ಒಟ್ಟು 7615 ಕಡೆಗಳಲ್ಲಿ , 131 ದಾಸರು , 4494 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಂಗಾ ಬಾರೋ ಪಾಂಡುರಂಗ ಬಾರೋ ಶ್ರೀರಂಗಾ ಬಾರೋ ನರಸಿಂಗ ಬಾರೋ ಪಕಂದ ಬಾರೋ ಎನ್ನ ತಂದೆ ಬಾರೋಇಂದಿರಾ ರಮಣ ಮುಕುಂದ ಬಾರೋ 1ಅಪ್ಪ ಬಾರೋತಿಮ್ಮಪ್ಪಬಾರೋ ಕಂದರ್ಪನೈಯನೇ ಕಂಚಿವರದ ಬಾರೋ 2ವಿಷ್ಟು ಬಾರೋಉಡುಪಿಕೃಷ್ಣ ಬಾರೋ ಎನ್ನಿಷ್ಟ ಮೂರುತಿಪುರಂದರವಿಠಲ ಬಾರೋ3
--------------
ಪುರಂದರದಾಸರು
ರನ್ನ ಚಿನ್ನದಕೋಲಹೊನ್ನು ಮುತ್ತಿನಕೋಲಪನ್ನಂಗಶಯನ ನಲಿದು ಒಲವೊ ಕೋಲ ಪ.ಇಂದಿರೇಶಗೆ ರಾಯ ಗಂಧ ಕಸ್ತೂರಿ ತೀಡಿಮಂದಾರಮಲ್ಲಿಗೆ ಮಾಲೆ ಚಂದದಲ್ಹಾಕಿ1ಶ್ರೀದೇವಿಯರಿಗೆ ಭದ್ರಾ ಕ್ಯಾದಿಗೆ ಮಲ್ಲಿಗೆ ಮುಡಿಸಿಊದು ಪರಿಮಳ ಮ್ಯಾಲೆ ಮೋದವ ಬಟ್ಟು 2ಅಂಬುಜಾಕ್ಷರಿಗೆ ರಾಯ ತಾಂಬೂಲ ಅಡಿಕೆಯ ಕೊಟ್ಟುಕಂಬುಕಂಠರಿಗೆ ಎರಗಿ ಸಂಭ್ರಮದಿಂದ 3ಸರಸಿಜಮುಖಿಯರಿಗೆ ಅರಿಷಿಣಕುಂಕುಮಹಚ್ಚಿಸರಸದ ವಸ್ತಗಳ ದ್ರೌಪತಿ ಅರಸಿಗೆ ಇಟ್ಟು 4ಪಚ್ಚಮುತ್ತಿನ ವಸ್ತ ಅಚ್ಯುತನಂಗದಲೆ ಇಟ್ಟುಉಚಿತ ವಸ್ತ್ರಗಳ ಕೊಟ್ಟು ಸ್ವಚ್ಚ ಮನದಿ 5ರುಕ್ಮಿಣಿ ಅರಸಿಯರಿಗೆ ಅನಘ್ರ್ಯ ವಸ್ತ್ರವಕೊಟ್ಟುಶೀಘ್ರದಿಂದ ಎರಗಿ ದ್ರೌಪತಿ ಹಿಗ್ಗಿದಳು 6ತಂದೆ ರಾಮೇಶಗೆ ಮಂದಗಮನೆಯರೆಲ್ಲಗಂಧ ಕುಂಕುಮ ವೀಳ್ಯ ವಸ್ತ ಅಂದದಿಕೊಟ್ಟು 7
--------------
ಗಲಗಲಿಅವ್ವನವರು
ರಂಭೆ-ಊರ್ವಸಿ ರಮಣಿಯರೆಲ್ಲರು ||ಚೆಂದದಿಂ ಭರತನಾಟ್ಯವ ನಟಿಸೆ |ಝಂತಕ ತಕಧಿಮಿ ತದಿಗಣತೋಂ ಎಂದು |ಝಂಪೆತಾಳದಿ ತುಂಬುರನೊಪ್ಪಿಸೆ ||ಧಾಪಮಪಧಸರಿ ಎಂದು ಧ್ವನಿಯಿಂದ |ನಾರದ ತುಂಬುರು ಗಾನವ ಮಾಡಲು |ನಂದಿಯು ಚೆಂದದಿ ಮದ್ದಲೆ ಹಾಕಲು 1ಫಣಿಯ ಮೆಟ್ಟಿ ಬಾಲವ ಕೈಯಲಿ ಪಿಡಿದು |ಫಣಘಣಿಸುತ ನಾಟ್ಯವನಾಡೆ |ದಿನಪಮಂಡಲದಂತೆ ಪೊಳೆಯುವ ಮುಖದೊಳು ||ಚಲಿಸುತ ನೀಲಕೇಶಗಳಾಡೆ |ಕಾಲಲಂದಿಗೆ ಗೆಜ್ಜೆ ಘುಲುಘುಲು ಘುಲುಘುಲು |ಘುಲುರೆಂದು ಉಡಿಗೆಜ್ಜೆ ಗಂಟೆಗಳಾಡೆ ||ದುಷ್ಟ ಕಾಳಿಂಗನ ಮೆಟ್ಟಿ ಭರದಿಂದ |ಪುಟ್ಟಿ ಪಾದವನು ಇಟ್ಟ ಶ್ರೀಕೃಷ್ಣನು |ಮೆಟ್ಟಿದ ತದ್ಧಿಮಿ ತಧಿಗಣತೋಂ ಎಂದು 2ಸುರರುಪುಷ್ಪದ ವೃಷ್ಟಿಯ ಕರೆಯಲು |ಸುದತಿಯರೆಲ್ಲರು ಪಾಡಲು |ನಾಗಕನ್ನೆಯರು ನಾಥನ ಬೇಡಲು |ನಾನಾವಿಧ ಸ್ತುತಿ ಮಾಡಲು ||ರಕ್ಕಸರೆಲ್ಲರು ಕಕ್ಕಸವನೆ ಕಂಡು |ದಿಕ್ಕಿದಿಕ್ಕುಗಳಿಗೋಡಲು ||ಚಿಕ್ಕವನಿವನಲ್ಲ ಪುರಂದರವಿಠಲ |ವೆಂಕಟರಮಣನ ಬೇಗ ಯಶೋದೆ |ಬಿಂಕದೊಳೆತ್ತಿ ಮುದ್ದಾಡೆ ಶ್ರೀಕೃಷ್ಣನ 3
--------------
ಪುರಂದರದಾಸರು
ರಸಿಕರವರ ಪ್ರಿಯರಸ ಕಾವನು ಭಕ್ತಿಕುಶಲನಿಗಿಹಪರಕುಶಲಾಘ ದೂರ ಪ.ಪಥಮನೆ ವನದಿ ಶ್ರೀಪತಿ ಮಹಿಮೆ ಘೋಷಿಸಿಪ್ರಥಮ ಯಾಮದಿ ಹರಿಪ್ರತಿ ಮುದವೇರಿಸ್ತುತಿಸಿ ತಾರತಮ್ಯದ ಸ್ಥಿತಿ ಸನ್ಮತದೊಳಿದ್ದುಸತಿತನುಜಸೌರಂಭ ಸತತ ಹರಿಯದೆಂಬ1ಹಿತಾಹಿತವರಿದು ವಿಹಿತಹೇತು ಬಲಿದು ವಿರತಿಭಕ್ತಿ ಜ್ಞಾನ ನಿರುತ ಭೇದ ನಿರತನಾಗಿ ಕುಜನವಾರತೆಯ ಕೇಳದಿರುವಚತುರರಸುಕೃತಸಂಚಿತದಿರವೇ ಲೇಸು2ವಿಷಮೀರೈದಿಂದ್ರಿಯ ವಶಮಾಡಿ ಮನೋರಿಯೋಲ್ಸುಸುಖಾವಿಡಿದುಕೊಂಬಾ ಸುಸುಖಾವುಂಬಭೈಷಜ್ಯ ಭವರೋಗ ಭೇಷಜನೆನಿಪ ಜಗಪ್ರಸನ್ನ ವೆಂಕಟೇಶಾಂಘ್ರಿ ಸ್ಪøಶ್ಯನಾದಾರೋಗ್ಯ 3
--------------
ಪ್ರಸನ್ನವೆಂಕಟದಾಸರು
ರಾಗಿ ತಂದಿರಾ - ಭಿಕ್ಷಕೆ -ರಾಗಿ ತಂದಿರಾ ಪ.ಯೋಗ್ಯರಾಗಿ ಭೋಗ್ಯರಾಗಿ |ಭಾಗ್ಯವಂತರಾಗಿ ನೀವು ಅಪಅನ್ನದಾನವ ಮಾಡುವರಾಗಿ |ಅನ್ನಛತ್ರವನಿಟ್ಟವ ರಾಗಿ ||ಅನ್ಯವಾರ್ತೆಗಳ ಬಿಟ್ಟವರಾಗಿ |ಅನುದಿನಭಜನೆಯ ಮಾಡುವರಾಗಿ..........1ಮಾತಾಪಿತರನು ಸೇವಿಪರಾಗಿ |ಪಾತಕಕಾರ್ಯವ ಬಿಟ್ಟವರಾಗಿ |ಖ್ಯಾತಿಯಲ್ಲಿ ಮಿಗಿಲಾದವರಾಗಿ |ನೀತಿಮಾರ್ಗದಲಿ ಖ್ಯಾತರಾಗಿ 2ಗುರು ಕಾರುಣ್ಯವ ಪಡೆದವರಾಗಿಗುರುವಿನ ಮರ್ಮವ ತಿಳಿದವರಾಗಿ ||ಗುರುವಿನ ಪಾದವ ಸ್ಮರಿಸುವರಾಗಿ |ಪರಮಪುಣ್ಯವನು ಮಾಡುವರಾಗಿ3ವೇದ ಪುರಾಣವ ತಿಳಿದವರಾಗಿ |ಮೇದಿನಿಯಾಳುವಂಥವರಾಗಿ ||ಸಾಧು ಧರ್ಮವಾಚರಿಸುವರಾಗಿ |ಓದಿ ಗ್ರಂಥಗಳ ಪಂಡಿತರಾಗಿ 4ಆರರ ಮಾರ್ಗವ ಅರಿತವರಾಗಿ |ಮೂರರ ಮಾರ್ಗವ ತಿಳಿದವರಾಗಿ ||ಭೂರಿತತ್ವವನು ಬೆರೆತವರಾಗಿ |ಕ್ರೂರರ ಸಂಗವ ಬಿಟ್ಟವರಾಗಿ 5ಕಾಮಕ್ರೋಧಗಳನಳಿದವರಾಗಿ |ನೇಮನಿಷ್ಠೆಗಳ ಮಾಡುವರಾಗಿ ||ಆ ಮಹಾಪದದಲಿ ಸುಖಿಸುವರಾಗಿ |ಪ್ರೇಮದಿ ಕುಣಿಕುಣಿದಾಡುವರಾಗಿ 6ಸಿರಿರಮಣನ ಸದಾ ಸ್ಮರಿಸುವರಾಗಿ |ಕುರುಹಿಗೆ ಬಾಗುವಂತವರಾಗಿ ||ಕರೆಕರೆಸಂಸಾರ ನೀಗುವರಾಗಿ |ಪುರಂದರವಿಠಲನ ಸೇವಿಪರಾಗಿ 7
--------------
ಪುರಂದರದಾಸರು
ರಾಮ ಎನ್ನುವ ಎರಡು ಅಕ್ಷರದ ಮಹಿಮೆಯನು |ಪಾಮರರು ತಾವೇನ ಬಲ್ಲರಯ್ಯ ಪರಾಯೆಂದ ಮಾತ್ರದೊಳು ರಕ್ತ ಮಾಂಸದೊಳಿದ್ದಆಯಸ್ಥಿಗತವಾದ ಅತಿಪಾಪವನ್ನುಮಾಯವನು ಮಾಡಿ ಮಹಾರಾಯ ಮುಕ್ತಿಯ ಕೊಡುವದಾಯವನು ವಾಲ್ಮೀಕಿ ಮುನಿರಾಯ ಬಲ್ಲ 1ಮತ್ತೆ ಮ ಎಂದೆನಲು ಹೊರಬಿದ್ದ ಪಾಪಗಳುಒತ್ತಿ ಒಳ ಪೊಗದಂತೆಯೆ ಕವಾಟವಾಗಿಚಿತ್ತ ಕಾಯಗಳ ಸುಪವಿತ್ರ ಮಾಡುವ ಪರಿಯಭಕ್ತವರ ಹನುಮಂತ ತಾನೊಬ್ಬ ಬಲ್ಲ 2ಧರೆಯೊಳೀ ನಾಮಕ್ಕೆ ಸರಿಮಿಗಿಲು ಇಲ್ಲೆಂದುಪರಮವೇದಗಳೆಲ್ಲ ಪೊಗಳುತಿಹವುಸಿರಿಯರಸ ಶ್ರೀಪುರಂದರ ವಿಠಲ ರಾಮನನುವರಕಾಶಿಯೊಳಗಿಪ್ಪ ಶಿವನು ತಾ ಬಲ್ಲ 3
--------------
ಪುರಂದರದಾಸರು
ರಾಮ ಗೋವಿಂದ ಸೀತಾ - ರಾಮ ಗೋವಿಂದ ಪ.ತೃಪ್ತಿಯಹುದೆ ಹೆತ್ತ ತಾಯಿ ಇಕ್ಕದನಕಭಕ್ತಿಯಹುದೆ ಭಕ್ತಜನರ ಸಲಹದನಕಮುಕ್ತಿಯಹುದೆ ಭಾವಶುದ್ದಿ ಇಲ್ಲದನಕಚಿತ್ತಶುಧ್ಧಿ ಆತ್ಮನಿಜವು ತಿಳಿಯದನಕ 1ಓದಲೇಕೊ ಮನದಿ ಜ್ಞಾನವಿಲ್ಲದನಕಭೇದವೇಕೊ ಗತಿಯುಗಮನ ತಿಳಿಯದನಕಕಾದಲೇಕೊ ಭುಜದಿ ಶಕ್ತಿಯಿಲ್ಲದನಕವಾದವೇಕೊಶ್ರುತಿ- ಶಾಸ್ತ್ರ ತಿಳಿಯದನಕ2ನಳನವಿದ್ದರೇನು ತುಂಬಿಯೊದಗದನಕದಳವು ಇದ್ದರೇನು ಧೈರ್ಯಕೊಡದನಕಲಲನೆಯಿದ್ದರೇನು ಪುತ್ರರಿಲ್ಲದನಕಚೆಲುವನಾದರೇನುವಿದ್ಯೆಕಲಿಯದನಕ3ಮನವಿದ್ದೇಕೊಶುಕ - ಪಿಕವಿಲ್ಲದನಕತನುವಿದ್ದೇಕೊ ಪರಹಿತಕೆ ಬಾರದನಕಮನೆಯಿದ್ದೇಕೊ ಅತಿಥಿಯೊಬ್ಬರಿಲ್ಲದನಕಧನವಿದ್ದರೇನು ದಾನ - ಧರ್ಮಕ್ಕೊದಗದನಕ 4ಹರಿಯ ಚಿಂತೆಯಿರಲು ಅನ್ಯ ಚಿಂತೆಯೇತಕೊಹರಿಯ ಧ್ಯಾನವಿರಲು ಅನ್ಯ ಧ್ಯಾನವೇತಕೊಸಿರಿ ಪುರಂದರವಿಠಲನಿರಲು ಭಯವು ಏತಕೊಹರಿಯ ಒಲಿದ ಮನುಜನಿಗೆ ದೈನ್ಯವೇತಕೊ 5
--------------
ಪುರಂದರದಾಸರು
ರಾಮ ನಾಮಾಮೃತವ ಕೊಂಬವರೆಲ್ಲ |ಪ್ರೇಮದಿಂದಚ್ಯುತ ಪೇಟೆಗೆ ಬನ್ನಿರೆ ಪಒಮ್ಮನವೆರಸಿ ಬನ್ನಿ |ನಿಮ್ಮ ಮನಕೆ ಬಂದಂತಳೆದು ಕೊಳ್ಳಿ ||ರಾಮಟಿಂಕೆಯ ಸಲಿಸಿ ಶ್ರೀ ಕೃಷ್ಣನೆಂಬ |ಧರ್ಮದ ಸಂತೆ ನೆರೆದಿದೆ ಬನ್ನಿ 1ಉಂಟು ನಾಲ್ಕು ಕುದುರೆಗಳು |ಎಂಟಾನೆಯ ಬಿರುಬಲೆಯಲ್ಲಿ ಕಟ್ಟಬಹುದು ||ಸಾಲವರ್ಣದ ಪಟ್ಟಿಯು ಏಳಿರೆ |ಏಳುಲೋಕವು ಬಲ್ಲದು 2ಬೆಲೆಯಿಲ್ಲದ ಮುತ್ತುಂಟು |ಏಳೇಳ್ಪುಟಿಯ ಹೊಳೆವಪರಂಜಿಯ ಚಿನ್ನವುಂಟು ||ಥಳಥಳಿಸುವ ನೀಲಿಯ ಕೊಂಬುವರೆಲ್ಲ |ನಳಿನನಾಭನ ಸನ್ನಿಧಿಗೆ ಬನ್ನಿ 3ಎರಡು ಕಾಶಿಯಲಳೆವ ಕೊಳಗವು |ಪಿರಿದುದೊಂದು ಕಿರಿದೊಂದು ಉಂಟಲ್ಲಿಗೆ ||ಗರಳವವೊರಿಸಲು ರತ್ನವು |ಮರುತಾಶ್ರಯನ ಸನ್ನಿಧಿಗೆ 4ಆರಂಗಡಿಯ ಸುಟ್ಟು |ಸೂರೆಮಾಡಿ ಏಳು ಎಂಟು ಹಟ್ಟಕೊರವನೊ...ದುದು ||ಸಾರಿಸಿ ನವವಿಧ ಶುಚಿಯ ಹೇಳಿದ |ಸರ್ವಾತ್ಮಗೆ ಸೌದೆಯ 5ಸುಂಕಿಗರೈವರಿಗೆ ಹರುಷದಿಂದ |ಪಂಕಜನಾಭನ ಚೀಲ ತೋರಿ ||ಶಂಕೆಯಿಲ್ಲದೆ ನಡೆವ ಅವರನೆಲ್ಲ |ವಂಚಿಸಿ ಎದೆಯ ಟೊಣೆದು ಹೋಗುವಾ 6
--------------
ಪುರಂದರದಾಸರು
ರಾಮ ಮಂತ್ರವ ಜಪಿಸೊ - ಏ ಮನುಜಾ ಶ್ರೀರಾಮ ಮಂತ್ರವ ಜಪಿಸೊ ಪಆ ಮಂತ್ರ ಈ ಮಂತ್ರ ನೆಚ್ಚಿ ಕೆಡಲು ಬೇಡಸೋಮಶೇಖರಗಿದು ಭಜಿಸಿ ಬಾಳುವ ಮಂತ್ರ ಅಪಕುಲಹೀನನಾದರೂ ಕೂಗಿ ಜಪಿಸುವ ಮಂತ್ರಛಲದಿ ಬೀದಿಯೊಳು ಉಚ್ಚರಿಪ ಮಂತ್ರ ||ಹಲವು ಪಾತಕಗಳ ಹಸನಗೆಡಿಸುವ ಮಂತ್ರಸುಲಭದಿಂದಲಿ ಸ್ವರ್ಗ ಸೂರೆಗೊಂಬುವ ಮಂತ್ರ 1ಸನುಮುನಿಗಳಿಗೆಲ್ಲ ಸುಲುಗೆಯಾಗಿಹ ಮಂತ್ರಮನುಮುನಿಗಳಿಗೆಲ್ಲ ಮೌನ ಮಂತ್ರ ||ಹೀನಗುಣಗಳೆಲ್ಲ ಹಿಂಗಿ ಹೋಗುವ ಮಂತ್ರಏನೆಂಬೆ ಧ್ರುವನಿಗೆ ಪಟ್ಟಗಟ್ಟಿದ ಮಂತ್ರ 2ಸಕಲ ವೇದಗಳಿಗೆ ಸಾರವಾಗಿಹ ಮಂತ್ರಮುಕುತಿ ಪಢಕೆ ಇದು ಮೂಲ ಮಂತ್ರ ||ಶಕುತ ಪರಕೆ ಇದು ಬಟ್ಟೆದೋರುವ ಮಂತ್ರಸುಖನಿಧಿ ಪುರಂದರವಿಠಲ ಮಹಾಮಂತ್ರ 3
