ಒಟ್ಟು 7308 ಕಡೆಗಳಲ್ಲಿ , 133 ದಾಸರು , 4284 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದೇ ಹೌದು ಭವತರಿಯುವ ಶಸ್ತ್ರ ಪದೇ ಪದೇ ಸಿರಿವರನ ಸ್ತೋತ್ರ ಪ ಅಧಮಮತಿಯ ಬಿಟ್ಟು ಸದಮಲ ಮನದಿಂ ವಿಧವಿಧ ಹರಿಯೆಂದೊದುರುತ ಕಾಣುವುದೆ ಅ.ಪ ದಾನಧರ್ಮಯಜ್ಞ ಇವು ಯಾಕೊ ಸ್ನಾನ ಮೌನ ಜಪ ಮತ್ತ್ಯಾಕೊ ನಾನಾ ಮಂತ್ರ ತಂತ್ರ ಗೋಜ್ಯಾಕೆಬೇಕೊ ಕ್ಷೋಣಿ ತಿರುಗಿ ಬಹು ದಣಿಲ್ಯಾಕೊ ನಾನಾಪರಿಯಲಿಂದ ದೀನದಯಾಪರ ಗಾನಲೋಲನ ಭಜನಾನಂದ ಪಡೆವುದೆ1 ವೇದಪುರಾಣ ಪುಣ್ಯ ಶಾಸ್ತ್ರಗಳ್ಯಾತಕೊ ಸಾಧನಸಿದ್ಧಿಗಳ ಬಲವ್ಯಾಕೋ ಭೇಧಯೋಗದ ಬಹು ಬೋಧಗಳ್ಯಾತಕೊ ಓದಿಓದಿ ದಿನಗಳಿಲ್ಯಾಕೊ ವೇದಗಮ್ಯದಾದಿ ಮೂರುತಿ ಶ್ರೀ ಪಾದವರಿತು ಆರಾಧಿಸುತಿರುವುದೆ 2 ಕಾಶಿ ಕಂಚಿ ಕಾಳಹಸ್ತಿ ತಿರುಗಲ್ಯಾಕೊ ಸಾಸಿರದೈವಕೆ ಬಾಗುವುದ್ಯಾಕೊ ಮಾಸಪಕ್ಷ ವ್ರತ ನೇಮಗಳ್ಯಾತಕೊ ಘಾಸಿಯಾಗಿ ದೇಹ ದಂಡಿಸಲ್ಯಾಕೊ ಶೇಷಶಯನ ನಮ್ಮ ಶ್ರೀಶ ಶ್ರೀರಾಮನ ಲೇಸಾದ ನಾಮವೊಂದೆ ಧ್ಯಾಸದಿಟ್ಟು ನುಡಿ 3
--------------
ರಾಮದಾಸರು
ಇದೇನಿದೇನು ನಿನ್ನ ಪದವ ನಂಬಿದವ ಗೆಡರು ಬಾಧಿಸು ವದೇನು ಪ ಅವನ ಬದಿಯಲಿ ಗರುಡ ಮಣಿಯಿರೆ| ಹಾವಿನ ಗರಳವ ಏರುವದೇ| ಅಮೃತ ಕಲಶ ಮನೆಯೊಳಿರೆ| ಸಾವಿನ ಭಯದಿಂಬಳಲುವರೇ ರಂಗಯ್ಯಾ 1 ಹನುಮನ ಪರಿಚಾರಕರಿಗೆ ಬೆಂಬತ್ತಿ ಬಿನಗು ಭೊತಂಗಳು ತಟ್ಟುವವೇ ಅನಳನ ಹೊರಿಯಲಿ ಕುಳಿತಿರೆ ಹಿಮದಿಂದ ತನುಗುಗ್ಗರಿಸಿ ಬಿದ್ದು ಎರಗುವ ದೇನಯ್ಯಾ 2 ದುರಿತ ಬಂದು| ಕುಂದ ನಿನಗಲ್ಲವೇ ಎನ್ನವ ಗುಣಗಳ ನೋಡದೆ ರಕ್ಷಿಸು ಸನ್ನುತ ಮಹಿಪತಿ ನಂದನ ಜೀವನ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇದೇವೆ ಗುರು ಘನ ಮಹಿಮೆ ಧ್ರುವ ಅಧ್ಯಾತ್ಮದಾನಂದದ ನೆಲೆನಿಭ ಮಹಾತ್ಮರು ಬಲ್ಲರು ಖೂನ ಹೊಳೆಯುತಿಹ್ಯದು ಅನುದಿನ ಚಿಂತಾಯಕ ಗುರು ಘನ ಪ್ರತಾಪವು ತುಂಬಿಹ್ಯದು ಪರಿಪೂರ್ಣ ಶುದ್ಧಾಂತ್ಮದ ಸೂತ್ರಾಂತ್ರದ ಗತಿಗಳ ಮೂಢಾತ್ಮರು ಬಲ್ಲವೇನ 1 ಮಹಿಮರು ಮನಿಮನಿಗಿಲ್ಲ ಮಹಿಮಾನಂದದನು ಸಂಧಾನ ಪರಮವಿರಕ್ತನೇ ಬಲ್ಲ ಜೀವನ್ಮುಕ್ತಾಗುವ ಗತಿ ಮಾರ್ಗವು ಎಂದಿಗೆ ದೊರೆವದಿದೆಲ್ಲ ಪೂರ್ವಕಲ್ಪನೆಯಲ್ಲ ಮಿಕ್ಕಿನಾ ನರಗುರಿಗಳಿಗಿದು ಇಲ್ಲ 2 ಹುರಳಿಲ್ಲದ ಕರ್ಮಾಚರಣೆಯೊಳು ಮರುಳಾದರು ಜನವೆಲ್ಲ ಸರ್ವರಿಗಾವುದಲ್ಲ ಪೂರ್ವಾ ಪಾರ ಮಹಾಗುರು ಯೋಗಮಾರ್ಗವು ಸ್ತುತಿಸಲೆನಗಳವಲ್ಲ ಸರ್ವಮಯವೆಲ್ಲ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದೇವೆ ಗುರುಕೃಪೆಯದಾಟಗಳು ಧ್ರುವ ಮನಯೋಗದ ಗೋಲ್ಹಾಟಗಳು ಅನುದಿನ ಅನಿಮಿಷ ನಯನದ ನೋಟಗಳು ಜ್ಞಾನ ಸಮುದ್ರದ ಲೋಟಗಳು ಏನೇಂದ್ಹೇಳಲಿ ಸ್ವಾನಂದದ ಸುಖ ಅನಂದೋಬ್ರಹ್ಮದ ಆಟಗಳು 1 ಸೊನ್ನೆಯ ಸೂಟಿಗಳು ತಾಳಮೃಂದಗವು ಭೇರಿಡುತಿಹ್ಯ ಕೇಳುವ ಧಿಮಿಧಿಮಿಟಗಳು ತಲ್ಲೀನದಿ ಶ್ರುತಿಘೋಷಾಲಿಸುವನೀದೃಶ್ಯದ ಉದಾಟಗಳು ತಿಳಿಯಲು ಬಲು ಆವ್ಹಾಟಗಳು 2 ಬಲ್ಲವೇನು ನರಕೀಟಗಳು ದೇವದೇವೋತ್ಮನ ನೋಟಗಳು ದಯಕರುಣದಿ ಜೀವನ ¸ದ್ಗೈಸುವ ಭವನಾಶನ ಕೃಪಾದೃಷ್ಟಿಗಳು ಧನ್ಯಧನ್ಯ ಕುಲಕೋಟಿಗಳು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದೇವೆ ಪೂಜೆಯ ನೋಡಿ ಹೃದಯದಲಿ ನಿಜ ಒಡಗೂಡಿ ಧ್ರುವ ನಾಮಸ್ವರೂಪದ ನಿಜಗುಹ್ಯವಾರ್ತಿ ವ್ಯೋಮಾಕಾರದ ಮನೆಮೂರ್ತಿ ಸ್ವಾಮಿ ಸದ್ಗುರುವಿನ ಕೀರ್ತಿ 1 ನಿತ್ಯ ನಿರ್ಗುಣ ನಿರ್ವಿಕಲ್ಪಾ ಸತ್ಯಸದ್ಗುರು ಸ್ವರೂಪಾ ನಿತ್ಯ ನಿತ್ಯರ್ಥ ಸುದೀಪಾ ತತ್ವಜ್ಞಾನ ಮನಮಂಟಪಾ 2 ಸ್ವಾದೋದಕ ಙÁ್ಞನ ಭಾಗೀರಥೀ ಅಭಿಷೇಕ ಮೌನಮೌನ್ಯವಸ್ತ್ರಾ ಮೋಲಿಕಾ ಧಾನ್ಯವೆಂಬುದೇ ಸೇವೆ ಅನೇಕಾ 3 ಗಂಧಾಕ್ಷತಿ ಪರಿಮಳವುಳ್ಳ ಪುಷ್ಪ ಬುದ್ಧಿಮನವಾಯಿತು ಸ್ವರೂಪಾ ಸದ್ವಾಸನ್ಯಾಯಿತು ಧೂಪದೀಪ ಸದ್ಭಾವನೆ ನೈವೇದ್ಯಮೋಪಾ 4 ಫಲತಾಂಬೋಲವೆ ಸದ್ಭಕ್ತಿ ಮ್ಯಾಲಭಿಭಾವನೆ ಮಂಗಳಾರ್ತಿ ಕುಲಕೋಟಿ ಉದ್ಧರಿಸುವ ಗತಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದೇವೆ ಬಂದದಾ ಖೂನವು | ಇದೇವೆ ಸಾರ್ಥಕ ಜನುಮವು ಪ ಹೊತ್ತು ಹೋಗದ ಬೀದಿ ಮಾತುಗಳಾಡದೆ ಚಿತ್ತಕ ಆಲೇಶ ತರಗುಡನು ಉತ್ತಮರೊಳುಕೂಡಿ ಶ್ರೀಹರಿ ಮಹಿಮೆಯಾ ನಿತ್ಯ ಕಥಾಮೃತ ಸೇವಿಪನು 1 ಹಾಲವನೆರೆದರೆ ಸರಕನೆ ಕುಡಿಯದ ಬಾಲಕನಂದದಿ ಈ ಮನವು ಕಾಲಕಾಲಕ ಸದ್ಭೋದವ ಕೇಳಿಸಿ ಮ್ಯಾಲ ಸ್ವಹಿತ ಕೊಡುವನು 2 ಉದರದ ಧಾವತಿಗನುದಿನ ಬೆರತಿರ ಇದರೊಳಗೆಚ್ಚರ ಹಿಡಿದಿಹನು ಮದಮತ್ಸರಳಿದು ಗುರುಮಹಿಪತಿ ಪದ ಪದುಮದಹಿಷ್ಠೆಯ ಜಡಿದಿಹನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇದ್ದರಿರಬೇಕು ಸಂಸಾರಸುಖದಲ್ಹೀಗೆ ಪದ್ಮಪತ್ರವು ಜಲದೊಳಗಿದ್ಹಾಂಗೆ ಧ್ರುವ ನಡಿನಡಿಯಬೇಕ್ಹೀಂಗೆ ತಡಿಯೊಳರಿಬಿಡದ್ಹಾಂಗೆ ನುಡಿನುಡಿಯಬೇಕು ಹರಿನುಡಿಸಿದ್ಹಾಂಗೆ ಪಡೆದರಿದೇ ಪಡಿಯಬೇಕು ಹರಿ ಒಡಲ ಹುಗುವ್ಹಾಂಗೆ ಅಡಿಗಡಿಗೆ ಹರಿಕೂಡಿ ಬಿಡದಗ್ಹಲದ್ಹಾಂಗೆ 1 ಇಡಗಿ ಇಡಬೇಕ್ಹಿಂಗೆ ಇಡಗರಿಗುಡಿಸಿದ್ಹಾಂಗೆ ತುಡಗಿ ತುಡಬೇಕ್ಹೀಂಗೆ ತುಡಮಾಡಿಸದ್ಹಾಂಗೆ ಉಡಗಿ ಉಡಬೇಕ್ಹೀಂಗೆ ಉಡಿಗರಿಗುಡಿಸಿದ್ಹಾಂಗೆ ಮುಡಗಿ ಮುಡಿಬೇಕ್ಹಾಂಗ್ಹರಿಗೆ ಮುಡಿಸಿದ್ಹಾಂಗೆ 2 ಉಂಡರುಣಬೇಕ್ಹೀಂಗೆ ಉಂಡದರಿಗುಣಸಿದ್ಹಾಂಗೆ ಕೊಂಡುದಕೋ ಹರಿಗೆ ಕೊಡಿಸಿದ್ಹಾಂಗೆ ಮಂಡಣಿಯ ಮಾಡ್ಹೀಂಗೆ ಹರಿಗೆ ಮಂಡಿಸಿದ್ಹಾಂಗೆ ಕೊಂಡು ಕೊಂಬುದು ಹರಿಕಂಡು ಒಲುವ್ಹಾಂಗೆ 3 ಮಲಗಿ ಏಳುವದ್ಹೀಂಗೆ ಮಲಗರಿಗೇಳಿಸಿದ್ಹಾಂಗೆ ತಿಳವು ತಿಳವದು ಹರಿ ತಿಳಿಸಿದ್ಹಾಂಗೆ ಸುಳವು ಸುಳವರು ಹರಿಸುಳಸ್ಯಾಡಿದ್ಹಾಂಗೆ ಒಲವು ಮಾಡುವದ್ಹೀಂಗೆ ಹರಿಯ ಒಲಿವಾದ್ಹಾಂಗೆ 4 ರತಿಪಿಡಿದು ಹೀಂಗೆ ಹರಿಗತಿಯಾಗುವ್ಹಾಂಗೆ ಅತಿಹರುಷ ಬಡು ಹರಿನೋಡುವ್ಹಾಂಗೆ ಸಥಿಯ ಪಡೆದವುದು ಹೀಂಗರಿಯು ಸಥಿನಡಿಸಿದ್ಹಾಂಗೆಸ್ತುತಿಮಾಡುವ ಮಹಿಪತಿ ಪ್ರತಿಗಾಣದ್ಹಾಂಗೆ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದ್ದರೆ ಹೀಗೆ ಇರಬೇಕು ಇಲ್ಲದಿದ್ದರೆ ಕಾಯವ ಬಿಡಬೇಕು ಶುದ್ಧ ಚಿತ್ತವಾಗಿ ಹೃದಯದೊಳಿದ್ದ ವಸ್ತುವನ್ನು ನಿನ್ನ ಬುದ್ಧಿಯಿಂದ ನೀನೆ ತಿಳಿಯುತ್ತಿದ್ದು ಜೀವನ್ಮುಕ್ತನಾಗಿ ಪ ಕಲ್ಲು ಮರಳು ಕಾಷ್ಠತರುಗಳಲ್ಲಿ ಗಿರಿಗಳಲ್ಲಿ ಚರಿಸುವ ಹುಲ್ಲೆ ಕರಡಿ ವ್ಯಾಘ್ರ ಸಿಂಹದಲ್ಲಿ ಪಕ್ಷಿ ನಾನಾಮೃಗ ಗಳಲ್ಲಿ ವಸ್ತುವೊಬ್ಬನಲ್ಲದಿಲ್ಲವೆಂದು ಭಾವಿಸುತ್ತ 1 ದ್ರಷ್ಟವಾಗಿ ತೋರ್ಪುದೆಲ್ಲ ನಷ್ಟವಾಗಿ ಪೋಪುದೆಂದು ದಿಟ್ಟನಾಗಿ ತಿಳಿದುಜ್ಞಾನ ದೃಷ್ಟಿಯಿಂದಲೆ ದುಷ್ಟಜನರ ಸಂಗವನ್ನು ಬಿಟ್ಟು ಅರಿಗಳರುವರನ್ನು ಕುಟ್ಟಿ ಕೆಡಹಿ ಆಶಪಾಶವೆಂಬ ಹಗ್ಗವನ್ನು ಹರಿದು 2 ಗೇರು ಹಣ್ಣಿನ ಬೀಜ ಹೊರಸಾರಿ ಇರ್ದವೊಲು ಸಂ ಸಾರವೆಂಬ ವಾರಿಧಿಯೊಳು ಕಾಲಗಳೆಯುತ ನೀರ ಮೇಲಕಿದ್ದ ನಳಿನದಂತೆ ಹೊರಗೆ ಬಿದ್ದು ಬಕನ ಚಾರು ಚರಣ ಸ್ಮರಣೆಯಿಂದ 3
