ನೀನಾರು ನಾನಾರು ನೀನೆನ್ನೊಳಿರಲು
ನಾನಾರು ನೀನಾರು ನಾನಿನ್ನೊಳಿರಲು ಪ
ನೀನೇನ ಮಾಡಿಸುವೆ ನಾನದನು ಮಾಡುವೆ
ನೀನೇನ ಮಾಡಿದರೂ ನಾನದನು ಮಾಡುವೆ ಅ.ಪ
ಎನ್ನದೆಂಬುವುದೆಲ್ಲ ನಿನ್ನದಾಗಿರುವಾಗ
ನನ್ನದೇನುಂಟಯ್ಯ ಪನ್ನಗಾಧೀಶಾ
ನಿನ್ನವನು ನಾನಯ್ಯ ನನ್ನವನು ನೀನಾದೊ
ಡಿನ್ನೇನು ನಾನೀನು ಎನ್ನುವಂತಿಲ್ಲ 1
ಇಂದಿರಾನಂದ ಗೋವಿಂದ ತವಪಾದಾರ
ವಿಂದಸೇವೆಯ ಮಾಳ್ಪೆನೆಂದು ಕಾದಿಹೆನೋ
ಮುಂದೆನಗೆ ಜನ್ಮಂಗಳೊಂದಾದರೂ ಬೇಡ
ತಂದೆ ಮಾಂಗಿರಿರಂಗ ಬಂದುಕಾಯೋ2