--------------
ಪುರಂದರದಾಸರು
ರಾಮ ರಾಮ ರಾಮ ರಾಮ ರಾಮವೆನ್ನಿರೊ |ರಾಮ ರಾಮವೆಂಬ ನಾಮ ಮನದಿ ನೆನೆಯಿರೊ ಪ.ಇಂದ್ರಿಯಂಗಳೆಲ್ಲ ಕೂಡಿ ಬಂದು ತನ್ನ ಮುಸುಕಿದಾಗ |ಸಿಂಧುಸುತಾಪತಿಯ ಧ್ಯಾನ ಅಂದಿಗೆ ಒದಗಲೀಯದು1ಭರದಿ ಯಮನ ಭಟರು ಬಂದು ಹೊರಡು ಎಂದು ಮುಟ್ಟಲು |ಕೊರಳಿಗಾತ್ಮ ಸೇರಿದಾಗ ಹರಿಯ ಧ್ಯಾನ ದೊರೆಯದಯ್ಯ 2ಕಾಸಶ್ವಾಸದಲ್ಲಿ ಸಿಲುಕಿ ದೋಷ ಬಲಿದು ಪೋಗುವಾಗ |ವಾಸುದೇವನೆಂಬ ನಾಮ ವದನದಲ್ಲಿ ಒದಗದಯ್ಯ 3ಶೃಂಗಾರವಾದ ದೇಹ ತಂಗಿಬಿಟ್ಟು ಪೋಗುವಾಗ |ಕಂಗಳಿಗಾತ್ಮಾ ಸೇರಿದಾಗ ರಂಗನ ಧ್ಯಾನ ದೊರಕದಯ್ಯ 4ಕಷ್ಟಜನ್ಮದಲ್ಲಿ ಬಂದು ದುಷ್ಟಕರ್ಮಗಳನು ಮಾಡಿ |ಬಿಟ್ಟು ಹೋಗುವಾಗ ಪುರಂದರವಿಠಲನ ನೆನೆಮನವೆ 5
--------------
ಪುರಂದರದಾಸರು
ರಾಮ ರಾಮ ರಾಮ ಸೀತಾ ರಾಮ ಎನ್ನಿರೋ ಪ.ಇಂದ್ರಿಯಂಗಳೆಲ್ಲ ಕೂಡಿಬಂದು ತನುವ ಮುಸುಕಲುಸಿಂಧು ಸುತೆಯ ಪತಿಯಧ್ಯಾನಎಂದಿಗಲ್ಲಿ ದೊರೆಯದೊ 1ಭರದಿ ಯಮನ ಭಟರಾಗಲೆಹೊರಡು ಎಂದು ಮೆಟ್ಟಿ ತುಳಿಯೆಕೊರಳಿಗಾತ್ಮ ಸೇರಿದಾಗಹರಿಯ ಧ್ಯಾನ ದೊರೆಯದೊ 2ದೋಷಕ್ಲೇಶ - ದುಃಖವೆಂಬಶ್ಲೇಷ್ಮದಲ್ಲಿ ಸಿಕ್ಕಿ ಇರಲುವಾಸುದೇವ ಕೃಷ್ಣನೆಂಬುದಾಸಮಯಕ್ಕೆ ದೊರೆಯದೊ 3ಸಿಂಗಾರವಾದ ದೇಹವೆಲ್ಲಅಂಗವಳಿದು ಮುರಿದು ಬೀಳೆ ||ಅಂಗಳಿಗಾತ್ಮ ಸೇರಿದಾಗರಂಗನ ಧ್ಯಾನವು ದೊರೆಯದೊ 4ಕೆಟ್ಟ ಕೆಟ್ಟರಲ್ಲೊ ಬರಿದೆಕಟ್ಟ ಕಡೆಯಲ್ಲಿಕಾಯಬಿಟ್ಟು ಹೋಗುವಾಗಪುರಂದರವಿಠಲ ಧ್ಯಾನ ದೊರೆಯದೊ 5
--------------
ಪುರಂದರದಾಸರು