--------------
ಕವಿ ಪರಮದೇವದಾಸರು
ಇದ್ದೀಯಾ ಶ್ರೀ ಹರಿ ನೀನೊಲಿದು ಬಂದಿದ್ದೀಯಾ ಪ ಇದ್ದೀಯಾ ಶ್ರೀಹರಿ ನೀನು - ವೃದ್ಧಿಸಿದ್ಧಿಯ ನಡುವೆ ಪದುಮನಾಭನು - ಅಭಿ-ವೃದ್ಧಿಯಾಗಲು ತಡವೇನು - ಅಹಬುದ್ಧಿಯಾಗಿ ಭಜಿಸುವ ಬಾಳುವೆಗೆ - ಸ-ಮೃದ್ಧಿಯಾಗಿ ಸರ್ವ ಸಿದ್ಧಿಯ ಕೊಡಲಾಗಿ 1 ನಂಬಿದ್ದ ಸುಜನರು ಹರಿಯೆ - ಕೆಟ್ಟದೆಂಬ ಸುದ್ದಿಯ ನಾನರಿಯೆ - ಸತ್ಕು-ಟುಂಬ ಎಂಬುದು ಹೊಸಪರಿಯೆ - ಅಹಬೆಂಬಲವಾಗಿ ಸಜ್ಜನರ ಸಲಹುವ ಕೃ-ಪಾಂಬುಧಿ ಮೂಜಗಕೊಲಿಯಲೋಸುಗ ಬಂದು ಉಲಿಯೆ2 ಇಂದು - ಅಹಆಸೆ ಬಿಟ್ಟು ಪೂಜಿಸುವ ಭಕ್ತರದಾಸನೆಂದು ವೆಂಕಟೇಶ ನೀನೊಲಿದು ಬಂದಿದ್ದೀಯಾ3
--------------
ಕನಕದಾಸ
ಇಂದ್ರರೊ ದೇವೇಂದ್ರರೊಚಂದ್ರನಂತೆ ಹೊಳೆಯುತ ಬಂದರೈವರು ಪ. ರಾಮ ಪಾಂಡವರಿಗೆ ಕ್ಷೇಮಾಲಿಂಗನಕೊಟ್ಟುಪ್ರೇಮದಿ ಕೈಯ ಹಿಡಿದನುಪ್ರೇಮದಿ ಕೈ ಹಿಡಿದು ಮಾತಾಡಿದಸ್ವಾಮಿ ಸನ್ನಿಧಿಗೆ ಬರಬೇಕು 1 ನೊಸಲಲ್ಲೆ ಕಸ್ತೂರಿ ಎಸೆವುತ ಸಂಪಿಗೆಕುಸುಮದ ಮಾಲೆ ಅಲವುತ ಕುಸುಮದ ಮಾಲೆ ಅಲವುತ ಪ್ರದ್ಯುಮ್ನವಸುಧಿಪಾಲಕರ ಕರೆದನು2 ದುಂಡು ಮುತ್ತುಗಳಿಟ್ಟು ಪೆಂಡೆ ಸರ ಹಾಕಿಪುಂಡರೀಕಾಕ್ಷ ಕುಳಿತಿದ್ದಪುಂಡರೀಕಾಕ್ಷ ಕುಳಿತಿದ್ದ ಚರಣಕ್ಕೆಪಾಂಡವರು ಬಂದು ಎರಗಿದರು3 ರನ್ನ ಮಾಣಿಕ ಬಿಗಿದ ಹೊನ್ನ ಮಂಚದ ಮೇಲೆ ಪನ್ನಂಗಶಯನ ಕುಳಿತಿದ್ದಪನ್ನಂಗಶಯನ ಕುಳಿತಿದ್ದ ಚರಣಕ್ಕೆಸುಭದ್ರೆ ಬಂದು ಎರಗಿದಳು 4 ಮಿಂಚಿನಂತೆ ಹೊಳೆಯುತ ಪಂಚಬಾಣನಪಿತ ಮಂಚದ ಮೇಲೆ ಕುಳಿತಿದ್ದಮಂಚದ ಮೇಲೆ ಕುಳಿತಿದ್ದ ಚರಣಕ್ಕೆಪಾಂಚಾಲೆ ಬಂದು ಎರಗಿದಳು5 ಸೂಸು ಮಲ್ಲಿಗೆ ಹೂವ ಹಾಸಿದ ಮಂಚದಿವಾಸುಕಿಶಯನ ಕುಳಿತಿದ್ದವಾಸುಕಿಶಯನ ಕುಳಿತಿದ್ದ ಚರಣಕ್ಕೆಆಶೇಷ ಜನರೆಲ್ಲ ಎರಗಿದರು6 ಸ್ವಾಮಿ ರಾಮೇಶನು ಕ್ಷೇಮ ಕುಶಲವ ಕೇಳಿಬ್ರಾಹ್ಮಣರ ದಯವು ನಿಮಗುಂಟು ಬ್ರಾಹ್ಮಣರ ದಯವು ನಿಮಗುಂಟು ಎನುತಲೆಸ್ವಾಮಿ ಶ್ರೀಕೃಷ್ಣ ನುಡಿದನು7
--------------
ಗಲಗಲಿಅವ್ವನವರು
ಇಂದ್ರಿಯವಶಕನ ಮಾಡಿದಿರೆನ್ನಮುಂದುವರಿವೆನರಿಯದೆ ಸುಪ್ರಸನ್ನಾಪಎನ್ನೊಳಿರುವ ಗುಣದೋಷ ಸೂಕ್ಷ್ಮಂಗಳಚನ್ನಾಗಿ 'ವರಿಸಿ ತಿಳಿದು ನೋಡೆಮನ್ನಿಸಿ ಪೊರೆವ ಕರುಣ ಬರದಿದ್ದರುನಿನ್ನವನೆಂಬಭಿಮಾನದಿಂ ಗುರುವೆ1ಶೈಲಕೆ ಸ್ಥೂಲತೆ ಜಾಲಾಂದ್ರಗತ ರೇಣುಜಾಲಕೆ ಸೂಕ್ಷ್ಮತೆಯತಿ ಲಾಘವತೂಲಕೆ ಬಂದಿಪ್ಪ ಸ್ವಾಭಾ'ಕವ ನೋಡಿತಾಳಲಾರದವನಂದದಿ ಮುಂದುವರಿಸುವೆನು2ಮಶಕ ಮಕ್ಷುಕ ಮಲ ಕ್ರಿ'ು ಖರ ಸೂಕರಶಶ ಗಜ ತುರಗ ವ್ಯಾಘ್ರಾಧಿಗಳಪಶುಗಳ ಸಂದಣಿಗಳಲಿ ಕೊಂಬೆನು ಎನ್ನವಶ'ಲ್ಲವೆಂದಿವ ವೊಳಗುಗೈವವರುಂಟೆ 3ಪರರೆನ್ನೊಳಿಹ ಗುಣ ದೋಷಾನುಸಾರದಿಹರುಷ 'ಷಾದಜನಕ ವಾಕ್ಯವಅರಿತರಿಯದೆ ನುಡಿದರೆ 'ಚಾರಿಸಿ ನಾನೆಚ್ಚರುಗೊಳ್ಳದು ಭ್ರಮೆುಂ ಕೆಡುತಿಹೆನಾಗಿ 4ಪರರ ದೂಷಣೆಯ ನಾ ಮಾಡಿದರುಪರರೊಳು ಬರಿದೆ ದ್ವೇಷವನೆಸಗಿದರು ಮುಂದೆ'ರಿಯರ ವಚನವ ಹಳಿದರು ಸಟೆಯನುಚರಿಸಿದರಾಗಲೆನಗೆ 'ಪ್ರಹತಿ ದೋಷ 5ರಾಗ ದ್ವೇಷದ ಬಲ'ಡಿದನ್ಯಧರ್ಮವನಾಗಮವಂತರ ಸಮ್ಮತವಾಕೂಗಿ ವಾದಿಸಿ ಜುಸುವ ಬುದ್ಧಿಗೈದರಿನ್ನಾಗಲಿ ಸುರೆಯನ್ನೀಂಟಿದ ದೋಷವೆನಗೆ6ಪರನಾರಿಯರ ರೂಪು ಲಾವಣ್ಯವನು ನೋಡಿಕರಗಿದೆನೈ ಕಾಮಾಧೀನನಾಗಿಬರಿಯನೃತವನಾಡ್ದೆನೈ ತಪ್ಪಿದೆನು ಮುಂದೆಬರಲಿ ಸ್ವರ್ಣಸ್ತಿಯ ದೋಷವೆನಗೆ ಸ್ವಾ'ು 7ಆರಾದರೇನವರೆಸಗಿದ ಕರ್ಮದದಾರಿಯೊಳಿರೆ ನಿಗ್ರ'ಸಿನು ಮುಂದೆದೂರಿಕೊಂಡರೆ ಕೇಳಿ ಖತಿಗೊಂಡೆನಾದರೆಸಾರಲಿ ಗುರುದಾರಗಾ'ುದೋಷವು ನನ್ನ 8ಆವಜನ್ಮದ ಸುಕೃತವೊ ನಿನ್ನ ಚರಣದಸೇವೆ ದೊರಕಿ ಧನ್ಯನಾದೆನಯ್ಯಾಭಾವನೆಯಳವಡದ ಅಭಿಮಾನದಿಂದನ್ಯಜೀವರೊಳ್ದೋಷವನೆಣಿಸಿ ನಾನೊಂದೆನೂ 9ಎನ್ನ ಜನನಿ ಜನಕರು ನಿನ್ನ ಚರಣದೊಳ್ಚೆನ್ನಾಗಿ ನಿಂದರು ಸದ್ಗುರುವೆನಿನ್ನವನಾದೆ ನಾನಿಲ್ಲ ಜನುಮವೆನಗೆನ್ನುತಿದ್ದರು ರಾಗಾದಿಗಳಾಶೆ ಬಲುಹಯ್ಯ 10ಮರೆತು ನಡದೆನು ತಪ್ಪಿದೆನಯ್ಯ ಚಿಕನಾಗಪುರವಾಸ ಗುರು ವಾಸುದೇವಾರ್ಯನೆಪರಮ ಪಾಪಿಗಳ ಸಂಸರ್ಗದೋಷವೆನಗೆಬರಲಿ ಮಾಡಿದ ಪ್ರತಿಜ್ಞೆಯ ಬಿಟ್ಟೆನಾದರೆ 11
--------------
ವೆಂಕಟದಾಸರು
ಇನಕುಲಪತಿ ಕರುಣಿಸೊ ಸಲಹುವರನ್ಯರನರಿಯೆ ಪ ತಾಪಸರಮಣಿಯ ಶಾಪವ ತಪ್ಪಿಸಿ ಶ್ರೀಪತೆ ಕಾಯಲಿಲ್ಲವೆ ರಾಘವ 1 ನೀರಜ ಕರುಣೆಯ ತೋರಿಸು ಗುಣಧಾಮನೆ ರಾಮನೆ 2 ನಾಮಗಿರಿ ಶ್ರೀ ಸ್ವಾಮಿನೃಸಿಂಹನೆ ನೇಮಿಸು ನಿನ್ನ ಸೇವನೆ ದೇವನೆ 3
--------------
ವಿದ್ಯಾರತ್ನಾಕರತೀರ್ಥರು
ಇನಿಯಗೆನ್ನೊಡನೆ ಮುನಿಸೋ ಪ್ರೀತಿಯೋ ಪೇಳೆವನಜಾಕ್ಷಿಯವನೆಸಗಿದುದಾ ಪೇಳ್ವೆನೆ ಪ ಮೃಗಮದ ತಿಲಕವ ಪಣೆಗೆ ತಾನಿಡಲಿಲ್ಲಅಗಿಲುಗಂಧವ ಮೈಗೆ ತೀಡಲಿಲ್ಲ ಸೊಗಸು ಸಂಪಿಗೆ ಸರವಮುಡಿಸಿ ಝಗಝಗಿಪ ಮುತ್ತಿನ ಸರವಹಾಕದೆ ಎನ್ನ ಮುಗುಳು ಮೊಲೆಗೆಸೆಳ್ಳುಗುರಿಕ್ಕದಿದ್ದ ಮೇಲೆ1 ಗುರುಕುಚರ್ಚಿತ ಮೃಗಮದ ಪತ್ರವ ಸೆರಗಿನಿಂದೊರಸಿದನೆಕುಂಕುಮಗಂಧವ ಭರದಿ ಲೇಪಿಸಿದನೆ ತಾನೆತಾಂಬೂಲವ ಹರುಷದಿ ಕರದಿತ್ತನೆಆಲಿಂಗಿಸಿ ಪರಮ ಸಂತೋಷದಿ ತಿರುಗಿ ನೋಡಿದನೆ 2 ಧರಿಸಿದ ಮಿಸುನಿಯ ಆಭರಣಂಗಳ ಭರದಿಂದ ತೆಗೆದ ತಾನೆಚಿನ್ನದುಂಗುರವ ಬೆರಳಿಗೆ ನಲಿದಿಟ್ಟನೆತರುಣಿ ಬಾರೆಂದು ನಂಬುಗೆಗೊಟ್ಟನೆಶ್ರೀ ಕೆಳದಿಯ ಪುರದ ರಾಮೇಶ ಎನ್ನನೆರೆದು ಮನ್ನಿಸಿದನೆ3
--------------
ಕೆಳದಿ ವೆಂಕಣ್ಣ ಕವಿ
ಇನ್ನಾದರೂ ದಯಬಾರದೇ ದಾಸನಮೇಲೆ ಇನ್ನಾದರೂ ದಯಬಾರದೇ ಪ ಪನ್ನಗ ಶಯನನೇ ಚೆನ್ನಕೇಶವನೇ ನಿಂನ್ನನು ನಂಬಿದ ಶರಣನಮೇಲೇ ಅ.ಪ ಹಲವು ಯೋನಿಗಳಲ್ಲಿ ನೆರೆ ಪುಟ್ಟಿ ಬಂದೇ ಹಲವು ಯಾತನೆಗಳ ಸಹಿಸುತ್ತ ಬಂದೇ ಹಲವು ರೀತಿಗಳಿಂದ ದುಃಖವ ತಿಂದೇ ಸಲೆ ನಂಬಿ ಹರಿಗೀಗ ಶರಣೆಂದು ಬಂದೇ 1 ಸೇರಿ ಬಗೆಯುತಲಿವೆ ಪಂಚ ವ್ಯಾಘ್ರಗಳೂ ಗಾರು ಮಾಡುತಲಿದೆ ಅಹಂ ಎಂಬ ಸಿಂಹವು ಶೆರಿಯ ಭಜಿಸುತ್ತ ಬಲೆದಾಟಿ ಬಂದೇ 2 ಬಂಧು ಬÁಂಧವರೆಂಬ ಕ್ರೂರವರ್ಗಗಳೆನ್ನ ತಿಂದು ಸುಲಿಯುತಲಿವೆ ವಂಚಿಸಿ ಹರಿಯೇ ಅಂದದಿ ದೂರ್ವಾ ಪಟ್ಟಣದಿ ನಿತ್ತಿರುವಂಥ ಸಿಂಧು ಶಾಯಿಯೇ ರಂಗ ಸಲಹೆನ್ನ ತಂದೇ 3
--------------
ಕರ್ಕಿ ಕೇಶವದಾಸ
ಇನ್ನಾರ ಭಜಿಸಲೈಯ್ಯಾ|ಯನ್ನ ಗತಿ ಮುಕುತಿದಾಯಕ ರಂಗ ನೀನಿರಲು ಪ ಸ್ನಾನಪಾನಕಬಪ್ಪ ಸುರನದಿಯನೇ ತ್ಯಜಿಸಿ ಹೀನ ಸರಿತೆಗಳಲ್ಲಿ ಮುಣುಗುವರೇ ಏನ ಬೇಡಿದ ನೀವ ಸುರ ಭೂಜ ಇದಿರಿಡಲು ಕಾನನದ ಶಾಲ್ಮಲಿಯ ಫಲವ ನರಸುವಂತೆ 1 ಕಾಮಧೇನು ಮನಿಗೆ ಬರಲು ಕರೆ ಕೊಳ್ಳದೇ ಆ ಮೊಲದ ಹಾಲವನು ಬಯಸುವಂತೆ ಕಾಮಿತಾರ್ಥವ ನೀವ ಚಿಂತಾ ಮಣಿಯಿರಲು ಪ್ರೇಮದಿಂದಲಿ ಕಾಜು ಮಣಿಯ ನರಸುವಂತೆ2 ತಾಯ ಮಾರಿಯ ತೋತ್ತು ಕೊಂಬಂತೆ ಸಿರಿಯಸುಖ ದಾಯಕ ನಿನ್ನ ಮರದನ್ಯಕೆರಗೀ ಹೇಯ ವೃತ್ತಿಗೆ ಬೆರೆವದುಂಟೇ ನಿನ್ನವನೆನಿಸಿಕಾಯೋ ಭಕುತಿಯ ನಿತ್ತು ಗುರು ಮಹಿಪತಿ ಸ್ವಾಮಿ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು