ಒಟ್ಟು 50999 ಕಡೆಗಳಲ್ಲಿ , 138 ದಾಸರು , 11453 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಮೋ ನಮೋ ಸುಶೀಲೇಂದ್ರ | ಗುರುವರಿಯ ವೈಷ್ಣವ ಸುಮತವಾರಿಧಿ ಚಂದ್ರ | ಸಕುವಿ ಸಂಸ್ತುತ | ಅಮಿತ ಸದ್ಗುಣ ಸಾಂದ್ರ || ಸುಮತಾಹಿವೀಂದ್ರ ಪ ನಮಿಪ ಜನರಿಗೆ ಅಮರ ಭೂರುಹ ಸಮಸುಖಪ್ರದ ವಿಮಲ ಚರಿತನೆ ಯಮಿವರ್ಯ ಸುವೃತೀಂದ್ರ ಮಾನಸ ಕಮಲರವಿ ಮಹಿ ಸುಮನಸಾಗ್ರಣಿ ಅ.ಪ ಅಸಮ ಮಹಿಮೋದರ | ತವಸುಪ್ರಭಾವವ ಸುಜನ ವಂದಿತ ಸ್ವಶನ ಸುಮತೋದ್ಧಾರ || ದಯ ಪಾರವಾರ || ವಸುಧೆಯೊಳು ಮೊರೆಹೊಕ್ಕ ಜನರಿಗೆ ಕುಶಲಪ್ರದ ನೀನೆಂದು ಬುಧ ಜನ ಉಸುರುವದು ನಾ ಕೇಳಿ ನಿನ್ನ ಪದ ಬಿಸಜ ನಂಬಿದೆ ಪೋಷಿಸನುದಿನ 1 ದೀನಜನ ಸುಖದಾತ | ಸುಕೃತೀಂದ್ರ ಕೋಮಲ ಬಾಣಲೋಕ ವಿಖ್ಯಾತÀ || ದ್ವಿಜಕುಲಕೆ ನಾಥ || ಕ್ಷೋಣಿಯೊಳು ನೀ ಒಲಿದ ಮಾತ್ರದಿ ಮೌನಿವರ್ಯ ಶ್ರೀ ರಾಘವೇಂದ್ರರು ಸಾನುರಾಗದಿ ಸಲಹುವರು ಪವ ಮಾನ ಶಾಸ್ತ್ರ ಪ್ರವೀಣ ಜಾಣ 2 ಪಿಂಗಲೇಂದ್ರ ಪ್ರಕಾಶ | ಸುಪವಿತ್ರ ವರದತ ರಂಗಿಣಿ ತಟವಾಸ | ಸದ್ಧರ್ಮ ಸ್ಥಾಪಕ ಮಂಗಳಾಂಗ ಯತೀಶ | ಪಾಪೌಘನಾಶ || ತುಂಗವಿಕ್ರಮ ಶಾಮಸುಂದರನಂಘ್ರಿ ಕಮಲಕೆ ಭೃಂಗ ಭವಗಜಸಿಂಗ ಕರುಣಾ ಪಾಂಗದೀಕ್ಷಿಸೆ ಇಂಗಿತಜ್ಞರ ಸಂಗಪಾಲಿಸು 3
--------------
ಶಾಮಸುಂದರ ವಿಠಲ
ನಮೋ ನಮೋ ಹನುಮ | ನಮೋ ನಮೋ ಭೀಮ| ನಮೋ ನಮೋ ಮಧ್ವರಾಯ ಸುಪ್ರಿಯ || ಅಂಬುಧಿಯ ಪೋರ್ದು | ನಿಜ ಡಿಂಭದೊಳ್ ಬೆರೆದು | ಚೆರ್ಬಿಂಬಳಂ ತರಿದು | ದಶಬಿಂಬನಾಪುರ ಪೊಕ್ಕು | ಗಂಟುಗಳ ದಾಟಿ | ಮೂರ್ಜಂಬಳಂತೋರಿ ಎಲ್ಲಂಬಳಂ ನಳಿದು ಅಂಬುಜಾಕ್ಷೆಗೆ ಮುದ್ರೆಯಿತ್ತ ಹನುಮಂತ 1 ಸತಿಯೆ ಹಂಬತ್ತಿದ ನತಿಗಳೇದು ಕೃತಕೋಪ ವೃತನಾಗಿ ಮಶತಂತುರದೆ ಹತಿಯೆ ಮೋಹತಿಯೆ | ಸಂಪತಿಯ ತೊಲಗಿ ಅಗತರಾಗಿಗತಿಯಲಿರುತಿಹ | ಮತಿಹೀನ ಬಕನಕೊಂದ ಭೀಮನಿಸ್ಸೀಮ 2 ಮಧ್ಯಗೇಹನುದರದಿಂದುದ್ಭವಿಸಿ ಜಗದ್ಭಲ ಭರಿತರಾಗಿ ಶಾಸ್ತ್ರ ಶುದ್ಧವನೆ ಕೈ ಕೊಂಡು ಮಧ್ವ ಮತದಲ್ಲಿ ಬಲು ಶುದ್ಧನಾಗಿ ಅದ್ವೈತಗಳ ನಳಿದು ಸದ್ವೈತ ಮಾರ್ಗದೊಳ್ | ಪೂರ್ಣಗುಣತೇಜ3
--------------
ಹೆನ್ನೆರಂಗದಾಸರು
ನಮೋ ಹನುಮ ಜೈ ಬಲವಂತ ನಮೋ ಪರಾಕ್ರಮ ಧೀಮಂತ ಪ ಹಾರಿ ಮಹಾಸಾಗರ ಸೇರಿ ದುರುಳನಪುರ ಮೀರಿದ ಬಲು ಶೃಂಗಾರದಿ ಶೋಭಿಪ ಸೂರಗೈದೆಲೋ ವನ 1 ಬಿಂಕಮುರಿದು ಅಶಂಕ ದನುಜಕುಲ ಪಂಕಜಮುಖಿಪಾದಪಂಕಜಕೆರಗಿ ಲಂಕೆ ದಹನ ಗೈದ್ಯೋ 2 ಸ್ವಾಮಿ ಶ್ರೀರಾಮನ ಪ್ರೇಮ ಪಡೆದು ನಿ ಸ್ಸೀಮನೆ ಎನ್ನನು ಪ್ರೇಮದಿ ಪೊರೆಯೈ ಸ್ವಾಮಿ ಮೂರುತಿ 3
--------------
ರಾಮದಾಸರು
ನಮ್ಮ ಕುಲದೈವೀತ ಬೊಮ್ಮನ ಪಡೆದಾತ ಸಾಮಗಾಯನ ಪ್ರೀತ ಸ್ವಾಮಿನೀತ ಧ್ರುವ ವೇದ ಉದ್ಧರನೀತ ಮೇದಿನಿಯ ಪೊತ್ತಾತ ಸಾಧುಜನ ವಂದಿತ ಸದ್ವಸ್ತುನೀತ 1 ಧಾರುಣಿಯ ಗೆದ್ದಾತ ತರಳಗೊಲಿದಹನೀತ ದಾತ ಕರುಣಿ ಈತ 2 ಮೂರು ಪಾದಳಿದಾತ ಪರಶುಧರನಹುದೀತ ಸುರಜನರ ಪೂಜಿತ ಸರ್ವೋತ್ಮನೀತ 3 ಪವನಸುತಗೊಲಿದಾತ ಮಾವನ ಮಡುಹಿದಾತ ಭುವನತ್ರಯಲೀತ ದೇವನೀತ 4 ಬೆತ್ತಲೆಯು ಸುಳಿದಾತ ಉತ್ತಮ ಹಯವನೇರಿದಾತ ಭಕ್ತರಿಗೆ ಹೊರೆವಾತ ಶಕ್ತನೀತ 5 ಅಣುರೇಣುದೊಳೀತ ಅನುಕೂಲವಾದಾತ ಆನಂದೋ ಬ್ರಹ್ಮ ಅನಂತನೀತ 6 ಮಹಾಮಹಿಮನಹುದೀತ ಬಾಹ್ಯಾಂತ್ರಪೂರಿತ ಮಹಿಪತಿಯ ಸಾಕ್ಷಾತ ವಸ್ತುನೀತ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಮ್ಮ ಗಿರಿಯ ತಿಮ್ಮ ಪರಬೊಮ್ಮನಮ್ಮ ಒಮ್ಮೆ ಕಾಯೋದ(ತ?)ಮ್ಮ ಪ. ಭಂಗ ಗುಣ ತ-ರಂಗ ಜಗದೊಳಗೆ ನೀನೆ ಸರ್ವೋತ್ತುಂಗ 1 ನೋಡೋ ಎನ್ನಲ್ಲಿ ಕೃಪೆಮಾಡೋ ಕೈಯನೀಡೋ ಎನ್ನ ಪೊರೆವನೆಂಬ ಮಾತನಾಡೊ 2 ಏಳು ಎನ್ನ ಮಾತ ಕೇಳು ಕಡು ಕೃ-ಪಾಳು ನಿನ್ನ ಹದನ ಎನಗೊಲಿದು ಪೇಳು 3 ಎಂದ ಮಾತಿಗೆ ಮುಂದೆ ನಿಂದ ನೀ ಕರುಣಿ ಗೋ-ವಿಂದ ಎಂಬುದಿನ್ನು ನಿನಗೆ ಚೆಂದ 4 ಪ್ರಿಯ ಎನ್ನ ಕಾಯೊ ಜೀಯ ಮುಕ್ತ್ಯು-ಪಾಯ ಹಯವದನ ಶೇಷಗಿರಿರಾಯ5