ರಾಮಕೃಷ್ಣರು ಮನೆಗೆ ಬಂದರು ಬಾಗಿಲ ತೆರೆಯಿರೊ |ಕಾಮಧೇನು ಬಂದಂತಾಯಿತು ಸುಖವ ಸುರಿಯಿರೊ ಪಮಕರಕುಂಡಲನೀಲಮುತ್ತಿನ ಚೌಕಳಿ ಇಡುತಲಿ |ಸುಕುಮಾರ ಸುಂದರವಾದ ಉಡುಗೆಯುಡತಲಿ ||ಮುಖದಕಮಲಮುಗುಳನಗೆಯ ಸುಖವ ಕೊಡುತಲಿ |ಕಂಕಣ ಹಾರ ತೋಳಬಂದಿ ತೊಡಿಗೆ ತೊಡುತಲಿ 1ಚೆಂಡು-ಬೊಗರಿ-ಚಿಣ್ಣಿಕೋಲು-ಗಜುಗವಾಡುತ |ದುಂಡುಮಲ್ಲಿಗೆತುಂಬಿಕೊಳಲನೂದಿ ಪಾಡುತ ||ಮಿಂಡೆವೆಂಗಳ ಮುದ್ದು ಮೊಗದ ಸೊಗವ ನೋಡುತ |ಭಂಡುಮಾಡಿ ಭಾಮೆಯರೊಡನೆ ಸರಸವಾಡುತ 2ಪೊಕ್ಕುಳಲ್ಲಿ ಅಜನ ಪಡೆದ ದೇವದೇವನು |ಚಿಕ್ಕ ಉಂಗುಟದಿ ಗಂಗೆಯ ಪಡೆದನಾತನು ||ಮಕ್ಕಳ ಮಾಣಿಕ್ಯ ಪುರಂದರವಿಠಲ ರಾಯನು |ಭಕ್ತ ಜನರಿಗೊಲಿದ ನೀನು ಮುಕ್ತಿದಾತನು 3
--------------
ಪುರಂದರದಾಸರು
ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ |ನಾಮವಿಠಲ ತುಪ್ಪ ಬೆರೆಸಿ ಬಾಯಿ ಚಪ್ಪರಿಸಿರೊ ಪಒಮ್ಮನ ಗೊದಿಯ ತಂದು | ವೈರಾಗ್ಯ ಕಲ್ಲಲಿ ಬೀಸಿ |ಸುಮ್ಮನ ಸಜ್ಜಿಗೆ ತೆಗೆದು | ಸಣ್ಣ ಸೇವಗೆ ಹೊಸೆದು 1ಹೃದಯವೆಂಬ ಪಾತ್ರೆಯೊಳಗೆ | ಮನವೆಂಬ ಎಸರನಿಟ್ಟು |ಬುದ್ದಿಯಿಂದ ಪಾಕ ಮಾಡಿ |ಹರಿವಾಣತುಂಬಿರೋ 2ಆನಂದ ಆನಂದವೆಂಬ ತೇಗು ಬಂದ ಪರಿಯಲಿ |ಆನಂದ ಮೂರುತಿ ನಮ್ಮ ಪುರಂದರವಿಠಲ 3
--------------
ಪುರಂದರದಾಸರು
ರಾಯನ ನೋಡಿರೋ - ಮಧ್ವ - ರಾಯನ ಪಾಡಿರೊ ಪಅಂಜನೆಯಲಿ ಹುಟ್ಟಿ ಅಂಬರಕಡರಿದಹರಿಯೋ - ಸಿಂಹದ - ಮರಿಯೋ |ಕಂಜಾಕ್ಷಿಯ ಸುದ್ದಿಗೆ ಶರಧಿಯ ಲಂಘಿಸಿದ-ಪುರ- ಸಂಧಿಸಿದಅಂಜದೆ ವನವನು ಕಿತ್ತಿದ ಪುರವನುಸುಟ್ಟ - ತಾ ಬಲು - ದಿಟ್ಟಾ |ಸಂಜೀವನ ಗಿರಿ ತಂದು ವಾನರರಪೊರೆದಾ - ರಾಮನ - ಬೆರೆದಾ 1ಕುಂತಿ ಕುಮಾರನು ಶೀಮೆಗೆ ಹರುಷದಿಬೆಳೆದ - ಖಳರನು - ತುಳಿದ |ಅಂತ ಕೌರವ - ದುಶ್ಯಾಸನರಾ ಶಿರತರೆದಾ - ಚಲವನು - ಮೆರೆದ |ಸಂತಾಪವ ಪಡಿಸಿದ ಕುಜನಕೆ ಭೀಮ -ನಾದ -ಸನ್ನುತ- ನಾದ |ಕಂತುಜನಕಶ್ರೀ ಕೃಷ್ಣನ ಪಾದದಿಬಿದ್ದ - ಮದಗಜ - ಗೆದ್ದ 2ಮುನಿಕುಲದಲಿ ಉದಿಸಿದ ಗುರುಮಧ್ವ ತಾನಾದ - ಧರೆಯಲಿ - ಮೆರೆದ |ಅನಿಮಿಷರೊಡೆಯ ಶ್ರೀವೇದವ್ಯಾಸರಚರಣ-ಅನುದಿನ- ಸ್ಮರಣ |ಕನಸೊಳು ಕಾಣದ ಅದ್ವೈತಂಗಳಮುರಿದ - ತತ್ತ್ವ - ತೋರಿದ |ಘನಮಹಿಮ ಶ್ರೀಪುರಂದರವಿಠಲನದಾಸ - ಪಡೆದ - ಸನ್ಯಾಸ 3
--------------
ಪುರಂದರದಾಸರು
ರಾಯರ ನೋಡಿರೈ ಶುಭತಮ ಕಾಯರ ಪಾಡಿರೈ ಪತೋಯಜ-ಪತಿನಾರಾಯಣ ಪದಯುಗxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಭೃಂಗಾ - ಭüಕ್ತಕೃಪಾಂಗಾ ಅ.ಪಮಂದಸ್ಮಿತಯುತ ದ್ವಂದ್ವ ಓಷ್ಠ,ಶ್ರುತಿಕಂಧರಯುತ ಪೂರಂದರ - ಕರಿಕರಸುಂದರ ಹೃದಯದಿ ನಾಮಾ ಹಚ್ಚಿಹÀ ಪ್ರೇಮಾ 1ಸ್ವಸ್ತಿಕಾಸನ- ಸ್ಥಿತ-ಮೋದಕೃತವಿನೋದವಸ್ತ್ರದಿ ಶೋಭಿಪಗಾತ್ರಶುಭಚರಿತ್ರಸ್ವಸ್ಥ ಮನದಿ ಪ್ರಶಸ್ತ ಹರಿಯಪಾದಸ್ವಿಸ್ತಿಕ-ಯುಗಳ- ಧ್ಯಾನ ಮಾಡುವಙ್ಞÕನಸ್ವಸ್ತಿದನೆನಿಸಿದ ಭೂಪಾ ಭವ್ಯ ಪ್ರತಾಪ 2ಕುಟಲವಿಮತರ ಪಟಲಾಂಧಕಾರಕೆಪಟುತರದಿನಮಣಿ ರೂಪಾ ನಿಜ ಜನ-ಸುರಪಾಸ್ಪುಟಿತ-ಹಾಟಕ- ಚಂದ್ರಾ ಸದ್ಗುಣಸಾಂದ್ರಚಟುಲಜನರ ಪರಿಪಾಲಾ ಕರುಣವಿಶಾಲಾಕಿಟಿರದ-ಭವ- ನದಿ - ತಟ-ಕೃತ - ಮಂದಿರಧಿಟ ಗುರುಜಗನ್ನಾಥಾ ವಿಠಲ ದೂತಾ 3
--------------
ಗುರುಜಗನ್ನಾಥದಾಸರು