ಕೋವಿದ-ಉದ್ಧವಾ 3
--------------
ಪುರಂದರದಾಸರು
ಏತರ ಚೆಲುವು-ರಂಗಯ್ಯ ಪಹಡೆದ ತಾಯಿ ತನಗುಳ್ಳೊಡೆ-ರಂಗ |ಬುದ್ದಿ ಪೇಳುವ ಪಿತನುಳ್ಳೊಡೆ-ರಂಗ |ಸಿರಿಯುಳ್ಳೊಡೆ ತಾನು ಬಲಿಯ ಮನೆಗೆ ಪೋಗಿ |ಮದನಜನಕನಿಚ್ಚಚೆಲುವನೆಂತೆಂಬೆನೆ |
--------------
ಪುರಂದರದಾಸರು
ಏನ ಮಾಡಲಿ ಶ್ರೀಹರಿ- ಇಂಥ |ಮಾನವಜನ್ಮ ನಚ್ಚಿಸಬಹುದೆ? ಪಮಾತನಾಡದೆ ಮೌನದೊಳಿದ್ದರೆ-ಮೂಕ-|ನೀತನೆಂದು ಧಿಕ್ಕರಿಸುವರು ||ಚಾತುರ್ಯದಿಂದಲಿ ಮಾತುಗಳಾಡಲು |ಈತನು ಬಲು ಬಾಯ್ಬಡಿಕನೆಂಬುವರಯ್ಯ 1ಮಡಿ ನೇಮ ಜಪ-ತಪಂಗಳ ಮಾಡುತಿದ್ದರೆ |ಬಡಿವಾರದವನೆಂದಾಡುವರು ||ಮಡಿ ನೇಮ ಜಪ-ತಪಂಗಳ ಮಾಡದಿದ್ದರೆ |ನಡತೆ ಹೀನನೆಂದು ಬಲು ನಿಂದಿಸುವರಯ್ಯ 2ಗಟ್ಟಿಯಾಗಿ ಒಪ್ಪತ್ತಿನೂಟದೊಳಿದ್ದರೆ |ನಿಷ್ಟೆಯೇನು ಸುಟ್ಟಿತೆಂಬರು |ಗಟ್ಟಿಯಾಗಿ ಎರಡು ಮೂರು ಬಾರಿಯುಂಡರೆ |ಹೊಟ್ಟೆ ಬಾಕನೆಂದು ತೆಗಳಾಡುವರಯ್ಯ 3ಒಲಪಿನೊಳ್ಚೆನ್ನಿಗತನವನು ಮಾಡಲು |ಬಲು ಹೆಮ್ಮೆಗಾರನೆಂದಾಡುವರು ||ಸುಲಭತನದಿ ತಾ ನಿಗರ್ವಿಯಾಗಿದ್ದರೆ |ಕಲಿಯುಗದಲಿ ಮಂದಮತಿಯೆಂಬುವರಯ್ಯ 4ನರಜನ್ಮದೊಳಗಿನ್ನು ಮುಂದೆ ಪುಟ್ಟಿಸಬೇಡ |ಮೊರೆ ಹೊಕ್ಕೆ ಮತ್ಸ್ಯಾವತಾರ ನಿನ್ನ ||ಧರೆಯೊಳಗಿಹ ಪರಿಯಂತರ ಸಲಹೆನ್ನ |ಕರುಣವಾರಿಧಿ ಶ್ರೀಪುರಂದರವಿಠಲ5
--------------
ಪುರಂದರದಾಸರು
ಏನಮಾಡಿದರೆನ್ನ ಭವಹಿಂಗದು |ದಾನವಾಂತಕ ನಿನ್ನ ದಯವಾಗದನಕ ಪಅರುಣೋದಯಲೆದ್ದು ಅತಿಸ್ನಾನಗಳ ಮಾಡಿ |ಬೆರಳನೆಣಿಸುತ ಸ್ಮರಿಸಿ ನಿಜವರಿಯದೆ ||ಶರಣು ಸಾಷ್ಟಾಂಗವನು ಹಾಕಿದೆನು ಶತಸಹಸ್ರ |ಹರಿನಿನ್ನ ಕರುಣಾ ಕಟಾಕ್ಷವಿರದನಕ1ಶೃತಿಶಾಸ್ತ್ರ ಪುರಾಣಗಳನೋದಿ ಬೆಂಡಾದೆ |ಅತಿ ಶೀಲಗಳನೆಲ್ಲ ಮಾಡಿ ದಣಿದೆ ||ಗತಿಯ ಪಡೆಯುವೆನೆಂದು ಗಯೆ ಕಾಶಿಯ ಮಾಡಿದೆನು |ರತಿಪತಿಯ ಪಿತ ನಿನ್ನ ದಯವಾಗದನಕ 2ದಾನವನು ಮಾಡಿದೆನು ಮೌನವನು ತಾಳಿದೆನು |ಙ್ಞÕನ ಪುರುಷಾರ್ಥಕ್ಕೆ ಮನವೀಯದೆ ||ಶ್ರೀನಾಥ ದಯಪೂರ್ಣ ಪುರಂದರವಿಠಲನ |ಧ್ಯಾನಿಸುವರೊಡನಾಡಿ ನೆಲೆಗೊಳ್ಳದನಕ 3
--------------
ಪುರಂದರದಾಸರು
ಏನಿದ್ದೀತೇನಿದ್ದೀತೋ ಈ ನಾಮದಲ್ಲೇನಿದ್ದೀತೇನಿದ್ದೀತೋ ಪಏನಿದ್ದೀತೇನಿದ್ದೀತೇನ ಪೇಳಲಿ ನಾಜಾನಕೀಶನ ನಾಮ ಹಾನಿಮಾಡದೆ ಕಾಯ್ವುದೇ ಅ.ಪಜ್ಞಾನ ಕೊಡುವುದಲ್ಲೋ ಅಜ್ಞಾನ ಖೂನಕ್ಕುಳಿಸದಿರೆಲೋಸಾನುರಾಗದಿ ನಿಜಜ್ಞಾನ ಬೋಧಿಸಿ ಮಹಹೀನ ಬವಣೆಕಳೆದಾನಂದ ಕೊಡುವುದು 1ನರಕಕ್ಹೋಗುವನನ್ನು ಭರದಿಕರುಣಿಸಿ ಪದವನ್ನುಕರುಣದಿತ್ತು ಹರಿಶರಣರೊಳಾಡಿಸಿಪರಮಪರತರವೆನಿಪ ಸ್ಥಿರಸುಖ ಪಾಲಿಸಿತು2ಜರಮರಣಳಿಯುವುದು ಅದರೊಳ್ಕರುಣವೆ ತುಂಬಿಹ್ಯದುದುರಿತದಿ ಸಿಲ್ಕೆಲ್ಲಿ ಕರೆದರು ಅಲ್ಲಿಗೆತ್ವರಿತದೊದಗಿ ಬಂದು ನಿರುತದಿಂ ಸಲಹುವುದು 3ಭವಬಾಧೆ ಕಳೆಯುವುದುಜವನ ಭಯವೆ ತಪ್ಪಿಸುತಿಹ್ಯದುದಿವರಾತ್ರಿ ಎನ್ನದೆ ನಯದಿ ಭಜಿಪರೊಳುದಯದಿ ನಿಂತು ತಾನೆ ಜಯವ ನೀಡುವುದು 4ಅಂತ್ಯಪಾರಿಲ್ಲ ಕಾಣೋ ಶ್ರೀರಾಮನಾಮದ್ದೆಂಥ ಶಕ್ತಿಯೇನೋಚಿಂತಿಪ ಭಕ್ತರ ಅಂತರಂಗವನರಿತುಸಂತಸ ನೀಡಿ ಮುಕ್ತಿಸಂಪದ ಕೊಡುವುದು 5
--------------
ರಾಮದಾಸರು
ಏನು ಧನ್ಯಳೊ ಗಿರಿಜೆ ಎಂಥ ಮಾನ್ಯಳೋ ಪಸ್ಥಾಣುವಮೂರ್ತಿಪಾದಸೇವೆತಾನೆನಿರತಮಾಡುತಿಹಳೊ ಅ.ಪಭೂತಗಣದ ಯೂಥವಿರಲುಸೂತಗಣನಾಥಾದ್ಯರಿರಲುಭೂತಪತಿಯಚರಣತೊಳೆದುತೀರ್ಥಕೊಡುತ ಬರುವಳ್ ಸಭೆಗೆ 1ನಾರದರು ದಿಕ್ಪಾಲರಿರಲುವಾರಿಜಾಸನ ವಿಷ್ಣುವಿರಲುಮಾರಹರನಿಗಾರತಿ ಎತ್ತಿತಾನೆ ಸಭೆಗೆ ತೋರಿಸುವಳು 2ವಸುಗಳ್ ಸಪ್ತ ಋಷಿಗಳಿರಲುಅಸುರ ಶಿಕ್ಷರು ನುತಿಸುತಿರಲುಪಶುಪತಿಯ ಲೇಪಿಸಿದ ಭಸ್ಮಗೋವಿಂದಾದ್ಯರಿಗೆ ಪ್ರಸಾದ ಕೊಡುವಳ್ 3
--------------
ಗೋವಿಂದದಾಸ
ಏನು ಭ್ರಮೆ ಮನುಜ ನಿನಗ್ಯಾಕೆ ಹರಿಭಟರಹಗೆಪರಮಾನಿನಿಯ ಸಂಗ ನರಕದೊಳು ಬಲುಭಂಗಪ.ಮಬ್ಬು ಮುಸುಕಿದ ಪರಿಯ ನಿಜಸತಿಯ ನೋಡದೆ ಮತ್ತೊಬ್ಬಳ ಕುಚಕೆ ಕಮಲವ ಹೋಲಿಸಿಕೊಬ್ಬು ಮೈಯವಳ ಸಖವಿಡಿದರದು ಮಹಾಶೋಕತಬ್ಬಿಬ್ಬುಗೊಳುತ ನಿರಯಂಗಳುಂಬೆ 1ಇಂದುಮುಖಿಯಳ ಸಂಗ ಎನಗಿಂದು ಕೈಗೂಡಲೆಂದೊಬ್ಬ ಕುಂಟಣಿಗೆ ಧನವಿತ್ತೆ ನಿನ್ನಸಂದುಗಳ ಕಡಿದು ವೈತರಣಿ ಸಲಿಲದಿ ದೇಹಹೊಂದಿಸುವರುಂಟು ಕಾಲನ ಕುಂಟಣಿಗರು 2ಚಿಕ್ಕಬಲೆಯರ ಕಂಡು ಚಂಚಲಿತನಾಗ್ಯವರವಕ್ರನೋಟದಿ ಹಲವು ಸನ್ನೆಯಿಂದತರ್ಕೈಸಬೇಕೆಂಬ ಲಂಪಟದಿ ತಪ್ತಾದಶರ್ಕರಾಯಸ ಸ್ತಂಭವಪ್ಪಿ ಪೊರಳೇಳುವೆ 3ಹರಿದಾಸರಾಚಾರ ಕೇಳಲಸಿ ಪಳಿದೊರೆದುಒರಟು ಮಾತಿನ ಸರಕಲಾಯುಗಳಿದೆವಿರತಿಜ್ಞಾನಾನ್ವಿತರ ವೆರಸದಂಧಕನಾದೆತರಣಿಯೊಳು ಹೊಂಬುಳವು ಗರುವಿಸಿದ ತೆರದಿ 4ಜಂಬುಕವು ಹರಿಯೊಡನೆ ಸರಸವಾಡಿದ ಪರಿಯೊಳಂಬುಜಾಕ್ಷನ ದಾಸನಿಂದೆ ಮಾಡಸಲ್ಲಕುಂಭಿಪಾಕಿನಿಯಲ್ಲಿ ಮರಳಿಸುವ ಭಯವರಿತುನಂಬು ಪ್ರಸನ್ವೆಂಕಟೇಶನಂಘ್ರಿಯ 5
--------------
ಪ್ರಸನ್ನವೆಂಕಟದಾಸರು
ಏನು ಮರುಳಾದೆವ್ವ ಎಲೆ ಭಾರತೀ |ನೀನರಿಯೆ ಪವನನಿಂಥವನೆಂಬುದು ಪಕಲ್ಲು ಹೊರುವನು ಮತ್ತೆ ಯಾರಿಂದಲಾಗದವು |ಎಲ್ಲರಂತಲ್ಲ ಕಪಿರೂಪನೋಡು||ಖುಲ್ಲಫಲಪುಷ್ಪಯುಕ್ತ ವನವನು ಕೆಡಿಸಿದನು |ಎಲ್ಲಿಂದ ಒದಗಿದನೊ ಈ ಪತಿಯೊ ನಿನಗೆ1ರಕುತವಂ ಪಾನ ಮಾಡಿದನಂತೆ ಕೇಳಿದೆಯಾ |ರಕ್ಕಸೊಬ್ಬಳು ನಿನಗೆ ಸವತಿ ಇಹಳೂ ||ಮಕ್ಕಮಾರಿಮಗನುಂಟು ಗಂಡನು ಬದ |ನಕ್ಕೆ ಗತಿಯಿಲ್ಲದೆಲೆಭಿಕ್ಷೆಬೇಡುವನು 2ಹುಟ್ಟು ಬಡವವ ತಾನಾದರೇನಾಗಲಿ ನಿನ್ನ |ಬಿಟ್ಟು ತುರ್ಯಾಶ್ರಮವ ಧರಿಸಿಕೊಂಡು ||ದೃಷ್ಟಿಗೋಚರನಾಗದೇ ನರರಿಗೆ ಪ್ರಾಣೇಶವಿಠಲನ ಬಳಿಯಲ್ಲಿ ಬದರಿಯೊಳು ಸೇರಿಹನು 3
--------------
ಪ್ರಾಣೇಶದಾಸರು