--------------
ವಾದಿರಾಜ
ನಮ್ಮ ಗುರುರಾಯನೇ | ಸ್ಮರಿಸಿದಾಗಲಿಹನೇ ಪ ಮನುಜನಾಗಿ ಬಂದನೇ | ಮತ್ರ್ಯದೊಳು ನಿಂದನೇ | ಜನನ ಮರಣ ಸಂದನೇ | ಜರಿಸಿ ಕೊಟ್ಟಾ ನಂದನೇ1 ಚಿತ್ತದ ಮೈಲಿಗೆ ಕಳಿಸಿದನೇ | ಚಿದ್ಘನಾಮೃತ ಗರದನೇ | ಸತ್ಯ ವಾಕ್ಯಾ ಬಿತ್ತಿದನೇ ಸತ್ವದ ಹೊಲ ಬೆಳಸಿದನೇ2 ಮಹಿಪತಿ ನಂದನ ಪ್ರಾಣನೇ | ಮಹಾಪ್ರಜ್ಞಾಪೂರ್ಣನೇ | ಇಹಪರ ಕೊಡುವ ತ್ರಾಣನೇ | ಮಹಿಮೆಗೆ ಎಣೆಗಾಣೆನೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಮ್ಮ ಗುರುರಾಯಾ | ಪೊಡವಿಗೆ ನಡೆ ತಂದನು ಪ ಪೊಡವಿಗೆ ನಡೆ ತಂದನು| ಎಡ ಬಲದಲಿ ಭಾಗವತರ ಮೇಳದಿಂದಲಿ | ಪರಿ ಪರಿಯಾಟವ | ಆಡುತ ಪಾಡುತ ನಲಿದಾಡುತಲಿ 1 ಭವ ರೋಗಿಗಳೆಲ್ಲರು | ತ್ವರಿತದಿ ಬನ್ನಿರೋ ಯನುತಲಿ ಹರಿನಾಮಾ | ಭೇರಿಯ ಹೊಯ್ಸುತ ತತ್ವೋಪದೇಶದ | ಕರದಲಿ ಔಷಧವನೆ ಹಿಡಕೊಂಡು2 ಬಂದವರಿಗೆಲ್ಲ ಬೇಡಿದ್ದು ಕೊಡುತಲಿ | ಮಂದ ಮತಿಗಳವಗುಣವನೆ ಬಿಡಿಸುತ | ಸಾರಥಿ | ಎಂದೆಂದು ಶರಣರಿಗಾಧಾರಿಯಾಗಿ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಮ್ಮ ದೈವ ದೇವನೀತನು ಧ್ರುವ ನಮ್ಮ ದೈವ ದೇವನೀತ ನಮ್ಮ ಜೀವ ಪ್ರಾಣದಾತ ನಮ್ಮ ಕಾವ ಕರುಣ ಶ್ರೀದೇವನೀತ ನೋಡಿರೊ 1 ನಿರ್ವಿಕಲ್ಪ ನಿರ್ಗುಣೀತ ನಿರ್ವಿಕಾರ ನಿಷ್ಟ್ರತೀತ ನಿರ್ವಿಶೇಷನಾದ ನಿರಾಳನೀತ ನೋಡಿರೊ 2 ನಿತ್ಯ ಏಕಶ್ಯಾಂತನೀತ ನಿತ್ಯನಿರಂಜನೀತ ನಿತ್ಯನಿಜ ಮಹಿಪತಿಯ ವಸ್ತುಗತಿಯ ನೋಡಿರೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಮ್ಮ ನಿಮ್ಮಗೊಂದಾದ ಮಾತು ಬ್ರಹ್ಮಾದಿಗಳು ಹೋದರು ಸೋತು ಒಮ್ಮನಾದರೆ ತಿಳಿವದಂತು 1 ಬಿಟ್ಟು ಕೊಡೊ ನಿನ್ನ ಬಾಜಿ ಗಂಟುಹಾಕಿಹೆ ಬಲು ಗಜಿಬಿಜಿ ಮುಟ್ಟಲಾರದು ಮೊನೆ ಸಣ್ಣ ಸೂಜಿ ಗುಟ್ಟು ಹೇಳೊ ಸದ್ಗುರು ದೇವಾಜಿ 2 ನಮ್ಮ ನಿಮ್ಮಳಗ್ಯಾಕೆ ತೊಡಕು ಇಮ್ಮನಾದರೆ ಹುಟ್ಟಿತು ಒಡಕು ಹಮ್ಮು ಎನ್ನೊಳಗಿಲ್ಲ ನೀ ಹುಡುಕು ಸುಮ್ಮನ್ಯಾಕಿದು ಶ್ರಮೆಯ ತಿಡುಕು 3 ಗುರು ಹೇಳಿದ ಮಾತಿಗೆ ಮುಟ್ಟಿ ತೋರಿ ಕೊಡಬೇಕು ನೀನೆ ಗಟ್ಟಿ ಅರಿತ ಮ್ಯಾಲೆ ಮಿಸುಕನು ತುಟ್ಟಿ ಖರೆ ಮಾಡಿಕೊ ಜಗಜಟ್ಟಿ 4 ಒಂದು ಮಾತು ಎಂಬುದು ಬಲ್ಲಿ ಸಂದ ಸಂದೇಹ್ಯಾರಿಸೊ ನೀ ಇಲ್ಲಿ ಕಂದ ಮಹಿಪತಿ ಮನದಲ್ಲಿ ಚಂದವಾಗಿರೊ ನೀನೆವೆ ಅಲ್ಲಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಮ್ಮ ರಂಗ ಮಧುರೆಗೆ ನಡೆತರಲು ಪ ಮಥುರೆಗೆ ನಡೆತರಲು ಅತಿ|ಹರುಷದಲಿ ಅಕ್ರೂರನೊಡನೆ| ರಥದಲಿ ಕುಳಿತು ಫಡ ಫಡಫಡಲೆಂದು| ಪಥದಲಿ ನಡಸ್ಯಾಡುತಲಿ 1 ಬಿಲ್ಲಹಬ್ಬದ ನೆವದಲ್ಲಿ|ಫುಲ್ಲಲೋಚನ ಮೋಹನ ಕೃಷ್ಣ| ಇಲ್ಲಿಗೆ ಬಂದನು ಎನುತಲಿ ಕೇಳಲು| ಎಲ್ಲರು ನಡೆದರು ನೋಡಲಾಗಿ 2 ಆಲಯದೊಳಗೆ ನಿಲ್ಲದೇ|ಬಾಲಕಿಯರು ತಮತಮ್ಮ| ಚಾಲವರುತಿಹಾ ತೊಟ್ಟಿಲೊಳಗಿನಾ|ಬಾಲಕರಿಗೆ ಮೊಲೆಗುಡದೆ 3 ಒಬ್ಬಳು ಅರೆಯಣ್ಣೆತಲೆಯಲಿ|ಒಬ್ಬಳು ತಿಗರವ ಹಚ್ಚಿದ ಮೈಯಲಿ ನಡೆದರು ಸಂಭ್ರಮದಿಂದ4 ಅಚ್ಚಮೈಯಲಿ ಕುಳಿತಿರೆ ಒಬ್ಬಳು|ಬಚ್ಚಲೊಳಗೆ ಮಜ್ಜಕನಾಗಿ ಅಚ್ಯುತನಾತುರದಿಂದಲಿ ಒಬ್ಬಳು ಎಚ್ಚರ ದೇಹದ ಬಿಟ್ಟು ನಡೆದಳು 5 ಎಲೆಳುಶಿಶುವೆಂದು ಬಗಲಿಲಿ|ಅಳತೆಯ ಮಾನವನಿರಿಸಿಕೊಂಡು| ನೆಲೆನೊಡದೇ ನಡೆದಳೊಬ್ಬಳು|ಚೆಲುವ ಕೃಷ್ಣನ ನೋಡಲಾಗಿ6 ಕದವನು ಒತ್ತಿಮುಂದಕ|ಒದಗದಿ ಕೆಲವರು ಮಾಳಿಗೆ ಏರಿ| ಸದಮಲಾನಂದಗ ತಲೆಯನು|ಬಾಗಿ ಪದುಮಕರವ ಮುಗಿದು7 ದಣ್ಣನೆ ನೋಡೀ ನೋಡುತಾ|ಕಣ್ಣುಪಾರಣೆ ಮಾಡಿಕೊಂಡು| ಮುನ್ನಿನ ದೋಷವ ಕರಗುವ ಪರಿಯಲಿ| ಪುಣ್ಯ ಸಾಮಗ್ರಿಯ ಮಾಡಿದರಂದು 8 ಕಂಡಾ ಪರಿಯ ರೂಪವಾ| ಧರಿಸಿಕೊಂಡು ಅಂತರಂಗದಲಿ|ತ್ವರಿತದಿಂದಲಿ ಧ್ಯಾಯಿಸುತಾ9
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಮ್ಮನೋಹರ ಎಂದಿಗಾಹುದಿನ್ನು ಪ ಬಿಸಜ ಕೋಮಲದಾ 1 ಬಗೆಯದತಿ ನಲುವಾ 2 ಸರಳು ಪುರ್ಬಮಿರುವಾ 3 ನೊಸಲೊಳು ಮೆರೆವಾ | ಮಾಣಿಕ | ಅಕ್ಷತಿಡುವಾ4 ಶ್ರವಣ ಭೂಷಣದಲೀ | ಮುಖಕಳೆ ಠವ ಠವಿಸುತಿರಲಿ5 ದ್ರವ್ಯ ವಾಸ ನಿಡುವಾ 6 ಗರೆವ ವಾಕ್ಯ ಸುಧೆಯಾ 7 ದ್ಧರಿಸಿದ ನಿಂದು 8 ಬಿಂಬದೋರಿಸಿದನಾ 9
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಮ್ಮಪ್ಪನ ಕಂಡೆ ಅಪಾರ ಮಹಿಮೆಯುಳ್ಳನ ಧ್ರುವ ಅಪ್ಪನ ಕಂಡೆನಗೆ ತಾ ಅಪಾರ ಸಂತೋಷವಾಯಿತು ಅಪ್ಪಿಕೊಂಬ್ಹಾಗೆ ಎನಗೆ ಅರ್ಪಿಸಿ ಪ್ರಾಣವ 1 ತುಂಬಿ ತುಳುಕಿತಾನಂದ ಗುಂಭಗುರುತ ಕಂಡಿನ್ನು ಕುಂಭಿನಿಯೊಳಗೆ ಪೂರ್ಣ ಅಂಬುಜಾಕ್ಷನ 2 ಗುಪ್ತಲಿದ್ದ ಧನ ತಾ ಪ್ರಾಪ್ತ ವ್ಯಾನಂತವಾಯಿತು ತಪ್ಪದೆ ಮಹಿಪತಿಗೆ ತೃಪ್ತಿ ಹೊಂದಿತು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಮ್ಮವ್ವ ಈಕಿ ನಮ್ಮವ್ವ ಒಮ್ಮನ ಕೂಲ್ಯಕಿ ನಮ್ಮವ್ವ ಪ ಇಮ್ಮನ ಸಜ್ಜಿಗೆ ಒಮ್ಮೆಗೆ ತಿಂದು ಸುಮ್ಮನೆ ಕೂತಳ ಗುಮ್ಮವ್ವ ಅ.ಪ ಆರುಮೂರುಮರ ರೊಟ್ಟಿಗಳು ಒಂದೆ ಸಾರಿಗೆ ಮುದ್ದೆ ಮಾಡಿ ನುಂಗಿದಳು ದಾರಿಗೆ ತೋರದಂತೆ ಎಂಟು ಭಾಂಡೆ ಅನ್ನ ವಾರೆಲಿ ಕೂತು ಸೂರೆ ಮಾಡಿದಳು 1 ಎತ್ತಿ ತುಪ್ಪದ ಮೂರು ಡಬ್ಬಿಗಳು ಕುತ್ತಿಗ್ಗೆ ಬೀಳಹಾಗೆ ಕುಡಿದಳು ಹತ್ತ್ಹೆಡಿಗ್ಹೋಳಿಗೆ ಪತ್ತೆಯಿಲ್ಲದೆ ತಿಂದು ಮೆತ್ತಗೆ ಸುತ್ತಿಕೊಂಡು ಮಲಗಿದಳು 2 ಒಡಲನಿಲ್ಲದೆ ಕಾಯುವಳು ಇವಳು ಇಡೀ ಬ್ರಹ್ಮಾಂಡವ ನುಂಗಿದಳು ಪಿಡಿದೊಕ್ಕುಡಿತೆಲಿ ಕಡಲೇಳನು ಕುಡಿದೊಡೆಯ ಶ್ರೀರಾಮನ ಕೂಡಿದಳು 3
--------------
ರಾಮದಾಸರು
ನರ ಹರಿನಾಮವ ನೀ ನೆನೆದರೆ| ಧರಿಯೊಳು ಸಾಲದೇ ಇಹಪರ ದೋರದೆ| ಬರದೇ ಸಾಯಾಸ ಬಡುವರೇ ಪ ಆದಿ ಯುಗಂಗಳಲಿ ತಾಪಸರು| ಸಾದರ ಬಹುದಿನದಿಂದಾ| ಸಾಧಿಸುವಗತಿ ಕೊಡುವ ನೊಂದೆ ಕ್ಷಣದಿ| ಶ್ರೀಧರ ತಾ ದಯದಿಂದಾ1 ಸಂತರ ಸಂಗದಿ ಶ್ರವಣವ ಮಾಡಿ| ಆಂತರ್ಭಾವನೆ ಬಲಿಸೀ| ಭ್ರಾಂತ ನೀನಾಗದೆ ಅನ್ಯ ಸಾಧನದಲಿ| ಸಂತತ ಕೀರ್ತನೆ ಬೆರೆಸೀ2 ಸಾವಿರಕೊಂದೆ ಈ ನುಡಿ ನಿಜವೆಂದು| ಸಾವಧವನಾದವ ಮನುಜಾ| ಭಾವಿಸು ಗುರುಮಹಿಪತಿ ಪ್ರಭು|ನುಡಿಸಿದ| ಆವನಂಬವನೇ ದನುಜಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನರಕ ಎತ್ತಣದೋ ನರಕ ಎತ್ತಣದೋ ನರ ಕಂಠೀರವನೆಂದು ಸ್ಮರಿಸುವ ಜನರಿಗೆ ಪ ಸ್ನಾನ ಮಾಡುವುದೇಕೆ ಧ್ಯಾನಗೈಯುವುದೇಕೆ ದಾನ ಧರ್ಮಂಗಳು ಮಾಡಲೇಕೆ ಶ್ರೀ ನಾರಾಯಣನೆಂದು ಆವಾಗಲೂ ಜಿಹ್ವೆ ತ್ರಾಣದಲಿ ಬಿಡದೆ ಎಣಿಸುವ ಜನರಿಗೆ1 ತೀರ್ಥ ಮೀಯುವದೇಕೆ ಯಾತ್ರೆ ಚರಿಪದೇಕೆ ಸ್ತೋತ್ರ ಮಂತ್ರಾದಿಗಳು ಪಠಿಸಲೇಕೆ ಚಿತ್ರಮಹಿಮ ನೀಲಗಾತ್ರನ್ನ ಚರಿತೆ ಕಾ ಲತ್ರಯ ಬಿಡದೆ ಉಚ್ಚರಿಸುವ ಜನರಿಗೆ 2 ದೀಪ ಧೂಪಗಳೇಕೆ ನಾನಾ ಪರಿಯಲ್ಲಿ ಸೋಪಸ್ಕರದ ಎಡೆ ಇಡಲೇತಕೆ ಅಪಾರ ಮಹಿಮ ಅನಾಥರೊಡೆಯ ರಂಗ ಶ್ರೀಪತಿ ಎಂದೀಗ ಸ್ಮರಿಸುವ ಜನರಿಗೆ 3 ಭೂತದಯಗಳೇಕೆ ನೀತಿ ಎಂಬುದು ಏಕೆ ಜಾತವೇದಸನಲ್ಲಿ ಕಳವಳವೇಕೆ ಪಿನಾಕಿ ಸಖನೆಂದು ಮಾತು ಮಾತಿಗೆ ನೆನೆದು ಸುಖಿಸುವ ಜನರಿಗೆ 4 ಏನೇನು ಕರ್ಮದಾಚರಣೆ ಮಾಡುವದೇಕೆ ಭಾನು ಉದಯವಿಡಿದು ತೊಳಲಲೇಕೆ ದೀನನಾಗಿ ದಾತಾ ವಿಜಯವಿಠ್ಠಲ ಹರಿಯ ಮಾನಸದಲಿ ಧ್ಯಾನ ಮಾಡುವ ಜನರಿಗೆ 5
--------------
ವಿಜಯದಾಸ